ರಾಜಕೀಯ

ಕೇಂದ್ರ ಸಚಿವರ ಸ್ವಾಗತಕ್ಕಾಗಿ ಬಂದೂಕಿನ ಮೊರೆತ – ಯಾದಗಿರಿಯಲ್ಲೊಂದು‌ ವಿಲಕ್ಷಣ ಬೆಳವಣಿಗೆ

ಯಾದಗಿರಿ: ಜನಾಶೀರ್ವಾದ ಕಾರ್ಯಕ್ರಮದ ಹಿನ್ನೆಲೆ ಯರಗೋಳ ಗ್ರಾಮಕ್ಕೆ ಕೇಂದ್ರ ಸಚಿವ ಖೂಬಾ ಆಗಮಿಸಿದ್ದಾರೆ. ಈ ವೇಳೆ, ನಾಡಬಂದೂಕು ಸಿಡಿಸಿ ಕೇಂದ್ರ ಸಚಿವರಿಗೆ ಭರ್ಜರಿ ಸ್ವಾಗತವನ್ನು ಕೋರಲಾಗಿದೆ. ಜಿಲ್ಲೆಯ ಯರಗೋಳ ಗ್ರಾಮದಲ್ಲಿ ನಾಡಬಂದೂಕು ಕೈಯಲ್ಲಿ ಹಿಡಿದುಕೊಂಡು ಜನ ಸ್ವಾಗತಿಸಿದ್ದಾರೆ. ಅಲ್ಲದೇ ಕೋವಿಡ್ ನಿಯಮವನ್ನೂ ಉಲ್ಲಂಘಿಸಿ ಜನ ಜಾತ್ರೆ ಸೇರಿದ್ದರು. ಕೇಂದ್ರ ಸಚಿವರು ಬಂದಾಗ, ಅಲ್ಲಿದ್ದ ಜನ ಹೂಗಳನ್ನ ಅರ್ಪಿಸಿ ಭರ್ಜರಿ ಸ್ವಾಗತ ಕೋರಿದರು. ಈ ವೇಳೆ ಸಚಿವರೊಂದಿಗೆ ಕೇಂದ್ರ ಸಚಿವ ಭಗವಂತ ಖೂಬಾ ಸ್ವಾಗತ ಮಾಡಿಕೊಂಡ ಮಾಜಿ ಸಚಿವ […]

ಕೇಂದ್ರ ಸಚಿವರ ಸ್ವಾಗತಕ್ಕಾಗಿ ಬಂದೂಕಿನ ಮೊರೆತ – ಯಾದಗಿರಿಯಲ್ಲೊಂದು‌ ವಿಲಕ್ಷಣ ಬೆಳವಣಿಗೆ Read More »

ಭಾರೀ ಕುಸಿತ ಕಂಡ ಮೋದಿ ಜನಪ್ರಿಯತೆ – ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ಬಹಿರಂಗ

ನವದೆಹಲಿ: ಆಗಸ್ಟ್ 16 ಬಿಡುಗಡೆಯಾದ ಇಂಡಿಯಾ ಟುಡೇ “ಮೂಡ್ ಆಫ್ ದಿ ನೇಷನ್” ಸಮೀಕ್ಷೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ರೇಟಿಂಗ್ ಒಂದು ವರ್ಷದಲ್ಲಿ 66% ರಿಂದ 24% ಕ್ಕೆ ಇಳಿದಿದೆ. ದೇಶದಲ್ಲಿ ಕೋವಿಡ್ ಬಿಕ್ಕಟ್ಟನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದೇ ಇರುವುದು ಪ್ರಧಾನಿ ಮೋದಿಯವರ ಜನಪ್ರಿಯತೆ ಕುಸಿತಕ್ಕೆ ಪ್ರಾಥಮಿಕ ಕಾರಣ ಎಂದು ಹೇಳಲಾಗಿದೆ. “ಕೊರೊನಾ ಮೊದಲ ಅಲೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಕ್ಕಾಗಿ ಮೋದಿಯವರನ್ನು ಜನವರಿ 2021 ರಲ್ಲಿ ಪ್ರಶಂಸಿಸಲಾಗಿತ್ತು. ಇದಕ್ಕಾಗಿ ಶೇಕಡಾ 73% ರಷ್ಟು ಜನಪ್ರಿಯತೆ ಗಳಿಸಿದ್ದರು.

