“ನಮಗೆ ನಿರ್ದೇಶನ ನೀಡಿದಂತೆ ಭಾರತಕ್ಕೆ ನೀಡಲು ಸಾದ್ಯವಿಲ್ಲ, ಏಕೆಂದರೆ ಅದು ಸೂಪರ್ ಪವರ್” – ಇಮ್ರಾನ್ ಖಾನ್
ಸಮಗ್ರ ನ್ಯೂಸ್: ಭಾರತವನ್ನು ‘ಅತ್ಯಂತ ಗೌರವಯುತ ರಾಷ್ಟ್ರ’ಎಂದು ಕರೆದಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಯಾವುದೇ ಮಹಾಶಕ್ತಿಯು ಭಾರತಕ್ಕೆ ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಸರ್ಕಾರವನ್ನು ಕಿತ್ತೊಗೆಯಲು ವಿದೇಶಿ ಷಡ್ಯಂತ್ರವನ್ನು ನಡೆಸಲಾಗಿದೆ ಎಂದು ಆರೋಪಿಸಿದರು. ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಯಾವುದೇ ದೊಡ್ಡ ಶಕ್ತಿಯು ಭಾರತವನ್ನು ತನ್ನ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಏನನ್ನೂ ಮಾಡುವಂತೆ ಒತ್ತಾಯಿಸಲು ಸಾಧ್ಯವಿಲ್ಲ. ನಿರ್ಬಂಧಗಳ ಹೊರತಾಗಿಯೂ ಭಾರತ ರಷ್ಯಾದಿಂದ ತೈಲವನ್ನು ಖರೀದಿಸುತ್ತಿದೆ” ಎಂದು ಹೇಳಿದರು. ನಾನು ಭಾರತದ ವಿರುದ್ಧವಲ್ಲ ಮತ್ತು ನೆರೆಯ […]










