ಸುಳ್ಯ ಕ್ಷೇತ್ರಕ್ಕೆ ಬಿಜೆಪಿ ಶಾಸಕ, ಸಂಸದರ ಕೊಡುಗೆ ಏನು? ಬೆಳ್ತಂಗಡಿ, ಪುತ್ತೂರುಗೆ ಬರುವ ಅನುದಾನ ಸುಳ್ಯಕ್ಕೆ ಏಕಿಲ್ಲ? ಕಾಂಗ್ರೆಸ್ ನಿಂದ ಪ್ರಶ್ನೆಗಳ ಸುರಿಮಳೆ
ಸಮಗ್ರ ನ್ಯೂಸ್: ಕಳೆದ ೫ ವರ್ಷದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಮೂರುವರೆ ಸಾವಿರ ಕೋಟಿ ಅನುದಾನ ತಂದಿದ್ದಾರೆ, ಪುತ್ತೂರಿನ ಅಭಿವೃದ್ಧಿಗೆ ಎರಡೂವರೆ ಸಾವಿರ ಕೋಟಿ ಅನುದಾನ ತರಿಸಲಾಗಿದೆಯೆಂದು ಎಂದು ನಳಿನ್ ಕುಮಾರ್ ಕಟೀಲ್ ಹೇಳುತ್ತಾರೆ. ಸುಳ್ಯ ಕ್ಷೇತ್ರದ ಅಭಿವೃದ್ಧಿಗೆ ಕೇವಲ 150 ರಿಂದ 200 ಕೋಟಿ ಮಾತ್ರ ಬಂದಿದೆಯಂತೆ. ಹಾಗಾದರೆ ಇಲ್ಲಿಗೆ ಇದು ಸಾಕೇ? ಸುಳ್ಯ ಕ್ಷೇತ್ರಕ್ಕೆ ಬಿಜೆಪಿ ಶಾಸಕರ, ಸಂಸದರ ಕೊಡುಗೆ ಏನು? ಎಂದು ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಪ್ರಶ್ನಿಸಿದ್ದಾರೆ. […]