ರಾಜಕೀಯ

ಅನ್ನ ಭಾಗ್ಯದ ಬದಲು ಹಣದ ಭಾಗ್ಯ| ಪಡಿತರದಲ್ಲಿ 5 ಕೆ.ಜಿ ಅಕ್ಕಿ ಮತ್ತೈದು ಕೆ.ಜಿ ಯ ಹಣ ನೇರ ವರ್ಗಾವಣೆ – ಸಚಿವ ಮುನಿಯಪ್ಪ

ಸಮಗ್ರ ನ್ಯೂಸ್: ಅನ್ನ ಭಾಗ್ಯಕ್ಕಾಗಿ ಅಕ್ಕಿ ಸಿಗೋವರೆಗೂ ಪಡಿತರ ಚೀಟಿ ಹೊಂದಿದ ಮನೆಯೊಡಯನ ಖಾತೆಗೆ ಹತ್ತು ಕೆ.ಜಿ ಅಕ್ಕಿಯ ಹಣ ಹಾಕುವ ಚಿಂತನೆ ಇದೆ ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಅಕ್ಕಿ ಪೂರೈಕೆಯಲ್ಲಿ ರಾಜಕೀಯ ಮಾಡಲಾಗುತ್ತಿದೆ. ಇದರಿಂದ ಬಡವರಿಗೆ ಅಕ್ಕಿ ನೀಡಲು ಸಾಧ್ಯವಾಗುತ್ತಿಲ್ಲ. ಆದರೆ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಸದಾ ಸಿದ್ದವಾಗಿದ್ದು ಈವಾಗ ಅಕ್ಕಿ ಬದಲು ಅಕ್ಕಿಯ ಹಣವನ್ನು ವಿತರಿಸಲು ಯೋಜಿಸಲಾಗಿದೆ ಎಂದರು. ಪ್ರತೀ ಕೆ.ಜಿ ಅಕ್ಕಿಯ ಬೆಲೆ […]

ಅನ್ನ ಭಾಗ್ಯದ ಬದಲು ಹಣದ ಭಾಗ್ಯ| ಪಡಿತರದಲ್ಲಿ 5 ಕೆ.ಜಿ ಅಕ್ಕಿ ಮತ್ತೈದು ಕೆ.ಜಿ ಯ ಹಣ ನೇರ ವರ್ಗಾವಣೆ – ಸಚಿವ ಮುನಿಯಪ್ಪ Read More »

ಇಂದಿನಿಂದ (ಜೂ.27) ‘ಗೃಹಲಕ್ಷ್ಮಿ’ ಯೋಜನೆಗೆ ಅರ್ಜಿ ಸ್ವೀಕಾರ| ಅರ್ಜಿ ಸಲ್ಲಿಸುವ ‌ಸಂಪೂರ್ಣ ಮಾಹಿತಿ ಇಲ್ಲಿದೆ…

ಸಮಗ್ರ ನ್ಯೂಸ್: ಇಂದಿನಿಂದ (ಜೂನ್ 27) ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದ್ದು, ಆಗಸ್ಟ್ 17 ಅಥವಾ 18 ರಂದು ಮನೆ ಒಡತಿಯರ ಖಾತೆಗೆ 2 ಸಾವಿರ ರೂ ಹಣ ಜಮಾ ಮಾಡಲಾಗುತ್ತದೆ ಎಂದು ಈಗಾಗಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಗೃಹಲಕ್ಷ್ಮೀ ಯೋಜನೆಗೆ ಸರ್ಕಾರದ ಸೇವಾಸಿಂಧು ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಭೌತಿಕವಾಗಿ ಅರ್ಜಿ ಸಲ್ಲಿಸಬಹುದು. ಯಾವೆಲ್ಲಾ ದಾಖಲೆಗಳು ಬೇಕು..?1) ರೇಷನ್ ಕಾರ್ಡ್

ಇಂದಿನಿಂದ (ಜೂ.27) ‘ಗೃಹಲಕ್ಷ್ಮಿ’ ಯೋಜನೆಗೆ ಅರ್ಜಿ ಸ್ವೀಕಾರ| ಅರ್ಜಿ ಸಲ್ಲಿಸುವ ‌ಸಂಪೂರ್ಣ ಮಾಹಿತಿ ಇಲ್ಲಿದೆ… Read More »

