ರಾಜಕೀಯ

ಸಂಪುಟ ರಚನೆಗಾಗಿ ಹೈಕಮಾಂಡ್ ಸಂದೇಶಕ್ಕೆ ವೈಟಿಂಗ್- ಸಿಎಂ ಬೊಮ್ಮಾಯಿ

ಬೆಂಗಳೂರು: ಇಂದು ಅಥವಾ ನಾಳೆ ಸಂಪುಟ ರಚನೆ ಮಾಡಲಾಗುತ್ತದೆ. ಹೈಕಮಾಂಡ್ ಸಂದೇಶದ ನಿರೀಕ್ಷೆಯಲ್ಲಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಪ್ರವಾಹ ಸ್ಥಿತಿ, ಪರಿಹಾರ ಕಾರ್ಯಗಳ ಬಗ್ಗೆ ಸಿಎಸ್ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಸಭೆ ಮಾಡುತ್ತೇನೆ. ಎಲ್ಲಾ ಡಿಸಿಗಳಿಂದ ವರದಿ ತರಿಸಿಕೊಳ್ಳುತ್ತಿದ್ದೇನೆ. ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಿ ಅಗತ್ಯ ಹಣಕಾಸು ಬಿಡುಗಡೆ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ತಿಳಿಸಿದರು. ಇತ್ತ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು […]

ಸಂಪುಟ ರಚನೆಗಾಗಿ ಹೈಕಮಾಂಡ್ ಸಂದೇಶಕ್ಕೆ ವೈಟಿಂಗ್- ಸಿಎಂ ಬೊಮ್ಮಾಯಿ Read More »

ಬೊಮ್ಮಾಯಿ ಕ್ಯಾಬಿನೆಟ್ ಗುರುವಾರ ಅಸ್ತಿತ್ವಕ್ಕೆ? ಒಂದೇ ಬಾರಿಗೆ ‘ಸಮಗ್ರ’ ಸಚಿವ ಸಂಪುಟ

ಬೆಂಗಳೂರು: ಮಂತ್ರಿಗಿರಿಗಾಗಿ ನಾಯಕರ ಕಸರತ್ತು, ಶಾಸಕರ ಲಾಬಿ, ಸಿಎಂ ಬೊಮ್ಮಾಯಿ ದೆಹಲಿ ಪ್ರಯಾಣ, ಹೈಕಮಾಂಡ್ ಭೇಟಿ ಬೆನ್ನಲ್ಲೇ ಸಚಿವ ಸಂಪುಟ ರಚನೆ ಚಟುವಟಿಕೆಗಳು ಗರಿಗೆದರಿದ್ದು, ಮುಂದಿನ ವಾರ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಸಿಎಂ ಆದ ಬಳಿಕ ಮೊದಲ ಬಾರಿ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿರುವ ಬಸವರಾಜ್ ಬೊಮ್ಮಾಯಿ, ಸಂಪುಟಕ್ಕೆ ಸೇರ್ಪಡೆಯಾಗುವವರ ಪಟ್ಟಿಯನ್ನು ತೆಗೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಬೊಮ್ಮಾಯಿ ತೆಗೆದುಕೊಂಡು ಹೋಗಿದ್ದ 21 ಜನರ ಲಿಸ್ಟ್ ನಲ್ಲಿ ಕೇವಲ 6 ಜನರ ಹೆಸರನ್ನು

ಬೊಮ್ಮಾಯಿ ಕ್ಯಾಬಿನೆಟ್ ಗುರುವಾರ ಅಸ್ತಿತ್ವಕ್ಕೆ? ಒಂದೇ ಬಾರಿಗೆ ‘ಸಮಗ್ರ’ ಸಚಿವ ಸಂಪುಟ Read More »

ಎನ್.ಮಹೇಶ್ ಬಿಜೆಪಿಗೆ ಸೇರ್ತಾರಂತೆ!

ಚಾಮರಾಜನಗರ: ಬಿಎಸ್​ಪಿ ಪಕ್ಷದಿಂದ ಅಮಾನತುಗೊಂಡಿರುವ ಕೊಳ್ಳೇಗಾಲ ಶಾಸಕ ಎನ್​.ಮಹೇಶ್ ಅವರು ಬಿಜೆಪಿ ಸೇರುವುದು ಖಚಿತವಾಗಿದೆ. ಕಳೆದ ಹಲವು ದಿನಗಳಿಂದ ಬಿಜೆಪಿ ಸೇರುವ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಸೂಚನೆ ನೀಡಿದ್ದ ಎನ್​.ಮಹೇಶ್ ಇಂದು ಅಧಿಕೃತ ಹೇಳಿಕೆ ನೀಡಿದ್ದಾರೆ. ಗುಂಡ್ಲುಪೇಟೆಗೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಬಿಜೆಪಿ ಸೇರುವ ಬಗ್ಗೆ ಬಹಿರಂಗವಾಗಿ ಹೇಳಿದರು. ಬಿಜೆಪಿಗೆ ಬರುವಂತೆ ಯಡಿಯೂರಪ್ಪ ಆಹ್ವಾನಿಸಿದ್ದಾರೆ. ಶೀಘ್ರದಲ್ಲೇ ಬಿಜೆಪಿ ಸೇರುವ ದಿನಾಂಕ ನಿಗದಿಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಎನ್.ಮಹೇಶ್ ಬಿಜೆಪಿಗೆ ಸೇರ್ತಾರಂತೆ! Read More »

