ಕೃಷಿ-ಕಾರ್ಯ

ಕೊಬ್ಬರಿ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ…!

ಸಮಗ್ರ ನ್ಯೂಸ್: ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದೆ. ಈ ಕುರಿತಂತೆ ವಿಧಾನಸಭೆಯಲ್ಲೂ ಸಾಕಷ್ಟು ಬಾರಿ ಚರ್ಚೆ ನಡೆದಿತ್ತು. ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿಯವರನ್ನ ಜೆಡಿಎಸ್ ನಿಯೋಗ ಭೇಟಿ ಮಾಡಿ ಮನವಿ ಮಾಡಿತ್ತು. ಅದರಂತೆ ಕೇಂದ್ರ ಸರ್ಕಾರ, ಪ್ರತಿ ಕ್ವಿಂಟಾಲ್‌ ಕೊಬ್ಬರಿಗೆ 300 ರೂಪಾಯಿ ಏರಿಕೆ ಮಾಡಿದೆ. ಕೇಂದ್ರ ಸರ್ಕಾರದ ಕ್ರಮವನ್ನ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಸ್ವಾಗತಿಸಿದ್ದು, Xನಲ್ಲಿ ಪೋಸ್ಟ್ ಮಾಡಿ ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ದಾರೆ. ಕೊಬ್ಬರಿ ಬೆಲೆ ಹೆಚ್ಚಳಕ್ಕೆ […]

ಕೊಬ್ಬರಿ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ…! Read More »

ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ! 400 ರೂ ದಾಟಿದ ದಾರಣೆ

ಸಮಗ್ರ ನ್ಯೂಸ್: ಡಿ.12, ಇದೀಗ ಈರುಳ್ಳಿ ಜೊತೆ ಬೆಳ್ಳುಳ್ಳಿ ಬೆಲೆಯೂ ಗಗನಕ್ಕೆರಿದೆ. ನಾಟಿ ಬೆಳ್ಳುಳ್ಳಿ ಬೆಲೆ 1 ಕೆಜಿಗೆ 400 ಇದ್ದರೆ ಹೈಬ್ರಿಡ್ ಬೆಳ್ಳುಳ್ಳಿ ಬೆಲೆ 300 ರೂಪಾಯಿ ಇದೆ. ಎರಡು ದಿನಗಳ ಹಿಂದೆ ಬೆಳ್ಳುಳ್ಳಿ ದರ 260 ಇದೀಗ ಒಂದೇ ಸಮನೆ 400ರ ಗಡಿ ದಾಟಿದೆ. ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ಮಳೆ ಕೊರತೆಯಾಗಿದೆ. ಇದು ಬೆಳ್ಳುಳ್ಳಿ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಪೂರೈಕೆ ಕಡಿಮೆಯಾಗಿರುವುದೇ ದರ ಹೆಚ್ಚಳಕ್ಕೆ ಮೂಲ

ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ! 400 ರೂ ದಾಟಿದ ದಾರಣೆ Read More »

ಅಡಿಕೆ ಹಳದಿರೋಗದ ಹಾಟ್ ಸ್ಪಾಟ್ ನಲ್ಲೇ‌ ಮತ್ತೆ ಸಮೃದ್ಧ ಫಸಲು| ಅವಿಷ್ಕಾರಗಳ ಬಳಿಕ ಯಶಕಂಡ ಸಂಪಾಜೆಯ ಕೃಷಿಕ