ಭಾರೀ ಕುಸಿತ ಕಂಡ ಮೋದಿ ಜನಪ್ರಿಯತೆ – ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ಬಹಿರಂಗ Read More »

ಉಪರಾಷ್ಟ್ರಪತಿಗೆ ಪುಸ್ತಕ ನೀಡಿ ಸ್ವಾಗತಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಇಂದು ಬೆಂಗಳೂರಿಗೆ ಆಗಮಿಸಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಪುಸ್ತಕ ನೀಡಿ ಸ್ವಾಗತ ಕೋರಿದ್ದಾರೆ. ಕಾರ್ಯಕ್ರಮ ನಿಮಿತ್ತ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೆಂಕಯ್ಯನಾಯ್ಡು ಅವರನ್ನು ಸಿಎಂ ಸಂಭ್ರಮದಿಂದ ಸ್ವಾಗತಿಸಿದರು. ವಿಮಾನದ ಬಳಿಯೇ ತೆರಳಿದ ಸಿಎಂ ಬೊಮ್ಮಾಯಿವರು ವಿಶೇಷ ಹಾರ, ಶಾಲು ಸೇರಿದಂತೆ ಪುಸ್ತಕ ನೀಡಿ ಅವರನ್ನು ಬರ ಮಾಡಿಕೊಂಡರು. ಇನ್ನೂ ಇದೇ ವೇಳೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಸಹ ಉಪರಾಷ್ಟ್ರಪತಿಗಳನ್ನ ಸ್ವಾಗತಿಸಿದರು. ಸಚಿವರಾದ ಅಶ್ವತ್ಥನಾರಾಯಣ್, ಸಂಸದ ಪಿ.ಸಿ.ಮೋಹನ್ ಸಹ

ಉಪರಾಷ್ಟ್ರಪತಿಗೆ ಪುಸ್ತಕ ನೀಡಿ ಸ್ವಾಗತಿಸಿದ ಸಿಎಂ ಬೊಮ್ಮಾಯಿ Read More »

ಸಿಎಂ ಗೆ ಸೆಲ್ಪಿ ಕಿರಿಕ್| ನನ್ನ ಭೇಟಿ ಮಾಡುವವ್ರು ಮೊಬೈಲ್ ತರಬೇಡಿ- ಖಡಕ್ ಆದೇಶ ಹೊರಡಿಸಿದ ಬೊಮ್ಮಾಯಿ

ಬೆಂಗಳೂರು : ಸಿಎಂ ಭೇಟಿಗೆ ಬರುವವರು ಬಂದು, ಸಿಎಂ ಭೇಟಿ ಮಾಡಿ ಮಾತುಕತೆ‌ ನಡೆಸಿ ಹೋಗಬಹುದು.ಆದರೆ ಸಿಎಂ ನಿವಾಸದ ಒಳಭಾಗಕ್ಕೆ ಮೊಬೈಲ್ ಒಯ್ಯುವಂತಿಲ್ಲ. ಖಡಕ್ ಆದೇಶವನ್ನು ಸಿಎಂ ಹೊರಡಿಸಿದ್ದಾರೆ. ಆರ್.ಟಿ.ನಗರದಲ್ಲಿರುವ ಬಸವರಾಜ್ ಬೊಮ್ಮಾಯಿ‌ಖಾಸಗಿ ನಿವಾಸದಲ್ಲಿ ಮೊಬೈಲ್ ನಿಷೇಧಿಸಲಾಗಿದೆ. ಈ ಬಗ್ಗೆ ನಿವಾಸದ ಹೊರಭಾಗದಲ್ಲಿ ಬೋರ್ಡ್ ಹಾಕಲಾಗಿದೆ. ಸಿಎಂ ಭೇಟಿಗೆ ಬರುವವರು ಬಂದು, ಸಿಎಂ ಭೇಟಿ ಮಾಡಿ ಮಾತುಕತೆ‌ ನಡೆಸಿ ಹೋಗಬಹುದು.ಆದರೆ ಸಿಎಂ ನಿವಾಸದ ಒಳಭಾಗಕ್ಕೆ ಮೊಬೈಲ್ ಒಯ್ಯುವಂತಿಲ್ಲ. ಖಡಕ್ ಆದೇಶದಿಂದ ಕಾರ್ಯಕರ್ತರು ಹಾಗೂ ಸಿಎಂ ಭೇಟಿಗೆ ಬಂದವರು

