ಕರಾವಳಿ

ರಾಜ್ಯದಲ್ಲಿ ಮತ್ತೆ ಮುಂದುವರಿದ ಮಳೆಯಬ್ಬರ| ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ಕರ್ನಾಟಕದ ಕರಾವಳಿಯಲ್ಲಿ ಮತ್ತೆ ಮಳೆಯ ಅಬ್ಬರ ಹೆಚ್ಚಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಿಸಲಾಗಿದ್ದು, ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಿಸಲಾಗಿದ್ದು, ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇದೇ ವೇಳೆ ಪಶ್ಚಿಮದ ಸಮುದ್ರದ ಮೇಲಿಂದ ಗಂಟೆಗೆ 35ರಿಂದ 45ಕಿ.ಮೀ. ವೇಗದ ಗಾಳಿ […]

ರಾಜ್ಯದಲ್ಲಿ ಮತ್ತೆ ಮುಂದುವರಿದ ಮಳೆಯಬ್ಬರ| ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ Read More »

ಸುಳ್ಯ: ನೈತಿಕ ಪೊಲೀಸ್ ಗಿರಿ; ಇಬ್ಬರು ಅರೆಸ್ಟ್

ಸಮಗ್ರ ನ್ಯೂಸ್: ಬಸ್ಸಿನಲ್ಲಿ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾದ ಯುವಕನಿಗೆ ಸುಳ್ಯದಲ್ಲಿ ತಂಡವೊಂದು ನೈತಿಕ ಪೊಲೀಸ್ ಗಿರಿ ನಡೆಸಿದ ಬಗ್ಗೆ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವರ್ಷಿತ್ ಚೊಕ್ಕಾಡಿ ಹಾಗೂ ಮಿಥುನ್ ಸುಳ್ಯ ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಸರಗೋಡಿನ ಅಬ್ದುಲ್ ನಿಯಾಝ್ (22) ಹಲ್ಲೆಗೊಳಗಾದ ಯುವಕ. ಬೆಂಗಳೂರಿನಿಂದ ಸುಳ್ಯಕ್ಕೆ ಬರುವ ಬಸ್ಸಿಗೆ ಸುಳ್ಯದಲ್ಲಿ ಡಿಪ್ಲೋಮ ಕಲಿಯುತ್ತಿರುವ ಸಕಲೇಶಪುರದ ವಿದ್ಯಾರ್ಥಿನಿ ಹತ್ತಿದ್ದು, ಬಸ್ಸಿನಲ್ಲಿ ನಿಯಾಝ್ ಹತ್ತಿರ ಕುಳಿತ್ತಿದ್ದಾರೆ. ಈ ವೇಳೆ

ಸುಳ್ಯ: ನೈತಿಕ ಪೊಲೀಸ್ ಗಿರಿ; ಇಬ್ಬರು ಅರೆಸ್ಟ್ Read More »

