ರಾಜಕೀಯ

ವೈರಲ್ ಆಯ್ತು ಶಾಸಕಿ ನಯನಾ ಮೋಟಮ್ಮ ಫೋಟೋಸ್| ಅವಿವೇಕಿಗಳಿಗೆ ಉತ್ತರ ಎಂದ ನಯನಾ

ಸಮಗ್ರ ನ್ಯೂಸ್: ರಾಜಕಾರಣಿಗಳನ್ನು ಜನ ಇರುವ ಹಾಗೆಯೇ ನೋಡೋದಕ್ಕೆ ಇಷ್ಟಪಡುತ್ತಾರೆ. ಜನಸಾಮಾನ್ಯರ ಪಾಲಿಗೆ ಉತ್ತಮ ರಾಜಕಾರಣಿಯ ಗುಣಲಕ್ಷಣಗಳಿವು. ಆದರೆ ವಾಸ್ತವದಲ್ಲಿ ನೋಡುವುದಾದರೆ ರಾಜಕಾರಣಿಗಳು ಮನುಷ್ಯರಲ್ವಾ, ಅವ್ರಿಗೂ ಎಲ್ಲರಂತ ಹಲವು ಕನಸುಗಳಿರೋದಲ್ವಾ. ಹೊಸ ಸ್ಥಳಗಳನ್ನು ಸುತ್ತಾಡೋದು, ಟ್ರೆಂಡೀ ಡ್ರೆಸ್ ತರೋದು ಇದೆಲ್ಲಾ ಅವರಿಗೆ ನಿಷಿದ್ಧವಾಗಿಲ್ಲ. ಆದರೂ ರಾಜಕಾರಣಿಗಳು ಹೀಗೆಲ್ಲಾ ಮಾಡಿದರೆ ಯಾಕೆ ಅಪರಾಧಿಯಂತೆ ನೋಡಲಾಗುತ್ತದೆ. ಈ ಬಗ್ಗೆ ಚಿಕ್ಕಮಗಳೂರಿನ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿರುವ ನಯನ ಮೋಟಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನಯನಾ ಮೋಟಮ್ಮ ಅವರ […]

ವೈರಲ್ ಆಯ್ತು ಶಾಸಕಿ ನಯನಾ ಮೋಟಮ್ಮ ಫೋಟೋಸ್| ಅವಿವೇಕಿಗಳಿಗೆ ಉತ್ತರ ಎಂದ ನಯನಾ Read More »

“ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಹಿಷ್ಕರಿಸಿ” |ಶಾಸಕ ಹರೀಶ್ ಪೂಂಜಾರಿಂದ ಬೆಳ್ತಂಗಡಿ ಜನತೆಗೆ ಮನವಿ?

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅನುಷ್ಟಾನಕ್ಕೆ ತರಲಿರುವ ಗ್ಯಾರಂಟಿ ಯೋಜನೆಗಳನ್ನು ಬಹಿಷ್ಕರಿಸುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕ್ಷೇತ್ರದ ಜನತೆಗೆ ಮನವಿ ಮಾಡಿದ್ದಾರೆ ಎಂಬ ಪೋಸ್ಟರ್ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ನೀವು ಉಚಿತ ಯೋಜನೆಗಳನ್ನು ಪಡೆದರೆ ನನ್ನ ಮಾನ ಹರಾಜು ಹಾಕಿದಂತೆ, ಸ್ವಾಭಿಮಾನ ಇರುವ ನಾವು ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳನ್ನು ಪಡೆದುಕೊಳ್ಳುವುದು ಬೇಡ, ಯೋಜನೆಗಳನ್ನು ಬಹಿಷ್ಕರಿಸಿ ನನ್ನ ಮಾನ ಉಳಿಸಿ’ ಎಂದು ಮನವಿ ಮಾಡಲಾದ ಪೋಸ್ಟರ್ ಅನ್ನು ಜಾಲತಾಣಗಳಲ್ಲಿ ಕೆಲವರು ಹಂಚಿಕೊಂಡಿದ್ದಾರೆ.

“ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಹಿಷ್ಕರಿಸಿ” |ಶಾಸಕ ಹರೀಶ್ ಪೂಂಜಾರಿಂದ ಬೆಳ್ತಂಗಡಿ ಜನತೆಗೆ ಮನವಿ? Read More »

ಐದು ಗ್ಯಾರಂಟಿಗೆ ತಾತ್ವಿಕ ಅನುಮೋದನೆ – ಸಿಎಂ ಸಿದ್ದರಾಮಯ್ಯ

ಸಮಗ್ರ ನ್ಯೂಸ್: ನೂತನ ಕಾಂಗ್ರೆಸ್ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಐದು ಗ್ಯಾರಂಟಿಗಳಿಗೆ ತಾತ್ವಿಕ ಅನುಮೋದನೆ ಪಡೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಹೆಚ್ಚಿನ ವಿವರಗಳನ್ನು ಮುಂದಿನ ಸಭೆಗಳಲ್ಲಿ ಚರ್ಚಿಸಲಾಗುವುದು. ಈ ಕುರಿತು ಆದೇಶ ಹೊರಡಿಸಲಾಗುವುದು ಎಂದು ಅವರು ತಿಳಿಸಿದರು. 200 ಯುನಿಟ್ ಗಳವರೆಗೆ ಉಚಿತ ವಿದ್ಯುತ್, ಬಿಪಿಎಲ್ ಕುಟುಂಬಗಳ ಸದಸ್ಯರಿಗೆ ಉಚಿತವಾಗಿ ತಿಂಗಳಿಗೆ ತಲಾ ಹತ್ತು ಕೆ.ಜಿ. ಅಕ್ಕಿ, ಮನೆಯ ಯಜಮಾನಿಗೆ ತಿಂಗಳಿಗೆ ₹ 2,000 ನೆರವು, ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ ₹

ಐದು ಗ್ಯಾರಂಟಿಗೆ ತಾತ್ವಿಕ ಅನುಮೋದನೆ – ಸಿಎಂ ಸಿದ್ದರಾಮಯ್ಯ Read More »

ಸಿದ್ದರಾಮಯ್ಯ ಸಿಎಂ ಆಗಿ ಪ್ರಮಾಣವಚನ| ಕಂಠೀರವ ಕ್ರೀಡಾಂಗಣದಿಂದ ನೇರಪ್ರಸಾರ

ಸಮಗ್ರ ನ್ಯೂಸ್: ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಮಧ್ಯಾಹ್ನ 12.30ಕ್ಕೆ ರಾಜ್ಯದ ಸಿಎಂ ಆಗಿ ಎರಡನೇ ಬಾರಿ ಸಿದ್ದರಾಮಯ್ಯ ಹಾಗೂ ಮೊದಲ ಬಾರಿ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್​​ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಸೇರಿದಂತೆ 10 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರಲ್ಲಿ ಇಂದು 8 ಶಾಸಕರು ಮಾತ್ರ ಸಚಿವರಾಗಿ

ಸಿದ್ದರಾಮಯ್ಯ ಸಿಎಂ ಆಗಿ ಪ್ರಮಾಣವಚನ| ಕಂಠೀರವ ಕ್ರೀಡಾಂಗಣದಿಂದ ನೇರಪ್ರಸಾರ Read More »

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಗೆ ಮಾತೃವಿಯೋಗ

ಸಮಗ್ರ ನ್ಯೂಸ್: ಆರೋಗ್ಯ ಸಚಿವರಾಗಿದ್ದ, ಪ್ರಭಾವಿ ಬಿಜೆಪಿ ನಾಯಕ ಡಾ ಕೆ ಸುಧಾಕರ್‌ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿ ರಾಜ್ಯವೇ ಹುಬ್ಬೇರಿಸುವಂತೆ ಮಾಡಿದ್ದ ಪ್ರದೀಪ್‌ ಈಶ್ವರ್‌ ಅವರ ಸಾಕು ತಾಯಿ ರತ್ನಮ್ಮ ನಿಧನರಾಗಿದ್ದಾರೆ. 72 ವರ್ಷ ವಯಸ್ಸಿನ ರತ್ನಮ್ಮ ಪೇರೇಸಂದ್ರ ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದಾರೆ. ರತ್ನಮ್ಮ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇನ್ನು ಮತ್ತೊಂದೆಡೆ ಇಂದು ಸಿಎಂ ಮತ್ತು ಡಿಸಿಎಂ ಸೇರಿದಂತೆ ಕೆಲ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಹಿನ್ನೆಲೆ ಪ್ರದೀಪ್ ಈಶ್ವರ್ ಬೆಂಗಳೂರಿನಲ್ಲಿದ್ದಾರೆ.

