ರಾಜಕೀಯ

ಒಂದೊಂದು ಹುದ್ದೆಗೂ ಕೋಟ್ಯಂತರ ಹಣ; ಬೆಲೆ ಏರಿಕೆ ಮರೆಮಾಚಲು ಹಿಜಾಬ್, ಹಲಾಲ್ ವಿವಾದ ಸೃಷ್ಟಿ – ಭಾಸ್ಕರ ರಾವ್

ಸಮಗ್ರ ನ್ಯೂಸ್: ‘ನನ್ನ ಸೇವಾ ಅವಧಿಯಲ್ಲಿ ರಾಜ್ಯದ ವಿದ್ಯಮಾನಗಳನ್ನು ಚೆನ್ನಾಗಿ ಅರಿತಿದ್ದೇನೆ. ಒಂದೊಂದು ಹುದ್ದೆಗೂ ಕೋಟ್ಯಂತರ ಹಣ ಕೊಡಬೇಕು. ಉತ್ತಮವಾಗಿ ಮಾತನಾಡುವ ನಾಯಕರ ಬಂಡವಾಳವನ್ನು ಮುಂದೆ ಬಿಚ್ಚಿಡುತ್ತೇನೆ’ಎಂದು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಗುಡುಗಿದ್ದಾರೆ. ಇತ್ತೀಚೆಗಷ್ಟೇ ಆಮ್ ಆದ್ಮಿ ಪಾರ್ಟಿ ಸೇರಿರುವ ಅವರು ಮಾಧ್ಯಮಗಳ ಜೊತೆ ಸಂವಾದದಲ್ಲಿ ಪಾಲ್ಗೊಂಡು, ಪೊಲೀಸ್ ಅಧಿಕಾರಿಯಾಗಿದ್ದರಿಂದ ನಾನು ಆಗ ಸರಕಾರದ ವಿರುದ್ಧ ಮಾತನಾಡಲು ಸಾಧ್ಯವಾಗಿರಲಿಲ್ಲ. ವ್ಯವಸ್ಥೆಯಿಂದ ಬೇಸತ್ತು ನಿವೃತ್ತಿ ತೆಗೆದುಕೊಂಡಿದ್ದೇನೆ. ಇನ್ಮುಂದೆ ಎಲ್ಲರ ಬಂಡವಾಳ ಬಿಚ್ಚಿಡ್ತೀನಿ ಎಂದರು. ಕೊರೋನ ಸಂದರ್ಭದಲ್ಲಿ […]

ಒಂದೊಂದು ಹುದ್ದೆಗೂ ಕೋಟ್ಯಂತರ ಹಣ; ಬೆಲೆ ಏರಿಕೆ ಮರೆಮಾಚಲು ಹಿಜಾಬ್, ಹಲಾಲ್ ವಿವಾದ ಸೃಷ್ಟಿ – ಭಾಸ್ಕರ ರಾವ್ Read More »

ಧರ್ಮ ಸಂಘರ್ಷಕ್ಕೆ ಕಾರಣವಾಗಿರುವ ಗೃಹಸಚಿವರನ್ನು ಬಂಧಿಸಿ – ಡಿಕೆಶಿ

ಸಮಗ್ರ ನ್ಯೂಸ್: ‘ಧರ್ಮಗಳ ನಡುವೆ ಸಂಘರ್ಷ ಭಾವನೆ ಮೂಡಿಸಿ, ಅಶಾಂತಿ ಸೃಷ್ಟಿಗೆ ಕಾರಣವಾಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಕೂಡಲೇ ಬಂಧಿಸಿ ಕ್ರಮ ಜರುಗಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಾಯಿಸಿದ್ದಾರೆ. ಮಂಡ್ಯದ ಕೆ.ಆರ್ ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಪಘಾತದ ನಂತರದ ಜಗಳದ ವೇಳೆ ಚಂದ್ರು ಕೊಲೆಯಾಗಿದ್ದರೂ, ಉರ್ದು ಭಾಷೆ ಬರುವುದಿಲ್ಲವೆಂಬ ಕಾರಣಕ್ಕೆ ದಲಿತ ಯುವಕನ ಕೊಲೆಯಾಗಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಆದರೆ ಸಮಾಜಕ್ಕೆ ಸತ್ಯ ತಿಳಿಸಿರುವ ಪೊಲೀಸರು ಅಭಿನಂದನೆಗೆ ಅರ್ಹರು’ ಎಂದರು.

