ನಂಜನಗೂಡಿನ ರಸಬಾಳೆ ಸವಿದಿದ್ದೀರಾ? ಮೈಸೂರು ಪಾಕ್ ಬಗ್ಗೆ ನಿಮ್ಗೆಷ್ಟು ಗೊತ್ತು? ಬನ್ನಿ ನಿಮ್ಗಾಗಿ ಈ ಮಾಹಿತಿ…
ಸಮಗ್ರ ನ್ಯೂಸ್: ಮೈಸೂರಿನ ಸಾಂಪ್ರದಾಯಿಕ ಬೆಳೆಗಳಲ್ಲಿ ಅಗ್ರಸ್ಥಾನ ನಂಜನಗೂಡಿನ ರಸಬಾಳೆಯದ್ದು. ಮೈಸೂರಿನ ಸ್ಥಳೀಯ ಸಾಂಪ್ರದಾಯಿಕ ಹಿನ್ನೆಲೆಯುಳ್ಳ ನಂಜನಗೂಡು ರಸಬಾಳೆ ವಿಶಿಷ್ಟ ಗುಣಗಳಿಗೆ ಪ್ರಖ್ಯಾತಿ ಪಡೆದಿದೆ. ಸಾಮಾನ್ಯವಾಗಿ ನಂಜನಗೂಡು ಬಾಳೆಹಣ್ಣನ್ನು ನಂಜನಗೂಡು ರಸ ಬಾಳೆಹಣ್ಣು ಎಂದು ಕರೆಯುತ್ತಾರೆ. ರಾಸಾಯನಿಕ ಗೊಬ್ಬರಗಳ ಅತೀ ಬಳಕೆಯಿಂದಾಗಿ ಅದರ ರುಚಿ ಮತ್ತು ಸುವಾಸನೆ ಬದಲಾಗಿರುವುದು ಬೇಸರದ ಸಂಗತಿ. ನಂಜನಗೂಡು ಬಾಳೆಹಣ್ಣು ಅನನ್ಯ ರುಚಿ ಮತ್ತು ಸುವಾಸನೆಯನ್ನು ಹೊಂದಿರಲು ಕಾರಣ ನಂಜನಗೂಡಿನ ಸುತ್ತ ಮುತ್ತಲಿರುವ ಕಪ್ಪು ಜೇಡಿಮಣ್ಣು. ಇದೇ ಬಾಳೆಹಣ್ಣನ್ನು ಬೇರೊಂದು ಪ್ರದೇಶದಲ್ಲಿ ಬೆಳೆದರೆ […]










