ಕರಾವಳಿ

ಕರಾವಳಿಯಲ್ಲಿ ಆಟಿ‌ ಅಮಾವಾಸ್ಯೆ ಸಂಭ್ರಮ| ಪುಣ್ಯ‌ ಸ್ನಾನಗೈದು ಪುಳಕಿತರಾದ ಭಕ್ತರು

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಎರಡು ಪ್ರಸಿದ್ಧ ಪರ್ವತ ಪುಣ್ಯ ಕ್ಷೇತ್ರಗಳಾದ ಕಾರಿಂಜ ಕಾರಿಂಜೇಶ್ವರ ಸನ್ನಿಧಿ ಹಾಗೂ ನರಹರಿ ಸದಾಶಿವ ರುದ್ರ ಸನ್ನಿಧಿಯಲ್ಲಿ ಇಂದು (ಆಗಸ್ಟ್ 4) ನಸುಕಿನ ಜಾವ ಭಕ್ತರ ಗಡಣವಿತ್ತು. ವೈದಿಕರು ವೇದಮಂತ್ರಗಳ ಪಠಣವನ್ನು ಮಾಡುತ್ತಿದ್ದರೆ, ಭಕ್ತರು, ತೀರ್ಥಸ್ನಾನ ಮಾಡಿ ಪುನೀತರಾದರು. ಆಟಿಯ ಅಮಾವಾಸ್ಯೆ ಅಥವಾ ಆಟಿ ಅಮಾಸೆ ಎಂಬುದು ದಕ್ಷಿಣ ಕನ್ನಡ ಜಿಲ್ಲೆಯನ್ನು ಒಳಗೊಂಡಿರುವ ತುಳುನಾಡಿನ ಆಚರಣೆ ಈ ಅಮಾವಾಸ್ಯೆ ಆಷಾಡ ಅಮಾವಾಸ್ಯೆ. ಆಟಿ ತಿಂಗಳಿನ ಅಮಾವಾಸ್ಯೆಯ ದಿನ ಕರಾವಳಿಯ ನಾನಾ […]

ಕರಾವಳಿಯಲ್ಲಿ ಆಟಿ‌ ಅಮಾವಾಸ್ಯೆ ಸಂಭ್ರಮ| ಪುಣ್ಯ‌ ಸ್ನಾನಗೈದು ಪುಳಕಿತರಾದ ಭಕ್ತರು Read More »

ಪದವಿ ಮಕ್ಕಳಿಗೆ ಮಳೆ ಕಾರಣ ರಜೆ ಯಾಕೆ ನೀಡಲ್ಲ? ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೀಡಿದ್ದಾರೆ ಬೆಸ್ಟ್ ಆನ್ಸರ್!

ಸಮಗ್ರ ನ್ಯೂಸ್: ಸಾಮಾನ್ಯವಾಗಿ ಈ ರಜೆಯ ಆದೇಶವನ್ನು ಜಿಲ್ಲಾಧಿಕಾರಿಗಳ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಹೊರಡಿಸಲಾಗುತ್ತದೆ. ಉದಾಹರಣೆಗೆ ಜಿಲ್ಲಾದ್ಯಂತ ಭಾರೀ ಮಳೆಯ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ (ನಿಗದಿತ ದಿನಾಂಕ ನಮೂದಿಸಿ) ಈ ದಿನ ರಜೆ ಇರುತ್ತದೆ ಎಂದು ಆದೇಶ ಪ್ರತಿ ಹೊರಡಿಸಲಾಗುತ್ತದೆ. ಈ ಆದೇಶದಲ್ಲಿ ಪದವಿ ವಿದ್ಯಾರ್ಥಿಗಳಿಗೆ ರಜೆ ನೀಡಿರುವುದಿಲ್ಲ ಎನ್ನುವುದು ಸದ್ಯದ ಆರೋಪವಾಗಿದೆ ಜೊತೆಗೆ ವಿದ್ಯಾರ್ಥಿಗಳ ಪ್ರಶ್ನೆ

ಪದವಿ ಮಕ್ಕಳಿಗೆ ಮಳೆ ಕಾರಣ ರಜೆ ಯಾಕೆ ನೀಡಲ್ಲ? ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೀಡಿದ್ದಾರೆ ಬೆಸ್ಟ್ ಆನ್ಸರ್! Read More »

