ರಾಜಕೀಯ

ಅಶೋಕ್ ವಿರುದ್ಧ ನೂರಾರು ಕೋಟಿ ಭೂ ಅಕ್ರಮ ಆರೋಪ.. ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್

ಸಮಗ್ರ ನ್ಯೂಸ್: ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧದ ನೂರಾರು ಕೋಟಿ ರೂ. ಬೆಲೆಬಾಳುವ ಜಮೀನಿನ ಹಗರಣದ ದಾಖಲೆಯನ್ನು ಕಾಂಗ್ರೆಸ್ ಸಚಿವರು ಇದೀಗ ಬಿಡುಗಡೆ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮತ್ತು ಸಚಿವ ಹೆಚ್.ಕೆ ಪಾಟೀಲ್ ರಿಂದ ದಾಖಲೆ ಬಿಡುಗಡೆ ಮಾಡಲಾಗಿದೆ. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕಾಲದಲ್ಲಿ ಏನಾಗಿತ್ತು ಎಂಬುದನ್ನು ನಿಮ್ಮ ಮುಂದೆ ತರುತ್ತಿದ್ದೇವೆ. ಲೊಟ್ಟೆಗೊಲ್ಲಹಳ್ಳಿ ನೂರಾರು […]

ಅಶೋಕ್ ವಿರುದ್ಧ ನೂರಾರು ಕೋಟಿ ಭೂ ಅಕ್ರಮ ಆರೋಪ.. ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್ Read More »

ಸಿದ್ದರಾಮಯ್ಯ ಶರ್ಟ್ ಗೆ ತಗುಲಿದ ಬೆಂಕಿಯ ಶಾಖ

ಸಮಗ್ರ ನ್ಯೂಸ್: ಸಿಎಂ ಸಿದ್ದದರಾಮಯ್ಯ ಅವರು ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿದ ವೇಳೆ ಅವಘಡವೊಂದು ಸಂಭವಿಸಿದ್ದು, ಸಿಎಂ ಸಿದ್ದರಾಮಯ್ಯ ಶರ್ಟ್ ಗೆ ಉತ್ಸವ ಜ್ಯೋತಿಯ ಬೆಂಕಿಯ ಶಾಖ ತಗುಲಿದೆ. ಸಿಎಂ ಸಿದ್ದರಾಮಯ್ಯ ಅವರು ಜ್ಯೋತಿ ಬೆಳಗಿಸುವ ವೇಳೆ ಶರ್ಟ್ ಗೆ ಬೆಂಕಿಯ ಶಾಖ ತಗುಲಿದೆ.ಕೂಡಲೇ ಗನ್ ಮ್ಯಾನ್ ಸಿಎಂ ಸಿದ್ದರಾಮಯ್ಯ ನವರನ್ನು ಸರಿಸಿದ್ದು, ಗನ್ ಮ್ಯಾನ್ ಸಮಯ ಪ್ರಜ್ಞೆಯಿಂದ ಸಿಎಂ ಸಿದ್ದರಾಮಯ್ಯನವರು ಪಾರಾಗಿದ್ಧರೆ.

ಸಿದ್ದರಾಮಯ್ಯ ಶರ್ಟ್ ಗೆ ತಗುಲಿದ ಬೆಂಕಿಯ ಶಾಖ Read More »

ವಿಧಾನ ಪರಿಷತ್ ಉಪಚುನಾವಣೆ| ದ.ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಬೊಟ್ಯಾಡಿ

ಸಮಗ್ರ ನ್ಯೂಸ್: : ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಪುತ್ತೂರು ಆಯ್ಕೆಯಾಗಿದ್ದಾರೆ. ಕಿಶೋರ್ ಕುಮಾರ್ ಪುತ್ತೂರು ಅವರನ್ನು ಅಭ್ಯರ್ಥಿಯಾಗಿ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಘೋಷಣೆ ಮಾಡಿದೆ. ಪುತ್ತೂರಿನ ಸರ್ವೆಯ ಬೊಟ್ಯಾಡಿಯ ನಿವಾಸಿಯಾದ ಕಿಶೋರ್ ಕುಮಾರ್ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಿಶೋರ್ ಕುಮಾರ್ ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭ ಪುತ್ತೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಬಾರಿ ವಿಧಾನ

