ರಾಜಕೀಯ

ಮಂಗಳೂರು: ಪ್ರವೀಣ್ ಹಂತಕರ ಪತ್ತೆಗೆ ಐದು ವಿಶೇಷ ತಂಡ ರಚನೆ

ಸಮಗ್ರ ನ್ಯೂಸ್: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಹಂತಕರ ಪತ್ತೆಗೆ ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಆರೋಪಿಗಳ ಬೆನ್ನು ಹತ್ತಿ ಕೇರಳ, ಮಡಿಕೇರಿ, ಹಾಸನಕ್ಕೆ ಪೊಲೀಸರು ಮೂರು ತಂಡಗಳು ತೆರಳಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರುಷಿಕೇಷ್ ಸೋನಾವಣೆ ಮಾಹಿತಿ ನೀಡಿದ್ದಾರೆ. ಕೊಲೆ ಆರೋಪಿಗಳಿಗಾಗಿ ಕೇರಳ ಗಡಿ ಪ್ರದೇಶ ಹಾಗೂ ಪುತ್ತೂರಿನ ಸುತ್ತಮುತ್ತ ನಾಕಾಬಂದಿ ಹಾಕಿ ವಾಹನಗಳನ್ನು ತಲಾಶ್ ಮಾಡಲಾಗುತ್ತಿದೆ. ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಸುಳ್ಯ ತಾಲ್ಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಉದ್ವಿಗ್ನ […]

ಮಂಗಳೂರು: ಪ್ರವೀಣ್ ಹಂತಕರ ಪತ್ತೆಗೆ ಐದು ವಿಶೇಷ ತಂಡ ರಚನೆ Read More »

ದ.ಕ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ಪ್ರಕರಣ| “ಇನ್ನು ಸಹಿಸಲಸಾಧ್ಯ; ಕಠಿಣ ಶಿಕ್ಷೆ ಖಂಡಿತ” – ಸಿಎಂ ಬೊಮ್ಮಾಯಿ ಟ್ವೀಟ್

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ಖಂಡನೀಯ. ಇಂಥ ಹೇಯಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನಿನ ಅಡಿಯಲ್ಲಿ ಶಿಕ್ಷಿಸಲಾಗುವುದು ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಈ ಸಂಬಂಧ ಸಿಎಂ ಅವರ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಬರೆದುಕೊಂಡಿರುವ ಬೊಮ್ಮಾಯಿ, ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ಖಂಡನೀಯ. ಇಂಥ ಹೇಯಕೃತ್ಯ ಎಸಗಿರುವ

ದ.ಕ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ಪ್ರಕರಣ| “ಇನ್ನು ಸಹಿಸಲಸಾಧ್ಯ; ಕಠಿಣ ಶಿಕ್ಷೆ ಖಂಡಿತ” – ಸಿಎಂ ಬೊಮ್ಮಾಯಿ ಟ್ವೀಟ್ Read More »

“ಎಂಕ್ ಗೊತ್ತುಜ್ಜಿ, ರಾಜ್ಯಾಧ್ಯಕ್ಷೆರೆನ್ ಕೇನ್ಲೆ” | ಮೀನುಗಾರಿಕೆ ನಿಗಮಕ್ಕೆ ಅಧ್ಯಕ್ಷರನ್ನು ನೇಮಿಸಿದ್ದು ಸಚಿವ ಅಂಗಾರರಿಗೆ ಗೊತ್ತೇ ಇಲ್ವಂತೆ! – ಆಡಿಯೋ ವೈರಲ್

ಸಮಗ್ರ ನ್ಯೂಸ್: ಕಳೆದ ಎರಡು ವಾರಗಳ ಹಿಂದೆ, 47 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ರಾಜ್ಯ ಸರ್ಕಾರ ವಾಪಸ್ ಮಾಡಿದ್ದು, ಇದೀಗ 20 ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ ಆದೇಶವನ್ನು ಹೊರಡಿಸಿದೆ. ಇದರಲ್ಲಿ ಈಗ ಮೀನುಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷರ ಆಯ್ಕೆ ಸ್ವತಃ ಬಂದರು ಮತ್ತು ಮೀನುಗಾರಿಕಾ ಸಚಿವರಿಗೆ ಗೊತ್ತೇ ಇಲ್ವಂತೆ. ಹೀಗೆಂದು ಸ್ವತಃ ಸಚಿವ ಅಂಗಾರರು‌ ಹೇಳಿದ್ದಾರೆನ್ನಲಾದ ಆಡಿಯೋ ವೈರಲ್ ಆಗ್ತಿದೆ. ಮೀನುಗಾರಿಕಾ ಸಚಿವ ಅಂಗಾರರ ಬಳಿ ಮೊಗವೀರ ಮುಖಂಡ , ಬಿಜೆಪಿ

