ರಾಜಕೀಯ

ರಾಜ್ಯಸಭೆ ಸದಸ್ಯರಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಚಿತ್ರನಟ ಜಗ್ಗೇಶ್|ಇಲ್ಲಿದೆ ವಿಡಿಯೋ

ಸಮಗ್ರ ನ್ಯೂಸ್: ರಾಜ್ಯಸಭೆ ಸದಸ್ಯರಾಗಿ ಕನ್ನಡ ಚಿತ್ರನಟ ಜಗ್ಗೇಶ್ ಪ್ರಮಾಣವಚನ ಸ್ವೀಕರಿಸಿದರು. ರಾಘವೇಂದ್ರ ಸ್ವಾಮಿ ದೇವರ ಹೆಸರಿನಲ್ಲಿ ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸುವ ಮೂಲಕ ಜಗ್ಗೇಶ್ ಗಮನ ಸೆಳೆದರು. “ಜಗ್ಗೇಶ್ ಎಂಬ ಹೆಸರಿನವನಾದ ನಾನು, ರಾಜ್ಯಸಭೆಯ ಸದಸ್ಯನಾಗಿ ಚುನಾಯಿತನಾದವನಾಗಿ ಕಾನೂನು ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನಕ್ಕೆ ಸತ್ಯ, ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆ ಎಂದು ಭಾರತದ ಸಾರ್ವಭೌಮತ್ವವನ್ನು ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆಂದು ಮತ್ತು ನಾನು ಈಗ ಕೈಗೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತೇನೆ ಎಂದು ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ […]

ರಾಜ್ಯಸಭೆ ಸದಸ್ಯರಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಚಿತ್ರನಟ ಜಗ್ಗೇಶ್|ಇಲ್ಲಿದೆ ವಿಡಿಯೋ Read More »

ರಾಜ್ಯಸಭೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ನಾಮನಿರ್ದೇಶನ

ಸಮಗ್ರ ನ್ಯೂಸ್: ರಾಜ್ಯಸಭೆ ಸದಸ್ಯರಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗಡೆ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ವೀರೇಂದ್ರ ಹೆಗ್ಗಡೆಯವರು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಧರ್ಮಸ್ಥಳದ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಮತ್ತು ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿಯಲ್ಲಿ ಅವರು ಮಾಡುತ್ತಿರುವ ಮಹತ್ತರವಾದ ಕಾರ್ಯ ಮಾದರಿಯಾಗಿದೆ. ಅವರು ಸಂಸತ್ತಿಗೆ ಆಯ್ಕೆಯಾಗಿರುವುದು ಅಭಿನಂದನಾರ್ಹ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ರಾಜ್ಯಸಭೆ ಸದಸ್ಯರಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಕೇಂದ್ರ ಸರಕಾರ ನಾಮನಿರ್ದೇಶನ ಮಾಡಿದೆ.ಇವರ ಜೊತೆ ಖ್ಯಾತ ಅಥ್ಲೀಟ್ ಪಿ.ಟಿ.

ರಾಜ್ಯಸಭೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ನಾಮನಿರ್ದೇಶನ Read More »

ಜಮೀರ್ ಸಂಪತ್ತಿಗೆ ಎಸಿಬಿ ಸವಾಲ್| ಆಸ್ತಿ ಮೌಲ್ಯ ನೋಡಿ ದಂಗಾದ ಅಧಿಕಾರಿಗಳು| ಲೆಕ್ಕ ಇಲ್ಲ ಪಕ್ಕಾ…! ಬಾದ್ ಷಾಗೆ ಬಂಧನ ಭೀತಿ

