ಸಿನಿಮಾ

ಗಾಯಕಿ ಕಾರಿನ ಮೇಲೆ ಕಲ್ಲು ತೂರಾಟ|ಸ್ಪಷ್ಟನೇ ನೀಡಿದ ಮಂಗ್ಲಿ

ಸಮಗ್ರ ನ್ಯೂಸ್ : ಜ.22 ರಂದು ಬಳ್ಳಾರಿಯಲ್ಲಿ ನಡೆದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುತ್ಥಳಿ ಅನಾವರಣ ವೇಳೆ ಗಾಯಕಿ ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಲಾಗಿದೆ ಎನ್ನುವ ಸುದ್ದಿ ಹರಡಿತ್ತು. ಕಿಡಿಗೇಡಿಗಳು ಮಂಗ್ಲಿಗೆ ಮುತ್ತಿಗೆ ಹಾಕಿ, ಕಲ್ಲು ತೂರಾಟ ಮಾಡಿದರು ಎಂದು ಹೇಳಲಾಗಿತ್ತು. ಈ ವೇಳೆ ಪೊಲೀಸರು ಲಾಠಿಚಾರ್ಜ್ ಕೂಡ ಮಾಡಿದರು ಎನ್ನುವ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಈ ಕುರಿತು ಸ್ವತಃ ಮಂಗ್ಲಿ ಸ್ಪಷ್ಟನೇ ನೀಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ […]

ಗಾಯಕಿ ಕಾರಿನ ಮೇಲೆ ಕಲ್ಲು ತೂರಾಟ|ಸ್ಪಷ್ಟನೇ ನೀಡಿದ ಮಂಗ್ಲಿ Read More »

ನಟ ದರ್ಶನ್‌ ತೋಟದ ಮನೆಗೆ ಅರಣ್ಯ ಸಂಚಾರಿದಳ ದಾಳಿ 4 ವನ್ಯ ಪಕ್ಷಿ ವಶ: ಪ್ರಕರಣ ದಾಖಲು

ಸಮಗ್ರ ನ್ಯೂಸ್: ತಿ.ನರಸೀಪುರ ರಸ್ತೆಯ ಕೆಂಪಯ್ಯನಹುಂಡಿ ಬಳಿ ಇರುವ ನಟ ದರ್ಶನ್ ಅವರದ್ದು ಎನ್ನಲಾದ ಫಾರ್ಮ್‌ ಹೌಸ್‌ಗೆ ಶುಕ್ರವಾರ ತಡರಾತ್ರಿ ದಾಳಿ ನಡೆಸಿದ ಮೈಸೂರು ಅರಣ್ಯ ಸಂಚಾರಿದಳದ ಅಧಿಕಾರಿಗಳು, ಕೆಲವು ಪಕ್ಷಿಗಳನ್ನು ವಶಕ್ಕೆ ಪಡೆದಿದ್ದು, ಸಂರಕ್ಷಿತ ಪಕ್ಷಿಗಳಾದ್ದರಿಂದ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಕೆಂಪಯ್ಯನಹುಂಡಿಯ ತೋಟದ ಮನೆಯಲ್ಲಿ ಸಾಕುತ್ತಿರುವ ಕೆಲವು ವಿದೇಶಿ ಪ್ರಾಣಿ, ಪಕ್ಷಿಗಳಿಗೆ ವನ್ಯಜೀವಿ ಕಾಯ್ದೆಯಡಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿರಲಿಲ್ಲ. ಈ ಕಾರಣಕ್ಕೆ ದಾಳಿ ನಡೆದಿದೆ ಎಂದು ಅರಣ್ಯ ಸಂಚಾರಿ ದಳದ ಮುಖ್ಯಸ್ಥ ಡಿಸಿಎಫ್‌ಒ ಭಾಸ್ಕರ್‌

ನಟ ದರ್ಶನ್‌ ತೋಟದ ಮನೆಗೆ ಅರಣ್ಯ ಸಂಚಾರಿದಳ ದಾಳಿ 4 ವನ್ಯ ಪಕ್ಷಿ ವಶ: ಪ್ರಕರಣ ದಾಖಲು Read More »