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಗೆ ಮಾತೃವಿಯೋಗ Read More »

ಪುತ್ತೂರಿನಲ್ಲಿ ದೌರ್ಜನ್ಯ ನಡೆಸಲು ಒತ್ತಡ ಹಾಕಿದವರ ಹೆಸರು ಎರಡು ದಿನಗಳಲ್ಲಿ ಬಹಿರಂಗ ಮಾಡುವೆ – ಅಶೋಕ್ ಕುಮಾರ್ ರೈ

ಸಮಗ್ರ ನ್ಯೂಸ್: ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿರುವ ಆರೋಪಿಗಳಿಗೆ ಡಿವೈಎಸ್‍ಪಿ ಕಚೇರಿಯಲ್ಲಿ ದೌರ್ಜನ್ಯ ನಡೆಯಲು, ಬಾಸುಂಡೆ ಬರುವ ರೀತಿಯಲ್ಲಿ ಹಲ್ಲೆಯಾಗಲು ಅಧಿಕಾರಿಗಳಿಗೆ ಬಿಜೆಪಿ ನಾಯಕರ ಒತ್ತಡವೇ ಕಾರಣವಾಗಿದೆ, ಯಾರೆಲ್ಲಾ ಅಧಿಕಾರಿಗಳಿಗೆ ಕರೆ ಮಾಡಿ ಒತ್ತಡ ಹಾಕಿದ್ದಾರೋ ಅವರ ಹೆಸರನ್ನು ಎರಡು ದಿನದಲ್ಲಿ ಬಹಿರಂಗಪಡಿಸುವೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಬ್ಯಾನರ್ ಹಾಕಿದ ಆರೋಪಿಗಳಿಗೆ ಹಲ್ಲೆ ನಡೆಸಿದ್ದು ಕಾಂಗ್ರೆ‌ಸ್‌ನವರೇ, ಕಾಂಗ್ರೆಸ್ ಸರಕಾರ ಬಂದರೆ ಹೀಗೆಲ್ಲಾ ಆಗುತ್ತದೆ ಎಂದು ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ ಕಲ್ಲಡ್ಕ

ಪುತ್ತೂರಿನಲ್ಲಿ ದೌರ್ಜನ್ಯ ನಡೆಸಲು ಒತ್ತಡ ಹಾಕಿದವರ ಹೆಸರು ಎರಡು ದಿನಗಳಲ್ಲಿ ಬಹಿರಂಗ ಮಾಡುವೆ – ಅಶೋಕ್ ಕುಮಾರ್ ರೈ Read More »

ಇಂದು ರಾಜ್ಯದ 31ನೇ ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣವಚನ| ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಜೊತೆ 8 ಮಂದಿ ಸಚಿವರಾಗಿ ಪ್ರಮಾಣವಚನ

ಸಮಗ್ರ ನ್ಯೂಸ್: ಇಂದು ರಾಜ್ಯದ 31ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು 2 ನೇ ಬಾರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯಾಗಿ ಇಂದು ಮಧ್ಯಾಹ್ನ 12.30 ಕ್ಕೆ ಬೆಂಗಳೂರಿನ ಕಂಠೀರ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರ ಜೊತೆಗೆ 8 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ಮಧ್ಯಾಹ್ನ 12.30 ಕ್ಕೆ ರಾಜ್ಯಪಾಲ ಥಾವತ್ ಚಂದ್ ಗೆಹಲೋತ್ ಅವರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞೆ

ಇಂದು ರಾಜ್ಯದ 31ನೇ ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣವಚನ| ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಜೊತೆ 8 ಮಂದಿ ಸಚಿವರಾಗಿ ಪ್ರಮಾಣವಚನ Read More »

ಸಿಎಂ ಗದ್ದುಗೆ ಸಿಕ್ಕಿದ ಖುಷಿಯಲ್ಲೇ‌ ಕೋಟಿ‌ ಬೆಲೆಬಾಳುವ ಕಾರು ಖರೀದಿಸಿದ ಸಿದ್ದರಾಮಯ್ಯ!!