ಸಿಎಂ ಗೆ ಸೆಲ್ಪಿ ಕಿರಿಕ್| ನನ್ನ ಭೇಟಿ ಮಾಡುವವ್ರು ಮೊಬೈಲ್ ತರಬೇಡಿ- ಖಡಕ್ ಆದೇಶ ಹೊರಡಿಸಿದ ಬೊಮ್ಮಾಯಿ Read More »

ಮೂರು ವರ್ಷದಿಂದ ಒಂದೇ ಪ್ರಾಮಿಸ್| ಸಂಖ್ಯೆಯನ್ನಾದರೂ ಬದಲಿಸಿ ಪ್ರಧಾನಿಗಳೇ… ಮೋದಿ ಭಾಷಣಕ್ಕೆ ಕಾಂಗ್ರೆಸ್ ವ್ಯಂಗ್ಯ

ನವದೆಹಲಿ: 75ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ದೇಶವನ್ನುದ್ದೇಶಿಸಿ ಮಾತನಾಡಿದ್ದರು. ಪ್ರಧಾನಿಯವರ ಭಾಷಣ ಈಗ ಟ್ರೋಲ್‌ಗೆ ಒಳಗಾಗಿದ್ದು, ಮೂರು ವರ್ಷವೂ ಒಂದೇ ಪ್ರಾಮಿಸ್ ಮಾಡಿದ್ದಾರೆ ಎಂದು ನೆಟ್ಟಿಗರು ಮೋದಿಯವರ ಕಾಲೆಳೆಯುತ್ತಿದ್ದಾರೆ. ಆಗಸ್ಟ್ 15, 2019, 2020, 2021 ಈ ಮೂರು ವರ್ಷವೂ 100 ಲಕ್ಷ ಕೋಟಿ ರೂಪಾಯಿಗಳನ್ನು ಆಧುನಿಕ ಮೂಲಸೌಕರ್ಯ ಯೋಜನೆಗಳಿಗಾಗಿ ವಿನಿಯೋಗಿಸಲಾಗುತ್ತದೆ ಎಂದು ಹೇಳಿದ್ದಾರೆ ಎಂಬ ಮೀಮ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾಷ್ಟ್ರದ ಜನರನ್ನು ಒಂದೇ ಭರವಸೆ, ಯೋಜನೆಯ

ಮೂರು ವರ್ಷದಿಂದ ಒಂದೇ ಪ್ರಾಮಿಸ್| ಸಂಖ್ಯೆಯನ್ನಾದರೂ ಬದಲಿಸಿ ಪ್ರಧಾನಿಗಳೇ… ಮೋದಿ ಭಾಷಣಕ್ಕೆ ಕಾಂಗ್ರೆಸ್ ವ್ಯಂಗ್ಯ Read More »

ತಾಲಿಬಾನಿ‌ ಸಂಸ್ಕ್ರತಿ ನಡೆಯಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗ್ಲೇಬೇಕು- ಕೋಟ ಗುಡುಗು

ಮಂಗಳೂರು: ಸ್ವಾತಂತ್ರ್ಯ ರಥಯಾತ್ರೆಗೆ ಅಡ್ಡಿ ಪಡಿಸಿರುವುದು ತಾಲಿಬಾನಿ‌ ಸಂಸ್ಕ್ರತಿಯನ್ನು ತೋರ್ಪಡಿಸುತ್ತದೆ. ಸೌಹಾರ್ದಯುತವಾಗಿದ್ದ ಕರಾವಳಿಯಲ್ಲಿ ಇಂತಹ ವಿಚಾರಗಳು ಶೋಭೆ ತರದು. ಇಂತವುಗಳು ರಾಜ್ಯದಲ್ಲಿ ‌ನಡೆಯಲ್ಲ’ ಎಂದು ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗುಡುಗಿದ್ದಾರೆ. ಪುತ್ತೂರಿನ ಕಬಕದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ರಥಯಾತ್ರೆಗೆ ಇಂದು ಮುಂಜಾನೆ ಎಸ್ ಡಿಪಿಐ ಕಾರ್ಯಕರ್ತರು ಅಡ್ಡಿಪಡಿಸಿದ್ದರು. ರಥಯಾತ್ರೆಯಲ್ಲಿ ಸಾವರ್ಕರ್ ಭಾವಚಿತ್ರವನ್ನು ಹಾಕಿದ್ದಕ್ಕೆ ಅಡ್ಡಿ ಪಡಿಸಿದ್ದ ಕಾರ್ಯಕರ್ತರು ಟಿಪ್ಪುವಿನ ಫೋಟೋ ಕೂಡಾ ಹಾಕುವಂತೆ ದಾಂಧಲೆ ಎಬ್ಬಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕೋಟ ‘ ಇಂತಹ

ತಾಲಿಬಾನಿ‌ ಸಂಸ್ಕ್ರತಿ ನಡೆಯಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗ್ಲೇಬೇಕು- ಕೋಟ ಗುಡುಗು Read More »

ಡಿಕೆಶಿ ಎಡವಟ್ಟಿನಿಂದ ಹುತಾತ್ಮರಾದ ಸೋನಿಯಾ ಗಾಂಧಿ…!