ನಾರೀ’ಶಕ್ತಿ’ ಕಂಟ್ರೋಲ್ ಗೆ ಬರಲಿದೆ ಹೊಸ ರೂಲ್ಸ್| ವೀಕೆಂಡ್ ದರ್ಬಾರ್ ಗೆ ಬೀಳಲಿದೆ ಬ್ರೇಕ್

ಸಮಗ್ರ ನ್ಯೂಸ್: ಶಕ್ತಿ ಯೋಜನೆಯಲ್ಲಿ ಕೆಲ ಮಾರ್ಪಾಡು ತರಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಪ್ರತಿ ವೀಕೆಂಡ್ ನಲ್ಲಿಯೂ ನಾಲ್ಕು ಸಾರಿಗೆ ಬಸ್ ಗಳಲ್ಲಿ ಒತ್ತಡ ಹೆಚ್ಚಿದ್ದು, ಹೀಗಾಗಿ ವೀಕೆಂಡ್ ನಲ್ಲಿ ಮಹಿಳೆಯರ ಓಡಾಟಕ್ಕೆ ಶೀಘ್ರದಲ್ಲೇ ಲಗಾಮು ಬೀಳಲಿದೆ. ತಿಂಗಳಾಂತ್ಯದೊಳಗೆ ಶಕ್ತಿ ಯೋಜನೆಗೆ ಹೊಸ ರೂಲ್ಸ್ ಬರಲಿದ್ದು, ಶಕ್ತಿ ಯೋಜನೆಯಲ್ಲಿ ರೂಲ್ಸ್ ಮಾರ್ಪಾಡಿಗೆ ಸಾರಿಗೆ ನಿಗಮಗಳಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ವೀಕೆಂಡ್ ನಲ್ಲಿ ನಾಲ್ಕು ಸಾರಿಗೆ ನಿಗಮದ ಬಸ್ ಗಳ ಹೌಸ್ ಪುಲ್ ಗೆ ಕಡಿವಾಣ ಹಾಕಲು

ನಾರೀ’ಶಕ್ತಿ’ ಕಂಟ್ರೋಲ್ ಗೆ ಬರಲಿದೆ ಹೊಸ ರೂಲ್ಸ್| ವೀಕೆಂಡ್ ದರ್ಬಾರ್ ಗೆ ಬೀಳಲಿದೆ ಬ್ರೇಕ್ Read More »

ಕೇಂದ್ರ ಸರ್ಕಾರದಿಂದ ಹೊಸ ನಿಯಮ| ದೇಶವ್ಯಾಪ್ತಿ ಹಗಲು – ರಾತ್ರಿಗೆ ಬೇರೆ ಬೇರೆ ವಿದ್ಯುತ್ ಬಿಲ್

ಸಮಗ್ರ ನ್ಯೂಸ್: ಇಡೀ ದೇಶದಲ್ಲಿಯೇ ವಿದ್ಯುತ್ ಬಿಲ್ ಇನ್ನು ಮುಂದೆ ಹೆಚ್ಚಾಗುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರವು ಶಕ್ತಿ ತೆರಿಗೆಯಲ್ಲಿ ಮಾಡಿದ ಕೆಲವೊಂದು ಪರಿಷ್ಕರಣೆಗಳು ಅದಕ್ಕೆ ಕಾರಣವಾಗಿದೆ. ಪ್ರಮುಖವಾಗಿ ಬೇಸಿಗೆ ಕಾಲದಲ್ಲಿ ನೀವು ಈ ಹಿಂದೆ ಪಡೆಯುತ್ತಿದ್ದ ವಿದ್ಯುತ್ ಬಿಲ್‌ಗಿಂತ ಅಧಿಕ ವಿದ್ಯುತ್ ಬಿಲ್ ಬರುವ ಸಾಧ್ಯತೆ ಇದೆ. ಶಕ್ತಿ ತೆರಿಗೆ ನಿಯಮದಲ್ಲಿ ಕೇಂದ್ರ ಸರ್ಕಾರವು ಇತ್ತೀಚೆಗೆ ಕೆಲವೊಂದು ಬದಲಾವಣೆಗಳನ್ನು ಮಾಡಿದೆ. ಈ ಪರಿಷ್ಕರಣೆಯ ಬಳಿಕ ಬೇಸಿಗೆ ಕಾಲದಲ್ಲಿ ರಾತ್ರಿ ಹೊತ್ತಿನಲ್ಲಿ ಹವಾ ನಿಯಂತ್ರಕ (ಎಸಿ) ಮತ್ತು ಕೂಲರ್‌ಗಳನ್ನು