ಕುಮಾರಧಾರದಲ್ಲಿ ಕುಸಿತಗೊಂಡ ನೀರಿನ ಮಟ್ಟ/ ಪುಣ್ಯ ಸ್ನಾನಕ್ಕೆ ಅವಕಾಶ

ಸಮಗ್ರ ನ್ಯೂಸ್‌: ಕುಮಾರಧಾರ ನದಿಯಲ್ಲಿ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದ್ದು ಸ್ಥಾನಘಟ್ಟದಲ್ಲಿ ನೀರಿನ ಸೆಳೆತ ಜಾಸ್ತಿ ಇರುವುದರಿಂದ ಸಂಭಾವ್ಯ ಅಪಾಯ ತಪ್ಪಿಸುವ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ಕುಮಾರಧಾರ ನದಿಯಲ್ಲಿ ಭಕ್ತರಿಗೆ ಸ್ನಾನ ಮಾಡಲು ಜಿಲ್ಲಾಡಳಿತದಿಂದ ನಿರ್ಬಂಧ ವಿದಿಸಿತ್ತು. ಇದೀಗ ನೀರಿನ ಮಟ್ಟ ಕಡಿಮೆಯಾದ ಹಿನ್ನೆಲೆಯಲ್ಲಿ ನಿರ್ಬಂಧ ತೆರವುಗೊಳಿಸಿ. ಭಕ್ತರಿಗೆ ಪುಣ್ಯ ಸ್ನಾನ ಮಾಡಲು ಜಿಲ್ಲಾಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ರಕ್ಷಣೆಗಾಗಿ ಕುಮಾರಧಾರದಲ್ಲಿ ಗೃಹ ರಕ್ಷಕ ಸಿಬ್ಬಂದಿ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಕುಮಾರಧಾರದಲ್ಲಿ ಕುಸಿತಗೊಂಡ ನೀರಿನ ಮಟ್ಟ/ ಪುಣ್ಯ ಸ್ನಾನಕ್ಕೆ ಅವಕಾಶ Read More »

ದೇವರ ಆಭರಣವನ್ನೇ ಲಪಾಯಿಟಿಸಿದ ಅರ್ಚಕ

ಸಮಗ್ರ ನ್ಯೂಸ್:ಗಂಗೊಳ್ಳಿ ಖಾರ್ವಿಕೇರಿಯ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದ 21 ಲಕ್ಷ ಮೌಲ್ಯದ ಚಿನ್ನದ ಅಭರಣಗಳನ್ನು ಕಳವುಗೈದು ಅದಕ್ಕೆ ಕೆಲವು ನಕಲಿ ಚಿನ್ನಾಭರಣಗಳನ್ನು ದೇವರ ಮೂರ್ತಿ ಮೇಲೆ ಹಾಕಿ ವಂಚಿಸಿದ ಘಟನೆ ಗಂಗೊಳ್ಳಿಯಯಲ್ಲಿ ಸಂಭವಿಸಿದೆ. ಶಿರಸಿ ತಾಲೂಕಿನ ಸಾಲಕಣಿ ಗ್ರಾಮದ ಮೂರೆಗಾರ ಎಂಬಲ್ಲಿನ ನರಸಿಂಹ ಭಟ್ (43) ಬಂಧಿತ ಆರೋಪಿ.ಮಹಾಂಕಾಳಿ ದೇವಸ್ಥಾನದಲ್ಲಿ ದೇವಿಯ ಮೂರ್ತಿಗೆ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳು ಸೇವೆ, ಹರಕೆ ರೂಪದಲ್ಲಿ ನೀಡಿದ ಚಿನ್ನಾಭರಣಗಳು ಪ್ರತಿದಿನ ದೇವರ ಮೂರ್ತಿಯ ಮೇಲೆ ಇರುತ್ತಿದ್ದವು. ಸೆ.21ರಂದು ಸಂಜೆ

ದೇವರ ಆಭರಣವನ್ನೇ ಲಪಾಯಿಟಿಸಿದ ಅರ್ಚಕ Read More »

‘ಹಿಂದೂ ಹಬ್ಬಗಳ ರಕ್ಷಣೆಗೆ ತಲವಾರು ಜೊತೆ ಜನರನ್ನು ಕಳುಹಿಸುತ್ತೇವೆ’| ಮಂಗಳೂರಿನಲ್ಲಿ ಶ್ರೀರಾಮ ಸೇನೆಯ ಕುಲಕರ್ಣಿ ಹೇಳಿಕೆ