ಸಮಗ್ರ ನ್ಯೂಸ್: ಜಾರಿ ನಿರ್ದೇಶನಾಲಯ ವರದಿ ಆಧರಿಸಿ ಶಾಸಕ ಜಮೀರ್‌ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಎಸಿಬಿ, ಈಗ ಜಮೀರ್‌ ಸಾಮ್ರಾಜ್ಯದ ಸಂಪತ್ತಿನ ಶೋಧನೆಗೆ ಕಾರ್ಯಾಚರಣೆ ಶುರು ಮಾಡಿದೆ. ಎಸಿಬಿ ದಾಳಿ ಬಳಿಕ ಜಮೀರ್‌ಗೀಗ ಬಂಧನದ ಭೀತಿ ಎದುರಾಗಿದೆ. ಜಮೀರ್‌ ಅಹಮದ್‌ ಖಾನ್‌ ಅವರ ನಿವಾಸದ ಮೇಲೆ ನಡೆದ ದಾಳಿ ವೇಳೆ ಲಕ್ಷಾಂತರ ರು. ನಗದು, ಕೋಟ್ಯಂತರ ಮೌಲ್ಯದ ವಜ್ರ ವೈಢೂರ್ಯ, ಚಿನ್ನಾಭರಣ, ಬೆಳ್ಳಿ ವಸ್ತುಗಳು, 9 ಲೀಟರ್‌ ವಿದೇಶಿ ಮದ್ಯ,

ಜಮೀರ್ ಸಂಪತ್ತಿಗೆ ಎಸಿಬಿ ಸವಾಲ್| ಆಸ್ತಿ ಮೌಲ್ಯ ನೋಡಿ ದಂಗಾದ ಅಧಿಕಾರಿಗಳು| ಲೆಕ್ಕ ಇಲ್ಲ ಪಕ್ಕಾ…! ಬಾದ್ ಷಾಗೆ ಬಂಧನ ಭೀತಿ Read More »

ಸುಪ್ರೀಂ ಆದೇಶ ಬೆನ್ನಲ್ಲೇ ಸಿಎಂ ಸ್ಥಾನಕ್ಕೆ ಠಾಕ್ರೆ ರಾಜೀನಾಮೆ

ಸಮಗ್ರ ನ್ಯೂಸ್: ಮಹಾರಾಷ್ಟ್ರ ಮೈತ್ರಿ ಸರ್ಕಾರ ನಾಳೆ ವಿಶ್ವಾಸ ಮತಯಾಚನೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್​​ ಠಾಕ್ರೆ ರಾಜೀನಾಮೆ ನೀಡಿದ್ದಾರೆ. ವಿಶ್ವಾಸ ಮತಯಾಚನೆ ನಡೆಸಲು ರಾಜ್ಯಪಾಲರು ನೀಡಿರುವ ನಿರ್ಧಾರ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಠಾಕ್ರೆ ಗೆ ಭಾರೀ ಹಿನ್ನೆಡೆಯಾಗಿದ್ದು, ಇದಾದ ಬಳಿಕ ಸುದ್ದಿಗೋಷ್ಠಿ ಕರೆದು ರಾಜೀನಾಮೆ ಘೋಷಿಸಿದ್ದಾರೆ. ಈ ಮೂಲಕ ಎರಡೂವರೆ ವರ್ಷದ ‘ಮಹಾ ವಿಕಾಸ್ ಅಘಾಡಿ’ ಸರಕಾರದ ಆಡಳಿತ ಅಂತ್ಯವಾಗಿದೆ.

ಸುಪ್ರೀಂ ಆದೇಶ ಬೆನ್ನಲ್ಲೇ ಸಿಎಂ ಸ್ಥಾನಕ್ಕೆ ಠಾಕ್ರೆ ರಾಜೀನಾಮೆ Read More »

“ವಿಶ್ವಾಸ ಮತ ಯಾಚನೆ ಮಾಡ್ಲೇಬೇಕು” ಸರ್ವೋಚ್ಚ ನ್ಯಾಯಾಲಯದ ಆದೇಶ| ಮಹಾಪತನಕ್ಕೆ ಕೌಂಟ್ ಡೌನ್ ಶುರು