‘ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ’ ಹಿರಿಯರ ಅಸಮಾಧಾನವೇ ಮೂಲ ಕಾರಣವಂತೆ! ಸಿಎಂ ಬೊಮ್ಮಾಯಿ ಹೆಸರಿಂದ ಸಿಡಿ ತನಿಖೆ ವಿಳಂಬ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎನ್ನುವ ಕಾರಣಕ್ಕೆ ಸಚಿವಾಕಾಂಕ್ಷಿಗಳು ನಿತ್ಯ ಸಿಎಂ ಮನೆಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ನೇರವಾಗಿ ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಕೋಪದ ಕಟ್ಟೆ ಒಡೆಯಲಿದೆ ಎನ್ನುವ ಅನುಮಾನ ಹೈಕಮಾಂಡ್‌ಗೆ ಇದೆ. ಇದೆಕ್ಕೆಲ್ಲ ಮಾಜಿ ಸಚಿವರಲ್ಲಿರುವ ಅಸಮಾಧಾನವೇ ಇದಕ್ಕೆಲ್ಲಾ ಮೂಲ ಕಾರಣವಾಗಿದೆ. ಹಾಗಾಗಿ ಎಲ್ಲರ ಸಮಾಧಾನವಾದ ಬಳಿಕ ಸಚಿವ ಸಂಪುಟ ವಿಸ್ತರೆಣೆ ಮಾಡುವ ಬಗ್ಗೆ ಸಿಎಂ ನಿರ್ದರಿಸಿದ್ದಾರೆ.ಇನ್ನೂ ಕೆಲವು ಶಾಸಕರು ಸಚಿವ ಸಂಪುಟ ವಿಸ್ತರಣೆ ಆಗುವ ಮೊದಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಹೈಕಮಾಂಡ್ ನಾಯಕರನ್ನು

‘ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ’ ಹಿರಿಯರ ಅಸಮಾಧಾನವೇ ಮೂಲ ಕಾರಣವಂತೆ! ಸಿಎಂ ಬೊಮ್ಮಾಯಿ ಹೆಸರಿಂದ ಸಿಡಿ ತನಿಖೆ ವಿಳಂಬ Read More »

ಸಚಿವ ಸಂಪುಟದಲ್ಲಿ ನಾನಿಲ್ಲ – ಶೆಟ್ಟರ್ ಅಚ್ಚರಿಯ ಹೇಳಿಕೆ

ಬೆಂಗಳೂರು. ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ನಾನು ಸೇರುವುದಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಪಕ್ಷದೊಳಗೆ ಕೆಲಸ ಮಾಡಲು ನಿರ್ಧರಿಸಿದ್ದು, ಯಾವುದೇ ಸಚಿವ ಸ್ಥಾನ ಆಕಾಂಕ್ಷಿಯಲ್ಲ.ಪಕ್ಷದಲ್ಲಿ ನಾನು ತಳಮಟ್ಟದಲ್ಲಿ ಮೇಲಿನ ಮಟ್ಟದವರೆಗೂ ಕೆಲಸ ಮಾಡಿದ್ದೇನೆ. ಹಾಗಾಗಿ ನಾನು ಯಾವುದೇ ಸ್ಥಾನಮಾನ ಅಪೇಕ್ಷಿಸುತ್ತಿಲ್ಲ. ನನ್ನ ಈ ನಿರ್ಧಾರ ವೈಯಕ್ತಿಕವಾಗಿದ್ದು, ಯಾರ ಒತ್ತಡವೂ ಇಲ್ಲ ಎಂದು ಅವರು ಹೇಳಿದರು. ಇತ್ತೀಚೆಗೆ

ಸಚಿವ ಸಂಪುಟದಲ್ಲಿ ನಾನಿಲ್ಲ – ಶೆಟ್ಟರ್ ಅಚ್ಚರಿಯ ಹೇಳಿಕೆ Read More »