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ನಾಳೆ ಹೊಸ ಸರ್ಕಾರ ರಚನೆ ಮಾಡಲಿದೆ. ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಇದರ ಜೊತೆಗೆ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಹಾಗೂ ಕೆಲ ಸಚಿವರು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಸಿಎಂ ಕುರ್ಚಿಗಾಗಿ ನಡೆದ ಜಟಾಪಟಿಯಲ್ಲಿ ಸಿದ್ದು ಕೈ ಮೇಲಾಗಿದೆ. ದೆಹಲಿಯಲ್ಲಿ ಸಿಎಂ ಪಟ್ಟ ಘೋಷಣೆಯಾಗುತ್ತಿದ್ದಂತೆ, ಇತ್ತ ಸಿದ್ದರಾಮಯ್ಯ 1 ಕೋಟಿ ರೂಪಾಯಿ ಟೋಯೋಟಾ ವೆಲ್‌ಫೈರ್ ಕಾರು ಖರೀದಿಸಿದ್ದಾರೆ. ಟೋಯೋಟಾ ವೆಲ್‌ಫೈರ್

ಸಿಎಂ ಗದ್ದುಗೆ ಸಿಕ್ಕಿದ ಖುಷಿಯಲ್ಲೇ‌ ಕೋಟಿ‌ ಬೆಲೆಬಾಳುವ ಕಾರು ಖರೀದಿಸಿದ ಸಿದ್ದರಾಮಯ್ಯ!! Read More »

ಪೋಲೀಸ್ ದೌರ್ಜನ್ಯಕ್ಕೊಳಗಾದ ಯುವಕರನ್ನು ಭೇಟಿಯಾದ ಭಾಗೀರಥಿ ಮುರುಳ್ಯ

ಸಮಗ್ರ ನ್ಯೂಸ್: ಪುತ್ತೂರಿನಲ್ಲಿ ಅವಮಾನಕರ ಬ್ಯಾನರ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಕಾರ್ಯಕರ್ತರನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿ ಸಾಂತ್ವನ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿ ಅವರು ಹಿಂದೂ ಯುವಕರ ಮೇಲೆ ಈ ರೀತಿ ದೌರ್ಜನ್ಯ ನಡೆದಿರುವುದು ಖಂಡನೀಯ. ಸರಕಾರ ಬದಲಾಗಿ ಎರಡೇ ದಿವಸದಲ್ಲಿ ಹೀಗಾದರೆ ಮುಂದಿನ ಐದು ವರ್ಷದಲ್ಲಿ ನಮ್ಮ ಯುವಕರು ಪರಿಸ್ಥಿತಿ ಏನಾಗಬಹುದು ಎಂಬುದು ಚಿಂತೆಯಾಗಿದೆ.‌ ಹಿಂದುಗಳ

ಪೋಲೀಸ್ ದೌರ್ಜನ್ಯಕ್ಕೊಳಗಾದ ಯುವಕರನ್ನು ಭೇಟಿಯಾದ ಭಾಗೀರಥಿ ಮುರುಳ್ಯ Read More »

ಹರೀಶ್ ಪೂಂಜಾಗೆ ಎಚ್ಚರಿಕೆ ನೀಡಿದ ಅಶೋಕ್ ಕುಮಾರ್ ರೈ

ಸಮಗ್ರ ನ್ಯೂಸ್: ಮೇ 19, ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲ್ ಮತ್ತು ಸದಾನಂದ ಗೌಡರ ಫೋಟೋ ಹೊಂದಿದ್ದ ಬ್ಯಾನರ್’ಗೆ ಚಪ್ಪಲಿ ಹಾರ, ಶ್ರದ್ದಾಂಜಲಿ ಕೋರಿದ್ದ ಬ್ಯಾನರ್ ವಿವಾದದ ಬೆನ್ನಲ್ಲೇ ಪುತ್ತೂರು ಶಾಸಕ ಅಶೋಕ್ ರೈ ಅವರು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಅವರಿಗೆ ಎಚ್ಚರಿಕೆ ನೀಡಿದ್ದಾರೆ. “ನನ್ನ ಕ್ಷೇತ್ರಕ್ಕೆ ಬಂದರೆ ಹುಷಾರ್” ಎನ್ನುವ ಮಾತಿನಲ್ಲಿ ನಡೆದಿರುವ ವಿವಾದದ ಬಗ್ಗೆ ನಾನೇ ನೋಡಿಕೊಳ್ಳುತ್ತೇನೆ ಎಂದು ಶಾಸಕರಾದ ಅಶೋಕ್ ಕುಮಾರ್ ರೈ ಹೇಳಿದ್ದಾರೆ. “ಡಿವೈಎಸ್‌ಪಿ ಕಚೇರಿಯಲ್ಲಿ ದೌರ್ಜನ್ಯ ನಡೆಯಲು,

ಹರೀಶ್ ಪೂಂಜಾಗೆ ಎಚ್ಚರಿಕೆ ನೀಡಿದ ಅಶೋಕ್ ಕುಮಾರ್ ರೈ Read More »