ಸಮಗ್ರ ನ್ಯೂಸ್: ‘ರಾಜ್ಯ ಸರ್ಕಾರದಿಂದ ಹಿಂದೂ ಹಬ್ಬಗಳಿಗೆ ರಕ್ಷಣೆ ಇಲ್ಲ ಎಂಬುದು ಸಾಬೀತಾಗಿದೆ. ಹಾಗಾಗಿ ನಾವೇ ಶಸ್ತ್ರ ಹಿಡಿದು ಹಬ್ಬ ಆಚರಿಸಲು ನಿರ್ಧರಿಸಿದ್ದೇವೆ. ಮುಂಬರುವ ಗಣೇಶ ಚತುರ್ಥಿ ಸಂದರ್ಭದಲ್ಲಿ, ಆಯೋಜಕರು ವಿನಂತಿಸಿದರೆ ಮೆರವಣಿಗೆಯ ರಕ್ಷಣೆಗಾಗಿ 50 ಯುವಕರನ್ನು ತಲವಾರುಸಹಿತ ಕಳುಹಿಸಲು ಸಿದ್ಧ’ ಎಂದು ಶ್ರೀರಾಮಸೇನೆಯ ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದರು. ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಿಮಗಷ್ಟೇ ಕಲ್ಲು ಹಿಡಿಯಲು, ತಲವಾರು ಹಿಡಿಯಲು ಬರುವುದಲ್ಲ. ಹಿಂದೂ ಸಮಾಜಕ್ಕೂ ಗೊತ್ತಿದೆ ಎಂದು ಮುಸ್ಲಿಂ ಗೂಂಡಾಗಳಿಗೆ

‘ಹಿಂದೂ ಹಬ್ಬಗಳ ರಕ್ಷಣೆಗೆ ತಲವಾರು ಜೊತೆ ಜನರನ್ನು ಕಳುಹಿಸುತ್ತೇವೆ’| ಮಂಗಳೂರಿನಲ್ಲಿ ಶ್ರೀರಾಮ ಸೇನೆಯ ಕುಲಕರ್ಣಿ ಹೇಳಿಕೆ Read More »

ಮಂಗಳೂರು: ಖಾಸಗಿ ಆಸ್ಪತ್ರೆಯ ಪಿಜಿ ವೈದ್ಯ ಕುಡಿದು ಕರ್ತವ್ಯಕ್ಕೆ ಹಾಜರ್| ವಿಡಿಯೋ ವೈರಲ್

ಸಮಗ್ರ ನ್ಯೂಸ್: ಮಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಕೆಲಸದಲ್ಲಿರುವ ಪಿಜಿ ಯುವ ವೈದ್ಯ ರಾತ್ರಿ ವೇಳೆ ಕುಡಿದು ಕರ್ತವ್ಯಕ್ಕೆ ಹಾಜರಾದ ಘಟನೆ ಸೆ.22 ರಂದು ನಡೆದಿದೆ. ರಾತ್ರಿ ವೇಳೆ ಮದ್ಯದ ಅಮಲಿನಲ್ಲಿದ್ದ ವೈದ್ಯನ ವಿಡಿಯೋ ಮಾಡಿ ರೋಗಿಗಳ ಸಂಬಂಧಿಕರು ತರಾಟೆಗೆತ್ತಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವ ವೈದ್ಯ ಕುಡಿದು ಎಲ್ಲಿಯೋ ಬಿದ್ದು ಬಟ್ಟೆಯೆಲ್ಲಾ ಸಂಪೂರ್ಣ ಕೆಸರು ಮಣ್ಣು ಮೆತ್ತಿಕೊಂಡಿದೆ. ಅದೇ ರೀತಿಯಲ್ಲಿ ಡಾಕ್ಟರ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ವೇಳೆ ಒಳಗಿನ ಮೂಲೆಯಲ್ಲಿ ಕುಳಿತಿದ್ದ ವ್ಯಕ್ತಿಯನ್ನು ರೋಗಿಯ ಸಂಬಂಧಿಕರು

ಮಂಗಳೂರು: ಖಾಸಗಿ ಆಸ್ಪತ್ರೆಯ ಪಿಜಿ ವೈದ್ಯ ಕುಡಿದು ಕರ್ತವ್ಯಕ್ಕೆ ಹಾಜರ್| ವಿಡಿಯೋ ವೈರಲ್ Read More »

