ಸಿನಿಮಾ

ಪತಿಯಿಂದಲೇ ಬರ್ಬರ ಕೊಲೆಯಾದ ‘ಭಜರಂಗಿ’ ನಟಿ ವಿದ್ಯಾ ನಂದೀಶ್

ಸಮಗ್ರ ನ್ಯೂಸ್: ‘ಭಜರಂಗಿ’ ಸಿನಿಮಾದಲ್ಲಿ ನಟಿಸಿದ್ದ ವಿದ್ಯಾ ನಂದೀಶ್ ಭೀಕರವಾಗಿ ಕೊಲೆಯಾಗಿದ್ದಾರೆ. ಮೈಸೂರು ಜಿಲ್ಲೆಯ ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ. ಪತಿ ನಂದೀಶ್ ತನ್ನ ಪತ್ನಿ ವಿದ್ಯಾರನ್ನು ಕೊಲೆ ಮಾಡಿದ್ದಾನೆ. ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿದ್ಯಾ ಕೊಲೆಯಾದ ದುರ್ದೈವಿಯಾಗಿದ್ದು, ಕೌಟುಂಬಿಕ ಕಲಹ ಹಿನ್ನೆಲೆ ಗಂಡನೇ ವಿದ್ಯಾಳ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಕನ್ನಡದ ಕೆಲ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಬಣ್ಣ ಹಚ್ಚಿದ್ದರು. ಮೃತ ವಿದ್ಯಾ ಅವರು ಭಜರಂಗಿ, ವಜ್ರಕಾಯ ಸಿನಿಮಾದಲ್ಲಿ […]

ಪತಿಯಿಂದಲೇ ಬರ್ಬರ ಕೊಲೆಯಾದ ‘ಭಜರಂಗಿ’ ನಟಿ ವಿದ್ಯಾ ನಂದೀಶ್ Read More »

ಭಾರತದಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ನಟ ಅಕ್ಷಯ್ ಕುಮಾರ್

ಸಮಗ್ರ ನ್ಯೂಸ್: ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರತದ ಪೌರತ್ನ ಪಡೆದುಕೊಂಡ ನಂತರ ಮೊದಲ ಬಾರಿಗೆ ಭಾರತದಲ್ಲಿ ಮತದಾನ ಮಾಡಿದ್ದಾರೆ. ನಂತರ ಮಾತನಾಡಿದ ಅಕ್ಷಯ್, ಭಾರತದ ಅಭಿವೃದ್ಧಿ ಮತ್ತು ಬಲಿಷ್ಠ ರಾಷ್ಟ್ರಕ್ಕಾಗಿ ಮತದಾನ ಮಾಡಿ ಎಂದಿದ್ದಾರೆ. ಕೆನಡಾ ಪೌರತ್ವ ಪಡೆದಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇತ್ತೀಚೆಗಷ್ಟೇ ಭಾರತದ ಪೌರತ್ನ ಪಡೆದುಕೊಂಡಿದ್ದರು.

ಭಾರತದಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ನಟ ಅಕ್ಷಯ್ ಕುಮಾರ್ Read More »

