ರಾಜಕೀಯ

ಪುತ್ತೂರು: ಅಜಿತ್ ರೈ ಹೊಸಮನೆ ಅವರನ್ನು ತಳ್ಳಿ ಹೊರ ಹಾಕಿದ್ರ ಹಿಂದೂ ಕಾರ್ಯಕರ್ತರು?

ಸಮಗ್ರ ನ್ಯೂಸ್: ಬ್ಯಾನರ್ ಅಳವಡಿಕೆ ನಂತರ ಪುತ್ತೂರಿನಲ್ಲಿ ಗಂಭೀರ ನಾಟಕವೇ ನಡೆಯುತ್ತಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ಮಾಡಿದ್ದು ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದ್ದು, ಈ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿತ್ತಿದೆ. ಈ ಸಮಯದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪುತ್ತೂರಿಗೆ ಆಗಮಿಸಿ ಅರುಣ್ ಕುಮಾರ್ ಪುತ್ತಿಲ ಅವರೊಂದಿಗೆ ಹಲ್ಲೆಗೊಳಗಾದವರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಈ ನಡುವೆ ಬಿಜೆಪಿಯ ಅಜಿತ್ ರೈ ಹೊಸಮನೆಯನ್ನು ಹಿಂದೂ ಕಾರ್ಯಕರ್ತರು ತಳ್ಳಿ ಹೊರಹಾಕಿದ ಘಟನೆ ನಡೆದಿದೆ. ಈ ಹಿಂದೆ ಹಿಂದೂ […]

ಪುತ್ತೂರು: ಅಜಿತ್ ರೈ ಹೊಸಮನೆ ಅವರನ್ನು ತಳ್ಳಿ ಹೊರ ಹಾಕಿದ್ರ ಹಿಂದೂ ಕಾರ್ಯಕರ್ತರು? Read More »

ನಾಳೆಯಿಂದ ರಾಜ್ಯದಲ್ಲಿ ಸಿದ್ದು ಸರ್ಕಾರ| ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ 135 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಸರ್ಕಾರ ರಚನೆಗೆ ಸಿದ್ಧವಾಗಿದೆ. ಕಳೆದ ಐದು ದಿನಗಳಿಂದ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಇಬ್ಬರೂ ನಾಯಕರು ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದರು. ಇದೀಗ ಹೈಕಮಾಂಡ್ ನಾಯಕರು ಕಗ್ಗಂಟು ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಇದೇ ಶನಿವಾರ (ಮೇ 20) ಮಧ್ಯಾಹ್ನ 12.30ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕಗ್ಗಂಟನ್ನು ಪರಿಹರಿಸುವುದರಲ್ಲಿಯೇ ಹೈರಾಣಾಗಿರುವ

ನಾಳೆಯಿಂದ ರಾಜ್ಯದಲ್ಲಿ ಸಿದ್ದು ಸರ್ಕಾರ| ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ Read More »

ಪುತ್ತೂರಿಗೆ: ಪೊಲೀಸರಿಂದ ದೌರ್ಜನ್ಯಕ್ಕೊಳಗಾದವರ ಭೇಟಿಯಾದ ಯತ್ನಾಳ್

ಸಮಗ್ರ ನ್ಯೂಸ್: ಬ್ಯಾನರ್‌ ಪ್ರಕರಣದಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳ ಯೋಗಕ್ಷೇಮವನ್ನು ವಿಚಾರಿಸಲು ಬಿಜೆಪಿ ಶಾಸಕ, ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್‌ ಪುತ್ತೂರಿಗೆ ಆಗಮಿಸಿದ್ದಾರೆ. ಮುಂಜಾನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಳಿಕ ಪುತ್ತೂರಿನ ಪಂಚಪಟಿಗೆ ಆಗಮಿಸಿದ್ದಾರೆ, ಈ ವೇಳೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಸಹಿತ ಪಕ್ಷದ ಹಲವಾರು ಮಂದಿ ನಾಯಕರು ಉಪಸ್ಥಿತರಿದ್ದರು. ಬಳಿಕ ಅಲ್ಲಿಂದ ಪುತ್ತೂರಿನ ಮಹಹಾವೀರ ಆಸ್ಪತ್ರೆಗೆ ಆಗಮಿಸಿ ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ

ಪುತ್ತೂರಿಗೆ: ಪೊಲೀಸರಿಂದ ದೌರ್ಜನ್ಯಕ್ಕೊಳಗಾದವರ ಭೇಟಿಯಾದ ಯತ್ನಾಳ್ Read More »

ಸಿಎಂ ಆಯ್ಕೆಯ ಬೆನ್ನಲ್ಲೇ ಗ್ಯಾರೆಂಟಿಗಳ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ

ಸಮಗ್ರ ನ್ಯೂಸ್: ಎಐಸಿಸಿ ಯು ರಾಜ್ಯದ ಮುಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಎಂದು ಅಧಿಕೃತ ಘೋಷಣೆ ಮಾಡಿದ್ದು, ಇದರ ಬೆನ್ನಲ್ಲೇ ಪಕ್ಷದ ಗ್ಯಾರೆಂಟಿ ಘೋಷಣೆಗಳ ಬಗ್ಗೆಯು ಮಾತನಾಡಿದ್ದಾರೆ. ಸಿಎಂ ಘೋಷಣೆ ಬಳಿಕ ಮೊದಲ ಬಾರಿಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ. ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಜೊತೆಗೆ ನಮ್ಮ ಎಲ್ಲಾ ಗ್ಯಾರೆಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.

ಸಿಎಂ ಆಯ್ಕೆಯ ಬೆನ್ನಲ್ಲೇ ಗ್ಯಾರೆಂಟಿಗಳ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ Read More »

ಆ ಒಂದು ‘ಕರೆಗೆ’ ಮನ ಬದಲಿಸಿದ ಕನಕಪುರ ‌ಬಂಡೆ| ಅಷ್ಟಕ್ಕೂ ಆ ಸಂದೇಶ ಏನಿತ್ತು?

ಸಮಗ್ರ ನ್ಯೂಸ್: ಕರ್ನಾಟಕ ಕಾಂಗ್ರೆಸ್ ನಿಂದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಬಹುತೇಕ ಪೈನಲ್ ಆಗಿದೆ. ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಾಗಾದರೆ ಈವರೆಗೆ ಸಿಎಂ ರೇಸ್ ನಲ್ಲಿದ್ದ ಡಿಕೆಶಿ ಕರಗಿದ್ದು ಹೇಗೆ ಎಂದು ಗೊತ್ತಾದರೆ‌ ನಿಜಕ್ಕೂ ಅಚ್ಚರಿಯಾಗುತ್ತೆ. ಹೌದು, ದೆಹಲಿಯಲ್ಲಿ ಮುಖ್ಯಮಂತ್ರಿ ಹುದ್ದೆ ತನಗೆ ಬೇಕು ಎಂಬುದಾಗಿ ಸಿಎಂ ರೇಸ್ ನಲ್ಲಿ ಡಿಕೆ ಶಿವಕುಮಾರ್ ಇದ್ದರು. ಕಾಂಗ್ರೆಸ್ ಹೈಕಮಾಂಡ್ ಮನವೊಲಿಕೆಗೂ ಪಟ್ಟು ಸಡಿಸಿರಲಿಲ್ಲ. ಆದರೆ ಅವರಿಗೆ ಬಂದ ಒಂದೇ ಒಂದು

ಆ ಒಂದು ‘ಕರೆಗೆ’ ಮನ ಬದಲಿಸಿದ ಕನಕಪುರ ‌ಬಂಡೆ| ಅಷ್ಟಕ್ಕೂ ಆ ಸಂದೇಶ ಏನಿತ್ತು? Read More »

ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸಿದ್ದರಾಮಯ್ಯ

ಸಮಗ್ರ ನ್ಯೂಸ್: ನೂತನ ಸರಕಾರ ರಚನೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಕ್ಕು ಮಂಡಿಸಿದರು. ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಹಕ್ಕು ಮಂಡಿಸಿದ ಸಿದ್ದರಾಮಯ್ಯ, ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಒಪ್ಪಿಸಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಕ್ತಾಯವಾದ ಬೆನ್ನಲ್ಲೇ ರಾಜಭವನಕ್ಕೆ ತೆರಳಿದ ಸಿದ್ದರಾಮಯ್ಯ ರಾಜ್ಯಪಾಲರ ಬಳಿ ಸರಕಾರ ರಚನೆಗೆ ಹಕ್ಕು ಮಂಡಿಸಿದರು. ರಾಜ್ಯಪಾಲರ ಭೇಟಿ ವೇಳೆ ಸಿದ್ದರಾಮಯ್ಯ ಅವರಿಗೆ ಡಿ.ಕೆ ಶಿವಕುಮಾರ್, ಬಿ.ಕೆ ಹರಿಪ್ರಸಾದ್,

ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸಿದ್ದರಾಮಯ್ಯ Read More »

ಪುತ್ತೂರಿನಲ್ಲಿ ನಡೆದ ರಾಜಕೀಯ ಪ್ರೇರಿತ ದೌರ್ಜನ್ಯ ಖಂಡನೀಯ : ಆಮ್ ಆದ್ಮಿ ಪಾರ್ಟಿ

ಸಮಗ್ರ ನ್ಯೂಸ್: ಪುತ್ತೂರಿನಲ್ಲಿ ನಡೆದ ರಾಜಕೀಯ ಪ್ರೇರಿತ ದೌರ್ಜನ್ಯದ ಬಗ್ಗೆ ಆಮ್ ಆದ್ಮಿ ಪಾರ್ಟಿ ಖಂಡಿಸಿರುವುದಾಗಿ ಮಾದ್ಯಮಕ್ಕೆ ತಿಳಿಸಿದ್ದಾರೆ. ಕರಾವಳಿಯಲ್ಲಿ ಮತ ದ್ವೇಷ ರಾಜಕಾರಣ ಹೆಚ್ಚಾಗಿದ್ದು, ಜಾತಿ ರಾಜಕಾರಣಕ್ಕೆ ಕಾಲಿಟ್ಟು ಇದೀಗ ಪುತ್ತೂರಿನಲ್ಲಿ ರಾಜಕಾರಣಿಗಳ ಆಡಳಿತ, ಭ್ರಷ್ಟಾಚಾರ, ನಿರ್ಲಕ್ಷ ವಿರೋಧಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಬ್ಯಾನರ್ ಅಳವಡಿಸಿದ ಪ್ರಕರಣದಲ್ಲಿ, ಅತ್ಯಂತ ಹೀನಾಯವಾಗಿ ದೈಹಿಕ ಹಲ್ಲೆ ಮತ್ತು ಮಾನಸಿಕ ಹಿಂಸೆ ನೀಡಲ್ಪಟ್ಟ ಘಟನೆ ಅತ್ಯಂತ ಖಂಡನೀಯವಾಗಿದೆ. ರಾಜಕೀಯ ಕಾರಣಕ್ಕಾಗಿ ಧರ್ಮ, ಜಾತಿ ಮತ್ತು ಪಕ್ಷದ ದೃಷ್ಟಿಯಿಂದ ಕಾನೂನಿನ ದುರುಪಯೋಗ

ಪುತ್ತೂರಿನಲ್ಲಿ ನಡೆದ ರಾಜಕೀಯ ಪ್ರೇರಿತ ದೌರ್ಜನ್ಯ ಖಂಡನೀಯ : ಆಮ್ ಆದ್ಮಿ ಪಾರ್ಟಿ Read More »

