ರೈತರ ಪರವಾಗಿ ಪ್ರಧಾನಿಗೆ ಅಭಿನಂದನೆ- ಯಡಿಯೂರಪ್ಪ ಟ್ವೀಟ್
ಬೆಂಗಳೂರು: ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ಕೇಂದ್ರ ಬಿಜೆಪಿ ಸರ್ಕಾರದ ನಿರ್ಧಾರಕ್ಕೆ ದೇಶದ ರೈತರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಟ್ವೀಟಿಸಿದ್ದಾರೆ. ರೈತರ ಕೃಷಿ ಕಾಯ್ದೆ ವಿರುದ್ಧ ದೇಶದ ಹಲವು ಭಾಗದ ರೈತರ ವಿರೋಧಕ್ಕೆ ಸ್ಪಂದಿಸಿ ಕಾಯ್ದೆಗಳನ್ನು ಹಿಂಪಡೆದ ಪ್ರಧಾನಿ ಅವರಿಗೆ ರೈತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸದಾ ರೈತರ ಹಿತ, ರೈತ ಪರವಾದ ಬದ್ಧತೆ ಹೊಂದಿರುವ ಕೇಂದ್ರ ಸರ್ಕಾರ, ಪ್ರತಿಷ್ಠೆ, ರಾಜಕೀಯಗಳನ್ನೆಲ್ಲಾ ಪರಿಗಣಿಸದೆ ಸಂವೇದನಾಶೀಲತೆಯನ್ನು ಪ್ರದರ್ಶಿಸಿದೆ ಎಂದು ಅವರು ತಿಳಿಸಿದ್ದಾರೆ.
ರೈತರ ಪರವಾಗಿ ಪ್ರಧಾನಿಗೆ ಅಭಿನಂದನೆ- ಯಡಿಯೂರಪ್ಪ ಟ್ವೀಟ್ Read More »










