ರಾಜಕೀಯ

‘ಹಿಜಾಬ್ ಧರ್ಮಾಚರಣೆಯ ಹಕ್ಕಲ್ಲ, ಅದು ಮಹಿಳೆಯನ್ನು ಭೋಗದ ವಸ್ತುವಾಗಿ ಭಾವಿಸಿರುವ ಸಂಕೇತ, ಈ ಸಂಕೋಲೆಯಿಂದ ಆಕೆ ಹೊರಬರಬೇಕು’ – ತಸ್ಲೀಮಾ ನಸ್ರೀನ್

ಸಮಗ್ರ ನ್ಯೂಸ್ ಡೆಸ್ನ್: ಹಿಜಾಬ್‌ ವಿವಾದಕ್ಕೆ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಶಿಕ್ಷಣ ಸಂಸ್ಥೆ ಸಮವಸ್ತ್ರ ಕಡ್ಡಾಯಗೊಳಿಸುವುದು ತಪ್ಪಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಎಲ್ಲೆಡೆ ಸುದ್ದಿಯಾಗುತ್ತಿರುವ ಈ ಹಿಜಾಬ್‌ ವಿವಾದದ ಕುರಿತು ಸಿಡಿದೆದ್ದ ಲೇಖಕಿ ತಸ್ಲೀಮಾ, “ಜಾತ್ಯತೀತ ದೇಶದಲ್ಲಿ ಧಾರ್ಮಿಕತೆಗೆ ಅನುಗುಣವಾದ ಬಟ್ಟೆಗಳನ್ನು ಮನೆಗಳಲ್ಲಿ ಧರಿಸಬೇಕೇ ಹೊರತು ಶಾಲೆಗಳಿಗಲ್ಲ. ಶಿಕ್ಷಣ ಸಂಸ್ಥೆಗಳು ಕಡ್ಡಾಯ ಸಮವಸ್ತ್ರ ಮಾಡಿರುವುದು ಸರಿಯಾಗಿದೆ. ಶಿಕ್ಷಣ ಸಂಸ್ಥೆಗಳು ಇರುವುದು ಜ್ಞಾನಾರ್ಜನೆಗಾಗಿಯೇ ಹೊರತು, ತಮ್ಮ ಧರ್ಮದ ನಿಲುವನ್ನು ಪ್ರತಿಪಾದಿಸಲು ಅಲ್ಲ” ಎಂದಿದ್ದಾರೆ. “ಶಿಕ್ಷಣದಿಂದ […]

‘ಹಿಜಾಬ್ ಧರ್ಮಾಚರಣೆಯ ಹಕ್ಕಲ್ಲ, ಅದು ಮಹಿಳೆಯನ್ನು ಭೋಗದ ವಸ್ತುವಾಗಿ ಭಾವಿಸಿರುವ ಸಂಕೇತ, ಈ ಸಂಕೋಲೆಯಿಂದ ಆಕೆ ಹೊರಬರಬೇಕು’ – ತಸ್ಲೀಮಾ ನಸ್ರೀನ್ Read More »