ಸಮಗ್ರ ನ್ಯೂಸ್: ಅಡಿಕೆ ಹಳದಿ ಎಲೆರೋಗ ಪೀಡಿತ ಪ್ರದೇಶ ಅದರಲ್ಲೂ ಹಾಟ್‌ಸ್ಫಾಟ್‌ ಪ್ರದೇಶದಲ್ಲಿ ಮತ್ತೆ ಅಡಿಕೆ ಬೆಳೆದು ಫಸಲು ಕಾಣುವ ಮೂಲಕ ಸಂಪಾಜೆಯ ಕೃಷಿಕರೋರ್ವರು ಹೊಸ ಭರವಸೆ ಮೂಡಿಸಿದ್ದಾರೆ. ಇಲ್ಲಿನ ಜೇಡ್ಲದ ನಿವಾಸಿ ಕೃಷಿಕ ಶ್ರೀಧರ ಭಟ್ ಹಲವು ಆವಿಷ್ಕಾರಗಳ ಬಳಿಕ ಅಡಿಕೆ ಕೃಷಿಯಲ್ಲಿ ಯಶ ಕಂಡಿದ್ದಾರೆ. ಅಡಿಕೆ ಬೆಳೆಗಾರರಿಗೆ ಈಚೆಗೆ ಕಾಡುತ್ತಿರುವ ಸಮಸ್ಯೆಗಳಲ್ಲಿ ಎಲೆಚುಕ್ಕಿ ಹಾಗೂ ಹಳದಿ ಎಲೆರೋಗ. ಅದರಲ್ಲೂ ಸಂಪಾಜೆ ಸೇರಿದಂತೆ ಹಲವು ಕಡೆಗಳಲ್ಲಿ ಅಡಿಕೆ ಹಳದಿ ಎಲೆರೋಗದಿಂದ ತೋಟವೇ ನಾಶವಾಗಿತ್ತು. ಇದೀಗ ಅನೇಕ

ಅಡಿಕೆ ಹಳದಿರೋಗದ ಹಾಟ್ ಸ್ಪಾಟ್ ನಲ್ಲೇ‌ ಮತ್ತೆ ಸಮೃದ್ಧ ಫಸಲು| ಅವಿಷ್ಕಾರಗಳ ಬಳಿಕ ಯಶಕಂಡ ಸಂಪಾಜೆಯ ಕೃಷಿಕ Read More »

ಟೊಮ್ಯಾಟೊ ದರದಲ್ಲಿ ಭಾರೀ ಕುಸಿತ| ಕೆಂಪುಸುಂದರಿ ಬೆಲೆ ಎಷ್ಟು ಗೊತ್ತಾ?

ಸಮಗ್ರ ನ್ಯೂಸ್: ಸುಮಾರು ಒಂದೂವರೆ ಎರಡು ತಿಂಗಳು 100ರಿಂದ 150ರವರೆಗೆ ಇದ್ದ ಕೇಜಿ ಟೊಮೆಟೋ ಬೆಲೆ ಇದೀಗ 20ಕ್ಕೆ ಕುಸಿದಿದೆ. ನಗರದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬರುತ್ತಿದ್ದು, ದರ ಇಳಿಕೆಯಾಗಿದೆ. ಆಂಧ್ರಪ್ರದೇಶದ ಮಾರುಕಟ್ಟೆಯಿಂದ ಯಥೇಚ್ಛವಾಗಿ ಟೊಮೆಟೋ ಪೂರೈಕೆಯಾಗುತ್ತಿದೆ. ಅತಿ ದೊಡ್ಡ ಟೊಮೆಟೋ ಮಾರುಕಟ್ಟೆಆಗಿರುವ ಕೋಲಾರದ ಸಿಎಂಆರ್‌ ಮಾರುಕಟ್ಟೆಯಲ್ಲಿ 15 ಕೇಜಿ ನಾಟಿ ಟೊಮೆಟೋ ಬಾಕ್ಸ್‌ 250- 400, ಹೈಬ್ರಿಡ್‌ ಟೊಮೆಟೋ 250- 450ಕ್ಕೆ ಇಳಿದಿದೆ. ಇದಲ್ಲದೆ, ಸುತ್ತಲಿನ ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರದಿಂದ ಬರುವ ಟೊಮೆಟೋ

ಟೊಮ್ಯಾಟೊ ದರದಲ್ಲಿ ಭಾರೀ ಕುಸಿತ| ಕೆಂಪುಸುಂದರಿ ಬೆಲೆ ಎಷ್ಟು ಗೊತ್ತಾ? Read More »

