ಕರಾವಳಿ

ಮಂಗಳೂರು: ಹೊಸ ಅಡಿಕೆ ದರದಲ್ಲಿ ಏರಿಕೆ

ಸಮಗ್ರ ನ್ಯೂಸ್: ಹೊಸ ಅಡಿಕೆ (ಚಾಲಿ) ದರದಲ್ಲಿ ಏರಿಕೆಯಾಗಿದ್ದು, ಇಲ್ಲಿನ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ₹400 ಧಾರಣೆ ದೊರೆತಿದೆ. ಜೂನ್-ಜುಲೈ ತಿಂಗಳಿನಲ್ಲಿ ಕೆ.ಜಿಗೆ ₹375ರಿಂದ ₹385ರ ಆಸುಪಾಸಿನಲ್ಲಿದ್ದ ದರವು ಆಗಸ್ಟ್ ಮೊದಲ ವಾರದಲ್ಲಿ ತುಸು ಏರಿಕೆಯಾಗಿತ್ತು. ಅಡಿಕೆ ವಹಿವಾಟು ನಡೆಸುವ ಕ್ಯಾಂಪ್ಕೊದಲ್ಲಿ ಶುಕ್ರವಾರ ಗರಿಷ್ಠ ದರ ₹390 ಇದ್ದರೆ, ಸುಳ್ಯ ತಾಲ್ಲೂಕು ಬೆಳ್ಳಾರೆಯ ಮುಕ್ತ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹400 ದರ ದಾಖಲಾಯಿತು. ಮಾರ್ಚ್‌ ಎರಡನೇ ವಾರದಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ ₹352 ಇದ್ದರೆ, ಏಪ್ರಿಲ್ […]

ಮಂಗಳೂರು: ಹೊಸ ಅಡಿಕೆ ದರದಲ್ಲಿ ಏರಿಕೆ Read More »

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸು ಪಲ್ಟಿ| ಹತ್ತಕ್ಕೂ ಅಧಿಕ ಪ್ರಯಾಣಿಕರು ಗಂಭೀರ

ಸಮಗ್ರ ನ್ಯೂಸ್: ಬಂಟ್ವಾಳದ ರಾಷ್ಟ್ರೀಯ ಹೆದ್ದಾರಿ ಪರಂಗಿಪೇಟೆ ಸಮೀಪದ ಹತ್ತನೇ ಮೈಲಿಕಲ್ಲು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸು ಪಲ್ಟಿಯಾಗಿ ಹತ್ತಕ್ಕೂ ಅಧಿಕ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು (ಆ.16) ಮುಂಜಾನೆ ನಡೆದಿದೆ. ಅಪಘಾತದಲ್ಲಿ ಗಾಯಗೊಂಡವರ ಹೆಸರು ವಿಳಾಸದ ಮಾಹಿತಿ ‌ಲಭ್ಯವಾಗಿಲ್ಲ. ಗಾಯಗೊಂಡ ಎಲ್ಲರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಯುವಕರು ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಚಾಲಕನ ಅತಿ ವೇಗದ ಚಾಲನೆ ಅಥವಾ ವಾಹನದಲ್ಲಿ ಕಂಡ ತಾಂತ್ರಿಕ ದೋಷಗಳಿಂದ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸು ಪಲ್ಟಿ| ಹತ್ತಕ್ಕೂ ಅಧಿಕ ಪ್ರಯಾಣಿಕರು ಗಂಭೀರ Read More »

ಸವಣೂರು:ಎಸ್.ಡಿ.ಪಿ.ಐ ಸವಣೂರು ಗ್ರಾಮ ಸಮಿತಿ ವತಿಯಿಂದ 78ನೇ ಸ್ವಾತಂತ್ರೋತ್ಸವ ಕಾರ್ಯಕ್ರಮ

ಸಮಗ್ರ ನ್ಯೂಸ್: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸವಣೂರು ಗ್ರಾಮ ಸಮಿತಿ ವತಿಯಿಂದ 78ನೇ ಸ್ವಾತಂತ್ರೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಎಸ್.ಡಿ.ಪಿ.ಐ ಸವಣೂರು ಗ್ರಾಮ ಸಮಿತಿ ಅಧ್ಯಕ್ಷ ಇಕ್ಬಾಲ್ ಕೆನರಾ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮತ್ತು ಸವಣೂರು ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರಝಾಕ್ ಕೆನರಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಬೆಳ್ಳಾರೆ ಬ್ಲಾಕ್ ಅಧ್ಯಕ್ಷರು ಸವಣೂರು ಗ್ರಾಮ ಪಂಚಾಯತ್ ಸದಸ್ಯ ರಫೀಕ್. ಎಂ ಎ ಸಂದೇಶ ಭಾಷಣ ಮಾಡಿದರು.