ಸಮಗ್ರ ನ್ಯೂಸ್: ಕುತೂಹಲ ಹೆಚ್ಚಿರುವ ಶಿವಸೇನಾ ಬಂಡಾಯ ಶಾಸಕರ ಮತ್ತು ಮುಖ್ಯಮಂತ್ರಿ ತಂಡದ‌ ನಡುವಿನ ಒಡಕು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದು ರಾಜ್ಯಪಾಲರ ಆದೇಶವನ್ನು ನ್ಯಾಯಾಲಯ‌ ಎತ್ತಿ ಹಿಡಿದಿದೆ. ವಿಶ್ವಾಸ ಮತ ಯಾಚನೆ ಕುರಿತಂತೆ ಠಾಕ್ರೆ ಅರ್ಜಿ ವಿಚಾರಿಸಿದ ಸುಪ್ರೀಂ ಕೋರ್ಟ್ ಮತಯಾಚನೆ ಮಾಡಲೇಬೇಕೆಂದು ಆದೇಶಿಸಿದೆ. ಬಂಡಾಯ 16 ಶಾಸಕರೂ ಮತ ಚಲಾವಣೆ ಮಾಡಲು ನ್ಯಾಯಾಲಯ ಅನುಮತಿಸಿದ್ದು ಇದಕ್ಕಾಗಿ 11:00ಗಂಟೆಗೆ ಸಮಯ ನಿಗದಿಪಡಿಸಿದ್ದು ಮಹಾರಾಷ್ಟ್ರ ಸರಕಾರ ಪತನ ಖಚಿತವಾಗಿದೆ.

“ವಿಶ್ವಾಸ ಮತ ಯಾಚನೆ ಮಾಡ್ಲೇಬೇಕು” ಸರ್ವೋಚ್ಚ ನ್ಯಾಯಾಲಯದ ಆದೇಶ| ಮಹಾಪತನಕ್ಕೆ ಕೌಂಟ್ ಡೌನ್ ಶುರು Read More »

ಸಿದ್ದರಾಮಯ್ಯ ಸರ್ ರಾಜಸ್ಥಾನ ಸರ್ಕಾರಕ್ಕೆ ಸ್ವಲ್ಪ ಬುದ್ಧಿ ಹೇಳುತ್ತೀರಾ?: ಪ್ರತಾಪ್ ಸಿಂಹ| “ಮುಸ್ಲಿಮರೆಲ್ಲಾ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲಾ ಮುಸ್ಲಿಮರು”

ಸಮಗ್ರ ನ್ಯೂಸ್: ಸಿದ್ದರಾಮಯ್ಯ ಸರ್ ರಾಜಸ್ಥಾನ ಸರ್ಕಾರಕ್ಕೆ ಸ್ವಲ್ಪ ಬುದ್ಧಿ ಹೇಳುತ್ತೀರಾ ಸರ್ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು. ನೂಫುರ್ ಶರ್ಮಾ ಬೆಂಬಲಿಸಿದ ವ್ಯಕ್ತಿಯ ಹತ್ಯೆ ವಿಚಾರದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನಿಡಿದ ಸಂಸದರು, ಈ ಹತ್ಯೆ ಪೈಶಾಚಿಕವಾದ ಕೊಲೆ. ಮುಸ್ಲಿಂ ಮೂಲಭೂತವಾದಿಗಳು ದೇಶದ ಶಾಂತಿ ಕೆಡಿಸುವ ಯತ್ನವಿದು. ದನಗಳ್ಳರಿಗೆ ಎರಡೇಟು ಬಿದ್ದರೆ ಆಕಾಶ ಭೂಮಿ ಒಂದಾಗುವ ರೀತಿ ಬೊಬ್ಬೆ ಹಾಕುವವರು ಈಗ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ ಎಂದು ಪ್ರಶ್ನಿಸಿದರು. ಬ್ರದರ್ ಬ್ರದರ್ ಎಂದು ಹೇಳುವ

ಸಿದ್ದರಾಮಯ್ಯ ಸರ್ ರಾಜಸ್ಥಾನ ಸರ್ಕಾರಕ್ಕೆ ಸ್ವಲ್ಪ ಬುದ್ಧಿ ಹೇಳುತ್ತೀರಾ?: ಪ್ರತಾಪ್ ಸಿಂಹ| “ಮುಸ್ಲಿಮರೆಲ್ಲಾ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲಾ ಮುಸ್ಲಿಮರು” Read More »

ಜೆಡಿಎಸ್ ನ ಮತ್ತೊಂದು ಪ್ರಬಲ ವಿಕೆಟ್ ಪತನ!!?