ಭತ್ತದ ಬೆಳೆಗೆ ವಿಮೆಗೆ ಅರ್ಜಿ ಆಹ್ವಾನ|ಆಗಸ್ಟ್ 16 ಕೊನೆ ದಿನ

ಸಮಗ್ರ ನ್ಯೂಸ್: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲು ಅಧಿಸೂಚನೆ ಆಗಿರುತ್ತದೆ. ಯೋಜನೆಯಡಿಯಲ್ಲಿ ಭತ್ತದ ಬೆಳೆಗೆ ವಿಮೆ ನೋಂದಣಿ ಆರಂಭಗೊಂಡಿದೆ. ಆಸಕ್ತ ಭತ್ತ ಬೆಳೆಗಾರರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಜುಲೈ ತಿಂಗಳಿನಲ್ಲಿ ವಾಡಿಕೆ ಗಿಂತ ಕಡಿಮೆ ಮಳೆ ಬೀಳುತ್ತಿದ್ದು ಹಾಗೂ ಈಗಿನ ಪ್ರಕೃತಿ ವಿಕೋಪಗಳು ಹೆಚ್ಚಾಗಿದ್ದು, ಭತ್ತದ ಬೆಳೆಗೆ ವಿಮೆ ಮಾಡಿಸುವುದು ಅನಿವಾರ್ಯವಾಗಿರುತ್ತದೆ. ಆದ್ದರಿಂದ ರೈತರು ಈ ಕೂಡಲೇ ಹತ್ತಿರದ ಸಹಕಾರಿ ಬ್ಯಾಂಕ್ ಅಥವಾ ಸಾಮಾನ್ಯ ಸೇವಾಕೇಂದ್ರಗಳನ್ನು

ಭತ್ತದ ಬೆಳೆಗೆ ವಿಮೆಗೆ ಅರ್ಜಿ ಆಹ್ವಾನ|ಆಗಸ್ಟ್ 16 ಕೊನೆ ದಿನ Read More »

ಹೈನುಗಾರರೇ ಎಚ್ಚರ; ರಾಸುಗಳಲ್ಲಿ ಕಾಣಿಸಿಕೊಂಡಿದೆ ಮತ್ತೊಂದು ‌ಮಾರಕ‌ ಕಾಯಿಲೆ!!

ಸಮಗ್ರ ನ್ಯೂಸ್: ರಾಜ್ಯದ ರೈತಮಿತ್ರರು ಎಚ್ಚರವಾಗಿರಿ. ಹೈನುಗಾರರೇ ನೀವು ಈ ವಿಷವನ್ನು ತಪ್ಪದೆ ಓದಬೇಕು. ಈಗ ಹಲವಾರು ಜಾನುವಾರುಗಳಲ್ಲಿ ಒಟೈಟಿಸ್‍ ಕಾಯಿಲೆ ಹೈನುಗಾರರಿಗೆ ತಲೆನೋವಾಗಿ ಪರಿಣಮಿಸಿದೆ. ಹೈನುಗಾರರು ಎಚ್ಚರ ವಹಿಸದಿದ್ದರೆ ಜಾನುವಾರುಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ರೋಗ ಲಕ್ಷಣಗಳೇನು?ಪ್ರಾರಂಭದಲ್ಲಿ ಹಸುವಿನ ಕಿವಿ ಸೋರಲು ಪ್ರಾರಂಭ ಆಗುತ್ತದೆ. ಬಳಿಕ ಅದಕ್ಕೆ ತಲೆ‌ ನೋವು ಕಾಣಿಸಿಕೊಂಡು ಸೊರಗುತ್ತದೆ. ಇದಾದ ಮೇಲೆ ಮೂಗು, ಬಾಯಿ, ಕಿವಿ ಕೂಡ ಸೋರಲು ಪ್ರಾರಂಭ ಆಗುತ್ತದೆ. ಕಳೆದ ವರ್ಷ ಇದೇ ವೈರಲ್ ಕಾಯಿಲೆಯನ್ನು ವಿಜ್ಞಾನಿಗಳು MCF

ಹೈನುಗಾರರೇ ಎಚ್ಚರ; ರಾಸುಗಳಲ್ಲಿ ಕಾಣಿಸಿಕೊಂಡಿದೆ ಮತ್ತೊಂದು ‌ಮಾರಕ‌ ಕಾಯಿಲೆ!! Read More »

ದಿಢೀರ್ ಧಾರಣೆ ಹೆಚ್ಚಿಸಿಕೊಂಡ ಕರಿಚಿನ್ನ| ಎರಡೇ ದಿನದಲ್ಲಿ ₹ 18ರಷ್ಟು ಏರಿಕೆ ಕಂಡ ಕಾಳುಮೆಣಸು!!

