ರಾಜಕೀಯ

ಸುಳ್ಯ: ಬಿ ಫಾರಂ ಹಂಚಿಕೆ ಪೆಂಡಿಂಗ್| ಮತ್ತೊಂದು ಸರ್ವೆ ರೆಡಿ ಮಾಡಲು ಡಿಕೆಶಿ ಸೂಚನೆ

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಬಿ ಫಾರಂ ಹಂಚಿಕೆ ಮಾಡುತ್ತಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ ಬಿ ಫಾರಂ ಅನ್ನು ಪಕ್ಷದ ಅಭ್ಯರ್ಥಿ ಕೃಷ್ಣಪ್ಪ ಜಿ ಇವರಿಗೆ ನೀಡದೇ‌ ಪೆಂಡಿಂಗ್ ಇರಿಸಲಾಗಿದೆ. ಕ್ಷೇತ್ರದಲ್ಲಿ ಮತ್ತೊಂದು ಸರ್ವೆ ನಡೆಸಿ ವರದಿ ಬಳಿಕ ಬಿ ಫಾರಂ ನೀಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತೀರ್ಮಾನಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆದ ಸಭೆಯ ಬಳಿಕ ಟಿಕೆಟ್ ಆಕಾಂಕ್ಷಿ ನಂದಕುಮಾರ್ ಹಾಗೂ ಅಧಿಕೃತ ಅಭ್ಯರ್ಥಿ ‌ಜಿ. ಕೃಷ್ಣಪ್ಪ ಜೊತೆ ಅವರು ಮಾತುಕತೆ ನಡೆಸಿದರು. […]

ಸುಳ್ಯ: ಬಿ ಫಾರಂ ಹಂಚಿಕೆ ಪೆಂಡಿಂಗ್| ಮತ್ತೊಂದು ಸರ್ವೆ ರೆಡಿ ಮಾಡಲು ಡಿಕೆಶಿ ಸೂಚನೆ Read More »

ಯಾವ ರಾಜ್ಯದ ಮುಖ್ಯಮಂತ್ರಿ ಅತೀ ಸಿರಿವಂತರು ಗೊತ್ತ?

ಸಮಗ್ರ ನ್ಯೂಸ್: ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಯಾರಾರು ಎಷ್ಟೆಷ್ಟು ಸಿರಿವಂತರು ಎಂಬ ವರದಿಯನ್ನು ಅಸೊಶಿಯೇಷನ್ ಫಾರ್ ಡೆಮಾಕ್ರಟಿಕ್ ರಿಪಾರ್ಮ್ಸ್‌ ಸಂಸ್ಥೆ ದೇಶದ ಬಿಡುಗಡೆ ಮಾಡಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರು ಒಟ್ಟು ₹512 ಕೋಟಿ ಆಸ್ತಿಯೊಂದಿಗೆ ದೇಶದಲ್ಲಿಯೇ ನಂಬರ್ 1 ಶ್ರೀಮಂತ ಸಿಎಂ ಎನಿಸಿಕೊಂಡಿದ್ದಾರೆ. ₹15 ಲಕ್ಷ ಆಸ್ತಿಯೊಂದಿಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ‍ಪಟ್ಟಿಯಲ್ಲಿ ಕೊನೆಯ ಸ್ಥಾನ (30ನೇ ಸ್ಥಾನ) ಪಡೆದಿದ್ದಾರೆ. ಮಮತಾ ಬ್ಯಾನರ್ಜಿ ಅವರನ್ನು ಹೊರತುಪಡಿಸಿದರೆ 30 ಮುಖ್ಯಮಂತ್ರಿಗಳಲ್ಲಿ 29

ಯಾವ ರಾಜ್ಯದ ಮುಖ್ಯಮಂತ್ರಿ ಅತೀ ಸಿರಿವಂತರು ಗೊತ್ತ? Read More »

ಕರ್ನಾಟಕ ವಿಧಾನಸಭಾ ಚುನಾವಣೆ| ಜನ್ ಕಿ ಬಾತ್ ಸಮೀಕ್ಷೆಯಲ್ಲಿ ಬಿಜೆಪಿಯೇ ಮೇಲುಗೈ| ಅಧಿಕಾರ ಹಿಡಿಯುವಲ್ಲಿ ಮೂರೂ ಪಕ್ಷಗಳೂ ವಿಫಲ ಸಾಧ್ಯತೆ

