ರಾಜಕೀಯ

“ಹರೀಶ್ ಪೂಂಜಾ ಗೋಣಿಯಲ್ಲಿ‌ ದುಡ್ಡು ತುಂಬಿ ಹಂಚುತ್ತಾರೆ!” | ಕಾರ್ಯಕರ್ತನ ಹೊಗಳಿಕೆ ಬೆಳ್ತಂಗಡಿ ಶಾಸಕರಿಗೆ ಮುಳುವಾಗುತ್ತಾ?

ಸಮಗ್ರ ನ್ಯೂಸ್: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರನ್ನು ಕಾರ್ಯಕರ್ತರೊಬ್ಬರು ಹೊಗಳುವ ಭರದಲ್ಲಿ ಆಡಿದ ಮಾತು ಈಗ ಶಾಸಕರಿಗೆ ಮುಳುವಾಗುವ ಲಕ್ಷಣಗಳು ಕಂಡುಬರುತ್ತಿದೆ. ಬೆಳ್ತಂಗಡಿಯ ಬಳಂಜದಲ್ಲಿ ನಡೆದ ಭಜನೋತ್ಸವ ಕಾರ್ಯಕ್ರಮದ ಸಮಾರೋಪದಲ್ಲಿ ಶಾಸಕ ಹರೀಶ್ ಪೂಂಜಾ ಭಾಗವಹಿಸಿದ್ದರು. ಈ ವೇಳೆ ಅಲ್ಲಿನ ಬಿಜೆಪಿ ಕಾರ್ಯಕರ್ತ ಹರೀಶ್ ವೈ ಚಂದ್ರಮ ಎಂಬವರು ಶಾಸಕರನ್ನು ಹೊಗಳಿದ್ದಾರೆ. ಅವರು ಭಾಷಣ ಮಾಡುವ ಸಂದರ್ಭದಲ್ಲಿ ”ಹರೀಶ್ ಪೂಂಜಾರವರು ಶಾಸಕರ ಮನೆಗೆ ಹೋದವರನ್ನು ಅವರು ಯಾವತ್ತೂ ಬರಿಗೈಲಿ ಕಳಿಸಿಲ್ಲ. ಐದು, ಹತ್ತು ಸಾವಿರದಂತೆ ಕಷ್ಟದಲ್ಲಿರುವವರಿಗೆ ನೀಡುತ್ತಾರೆ. […]

“ಹರೀಶ್ ಪೂಂಜಾ ಗೋಣಿಯಲ್ಲಿ‌ ದುಡ್ಡು ತುಂಬಿ ಹಂಚುತ್ತಾರೆ!” | ಕಾರ್ಯಕರ್ತನ ಹೊಗಳಿಕೆ ಬೆಳ್ತಂಗಡಿ ಶಾಸಕರಿಗೆ ಮುಳುವಾಗುತ್ತಾ? Read More »

ನೀವು ಬಳಸೋ ಎಣ್ಣೆಯಲ್ಲಿ ಕಡಲೆಯೂ ಇಲ್ಲ, ಸೂರ್ಯಕಾಂತಿಯೂ ಇಲ್ಲ – ಶೋಭಾ ಕರಂದ್ಲಾಜೆ

ಸಮಗ್ರ ನ್ಯೂಸ್: ನೀವು ತಿನ್ನುತ್ತಿರುವ ಸೂರ್ಯಕಾಂತಿ, ಕಡಲೆಕಾಯಿ ಎಣ್ಣೆಯಲ್ಲಿ ಸೂರ್ಯಕಾಂತಿಯೂ ಇಲ್ಲ, ಕಡಲೆ ಬೀಜವೂ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಡುಗೆ ತೈಲದ ವಿಚಾರದಲ್ಲಿ ಭಾರತ ಸ್ವಾವಲಂಬಿ ಆಗಬೇಕಿದೆ. ಶೇಕಡ 70ರಷ್ಟು ಎಣ್ಣೆ ವಿದೇಶದಿಂದ ಆಮದಾಗುತ್ತದೆ. ಮಲೇಷಿಯಾ ಹಾಗೂ ಇಂಡೋನೇಷ್ಯಾದಿಂದ ಪಾಮ್ ಆಯಿಲ್ ಬರುತ್ತದೆ. ಅದನ್ನು ಭಾರತದಲ್ಲಿ ರಿಫೈನರಿ ಮಾಡಿ ಬೇರೆ, ಬೇರೆ ಲೇಬಲ್ ಅಂಟಿಸಿ ಮಾರಾಟ ಮಾಡಲಾಗುತ್ತಿದೆ ಎಂದಿದ್ದಾರೆ ತೈಲ ಬೆಳೆಗಳಿಗೆ ಕೇಂದ್ರ ಸರ್ಕಾರ