ಸಮಗ್ರ ನ್ಯೂಸ್: ಮಾರುಕಟ್ಟೆಯ ಕರಿಚಿನ್ನ ಎಂದೇ ಕರೆಯಲ್ಪಡುವ ಕಾಳುಮೆಣಸು ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಎರಡು ದಿನಗಳ ಅಂತರದಲ್ಲಿ ಲಾಂಗ್ ಜಾಪ್ ಹೊಡೆದಿರುವ ಪೆಪ್ಪರ್ ಕೆಜಿಗೆ 18 ರೂಪಾಯಿ ಹೆಚ್ಚಾಗಿದೆ. .ಗಾರ್ಬಲ್ಡ್ ಕಾಳುಮೆಣಸು ಪ್ರತಿ ಕೆಜಿಗೆ 540 ರೂ. ಹಾಗೂ ಅನ್ ಗಾರ್ಬಲ್ಡ್ ಗೆ 520ರೂ.ಗೆ ಏರಿಕೆಯಾಗಿದೆ. ಕಳೆದ ಕೆಲವು ವಾರಗಳಿಂದ ಯಥಾ ಸ್ಥಿತಿಯಲ್ಲಿದ್ದ ಪೆಪ್ಪರ್ ಬೆಲೆಯಲ್ಲಿ ದಿಢೀರ್ ಏರಿಕೆ ಕಾಣಿಸಿದ್ದು, ಕೃಷಿಕರು ಫುಲ್ ಖುಷ್ ಆಗಿದ್ದಾರೆ. ಹವಾಮಾನ ಬದಲಾವಣೆ ಕಾರಣ ಮುಂದಿನ ವರ್ಷ ಕೇರಳ

ದಿಢೀರ್ ಧಾರಣೆ ಹೆಚ್ಚಿಸಿಕೊಂಡ ಕರಿಚಿನ್ನ| ಎರಡೇ ದಿನದಲ್ಲಿ ₹ 18ರಷ್ಟು ಏರಿಕೆ ಕಂಡ ಕಾಳುಮೆಣಸು!! Read More »

ಬಾನೆತ್ತರಕ್ಕೆ ಏರಿದ ಹಣ್ಣು ತರಕಾರಿಗಳ ಬೆಲೆ

ಸಮಗ್ರ ನ್ಯೂಸ್: ಈಗಾಗಲೇ ಪೆಟ್ರೋಲ್ – ಡೀಸೆಲ್ ದರ ಮುಗಿಲು ಮುಟ್ಟಿರುವುದರಿಂದ ಹಲವು ದಿನ ನಿತ್ಯದ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದೀಗ ಮುಂಗಾರು ಮಳೆಯ ವಿಳಂಬದ ಕಾರಣಕ್ಕೆ ಹಣ್ಣು ತರಕಾರಿಗಳ ಬೆಲೆಯು ಸಹ ದಿಢೀರ್ ಏರಿಕೆಯಾಗಿದೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದ ಹಾಗಾಗಿದೆ. ಕೇವಲ ಒಂದು ವಾರದ ಹಿಂದೆ ಕೆಲ ತರಕಾರಿಗಳ ಬೆಲೆ 10 ರೂಪಾಯಿಗಳಿಂದ 50 ರೂಪಾಯಿಗಳವರೆಗೆ ಏರಿಕೆಯಾಗಿದ್ದು, ಗ್ರಾಹಕರನ್ನು ಚಿಂತಾಜನಕ ಸ್ಥಿತಿಗೆ ಕೊಂಡೊಯ್ದಿತ್ತು. ಇದೀಗ ಹಣ್ಣುಗಳ ಬೆಲೆಯಲ್ಲೂ ಸಹ ಏರಿಕೆಯಾಗಿದ್ದು, ತಿನ್ನಲು

ಬಾನೆತ್ತರಕ್ಕೆ ಏರಿದ ಹಣ್ಣು ತರಕಾರಿಗಳ ಬೆಲೆ Read More »

ಸುಳ್ಯ: ದ್ವಿತೀಯ ಪಿಯುಸಿ ಫಲಿತಾಂಶ| ಮೂರೂ ವಿಭಾಗಗಳಲ್ಲೂ ಶಾರದಾ ಪಿಯು ಕಾಲೇಜಿಗೆ ಶೇ.100 ಫಲಿತಾಂಶ