ಸಮಗ್ರ ನ್ಯೂಸ್: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಅತಂತ್ರ ವಿಧಾನಸಭೆ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಜನ್‌ ಕಿ ಬಾತ್‌ ಸಮೀಕ್ಷೆಯಲ್ಲಿ ತಿಳಿದುಬಂದಿದೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 98 ರಿಂದ 109 ಸ್ಥಾನ ಗೆಲ್ಲಬಹುದು ಎಂದಿದ್ದರೆ, ಕಾಂಗ್ರೆಸ್‌ 89 ರಿಂದ 97 ಸ್ಥಾನಗಳನ್ನು ಗೆಲ್ಲಬಹುದು. ಜೆಡಿಎಸ್‌ 25-29 ಸ್ಥಾನಗಳನ್ನು ಗೆಲ್ಲಲಿದ್ದರೆ, ಇತರೆ 0 ಯಿಂದ 1 ಸ್ಥಾನ ಗೆಲ್ಲಬಹುದು ಎಂದು ತಿಳಿಸಲಾಗಿದೆ. 2018ರ ಚುನಾವಣೆಯಲ್ಲಿ ಜನ್‌ ಕಿ ಬಾತ್‌ ಬಿಜೆಪಿ 102

ಕರ್ನಾಟಕ ವಿಧಾನಸಭಾ ಚುನಾವಣೆ| ಜನ್ ಕಿ ಬಾತ್ ಸಮೀಕ್ಷೆಯಲ್ಲಿ ಬಿಜೆಪಿಯೇ ಮೇಲುಗೈ| ಅಧಿಕಾರ ಹಿಡಿಯುವಲ್ಲಿ ಮೂರೂ ಪಕ್ಷಗಳೂ ವಿಫಲ ಸಾಧ್ಯತೆ Read More »

ಜೆಡಿಎಸ್ ಪಕ್ಷದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ| ಕೈ ಕೊಟ್ಟು ತೆನೆ ಹೊತ್ತ ದಿವ್ಯಪ್ರಭಾಗೆ ಪುತ್ತೂರು ಟಿಕೆಟ್

ಸಮಗ್ರ ನ್ಯೂಸ್: ಜೆಡಿಎಸ್ ಪಕ್ಷದ 49 ಕ್ಷೇತ್ರಗಳ ಎರಡನೇ ಪಟ್ಟಿಯನ್ನು ಮಾ.14 ರಂದು ಬಿಡುಗಡೆ ಮಾಡಿದೆ. ಬೆಂಗಳೂರಿನ‌ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಜೆಡಿಎಸ್ ಪಕ್ಷದ 49 ಕ್ಷೇತ್ರಗಳಿಗೆ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು. ಇಂದು ಮುಂಜಾನೆಯಷ್ಟೇ ಜೆಡಿಎಸ್ ಗೆ ಸೇರ್ಪಡೆಗೊಂಡ ಪುತ್ತೂರು ಕಾಂಗ್ರೆಸ್ ಮುಖಂಡೆ ಹಾಗೂ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕಗೆ ಪುತ್ತೂರು ಟಿಕೆಟ್ ನೀಡಿದ್ದು, ಉಳಿದಂತೆ ವಿವಿಧ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ

ಜೆಡಿಎಸ್ ಪಕ್ಷದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ| ಕೈ ಕೊಟ್ಟು ತೆನೆ ಹೊತ್ತ ದಿವ್ಯಪ್ರಭಾಗೆ ಪುತ್ತೂರು ಟಿಕೆಟ್ Read More »

ಸುಳ್ಯ: ಮತ್ತೆ ಸಕ್ರಿಯ ರಾಜಕಾರಣಕ್ಕೆ “ಎಸ್” ಎಂದ‌‌ ಅಂಗಾರ| ರಾಜಕೀಯ ‌ನಿವೃತ್ತಿ‌ ತಕ್ಷಣದ ನೋವಷ್ಟೇ ಎಂದು ವರಸೆ ಬದಲಿಸಿದ ಸಚಿವ!!

