ರಾಜಕೀಯ

ಹಿಜಾಬ್ ಕುರಿತು ಕೋರ್ಟ್ ಮೆಟ್ಟಿಲೇರಿದವರು ಭಯೋತ್ಪಾದಕರಂತೆ! – ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಮುಖಂಡ

ಸಮಗ್ರ ನ್ಯೂಸ್: ಶಾಲಾ-ಕಾಲೇಜ್ ಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯರು ಉಗ್ರ ಸಂಘಟನೆಯ ಸದಸ್ಯರು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಅವರು ಆರೋಪಿಸಿದ್ದಾರೆ. ಹೈಕೋರ್ಟ್ ತೀರ್ಪಿನ ವಿರುದ್ಧ ಮಾತನಾಡಿದ ಆರು ವಿದ್ಯಾರ್ಥಿನಿಯರು ದೇಶ ವಿರೋಧಿಗಳು ಮತ್ತು ಭಯೋತ್ಪಾದಕ ಸಂಘಟನೆಯ ಸದಸ್ಯರು ಎಂದು ಉಡುಪಿ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಯಶ್ಪಾಲ್ ಸುವರ್ಣ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. […]

ಹಿಜಾಬ್ ಕುರಿತು ಕೋರ್ಟ್ ಮೆಟ್ಟಿಲೇರಿದವರು ಭಯೋತ್ಪಾದಕರಂತೆ! – ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಮುಖಂಡ Read More »

ಹಿಜಾಬ್ ವಿವಾದದಲ್ಲಿ ‌ಪರೀಕ್ಷೆ ತಪ್ಪಿಸಿಕೊಂಡರೆ ಮತ್ತೆ ಬರೆಯಲು ಅವಕಾಶವಿಲ್ಲ – ಸಚಿವ ಮಾಧುಸ್ವಾಮಿ

ಸಮಗ್ರ ನ್ಯೂಸ್: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಪರೀಕ್ಷೆ ತಪ್ಪಿಸಿಕೊಂಡರೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸಚಿವ ಜೆ. ಮಾಧುಸ್ವಾಮಿ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ರಘುಪತಿ ಭಟ್, ಹಿಜಾಬ್ ಸಂಘರ್ಷದ ವೇಳೆ ಪರೀಕ್ಷೆಯಿಂದ ವಂಚಿತರಾದವರಿಗೆ ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ಕೊಡಬೇಕು. ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮನವಿ ಮಾಡಿದರು. ಅಲ್ಲದೇ ಕೋರ್ಟ್ ತೀರ್ಪು ಬಂದ ಬಳಿಕವೂ ಕೆಲ ಕಾಲೇಜಿನಲ್ಲಿ ವಿವಾದ ಮುಂದುವರೆದಿದೆ. ಅನಗತ್ಯ ವಿವಾದ

ಹಿಜಾಬ್ ವಿವಾದದಲ್ಲಿ ‌ಪರೀಕ್ಷೆ ತಪ್ಪಿಸಿಕೊಂಡರೆ ಮತ್ತೆ ಬರೆಯಲು ಅವಕಾಶವಿಲ್ಲ – ಸಚಿವ ಮಾಧುಸ್ವಾಮಿ Read More »

ವಂಶ ಪಾರಂಪರ್ಯ ರಾಜಕಾರಣಕ್ಕೆ ಬ್ರೇಕ್ ಹಾಕಿದ ಪ್ರಧಾನಿ‌ ಮೋದಿ| ರಾಜ್ಯ ಬಿಜೆಪಿಯಲ್ಲಿ ತಣ್ಣನೆಯ ಕಂಪನ| “ನಮ್ಗೆ ಟಿಕೆಟ್ ತಪ್ಪುತ್ತಾ ಗುರೂ?”

ಸಮಗ್ರ ನ್ಯೂಸ್: ರಾಷ್ಟ್ರೀಯ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಹೇಳಿಕೆ ಬೆನ್ನಲ್ಲೆ ರಾಜ್ಯ ಕೇಸರಿ ಪಡೆಯಲ್ಲಿ ತಣ್ಣನೆಯ ನಡುಕ ಶುರುವಾಗಿದೆ. ಪಕ್ಷದಲ್ಲಿ ವಂಶ ರಾಜಕಾರಣಕ್ಕೆ ಅವಕಾಶವಿಲ್ಲವೆಂದು ಸ್ಪಷ್ಟ ಸಂದೇಶ ರವಾನಿಸಿರುವ ಪ್ರಧಾನಿ ಮೋದಿ, ಸಂಸದೀಯ ಪಕ್ಷದ ಸಭೆಯಲ್ಲಿ ಕಠಿಣ ಸಂದೇಶ ರವಾನಿಸಿದ್ದಾರೆ. ಹೀಗಾಗಿ ರಾಜ್ಯ ಕೇಸರಿ ಪಡೆಯಲ್ಲಿ ಆತಂಕ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಪಕ್ಷದಲ್ಲಿ ವಂಶವಾದಕ್ಕೆ ಅವಕಾಶವಿಲ್ಲವೆಂದು