ಕೇಂದ್ರ ಸರ್ಕಾರದಿಂದ ಹೊಸ ನಿಯಮ| ದೇಶವ್ಯಾಪ್ತಿ ಹಗಲು – ರಾತ್ರಿಗೆ ಬೇರೆ ಬೇರೆ ವಿದ್ಯುತ್ ಬಿಲ್ Read More »

ಅಕ್ಕಿ ಬೆಲೆಯೂ ಗಗನಕ್ಕೆ| ಬೆಲೆ ಏರಿಕೆಯಿಂದ ಹೈರಾಣಾದ ಜನಸಾಮಾನ್ಯ

ಸಮಗ್ರ ನ್ಯೂಸ್: ಕಳೆದೊಂದು ತಿಂಗಳಿಂದ ಏರಿಕೆಯಾಗುತ್ತಿರುವ ಅಕ್ಕಿ, ಬೇಳೆಕಾಳುಗಳ ಬೆಲೆಯಿಂದ ಜನಸಾಮಾನ್ಯನ ಬದುಕು ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಿಂದ ಕೊಂಚ ನಿಟ್ಟುಸಿರು ಬಿಡುತ್ತಿದ್ದ ಜನರನ್ನು ಈಗ ಅಕ್ಕಿ, ಬೇಳೆಕಾಳುಗಳ ಬೆಲೆ ಏರಿಕೆ ಕಂಗಾಲಾಗುವಂತೆ ಮಾಡಿದೆ. ಬೇಳೆಕಾಳುಗಳ ಬೆಲೆ ಹದಿನೈದು ದಿನಗಳಿಂದ ದಿಢೀರ್‌ ಏರಿದ್ದರೆ, ಅಕ್ಕಿ 2 ರೂ.ನಿಂದ ಆರಂಭವಾಗಿ ಈಗ ಸುಮಾರು 10​​-12 ರು.ವರೆಗೆ ಹೆಚ್ಚಳವಾಗಿದೆ. ಒಂದು ತಿಂಗಳ ಅಂತರದಲ್ಲೇ ಬೇಳೆಕಾಳುಗಳ ಬೆಲೆ 20​-.30 ರವರೆಗೂ ಏರಿಕೆಯಾಗಿದೆ. ಏರಿಕೆಯಾಗುತ್ತಿರುವ ಅಕ್ಕಿ, ಬೇಳೆಕಾಳುಗಳ ಬೆಲೆ

ಅಕ್ಕಿ ಬೆಲೆಯೂ ಗಗನಕ್ಕೆ| ಬೆಲೆ ಏರಿಕೆಯಿಂದ ಹೈರಾಣಾದ ಜನಸಾಮಾನ್ಯ Read More »

ರಾಜೀನಾಮೆ ಬೆನ್ನಲ್ಲೇ ಉಲ್ಟಾ ಹೊಡೆದ ಕಟೀಲ್| ನಾನು ರಾಜೀನಾಮೆ ಕೊಡೋದಾಗಿ ಹೇಳಿಲ್ಲ‌‌ ಎಂದ ಬಿಜೆಪಿ ರಾಜ್ಯಾಧ್ಯಕ್ಷ