ಸಮಗ್ರ ನ್ಯೂಸ್: 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಘೋಷಣೆಯಾದ ಬೆನ್ನಲ್ಲೇ ಮಾಧ್ಯಮಗಳ ಮುಂದೆ ಅಲವತ್ತುಕೊಂಡಿದ್ದ ಸುಳ್ಯ ಶಾಸಕ ಎಸ್.ಅಂಗಾರ ನಿವೃತ್ತಿಯ ಮಾತುಗಳನ್ನಾಡಿದ್ದರು. ಆದರೆ ಇಂದು ವರಸೆ ಬದಲಿಸಿದ ಸಚಿವ ಎಸ್.ಅಂಗಾರ, ಮೊನ್ನೆ ದಿನ ನಾನು ರಾಜಕೀಯ ನಿವೃತ್ತಿಯ ಹೇಳಿಕೆ ನೀಡಿದ್ದೆ. ಅದು ತತ್‌ಕ್ಷಣದ ನೋವಾಗಿತ್ತು. ಇದೀಗ ನನ್ನ ಹೇಳಿಕೆಯನ್ನು ನಾನು ಹಿಂಪಡೆಯುತ್ತಿದ್ದು, ರಾಜಕೀಯದಲ್ಲಿ ಈ ಹಿಂದಿನಂತೆ ಸಕ್ರಿಯನಾಗಿರುತ್ತೇನೆ.‌ ಜತೆಗೆ ನಮ್ಮ ಅಭ್ಯರ್ಥಿ ಭಾಗೀರಥಿಯವರ ಗೆಲುವಿನ ಜವಾಬ್ದಾರಿ ನಾನೇ ತೆಗೆದುಕೊಳ್ಳವುದಾಗಿ ಎಂದು‌ ಸಚಿವ ಎಸ್.ಅಂಗಾರ ಹೇಳಿದ್ದಾರೆ. ಸುಳ್ಯದಲ್ಲಿ

ಸುಳ್ಯ: ಮತ್ತೆ ಸಕ್ರಿಯ ರಾಜಕಾರಣಕ್ಕೆ “ಎಸ್” ಎಂದ‌‌ ಅಂಗಾರ| ರಾಜಕೀಯ ‌ನಿವೃತ್ತಿ‌ ತಕ್ಷಣದ ನೋವಷ್ಟೇ ಎಂದು ವರಸೆ ಬದಲಿಸಿದ ಸಚಿವ!! Read More »

ರಾಜಕೀಯ ಎಂಟ್ರಿ ಬಗ್ಗೆ ರಿಷಬ್ ಶೆಟ್ಟಿ ಸಿಎಂ ಜೊತೆ ಹೇಳಿದ್ದೇನು?

ಸಮಗ್ರ ನ್ಯೂಸ್: ಕೊಲ್ಲೂರಿನಲ್ಲಿ ಅಕಸ್ಮಿಕವಾಗಿ ಸಿಎಂ ಬೊಮ್ಮಾಯಿಗೆ ಸಿಕ್ಕ ರಿಷಬ್ ಶೆಟ್ಟಿನ್ನು ರಾಜಕೀಯವಾಗಿ ಬಳಸಲು ನೋಡಿದಾಗ ರಿಷಬ್ ಶೆಟ್ಟಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಭೇಟಿ ಮಾಡಿದ್ದರು. ಈ ಭೇಟಿ ಬೆನ್ನಲ್ಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಅನೀರಿಕ್ಷಿತ ಭೇಟಿ ಇದಾಗಿದೆ ಅಂದರು, ಬಳಿಕ , ನಮ್ಮ ಸಿದ್ದಾಂತಕ್ಕೂ ಅವರ ಸಿದ್ಧಾಂತಕ್ಕೂ ಬಹಳ ಸಾಮ್ಯತೆ ಇದೆ. ಈ ಹಿಂದೆ ಕೂಡ ರಿಷಬ್ ನಮ್ಮ

ರಾಜಕೀಯ ಎಂಟ್ರಿ ಬಗ್ಗೆ ರಿಷಬ್ ಶೆಟ್ಟಿ ಸಿಎಂ ಜೊತೆ ಹೇಳಿದ್ದೇನು? Read More »

ಪುತ್ತೂರು ಕಾಂಗ್ರೆಸ್ ಗೆ ಬಿಗ್ ಶಾಕ್| ಜೆಡಿಎಸ್ ನತ್ತ ಹಾರಿದ ದಿವ್ಯಪ್ರಭಾ ಚಿಲ್ತಡ್ಕ!

ಸಮಗ್ರ ನ್ಯೂಸ್: ಕಾಂಗ್ರೆಸ್‌ ಮುಖಂಡೆ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾದ ದಿವ್ಯಪ್ರಭಾ ಚಿಲ್ತಡ್ಕರವರು ಇಂದು (ಎ.14) ಬೆಂಗಳೂರಿನ ಜೆಪಿ ಭವನದಲ್ಲಿ ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ರವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಮುಖಂಡ ದಿವ್ಯಪ್ರಭಾ ಗೌಡ ಚಿಲ್ತಡ್ಕರವರು ಎಂಎಲ್‌ಎ ರಘು ಆಚಾರ್ ಹಾಗೂ

ಪುತ್ತೂರು ಕಾಂಗ್ರೆಸ್ ಗೆ ಬಿಗ್ ಶಾಕ್| ಜೆಡಿಎಸ್ ನತ್ತ ಹಾರಿದ ದಿವ್ಯಪ್ರಭಾ ಚಿಲ್ತಡ್ಕ! Read More »