“ಗಣರಾಜ್ಯೋತ್ಸವ ಬಿಟ್ಬಿಡಿ; ಕ್ರಾಂತಿ ಉತ್ಸವ ಆಚರಿಸಿ”| ವಿವಾದಾತ್ಮಕ ಹೇಳಿಕೆ ನೀಡಿದ ರಚಿತಾ ರಾಮ್ ಗೆ ಬಂಧನ ಭೀತಿ

ಸಮಗ್ರ ನ್ಯೂಸ್: ಚಾಲೆಂಚಿಂಗ್‌ ಸ್ಟಾರ್‌ ದರ್ಶನ್‌ ತೂಗುದೀಪ್‌ ಹಾಗೂ ರಚಿತಾ ರಾಮ್‌ ಅಭಿನಯದ ಬಹುನಿರೀಕ್ಷಿತ ‘ಕ್ರಾಂತಿ’ ಸಿನಿಮಾದ ಪ್ರಮೋಷನ್ ವೇಳೆ ನಾಯಕಿ ನಟಿ ರಚಿತಾ ರಾಮ್ ನೀಡಿದ್ದ ಹೇಳಿಕೆ ಇದೀಗ ವಿವಾದ ಶುರುಮಾಡಿದೆ. ಡಿಂಪಲ್ ಕ್ವೀನ್ ವಿರುದ್ದ ದೂರು ದಾಖಲಿಸಲಾಗಿದ್ದು, ಬಂಧನ ಭೀತಿ ಎದುರಾಗಿದೆ. ನಟ ದರ್ಶನ್‌ ಅಭಿನಯದ ಈ ಸಿನಿಮಾವನ್ನು ಬರೋಬ್ಬರಿ 22 ತಿಂಗಳುಗಳ ಬಳಿಕ ಬೆಳ್ಳತೆರೆ ಮೇಲೆ ನೋಡಿ ಸಂಭ್ರಮಿಸಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಈ ಸಿನಿಮಾ ಮುಂದಿನ ವಾರ ಗುರುವಾರ(ಜ.26)ದಂದು ಗಣರಾಜ್ಯೋತ್ಸವದ ಪ್ರಯುಕ್ತ

“ಗಣರಾಜ್ಯೋತ್ಸವ ಬಿಟ್ಬಿಡಿ; ಕ್ರಾಂತಿ ಉತ್ಸವ ಆಚರಿಸಿ”| ವಿವಾದಾತ್ಮಕ ಹೇಳಿಕೆ ನೀಡಿದ ರಚಿತಾ ರಾಮ್ ಗೆ ಬಂಧನ ಭೀತಿ Read More »

ಕಂಕಣ ಭಾಗ್ಯ ಕರುಣಿಸಲು ಕೊರಗಜ್ಜನ ಮೊರೆಹೋದ ನಟಿ ಪ್ರೇಮಾ

ಸಮಗ್ರ ನ್ಯೂಸ್: ಕಂಕಣ ಭಾಗ್ಯ ಕರುಣಿಸುವಂತೆ ಕೋರಿ ಸ್ಯಾಂಡಲ್‌ ವುಡ್‌ ನಟಿ ಪ್ರೇಮಾ ಕೊರಗಜ್ಜನ ಬಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಾಪು ಹೊಸ ಮಾರಿಗುಡಿ ದೇವಸ್ಥಾನ ಮತ್ತು ಕಾರಣಿಕದ ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ನೀಡಿ ಮಾರಿಯಮ್ಮ ದೇವರ ದರ್ಶನ ಪಡೆದರು. ಹಲವು ವರ್ಷಗಳ ಹಿಂದೆ ವಿಚ್ಛೇದನ ಪಡೆದು ಒಂಟಿಯಾಗಿ ಜೀವನ ಸಾಗಿಸುತ್ತಿರುವ ನಟಿ ಪ್ರೇಮಾ ಇದೀಗ 2ನೇ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದು, ಕಂಕಣ ಭಾಗ್ಯ ಕರುಣಿಸುವಂತೆ ದೈವದ ಮೊರೆ ಹೋಗಿದ್ದಾರೆ. ಕಾಪು ಕೊರಗಜ್ಜ ಸನ್ನಿಧಿಯಲ್ಲಿ ಮದುವೆಗಾಗಿ ಪ್ರಾರ್ಥನೆ ಮಾಡಿದ್ದಾರೆ.