ಹಿಜಾಬ್ ವಿವಾದ ಕುರಿತ ಪ್ರತಿಕ್ರಿಯೆಗೆ ಶೋಭಾ ನಿರಾಕರಣೆ

ಸಮಗ್ರ ನ್ಯೂಸ್ ಡೆಸ್ಕ್: ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ತಮ್ಮದೇ ಕ್ಷೇತ್ರದಲ್ಲಿ ಹಿಜಾಬ್ ವಿವಾದ ಬುಗಿಲೆದ್ದಿದ್ದರೂ ಮಾಧ್ಯಮದವರು ಹಿಜಾಬ್ ವಿವಾದದ ಬಗ್ಗೆ ಕೇಳಿರುವ ಪ್ರಶ್ನೆಗೆ ಮಾತ್ರ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಉತ್ತರಪ್ರದೇಶದ ಚುನಾವಣೆ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆಯವರು, ಉತ್ತರಪ್ರದೇಶದಲ್ಲಿ ಮೊದಲನೆಯ ಹಂತದ ಚುನಾವಣೆ ಇಂದು ನಡೆದಿದೆ. ಯುಪಿಯಲ್ಲಿ ಬಿಜೆಪಿಗೆ ದೊಡ್ಡ ಪ್ರಮಾಣದ ಬೆಂಬಲ ಕಂಡುಬರುತ್ತಿದೆ. ಉತ್ತರ ಪ್ರದೇಶದಲ್ಲಿ ಮೋದಿ ಹಾಗೂ ಯೋಗಿಯವರ ಹೆಸರು ಮೊಳಗುತ್ತಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಹಿಜಾಬ್ ವಿವಾದ ಕುರಿತ ಪ್ರತಿಕ್ರಿಯೆಗೆ ಶೋಭಾ ನಿರಾಕರಣೆ Read More »

ತಾ.ಪಂ, ಜಿ.ಪಂ ಚುನಾವಣೆ‌ ಇನ್ನೊಂದು ವರ್ಷ ಮುಂದೂಡುವ ಸಾಧ್ಯತೆ – ಸಚಿವ ಕೆ.ಎಸ್. ಈಶ್ವರಪ್ಪ

ಸಮಗ್ರ ನ್ಯೂಸ್ ಡೆಸ್ಕ್: ಕೋವಿಡ್ ಕಾರಣದಿಂದಾಗಿ ವಿವಿಧ ಚುನಾವಣೆಗಳನ್ನು ಮುಂದೂಡಿಕೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳು ಇನ್ನೊಂದು ವರ್ಷ ನಡೆಯೋದು ಅನುಮಾನ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ಇತ್ತೀಚಿಗೆ ಆದೇಶವೊಂದನ್ನು ನೀಡಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಸದ್ಯಕ್ಕೆ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ

ತಾ.ಪಂ, ಜಿ.ಪಂ ಚುನಾವಣೆ‌ ಇನ್ನೊಂದು ವರ್ಷ ಮುಂದೂಡುವ ಸಾಧ್ಯತೆ – ಸಚಿವ ಕೆ.ಎಸ್. ಈಶ್ವರಪ್ಪ Read More »

ಪರಿಷತ್ ಸಭಾ ನಾಯಕರಾಗಿ ಕೋಟ‌ ನಾಮನಿರ್ದೇಶನ

ಸಮಗ್ರ ನ್ಯೂಸ್ ಡೆಸ್ಕ್: ವಿಧಾನ ಪರಿಷತ್​ ಸಭಾ ನಾಯಕನಾಗಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ನಾಮ ನಿರ್ದೇಶನ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಹಿಂದೆಯೂ ಸಭಾನಾಯಕನಾಗಿ ನೇಮಕಗೊಂಡಿದ್ದರು. ಈ ಬಾರಿಯೂ ಸಭಾ ನಾಯಕರಾಗಿ ನಾಮನಿರ್ದೇಶನ ಮಾಡಿ ಸಭಾಪತಿಗೆ ಪತ್ರ ಬರೆಯಲಾಗಿದೆ. ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರ ಬರೆದಿದ್ದಾರೆ. ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಪರಿಷತ್​ನ ಸಭಾ ನಾಯಕರನ್ನಾಗಿ ನಾಮ‌ನಿರ್ದೇಶನ‌ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ

ಪರಿಷತ್ ಸಭಾ ನಾಯಕರಾಗಿ ಕೋಟ‌ ನಾಮನಿರ್ದೇಶನ Read More »

“ಜೈ ಶ್ರೀರಾಮ್” ಎದುರು “ಅಲ್ಲಾಹು ಅಕ್ಬರ್‌” ಘೋಷಣೆ ಹಾಕಿದ ವಿದ್ಯಾರ್ಥಿನಿಗೆ ಕಾಂಗ್ರೆಸ್ ನಾಯಕನಿಂದ ಐಫೋನ್ ಗಿಫ್ಟ್!