ಸವಣೂರು:ಎಸ್.ಡಿ.ಪಿ.ಐ ಸವಣೂರು ಗ್ರಾಮ ಸಮಿತಿ ವತಿಯಿಂದ 78ನೇ ಸ್ವಾತಂತ್ರೋತ್ಸವ ಕಾರ್ಯಕ್ರಮ Read More »

‘ಮಿಸ್ಟರ್ ಟೀನ್ ಸೂಪರ್ ಗ್ಲೋಬ್’ ಪ್ರಶಸ್ತಿ ಪಡೆದ ಮಂಗಳೂರು ಮೂಲದ ಪೋರ

ಸಮಗ್ರ ನ್ಯೂಸ್: ಮಂಗಳೂರು ಮೂಲದ 13ರ ಹರೆಯದ ಬಾಲಕ ಥೈಲ್ಯಾಂಡಿನಲ್ಲಿ ನಡೆದ ಮಿಸ್ಟರ್‌ ಟೀನ್‌ ಸೂಪರ್‌ ಗ್ಲೋಬ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಲಿಡಿವಿನ್‌ ಡಿ’ಕೋಸ್ಟಾ ಮತ್ತು ವಿನ್ಸೆಂಟ್‌ ಡಿ’ಕೋಸ್ಟಾ ಅವರ ಪುತ್ರ ಬಜಪೆ ಸೈಂಟ್‌ ಜೋಸೆಫ್ ಹೈಸ್ಕೂಲ್‌ನ ವಿದ್ಯಾರ್ಥಿ ವರುಣ್‌ ಡಿ’ಕೋಸ್ಟಾ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತರಬೇತುದಾರ ವಿಜೇ ಡಿಕ್ಸನ್‌ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಈ ಸ್ಪರ್ಧೆಯು ಫ್ಯಾಶನ್‌, ಮಾಡೆಲಿಂಗ್‌ ಹಾಗೂ ಪ್ರತಿಭಾ ಪ್ರದರ್ಶನವನ್ನು ಒಳಗೊಂಡಿರುತ್ತದೆ. ಆ. 7ರಿಂದ 10ರ ವರೆಗೆ ಥೈಲ್ಯಾಂಡ್‌ನ‌ಲ್ಲಿ

‘ಮಿಸ್ಟರ್ ಟೀನ್ ಸೂಪರ್ ಗ್ಲೋಬ್’ ಪ್ರಶಸ್ತಿ ಪಡೆದ ಮಂಗಳೂರು ಮೂಲದ ಪೋರ Read More »

ಸುಳ್ಯ: ಅರೆಭಾಷೆ ಅಕಾಡೆಮಿ, ಲಯನ್ಸ್ ಕ್ಲಬ್ ವತಿಯಿಂದ ‘ಆಟಿ ವೈಭವ’ ಕಾರ್ಯಕ್ರಮ

ಸಮಗ್ರ ನ್ಯೂಸ್: ಕರ್ನಾಟಕ ಸರಕಾರ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಮಡಿಕೇರಿ ಹಾಗೂ ಲಯನ್ಸ್ ಕ್ಲಬ್ ಆಟಿ ಸಂಸ್ಕೃತಿ ನೆಂಪಿಸುವ ಆಟಿ ವೈಭವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಆ.15 ರಂದು ಸುಳ್ಯದ ಲಯನ್ಸ್ ಕ್ಲಬ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪಬೆಳಗಿಸುವ ಮೂಲಕ ಲಯನ್ ಚಂದ್ರಶೇಖರ ಕೆ. ಎಸ್ ಉದ್ಘಾಟಿಸಿದರು.ಲಯನ್ಸ್ ಕ್ಲಬ್ ನ ಅಧ್ಯಕ್ಷ ರಾಮಕೃಷ್ಣ ರೈ ಅಧ್ಯಕ್ಷತೆಯನ್ನು ವಹಿಸಿದ್ದರು.ವೇದಿಕೆಯಲ್ಲಿ ಲಯನ್ ಗಂಗಾಧರ್ ರೈ, ವಲಯಧ್ಯಕ್ಷರು ಲಯನ್ ರೂಪಶ್ರೀ ಜೆ ರೈ, ಲಯನ್ ರಮೇಶ್ ಶೆಟ್ಟಿ