ವಿಧಾನ ಪರಿಷತ್ ಉಪಚುನಾವಣೆ| ದ.ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಬೊಟ್ಯಾಡಿ Read More »

ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂಕೋರ್ಟ್‌ ಅನುಮತಿ

ಸಮಗ್ರ ನ್ಯೂಸ್: 14 ವರ್ಷಗಳಿಂದ ಬಳ್ಳಾರಿಯಿಂದ ದೂರವಾಗಿದ್ದ ಮಾಜಿ ಸಚಿವ, ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರಿಗೆ ಕೊನೆಗೂ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಬಳ್ಳಾರಿ ಸೇರಿದಂತೆ ಆಂಧ್ರ ಪ್ರದೇಶದ ಅನಂತಪುರ ಹಾಗೂ ಕಡಪ ಜಿಲ್ಲೆಗಳ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ತೆರವು ಮಾಡಿದೆ. ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆ ತವರು ಜಿಲ್ಲೆಯ ಪ್ರವೇಶವಿಲ್ಲದೆ ವನವಾಸ ಅನುಭವಿಸಿದ್ದ ಮಾಜಿ ಸಚಿವ, ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್

ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂಕೋರ್ಟ್‌ ಅನುಮತಿ Read More »

ಮುಡಾ ಹಗರಣ: 14 ನಿವೇಶನ ವಾಪಸ್ ನೀಡಲು ಸಿಎಂ ಪತ್ನಿ ನಿರ್ಧಾರ, ಲೋಕಾಯುಕ್ತಕ್ಕೆ ಪತ್ರ

ಸಮಗ್ರ ನ್ಯೂಸ್: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಸಂಕಷ್ಟ ಎದುರಾಗಿದು, ಇದೀಗ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮುಡಾಗೆ ಸೈಟ್ಗಳನ್ನು ಹಿಂದಿರುಗಿಸಲು ಮುಂದಾಗಿದ್ದಾರೆ. ಮೈಸೂರಿನ ವಿಜಯನಗರದ 3 ಮತ್ತು 4ನೇ ಹಂತದಲ್ಲಿ ಪಡೆದ 14 ನಿವೇಶನಗಳನ್ನು ಹಿಂದಿರುಗಿಸುವುದಾಗಿ ಸಿಎಂ ಪತ್ನಿ ಪಾರ್ವತಿ ಅವರು ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯನವರಿಗೆ ಇದೀಗ ಆಗುತ್ತಿರುವ ರಾಜಕೀಯ ಸಂಕಷ್ಟವನ್ನು ನೋಡಲಾಗದೇ ಪತ್ನಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಗ್ಗೆ ಖುದ್ದು ಮುಡಾಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಮುಡಾ ಹಗರಣ: 14 ನಿವೇಶನ ವಾಪಸ್ ನೀಡಲು ಸಿಎಂ ಪತ್ನಿ ನಿರ್ಧಾರ, ಲೋಕಾಯುಕ್ತಕ್ಕೆ ಪತ್ರ Read More »

ಹೈಕೋರ್ಟ್‌ನಲ್ಲಿ ಹಿನ್ನಡೆ/ ಯಾವುದೇ ತನಿಖೆಗೆ ಹಿಂಜರಿಯುವುದಿಲ್ಲ ಎಂದ ಸಿಎಂ

ಸಮಗ್ರ ನ್ಯೂಸ್‌: ಮುಡಾ ಪ್ರಕರಣದಲ್ಲಿ ಹೈಕೋರ್ಟ್‌ ತೀರ್ಪು ಬಂದ ಬಳಿಕ ಸಿಎಂ ಸಿದ್ದರಾಮಯ್ಯ ಇದೇ ಮೊದಲ ಬಾರಿಗೆ ರಿಯಾಕ್ಷನ್ ನೀಡಿದ್ದು, ಹೈಕೋರ್ಟ್ ಆದೇಶದ ಅಂಶಗಳನ್ನು ಮಾಧ್ಯಮದ ಮೂಲಕ ತಿಳಿದುಕೊಂಡಿದ್ದೇನೆ. ಆದೇಶ ಪ್ರತಿ ಪಡೆದು ಓದಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ. ರಾಜ್ಯಪಾಲರು ನೀಡಿದ ಅಭಿಯೋಜನೆಯನ್ನು ಕೋರ್ಟ್ ತಿರಸ್ಕರಿಸಿದೆ. ನಾನು ಯಾವುದೇ ತನಿಖೆಗೆ ಹಿಂಜರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೋರ್ಟ್ ತೀರ್ಪಿನ ಬಳಿಕ ಮಾಧ್ಯಮ ಪ್ರಕರಣ ಹೊರಡಿಸಿದ್ದು. ಹೈಕೋರ್ಟ್ ಆದೇಶದ ಅಂಶಗಳನ್ನು ಮಾಧ್ಯಮದ ಮೂಲಕ ತಿಳಿದುಕೊಂಡಿದ್ದೇನೆ. ಆದೇಶ ಪ್ರತಿ ಪಡೆದು ಓದಿದ