ದಾಖಲೆಯ ಮೊತ್ತಕ್ಕೆ ಮಾರಾಟವಾದ ‘ಕಾಂತಾರ’ ಡಿಜಿಟಲ್ ರೈಟ್ಸ್

ಸಮಗ್ರ ನ್ಯೂಸ್: ರಿಷಬ್ ಶೆಟ್ಟಿ ನಟನೆ-ನಿರ್ದೇಶನದ ಕೇವಲ 15-16 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಾಂತಾರ ಚಿತ್ರದ ಡಿಜಿಟಲ್ ರೈಟ್ಸ್ 125 ಕೋಟಿ ರೂಪಾಯಿಗೆ ಅಮೆಜಾನ್ ಪ್ರೈಮ್ ವೀಡಿಯೋ ಕಂಪನಿಗೆ ಸೇಲ್ ಆಗಿ ಅಚ್ಚರಿ ನೀಡಿದೆ. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಜೋಡಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಾಂತಾರ ಚಿತ್ರವು ಈ ಮೂಲಕ ಇದೀಗ ಮತ್ತೊಂದು ಮನ್ನಣೆಗೆ ಪಾತ್ರವಾಗಿದೆ. ಈಗಾಗಲೇ ಕಾಂತಾರ ಚಿತ್ರದ ಬಿಡುಗಡೆಯಿಂದ ಜಗತ್ತಿನಾದ್ಯಂತ 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿದೆ. ರಿಷಬ್

ದಾಖಲೆಯ ಮೊತ್ತಕ್ಕೆ ಮಾರಾಟವಾದ ‘ಕಾಂತಾರ’ ಡಿಜಿಟಲ್ ರೈಟ್ಸ್ Read More »

ಡೆವಿಲ್ ಚಿತ್ರಕ್ಕೆ ನಾಯಕಿಯ ಆಯ್ಕೆ/ ಚಾಲೆಜಿಂಗ್ ಸ್ಟಾರ್ ಗೆ ಜೊತೆಯಾದ ತುಳುನಾಡ ಚೆಲುವೆ

ಸಮಗ್ರ ನ್ಯೂಸ್: ಚಾಲೆಜಿಂಗ್ ಸ್ಟಾರ್ ದರ್ಶನ್ ನಟನೆಯ ಡೆವಿಲ್ ಚಲನಚಿತ್ರದ ಫಸ್ಟ್ ಲುಕ್ ರಿಲೀಸ್ ಆದ ಬೆನ್ನಲ್ಲೇ, ಇದೀಗ ನಾಯಕಿಯನ್ನು ಆಯ್ಕೆ ಮಾಡಲಾಗಿದೆ. ವಾಮನ ಸೇರಿದಂತೆ ಕೆಲವು ಚಲನಚಿತ್ರಗಳಲ್ಲಿ ನಟಿಸಿರುವ ತುಳುನಾಡಿನ ಚೆಲುವೆ ರಚನಾ ರೈ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಶಂಕರ್ ರಾವ್ ನಿರ್ದೇಶನದ ವಾಮನ ಚಲನಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದರು. ಅದಕ್ಕಿಂತಲೂ ಮೊದಲು ತುಳು ಚಲನಚಿತ್ರಗಳಲ್ಲಿ ನಟಿಸಿದ್ದರು. ಮಾಡೆಲ್, ಡ್ಯಾನ್ಸರ್ ಮತ್ತು ಬರಹಗಾರ್ತಿ ಆಗಿರುವ ರಚನಾ ರೈ, ಓ ಮೈ ಡಾಗ್ ಎಂಬ ಪುಸ್ತಕವನ್ನು ಬರೆದಿದ್ದಾರೆ.

ಡೆವಿಲ್ ಚಿತ್ರಕ್ಕೆ ನಾಯಕಿಯ ಆಯ್ಕೆ/ ಚಾಲೆಜಿಂಗ್ ಸ್ಟಾರ್ ಗೆ ಜೊತೆಯಾದ ತುಳುನಾಡ ಚೆಲುವೆ Read More »