ಸಮಗ್ರ ನ್ಯೂಸ್ ಡೆಸ್ಕ್ : ರಾಜ್ಯದಲ್ಲಿ ನಡೆಯುತ್ತಿರುವ ವಿವಾದದ ಮಧ್ಯೆ “ಜೈ ಶ್ರೀರಾಮ್” ಎಂದು ಕೂಗುತ್ತಿದ್ದ ವಿದ್ಯಾರ್ಥಿಗಳ ಎದುರು “ಅಲ್ಲಾಹು ಅಕ್ಬರ್” ಎಂದು ಕೂಗಿದ ವಿದ್ಯಾರ್ಥಿನಿಗೆ ಕಾಂಗ್ರೆಸ್ ನಾಯಕನಿಂದ ಐಫೋನ್ ಗಿಫ್ಟ್ ಸಿಕ್ಕಿದೆ. ಮಂಡ್ಯ ಜಿಲ್ಲೆಯಲ್ಲಿ ಸೋಮವಾರ ಹಿಜಾಬ್ ಕುರಿತಂತೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬಂದಿದ್ದಳು. ಇದನ್ನು ಕಂಡ ಹಿಂದೂ ವಿದ್ಯಾರ್ಥಿಗಳು ಆಕೆಯ ಎದುರು ಹೋಗಿ “ಜೈ ಶ್ರೀರಾಮ್, ಜೈ ಶ್ರೀರಾಮ್” ಎಂದು ಘೋಷಣೆ ಕೂಗಿದ್ದರು. ಈ ವೇಳೆ ಆಕೆ “ಅಲ್ಲಾಹು

“ಜೈ ಶ್ರೀರಾಮ್” ಎದುರು “ಅಲ್ಲಾಹು ಅಕ್ಬರ್‌” ಘೋಷಣೆ ಹಾಕಿದ ವಿದ್ಯಾರ್ಥಿನಿಗೆ ಕಾಂಗ್ರೆಸ್ ನಾಯಕನಿಂದ ಐಫೋನ್ ಗಿಫ್ಟ್! Read More »

ಬೆಂಗಳೂರಿನಿಂದ 1 ಲಕ್ಷ ಕೇಸರಿ ಶಾಲುಗಳು ಕರಾವಳಿಗೆ ರವಾನೆಯಾಗಿದೆ| ಹಿಜಾಬ್‌- ಕೇಸರಿ ವಿವಾದ ಬಿಜೆಪಿ, ಆರ್‌ಎಸ್‌ಎಸ್‌ ಷಡ್ಯಂತ್ರದ ಭಾಗ- ಎಂ.ಲಕ್ಷ್ಮಣ

ಮೈಸೂರು: ‘ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಗಾರ್ಮೆಂಟ್ಸ್ ಕಾರ್ಖಾನೆಯಿಂದ ಸುಮಾರು ಒಂದು ಲಕ್ಷ ಕೇಸರಿ ಶಾಲುಗಳು ಕರಾವಳಿ ಜಿಲ್ಲೆಗಳಿಗೆ ರವಾನೆಯಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಲಿ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆಗ್ರಹಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈಗ ನಡೆಯುತ್ತಿರುವ ಹಿಜಾಬ್‌- ಕೇಸರಿ ಶಾಲು ವಿವಾದವು ಬಿಜೆಪಿ, ಆರ್‌ಎಸ್‌ಎಸ್‌ ಷಡ್ಯಂತ್ರದ ಭಾಗವಾಗಿದೆ. ಫೆ.6 ರಂದು ಕೇಸರಿ ಶಾಲುಗಳು ಮತ್ತು 15 ಸಾವಿರ ಕೇಸರಿ ಪೇಟಾಗಳನ್ನು ಹಂಚಲಾಗಿದೆ. ಅದರ ಪ್ರಾಯೋಜಕತ್ವ ವಹಿಸಿದ್ದು ಯಾರೆಂಬುದು ಬಯಲಾಗಲಿ’ ಎಂದು ಒತ್ತಾಯಿಸಿದರು.