ರಾಜ್ಯದ ಜನತೆಗೆ ಬೊಮ್ಮಾಯಿ ಗಿಪ್ಟ್| ರೈತರ ಮಕ್ಕಳಿಗೆ ವಿಶೇಷ ಶಿಷ್ಯವೇತನ|ಅಶಕ್ತರ ಮಾಸಾಶನದಲ್ಲಿ ಏರಿಕೆ

ಬೆಂಗಳೂರು: ರಾಜ್ಯದ 30 ನೇ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕೆಳವು ಯೋಜನೆಗಳನ್ನು ಘೋಷನೆ ಮಾಡಿದ್ದಾರೆ. ಇದು ಮುಖ್ಯ ಮಂತ್ರಿಯಾದ ನಂತರದ ಮೊದಲ ಯೋಜನೆಯಾಗಿದೆ.ಎಲ್ಲಾ ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಒಂದು ಸಾವಿರ ಕೋಟಿ ವೆಚ್ಚದಲ್ಲಿ ಹೊಸ ಶಿಷ್ಯ ವೇತನ ಯೋಜನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದ ಬಸವರಾಜ ಬೊಮ್ಮಾಯಿ ಅವರು ನೂತನ ಕೊಠಡಿಯಲ್ಲಿ ಸರಳವಾಗಿ ಪೂಜೆ ಸಲ್ಲಿಸಿದರು. ನಂತರ ಅಧಿಕಾರಿಗಳ

ರಾಜ್ಯದ ಜನತೆಗೆ ಬೊಮ್ಮಾಯಿ ಗಿಪ್ಟ್| ರೈತರ ಮಕ್ಕಳಿಗೆ ವಿಶೇಷ ಶಿಷ್ಯವೇತನ|ಅಶಕ್ತರ ಮಾಸಾಶನದಲ್ಲಿ ಏರಿಕೆ Read More »

ರಾಜ್ಯದ 30ನೇ‌ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕಾರ

ಬೆಂಗಳೂರು : ನಿನ್ನೆಯಷ್ಟೇ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ನಿಯೋಜನೆಗೊಂಡಿದ್ದಂತ ಬಸವರಾಜ ಬೊಮ್ಮಾಯಿಯವರು, ರಾಜಭವನದಲ್ಲಿ ನಡೆದಂತ ಸರಳ ಸಮಾರಂಭದಲ್ಲಿ, 30ನೇ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ರಾಜಕೀಯ ಹಿನ್ನಲೆ, ಉತ್ತಮ ನಡೆ, ವಿದ್ಯಾರ್ಹತೆ ಹೊಂದಿರುವವರು, ರಾಜಕೀಯ ಅನುಭವ ಹೊಂದಿರುವಂತ ಬಸವರಾಜ ಬೊಮ್ಮಾಯಿಯವರನ್ನು ಬಿಎಸ್ ಯಡಿಯೂರಪ್ಪ ನಂತ್ರ, ಕರ್ನಾಟಕದ 30ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತು. ಇಂತಹ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಜಭವನದ ಗಾಜಿನ ಅರಮನೆಯಲ್ಲಿ

ರಾಜ್ಯದ 30ನೇ‌ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕಾರ Read More »

ಹಾವೂ ಸಾಯಲಿಲ್ಲ, ಕೋಲೂ ಮುರಿಯಲಿಲ್ಲ | ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡೆದ ಬಿಜೆಪಿ|

ಬೆಂಗಳೂರು: ಬಿ. ಎಸ್. ಯಡಿಯೂರಪ್ಪ ಉತ್ತರಾಧಿಕಾರಿ ಯಾರು ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಬೊಮ್ಮಾಯಿ ಅವರನ್ನು ಸಿಎಂ ಸ್ಥಾನಕ್ಕೆ ಪರಿಗಣಿಸುವ ಮೂಲಕ ಬಿಜೆಪಿ ಹೈಕಮಾಂಡ್‌ ರಾಜಕೀಯವಾಗಿ ಭರ್ಜರಿ ಸಿಕ್ಸರ್ ಬಾರಿಸಿದೆ..! ಪಕ್ಷವನ್ನು ಬೇರು ಮಟ್ಟದಿಂದ ಬೆಳೆಸಿ ಅಧಿಕಾರಕ್ಕೆ ಬಂದಿದ್ದ ಯಡಿಯೂರಪ್ಪ ಅವರ ಅಧಿಕಾರಾವಧಿಯನ್ನು 2 ವರ್ಷಗಳಿಗೇ ಮೊಟಕುಗೊಳಿಸುವ ಮೂಲಕ ಬಿಜೆಪಿ ಹೈಕಮಾಂಡ್ ರಾಜ್ಯದ ಪ್ರಬಲ ವೀರಶೈವ ಲಿಂಗಾಯತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಲಿದೆ ಎಂಬ ಕೂಗಿಗೆ ಬೊಮ್ಮಾಯಿ ಅಸ್ತ್ರ

