ರಾಜಕೀಯ

ನಾಯಕರಿಂದಲೇ ಕಾಂಗ್ರೆಸ್ ‌ಸರ್ವನಾಶ – ಸಚಿವ ಅಂಗಾರ

ಸಮಗ್ರ ನ್ಯೂಸ್: ಆರೆಸ್ಸೆಸ್‌ ಸಿದ್ಧಾಂತ ಹಾಗೂ ದೇಶ ಪ್ರೇಮದ ಬಗ್ಗೆ ಅರಿವಿಲ್ಲದ ಕಾಂಗ್ರೆಸ್‌ ನಾಯಕರು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಅಧಿಕಾರದ ಆಸೆಯಿಂದ ಒಂದು ವರ್ಗದ ಜನರ ಓಲೈಕೆಗಾಗಿ ಅಸಭ್ಯ ಹೇಳಿಕೆ ನೀಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಿಯಾಂಕ್‌ ಖರ್ಗೆಯಂತಹ ನಾಯಕರಿಂದಲೇ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ವನಾಶವಾಗಲಿದೆ ಎಂದು ಸಚಿವ ಎಸ್‌. ಅಂಗಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಚಡ್ಡಿ ಸುಡುವ ಬಗ್ಗೆ ಮಾತನಾಡುವ ಕಾಂಗ್ರೆಸ್‌ ನಾಯಕರ ಸಂಸ್ಕೃತಿ ಏನೆಂದು ರಾಜ್ಯದ ಜನತೆಗೆ ತಿಳಿದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ […]

ನಾಯಕರಿಂದಲೇ ಕಾಂಗ್ರೆಸ್ ‌ಸರ್ವನಾಶ – ಸಚಿವ ಅಂಗಾರ Read More »

ರಾಜ್ಯ ರಾಜಕಾರಣಕ್ಕೆ ಬರ್ತಾರಾ ಶೋಭಾ ಕರಂದ್ಲಾಜೆ? ಕೇಂದ್ರ ಸಚಿವೆ ಹೇಳಿದ್ದೇನು?

ಸಮಗ್ರ ನ್ಯೂಸ್: ಶೋಭಾ ಕರಂದ್ಲಾಜೆ ಕೇಂದ್ರ ಸರ್ಕಾರದಲ್ಲಿ ಒಳ್ಳೆ ಹುದ್ದೆಯಲ್ಲಿ ನಿರತರಾಗಿದ್ದಾರೆ. ರಾಜ್ಯ ಬಿಟ್ಟು ಕೇಂದ್ರಕ್ಕೆ ಹೋದ ಮೇಲೆ ಮತ್ತೆ ರಾಜ್ಯ ರಾಜಕಾರಣಕ್ಕೆ ಬರುತ್ತಾರಾ? ಎಂಬೆಲ್ಲಾ ಪ್ರಶ್ನೆಗಳು ಎದ್ದಿದ್ದವು. ಇದೀಗ ಈ ವಿಚಾರಕ್ಕೆ ಅವರೇ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯ ರಾಜಕಾರಣಕ್ಕೆ ಮತ್ತೆ ಹಿಂತಿರುಗಿ ಬರುವುದಿಲ್ಲ ಎಂದಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿಯವರು ನನಗೆ ಕೃಷಿ ಇಲಾಖೆಯ ಜವಾಬ್ದಾರಿ ನೀಡಿದ್ದಾರೆ. ಅಷ್ಟೇ ಅಲ್ಲ ಅನೇಕ ರಾಜ್ಯಗಳ ಚುನಾವಣಾ ಉಸ್ತುವಾರಿಯ ಜವಾಬ್ದಾರಿಯನ್ನು ನೀಡಿದ್ದಾರೆ. ಇದರಲ್ಲಿ ನಾನು ತುಂಬಾ ಖುಷಿಯಾಗಿದ್ದೇನೆ.

ರಾಜ್ಯ ರಾಜಕಾರಣಕ್ಕೆ ಬರ್ತಾರಾ ಶೋಭಾ ಕರಂದ್ಲಾಜೆ? ಕೇಂದ್ರ ಸಚಿವೆ ಹೇಳಿದ್ದೇನು? Read More »