ರಾಮಾಯಣ ಚಲನಚಿತ್ರಕ್ಕೆ 835 ಕೋಟಿ ರು. ವೆಚ್ಚ/ 2027ರ ವೇಳೆಗೆ ತೆರೆಗೆ

ಸಮಗ್ರ ನ್ಯೂಸ್: ಬಾಲಿವುಡ್‍ನ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಆಕ್ಷನ್ ಕಟ್ ಹೇಳುತ್ತಿರುವ, ರಣಬೀರ್ ಕಪೂರ್ ರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಅಭಿನಯಿಸುತ್ತಿರುವ ಹಿಂದಿಯ ಹೊಸ ಚಲನಚಿತ್ರ ರಾಮಾಯಣವನ್ನು ಭರ್ಜರಿ 835 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಈ ಮೂಲಕ ಇದು ಈವರೆಗೆ ಭಾರತದಲ್ಲಿ ಅತಿ ಹೆಚ್ಚು ಬಜೆಟ್‍ನ ಸಿನೆಮಾ ಎಂಬ ದಾಖಲೆಗೆ ಪಾತ್ರವಾಗಲಿದೆ ಎಂದು ವರದಿಗಳು ಹೇಳಿವೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್‍ಗೆ ಬರೋಬ್ಬರಿ 600 ದಿನಗಳು ಬೇಕಾಗಲಿದ್ದು, ಸಿನಿಮಾ 2027ರ ವೇಳೆಗೆ ತೆರೆಗೆ ಬರುವ

ರಾಮಾಯಣ ಚಲನಚಿತ್ರಕ್ಕೆ 835 ಕೋಟಿ ರು. ವೆಚ್ಚ/ 2027ರ ವೇಳೆಗೆ ತೆರೆಗೆ Read More »

ಸಿಕಂದರ್‍ನಲ್ಲಿ ರಶ್ಮಿಕಾ/ ಸಲ್ಮಾನ್‍ಗೆ ನಾಯಕಿಯಾದ ನ್ಯಾಷನಲ್ ಕ್ರಶ್

ಸಮಗ್ರ ನ್ಯೂಸ್: ಪುಷ್ಪಾ ನಂತರ ರಶ್ಮಿಕಾ ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಫ್ಯಾನ್ಸ್ ಕಾತರಕ್ಕೆ ಉತ್ತರ ಸಿಕ್ಕಿದ್ದು, ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್‍ನಲ್ಲಿ ಶಾಶ್ವತವಾಗಿ ಕಾಲೂರಿದ್ದಾರೆ. ಈ ಪ್ರಶ್ನೆಗೆ ರಶ್ಮಿಕಾ ಮಂದಣ್ಣ ಉತ್ತರಿಸಿದ್ದಾರೆ. ತನ್ನ ಮುಂದಿನ ಸಿನಿಮಾ ಸಲ್ಮಾನ್ ಖಾನ್ ಜೊತೆ, ಸಿಕಂದರ್ ಸಿನಿಮಾದಲ್ಲಿ ನಟಿಸೋಕೆ ಖುಷಿಯಾಗ್ತಿದೆ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ. ಸಾಜಿದ್ ನಾಡಿಯಾವಾಲ ನಿರ್ದೇಶದನ ಸಿಕಂದರ್ ಸಿನಿಮಾ 2025ರ ಈದ್‍ರಂದು ರಿಲೀಸ್ ಆಗಲಿದೆ ಎಂದು ರಶ್ಮಿಕಾ ಬಿಗ್ ಅಪ್‍ಡೇಟ್ ನೀಡಿದ್ದಾರೆ.

ಸಿಕಂದರ್‍ನಲ್ಲಿ ರಶ್ಮಿಕಾ/ ಸಲ್ಮಾನ್‍ಗೆ ನಾಯಕಿಯಾದ ನ್ಯಾಷನಲ್ ಕ್ರಶ್ Read More »