ವಂಶ ಪಾರಂಪರ್ಯ ರಾಜಕಾರಣಕ್ಕೆ ಬ್ರೇಕ್ ಹಾಕಿದ ಪ್ರಧಾನಿ‌ ಮೋದಿ| ರಾಜ್ಯ ಬಿಜೆಪಿಯಲ್ಲಿ ತಣ್ಣನೆಯ ಕಂಪನ| “ನಮ್ಗೆ ಟಿಕೆಟ್ ತಪ್ಪುತ್ತಾ ಗುರೂ?” Read More »

ಕಾಂಗ್ರೆಸ್ ಕೈ ಹಿಡಿದ ಕಲಾಸಾಮ್ರಾಟ್ ಎಸ್.‌ನಾರಾಯಣ್

ಸಮಗ್ರ ನ್ಯೂಸ್ ಡೆಸ್ಕ್: ಬೆಂಗಳೂರು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟನಾಗಿ ಗುರುತಿಸಿಕೊಂಡಿರುವ ಎಸ್​ ನಾರಾಯಣ್ ರಾಜಕೀಯಕ್ಕೆ ಧುಮುಕಿದ್ದಾರೆ. ಇಂದು ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಎಸ್​ ನಾರಾಯಣ್​ ಅಧಿಕೃತವಾಗಿ ಕೈ ಹಿಡಿದಿದ್ದಾರೆ. ಇದೇ ವೇಳೆ ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಣ ತಿಮ್ಮಯ್ಯ ಪುರ್ಲೆ ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದರು.

ಕಾಂಗ್ರೆಸ್ ಕೈ ಹಿಡಿದ ಕಲಾಸಾಮ್ರಾಟ್ ಎಸ್.‌ನಾರಾಯಣ್ Read More »

ಪಂಚರಾಜ್ಯ ಚುನಾವಣೆ ಸೋಲು| ಕಾಂಗ್ರೆಸ್ ನ ರಾಜ್ಯಾಧ್ಯಕ್ಷರಿಗೆ ‘ಪಂಚ್’ಕಜ್ಜಾಯ

ಸಮಗ್ರ ನ್ಯೂಸ್: ಪಂಚ ರಾಜ್ಯಗಳ ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್ ನಾಯಕತ್ವದಲ್ಲಿ ಭಾರಿ ಬದಲಾವಣೆಯಾಗಲಿದೆ ಅನ್ನೋ ಲೆಕ್ಕಾಚಾರ ಉಲ್ಟಾ ಆಗಿತ್ತು. ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಸೋನಿಯಾ ಗಾಂಧಿ ಹಾಗೂ ಗಾಂಧಿ ಪರಿವಾರದಿಂದಲೇ ಕಾಂಗ್ರೆಸ್ ಶಕ್ತವಾಗಿ ಮುನ್ನಡೆಸಲು ಸಾಧ್ಯ ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಯಾರೂ ಕೂಡ ಸೋಲಿನ ಹೊಣೆ ಹೊತ್ತಿರಲಿಲ್ಲ. ಇದೀಗ ಐದು ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರನ್ನು ಚುನಾವಣಾ ಸೋಲಿಗೆ ಹೊಣೆಯಾಗಿಸಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸೇರಿದಂತೆ ಐದು

ಪಂಚರಾಜ್ಯ ಚುನಾವಣೆ ಸೋಲು| ಕಾಂಗ್ರೆಸ್ ನ ರಾಜ್ಯಾಧ್ಯಕ್ಷರಿಗೆ ‘ಪಂಚ್’ಕಜ್ಜಾಯ Read More »