“ಎಂಕ್ ಗೊತ್ತುಜ್ಜಿ, ರಾಜ್ಯಾಧ್ಯಕ್ಷೆರೆನ್ ಕೇನ್ಲೆ” | ಮೀನುಗಾರಿಕೆ ನಿಗಮಕ್ಕೆ ಅಧ್ಯಕ್ಷರನ್ನು ನೇಮಿಸಿದ್ದು ಸಚಿವ ಅಂಗಾರರಿಗೆ ಗೊತ್ತೇ ಇಲ್ವಂತೆ! – ಆಡಿಯೋ ವೈರಲ್ Read More »

20 ನಿಗಮ ಮಂಡಳಿಗಳಿಗೆ ರಾಜ್ಯ ಸರ್ಕಾರದಿಂದ ಅಧ್ಯಕ್ಷರ ನೇಮಕ

ಸಮಗ್ರ ನ್ಯೂಸ್: ಕಳೆದ ಎರಡು ವಾರಗಳ ಹಿಂದೆ, 47 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ರಾಜ್ಯ ಸರ್ಕಾರ ವಾಪಸ್ ಮಾಡಿತ್ತು, ಆ ವೇಳೆಯಲ್ಲಿ, ಶಾಸಕರು, ಮಾಜಿ ಶಾಸಕರು ಅಧ್ಯಕ್ಷರಿರುವ ನಿಗಮ ಮಂಡಳಿ ಬಿಟ್ಟು ಉಳಿದ 22 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ ಮಾಡಲಾಗಿತ್ತು. ಇದೀಗ 20 ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ ಆದೇಶವನ್ನು ಹೊರಡಿಸಿದೆ. ಯಾರಿಗೆ ಯಾವ ನಿಗಮದ ಅಧ್ಯಕ್ಷರ ನೇಮಕಾತಿಯನ್ನು ನೀಡಲಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. *ಗುತ್ತಿಗನೂರು ವಿ, ಗೌಡ-ಕರ್ನಾಟಕ

20 ನಿಗಮ ಮಂಡಳಿಗಳಿಗೆ ರಾಜ್ಯ ಸರ್ಕಾರದಿಂದ ಅಧ್ಯಕ್ಷರ ನೇಮಕ Read More »

ನಿರ್ಗಮಿತ ರಾಷ್ಟ್ರಪತಿಗೆ ಮೋದಿ ಅವಮಾನ ಮಾಡಿದ್ರಾ!? ಎಎಪಿ ರಿಲೀಸ್ ಮಾಡಿದ ವಿಡಿಯೋದ ಸತ್ಯಾಂಶವೇನು?

ಸಮಗ್ರ‌ ನ್ಯೂಸ್: ನಿರ್ಗಮಿತ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಬೀಳ್ಕೊಡುಗೆ ಸಂದರ್ಭದಲ್ಲಿ ಮೋದಿಯವರ ಕ್ರಾಪ್‌ ವಿಡಿಯೋವೊಂದನ್ನು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸಂಜಯ್ ಸಿಂಗ್ ಮತ್ತು ಕಾಂಗ್ರೆಸ್ ವಕ್ತಾರ ರೋಹನ್ ಗುಪ್ತಾ ಟ್ವೀಟರ್‌ ನಲ್ಲಿ ಶೇರ್‌ ಮಾಡಿದ ಬೆನ್ನಲ್ಲೇ ಟ್ವೀಟರ್‌ ಆ ವೀಡಿಯೋಗೆ ದಾರಿತಪ್ಪಿಸುವ ವಿಡಿಯೋ ಎಂದು ಹೆಸರಿಸಿದೆ. ನಿರ್ಗಮಿತ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ನಿರ್ಗಮಿಸುವಾಗ ಎಲ್ಲರೂ ಅವರಿಗೆ ಶುಭಾಶಯ ಕೋರುವ ವೇಳೆಯಲ್ಲಿ ಪ್ರಧಾನಿ ಮೋದಿ ಕ್ಯಾಮೆರಾಗಳನ್ನು ನೋಡುತ್ತಿರುವ ವೀಡಿಯೊವನ್ನು ಪೋಸ್ಟ್‌ ಮಾಡಲಾಗಿದೆ. ಆದರೆ

ನಿರ್ಗಮಿತ ರಾಷ್ಟ್ರಪತಿಗೆ ಮೋದಿ ಅವಮಾನ ಮಾಡಿದ್ರಾ!? ಎಎಪಿ ರಿಲೀಸ್ ಮಾಡಿದ ವಿಡಿಯೋದ ಸತ್ಯಾಂಶವೇನು? Read More »