ಸಮಗ್ರ ನ್ಯೂಸ್: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯದ ಶ್ರೀ ಶಾರದ ಪದವಿ ಪೂರ್ವ ಕಾಲೇಜು ಮೂರೂ ವಿಭಾಗಗಳಲ್ಲೂ ಶೇ.100 ಫಲಿತಾಂಶ ಪಡೆದುಕೊಂಡಿದೆ. ವಿಜ್ಞಾನ ವಿಭಾಗದಲ್ಲಿ 31 ವಿದ್ಯಾರ್ಥಿನಿಯರಲ್ಲಿ ಎಲ್ಲರೂ ತೇರ್ಗಡೆಯಾಗಿದ್ದು ಶೇ.100 ಫಲಿತಾಂಶ ಬಂದಿದೆ. 10 ಮಂದಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಚೈತನ್ಯ ಯು ಶೇ.561 ಅಂಕದೊಂದಿಗೆ ಸಂಸ್ಥೆಗೆ ಅಗ್ರಸ್ಥಾನಿಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 25 ವಿದ್ಯಾರ್ಥಿನಿಯರಲ್ಲಿ ಎಲ್ಲರೂ ತೇರ್ಗಡೆಯಾಗಿ ಶೇ.100 ಫಲಿತಾಂಶ ಬಂದಿದೆ. 8 ಮಂದಿ ವಿಶೇಷ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಕಲಾವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 34

ಸುಳ್ಯ: ದ್ವಿತೀಯ ಪಿಯುಸಿ ಫಲಿತಾಂಶ| ಮೂರೂ ವಿಭಾಗಗಳಲ್ಲೂ ಶಾರದಾ ಪಿಯು ಕಾಲೇಜಿಗೆ ಶೇ.100 ಫಲಿತಾಂಶ Read More »

ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ| ಕೆಲವೇ ಸೆಕೆಂಡುಗಳಲ್ಲಿ ಅಡಿಕೆ ಮರ ಏರಲು ಬಂದಿದೆ ವಿನೂತನ ‘ಟ್ರೀ ಸ್ಕೂಟರ್’!| ವಾರಕ್ಕೆ ಉಳಿತಾಯವಾಗುತ್ತೆ ₹ 24 ಸಾವಿರ!!

ಸಮಗ್ರ ನ್ಯೂಸ್: ಮುಂದಿನ ದಿನಗಳಲ್ಲಿ ಕೆಲಸ ಮಾಡುವುದಕ್ಕೆ ಕಾರ್ಮಿಕರು ಸಿಗುವುದಿಲ್ಲ ಎಂಬುದು ಎಲ್ಲ ರೈತರ ಅಳಲು. ಇದಕ್ಕೆ ಪರಿಹಾರ ಎನ್ನುವಂತೆ ಮಂಗಳೂರು ಮೂಲದ ನಿವಾಸಿಯೊಬ್ಬರು ವಿನೂತನವಾದ ‘ಟ್ರೀ ಸ್ಕೂಟರ್’ ಕಂಡುಹಿಡಿದಿದ್ದಾರೆ. ಕಾರ್ಮಿಕ ಶಕ್ತಿ ಮತ್ತು ಅಡಿಕೆ ಮರಗಳ ಅಕಾಲಿಕ ನಿರ್ವಹಣೆಯು ಕೃಷಿ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಈ ಅಂತರವನ್ನು ಮನಗಂಡ ಗಣಪತಿ ಭಟ್ ಅವರು ರೈತರಿಗೆ ಬಳಸಲು ಸುಲಭವಾದ ಟ್ರೀ ಸ್ಕೂಟರ್ ಅನ್ನು ಆವಿಷ್ಕರಿಸಿದ್ದಾರೆ, ಇದು ಕಾರ್ಮಿಕರ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ| ಕೆಲವೇ ಸೆಕೆಂಡುಗಳಲ್ಲಿ ಅಡಿಕೆ ಮರ ಏರಲು ಬಂದಿದೆ ವಿನೂತನ ‘ಟ್ರೀ ಸ್ಕೂಟರ್’!| ವಾರಕ್ಕೆ ಉಳಿತಾಯವಾಗುತ್ತೆ ₹ 24 ಸಾವಿರ!! Read More »