ಹಾವೂ ಸಾಯಲಿಲ್ಲ, ಕೋಲೂ ಮುರಿಯಲಿಲ್ಲ | ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡೆದ ಬಿಜೆಪಿ| Read More »

ರಾಜ್ಯಕ್ಕೆ ‌ಮತ್ತೆ ಮೂವರು‌ ನೂತನ ಡಿಸಿಎಂಗಳ ನೇಮಕ

ಬೆಂಗಳೂರು : ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾದ ನಂತ್ರ, ನೂತನ ಉಪ ಮುಖ್ಯಮಂತ್ರಿಗಳಾಗಿಆರ್ ಅಶೋಕ್, ಬಿ.ಶ್ರೀರಾಮುಲು ಹಾಗೂ ಗೋವಿಂದ ಕಾರಜೋಳ ಅವರನ್ನು ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ, ಈಗ ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿಯನ್ನು ಇಂದಿನ ಬಿಜೆಪಿ ಸಂಸದೀಯ ಮಂಡಳಿಯ ಸಭೆಯಲ್ಲಿ ಒಕ್ಕೊರಲಿನಿಂದ ಘೋಷಣೆ ಮಾಡಲಾಗಿದೆ. ಈ ಮೂಲಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿಯವರು ನೇಮಕಗೊಂಡಿದ್ದಾರೆ. ಆದರೆ ಈ ಕುರಿತಂತೆ ಸಂಸದೀಯ ಮಂಡಳಿಯ ಸಭೆಯಲ್ಲಿ

ರಾಜ್ಯಕ್ಕೆ ‌ಮತ್ತೆ ಮೂವರು‌ ನೂತನ ಡಿಸಿಎಂಗಳ ನೇಮಕ Read More »

ಹೆಚ್.ಡಿ.ಕೆ ಬಳಿಕ ಕರ್ನಾಟಕದ ಸಿಎಂ ಪಟ್ಟವೇರಿದ ಮತ್ತೋರ್ವ ಮಾಜಿ ಮುಖ್ಯಮಂತ್ರಿ ಪುತ್ರ| ಬಸವರಾಜ ಬೊಮ್ಮಾಯಿ ನಡೆದು ಬಂದ ದಾರಿ|

ಬೆಂಗಳೂರು: ತೀವ್ರ ಪೈಪೋಟಿ, ಕುತೂಹಲ, ಲಾಭಿ, ರಾಜಕೀಯ ಮೇಲಾಟಗಳ ನಡುವೆ ಕೊನೆಗೂ ಕರ್ನಾಟಕದಲ್ಲಿ ಬಿಜೆಪಿಯ ಹೊಸ ಅಲೆ ಮತ್ತೆ ಮೂಡಿದೆ. ಬಿಜೆಪಿ ಹೈಕಮಾಂಡ್ ಅಳೆದು, ತೂಗಿ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿಯವರನ್ನು ಆಯ್ಕೆ ಮಾಡಿದೆ. ಲಿಂಗಾಯತ ವರ್ಗದಿಂದ ಮುಖ್ಯಮಂತ್ರಿಯಾಗಿದ್ದ ಪ್ರಬಲ ಯಡಿಯೂರಪ್ಪರನ್ನು ರಾಜೀನಾಮೆ ಕೊಡಿಸಿ, ಅವರದ್ದೇ ಆಪ್ತ ಬಸವರಾಜ ಬೊಮ್ಮಾಯಿಯವರನ್ನು ಆಯ್ಕೆ ಮಾಡಿದ್ದು, ಮಾಜಿ ಸಿಎಂ ಗೂ ಖುಷಿ ತಂದಿದೆ. ಜೊತೆಗೆ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮತ್ತೋರ್ವ ಮಾಜಿ ಸಿಎಂ ಪುತ್ರ ರಾಜ್ಯದ‌ ಚುಕ್ಕಾಣಿ ಹಿಡಿದಿದ್ದಾರೆ. ಈ

ಹೆಚ್.ಡಿ.ಕೆ ಬಳಿಕ ಕರ್ನಾಟಕದ ಸಿಎಂ ಪಟ್ಟವೇರಿದ ಮತ್ತೋರ್ವ ಮಾಜಿ ಮುಖ್ಯಮಂತ್ರಿ ಪುತ್ರ| ಬಸವರಾಜ ಬೊಮ್ಮಾಯಿ ನಡೆದು ಬಂದ ದಾರಿ| Read More »