ಸುಳ್ಯ: ಮಾಜಿ ಜಿ.ಪಂ ಸದಸ್ಯ ನವೀನ್ ರೈ ಮೇನಾಲ ಹೊಳೆಗೆ ಬಿದ್ದು ಸಾವು

ಸಮಗ್ರ ನ್ಯೂಸ್: ಮಾಜಿ‌ ಜಿ.ಪಂ ಸದಸ್ಯ, ಸುಳ್ಯದ ಪ್ರಭಾವಿ ನಾಯಕ, ಬಿಜೆಪಿ ಮುಖಂಡ ನವೀನ್ ರೈ ಮೇನಾಲ ಹೊಳೆಗೆ ಬಿದ್ದು ಸಾವನ್ನಪ್ಪಿದ ಘಟನೆ ಇಂದು (ಮೇ. 18) ನಡೆದಿದೆ. ತುದಿಯಡ್ಕ ಬಳಿ ನದಿಯಲ್ಲಿ ಪಂಪ್ ವಾಲ್ ಪಿಟ್ ಸರಿಪಡಿಸುವ ಸಂದರ್ಭದಲ್ಲಿ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಸುಳ್ಯ: ಮಾಜಿ ಜಿ.ಪಂ ಸದಸ್ಯ ನವೀನ್ ರೈ ಮೇನಾಲ ಹೊಳೆಗೆ ಬಿದ್ದು ಸಾವು Read More »

ನೂತನ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಆಯ್ಕೆ| ಮೇ.20 ಕ್ಕೆ ಪ್ರಮಾಣವಚನ

ಸಮಗ್ರ ನ್ಯೂಸ್: ಕಳೆದ 5 ದಿನಗಳಿಂದ ನಡೆಯುತ್ತಿದ್ದ ಮುಖ್ಯಮಂತ್ರಿ ಆಯ್ಕೆ ಕಸರತ್ತಿಗೆ ತೆರೆ ಬಿದ್ದಿದ್ದು, ಮೇ 20 ರಂದು ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಮೇ 20 ರಂದು ಮಧ್ಯಾಹ್ನ 12.30 ಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬುಧವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನಂತರ ಸ್ಥಗಿತಗೊಳಿಸಲಾಗಿತ್ತು. ಶನಿವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮತ್ತೆ ಸಿದ್ಧತೆ ಕೈಗೊಳ್ಳಲಾಗಿದೆ.

ನೂತನ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಆಯ್ಕೆ| ಮೇ.20 ಕ್ಕೆ ಪ್ರಮಾಣವಚನ Read More »

ಹಿಜಾಬ್ ಗೆ ನ್ಯಾಯ ಒದಗಿಸುತ್ತೇವೆ: ಯು.ಟಿ. ಖಾದರ್‌

ಸಮಗ್ರ ನ್ಯೂಸ್: ಶಾಲಾ ಕಾಲೇಜುಗಳ ಹಿಜಾಬ್‌ ನಿಷೇಧದ ವಿಚಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲಲ್ಲಿದೆ. ನ್ಯಾಯಾಲಯದ ತೀರ್ಪನ್ನು ಮರುಪರಿಶೀಲಿಸಿ ಆ ಪ್ರಕಾರ ಸಾಮರಸ್ಯ ಕಾಪಾಡುವಂತಹ ನಿರ್ಧಾರವನ್ನು ಹೊಸ ಸರ್ಕಾರ ತೆಗೆದುಕೊಳ್ಳಲಿದೆ’ ಎಂದು ಶಾಸಕ ಯು.ಟಿ.ಖಾದರ್‌ ಹೇಳಿದರು. ಮಂಗಳವಾರ ಮುಸ್ಲೀಮರ ಶೇ 4ರಷ್ಟು ಮೀಸಲಾತಿ ರದ್ದತಿ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ ‘ಈ ವಿಚಾರದಲ್ಲಿ ಹಿಂದಿನ ಸರ್ಕಾರ ದುರುದ್ದೇಶಪೂರಿತ ಹಾಗೂ ರಾಜಕೀಯ ಪ್ರೇರಿತ ನಿರ್ಧಾರ ತೆಗೆದುಕೊಂಡಿದೆ. ಹಿಂದುಳಿದ ವರ್ಗದ ಒಳಮೀಸಲಾತಿ ಜಾರಿಗೆ ತರುವ ವರದಿಯನ್ನು ಪಡೆಯದೆ ಶಾಶ್ವತ ಸ್ಥಾನ ಕಲ್ಪಿಸಲು ಸರ್ಕಾರ

ಹಿಜಾಬ್ ಗೆ ನ್ಯಾಯ ಒದಗಿಸುತ್ತೇವೆ: ಯು.ಟಿ. ಖಾದರ್‌ Read More »