ಇಂದಿನಿಂದ ಮಹಾಭಾರತದಲ್ಲಿ ದ್ರೌಪದಿ ಯುಗ| ಪ್ರಮಾಣವಚನ ಸ್ವೀಕರಿಸಲಿದ್ದಾರೆ ಮುರ್ಮು

ಸಮಗ್ರ ನ್ಯೂಸ್: ರಾಮಾನಾಥ ಕೋವಿಂದ್ ಅವರ ಅಧಿಕಾರಾವಧಿ ಜು.24ಕ್ಕೆ ಅಂತ್ಯಗೊಂಡ ಕಾರಣ, ದೇಶದ 15ನೇ ರಾಷ್ಟ್ರಪತಿಯಾಗಿ, ಇಂದು ದ್ರೌಪದಿ ಮುರ್ಮು ಅವರು ಪ್ರಮಾಣವಚನ ಸ್ವೀಕರಿಸಿ, ಅಧಿಕಾರ ವಹಿಸಿಕೊಳ್ಳಲಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಭಾರೀ ಬಹುತದೊಂದಿಗೆ ಎನ್ ಡಿಎ ಬೆಂಬಲಿತ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಗೆಲುವು ಸಾಧಿಸಿದ್ದರು. ಇಂತಹ ಅವರು ಇಂದು 15ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇಂದು ಬೆಳಿಗ್ಗೆ 10.15ಕ್ಕೆ ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಅವರು ಪ್ರಮಾಣವಚನ ಬೋಧಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ

ಇಂದಿನಿಂದ ಮಹಾಭಾರತದಲ್ಲಿ ದ್ರೌಪದಿ ಯುಗ| ಪ್ರಮಾಣವಚನ ಸ್ವೀಕರಿಸಲಿದ್ದಾರೆ ಮುರ್ಮು Read More »

ಫೋನ್‌ ಮೂಲಕವೇ ಅಂಗಾರ ಕ್ಯಾಬಿನೆಟ್ ಕಂಟ್ರೋಲ್ ಮಾಡ್ತಾರೆ – ಎಸ್.ಟಿ ಸೋಮಶೇಖರ್

ಸಮಗ್ರ ನ್ಯೂಸ್: ಕಸ್ತೂರಿ ರಂಗನ್ ವರದಿಯನ್ನು ಏಕಪಕ್ಷಿಯವಾಗಿ ತಿರಸ್ಕಾರ ಮಾಡಬೇಕು ಎಂದು ಸುಳ್ಯದಲ್ಲಿ ಕುಳಿತು ಫೋನ್ ಮೂಲಕ ಎಲ್ಲಾ ಸಚಿವರನ್ನು ರಿಮೋಟ್ ಕಂಟ್ರೋಲ್ ಮಾಡುವ ತಾಕತ್ತು ಇದ್ದರೆ ಅದು ಸಚಿವ ಅಂಗಾರ ಅವರಿಗೆ ಮಾತ್ರ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು. ಅವರು ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಸಹಕಾರಿ ಸಂಘದ ದೀನ್‌ದಯಾಳ್ ರೈತ ಸಭಾಭವನ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕ್ಯಾಬಿನೆಟ್​ನಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ಪ್ರಸ್ತಾಪನೆ ಬಂತು. ಸಚಿವರಾದ ಅಂಗಾರ ಅವರು ಸುಳ್ಯದಿಂದಲೇ ಎಲ್ಲಾ ಮಂತ್ರಿಗಳಿಗೂ ಫೋನ್

ಫೋನ್‌ ಮೂಲಕವೇ ಅಂಗಾರ ಕ್ಯಾಬಿನೆಟ್ ಕಂಟ್ರೋಲ್ ಮಾಡ್ತಾರೆ – ಎಸ್.ಟಿ ಸೋಮಶೇಖರ್ Read More »