ಸುಳ್ಯ: ಅರೆಭಾಷೆ ಅಕಾಡೆಮಿ, ಲಯನ್ಸ್ ಕ್ಲಬ್ ವತಿಯಿಂದ ‘ಆಟಿ ವೈಭವ’ ಕಾರ್ಯಕ್ರಮ Read More »

ಪುತ್ತೂರು: ಭಿನ್ನಕೋಮಿನ ಜೋಡಿಗೆ ರೂಂ ನೀಡಿದ ಲಾಡ್ಜ್ ಗೆ ಪೊಲೀಸ್ ದಾಳಿ| ದಾಳಿ ವೇಳೆ ಗೊತ್ತಾದ ಅಸಲಿ ಸತ್ಯ ಏನು?

ಸಮಗ್ರ ನ್ಯೂಸ್: ಹಿಂದೂ ಯುವತಿ- ಮುಸ್ಲಿಂ ಯುವಕ ಜೋಡಿಗೆ ರೂಂ ನೀಡಿದ ಲಾಡ್ಜ್ ಒಂದಕ್ಕೆ ಪೊಲೀಸರು ದಾಳಿ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನೆಹರು ನಗರದಲ್ಲಿ ನಡೆದಿದೆ. ಲಾಡ್ಜ್‌ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ನೆಹರು ನಗರದಲ್ಲಿರುವ ಲಾಡ್ಜ್‌ಗೆ ಪೊಲೀಸರು ದಾಳಿ ನಡೆಸಿದ್ದು, ರಿಸೆಪ್ಶನಿಸ್ಟ್ ಹಾಗೂ ಲೆಡ್ಜರ್ ಪುಸ್ತಕವನ್ನು ವಶಕ್ಕೆ ಪಡೆದಿದ್ದಾರೆ. ಯುವಕ- ಯುವತಿಯಿಂದ ಯಾವುದೇ ದಾಖಲೆಗಳನ್ನು ತೆಗೆದುಕೊಳ್ಳದೆ ರೂಮ್ ನೀಡಲಾಗಿದೆ ಎನ್ನುವ ಆರೋಪದ ಮೇರೆಗೆ ದಾಳಿ ನಡೆಸಲಾಗಿದೆ ಎಂದು

ಪುತ್ತೂರು: ಭಿನ್ನಕೋಮಿನ ಜೋಡಿಗೆ ರೂಂ ನೀಡಿದ ಲಾಡ್ಜ್ ಗೆ ಪೊಲೀಸ್ ದಾಳಿ| ದಾಳಿ ವೇಳೆ ಗೊತ್ತಾದ ಅಸಲಿ ಸತ್ಯ ಏನು? Read More »

ಪುತ್ತೂರು: ಎವಿಜಿ ಇಂಗ್ಲೀಷ್ ಮೀಡಿಯಂ ಶಾಲಾ ನೂತನ ರಕ್ಷಕ ಶಿಕ್ಷಕ ಸಂಘ ರಚನೆ

ಸಮಗ್ರ ನ್ಯೂಸ್: ಪುತ್ತೂರು ಕೃಷ್ಣನಗರದ ಬನ್ನೂರಿನ ಎವಿಜಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘವನ್ನು ಆ. 10ರಂದು ರಚಿಸಲಾಯಿತು. ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರಾಗಿ ಸೌಮ್ಯಶ್ರೀ ಶಿವಪ್ರಸಾದ್ ಹೆಗ್ಡೆ, ಉಪಾಧ್ಯಕ್ಷರಾಗಿ ಕಾವ್ಯ ಕೆ., ಕಾರ್ಯದರ್ಶಿಯಾಗಿ ಶಾಲಾ ಪ್ರಾಂಶುಪಾಲೆ ಸವಿತಾ ರವರು ಆಯ್ಕೆಯಾದರು. ಹಾಗೂ ಸದಸ್ಯರಾಗಿ ಯೋಗೀಶ್, ಸುಮಲತಾ, ಅಶ್ವಿನಿ, ರಾಧಿಕಾ ಹರೀಶ್ ಕೆ. ತೆಂಕಪಾಡಿ ಇವರು ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅವರು

ಪುತ್ತೂರು: ಎವಿಜಿ ಇಂಗ್ಲೀಷ್ ಮೀಡಿಯಂ ಶಾಲಾ ನೂತನ ರಕ್ಷಕ ಶಿಕ್ಷಕ ಸಂಘ ರಚನೆ Read More »

ರೈಲು‌‌ ಹಳಿಗಳ ಮೇಲೆ ಗುಡ್ಡ ಕುಸಿತದ ಮಣ್ಣು ತೆರವು| ಮಂಗಳೂರು – ಸಕಲೇಶಪುರ ರೈಲು ಸಂಚಾರ ಪುನರಾರಂಭ

ಸಮಗ್ರ ನ್ಯೂಸ್: ಸಕಲೇಶಪುರ ಟು ಬಾಳ್ಳುಪೇಟೆ ಮಾರ್ಗಮಧ್ಯದ ರೈಲು ಹಳಿಗಳ ಮೇಲೆ ಭೂ ಕುಸಿತ ಉಂಟಾಗಿ ಸಂಚಾರಕ್ಕೆ ಅಡ್ಡಿಯಾಗಿತ್ತು. ಭೂ ಕುಸಿತದ ಮಣ್ಣನ್ನು ತೆರವುಗೊಳಿಸಲಾಗಿದ್ದು, ಸಂಚಾರ ಸುರಕ್ಷತೆಯ ಪರೀಕ್ಷೆಯನ್ನು ನಡೆಸಲಾಗಿದೆ. ಹೀಗಾಗಿ ನಾಳೆ(ಆ.14)ರಿಂದ ಈ ಮಾರ್ಗದಲ್ಲಿ ರೈಲುಗಳ ಸಂಚಾರ ಪುನರಾರಂಭಗೊಳಿಸಲಾಗುತ್ತಿದೆ. ಈ ಕುರಿತಂತೆ ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ಮಾಹಿತಿ ನೀಡಿದ್ದು, ಸಕಲೇಶಪುರ-ಬಳ್ಳುಪೇಟೆ ನಿಲ್ದಾಣಗಳ ನಡುವೆ ಭೂಕುಸಿತಕ್ಕೆ ಸಂಬಂಧಿಸಿದಂತೆ, ಹಳಿಯನ್ನು ಪುನಃಸ್ಥಾಪಿಸಲಾಗಿದೆ ಮತ್ತು ರೈಲು ಕಾರ್ಯಾಚರಣೆಗೆ ಯೋಗ್ಯವಾಗಿದೆ ಎಂದು ಪ್ರಮಾಣೀಕರಿಸಲಾಗಿದೆ ಎಂದು ತಿಳಿಸಿದೆ. ದಿನಾಂಕ 11.08.2024ರ ನೈರುತ್ಯ

ರೈಲು‌‌ ಹಳಿಗಳ ಮೇಲೆ ಗುಡ್ಡ ಕುಸಿತದ ಮಣ್ಣು ತೆರವು| ಮಂಗಳೂರು – ಸಕಲೇಶಪುರ ರೈಲು ಸಂಚಾರ ಪುನರಾರಂಭ Read More »

ಸುಬ್ರಹ್ಮಣ್ಯ: ಕೆಎಸ್ಎಸ್ ಕಾಲೇಜಿನ ಉಪನ್ಯಾಸಕ ವಿನ್ಯಾಸ್ ಹೊಸೋಳಿಕೆ ಅವರಿಗೆ ಮಂಗಳೂರು ವಿ.ವಿ ಯಿಂದ ಪಿ ಎಚ್ ಡಿ ಪದವಿ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ಉದ್ಯಮ ಆಡಳಿತ ವಿಭಾಗದ ಉಪನ್ಯಾಸಕ ವಿನ್ಯಾಸ್ ಹೊಸೋಳಿಕೆ ಅವರು ಮಂಡಿಸಿದ “ಮಾರ್ಕೆಟಿಂಗ್ ಸ್ಟ್ರಾಟಜಿಸ್ ಆಫ್ ಸೋಷಿಯಲ್ ಎಂಟರ್ಪ್ರೈಸಸ್ – ಎ ಸ್ಟಡಿ ವಿಥ್ ಸೆಲೆಕ್ಟ್ ಸೋಶಿಯಲ್ ಎಂಟರ್ಪ್ರೈಸಸ್” ಎಂಬ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿಯನ್ನು ನೀಡಿದೆ. ಅವರು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಂಶುಪಾಲರು ಆದ ಪ್ರೋ. ಡಾ. ಉದಯ್ ಕುಮಾರ್ ಇರ್ವತ್ತೂರು ಇವರ ಮಾರ್ಗದರ್ಶನದಲ್ಲಿ ಮಂಡಿಸಿದ