ಬೆಂಗಳೂರಿನಿಂದ 1 ಲಕ್ಷ ಕೇಸರಿ ಶಾಲುಗಳು ಕರಾವಳಿಗೆ ರವಾನೆಯಾಗಿದೆ| ಹಿಜಾಬ್‌- ಕೇಸರಿ ವಿವಾದ ಬಿಜೆಪಿ, ಆರ್‌ಎಸ್‌ಎಸ್‌ ಷಡ್ಯಂತ್ರದ ಭಾಗ- ಎಂ.ಲಕ್ಷ್ಮಣ Read More »

ಬಿಕಿನಿ ಪದ ಬಳಸಿದಕ್ಕೆ ಪ್ರಿಯಾಂಕಾ ಗಾಂಧಿ ಕ್ಷಮೆ‌ ಕೋರಬೇಕು: ರೇಣುಕಾಚಾರ್ಯ

ಸಮಗ್ರ ನ್ಯೂಸ್ ಡೆಸ್ಕ್: ಬಿಕಿನಿ ಅಥವಾ ಹಿಜಾಬ್ ಧರಿಸುವುದು‌ ಮಹಿಳೆಯರ ಹಕ್ಕು ಎಂಬ ಹೇಳಿಕೆ‌ ನೀಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಹಿಳಾ ಸಮುದಾಯದ ಕ್ಷಮೆ‌ ಕೋರಬೇಕು ಎಂದು ಹೊನ್ನಾಳಿ ಶಾಸಕ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕೋರಿದರು. ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರು ಧರಿಸುವ ಬಟ್ಟೆಯ ಕುರಿತು ಹೇಳಿಕೆ ನೀಡುವ ಭರದಲ್ಲಿ ಪ್ರಿಯಾಂಕಾ ಅವರು ಬಿಕಿನಿ ಧರಿಸುವುದೂ‌ ಹಕ್ಕು ಎಂಬ ಹೇಳಿಕೆ ನೀಡಿರುವುದು ಸಮಂಜಸವಲ್ಲ ಎಂದರು. ವಿದ್ಯಾರ್ಥಿನಿಯರು ಮೈತುಂಬ ಬಟ್ಟೆ ಹಾಕಿಕೊಳ್ಳುತ್ತಾರೆ.

ಬಿಕಿನಿ ಪದ ಬಳಸಿದಕ್ಕೆ ಪ್ರಿಯಾಂಕಾ ಗಾಂಧಿ ಕ್ಷಮೆ‌ ಕೋರಬೇಕು: ರೇಣುಕಾಚಾರ್ಯ Read More »

ಕಾಂಗ್ರೆಸ್ ಅಧಿಕಾರಕ್ಕೆ ಬಂದುಬಿಟ್ಟರೆ ಇಡೀ ರಾಜ್ಯದ ಜನರಿಗೆ ಹಿಜಾಬ್ ಹಾಕಿಸುತ್ತಾರೆ: ಸುನೀಲ್‌ಕುಮಾರ್

ಸಮಗ್ರ ನ್ಯೂಸ್ ಡೆಸ್ಕ್: ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳಿಗೂ ಸೇರಿದಂತೆ ಇಡೀ ರಾಜ್ಯದ ಜನರಿಗೆ ಹಿಜಾಬ್ ಹಾಕಿಸುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್‌ಕುಮಾರ್ ಹೇಳಿದರು. ಅವರು ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತನಾಡಿ ಮಂಗಳೂರಿನಲ್ಲಿ ಕಾಂಗ್ರೆಸ್, ಎಸ್‌ಡಿಪಿಐ ಮತ್ತು ಪಿಎಫ್‌ಐ ಒಗ್ಗಟ್ಟಾಗಿವೆ. ದೇಶ ವಿಭಜನೆಗೆ ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದರು. ಹಿಜಾಬ್‌ಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇಂದು ಮಧ್ಯಾಹ್ನದ ಮತ್ತೊಮ್ಮೆ ವಿಚಾರಣೆ ನಡೆಯಲಿದ್ದು, ನ್ಯಾಯಾಲಯ ಏನು ಆದೇಶ ನೀಡುತ್ತದೆ ಎಂಬುದನ್ನು ನಾವೆಲ್ಲರೂ