ಉಪ್ಪಿನಂಗಡಿ: ಹಠಾತ್ ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟ ವಿದ್ಯಾರ್ಥಿ

ಸಮಗ್ರ ನ್ಯೂಸ್: ಹಠಾತ್ ಅನಾರೋಗ್ಯಕ್ಕೀಡಾದ ಕಾಲೇಜು ವಿದ್ಯಾರ್ಥಿಯೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಕಡಬ ತಾಲೂಕು ಕೊಯಿಲ ಗ್ರಾಮದ ಗಂಡಿಬಾಗಿಲು ನಿವಾಸಿ ಮುಹಮ್ಮದ್ ಸಿರಾಜುದ್ದೀನ್ (17) ಮೃತ ವಿದ್ಯಾರ್ಥಿ. ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ ಈತ ಕಾಲೇಜಿಗೆಂದು ಬೆಳಿಗ್ಗೆ ತನ್ನ ಗೆಳೆಯರೊಂದಿಗೆ ಹೊರಟು ಬಂದಿದ್ದ ಎಂದು ತಿಳಿದುಬಂದಿದೆ. ಕಾಲೇಜಿನ ದಾರಿ ಮಧ್ಯೆ ಬಿ.ಪಿ. ಲೋ ಸಮಸ್ಯೆಯಿಂದ ಈತ ತಲೆ ತಿರುಗಿ ಬಿದ್ದಿದ್ದಾರೆ ಎನ್ನಲಾಗಿದ್ದು ಜೊತೆಗಿದ್ದ ಸ್ನೇಹಿತರು ಈತನನ್ನು

ಉಪ್ಪಿನಂಗಡಿ: ಹಠಾತ್ ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟ ವಿದ್ಯಾರ್ಥಿ Read More »

ಪುತ್ತೂರು: ಪುತ್ತೂರಿನ ಇತಿಹಾಸದಲ್ಲಿ ಎಂದಿಗೂ ಕಂಡು ಕೇಳರಿಯದಂತ ಅಮೋಘ ಹೊಸ ಚಿಂತನೆಗಳೊಂದಿಗೆ “ಬ್ರೈಟ್ ಭಾರತ್” ಇದೀಗ ನಿಮ್ಮ ಮುಂದೆ| 6 ಮನೆಗಳು, 4 ಐಶಾರಾಮಿ ಕಾರು, 4 ಸುಸಜ್ಜಿತ Land ಸೇರಿದಂತೆ, ಚಿನ್ನ, ಡೈಮಂಡ್, ಬೈಕ್,ಆಕ್ಟಿವಾ, ನಗದನ್ನು ನಿಮ್ಮದಾಗಿಸಿಕೊಳ್ಳಬಹುದು| ಮತ್ತೇಕೆ ತಡ ಈಗಲೇ ರಿಜಿಸ್ಟರ್ ಮಾಡಿಕೊಳ್ಳಿ|ಇಲ್ಲಿದೆ ಸಂಪೂರ್ಣ ಮಾಹಿತಿ

ಬ್ರೈಟ್ ಭಾರತ್ ಟೀಮ್ ಜನ ಸಮಾನ್ಯರ ಕನಸುಗಳಿಗೆ ಬಣ್ಣ ತುಂಬಲಿದ್ದು, ಸಮಾಜದ ಕಟ್ಟ ಕಡೆಯ ಜನರಿಗೂ ಇದು ಆಶಾಕಿರಣವಾಗಲಿದೆ. ಖಂಡಿತಾ ತಮಗೂ ನಮ್ಮ ಜೊತೆಯಾಗುವ ಮೂಲಕ ನಿಮ್ಮ ಕನಸುಗಳಿಗೆ ಬ್ರೈಟ್ ತುಂಬಬಹುದು. ಪುತ್ತೂರಿನ ಇತಿಹಾಸದಲ್ಲಿ ಎಂದಿಗೂ ಕಂಡು ಕೇಳರಿಯದಂತ ಅಮೋಘ ಹೊಸ ಚಿಂತನೆಗಳೊಂದಿಗೆ ಬ್ರೈಟ್ ಭಾರತ್ ತಮ್ಮ ಮುಂದೆ ಬಂದಿದೆ. ಇದರ ನೂತನ ಯೋಜನೆಯಲ್ಲೊಂದಾದ ಸ್ಕೀಮ್ ಯೋಜನೆ, ಬಡ ಸಾಮಾನ್ಯ ಜನರಿಗೆ ಖಂಡಿತಾವಾಗಿಯೂ ಇದು ಉಪಯೋಗಿ ಯೋಜನೆಯಾಗಲಿದೆ. ಹಾಗಾದರೆ ಈ ಸ್ಕೀಮ್ ಯಾವ ರೀತಿ ಇರಲಿದೆ?ಮೇಲೆ ಪೋಸ್ಟರ್