ಹೈಕೋರ್ಟ್‌ನಲ್ಲಿ ಹಿನ್ನಡೆ/ ಯಾವುದೇ ತನಿಖೆಗೆ ಹಿಂಜರಿಯುವುದಿಲ್ಲ ಎಂದ ಸಿಎಂ Read More »

ಮುಡಾ ಅಕ್ರಮ ಹಗರಣ|ಸಿಎಂ ಸಿದ್ದರಾಮಯ್ಯಗೆ ಬಿಗ್ ಶಾಕ್| ರಾಜ್ಯಪಾಲರ ಆದೇಶ ಎತ್ತಿ ಹಿಡಿದ ಹೈಕೋರ್ಟ್

ಸಮಗ್ರ ನ್ಯೂಸ್: ಮುಡಾ ಅಕ್ರಮ ಸಂಬಂಧಿಸಿದಂತೆ ಹೈಕೋರ್ಟ್‌ ತೀರ್ಪು ಪ್ರಕಟಿಸಿದ್ದು ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ವಜಾ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಚಾರಣೆ ನಡೆದಿತ್ತು. 30 ಗಂಟೆಗೂ ಅಧಿಕ ಸಮಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಾದ-ಪ್ರತಿವಾದವನ್ನು ನ್ಯಾಯಾಧೀಶರು ಆಲಿಸಿದ್ದರು. ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಅರ್ಜಿ ಹಾಕಿದ್ದ ಸಿಎಂ ಸಿದ್ದರಾಮಯ್ಯ ಪರ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ನೇತೃತ್ವದ ತಂಡ ವಾದ ಮಂಡಿಸಿತ್ತು. ರಾಜ್ಯಪಾಲರ ಕಚೇರಿ ಪರ ಸುಪ್ರೀಂ ಕೋರ್ಟ್ ಸಾಲಿಸಿಟರ್‌ ಜನರಲ್

ಮುಡಾ ಅಕ್ರಮ ಹಗರಣ|ಸಿಎಂ ಸಿದ್ದರಾಮಯ್ಯಗೆ ಬಿಗ್ ಶಾಕ್| ರಾಜ್ಯಪಾಲರ ಆದೇಶ ಎತ್ತಿ ಹಿಡಿದ ಹೈಕೋರ್ಟ್ Read More »

ಮುಖ್ಯಮಂತ್ರಿ ಆಸನ ಪಕ್ಕ ಬೇರೆ ಕುರ್ಚಿ ಹಾಕಿಕೊಂಡು ಕುಳಿತ ಆತಿಷಿ

ಸಮಗ್ರ ನ್ಯೂಸ್: ರಾಷ್ಟ್ರ ರಾಜಧಾನಿಯಲ್ಲಿ ನಡೆದ ನಾಟಕೀಯ ಬೆಳವಣಿಗೆಗಳಿಂದಾಗಿ ದಿಲ್ಲಿ ಮುಖ್ಯಮಂತ್ರಿಯಾಗಿರುವ ಆತಿಷಿ ಸಿಂಗ್ ಮರ್ಲೆನಾ ಇಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಅರವಿಂದ ಕೇಬ್ರಿವಾಲ್‌ ಕುಳಿತುಕೊಳ್ಳುತ್ತಿದ್ದ ಕುರ್ಚಿಯಲ್ಲಿ ಕುಳಿತುಕೊಂಡಿಲ್ಲ. ಬದಲಾಗಿ ಮುಖ್ಯಮಂತ್ರಿ ಕುರ್ಚಿ ಪಕ್ಕದಲ್ಲೇ ಬೇರೆ ಕುರ್ಚಿ ಹಾಕಿಕೊಂಡು ಕುಳಿತು ಅಧಿಕಾರ ಚಲಾಯಿಸುತ್ತಿರುವ ಫೋಟೋ ಭಾರಿ ವೈರಲ್ ಆಗಿದೆ.ಮುಖ್ಯಮಂತ್ರಿ ಎಂದಿಗಾದರೂ ಕೇಜ್ರವಾಲ್ ತಾನು ಅವರ ಆದೇಶ ಪಾಲಕಿ ಮಾತ್ರ ಎಂಬುದನ್ನು ಮರ್ಲಿನಾ ಸಾಂಕೇತಿಕವಾಗಿ ಈ ರೀತಿ ತೋರಿಸಿದ್ದಾರೆ. ಅಧಿಕಾರ ಸ್ವೀಕಾರ ಬಳಿಕ ಮಾಧ್ಯಮದವರ ಜೊತೆ