ಪುಷ್ಪ ಸಿನಿಮಾ ಮಾಡಿ ನನ್ನ ಜೀವನ ಬದಲಾಗಿಲ್ಲ ಎಂದ ಬಹುಭಾಷಾ ನಟ ಫಾಹದ್ ಫಾಸಿಲ್

ಸಮಗ್ರ ನ್ಯೂಸ್ : ಬಹುಭಾಷಾ ನಟ ಫಾಹದ್ ಫಾಸಿಲ್ ಪುಷ್ಪ ಸಿನಿಮಾದಿಂದ ನನ್ನ ಜೀವನ ಬದಲಾಗಿಲ್ಲ, ಪುಷ್ಪ ಮಾಡಿದ್ದಕ್ಕೆ ನನಗೇನು ಸಿಕ್ತು ಅನ್ನೋದು ತಪ್ಪು ಕಲ್ಪನೆ ಎಂದು ಹೇಳಿಕೊಂಡಿದ್ದಾರೆ. ಪುಷ್ಪ ಸಿನಿಮಾ ಆದ್ಮೇಲೆ ಫಾಹದ್ ಲೈಫ್ ಚೇಂಜ್ ಆಗಿದೆ ಎಂಬ ಅಭಿಪ್ರಾಯ ಬಗ್ಗೆ ಮಾತನಾಡಿದ್ದಾರೆ. ನಟ ಫಾಹದ್ ಫಾಸಿಲ್, ‘‘ಪುಷ್ಪ ಸಿನಿಮಾದಿಂದ ನನಗೇನು ಸಿಕ್ಕಿಲ್ಲ. ನಾನು ಆ ಸಿನಿಮಾನ ಸುಕುಮಾರ್ ಅವರಿಗಾಗಿ ಮಾಡಿದೆ. ನಾನೊಬ್ಬ ನಟ. ಅದರಲ್ಲಿ ನನಗೆ ಖುಷಿ ಇದೆ. ” ಎಂದಿದ್ದಾರೆ. ಅಲ್ಲು ಅರ್ಜುನ್

ಪುಷ್ಪ ಸಿನಿಮಾ ಮಾಡಿ ನನ್ನ ಜೀವನ ಬದಲಾಗಿಲ್ಲ ಎಂದ ಬಹುಭಾಷಾ ನಟ ಫಾಹದ್ ಫಾಸಿಲ್ Read More »

ಆನ್‌ಲೈನ್ ಮೂಲಕ ಮತದಾನ ಮಾಡಿದ್ದೇನೆ ಎಂದ ತಮಿಳಿ ನಟಿ ಜ್ಯೋತಿಕಾ

ಸಮಗ್ರ ನ್ಯೂಸ್‌ : ತಮಿಳಿನ ನಟಿ ಜ್ಯೋತಿಕಾ ರಾಜ್‌ಕುಮಾರ್ ರಾವ್ ನಿರ್ದೇಶನದ ಹಿಂದಿ ‘ಶ್ರೀಕಾಂತ್’ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಆನ್‌ಲೈನ್ ಮೂಲಕ ಮತದಾನ ಮಾಡಿದ್ದೇನೆ ಎಂದು ಹೇಳಿಕೆ ನೀಡುವ ಮೂಲಕ ಸೂರ್ಯ ಪತ್ನಿ ಜ್ಯೋತಿಕಾ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದ್ದಾರೆ. ಸಂದರ್ಶಕರು, ಈ ಬಾರಿ ಏಕೆ ವೋಟ್ ಮಾಡಲು ಬರಲಿಲ್ಲ? ಎಂದು ಜ್ಯೋತಿಕಾಗೆ ಕೇಳಿದ್ದರು. ಆಗ ನಾನು ಪ್ರತಿ ವರ್ಷ ವೋಟ್ ಮಾಡುತ್ತೇನೆ ಎಂದಿದ್ದಾರೆ. ನಂತರ ಮತದಾನ ಪ್ರತಿ ವರ್ಷ ನಡೆಯಲ್ಲ ಎಂದು ಸಂದರ್ಶಕರು ಹೇಳಿದರು. ಇದನ್ನು

ಆನ್‌ಲೈನ್ ಮೂಲಕ ಮತದಾನ ಮಾಡಿದ್ದೇನೆ ಎಂದ ತಮಿಳಿ ನಟಿ ಜ್ಯೋತಿಕಾ Read More »