ಸುಬ್ರಹ್ಮಣ್ಯ: ಕೆಎಸ್ಎಸ್ ಕಾಲೇಜಿನ ಉಪನ್ಯಾಸಕ ವಿನ್ಯಾಸ್ ಹೊಸೋಳಿಕೆ ಅವರಿಗೆ ಮಂಗಳೂರು ವಿ.ವಿ ಯಿಂದ ಪಿ ಎಚ್ ಡಿ ಪದವಿ Read More »

ಸುಬ್ರಹ್ಮಣ್ಯ: ಪರಿಸರ ರಕ್ಷಣೆಗಾಗಿ‌ ಯುವಕರ ಮಾದರಿ‌ ಕಾರ್ಯ| ಕಮಿಲದ ಬಾಂಧವ್ಯ ಗೆಳೆಯರ ಬಳಗದಿಂದ ರಸ್ತೆ ಬದಿ ಸ್ವಚ್ಛತೆ| ಕಸ ಹಾಕುವವರ ಪತ್ತೆಗೆ ಸಿಸಿ ಕ್ಯಾಮೆರಾ ಅಳವಡಿಕೆ

ಸಮಗ್ರ ನ್ಯೂಸ್: ಸುಳ್ಯದ ಗುತ್ತಿಗಾರು ಗ್ರಾಮದ ಕಮಿಲದ ಬಾಂಧವ್ಯ ಗೆಳೆಯರ ಬಳಗವು ಭಾನುವಾರ ಬಳ್ಪ-ಕಮಿಲ ರಸ್ತೆಯ ಸುಮಾರು 2 ಕಿಮೀ ಕಾಡಿನ ನಡುವೆ ಹಾದು ಹೋಗುವ ರಸ್ತೆಯ ಇಕ್ಕೆಲೆಗಳಲ್ಲಿ ಸ್ವಚ್ಛತೆಯನ್ನು ಮಾಡಿದರು. ಕಾಡು-ಪರಿಸರ ಸಂರಕ್ಷಣೆ, ಸ್ವಚ್ಛತೆಯ ಉದ್ದೇಶದಿಂದ ಕೆಲಸಕ್ಕೆ ಇಳಿದ ಯುವಕರಿಗೆ ಕಾಡಿನ ದಾರಿಯಲ್ಲಿ ದೊರೆತದ್ದು 2 ಲೋಡ್‌ ಪಿಕ್‌ಅಪ್‌ನಲ್ಲಿ ತುಂಬುವಷ್ಟು ತ್ಯಾಜ್ಯ. ಇನ್ನೂ ಇದೆ. ಇದು ಒಂದು ದಿನ ಕೆಲಸ. ಕಮಿಲದ ಬಾಂಧವ್ಯ ಗೆಳೆಯರ ಬಳಗವು ಅರಣ್ಯದ ಕಾಳಜಿಯ ಉದ್ದೇಶದೊಂದಿಗೆ ಆರಂಭದಲ್ಲಿ ಕಾಡಿನ ದಾರಿಯಲ್ಲಿ ಸ್ವಚ್ಛತೆ

ಸುಬ್ರಹ್ಮಣ್ಯ: ಪರಿಸರ ರಕ್ಷಣೆಗಾಗಿ‌ ಯುವಕರ ಮಾದರಿ‌ ಕಾರ್ಯ| ಕಮಿಲದ ಬಾಂಧವ್ಯ ಗೆಳೆಯರ ಬಳಗದಿಂದ ರಸ್ತೆ ಬದಿ ಸ್ವಚ್ಛತೆ| ಕಸ ಹಾಕುವವರ ಪತ್ತೆಗೆ ಸಿಸಿ ಕ್ಯಾಮೆರಾ ಅಳವಡಿಕೆ Read More »