ಮುಖ್ಯಮಂತ್ರಿ ಆಸನ ಪಕ್ಕ ಬೇರೆ ಕುರ್ಚಿ ಹಾಕಿಕೊಂಡು ಕುಳಿತ ಆತಿಷಿ Read More »

ಶ್ರೀಲಂಕಾಗೆ ನೂತನ ಅಧ್ಯಕ್ಷರಾಗಿ ಅನುರಾ ಕುಮಾರ ದಿಸ್ಸಾ ನಾಯಕೆ

ಸಮಗ್ರ ನ್ಯೂಸ್: ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ಒಲವು ಹೊಂದಿರುವ ಅನುರಾ ಕುಮಾರ ದಿಸ್ಸಾನಾಯಕೆ ಅವರು ಹಾಲಿ ಉದಾರವಾದಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಭಾನುವಾರ ವರದಿ ಮಾಡಿದೆ. ಈ ಮೂಲಕ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಅನುರಾ ಕುಮಾರ ದಿಸ್ಸಾನಾಯಕ ಆಯ್ಕೆಯಾಗಿದ್ದಾರೆ. ಶನಿವಾರ ಮತದಾನ ನಡೆಯಿತು. ದೇಶವು ತನ್ನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ ಮತ್ತು ಅದರ ಪರಿಣಾಮವಾಗಿ ರಾಜಕೀಯ ವಿಪ್ಲವದಿಂದ ಚೇತರಿಸಿಕೊಳ್ಳಲು

ಶ್ರೀಲಂಕಾಗೆ ನೂತನ ಅಧ್ಯಕ್ಷರಾಗಿ ಅನುರಾ ಕುಮಾರ ದಿಸ್ಸಾ ನಾಯಕೆ Read More »

ಮಾಜಿ ಸಿಎಂ ಬಿಎಸ್ ವೈಗೆ ಮತ್ತೊಂದು ಸಂಕಷ್ಟ| ಅಕ್ರಮ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಲೋಕಾಯುಕ್ತದಿಂದ ಸಮನ್ಸ್

ಸಮಗ್ರ ನ್ಯೂಸ್: ಪೋಕ್ಸೋ ಕೇಸಲ್ಲಿ ಸಂಕಷ್ಟ ಎದುರಿಸುತ್ತಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಮತ್ತೊಂದು ಶಾಕ್ ನೀಡಲಾಗಿದೆ. ಅದೇ ಅಕ್ರಮ ಡಿನೋಟಿಫಿಕೇಷನ್ ಕೇಸಲ್ಲಿ ಲೋಕಾಯುಕ್ತದಿಂದ ಸಮನ್ಸ್ ಜಾರಿಗೊಳಿಸಲಾಗಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಕೃಷ್ಣಭೈರೇಗೌಡ ಸೇರಿದಂತೆ ವಿವಿಧ ಸಚಿವರು ಅಕ್ರಮ ಡಿನೋಟಿಫಿಕೇಷನ್ ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧದ ಡಿನೋಟಿಫಿಕೇಷನ್ ಹಗರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತದಿಂದ ಸಮನ್ಸ್ ಜಾರಿಗೊಳಿಸಲಾಗಿದೆ.

ಮಾಜಿ ಸಿಎಂ ಬಿಎಸ್ ವೈಗೆ ಮತ್ತೊಂದು ಸಂಕಷ್ಟ| ಅಕ್ರಮ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಲೋಕಾಯುಕ್ತದಿಂದ ಸಮನ್ಸ್ Read More »