ರಾಜ್ಯಸಭೆ ಚುನಾವಣೆ|ಮತದಾನಕ್ಕೆ ಗೈರಾದ ಶಿವರಾಂ ಹೆಬ್ಬಾರ್
ಸಮಗ್ರ ನ್ಯೂಸ್: ಇಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಚುನಾವಣೆಗೆ ಯಲ್ಲಾಪುರ ಬಿಜೆಪಿ ಶಾಸಕ ಅಲಬೈಲ್ ಶಿವರಾಂ ಹೆಬ್ಬಾರ್ ಗೈರಾಗಿದ್ದಾರೆ. ಇನ್ನುಳಿದಂತೆ 222 ಶಾಸಕರು ಮತ ಚಲಾಯಿಸಿದ್ದಾರೆ. ಇಂದು ಬೆಳಗ್ಗೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆದಿತ್ತು. ಎಸ್.ಟಿ ಸೋಮಶೇಖರ್ ಅಡ್ಡಮತದಾನ ಮಾಡಿರುವುದು ಮತ್ತು ಶಿವರಾಂ ಹೆಬ್ಬಾರ್ ಮತದಾನದಿಂದ ದೂರ ಉಳಿದಿರುವುದರಿಂದ ಬಿಜೆಪಿಗೆ ಎರಡು ಮತಗಳು ಕೈತಪ್ಪಿದೆ.
ರಾಜ್ಯಸಭೆ ಚುನಾವಣೆ|ಮತದಾನಕ್ಕೆ ಗೈರಾದ ಶಿವರಾಂ ಹೆಬ್ಬಾರ್ Read More »