ಕಾಂಗ್ರೆಸ್ ಅಧಿಕಾರಕ್ಕೆ ಬಂದುಬಿಟ್ಟರೆ ಇಡೀ ರಾಜ್ಯದ ಜನರಿಗೆ ಹಿಜಾಬ್ ಹಾಕಿಸುತ್ತಾರೆ: ಸುನೀಲ್‌ಕುಮಾರ್ Read More »

ಪೊಲೀಸರು ಕ್ಯಾಪ್ ಹಾಕಲ್ಲ, ಟೋಪಿ ಹಾಕ್ತೇವೆ ಅಂದ್ರೆ ನಡೆಯುತ್ತಾ? ಇದೂ ಹಂಗೇನೆ… ಹಿಜಾಬ್ ವಿವಾದಕ್ಕೆ ಸಚಿವ ನಾಗೇಸ್ ತಿರುಗೇಟು

ಸಮಗ್ರ ನ್ಯೂಸ್ ಡೆಸ್ಕ್: ಶಾಲಾ -‌ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಿ ಆದೇಶ ಹೊರಡಿಸುವ ಮೂಲಕ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಲು ಯತ್ನಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸರ್ಕಾರದ ಆದೇಶದಂತೆ ಸಮವಸ್ತ್ರ ಪಾಲಿಸಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಚಿವರು, ಈಗಾಗಲೇ ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಿದೆ. ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಒಂದು ವೇಳೆ ಪೊಲೀಸ್ ಇಲಾಖೆಯಲ್ಲಿ ಮುಸ್ಲಿಂರು ನಾವು

ಪೊಲೀಸರು ಕ್ಯಾಪ್ ಹಾಕಲ್ಲ, ಟೋಪಿ ಹಾಕ್ತೇವೆ ಅಂದ್ರೆ ನಡೆಯುತ್ತಾ? ಇದೂ ಹಂಗೇನೆ… ಹಿಜಾಬ್ ವಿವಾದಕ್ಕೆ ಸಚಿವ ನಾಗೇಸ್ ತಿರುಗೇಟು Read More »

ಗೋ ಕಳ್ಳರ ವಿರುದ್ಧ ಕಠಿಣ ಕ್ರಮ: ಸಂಸದ ನಳಿನ್ ಕುಮಾರ್ ಕಟೀಲ್

ಸಮಗ್ರ ನ್ಯೂಸ್ ಡೆಸ್ಕ್: ಗೋ ಕಳ್ಳತನ ಮತ್ತು ಗೋ ಸಾಗಾಟದ ವಿರುದ್ಧ ಪೊಲೀಸ ಇಲಾಖೆಯವರು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಸಂಸದರಾದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಫೆ.5ರ ಶನಿವಾರ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್ ಅವರ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.ಕ್ರೀಯಾತ್ಮಕ ಯುವ ಸಚಿವರಾದ ಸುನಿಲ್ ಕುಮಾರ್ ಅವರು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಅವರ ಉಸ್ತುವಾರಿಯಲ್ಲಿ

ಗೋ ಕಳ್ಳರ ವಿರುದ್ಧ ಕಠಿಣ ಕ್ರಮ: ಸಂಸದ ನಳಿನ್ ಕುಮಾರ್ ಕಟೀಲ್ Read More »