ಕುಮಾರಸ್ವಾಮಿ ಹೊಟೇಲ್ ನಲ್ಲಿ ರಾಸಲೀಲೆ ಆಡ್ತಾ ಇದ್ರು! ; ಸಂಚಲನ ಮೂಡಿಸಿದ ಯೋಗೀಶ್ವರ್ ಹೇಳಿಕೆ

ಸಮಗ್ರ ನ್ಯೂಸ್: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪದೇಪದೆ ವಾಗ್ದಾಳಿ ನಡೆಸುತ್ತಿರುವ ಎಂಎಲ್​ಸಿ ಸಿ.ಪಿ.ಯೋಗೇಶ್ವರ್​, ಇದೀಗ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಕುಮಾರಸ್ವಾಮಿ 14 ತಿಂಗಳು ಸಿಎಂ ಆಗಿದ್ದ ವೇಳೆ ರಾಸಲೀಲೆ ಆಡಿಕೊಂಡಿದ್ದರು. ರಾಸಲೀಲೆ ಬಗ್ಗೆ ಕುಮಾರಸ್ವಾಮಿ ಅವರನ್ನೇ ಕೇಳಿ, ಅವರು ಹೇಳಿಲ್ಲ ಅಂದ್ರೆ ನಾನೇ ಹೇಳ್ತೀನಿ… ಎಂದು ಯೋಗೇಶ್ವರ್​ ಹೇಳುವ ಮೂಲಕ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಸೋಮವಾರ ರಾಮನಗರದ ಚನ್ನಪಟ್ಟಣ ತಾಲೂಕಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಯೋಗೇಶ್ವರ್​, ‘ನನ್ನಿಂದ ಯಾಕಪ್ಪ ಎಚ್​ಡಿಕೆ ಆಣಿಮುತ್ತುಗಳನ್ನು ಕೇಳ್ತೀರಾ? ನೇರಾ-ನೇರಾ

ಕುಮಾರಸ್ವಾಮಿ ಹೊಟೇಲ್ ನಲ್ಲಿ ರಾಸಲೀಲೆ ಆಡ್ತಾ ಇದ್ರು! ; ಸಂಚಲನ ಮೂಡಿಸಿದ ಯೋಗೀಶ್ವರ್ ಹೇಳಿಕೆ Read More »

ಕಾಂಗ್ರೆಸ್ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಮುಂದುವರಿಕೆ| ನಾಯಕರ ಸಭೆಯಲ್ಲಿ ಒಮ್ಮತದ ತೀರ್ಮಾನ|

ಸಮಗ್ರ ನ್ಯೂಸ್: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆಯ ಬೇಡಿಕೆಗಳ ನಡುವೆ ಇಂದು ಸಂಜೆ ನಾಲ್ಕೂವರೆ ಗಂಟೆಗಳ ಕಾಂಗ್ರೆಸ್‌ ಹಿರಿಯ ನಾಯಕರ ಸಭೆ ನಡೆಯಿತು. ಈ ಸಭೆಯಲ್ಲಿ ಸೋನಿಯಾ ಗಾಂಧಿಯವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂದು ತೀರ್ಮಾನಿಸಲಾಗಿದೆ ಮೂಲಗಳು ತಿಳಿಸಿವೆ. ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಈ ಸಭೆಯು ಸೋಲಿಗೆ ಕಾರಣಗಳು ಮತ್ತು ಮುಂದಿನ ಕಾರ್ಯತಂತ್ರದ ಬಗ್ಗೆ

ಕಾಂಗ್ರೆಸ್ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಮುಂದುವರಿಕೆ| ನಾಯಕರ ಸಭೆಯಲ್ಲಿ ಒಮ್ಮತದ ತೀರ್ಮಾನ| Read More »

ಕಾಂಗ್ರೆಸ್ ನ ಪ್ರಮುಖ ಹೊಣೆಗಾರಿಕೆಗೆ ಗುಡ್ ಬೈ ಹೇಳ್ತಾರಂತೆ ಸೋನಿಯಾ, ರಾಹುಲ್, ಪ್ರಿಯಾಂಕ!

ಸಮಗ್ರ ನ್ಯೂಸ್: ಪಂಚರಾಜ್ಯ ಚುನಾವಣೆಯಲ್ಲಿನ ಹೀನಾಯ ಸೋಲಿನ ಹಿನ್ನಲೆಯಲ್ಲಿ ಕಾಂಗ್ರೆಸ್‌ ನ ಪ್ರಮುಖ ಸ್ಥಾನಗಳಿಗೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಆದರೆ ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ ಎಂದು ಕಾಂಗ್ರೆಸ್‌ ಪ್ರತಿಕ್ರಿಯಿಸಿದೆ. ನಾಳೆ ಹೊಸದಿಲ್ಲಿಯಲ್ಲಿ ನಡೆಯಲಿರುವ ಸಿಡಬ್ಲ್ಯೂಸಿ ಸಭೆಯಲ್ಲಿ ಏನು ತೀರ್ಮಾನವಾಗುತ್ತದೆ ಎಂದು ಹೇಳಲಾಗಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿರುವುದು ಇದು ಮೊದಲೇನಲ್ಲ.