ಕಂಕಣ ಭಾಗ್ಯ ಕರುಣಿಸಲು ಕೊರಗಜ್ಜನ ಮೊರೆಹೋದ ನಟಿ ಪ್ರೇಮಾ Read More »

ಮತ್ತೊಬ್ಬ ಯುವನಟನ ಕಳೆದುಕೊಂಡ ಕನ್ನಡ ಚಿತ್ರರಂಗ| ಶೂಟಿಂಗ್ ವೇಳೆ ಅನಾರೋಗ್ಯದಿಂದ ನಟ ಧನುಷ್ ಸಾವು

ಸಮಗ್ರ ನ್ಯೂಸ್: ಸ್ಯಾಂಡಲ್​ವುಡ್​ಗೆ ಬರಸಿಡಿಲಿನಂತೆ ಮತ್ತೊಂದು ಸುದ್ದಿ ಬಂದೆರಗಿದೆ. ಯುವ ನಟ ಧನುಷ್ ಆಘಾತಕಾರಿ ರೀತಿಯಲ್ಲಿ ಮೃತಪಟ್ಟಿದ್ದಾರೆ. ಕಳೆದ ವಾರ ಲಡಾಕ್​ಗೆ ಶೂಟಿಂಗ್​ಗೆ ಹೋಗಿದ್ದ ಸಮಯದಲ್ಲಿ ಇವರು ಅಲ್ಲಿನ ಹವಾಮಾನದಿಂದಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕೂಡಲೇ ಅವರಿಗೆ ಚಿಕಿತ್ಸೆಯನ್ನೂ ನೀಡಲಾಗಿತ್ತು. ಆದರೆ ದುರದೃಷ್ಟವಶಾತ್​ ಧನುಷ್​ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಪ್ಯಾರ್ ಕಾ ಗೋಲ್ ಗುಂಬಜ್, ಕೊಟ್ಲಲ್ಲಪ್ಪೋ ಕೈ, ಸಂಪಿಗೆ ಹಳ್ಳಿ, ಲೀಡರ್, ಸ್ನೇಹಿತ ಸೇರಿದಂತೆ ಕೆಲವೊಂದು ಚಿತ್ರಗಳಲ್ಲಿ ನಟ ಧನುಷ್ ಅಭಿನಯಿಸಿದ್ದಾರೆ. ಕಳೆದ ವಾದ

ಮತ್ತೊಬ್ಬ ಯುವನಟನ ಕಳೆದುಕೊಂಡ ಕನ್ನಡ ಚಿತ್ರರಂಗ| ಶೂಟಿಂಗ್ ವೇಳೆ ಅನಾರೋಗ್ಯದಿಂದ ನಟ ಧನುಷ್ ಸಾವು Read More »

ನಟನೆ ಬಿಟ್ಟು ಮಾಂಸದಂಧೆಗಿಳಿದ ಸ್ಯಾಂಡಲ್ ವುಡ್ ನಟ ಅರೆಸ್ಟ್| ಹೆಣ್ಮಕ್ಕಳನ್ನು ಬಳಸಿ ಹಣ ಸುಲಿಗೆ ಮಾಡ್ತಿದ್ದ ಆರೋಪಿ

ಸಮಗ್ರ ನ್ಯೂಸ್: ನಟನೆ ಬಿಟ್ಟು ಹೆಣ್ಣುಮಕ್ಕಳನ್ನು ಬಳಸಿಕೊಂಡು ದಂಧೆ ಶುರು ಮಾಡಿದ ಸ್ಯಾಂಡಲ್​ವುಡ್ ನಟ ಈಗ ಅರೆಸ್ಟ್ ಆಗಿದ್ದಾರೆ. ಲೊಕ್ಯಾಂಟೋ ಆಯಪ್ ನ ಹಿಂದೆ ಬಿದ್ದಂತಹ ನಟ ಈಗ ಕಂಬಿ ಎಣಿಸುತ್ತಿದ್ದಾನೆ. ಹುಡುಗಿಯರ ಫೋಟೋಗಳನ್ನು ಬಳಸಿಕೊಂಡು ನಕಲಿ ಪ್ರೊಫೈಲ್ ಬಳಸಿ ದಂಧೆ ಮಾಡುತ್ತಿದ್ದ ನಟನನ್ನು ಪೊಲೀಸರು ಬಂಧಿಸಿದ್ದಾರೆ. ಹೀರೋ ಆಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೇ ದಂಧೆಯಲ್ಲಿ ಪ್ರಮುಖ ಆರೋಪಿಯಾಗಿದ್ದು ಸಂಜು ಅಲಿಯಾಸ್ ಮಂಜುನಾಥ್ ಅರೆಸ್ಟ್ ಆಗಿದ್ದಾರೆ.ಹೆಣ್ಣುಮಕ್ಕಳನ್ನು ಬಳಸಿಕೊಂಡು ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ನ ಪ್ರಮುಖ ಆರೋಪಿ ಸಂಜು ನಟನೆ