ಧರ್ಮ ಸಂಘರ್ಷಕ್ಕೆ ಕಾರಣವಾಗಿರುವ ಗೃಹಸಚಿವರನ್ನು ಬಂಧಿಸಿ – ಡಿಕೆಶಿ Read More »

ಮುಸ್ಕಾನ್ ಪರ ಬ್ಯಾಟಿಂಗ್ ನಡೆಸಿದ ಅಲ್ ಖೈದಾ ನಾಯಕ ಜವಾಹಿರಿ| “ನಮ್ಮನ್ನು ನೆಮ್ಮದಿಯಿಂದ ಇರಲು ಬಿಡಿ” ಎಂದು ಅಲವತ್ತುಕೊಂಡ ಮುಸ್ಕಾನ್ ಕುಟುಂಬ

ಸಮಗ್ರ ನ್ಯೂಸ್ : ನಮ್ಮನ್ನು ‌ನಮ್ಮಷ್ಟಕ್ಕೇ ಬಿಟ್ಟುಬಿಡಿ, ಹೇಗೋ ನಾವು ಜೀವನ ಮಾಡಿಕೊಂಡು ಹೋಗುತ್ತಿದ್ದೇವೆ. ನಮಗೆ ಯಾರ ಸಹಾಯ ಬೇಡ, ನಮ್ಮನ್ನು ನೆಮ್ಮದಿಯಾಗಿ ಬದುಕಲು ಬಿಟ್ಟುಬಿಡಿ ಎಂದು ಮಂಡ್ಯ‌ ವಿದ್ಯಾರ್ಥಿನಿ ಮುಸ್ಕಾನ್‌ ತಂದೆ ಮನವಿ ಮಾಡಿದ್ದಾರೆ. ಹಿಜಾಬ್‌ ಗಲಾಟೆ ವೇಳೆ “ಅಲ್ಲಾಹು ಅಕ್ಬರ್‌ ” ಎಂದು ಘೋಷಣೆ ಕೂಗಿದ್ದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್‌ ಪರ ಅಲ್‌ ಖೈದಾ ನಾಯಕ ಜವಾಹಿರಿ ಬ್ಯಾಟಿಂಗ್‌ ಮಾಡಿದ್ದು, ಭಾರತದ ಶ್ರೇಷ್ಠ ಮಹಿಳೆ! ಎಂದು ಕೊಂಡಾಡಿದ್ದಾನೆ. ಸಧ್ಯ ಈ ಕುರಿತು ಪ್ರತಿಕ್ರಿಯಿಸಿದ ಮುಸ್ಕಾನ್‌,

ಮುಸ್ಕಾನ್ ಪರ ಬ್ಯಾಟಿಂಗ್ ನಡೆಸಿದ ಅಲ್ ಖೈದಾ ನಾಯಕ ಜವಾಹಿರಿ| “ನಮ್ಮನ್ನು ನೆಮ್ಮದಿಯಿಂದ ಇರಲು ಬಿಡಿ” ಎಂದು ಅಲವತ್ತುಕೊಂಡ ಮುಸ್ಕಾನ್ ಕುಟುಂಬ Read More »

ನೈತಿಕ ಪೊಲೀಸ್ ಗಿರಿಯಲ್ಲಿ ಭಜರಂಗದಳ ಕಾರ್ಯಕರ್ತರ ಬಂಧನ| ತನಗೇನೂ ಸಂಬಂಧವಿಲ್ಲವೆಂದು ತೆರಳಿದ ಶಾಸಕ ಸಂಜೀವ ಮಠಂದೂರು| ಧಿಕ್ಕಾರ ಕೂಗಿದ ಕಾರ್ಯಕರ್ತರು

ಸಮಗ್ರ ನ್ಯೂಸ್: ನೈತಿಕ ಪೊಲೀಸ್ ಗಿರಿ ಆರೋಪದಡಿ ಹಿಂದೂ ಕಾರ್ಯಕರ್ತರ ಬಂಧನ ಮಾಡಿದ್ದನ್ನು ಆಕ್ಷೇಪಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಪುತ್ತೂರು ಶಾಸಕ ಸಂಜೀವ ಮಠಂದೂರು ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ತಡರಾತ್ರಿ ದ.ಕ ಜಿಲ್ಲೆಯ ಉಪ್ಪಿನಂಗಡಿ ಬಳಿ ಶಾಸಕ ಸಂಜೀವ ಮಠಂದೂರು ತಡೆದು ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ. ಮನೆಯಲ್ಲಿದ್ದೇನೆ ಎಂದು ಹೇಳಿ ಶಾಸಕ ಮಠಂದೂರು ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಉಪ್ಪಿನಂಗಡಿ ಬಳಿ ತಡೆದು ಧಿಕ್ಕಾರ ಕೂಗಿದ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರ ಪರ ನಿಲ್ಲದ ಹಿನ್ನೆಲೆ ಶಾಸಕರ ವಿರುದ್ದ