ಬಿಜೆಪಿಯ ಮತ್ತೊಂದು ವಿಕೆಟ್ ಪತನ| ಶಾಸಕ ಸ್ಥಾನಕ್ಕೆ ಗೂಳಿಹಟ್ಟಿ ಶೇಖರ್ ರಾಜೀನಾಮೆ

ಸಮಗ್ರ ನ್ಯೂಸ್: ಹೊಸದುರ್ಗ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಲಿ ಶಾಸಕ ಗೂಳಿಹಟ್ಟಿ ಶೇಖರ್ ಗೆ ಟಿಕೆಟ್ ತಪ್ಪಿದ್ದು, ಇದರಿಂದ ಬೇಸರಗೊಂಡ ಅವರು ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಶಿರಸಿಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯನ್ನು ಭೇಟಿಯಾದ ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದರು. ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಬಿಜೆಪಿ ವಿಫಲವಾಗಿದೆ. ಹೀಗಾಗಿ ಬೇಸರದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ

ಬಿಜೆಪಿಯ ಮತ್ತೊಂದು ವಿಕೆಟ್ ಪತನ| ಶಾಸಕ ಸ್ಥಾನಕ್ಕೆ ಗೂಳಿಹಟ್ಟಿ ಶೇಖರ್ ರಾಜೀನಾಮೆ Read More »

ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಜಿ ಸಚಿವ ಆರ್.ಶಂಕರ್

ಸಮಗ್ರ ನ್ಯೂಸ್: ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ಮಾಜಿ ಸಚಿವ ಆರ್.ಶಂಕರ್ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಈ ಬಾರಿ ಬಿಜೆಪಿ ಟಿಕೆಟ್ ನೀಡದೇ ಇದ್ದದ್ದಕ್ಕೆ ಆಕ್ರೋಶವನ್ನು ಹೊರ ಹಾಕಿದ್ದಾರೆ. ರಾಣೆಬೆನ್ನೂರು ಬಿಜೆಪಿ ಟಿಕೆಟ್ ಹಾಲಿ ಶಾಸಕ ಅರುಣ್ ಕುಮಾರ್‌ಗೆ ಸಿಕ್ಕ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಬುಧವಾರ ಎಂ.ಎಲ್.ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅತ್ತ ಕಾಂಗ್ರೆಸ್ ಟಿಕೆಟ್‍ಗೂ ಪ್ರಯತ್ನ ಪಟ್ಟು ನಿರಾಸೆಯಾಗಿದ್ದ ಅವರು, ಇತ್ತ ಬಿಜೆಪಿ ಟಿಕೆಟ್ ಕೂಡಾ ಮಿಸ್ ಆಗಿದ್ದರಿಂದ ಬೇಸರಗೊಂಡಿದ್ದರು. ಈ ಹಿನ್ನಲೆಯಲ್ಲೇ ಎಂಎಲ್ಸಿ ಸ್ಥಾನಕ್ಕೆ

ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಜಿ ಸಚಿವ ಆರ್.ಶಂಕರ್ Read More »

ಕೇಸರಿ ಕಲಿಗಳ ಎರಡನೇ ಪಟ್ಟಿ ರಿಲೀಸ್| ಮತ್ತೆ 23 ಅಭ್ಯರ್ಥಿಗಳ ಹೆಸರು ಪ್ರಕಟ

ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆಗೆ ಬಿಜೆಪಿಯು ಇದೀಗ ಎರಡನೇ ಪಟ್ಟಿಯನ್ನು ಬುಧವಾರ ರಾತ್ರಿ ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ 23 ಮಂದಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲೂ ಜಗದೀಶ್ ಶೆಟ್ಟರ್ ಅವರ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆಯಾಗಿಲ್ಲ. ಮೂಡಿಗೆರೆ ಕ್ಷೇತ್ರದ ಹಾಲಿ ಶಾಸಕ ಎಂ.ಪಿ ಕುಮಾರಸ್ವಾಮಿ ಸೇರಿ 7 ಮಂದಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಮಂಗಳವಾರ 189 ಮಂದಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದ ಬಿಜೆಪಿ ಇದೀಗ ಒಟ್ಟು 212 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು

ಕೇಸರಿ ಕಲಿಗಳ ಎರಡನೇ ಪಟ್ಟಿ ರಿಲೀಸ್| ಮತ್ತೆ 23 ಅಭ್ಯರ್ಥಿಗಳ ಹೆಸರು ಪ್ರಕಟ Read More »