ಉಪಚು‌ನಾವಣೆ; ಪಿಣರಾಯಿಗೆ ಮುಖಭಂಗ| ಸ್ಥಾನ ಉಳಿಸಿಕೊಂಡ ಕಾಂಗ್ರೆಸ್

ಸಮಗ್ರ ನ್ಯೂಸ್: ಕೇರಳದ ಎರ್ನಾಕುಲಂ ಜಿಲ್ಲೆಯ ತ್ರಿಕ್ಕಕರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆಲುವು ದಾಖಲಿಸಿರುವ ಕಾಂಗ್ರೆಸ್ ತನ್ನ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಉಮಾ ಥಾಮಸ್ ತನ್ನ ಸಮೀಪದ ಪ್ರತಿಸ್ಪರ್ಧಿ ಎಲ್ ಡಿಎಫ್ ಅಭ್ಯರ್ಥಿ ಡಾ.ಜೋ ಜೋಸೆಫ್ ಅವರನ್ನು 25,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದರು. ಕಾಂಗ್ರೆಸ್ ಶಾಸಕ ಪಿ.ಟಿ. ಥಾಮಸ್ ನಿಧನದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿದೆ. ದಿವಂಗತ ಶಾಸಕರ ಪತ್ನಿ ಉಮಾ ಥಾಮಸ್‌ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿತು. ಆಡಳಿತಾರೂಢ

ಉಪಚು‌ನಾವಣೆ; ಪಿಣರಾಯಿಗೆ ಮುಖಭಂಗ| ಸ್ಥಾನ ಉಳಿಸಿಕೊಂಡ ಕಾಂಗ್ರೆಸ್ Read More »

ಹಿಂಪಡೆಯದ ನಾಮಪತ್ರ| ಆರು ಮಂದಿ ರಾಜ್ಯಸಭಾ ಚುನಾವಣೆ ಕಣದಲ್ಲಿ| ಸಿದ್ದು ರಾಜಕೀಯ ದಾಳಕ್ಕೆ ಬಲಿಯಾಗೋರು ಯಾರು?

ಸಮಗ್ರ ನ್ಯೂಸ್: ರಾಜ್ಯಸಭೆ ಚುನಾವಣೆಗಾಗಿ ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಆದರೆ ಯಾವುದೇ ಪಕ್ಷದ ಅಭ್ಯರ್ಥಿಗಳು ಇಂದು ನಾಮಪತ್ರ ಹಿಂಪಡೆಯದ ಕಾರಣ, ಅಂತಿಮವಾಗಿ ಕಣದಲ್ಲಿ 6 ಅಭ್ಯರ್ಥಿಗಳು ಇದ್ದಾರೆ. ಜೂನ್ 10ರಂದು ನಡೆಯಲಿರುವಂತ ರಾಜ್ಯಸಭೆಯ ಚುನಾವಣೆಗೆ ಇಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಹೊಂದಾಣಿಕೆಯೊಂದಿಗೆ, ಕಾಂಗ್ರೆಸ್ ಪಕ್ಷದ 2ನೇ ಅಭ್ಯರ್ಥಿಯು ನಾಮಪತ್ರ ವಾಪಾಸ್ ಪಡೆಯಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಕಾಂಗ್ರೆಸ್ ಪಕ್ಷದ ಶಾಸಕಾಂಗ ನಾಯಕ ಸಿದ್ಧರಾಮಯ್ಯ ಮಾತ್ರ ನಾವು ಯಾವುದೇ ಕಾರಣಕ್ಕೂ ನಾಮಪತ್ರ

ಹಿಂಪಡೆಯದ ನಾಮಪತ್ರ| ಆರು ಮಂದಿ ರಾಜ್ಯಸಭಾ ಚುನಾವಣೆ ಕಣದಲ್ಲಿ| ಸಿದ್ದು ರಾಜಕೀಯ ದಾಳಕ್ಕೆ ಬಲಿಯಾಗೋರು ಯಾರು? Read More »

ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ‌ ಕೆಪಿಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ

ಸಮಗ್ರ ನ್ಯೂಸ್: ಕಾಂಗ್ರೆಸ್‌ ನಾಯಕ, ಸುಪ್ರೀಂ ಕೋರ್ಟ್‌ ವಕೀಲ ಬ್ರಿಜೇಶ್‌ ಕಾಳಪ್ಪ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ವಕ್ತಾರರಾಗಿದ್ದ ಬ್ರಿಜೇಶ್‌ ಕಾಳಪ್ಪ ಅವರು ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವಕಾಶ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನೇರವಾಗಿ ಪತ್ರ ಬರೆದು ತನ್ನ ನಿರ್ಧಾರವನ್ನು ತಿಳಿಸಿದ್ದಾರೆ. ಬ್ರಿಜೇಶ್‌ ಕಾಳಪ್ಪ ಆಮ್‌ ಆದ್ಮಿ ಪಕ್ಷವನ್ನು ಸೇರುವ ಸಾಧ್ಯತೆಯಿದೆ. ರಾಜೀನಾಮೆ ಪತ್ರದಲ್ಲಿ, ಗೌರವಾನ್ವಿತ ಮೇಡಂ, ಆರಂಭದಲ್ಲಿ ನೀವು ನನಗೆ ಒದಗಿಸಿದ ಹಲವಾರು

ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ‌ ಕೆಪಿಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ Read More »

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ಅಧಿಕಾರ ಸ್ವೀಕಾರ| ಶಕ್ತಿಕೇಂದ್ರದಲ್ಲಿ ಹೆಣ್ಮಕ್ಳೇ ಸ್ಟ್ರಾಂಗು ಗುರೂ!!