ನಟನೆ ಬಿಟ್ಟು ಮಾಂಸದಂಧೆಗಿಳಿದ ಸ್ಯಾಂಡಲ್ ವುಡ್ ನಟ ಅರೆಸ್ಟ್| ಹೆಣ್ಮಕ್ಕಳನ್ನು ಬಳಸಿ ಹಣ ಸುಲಿಗೆ ಮಾಡ್ತಿದ್ದ ಆರೋಪಿ Read More »

ಚೇತರಿಕೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಥ್ಯಾಂಕ್ಸ್ ಹೇಳಿದ ರಿಷಬ್

ಸಮಗ್ರ ನ್ಯೂಸ್: ಕಳೆದ ತಿಂಗಳು ನಡೆದ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಭಾರತ ಕ್ರಿಕೆಟ್ ತಂಡದ ಆಟಗಾರ ಇದೀಗ ಸುಧಾರಿಸಿಕೊಳ್ಳುತ್ತಿದ್ದಾರೆ. ಜನವರಿ 16ರಂದು ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಮ್​ ಮೂಲಕ ಮೊದಲ ಬಾರಿಗೆ ತಮ್ಮ ಆರೋಗ್ಯದ ಕುರಿತು ಸ್ವತಃ ಅವರೇ ಮಾಹಿತಿ ಪ್ರಕಟಿಸಿದ್ದಾರೆ. ಇದೇ ವೇಳೆ ಅವರು ತಮ್ಮನ್ನು ಕಾಪಾಡಿದ ಇಬ್ಬರು ಯುವಕರಿಗೆ ಧನ್ಯವಾದ ಹೇಳಲೂ ಮರೆಯಲಿಲ್ಲ. ಅವರಿಬ್ಬರ ಚಿತ್ರವನ್ನು ಹಾಕಿ, ಇವರ ಋಣ ತೀರಿಸಲು ಸಾಧ್ಯವೇ ಇಲ್ಲ ಎಂದು ಬರೆದುಕೊಂಡಿದ್ದಾರೆ. ರಿಷಭ್​ ಪಂತ್​ ಅವರು ಪಸ್ತುತ ಮುಂಬಯಿಯ

ಚೇತರಿಕೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಥ್ಯಾಂಕ್ಸ್ ಹೇಳಿದ ರಿಷಬ್ Read More »

ರಾಜ್ಯ ರಾಜಕೀಯದತ್ತ ಕಿಚ್ಚ ಸುದೀಪ್!? ಬಿಗ್ ಬಾಸ್ ಗೆ ಭರ್ಜರಿ ಆಫರ್ ನೀಡಿದ ‘ಕೈ’ ಪಕ್ಷ

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸಿರುವ ಕಾಂಗ್ರೆಸ್ ಇದೀಗ ಸ್ಯಾಂಡಲ್ ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರನ್ನು ಗಾಳ ಹಾಕಿದೆ ಎನ್ನಲಾಗುತ್ತಿದೆ. ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನವೇ ಕಿಚ್ಚ ಸುದೀಪ್ ಅವರನ್ನು ರಾಜ್ಯ ರಾಜಕೀಯಕ್ಕೆ ಪ್ರವೇಶಿಸುವಂತೆ ರಾಹುಲ್ ಗಾಂಧಿ ಮೂಲಕವೇ ಆಹ್ವಾನ ನೀಡಲಾಗಿದೆ ಎನ್ನಲಾಗಿದ್ದು, ಈ ಮೂಲಕ ರಾಜ್ಯ ಕಾಂಗ್ರೆಸ್ ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಗೆ ಪಕ್ಷ ಸೇರುವಂತೆ ಆಹ್ವಾನ ನೀಡಿದೆ, ಚಿತ್ರದುರ್ಗ ಅಥವಾ ಶಿವಮೊಗ್ಗದಿಂದ ಕಾಂಗ್ರೆಸ್ ಟಿಕೆಟ್