ಪುತ್ತೂರು: ಪುತ್ತೂರಿನ ಇತಿಹಾಸದಲ್ಲಿ ಎಂದಿಗೂ ಕಂಡು ಕೇಳರಿಯದಂತ ಅಮೋಘ ಹೊಸ ಚಿಂತನೆಗಳೊಂದಿಗೆ “ಬ್ರೈಟ್ ಭಾರತ್” ಇದೀಗ ನಿಮ್ಮ ಮುಂದೆ| 6 ಮನೆಗಳು, 4 ಐಶಾರಾಮಿ ಕಾರು, 4 ಸುಸಜ್ಜಿತ Land ಸೇರಿದಂತೆ, ಚಿನ್ನ, ಡೈಮಂಡ್, ಬೈಕ್,ಆಕ್ಟಿವಾ, ನಗದನ್ನು ನಿಮ್ಮದಾಗಿಸಿಕೊಳ್ಳಬಹುದು| ಮತ್ತೇಕೆ ತಡ ಈಗಲೇ ರಿಜಿಸ್ಟರ್ ಮಾಡಿಕೊಳ್ಳಿ|ಇಲ್ಲಿದೆ ಸಂಪೂರ್ಣ ಮಾಹಿತಿ Read More »

ಕಡಬ: ಕುಮಾರಧಾರ ನದಿಯಲ್ಲಿ ವ್ಯಕ್ತಿಯ ಶವ ಪತ್ತೆ

ಸಮಗ್ರ ನ್ಯೂಸ್: ಕಡಬ ತಾಲೂಕಿನ ಅರ್ಬಿತೋಡು ಎಂಬಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಕುಮಾರಧಾರ ನದಿಯಲ್ಲಿ ಪತ್ತೆಯಾಗಿದೆ. ನೆಕ್ಕಿಲಾಡಿ ಗ್ರಾಮದ ಕೆರ್ಮಾಯಿ ನಿವಾನಿ ರಮೇಶ ಎಂಬವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ನದಿಯಲ್ಲಿ ತೆಂಗಿನಕಾಯಿ ಹಿಡಿಯಲು ಹೋದಾಗ ಅವರು ಆಯತಪ್ಪಿ ನದಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ

ಕಡಬ: ಕುಮಾರಧಾರ ನದಿಯಲ್ಲಿ ವ್ಯಕ್ತಿಯ ಶವ ಪತ್ತೆ Read More »

ಪುತ್ತೂರು: ರಾ.ಹೆದ್ದಾರಿ 275ರ ತೆಂಕಿಲದಲ್ಲಿ ಗುಡ್ಡ ಕುಸಿತ| ರಸ್ತೆ ಬಂದ್; ವಾಹನ‌‌ ಸಂಚಾರಕ್ಕೆ ಬದಲಿ ವ್ಯವಸ್ಥೆ

ಸಮಗ್ರ ನ್ಯೂಸ್: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ ತೆಂಕಿಲದಲ್ಲಿ ಆ.2 ರಂದು ನಸುಕಿನ ಜಾವ ಗುಡ್ಡ ಕುಸಿದೆ. ಪರಿಣಾಮ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು ಪುತ್ತೂರು ಪೇಟೆ ಮೂಲಕ ವಾಹನ ಸಂಚರಿಸಲು ಅವಕಾಶ ನೀಡಲಾಗಿದೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ತೆಂಕಿಲದಲ್ಲಿ ಕಳೆದ ಕೆಲ ದಿನಗಳಿಂದ ಆಗಾಗ ಗುಡ್ಡ ಕುಸಿಯುತ್ತಲೇ ಇದ್ದು ಇದೀಗ ಭಾರಿ ಪ್ರಮಾಣದ ಮಣ್ಣು ರಸ್ತೆಯ ಮೇಲೆ ಬಿದ್ದಿದೆ. ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದು, ಮಣ್ಣು‌ತೆರವು ಕಾರ್ಯಾಚರಣೆ ಸಾಗುತ್ತಿದೆ. ಗುಡ್ಡ ಮತ್ತಷ್ಟು ಕುಸಿಯುವ