ನೈತಿಕ ಪೊಲೀಸ್ ಗಿರಿಯಲ್ಲಿ ಭಜರಂಗದಳ ಕಾರ್ಯಕರ್ತರ ಬಂಧನ| ತನಗೇನೂ ಸಂಬಂಧವಿಲ್ಲವೆಂದು ತೆರಳಿದ ಶಾಸಕ ಸಂಜೀವ ಮಠಂದೂರು| ಧಿಕ್ಕಾರ ಕೂಗಿದ ಕಾರ್ಯಕರ್ತರು Read More »

ಸೈಲೆಂಟ್ ಇದ್ದವರಿಗೆ ಗೇಟ್ ಪಾಸ್; ಹೊಸಬರಿಗೆ ಎಂಟ್ರಿ| ಸಂಪುಟ ಪುನಾರಚನೆ ಕಸರತ್ತಿಗೆ ಸಿಎಂ ಬೊಮ್ಮಾಯಿ ಚಿಂತನೆ

ಸಮಗ್ರ ನ್ಯೂಸ್: ಬಿಜೆಪಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯ ಬಳಿಕ, ಸರ್ಕಾರ ಮತ್ತು ಪಕ್ಷದ ಮಟ್ಟದಲ್ಲಿ ಬದಲಾವಣಾ ಪ್ರಕ್ರಿಯೆಗಳು ಚುರುಕುಗೊಂಡಿವೆ. ಜೊತೆ ಜೊತೆಗೆ ಸಿಎಂ ಬೊಮ್ಮಾಯಿ ಸಚಿವ ಸಂಪುಟ ಪುನಾರಚನೆಯೂ ಚುರುಕು ಪಡೆದಿದೆ. ಮೇಕೆದಾಟು ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ಸಂಬಂಧ ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಚರ್ಚೆ ನಡೆಸುವ ಅಧಿಕೃತ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಇಂದು ಮಧ್ಯಾಹ್ನವೇ ಸಿಎಂ ದೆಹಲಿಗೆ ತೆರಳಲಿದ್ದಾರೆ. ಈ ವೇಳೆ ರಾಜ್ಯ ಸಚಿವ ಸಂಪುಟ ಕಸರತ್ತಿಗೆ ವರಿಷ್ಠರ ಹಸಿರು ನಿಶಾನೆ ಪಡೆಯುವುದು

ಸೈಲೆಂಟ್ ಇದ್ದವರಿಗೆ ಗೇಟ್ ಪಾಸ್; ಹೊಸಬರಿಗೆ ಎಂಟ್ರಿ| ಸಂಪುಟ ಪುನಾರಚನೆ ಕಸರತ್ತಿಗೆ ಸಿಎಂ ಬೊಮ್ಮಾಯಿ ಚಿಂತನೆ Read More »

ಪ್ರಾಣಿವಧೆಗೆ ಸ್ಟನ್ನಿಂಗ್ ಕಡ್ಡಾಯವಲ್ಲ- ಸಚಿವ ಪ್ರಭು ಚವ್ಹಾಣ್

ಸಮಗ್ರ ನ್ಯೂಸ್: ಹಲಾಲ್‌ ಬಾಯ್ಕಾಟ್‌ ಅಭಿಯಾನ ಬೆನ್ನೆಲ್ಲೇ ಪ್ರಾಣಿಗಳ ವಧೆ ಸಂದರ್ಭದಲ್ಲಿ ‘ಸ್ಟನ್ನಿಂಗ್‌’ (ಪ್ರಜ್ಞೆ ತಪ್ಪಿಸುವ) ವಿಧಾನ ಪಾಲಿಸಬೇಕು ಎಂಬ ಪಶುಪಾಲನಾ ಇಲಾಖೆ ಆದೇಶ ಪ್ರತಿಯೊಂದು ವೈರಲ್‌ ಆಗಿತ್ತು. ಆದರೆ, ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಇಲಾಖೆ ಅದೇಶದಿಂದ ಹಿಂದೆ ಸರಿದಿದ್ದು, ಸ್ಟನ್ನಿಂಗ್‌ ಕಡ್ಡಾಯ ನಿಯಮ ಆದೇಶ ಜಾರಿಗೊಳಿಸಿಲ್ಲ ಎಂದು ಸಚಿವ ಪ್ರಭು ಚವ್ಹಾಣ್‌ ಸ್ಟಷ್ಟನೆ ನೀಡಿದ್ದಾರೆ. ‘ಆಹಾರಕ್ಕಾಗಿ ಪ್ರಾಣಿ ವಧೆ ಮಾಡುವಾಗ ಪ್ರಾಣಿಗಳಿಗೆ ಹಿಂಸೆ ನೀಡಬಾರದು. ಕಡ್ಡಾಯವಾಗಿ ಸ್ಟನ್ನಿಂಗ್‌ ಬಳಸಬೇಕು. ಆದರೆ, ಬೆಂಗಳೂರು ಪ್ರಾಣಿವಧಾಗಾರಗಳಲ್ಲಿ ಈ