ಸಮಗ್ರ ನ್ಯೂಸ್: ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ಈ ಕುರಿತಂತೆ ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‌ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ. ಇಂದು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಳ್ಳಾರಿಯಲ್ಲಿ ವಿ. ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷೆಯನ್ನು ಪ್ರಕಟಿಸಿದ ಕುರಿತ ಪ್ರಶ್ನೆಗೆ ಉತ್ತರಿಸುವ ವೇಳೆ ಸೋಲಿನ ನೈತಿಕ ಹೊಣೆ ಹೊರುತ್ತೇನೆ. ಸೋಲಿನ ಕಾರಣಗಳ ಕುರಿತಂತೆ ಪಕ್ಷದ ಹಿರಿಯರಿಗೆ ಮಾಹಿತಿ ನೀಡಿದ್ದೇನೆ. 4 ವರ್ಷಗಳಿಂದ ನಾನು ಅಧ್ಯಕ್ಷ

ರಾಜೀನಾಮೆ ಬೆನ್ನಲ್ಲೇ ಉಲ್ಟಾ ಹೊಡೆದ ಕಟೀಲ್| ನಾನು ರಾಜೀನಾಮೆ ಕೊಡೋದಾಗಿ ಹೇಳಿಲ್ಲ‌‌ ಎಂದ ಬಿಜೆಪಿ ರಾಜ್ಯಾಧ್ಯಕ್ಷ Read More »

ಬೆಂಗಳೂರು: ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ರಾಜೀನಾಮೆ

ಸಮಗ್ರ ನ್ಯೂಸ್:ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಶನಿವಾರ ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸೋಲಿನ ಹಿನ್ನೆಲೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.  ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ನೈತಿಕ ಹೊಣೆ ಹೊತ್ತು ಈಗಾಗಲೇ ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳೀನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಈಗಾಗಲೇ ನಾನು ಲಿಖಿತ ಹಾಗೂ ಮೌಖಿಕವಾಗಿ ರಾಜೀನಾಮೆ ಸಲ್ಲಿಕೆ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಬೆಂಗಳೂರು: ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ರಾಜೀನಾಮೆ Read More »

“ಪ್ರತಾಪ್ ಸಿಂಹ ಮುಚ್ಕೊಂಡಿರ್ಬೇಕು, ಮುನಿಸ್ವಾಮಿ ಅಲ್ಲ ಆತ ಮನಿಸ್ವಾಮಿ”| ಪ್ರದೀಪ್ ಈಶ್ವರ್ ಹಿಂಗ್ಯಾಕೆ ಹೇಳಿದ್ರು!?

ಸಮಗ್ರ ನ್ಯೂಸ್: ಅನ್ನ ಭಾಗ್ಯ ಅಕ್ಕಿ ವಿಚಾರವಾಗಿ ಬಿಜೆಪಿ-ಕಾಂಗ್ರೆಸ್​ ನಾಯಕರ ನಡುವೆ ಮಾತಿನ ಸಮರ ಮುಂದುವರಿದಿದೆ. ನಾಯಕರು ಕೌಂಟರ್​​​​-ಪ್ರತಿ ಕೌಂಟರ್​​ ಕೊಡುತ್ತಿದ್ದಾರೆ. ಕೋಲಾರ ಸಂಸದ ಮುನಿಸ್ವಾಮಿ ಮತ್ತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನಡುವೆ ವಾಗ್ಯುದ್ದ ನಡೆದಿದೆ. ಪ್ರದೀಪ್ ಈಶ್ವರ್ ವಿರುದ್ಧ ಮಾತನಾಡಿದ್ದ ಬಿಜೆಪಿ ಸಂಸದ ಮುನಿಸ್ವಾಮಿ, ಇಲ್ಲಿ ಯಾರೋ ಒಬ್ಬ ಚಿಕ್ಕಬಳ್ಳಾಪುರಕ್ಕೆ ಬಂದಿದ್ದಾನೆ. ಬೆಳಗ್ಗೆಯಿಂದ ಸಂಜೆವರೆಗೂ ಅಪ್ಪ-ಅಮ್ಮ ಅಂತಿದ್ದಾನೆ. ಈ ಥರದವರನ್ನು ನಾನ್ ನೋಡಿಲ್ಲ, ಅಬ್ಬಬ್ಬಾ ಏನ್ ಡ್ರಾಮಾ. ಮುಂದಿದೆ ಮಾರಿ ಹಬ್ಬ ಎಂದು ಮುನಿಸ್ವಾಮಿ