ಸಮಗ್ರ ನ್ಯೂಸ್: ಜೆಡಿಎಸ್‌ ಪಕ್ಷದ ವಾಟ್ಸಾಪ್‌ ಗ್ರೂಪ್‌ನಿಂದ ಶಿವಲಿಂಗೇಗೌಡ ಎಕ್ಸಿಟ್‌ ಆಗಿದ್ದು, ಅವ್ರು ಸಧ್ಯದಲ್ಲೇ ಪಕ್ಷ ತೊರೆಯಲಿದ್ದಾರೆ ಎಂಬ ಗುಸುಗುಸು ಕೇಳಿ ಬರ್ತಿದೆ. ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರದ ಶಾಸಕರಾಗಿರುವ ಶಿವಲಿಂಗೇಗೌಡ ಜೆಡಿಎಸ್‌ನ ಪ್ರಮುಖ ವಾಟ್ಸಾಪ್‌ ಗ್ರೂಪ್‌ಗಳಿಂದ ಎಕ್ಸಿಟ್‌ ಆಗಿದ್ದು, ನಿನ್ನೆ ಸಂಜೆಯಿಂದ ಪಕ್ಷದ ಎಲ್ಲಾ ಗ್ರೂಪ್‌ಗಳಿಂದ ಎಕ್ಸಿಟ್‌ ಆಗುತ್ತಿದ್ದಾರೆ. ಇನ್ನು ಜೆಡಿಎಸ್‌ ನಾಯಕರ ಜೊತೆ ಶಿವಲಿಂಗೇಗೌಡ ಅಂತರ ಕಾಯ್ದುಕೊಳ್ಳುತ್ತಿರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ. ಗೌಡರು ಶೀಘ್ರ ಜೆಡಿಎಸ್‌ ತೊರೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಜೆಡಿಎಸ್ ನ ಮತ್ತೊಂದು ಪ್ರಬಲ ವಿಕೆಟ್ ಪತನ!!? Read More »

ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು| ಫೀಲ್ಡಿಗಿಳಿದ ಠಾಕ್ರೆ ಪತ್ನಿ| ಜಡೆಗಳಿಂದ ಜಗಳ ಮುಗಿಯುವುದೇ?

ಸಮಗ್ರ ನ್ಯೂಸ್: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಹೊಸ ಟ್ವಿಸ್ಟ್ ಒಂದು ಹೊರಬಿದ್ದಿದೆ. ಮೂಲಗಳ ಪ್ರಕಾರ ಬಂಡಾಯ ಶಾಸಕರ ಮನವೊಲಿಸಲು ಶಿವಸೇನೆ ಶತಪ್ರಯತ್ನ ನಡೆಸುತ್ತಿದೆ. ಇದರ ನಡುವೆ ಶಿವಸೇನೆಯ ಹಿರಿಯ ನಾಯಕರ ನಂತರ ಇದೀಗ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿ ಶಾಸಕರ ಮನವೊಲಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಉದ್ಧವ್‌ ಠಾಕ್ರೆ ಪತ್ನಿ ರಶ್ಮಿ ಠಾಕ್ರೆ ಶಾಸಕರನ್ನು ವಾಪಸ್ ಪಕ್ಷಕ್ಕೆ ಕರೆತರಲು ವಿಶೇಷ ಯೋಜನೆ ರೂಪಿಸಿದ್ದಾರೆ. ಮಾಹಿತಿ ಪ್ರಕಾರ, ಸಿಎಂ ಉದ್ಧವ್ ಠಾಕ್ರೆ ಅವರ

ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು| ಫೀಲ್ಡಿಗಿಳಿದ ಠಾಕ್ರೆ ಪತ್ನಿ| ಜಡೆಗಳಿಂದ ಜಗಳ ಮುಗಿಯುವುದೇ? Read More »

ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ ಮಹಾರಾಷ್ಟ್ರ ಬಿಕ್ಕಟ್ಟು| ತುರ್ತು ವಿಚಾರಣೆಗೆ ಸಮ್ಮತಿಸಿದ ನ್ಯಾಯಾಲಯ

ಸಮಗ್ರ ನ್ಯೂಸ್: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರದ ಭವಿಷ್ಯದ ರಾಜಕೀಯ ಹೋರಾಟ ಭಾನುವಾರ ಕಾನೂನು ವಲಯಕ್ಕೆ ಹೋಗಿದ್ದು, ಬಂಡಾಯ ಶಾಸಕ ಏಕನಾಥ್ ಶಿಂಧೆ ಅವರು ತಮ್ಮ ಮತ್ತು ಇತರ 15 ಶಾಸಕರನ್ನು ಅನರ್ಹಗೊಳಿಸಿದ ಶಿವಸೇನೆಯ ಕ್ರಮವನ್ನು ಸರ್ವೊಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಈ ಪ್ರಕರಣದ ವಿಚಾರಣೆ ನಾಳೆ ನಡೆಯಲಿದೆ. ಉಪಸಭಾಪತಿ ನರಹರಿ ಝಿರ್ವಾಲ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿ ಅಜಯ್ ಚೌಧರಿ ಅವರನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಿರುವುದನ್ನು ಏಕನಾಥ್ ಶಿಂಧೆ ಬಣವು ಪ್ರಶ್ನಿಸಿದೆ

ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ ಮಹಾರಾಷ್ಟ್ರ ಬಿಕ್ಕಟ್ಟು| ತುರ್ತು ವಿಚಾರಣೆಗೆ ಸಮ್ಮತಿಸಿದ ನ್ಯಾಯಾಲಯ Read More »

ಶಿಕ್ಷಕರ ಮಕ್ಕಳಿಗೆ ಕನ್ನಡ ಮಾಧ್ಯಮ ಕಡ್ಡಾಯ – ಕಸಾಪ ಅಧ್ಯಕ್ಷ ಮಹೇಶ್ ಜೋಶಿ

ಸಮಗ್ರ ನ್ಯೂಸ್: ಸರ್ಕಾರಿ ಶಾಲಾ ಶಿಕ್ಷಕರ ಮಕ್ಕಳಿಗೆ ಕನ್ನಡ ಮಾಧ್ಯಮ ಶಿಕ್ಷಣ ಕಡ್ಡಾಯ ವಿಚಾರವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆಡಳಿತಾತ್ಮಕ ಆದೇಶವಾಗಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಹೇಳಿದ್ದಾರೆ. ಕನ್ನಡ ಶಾಲೆಗಳ ಸ್ಥಿತಿ ದುಸ್ಥಿತಿಗೆ ತಲುಪಿವೆ. ಇದೇ ರೀತಿ ಮುಂದುವರಿದರೆ 10 ವರ್ಷದಲ್ಲಿ ಕನ್ನಡ ಉಳಿಯುವುದಿಲ್ಲ. ಕನ್ನಡ ಸಂಘಟನೆಗಳು, ಕಸಾಪ ಯಾವುದೂ ಇರುವುದಿಲ್ಲ. ಕನ್ನಡ ಮಾಧ್ಯಮ ಕಡ್ಡಾಯ ವಿಚಾರವಾಗಿ ಸಾಹಿತಿ ಎಸ್. ಎಲ್. ಭೈರಪ್ಪ ನೇತೃತ್ವದ ಸಮಿತಿ ರಚಿಸಲಾಗಿದೆ. ಶಿಕ್ಷಕರು ಜನರ

ಶಿಕ್ಷಕರ ಮಕ್ಕಳಿಗೆ ಕನ್ನಡ ಮಾಧ್ಯಮ ಕಡ್ಡಾಯ – ಕಸಾಪ ಅಧ್ಯಕ್ಷ ಮಹೇಶ್ ಜೋಶಿ Read More »