ಬೆಂಗಳೂರು: ಇಂದು 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಕಾಂಗ್ರೆಸ್ ಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗಿದ್ದು, ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರವರು ಭಾಷಣದ ವೇಳೆ ಎಡವಟ್ಟು ಮಾಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನಡೆಸಿ, ಕಾರ್ಯಕ್ರಮವನ್ನುದ್ದೇಶಿಸಿ ಕಾಂಗ್ರೆಸ್ ನಾಯಕರು ಮಾತನಾಡಿದ್ದಾರೆ. ಈ ವೇಳೆ ಡಿ.ಕೆ ಶಿವಕುಮಾರ್ ಭಾಷಣ ಮಾಡುವಾಗ, ಹುತಾತ್ಮರಾದ ಸೋನಿಯಾ ಗಾಂಧಿ ಎಂದು ಬಾಯಿತಪ್ಪಿ ಹೇಳಿ ನಂತರ ಸಾರಿ, ಸಾರಿ ಹುತಾತ್ಮರಾದ ಇಂದಿರಾ ಗಾಂಧಿ ಎಂದು ತಪ್ಪನ್ನು ತಿದ್ದಿಕೊಂಡು ಭಾಷಣವನ್ನು ಮುಂದುವರೆಸಿದ್ದಾರೆ. ಬಳಿಕ ದೇಶ

ಡಿಕೆಶಿ ಎಡವಟ್ಟಿನಿಂದ ಹುತಾತ್ಮರಾದ ಸೋನಿಯಾ ಗಾಂಧಿ…! Read More »

‘ಬಸವನಾಡಲ್ಲಿ ಭ್ರಷ್ಟರಿಗಿಲ್ಲ ಅವಕಾಶ’ – ಸಚಿವೆ ಶಶಿಕಲಾ ಜೊಲ್ಲೆಗೆ ಘೇರಾವ್ ಕೂಗಿದ ವಿಜಯಪುರ ಜನತೆ

ವಿಜಯಪುರ: ಧ್ವಜಾರೋಹಣ ಮಾಡದಂತೆ ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆಯೂ ಆಗಿರುವ ಶಶಿಕಲಾ ಜೊಲ್ಲೆ ಅವರಿಗೆ ಮಹಿಳೆಯರು ಮುತ್ತಿಗೆ ಹಾಕಿದ ಘಟನೆ ಇಂದು ನಡೆದಿದೆ. ಇಂದು 75 ನೇ ಸ್ವಾತಂತ್ರೋತ್ಸವ ಹಿನ್ನೆಲೆ ನಗರದ ಮಹಿಳಾ ವಿಶ್ವವಿದ್ಯಾಲಯದ ಆವರಣದಲ್ಲಿ ಧ್ವಜಾರೋಹಣಕ್ಕ ಆಗಮಿಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆಯನ್ನು ತಡೆದ ಮಹಿಳೆಯರು, ಭ್ರಷ್ಟಾಚಾರ ಆರೋಪ ಹೊತ್ತಿರುವ ನೀವು ಧ್ವಜಾರೋಹಣ ಮಾಡದಂತೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸಚಿವೆ ಬರುತ್ತಿದ್ದಂತೆ ಭ್ರಷ್ಟರಿಗೆ ಬಸವ ನಾಡಿನಲ್ಲಿ ಅವಕಾಶ

‘ಬಸವನಾಡಲ್ಲಿ ಭ್ರಷ್ಟರಿಗಿಲ್ಲ ಅವಕಾಶ’ – ಸಚಿವೆ ಶಶಿಕಲಾ ಜೊಲ್ಲೆಗೆ ಘೇರಾವ್ ಕೂಗಿದ ವಿಜಯಪುರ ಜನತೆ Read More »