“ಪ್ರತಾಪ್ ಸಿಂಹ ಮುಚ್ಕೊಂಡಿರ್ಬೇಕು, ಮುನಿಸ್ವಾಮಿ ಅಲ್ಲ ಆತ ಮನಿಸ್ವಾಮಿ”| ಪ್ರದೀಪ್ ಈಶ್ವರ್ ಹಿಂಗ್ಯಾಕೆ ಹೇಳಿದ್ರು!? Read More »

ಪರಿಷತ್ ಸ್ಥಾನಕ್ಕೆ ಶೆಟ್ಟರ್ ಸೇರಿ‌ ಕಾಂಗ್ರೆಸ್ ನ ಮೂವರು ಅವಿರೋಧ ಆಯ್ಕೆ

ಸಮಗ್ರ ನ್ಯೂಸ್: ಮಾಜಿ ಸಿಎಂ ಜಗದೀಶ್‌ ಶೆಟ್ಟರ್, ಸಚಿವ ಬೋಸರಾಜು ಹಾಗೂ ತಿಪ್ಪಣ್ಣ ಕಮಕನೂರು ಅವರು ವಿಧಾನ ಪರಿಷತ್‌ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿಧಾನ ಪರಿಷತ್ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಮೂವರು ಅಭ್ಯರ್ಥಿಗಳಾದ ಜಗದೀಶ್ ಶೆಟ್ಟರ್, ತಿಪ್ಪಣ್ಣ ಕಮಕನೂರು ಹಾಗೂ ಸಚಿವ ಬೋಸರಾಜು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿಶಾಲಾಕ್ಷಿ ಅವರು ಶುಕ್ರವಾರ ಅಧಿಕೃತವಾಗಿ ಘೋಷಿಸಿದ್ದಾರೆ.

ಪರಿಷತ್ ಸ್ಥಾನಕ್ಕೆ ಶೆಟ್ಟರ್ ಸೇರಿ‌ ಕಾಂಗ್ರೆಸ್ ನ ಮೂವರು ಅವಿರೋಧ ಆಯ್ಕೆ Read More »

ಜಾಗತಿಕ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಮತ್ತೆ ಮೋದಿಯೇ ನಂ.1

ಸಮಗ್ರ ನ್ಯೂಸ್: ಜಾಗತಿಕ ಜನಪ್ರಿಯ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು‌ ಮತ್ತೊಮ್ಮೆ ಮೊದಲ ಸ್ಥಾವವನ್ನು ಗಿಟ್ಟಿಸಿಕೊಂಡು, ಮುನ್ನಡೆದಿದ್ದಾರೆ. ಈ ಮೂಲಕ ಪ್ರಧಾನಿ ಮೋದಿಯವರು ಮತ್ತೆ ವಿಶ್ವದ ನಂ.1 ಜನಪ್ರಿಯ ನಾಯಕರ ಪಟ್ಟಿಯಲ್ಲೇ ಮುಂದುವರೆದಿದ್ದಾರೆ. ಈ ಬಗ್ಗೆ ಮಾರ್ನಿಂಗ್ ಕನ್ಸಲ್ಟ್ ಎನ್ನುವಂತ ಸಂಸ್ಥೆಯೊಂದು ಸಮೀಕ್ಷೆ ನಡೆಸಿದೆ. ತನ್ನ ವರದಿಯನ್ನು ಬಿಡುಗಡೆ ಮಾಡಿದ್ದು, ಈ ಬಾರಿ ಶೇ.76ರಷ್ಟು ಅನುಮೋದನೆಯ ರೇಟಿಂಗ್ ಪಡೆದಿರುವಂತ ಪ್ರಧಾನಿ ಮೋದಿಯವರು ನಂ.1 ಜನಪ್ರಿಯ ಜಾಗತಿಕ ನಾಯಕರಾಗಿ ಮತ್ತೊಮ್ಮೆ ಮೊದಲ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಅಂದಹಾಗೇ ಅಮೇರಿಕಾ ಮೂಲಕ

ಜಾಗತಿಕ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಮತ್ತೆ ಮೋದಿಯೇ ನಂ.1 Read More »