ಉಜಿರೆ: ರಬ್ಬರ್ ಟ್ಯಾಪಿಂಗ್ ತರಬೇತಿ ಗೆ ಅರ್ಜಿ‌ ಆಹ್ವಾನ

ಸಮಗ್ರ ನ್ಯೂಸ್: ರಬ್ಬರ್ ಬೆಳೆಗಾರ ರೈತರಿಗೆ ಮಹತ್ವದ ಮಾಹಿತಿ ಎನ್ನುವಂತೆ ರಬ್ಬರ್ ಟ್ಯಾಪಿಂಗ್ ಉಚಿತ ತರಬೇತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ರುಡ್ ಸೆಟ್ ಸಂಸ್ಥೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ದಿನಾಂಕ 21-10-2024ರಿಂದ 30-10-2021ರವರೆಗೆ 10 ದಿನಗಳ ಕಾಲ ಉಚಿತವಾಗಿ ರಬ್ಬರ್ ಟ್ಯಾಪಿಂಗ್ ತರಬೇತಿಯನ್ನು ನೀಡಲಾಗುತ್ತಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದಿದೆ. 18 ವರ್ಷದಿಂದ 45 ವರ್ಷದ ಒಳಗಿನವರು ತರಬೇತಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ.

ಉಜಿರೆ: ರಬ್ಬರ್ ಟ್ಯಾಪಿಂಗ್ ತರಬೇತಿ ಗೆ ಅರ್ಜಿ‌ ಆಹ್ವಾನ Read More »

ಪುತ್ತೂರು ಟೌನ್ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ಭಾರೀ ಅವ್ಯವಹಾರ| ಆರ್.ಟಿ.ಐ ಕಾರ್ಯಕರ್ತ ಸುದರ್ಶನ್ ಪುತ್ತೂರು ಆರೋಪ

ಸಮಗ್ರ ನ್ಯೂಸ್: ಪುತ್ತೂರನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯಾಚರಿಸುತ್ತಿರುವ ಟೌನ್ ಕೋ ಅಪರೇಟೀವ್ ಬ್ಯಾಂಕ್ ನ ಕಾರ್ಯಚಟುವಟಿಕೆಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಬ್ಯಾಂಕ್ ನ ಸದಸ್ಯ ಮತ್ತು ಆರ್.ಟಿ.ಐ ಕಾರ್ಯಕರ್ತ ಸುದರ್ಶನ್ ಪುತ್ತೂರು ಆರೋಪಿಸಿದ್ದಾರೆ. ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ‌ ಅವರು 100 ವರ್ಷಕ್ಕೂ ಹಳೆಯದಾದ ಈ ಟೌನ್ ಬ್ಯಾಂಕ್ ಕೋಟಿಗೂ ಮಿಕ್ಕಿದ ವ್ಯವಹಾರವನ್ನು ಮಾಡುತ್ತಿದೆ. ಆದರೆ ಈವರೆಗೆ ಈ ಬ್ಯಾಂಕ್ ತನ್ನ ಶಾಖೆಯನ್ನು ವಿಸ್ತರಿಸಿಕೊಂಡಿಲ್ಲ. ಬ್ಯಾಂಕ್ ನ ಸಿಬ್ಬಂದಿಗಳ ಆಯ್ಕೆ ಮತ್ತು ಇತರ ಆಯ್ಕೆಗಳಿಗೆ

ಪುತ್ತೂರು ಟೌನ್ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ಭಾರೀ ಅವ್ಯವಹಾರ| ಆರ್.ಟಿ.ಐ ಕಾರ್ಯಕರ್ತ ಸುದರ್ಶನ್ ಪುತ್ತೂರು ಆರೋಪ Read More »