ಪುತ್ತೂರು: ರಾ.ಹೆದ್ದಾರಿ 275ರ ತೆಂಕಿಲದಲ್ಲಿ ಗುಡ್ಡ ಕುಸಿತ| ರಸ್ತೆ ಬಂದ್; ವಾಹನ‌‌ ಸಂಚಾರಕ್ಕೆ ಬದಲಿ ವ್ಯವಸ್ಥೆ Read More »

ಬೆಳ್ತಂಗಡಿ: ರೇಖ್ಯ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಗುಡ್ಡ ಕುಸಿತದಿಂದ ಹಾನಿ

ಸಮಗ್ರ ನ್ಯೂಸ್: ಕರಾವಳಿಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು ಇದೀಗ ಗುಡ್ಡ ಕುಸಿತದ ಪ್ರಕರಣಗಳು ಹೆಚ್ಚಾಗ ತೊಡಗಿದೆ. ಭಾರಿ ಮಳೆಗೆ ಗುಡ್ಡ ಕುಸಿದು ದೇವಸ್ಥಾನಕ್ಕೆ ಹಾನಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದಿದೆ. ಭಾರೀ ಮಳೆಯಾಗುತ್ತಿರುವ ಕಾರಣ ದೇವಸ್ಥಾನದ ಸುತ್ತಿ ಇರುವ ಗುಡ್ಡ ಏಕಾಏಕಿ ದೇವಸ್ಥಾನದ ಮೇಲೆ ಬಿದ್ದಿದೆ. ದೇವಸ್ಥಾನದ ಗರ್ಭಗುಡಿ ಮತ್ತು‌ ಸುತ್ತು ಪೌಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ನೀರಿನ ಜೊತೆಗೆ ದೇವಸ್ಥಾನದ ಒಳಗಡೆ ಮಣ್ಣು ನುಗ್ಗಿದ್ದು. ಮಳೆ ಜಾಸ್ತಿಯಾದರೆ ಮತ್ತಷ್ಟು ಗುಡ್ಡ

ಬೆಳ್ತಂಗಡಿ: ರೇಖ್ಯ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಗುಡ್ಡ ಕುಸಿತದಿಂದ ಹಾನಿ Read More »

ಶಿರಾಡಿ ಘಾಟ್ ನಲ್ಲಿ ‌ಮತ್ತೆ ಗುಡ್ಡ‌ ಕುಸಿತ| ತೆರವಾಗಿದ್ದ ರಸ್ತೆ ಸಂಚಾರ ನಿಮಿಷಗಳಲ್ಲೇ ಬಂದ್

ಸಮಗ್ರ ನ್ಯೂಸ್: ಶಿರಾಡಿಘಾಟ್‌ನಲ್ಲಿ ಗುಡ್ಡ ಕುಸಿತವಾಗಿದೆ. ಕೆಲವೇ ನಿಮಿಷಗಳ ಹಿಂದೆ ತೆರವಾಗಿದ್ದ ರಸ್ತೆ ಮತ್ತೆ ಬಂದ್ ಆಗಿದೆ. ಶಿರಾಡಿಘಾಟ್‌ನ ದೊಡ್ಡ ತಪ್ಪಲು ಬಳಿ ಆ.1ರ ಗುರುವಾರ ಮತ್ತೆ ಭೂಕುಸಿತವಾಗಿದ್ದು, ದೊಡ್ಡ ಸದ್ದಿನೊಂದಿಗೆ ಮಣ್ಣು ಕುಸಿದಿದೆ. ಕಳೆದ ಮೂರು ದಿನಗಳಲ್ಲಿ ಪದೇ ಪದೇ ಭೂಮಿ ಕುಸಿಯುತಿದ್ದು, ಶಿರಾಡಿ ಘಾಟ್‌ನಲ್ಲಿ ಆತಂಕ ಹೆಚ್ಚಿದೆ. ಶಿರಾಡಿ ಘಾಟ್‌ ಕಡೆ ಪ್ರಯಾಣಿಸುವವರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಶಿರಾಡಿ ಘಾಟಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಜು.31ರ ಬುಧವಾರ ಸಂಜೆ ವೇಳೆಗೆ ಭೂ ಕುಸಿತವಾಗಿ 2