ನೀವು ಬಳಸೋ ಎಣ್ಣೆಯಲ್ಲಿ ಕಡಲೆಯೂ ಇಲ್ಲ, ಸೂರ್ಯಕಾಂತಿಯೂ ಇಲ್ಲ – ಶೋಭಾ ಕರಂದ್ಲಾಜೆ Read More »

ಕೆನಡಾದಲ್ಲಿ ಕನ್ನಡ ಕಂಪು ಹರಡಿದ ಚಂದ್ರ ಆರ್ಯ| ಸಂಸದರ ಭಾಷಣ ಫುಲ್ ವೈರಲ್

ಸಮಗ್ರ ನ್ಯೂಸ್: ಕೆನಡಾ ಸಂಸತ್‌ನಲ್ಲಿ ಕನ್ನಡದ ಕಂಪು ಹರಡಿದೆ. ಕೆನಡಾ ದೇಶದ ಲಿಬರಲ್‌ ಪಕ್ಷದ ಸಂಸದ ಚಂದ್ರ ಆರ್ಯ ಕನ್ನಡದಲ್ಲಿಯೇ ಮಾತನಾಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.ನಾನು ನನ್ನ ಮಾತೃ ಭಾಷೆಯಾದ ಕನ್ನಡದಲ್ಲಿ ಮಾತನಾಡುತ್ತೇನೆ ಎಂದು ಕೆನಡಾ ಪಾರ್ಲಿಮೆಂಟ್‌ನಲ್ಲಿ ಸಂಸದ ಚಂದ್ರ ಆರ್ಯ ಕನ್ನಡದಲ್ಲಿ ಮಾತನಾಡಿದ್ದಾರೆ. ಮಾನ್ಯ ಸಭಾಪತಿ ಕೆನಡಾ ಸಂಸತ್‌ನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಗ್ರಾಮದ ವ್ಯಕ್ತಿಯೊಬ್ಬ ಕೆನಡಾದಲ್ಲಿ ಸಂಸತ್‌ ಸದಸ್ಯನಾಗಿ

ಕೆನಡಾದಲ್ಲಿ ಕನ್ನಡ ಕಂಪು ಹರಡಿದ ಚಂದ್ರ ಆರ್ಯ| ಸಂಸದರ ಭಾಷಣ ಫುಲ್ ವೈರಲ್ Read More »

ಕಾಂಗ್ರೆಸ್‌ ತೊರೆದ ಹಾರ್ದಿಕ್ ಪಟೇಲ್

ಸಮಗ್ರ ನ್ಯೂಸ್: ಗುಜರಾತ್ ಕಾಂಗ್ರೆಸ್ ನ ರಾಜ್ಯಾಧ್ಯಕ್ಷ ಹಾರ್ಧಿಕ್ ಪಟೇಲ್, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ. ಈ ಕುರಿತಂತೆ ಟ್ವಿಟ್ ಮಾಡಿರುವ ಅವರು, ಇಂದು ನಾನು ಧೈರ್ಯದಿಂದ ಕಾಂಗ್ರೆಸ್ ಪಕ್ಷದ ಹುದ್ದೆಗೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನ ನಿರ್ಧಾರವನ್ನು ನನ್ನ ಎಲ್ಲಾ ಸಹೋದ್ಯೋಗಿಗಳು ಮತ್ತು ಗುಜರಾತ್ ಜನರು ಸ್ವಾಗತಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ನನ್ನ ಈ ಹೆಜ್ಜೆಯ ನಂತರ, ನಾನು ಭವಿಷ್ಯದಲ್ಲಿ ಗುಜರಾತ್ ಗಾಗಿ