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಅಧಿಕಾರಿ ವಂದಿತಾ ಶರ್ಮಾ ಅಧಿಕಾರ ಸ್ವೀಕರಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರ ವಯೋ ನಿವೃತ್ತಿಯಿಂದ ತೆರವಾದ ಹುದ್ದೆಗೆ ಕರ್ನಾಟಕ ವೃಂದದ ಭಾರತೀಯ ಆಡಳಿತ ಸೇವೆಯ 1986 ನೇ ಸಾಲಿನ ತಂಡದ ವಂದಿತಾ ಶರ್ಮಾ ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ಮುಖ್ಯಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದು, ಈ ಮೂಲಕ ವಂದಿತಾ ಶರ್ಮಾ ಅವರು ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸುತ್ತಿರುವ ನಾಲ್ಕನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ಅಧಿಕಾರ ಸ್ವೀಕಾರ| ಶಕ್ತಿಕೇಂದ್ರದಲ್ಲಿ ಹೆಣ್ಮಕ್ಳೇ ಸ್ಟ್ರಾಂಗು ಗುರೂ!! Read More »

ಕಾಂಗ್ರೆಸ್ ಗೆ ಕೈಕೊಟ್ಟು ಕಮಲ ಹಿಡಿದ ಹಾರ್ದಿಕ್ ಪಟೇಲ್| ನಾಳೆ ಕೇಸರಿ ಪಾಳಯ ಸೇರಲಿರುವ ಯುವನಾಯಕ

ಸಮಗ್ರ ನ್ಯೂಸ್: ಹಾರ್ದಿಕ್ ಪಟೇಲ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ ಜೂನ್ 2 ರಂದು ಹಾರ್ದಿಕ್ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಕಳೆದ ದಿನ ಹಾರ್ದಿಕ್ ಪಟೇಲ್ ಬಿಜೆಪಿ ಸೇರುವುದಿಲ್ಲ ಎಂದು ಹೇಳಿದ್ದರು. ಗುಜರಾತ್ ನಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದ ಹಾರ್ದಿಕ್ ಪಟೇಲ್ ಇದೇ ತಿಂಗಳ 28ರಂದು ಪಕ್ಷ ತೊರೆದಿದ್ದರು. ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ನೀಡಿದ ಹಾರ್ದಿಕ್ ಪಟೇಲ್ ಅವರು ಗುಜರಾತ್ ಜನತೆಗಾಗಿ ಕೆಲಸ ಮಾಡುವುದಾಗಿ

ಕಾಂಗ್ರೆಸ್ ಗೆ ಕೈಕೊಟ್ಟು ಕಮಲ ಹಿಡಿದ ಹಾರ್ದಿಕ್ ಪಟೇಲ್| ನಾಳೆ ಕೇಸರಿ ಪಾಳಯ ಸೇರಲಿರುವ ಯುವನಾಯಕ Read More »

ಸತ್ತರಾ ರಷ್ಯಾ ಅಧ್ಯಕ್ಷ ಪುಟಿನ್? MI6 ಮುಖ್ಯಸ್ಥರು ಹೇಳಿದ್ದೇನು?

ಸಮಗ್ರ ನ್ಯೂಸ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈಗಾಗಲೇ ಸತ್ತಿರಬಹುದು ಎಂದು MI6 ಮುಖ್ಯಸ್ಥರು ಹೇಳಿದ್ದಾರೆ. ವ್ಲಾಡಿಮಿರ್ ಪುಟಿನ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ದೇಹ ಡಬಲ್ ಆಗಿದ್ದು, ಈಗಾಗಲೇ ಸತ್ತಿರಬಹುದು ಎಂದು MI6 ಮುಖ್ಯಸ್ಥರು ತಿಳಿಸಿದ್ದಾರೆ. ರಷ್ಯಾದ ನಿರಂಕುಶಾಧಿಕಾರಿಯ ಆಪ್ತರು ಪುಟಿನ್ ಸಾವನ್ನು ವಾರಗಟ್ಟಲೆ, ತಿಂಗಳುಗಳವರೆಗೆ ಪ್ರಪಂಚದಿಂದ ರಹಸ್ಯವಾಗಿಡಬೇಕಾಗುತ್ತದೆ ಎಂದು ಬ್ರಿಟಿಷ್ ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ. ಪುಟಿನ್ ಅವರ ಆರೋಗ್ಯದ ಬಗ್ಗೆ ದೀರ್ಘಕಾಲದಿಂದ ಊಹಾಪೋಹಗಳಿವೆ. ಪಾಶ್ಚಿಮಾತ್ಯ ಗುಪ್ತಚರ ವಿಭಾಗ ರಷ್ಯಾದ ಅಧ್ಯಕ್ಷರಿಗೆ ಕ್ಯಾನ್ಸರ್ ಮತ್ತು ಪಾರ್ಕಿನ್ಸನ್ ಸೇರಿದಂತೆ