ಉಡುಪಿ: ಅಪ್ಪಾಜಿ ಯಾರನ್ನೂ ರಾಜಕೀಯಕ್ಕೆ ಹೋಗಲೇಬೇಡಿ ಎಂದವರಲ್ಲ-ಶಿವರಾಜ್ ಕುಮಾರ್

ಸಮಗ್ರ ನ್ಯೂಸ್‌ : ಅಪ್ಪಾಜಿ (ರಾಜ್ ಕುಮಾರ್) ಗೆ ವೈಯಕ್ತಿಕವಾಗಿ ರಾಜಕೀಯ ಇಷ್ಟ ಇರಲಿಲ್ಲವೇ ಹೊರತು ಆಸಕ್ತಿ ಇದ್ದವರಿಗೆ ರಾಜಕೀಯಕ್ಕೆ ಹೋಗಲೇಬೇಡಿ ಎಂದವರಲ್ಲ. ಅವರಿಗೆ ರಾಜಕೀಯ ಇಷ್ಟ ಇಲ್ಲದಿದ್ದರೆ ಯಾಕೆ ಓಟು ಹಾಕುತ್ತಿದ್ದರು. ಅದೇ ರೀತಿ ಅವರಿಗೆ ರಾಜಕೀಯ ಹಿನ್ನೆಲೆಯೇ ಬೇಡದಿದ್ದರೆ ಬಂಗಾರಪ್ಪ ಕುಟುಂಬದಿಂದ ಹೆಣ್ಣು ಯಾಕೆ ತರಬೇಕಿತ್ತು ಎಂದು ನಟ ಶಿವರಾಜ್ ಕುಮಾರ್ ಪ್ರಶ್ನಿಸಿದ್ದಾರೆ. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ ಕುಟುಂಬಕ್ಕೆ ರಾಜಕೀಯ ಮಾಡುವ ಉದ್ದೇಶ ಇಲ್ಲ. ಚಿತ್ರರಂಗದಲ್ಲಿ ಒಳ್ಳೆಯ ಸ್ಥಾನ ಕೊಟ್ಟಿದ್ದಾರೆ.

ಉಡುಪಿ: ಅಪ್ಪಾಜಿ ಯಾರನ್ನೂ ರಾಜಕೀಯಕ್ಕೆ ಹೋಗಲೇಬೇಡಿ ಎಂದವರಲ್ಲ-ಶಿವರಾಜ್ ಕುಮಾರ್ Read More »

ಬಘೀರ ಶೂಟಿಂಗ್ ವೇಳೆ ಶ್ರೀ ಮುರಳಿ ಕಾಲಿಗೆ ಗಾಯ| ಆಸ್ಪತ್ರೆಯಲ್ಲಿ ಚಿಕಿತ್ಸೆ

ಸಮಗ್ರ ನ್ಯೂಸ್: ʼಬಘೀರ’ ಚಿತ್ರದ ಶೂಟಿಂಗ್​ ವೇಳೆ ನಟ ಶ್ರೀಮುರಳಿ ಕಾಲಿಗೆ ಗಾಯವಾಗಿದೆ. ಫೈಟಿಂಗ್ ಸೀನ್ ಚಿತ್ರಿಸುವ ವೇಳೆ ಶ್ರೀಮುರಳಿ ಅವರ ಕಾಲಿಗೆ ಪೆಟ್ಟಾಗಿದ್ದು, ಸದ್ಯ ವೀಲ್ ಚೇರ್ ಸಹಾಯದ ಮೂಲಕ ನಟ ಓಡಾಡುತ್ತಿದ್ದಾರೆ. ಎರಡು ದಿನಗಳ ನಂತರ ಅವರು ಸರ್ಜರಿ ಮಾಡಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಎಡಗಾಲಿಗೆ ಪೆಟ್ಟು ಬಿದ್ದಿದ್ದು, ಸದ್ಯ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಶ್ರೀಮುರಳಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಘೀರ ಶೂಟಿಂಗ್ ವೇಳೆ ಶ್ರೀ ಮುರಳಿ ಕಾಲಿಗೆ ಗಾಯ| ಆಸ್ಪತ್ರೆಯಲ್ಲಿ ಚಿಕಿತ್ಸೆ Read More »