ಕಾಂಗ್ರೆಸ್‌ ತೊರೆದ ಹಾರ್ದಿಕ್ ಪಟೇಲ್ Read More »

ಪಠ್ಯಪುಸ್ತಕಗಳು ಪಕ್ಷ ಪುಸ್ತಕಗಳಾಗುತ್ತಿವೆ. ಬಿಜೆಪಿಯ ಪಟಾಲಂ ವಿಕೃತಿಯ ಪರಾಕಾಷ್ಠೆ – ಮಾಜಿ ಸಿಎಂ ಹೆಚ್ಡಿಕೆ ಕಿಡಿ

ಸಮಗ್ರ ನ್ಯೂಸ್: 10ನೇ ತರಗತಿ ಪಠ್ಯದಲ್ಲಿ ಆರ್.ಎಸ್.ಎಸ್ ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರಿಸಿರುವ ಸರ್ಕಾರದ ಕ್ರಮಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಪಠ್ಯಪುಸ್ತಕಗಳನ್ನು ʼಪಕ್ಷಪುಸ್ತಕʼಗಳನ್ನಾಗಿ ಮಾಡುವ ವ್ಯವಸ್ಥಿತ ಹುನ್ನಾರಕ್ಕೆ ನನ್ನ ಧಿಕ್ಕಾರವಿದೆ. ಬಿಜೆಪಿಯ ನೈಜ ಬಣ್ಣದ ವಿಸ್ತೃತರೂಪವೇ ಆಯ್ದ ಪಠ್ಯಗಳನ್ನು ಟಾರ್ಗೆಟ್‌ ಮಾಡಿ ಡಿಲೀಟ್‌ ಮಾಡುವುದು ಎಂದು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯ ಈ ಬುಡಮೇಲು ಕೃತ್ಯಗಳ ಬಗ್ಗೆ ನನಗೆ ಅಚ್ಚರಿಯೇನೂ ಇಲ್ಲ. ನನ್ನ ಜತೆ ಮೈತ್ರಿ ಸರಕಾರ ಮಾಡಿದಾಗ ಅವರ ಬೇಳೆ ಬೇಯಲಿಲ್ಲ. ʼಆಪರೇಷನ್‌ ಕಮಲʼದ

ಪಠ್ಯಪುಸ್ತಕಗಳು ಪಕ್ಷ ಪುಸ್ತಕಗಳಾಗುತ್ತಿವೆ. ಬಿಜೆಪಿಯ ಪಟಾಲಂ ವಿಕೃತಿಯ ಪರಾಕಾಷ್ಠೆ – ಮಾಜಿ ಸಿಎಂ ಹೆಚ್ಡಿಕೆ ಕಿಡಿ Read More »