ರಾಜ್ಯ ರಾಜಕೀಯದತ್ತ ಕಿಚ್ಚ ಸುದೀಪ್!? ಬಿಗ್ ಬಾಸ್ ಗೆ ಭರ್ಜರಿ ಆಫರ್ ನೀಡಿದ ‘ಕೈ’ ಪಕ್ಷ Read More »

ಗುಡ್ ನ್ಯೂಸ್ ನೀಡಿದ ಚಂದನ್ ಶೆಟ್ಟಿ – ನಿವೇದಿತಾ| ಮೊದಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಂಡಲ್ ವುಡ್ ಕ್ಯೂಟ್ ಜೋಡಿ!

ಸಮಗ್ರ ನ್ಯೂಸ್: ಗಾಯಕ, ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಕೊನೆಗೂ ಗುಡ್ ನ್ಯೂಸ್ ನೀಡಿದ್ದಾರೆ. ನಿವೇದಿತಾ ಮತ್ತು ಚಂದನ್ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಬಹಿರಂಗ ಪಡಿಸಿದ್ದಾರೆ. ವಿಶೇಷ ವಿಡಿಯೋ ಮೂಲಕ ಚಂದನ್ ಮತ್ತು ನಿವಿ ದಂಪತಿ ಸುಳಿವು ನೀಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ Fat + Her ಅಂದರೆ ಏನು ಎಂದು ನಿವೇದಿತಾ ಗೌಡಗೆ ಚಂದನ್​ ಶೆಟ್ಟಿ ಕೇಳಿದ್ದಾರೆ. ಅದಕ್ಕೆ ಉತ್ತರ ‘ಫಾದರ್​’. ಹಾಗಾಗಿ ಚಂದನ್​

ಗುಡ್ ನ್ಯೂಸ್ ನೀಡಿದ ಚಂದನ್ ಶೆಟ್ಟಿ – ನಿವೇದಿತಾ| ಮೊದಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಂಡಲ್ ವುಡ್ ಕ್ಯೂಟ್ ಜೋಡಿ! Read More »

ಕೊರಗಜ್ಜನೇ ನನ್ನ ಗೆಲ್ಲಿಸಿದ್ದಾರೆ| ಮಂಗಳೂರಿಗೆ ಮನಬಿಚ್ಚಿ ಮಾತನಾಡಿದ ರೂಪೇಶ್‌ ಶೆಟ್ಟಿ

ಸಮಗ್ರ ನ್ಯೂಸ್: ‘ನಾನು ಕೊರಗಜ್ಜ ದೇವರನ್ನು ತುಂಬ ಆರಾಧನೆ ಮಾಡುತ್ತೇನೆ. ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಆಡುವಾಗ ಕೊರಗಜ್ಜನ ಹೆಸರು ಹೇಳುತ್ತಿದ್ದೆ. ನಾನು ಗೆಲ್ಲುವುದು ಬೇಡ, ಕನಿಷ್ಠ ಟಾಪ್​ 5ರಲ್ಲಿ ಬಂದರೂ ಕೂಡ ಮೊದಲು ಹೋಗುವುದು ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಅಂದುಕೊಂಡಿದ್ದೆ. ನನ್ನನ್ನು ಅವರೇ ಗೆಲ್ಲಿಸಿದ್ದಾರೆ’ ಎಂದು ರೂಪೇಶ್​ ಶೆಟ್ಟಿ ಹೇಳಿದ್ದಾರೆ. ಬಿಗ್ ಬಾಸ್ ಗೆದ್ದ ಬಳಿಕ ಮಂಗಳೂರಿಗೆ ಬಂದ ರೂಪೇಶ್​ ಶೆಟ್ಟಿಗೆ ಹುಲಿ ವೇಷದ ಕಲಾವಿದರು ಸ್ವಾಗತ ಕೋರಿದ್ದಾರೆ. ಅದು ಅವರಿಗೆ ಹೆಚ್ಚು ಸಂತಸ ತಂದಿದೆ.

ಕೊರಗಜ್ಜನೇ ನನ್ನ ಗೆಲ್ಲಿಸಿದ್ದಾರೆ| ಮಂಗಳೂರಿಗೆ ಮನಬಿಚ್ಚಿ ಮಾತನಾಡಿದ ರೂಪೇಶ್‌ ಶೆಟ್ಟಿ Read More »