ಕಾಂಗ್ರೆಸ್ ನ ಪ್ರಮುಖ ಹೊಣೆಗಾರಿಕೆಗೆ ಗುಡ್ ಬೈ ಹೇಳ್ತಾರಂತೆ ಸೋನಿಯಾ, ರಾಹುಲ್, ಪ್ರಿಯಾಂಕ! Read More »

ಗೋವಾ ಗದ್ದುಗೆ ಏರಲು ಅವಕಾಶ ಕೋರಿದ ಬಿಜೆಪಿ

ಸಮಗ್ರ ನ್ಯೂಸ್: ಗೋವಾದಲ್ಲಿ ಇಂದು ವಿಧಾನಸಭಾ ಚುನಾವಣೆಯ ಮತದಾನದ ಮತಏಣಿಕೆ ಕಾರ್ಯ ನಡೆಯುತ್ತಿದೆ. ಬಿಜೆಪಿ ಗೆಲುವಿನ ನಗೆಯತ್ತ ಸಾಗುತ್ತಿದ್ದು, 19 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಈ ಹಿನ್ನಲೆಯಲ್ಲಿ ಸರ್ಕಾರ ರಚನೆ ಮಾಡೋದಕ್ಕಾಗಿ ಹಕ್ಕು ಮಂಡನೆಗೆ ಅವಕಾಶ ಕೋರಿ, ರಾಜ್ಯಪಾಲರನ್ನು ಇಂದು ಬಿಜೆಪಿ ನಾಯಕರು ಭೇಟಿಯಾಗಲಿದ್ದಾರೆ. 21 ಗೋವಾ ವಿಧಾನಸಭೆಯ ಮ್ಯಾಜಿಕ್ ಸಂಖ್ಯೆಯಾಗಿದ್ದು, ಮೂವರು ಪಕ್ಷೇತರರು ಬಿಜೆಪಿಗೆ ಬಲ ತುಂಬಲಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ 19 ಸ್ಥಾನ ಗೆದ್ದಿರುವ ಬಿಜೆಪಿಗೆ ಗೋವಾ ಗದ್ದುಗೆ ಸರಾಗವಾಗಿದೆ.

ಗೋವಾ ಗದ್ದುಗೆ ಏರಲು ಅವಕಾಶ ಕೋರಿದ ಬಿಜೆಪಿ Read More »

“ಯುದ್ದ ಆಗುತ್ತೆ ಅಂತ ಗೊತ್ತಿದ್ರೂ ಮೊದಲೇ ಯಾಕೆ ರಕ್ಷಣೆ‌ ಮಾಡಿಲ್ಲ?| ಗಡಿ ದಾಟಿ ಬಂದವರನ್ನು ಕರೆ ತಂದು ಪೋಸ್ ಕೊಡುತ್ತಿದೆ ಸರ್ಕಾರ” – ಯು.ಟಿ‌ ಖಾದರ್ ಆರೋಪ

ಸಮಗ್ರ ನ್ಯೂಸ್: ” ಉಕ್ರೇನ್ ಗಡಿದಾಟಿದ ವಿದ್ಯಾರ್ಥಿಗಳನ್ನು ಕರೆತಂದು ಕೇಂದ್ರ ಸರ್ಕಾರ ರಕ್ಷಣೆ ಮಾಡಿದ ಫೋಸ್ ನೀಡುತ್ತಿದೆ” ಎಂದು ವಿಧಾನಸಭಾ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್ ಆರೋಪಿಸಿದರು. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಿರ್ಣಯ ಆಗಿರೋದು ರಾತ್ರಿ ಹಗಲಿನ ನಡುವೆ ನಿರ್ಧಾರ ಆಗಿರೋದು ಅಲ್ಲ. ಒಂದು ತಿಂಗಳ ಮೊದಲೇ ಯುದ್ಧ ಆಗುತ್ತದೆ ಅಂತಾ ಗೊತ್ತಿತ್ತು. ಆದರೂ ಭಾರತೀಯ ರಾಯಭಾರಿ ಕಛೇರಿ ಮೊದಲೇ ಮಕ್ಕಳನ್ನು ರಕ್ಷಣೆ ಮಾಡಲಿಲ್ಲ ಏಕೆ?” ಎಂದು

“ಯುದ್ದ ಆಗುತ್ತೆ ಅಂತ ಗೊತ್ತಿದ್ರೂ ಮೊದಲೇ ಯಾಕೆ ರಕ್ಷಣೆ‌ ಮಾಡಿಲ್ಲ?| ಗಡಿ ದಾಟಿ ಬಂದವರನ್ನು ಕರೆ ತಂದು ಪೋಸ್ ಕೊಡುತ್ತಿದೆ ಸರ್ಕಾರ” – ಯು.ಟಿ‌ ಖಾದರ್ ಆರೋಪ Read More »