ಇಂದಿನಿಂದಲೇ ನವಕರ್ನಾಟಕ ನಿರ್ಮಾಣದತ್ತ ಹೆಜ್ಜೆ – ನೂತನ ಯೋಜನೆಗಳನ್ನು ಘೋಷಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಬಾರಿ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದ್ದು ರಾಜಧಾನಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಜನತೆಯನ್ನು ಉದ್ದೇಶಿಸಿ‌ ಮಾತನಾಡಿದರು. ಪ್ರಜಾಪ್ರಬುತ್ವ ಯಶಸ್ವಿಯಾಗಲು ಸಂವಿಧಾನ ಮೂಲ ಕಾರಣವಾಗಿದೆ.ಇಂದಿನಿಂದ ನವ ಕರ್ನಾಟಕ ನಿರ್ಮಾಣ ಆರಂಭವಾಗುತ್ತದೆ. ಹೊಸ ಚಿಂತನೆ, ಹೊಸ ದಾರಿ, ಹೊಸ ದಿಕ್ಸೂಚಿ, ಮಾನವ ಸಂಪನ್ಮೂಲ ಬಳಸಿಕೊಂಡು ಹೊಸ ತಂತ್ರಜ್ಞಾನ ಬಳಕೆ ಮಾಡಿ, ವೈಜ್ಞಾನಿಕವಾಗಿ ಕೃಷಿ, ಸೇವಾ ವಲಯವನ್ನ

ಇಂದಿನಿಂದಲೇ ನವಕರ್ನಾಟಕ ನಿರ್ಮಾಣದತ್ತ ಹೆಜ್ಜೆ – ನೂತನ ಯೋಜನೆಗಳನ್ನು ಘೋಷಿಸಿದ ಸಿಎಂ ಬೊಮ್ಮಾಯಿ Read More »

ಮಧ್ಯರಾತ್ರಿ ಸಿಕ್ಕಿದ ಸ್ವಾತಂತ್ರ್ಯವನ್ನು ಹಗಲಿರುಳು ಕಾಯಬೇಕಿದೆ – ಸ್ವಾತಂತ್ರ್ಯ ಧ್ವಜಾರೋಹಣ ಬಳಿಕ ಸಿಎಂ ಬೊಮ್ಮಾಯಿ ಕರೆ

ಬೆಂಗಳೂರು : ‘ದೇಶಕ್ಕೆ ಮಧ್ಯರಾತ್ರಿ ಬಂದ ಸ್ವಾತಂತ್ರ್ಯವನ್ನು ಹಗಲಿರುಳು ಕಾಯಬೇಕು. ಅಂತಹ ಪರಿಸ್ಥಿತಿ ಇಂದು ಸೃಷ್ಟಿಯಾಗಿದೆ’ ಎಂದು ನಾಡಿನ ಜನತೆಗೆ ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ. 1947 ರಲ್ಲಿ ಬಂದ ಸ್ವಾತಂತ್ರ್ಯ ಸಾತ್ವಿಕ ಹೋರಾಟದಿಂದ ಬಂದಿದೆ. ನಾವೆಲ್ಲ 75 ವರ್ಷ ಪೂರೈಸಿದ್ದೇವೆ, ಸಿಕ್ಕಿದ ಸ್ವಾತಂತ್ರ್ಯ ಉಳಿಸಿಕೊಳ್ಳಲು ಜನತೆ ಚಿಂತಿಸಬೇಕು ಎಂದವರು ತಿಳಿಸಿದರು. ಪ್ರಜಾಪ್ರಭುತ್ವದ ಬುನಾದಿಯ ಮೇಲೆ ಮುನ್ನಡೆಯಬೇಕಾಗಿದೆ. ಅಮೃತ ಮಹೋತ್ಸವವನ್ನು ನಾವೆಲ್ಲರೂ ಅರ್ಥಪೂರ್ಣವಾಗಿ ಆಚರಿಸೋಣ ಎಂದು ಕರೆ ನೀಡಿದರು. ಸ್ವಾತಂರ್ತ್ಯ ದಿವಸವನ್ನು ಅರ್ಥಪೂರ್ಣವಾಗಿ ಹಾಗೂ

ಮಧ್ಯರಾತ್ರಿ ಸಿಕ್ಕಿದ ಸ್ವಾತಂತ್ರ್ಯವನ್ನು ಹಗಲಿರುಳು ಕಾಯಬೇಕಿದೆ – ಸ್ವಾತಂತ್ರ್ಯ ಧ್ವಜಾರೋಹಣ ಬಳಿಕ ಸಿಎಂ ಬೊಮ್ಮಾಯಿ ಕರೆ Read More »