ಸತ್ತರಾ ರಷ್ಯಾ ಅಧ್ಯಕ್ಷ ಪುಟಿನ್? MI6 ಮುಖ್ಯಸ್ಥರು ಹೇಳಿದ್ದೇನು? Read More »

ಕಾಂಗ್ರೆಸ್ ಗೆ ಮುಖ್ಯಮಂತ್ರಿ ಚಂದ್ರು ಗುಡ್ ಬೈ| ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಹಿರಿಯ ನಟ

ಸಮಗ್ರ ನ್ಯೂಸ್: ರಾಜ್ಯಸಭೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಪ್ರಾಥಮಿಕ ಸದಸ್ಯತ್ವಕ್ಕೆ ಇಂದು (ಮೇ 29) ರಾಜೀನಾಮೆ ಸಲ್ಲಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ಗೆ ರಾಜೀನಾಮೆ ಸಲ್ಲಿಸಿದ ಮುಖ್ಯಮಂತ್ರಿ ಚಂದ್ರು ಅವರು, ಪಕ್ಷಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸಿದ್ರೂ‌ ಗುರುತಿಸಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪರೋಕ್ಷವಾಗಿ ಬೇಸರ ಹೊರ ಹಾಕಿದ್ದಾರೆ. ಎರಡು ದಿನಗಳ ಹಿಂದಷ್ಟೇ ಸಾಂಸ್ಕೃತಿಕ ಸಮಿತಿ ಚೇರ್ ಮನ್ ಆಗಿ ನೇಮಕವಾಗಿದ್ದರು. ವೈಯಕ್ತಿಕ ಕಾರಣಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿರುವ ಮುಖ್ಯಮಂತ್ರಿ ಚಂದ್ರು,

ಕಾಂಗ್ರೆಸ್ ಗೆ ಮುಖ್ಯಮಂತ್ರಿ ಚಂದ್ರು ಗುಡ್ ಬೈ| ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಹಿರಿಯ ನಟ Read More »

ಹಿಂದೂಗಳ ಬಗ್ಗೆ ಮಾತನಾಡುವ ಮೊದಲು ಎಚ್ಚರವಿರಲಿ – ಯಶಪಾಲ್ ಸುವರ್ಣ

ಸಮಗ್ರ ನ್ಯೂಸ್: ಮಂಗಳೂರು ಮಳಲಿ ಮಸೀದಿ ವಿವಾದ ಕುರಿತು ಎಸ್​ಡಿಪಿಐ ಮುಖಂಡ ಹೇಳಿಕೆಗೆ ಯಶ್ಪಾಲ್ ಸುವರ್ಣ ತಿರುಗೇಟು ಕೊಟ್ಟಿದ್ದು, ಎಸ್​ಡಿಪಿಐ ತನ್ನ ಅಂತಿಮಯಾತ್ರೆಯ ಸಭಾ ಕಾರ್ಯಕ್ರಮ ಮಾಡಿದೆ. ಆ ಕಾರ್ಯಕ್ರಮದಲ್ಲಿ ಎಸ್​ಡಿಪಿಐ ಗೂಂಡಾಗಳು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಹಿಂದುಗಳ ಬಗ್ಗೆ ಮಾತನಾಡುವ ಮೊದಲು ಎಚ್ಚರ ವಹಿಸಿ ಎಂದು ಹೇಳಿದ್ದಾರೆ ಈ ಬಗ್ಗೆ ಉಡುಪಿಯಲ್ಲಿ ಮಾತನಾಡಿದ ಯಶ್ಪಾಲ್ ಸುವರ್ಣ ಎಲ್ಲಾ ಮತಗಳು ಹಿಂದೂ ಸಂಸ್ಕೃತಿಯ ಹಿನ್ನೆಲೆಯಿಂದಲೇ ಬೆಳೆದುಬಂದಿವೆ. ಮಳಲಿಯ ಮಸೀದಿ ಆದರೂ ಹಿಂದುಗಳ ಧಾರ್ಮಿಕ ಕ್ಷೇತ್ರ. ನಿನ್ನೆ ಯಾರೋ

ಹಿಂದೂಗಳ ಬಗ್ಗೆ ಮಾತನಾಡುವ ಮೊದಲು ಎಚ್ಚರವಿರಲಿ – ಯಶಪಾಲ್ ಸುವರ್ಣ Read More »