ರಾಜಕೀಯ ನಿವೃತ್ತಿ ಘೋಷಿಸಿದ ರಾಜಾಹುಲಿ; ಪುತ್ರನಿಗಾಗಿ ಶಸ್ತ್ರ ತ್ಯಾಗ

ಸಮಗ್ರ‌ ನ್ಯೂಸ್: ರಾಜ್ಯ ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದೊಡ್ಡ ಮಟ್ಟಿನ ಶಾಕ್ ನೀಡಿದ್ದು ಇದೀಗ ರಾಜ್ಯ ಬಿಜೆಪಿ ವಲಯದಲ್ಲಿ ಬಾರಿ ಕುತೂಹಲಕ್ಕೆ ಕಾರಣವಾಗಿದೆ. ನಾನು ರಾಜಕೀಯ ನಿವೃತ್ತಿ ಘೋಷಿಸುತ್ತಿದ್ದು ಇದೀಗ ಶಿವಮೊಗ್ಗದ ಶಿಕಾರಿಪುರದಲ್ಲಿ ನನ್ನ ಬದಲಿಗೆ ವಿಜೇಯೇಂದ್ರರವರು ಸ್ಪರ್ದಿಸಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.ಇದೀಗ ಯಡಿಯೂರಪ್ಪರ ಈ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಬಾರೀ ಸಂಚಲನ ಸೃಷ್ಟಿಸಿದ್ದು,ಯಡಿಯೂರಪ್ಪ ನಿವೃತ್ತಿ ಘೋಷಿಸಿದರೆ ರಾಜ್ಯ ಬಿಜೆಪಿಗೆ ಈ ಬಾರಿಯ ಚುನಾವಣೆ ನುಂಗಲಾರದ ತುತ್ತಾಗಲಿದೆ. ಮಾಜಿ ಸಿಎಂ ಯಡಿಯೂರಪ್ಪ ಪುತ್ರನಿಗಾಗಿ ತಮ್ಮ

ರಾಜಕೀಯ ನಿವೃತ್ತಿ ಘೋಷಿಸಿದ ರಾಜಾಹುಲಿ; ಪುತ್ರನಿಗಾಗಿ ಶಸ್ತ್ರ ತ್ಯಾಗ Read More »

“ಕಾಂಗ್ರೆಸ್ ‌ನ ತಾಯಿ ಬಂಜೆಯಂತೆ!”| ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಡಿಸಿಎಂ ಸವದಿ

ಸಮಗ್ರ ನ್ಯೂಸ್: ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದ ಕುರಿತಂತೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಕಾಂಗ್ರೆಸ್ಸಿನ ತಾಯಿ ಬಂಜೆ ಆಗಿದ್ದಾಳೆ. ಗರ್ಭಿಣಿಯೂ ಆಗಲ್ಲ, ಕೂಸನ್ನೂ ಹೆರುವುದಿಲ್ಲ ಕಾಂಗ್ರೆಸ್ ಬಗ್ಗೆ ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲಿಸುತ್ತಾರೆ ಅಂತಾರೆ. ನಾನು ಈ ಮಾತನ್ನ ಒಪ್ಪಲ್ಲ. ಗರ್ಭಿಣಿ ಆದರೆ ತಾನೇ ಕುಲಾಯಿ ಹೊಲೆಸುವುದು. ಕಾಂಗ್ರೆಸ್​ನಲ್ಲಿ ಕೂಸು ಹುಟ್ಟಲ್ಲ, ಕುಲಾಯಿ ಹೊಲೆಸುವ ಪ್ರಸಂಗವೂ ಬರಲ್ಲ ಲಕ್ಷ್ಮಣ ಸವದಿ ಹೇಳಿದ್ದಾರೆ. ಕಾಂಗ್ರೆಸ್

“ಕಾಂಗ್ರೆಸ್ ‌ನ ತಾಯಿ ಬಂಜೆಯಂತೆ!”| ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಡಿಸಿಎಂ ಸವದಿ Read More »

ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ| ಬುಡಕಟ್ಟು ಜನಾಂಗದ ಮಹಿಳೆಗೊಲಿದ ಅತ್ಯುನ್ನತ ಪಟ್ಟ|

ಸಮಗ್ರ ನ್ಯೂಸ್: ಜುಲೈ 18ರಂದು ನಡೆದಿದ್ದ ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ದೇಶದ 15ನೇ ರಾಷ್ಟ್ರಪತಿಯಾಗಿ ಎನ್ ಡಿ ಎ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. ಈ ಮೂಲಕ ಬುಡಕಟ್ಟು ಜನಾಂಗದ ಮಹಿಳೆಯೋರ್ವರು ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಎನ್ ಡಿ ಎ ಮೈತ್ರಿಕೂಟದಿಂದ ದ್ರೌಪದಿ ಮುರ್ಮು ಕಣಕ್ಕಿಳಿದಿದ್ದರೆ ಯುಪಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಯಶ್ವಂತ್ ಸಿನ್ಹಾ ಸ್ಪರ್ಧಿಸಿದ್ದರು. ದ್ರೌಪದಿ ಮುರ್ಮು ಅವರಿಗೆ ಯುಪಿಎ ಮೈತ್ರಿಕೂಟದಲ್ಲಿದ್ದ ಕೆಲವೊಂದು ಪಕ್ಷಗಳು ಬೆಂಬಲಿಸಿದ್ದು ಗಮನಾರ್ಹ.

ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ| ಬುಡಕಟ್ಟು ಜನಾಂಗದ ಮಹಿಳೆಗೊಲಿದ ಅತ್ಯುನ್ನತ ಪಟ್ಟ| Read More »