ಸಭಾಪತಿ ಸ್ಥಾನಕ್ಕೆ ಹೊರಟ್ಟಿ‌ ರಾಜೀನಾಮೆ| ನಾಳೆ‌ ಬಿಜೆಪಿಗೆ ಅಧಿಕೃತ ಸೇರ್ಪಡೆ

ಸಮಗ್ರ ನ್ಯೂಸ್: ವಿಧಾನ ಪರಿಷತ್ ಸಭಾಪತಿ ಹಾಗೂ ಪರಿಷತ್ ಸದಸ್ಯ ಸ್ಥಾನಕ್ಕೆ ಬಸವರಾಜ ಹೊರಟ್ಟಿಯವರು ರಾಜೀನಾಮೆ ನೀಡಿದ್ದಾರೆ. ಅಲ್ಲದೇ ನಾಳೆ ಅಧಿಕೃತವಾಗಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಳ್ಳೋದಾಗಿ ತಿಳಿಸಿದ್ದಾರೆ. ಈ ಕುರಿತಂತೆ ಮಾತನಾಡಿದಂತ ಅವರು, ಸಭಾಪತಿ ಹಾಗೂ ಪರಿಷತ್ ಸದಸ್ಯ ಸ್ಥಾನ ಎರಡಕ್ಕೂ ವಿಧಾನ ಪರಿಷತ್ ಕಾರ್ಯದರ್ಶಿಯವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ. ನಾಳೆ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಳ್ಳುವುದಾಗಿ ತಿಳಿಸಿದ್ದಾರೆ. ಇನ್ನೂ ನಿಯಮದ ಪ್ರಕಾರ ಸಭಾಪತಿ ಸ್ಥಾನಕ್ಕೆ ರಾಜೀನಾಮೆಯನ್ನು ಉಪ ಸಭಾಪತಿಗಳಿಗೆ ಸಲ್ಲಿಸಬೇಕು. ಆದರೆ ಉಪ ಸಭಾಪತಿ ಸ್ಥಾನ

ಸಭಾಪತಿ ಸ್ಥಾನಕ್ಕೆ ಹೊರಟ್ಟಿ‌ ರಾಜೀನಾಮೆ| ನಾಳೆ‌ ಬಿಜೆಪಿಗೆ ಅಧಿಕೃತ ಸೇರ್ಪಡೆ Read More »

ತ್ರಿಪುರಾ ಮುಖ್ಯಮಂತ್ರಿಯಾಗಿ ಮಾಣಿಕ್ ಸಹಾ ಅಧಿಕಾರ ಸ್ವೀಕಾರ

ಸಮಗ್ರ ನ್ಯೂಸ್: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಮಾಣಿಕ್ ಸಹಾ ಅವರು ರವಿವಾರ ತ್ರಿಪುರಾದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಿಪ್ಲಬ್ ಕುಮಾರ್ ದೇಬ್ ಅವರು ಶನಿವಾರ ರಾಜೀನಾಮೆ ನೀಡಿದ ನಂತರ ಸಹಾ ಅವರನ್ನು ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿತ್ತು.ದೇಬ್ ಈಗ ಬಿಜೆಪಿ ತ್ರಿಪುರಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ. ಸಹಾ ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನ ಸರ್ಜನ್. ಅವರು 2016 ರಲ್ಲಿ ಬಿಜೆಪಿಗೆ ಸೇರುವ ಮೊದಲು ಪ್ರತಿಪಕ್ಷ ಕಾಂಗ್ರೆಸ್‌ನ

ತ್ರಿಪುರಾ ಮುಖ್ಯಮಂತ್ರಿಯಾಗಿ ಮಾಣಿಕ್ ಸಹಾ ಅಧಿಕಾರ ಸ್ವೀಕಾರ Read More »

ಬೆಳ್ತಂಗಡಿ: ನನಗೆ ಮುಸ್ಲಿಂ ಮತ ಬೇಡ, ಹಿಂದೂ ಮತಗಳಷ್ಟೇ ಸಾಕು – ಹರೀಶ್ ಪೂಂಜಾ

ಸಮಗ್ರ ನ್ಯೂಸ್: ‘ನನಗೆ ಮುಸ್ಲಿಂ ಮತ ಬೇಡ ಹಿಂದೂಗಳ ಓಟು ಮಾತ್ರವೇ ಸಾಕು’ ಎಂದು ಶಾಸಕ ಹರೀಶ್ ಪೂಂಜಾ ಕಾರ್ಯಕ್ರಮ ಒಂದರಲ್ಲಿ ಹೇಳಿಕೆ ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಭಾ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಭಾಷಣದ ವೇಳೆ ಮಾತನಾಡಿದ ಶಾಸಕ ಪೂಂಜಾ ಮುಂದಿನ ಚುನಾವಣೆಗೆ ಸಂಘದ ಹಿರಿಯರು ನನ್ನನ್ನು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಸೂಚಿಸಿದರೆ ನಾನು ಧೈರ್ಯದಿಂದ ಹೇಳುತ್ತೇನೆ, ನನಗೆ ಬ್ಯಾರಿ(ಮುಸ್ಲಿಂ)ಗಳ ಓಟು ಬೇಡ ಹಿಂದೂಗಳ ಓಟು ಮಾತ್ರ ಸಾಕು ಯಾಕೆಂದರೆ ಅಯೋಧ್ಯೆಯಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣ

ಬೆಳ್ತಂಗಡಿ: ನನಗೆ ಮುಸ್ಲಿಂ ಮತ ಬೇಡ, ಹಿಂದೂ ಮತಗಳಷ್ಟೇ ಸಾಕು – ಹರೀಶ್ ಪೂಂಜಾ Read More »

ಚುನಾವಣೆ; ರಾಜ್ಯಸಭೆಗೆ ನಿರ್ಮಲಾ, ಪರಿಷತ್ ಗೆ ವಿಜಯೇಂದ್ರ ಫೈನಲ್?

ಸಮಗ್ರ ನ್ಯೂಸ್: ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಇಂದು ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಸಭೆ ಅಭ್ಯರ್ಥಿಯಾಗಿ ನಿರ್ಮಲಾ ಸೀತಾರಾಮನ್ ಹೆಸರು ಮತ್ತು ಪರಿಷತ್ ಸ್ಥಾನದ ಅಭ್ಯರ್ಥಿಯಾಗಿ ಬಿ.ವೈ.ವಿಜಯೇಂದ್ರ ಹೆಸರನ್ನೂ ಕಳುಹಿಸಿದೆ ಎನ್ನಲಾಗಿದೆ. ಇದಲ್ಲದೇ ರಾಜ್ಯಸಭೆ ಅಭ್ಯರ್ಥಿಯಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಲೆಹರ್ ಸಿಂಗ್ ಕೆ.ಸಿ ರಾಮಮೂರ್ತಿ ಸೇರಿದಂತೆ 5 ಹೆಸರುಗಳನ್ನು ಹೆಸರನ್ನೂ ಪ್ರಸ್ತಾಪಿಸಲಾಗಿದೆ ಅಂತ ತಿಳಿದು ಬಂದಿದೆ.

ಚುನಾವಣೆ; ರಾಜ್ಯಸಭೆಗೆ ನಿರ್ಮಲಾ, ಪರಿಷತ್ ಗೆ ವಿಜಯೇಂದ್ರ ಫೈನಲ್? Read More »

ರಾಜಕೀಯ ಬೆಳವಣಿಗೆ; ತ್ರಿಪುರ ಮುಖ್ಯಮಂತ್ರಿ ದಿಢೀರ್ ರಾಜೀನಾಮೆ

ಸಮಗ್ರ ನ್ಯೂಸ್: ದಿಢೀರ್‌ ರಾಜಕೀಯ ಬೆಳವಣಿಗೆಯಲ್ಲಿ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್‌ ದೇವ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಬಿಜೆಪಿ ಹೈಕಮಾಂಡ್‌ ಸೂಚನೆಯಂತೆ ಬಿಪ್ಲಬ್‌ ಕುಮಾರ್‌ ದೇವ್‌ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದ್ದು, ಮತ್ತೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಶಾಸಕಾಂಗ ಪಕ್ಷ ಆಯ್ಕೆ ಮಾಡಲಿದೆ. ಬಿಪ್ಲಬ್‌ ಕುಮಾರ್‌ ದೇವ್‌ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಹೈಕಮಾಂಡ್‌ ಸೂಚನೆಯಂತೆ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿರುವ ಬಿಪ್ಲಬ್‌ ಕುಮಾರ್‌ ದೇವ್‌ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.

ರಾಜಕೀಯ ಬೆಳವಣಿಗೆ; ತ್ರಿಪುರ ಮುಖ್ಯಮಂತ್ರಿ ದಿಢೀರ್ ರಾಜೀನಾಮೆ Read More »