ಶಿರಾಡಿ ಘಾಟ್ ನಲ್ಲಿ ‌ಮತ್ತೆ ಗುಡ್ಡ‌ ಕುಸಿತ| ತೆರವಾಗಿದ್ದ ರಸ್ತೆ ಸಂಚಾರ ನಿಮಿಷಗಳಲ್ಲೇ ಬಂದ್ Read More »

ನಿಲ್ಲದ ಕುಂಭದ್ರೋಣ‌ ಮಳೆ| ದ.ಕ ಜಿಲ್ಲೆಯಲ್ಲಿ ಆ.02ರಂದು ಪಿಯುಸಿವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಭಾರೀ ಮಳೆ ಮುಂದುವರೆದಿರುವ‌ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆ. ೨ರಂದು ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹವಾಮಾನ ಇಲಾಖೆಯಿಂದ ಜಿಲ್ಲೆಯಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಆಗಸ್ಟ್ 2ರಂದು ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಘೋಷಣೆ ಮಾಡಿ ಆದೇಶಿಸಿದ್ದಾರೆ.

ನಿಲ್ಲದ ಕುಂಭದ್ರೋಣ‌ ಮಳೆ| ದ.ಕ ಜಿಲ್ಲೆಯಲ್ಲಿ ಆ.02ರಂದು ಪಿಯುಸಿವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ಕರ್ನಾಟಕದ 29 ತಾಲೂಕುಗಳಲ್ಲಿ ಭೂಕುಸಿತದ ಭೀತಿ| ಸುಳ್ಯ, ಪುತ್ತೂರು ಸೇರಿದಂತೆ ಕರಾವಳಿ, ಮಲೆನಾಡಿನ ಹಲವು ತಾಲೂಕುಗಳು ಡೇಂಜರ್ ಝೋನ್!!

ಸಮಗ್ರ ನ್ಯೂಸ್: ರಾಜ್ಯ ಸರ್ಕಾರ ಮತ್ತು ಜನತೆ ಈಗಲೇ ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಮಲೆನಾಡು ಮತ್ತು ಕರಾವಳಿ ಭಾಗದ 29 ತಾಲೂಕಿನ ಹಲವು ಕಡೆಗಳಲ್ಲಿ ಕೇರಳದ ವಯನಾಡಿನ ರೀತಿಯಲ್ಲೇ ಭೂಕುಸಿತ ಸಂಭವಿಸುವ ಅಪಾಯವಿದೆ! ಮಳೆಗಾಲದ ಸಂದರ್ಭದಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ಉಂಟಾಗುವ ಭೂಕುಸಿತಕ್ಕೆ ಕಾರಣ ಹಾಗೂ ಅದನ್ನು ತಡೆಯುವ ಸಲುವಾಗಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು 2022ರಲ್ಲಿ ಭೂಕುಸಿತ ನಿರ್ವಹಣೆಗಾಗಿ ಕ್ರಿಯಾಯೋಜನೆ ರೂಪಿಸಿತ್ತು. ಆ ಕ್ರಿಯಾಯೋಜನೆಗೆ ತಕ್ಕಂತೆ ಸರ್ಕಾರ ಈವರೆಗೆ ಸಮರ್ಪಕ ಕ್ರಮ ಕೈಗೊಂಡಿಲ್ಲ. ಹೀಗಾಗಿ

ಕರ್ನಾಟಕದ 29 ತಾಲೂಕುಗಳಲ್ಲಿ ಭೂಕುಸಿತದ ಭೀತಿ| ಸುಳ್ಯ, ಪುತ್ತೂರು ಸೇರಿದಂತೆ ಕರಾವಳಿ, ಮಲೆನಾಡಿನ ಹಲವು ತಾಲೂಕುಗಳು ಡೇಂಜರ್ ಝೋನ್!! Read More »