ಮಂಗಳೂರು: ಬೈಕ್ – ಲಾರಿ ನಡುವೆ ಭೀಕರ ಅಪಘಾತ| ಕಾಲೇಜು ವಿದ್ಯಾರ್ಥಿ ದುರ್ಮರಣ

ಸಮಗ್ರ ನ್ಯೂಸ್: ಲಾರಿಯೊಂದು ಬೈಕ್‌ಗೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಕಾಲೇಜು ವಿದ್ಯಾರ್ಥಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಂಗಳೂರಿನ ಕುಂಟಿಕಾನದಲ್ಲಿ ನಡೆದಿದೆ‌. ಘಟನೆಯಲ್ಲಿ ಮತ್ತೋರ್ವ ಬೈಕ್ ಸವಾರ ಗಾಯಗೊಂಡಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಿ.ಸಿ.ರೋಡ್ ಮೆಲ್ಕಾರ್ ನಿವಾಸಿ, ಕೂಳೂರು ಯೆನೆಪೊಯ ಕಾಲೇಜಿನ ಬಿಬಿಎ ಎರಡನೇ ವರ್ಷದ ವಿದ್ಯಾರ್ಥಿ ಮೊಹಮ್ಮದ್ ಜಾಸಿಂ (18) ಮೃತಪಟ್ಟ ಯುವಕ. ಶಾಹಿದ್ ಸುಲೇಮಾನ್(20) ಎಂಬ ಗಾಯಾಳು ವಿದ್ಯಾರ್ಥಿ. ಶುಕ್ರವಾರ ಎಂದಿನಂತೆ ಕಾಲೇಜು ಮುಗಿಸಿಕೊಂಡು ಶಾಹಿದ್ ಸುಲೇಮಾನ್‌ ತಮ್ಮ ಸ್ನೇಹಿತ ಮೊಹಮ್ಮದ್ ಜಾಸಿಂನೊಂದಿಗೆ ಬೈಕ್‌ನಲ್ಲಿ

ಮಂಗಳೂರು: ಬೈಕ್ – ಲಾರಿ ನಡುವೆ ಭೀಕರ ಅಪಘಾತ| ಕಾಲೇಜು ವಿದ್ಯಾರ್ಥಿ ದುರ್ಮರಣ Read More »

ಟಿವಿ ನೋಡುತ್ತಿದ್ದ ವೇಳೆ ಹೃದಯಾಘಾತ| 8ನೇ ತರಗತಿ ವಿದ್ಯಾರ್ಥಿ ಸಾವು

ಸಮಗ್ರ ವಾರ್ತೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೋರ್ವ ಮನೆಯಲ್ಲಿ TV ನೋಡುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಮೃತ ಬಾಲಕನನ್ನು ಹಾಸನ ಜಿಲ್ಲೆ ಆಲೂರು ತಾಲೂಕಿನ ಚನ್ನಾಪುರ ಗ್ರಾಮದ ಸಚಿನ್ ಎಂದು ತಿಳಿದುಬಂದಿದೆ. ಈತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ. ನಿನ್ನೆ ಇದ್ದಕ್ಕಿದ್ದಂತೆ ಸಚಿನ್‌ಗೆ ಎದೆನೋವು ಕಾಣಿಸಿಕೊಂಡಿದೆ. ಹೀಗಾಗಿ ಶಾಲೆಗೆ ಹೋಗದೆ ಮನೆಯಲ್ಲಿ ಟಿವಿ ನೋಡುತ್ತಿದ್ದ. ಈ ವೇಳೆ ಏಕಾಏಕಿ ಸಚಿನ್‌ಗೆ ಎದೆನೋವು ಕಾಣಿಸಿಕೊಂಡು, ಕುಳಿತಲ್ಲಿಯೇ

ಟಿವಿ ನೋಡುತ್ತಿದ್ದ ವೇಳೆ ಹೃದಯಾಘಾತ| 8ನೇ ತರಗತಿ ವಿದ್ಯಾರ್ಥಿ ಸಾವು Read More »