ಪ್ರಾಣಿವಧೆಗೆ ಸ್ಟನ್ನಿಂಗ್ ಕಡ್ಡಾಯವಲ್ಲ- ಸಚಿವ ಪ್ರಭು ಚವ್ಹಾಣ್ Read More »

‘ಹಲಾಲ್, ಜಟ್ಕಾ ಹೆಸರಲ್ಲಿ ಸಮಾಜ ಒಡೆಯಲಾಗುತ್ತಿದೆ – ಸಚಿವ ಈಶ್ವರಪ್ಪ

ಸಮಗ್ರ ನ್ಯೂಸ್: ಹಲಾಲ್‌ ಅಥವಾ ಜಟ್ಕಾ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕುತಂತ್ರ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಭಾನುವಾರ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ನಿಟ್ಟೆಯಲ್ಲಿ ಎಂಆರ್‌ಎಫ್‌ ಕೇಂದ್ರ ಉದ್ಘಾಟಿಸಿ ಮಾತನಾಡಿದ ಸಚಿವರು, ‘ಹಲಾಲ್ ಹಾಗೂ ಜಟ್ಕಾ ವಿವಾದ ಸೃಷ್ಟಿಸಿರುವುದು ಕೆಲವು ವ್ಯಕ್ತಿಗಳು ಹಾಗೂ ಪಕ್ಷಗಳು. ಯಾರು ಯಾವ ಪದ್ಧತಿಯನ್ನು ಅನುಸರಿಸುತ್ತಿದ್ದಾರೋ ಅದನ್ನೇ ಮುಂದುವಸಿಕೊಂಡು ಹೋಗಲಿ’ ಎಂದು ಹೇಳಿದರು. ‘ಹಲಾಲ್‌ ಹಾಗೂ ಜಟ್ಕಾ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಚುನಾವಣೆಯಲ್ಲಿ ತೊಡೆ ತಟ್ಟಿ, ಅಭಿವೃದ್ಧಿ ಕಾರ್ಯಗಳನ್ನು

‘ಹಲಾಲ್, ಜಟ್ಕಾ ಹೆಸರಲ್ಲಿ ಸಮಾಜ ಒಡೆಯಲಾಗುತ್ತಿದೆ – ಸಚಿವ ಈಶ್ವರಪ್ಪ Read More »

ಪರಿಷತ್ ಸ್ಥಾನಕ್ಕೆ ಸಿ.ಎಂ ಇಬ್ರಾಹಿಂ ಗುಡ್ ಬೈ|

ಸಮಗ್ರ ನ್ಯೂಸ್: ಪರಿಷತ್ ವಿಪಕ್ಷ ನಾಯಕ ಸ್ಥಾನದ ನಿರೀಕ್ಷೆಯಲ್ಲಿದ್ದಂತ ಕಾಂಗ್ರೆಸ್ ಎಂ ಎಲ್ ಸಿ ಸಿ.ಎಂ ಇಬ್ರಾಹಿಂಗೆ ಆ ಸ್ಥಾನ ದೊರೆತಿರಲಿಲ್ಲ. ಹೀಗಾಗಿ ಬೇಸರಗೊಂಡಿರುವ ಅವರು, ಕಾಂಗ್ರೆಸ್ ಪಕ್ಷ ತೊರೆಯಲು ನಿರ್ಧರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಇಂದು ಎಂ.ಎಲ್ ಸಿ ಸ್ಥಾನಕ್ಕೆ ಸಿ.ಎಂ ಇಬ್ರಾಹಿಂ ಅವರು ರಾಜೀನಾಮೆ ನೀಡಿದ್ದಾರೆ. ನಿನ್ನೆ ಈ ಬಗ್ಗೆ‌ ಇಬ್ರಾಹಿಂ ಘೋಷಿಸಿದ್ದು, ಇಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರನ್ನು ವಿಧಾನಸೌಧದ ಕಚೇರಿಯಲ್ಲಿ ಭೇಟಿಯಾದ ಅವರು, ತಮ್ಮ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ

ಪರಿಷತ್ ಸ್ಥಾನಕ್ಕೆ ಸಿ.ಎಂ ಇಬ್ರಾಹಿಂ ಗುಡ್ ಬೈ| Read More »

ಮಾಜಿ‌ ಸಿಎಂ ಯಡಿಯೂರಪ್ಪರ ಬೆನ್ನಿಗೆ ಮತ್ತೆ ಜೋತುಬಿದ್ದ ಅಕ್ರಮ ಡಿನೋಟಿಫಿಕೇಶನ್ ಭೂತ| ವಿಶೇಷ ಕ್ರಿಮಿನಲ್ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ|

ಸಮಗ್ರ ನ್ಯೂಸ್: 2013 ರಲ್ಲಿ ಭೂ ಡಿನೋಟಿಫಿಕೇಷನ್ ದೂರಿಗೆ ಸಂಬಂಧಿಸಿದಂತೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ‘ವಿಶೇಷ ಕ್ರಿಮಿನಲ್ ಪ್ರಕರಣ’ ದಾಖಲಿಸಲು ಆದೇಶಿಸಿದೆ. ಮಾಜಿ ಮುಖ್ಯಮಂತ್ರಿ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಸೆಕ್ಷನ್ 13(2)ರ ಅಡಿಯಲ್ಲಿ ಓದಲಾದ ಸೆಕ್ಷನ್ 13(1)(ಡಿ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ವಿಶೇಷ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ವಿಶೇಷ ನ್ಯಾಯಾಧೀಶ ಬಿ.ಜಯಂತ ಕುಮಾರ್ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಬೆಳ್ಳಂದೂರು ಬಳಿ ಸುಮಾರು 4.30 ಎಕರೆ ಜಮೀನನ್ನು

ಮಾಜಿ‌ ಸಿಎಂ ಯಡಿಯೂರಪ್ಪರ ಬೆನ್ನಿಗೆ ಮತ್ತೆ ಜೋತುಬಿದ್ದ ಅಕ್ರಮ ಡಿನೋಟಿಫಿಕೇಶನ್ ಭೂತ| ವಿಶೇಷ ಕ್ರಿಮಿನಲ್ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ| Read More »

ಕಲ್ಲಡ್ಕದ ಭಯೋತ್ಪಾದಕ ಹೇಳಿದಂತೆ ಪೊಲೀಸ್ ವರ್ಗಾವಣೆ ನಡೆಯುತ್ತಿದೆ| ಪರಿಷತ್ ನಲ್ಲಿ ಬಿ.ಕೆ ಹರಿಪ್ರಸಾದ್ ವಾಗ್ದಾಳಿ

ಸಮಗ್ರ ನ್ಯೂಸ್: ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಸೇರಿದಂತೆ ವರ್ಗಾವಣೆಯಲ್ಲಿ ಭಾರಿ ಅಕ್ರಮ ನಡೆಯುತ್ತಿದೆ. ವರ್ಗಾವಣೆಯು ಲಕ್ಷ-ಕೋಟಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ರಾಜ್ಯದ ಪತ್ರಿಕೆಗಳು ಸುದ್ದಿ ಮಾಡುತ್ತಿವೆ.ವರ್ಗಾವಣೆಯ ಹಣ ನೇರವಾಗಿ ಸಂಘಪರಿವಾರದ ಕೇಶವ ಕೃಪಕ್ಕೆ ಸಂದಾಯವಾಗುತ್ತಿದೆ. ಕಲ್ಲಡ್ಕದ ಭಯೋತ್ಪಾದಕ ಒಬ್ರು ಹೇಳಿದ ಹಾಗೆ ವರ್ಗಾವಣೆ ನಡೆಯುತ್ತಿರುವುದು ದುರಂತ ಎಂದು ಆರ್ ಎಸ್ ಎಸ್ ನ ಕಲ್ಲಡ್ಕ ಪ್ರಭಾಕರ್ ಭಟ್ಟರ ಹೆಸರು ಹೇಳದೆ ಬಿಜೆಪಿ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಕಲಾಪದಲ್ಲಿ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ವಾಗ್ದಾಳಿ

ಕಲ್ಲಡ್ಕದ ಭಯೋತ್ಪಾದಕ ಹೇಳಿದಂತೆ ಪೊಲೀಸ್ ವರ್ಗಾವಣೆ ನಡೆಯುತ್ತಿದೆ| ಪರಿಷತ್ ನಲ್ಲಿ ಬಿ.ಕೆ ಹರಿಪ್ರಸಾದ್ ವಾಗ್ದಾಳಿ Read More »