ರಾಜಕೀಯ

ಪುತ್ತೂರು ಶಾಸಕ ಅಶೋಕ್ ರೈಯವರ ಒಂದೊಂದು ಸುಳ್ಳನ್ನೂ ಬಿಚ್ಚಿಡುತ್ತೇನೆ – ಛಲವಾದಿ ನಾರಾಯಣಸ್ವಾಮಿ| ನಾಯಿ ಬೊಗಳಲಿ, ನಾವು ಅದಕ್ಕೆ ಕಲ್ಲೆಸೆಯುವುದಿಲ್ಲ – ಅಶೋಕ್ ರೈ

ಸಮಗ್ರ ನ್ಯೂಸ್: ಅನುದಾನದ ವಿಚಾರದಲ್ಲಿ ಕಾಂಗ್ರೆಸ್ಸಿಗರು ಸುಳ್ಳಿನ ಮೇಲೆ ಹೇಳುತ್ತಾ ತಿರುಗಾಡುತ್ತಿದ್ದಾರೆ. ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರ ಒಂದೊಂದು ಸುಳ್ಳಿನಿಂದ ಅವರ ಬಟ್ಟೆ ಬಿಚ್ಚುತ್ತೇನೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಉಪ್ಪಿನಂಗಡಿಯಲ್ಲಿ ಬಿಜೆಪಿ ವತಿಯಿಂದ ನಡೆದ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಬಾಯಿ ಬಿಟ್ಟರೆ ಬರೇ ಸುಳ್ಳುನ್ನೇ ಹೇಳೋ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ತಾಕತ್ ಅಂತ ಇದ್ರೆ ನಮ್ಮ ವೇದಿಕೆಗೆ ಬಂದು ಯಾವೆಲ್ಲ ಅನುದಾನ […]

ಪುತ್ತೂರು ಶಾಸಕ ಅಶೋಕ್ ರೈಯವರ ಒಂದೊಂದು ಸುಳ್ಳನ್ನೂ ಬಿಚ್ಚಿಡುತ್ತೇನೆ – ಛಲವಾದಿ ನಾರಾಯಣಸ್ವಾಮಿ| ನಾಯಿ ಬೊಗಳಲಿ, ನಾವು ಅದಕ್ಕೆ ಕಲ್ಲೆಸೆಯುವುದಿಲ್ಲ – ಅಶೋಕ್ ರೈ Read More »

ಪ್ರಧಾನಿ ಮೇಲೆ ದಾಳಿಗೆ ಕಾಂಗ್ರೆಸ್ ಸಂಚು| ಲೋಕಸಭಾ ಸಚಿವಾಲಯದಿಂದ ಸ್ಪೋಟಕ ಹೇಳಿಕೆ

ಸಮಗ್ರ ನ್ಯೂಸ್: ಸಂಸತ್ತಿನ ಬಜೆಟ್ ಅಧಿವೇಶನದ ಏಳನೇ ದಿನದಂದು ಅಭೂತಪೂರ್ವ ಮತ್ತು ಆಘಾತಕಾರಿ ಘಟನೆಯೊಂದು ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದಾಳಿ ಮಾಡಲು ವಿರೋಧ ಪಕ್ಷಗಳು ಸಂಚು ರೂಪಿಸಿದ್ದವು ಎಂದು ಲೋಕಸಭಾ ಸಚಿವಾಲಯ (Lok Sabha Secretariat) ಸ್ಫೋಟಕ ಹೇಳಿಕೆ ನೀಡಿದೆ. ವಿರೋಧ ಪಕ್ಷದ ಮಹಿಳಾ ಸಂಸದರು ಒಟ್ಟಾಗಿ ಪ್ರಧಾನಿ ಮೋದಿ ಅವರ ಕುರ್ಚಿಯನ್ನು ಮುತ್ತಿಗೆ ಹಾಕಿ ದಾಳಿ ಮಾಡಲು ಯೋಜಿಸಿದ್ದರು ಎಂದು ಸಚಿವಾಲಯ ತಿಳಿಸಿದೆ. ಈ ಪಿತೂರಿಯಲ್ಲಿ ಮಹಿಳಾ ಸದಸ್ಯರನ್ನು ‘ಗುರಾಣಿ’ಯಾಗಿ ಬಳಸಿಕೊಳ್ಳಲಾಗಿತ್ತು

ಪ್ರಧಾನಿ ಮೇಲೆ ದಾಳಿಗೆ ಕಾಂಗ್ರೆಸ್ ಸಂಚು| ಲೋಕಸಭಾ ಸಚಿವಾಲಯದಿಂದ ಸ್ಪೋಟಕ ಹೇಳಿಕೆ Read More »

ಖೇಮ್ ಚಂದ್ ಮಣಿಪುರದ ನೂತನ ಸಿಎಂ

ಸಮಗ್ರ ನ್ಯೂಸ್: ಬಿಜೆಪಿ ನಾಯಕ ವೈ.ಖೇಮಚಂದ್ ಸಿಂಗ್ (62) ಅವರು ಮಣಿಪುರದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಅಜಯ್‌ ಕುಮಾರ್‌ ಭಲ್ಲಾ, ಸಿಂಗ್‌ ಅವರಿಗೆ ಪ್ರಮಾಣವಚನ ಬೋಧಿಸಿದರು. ಇದೇ ವೇಳೆ ಕುಕಿ ಸಮುದಾಯದ ಮಹಿಳಾ ನಾಯಕಿ, ಬಿಜೆಪಿ ಶಾಸಕಿ ನೆಮ್ಚಾ ಕಿಪ್ಗೆನ್ ಹಾಗೂ ನಾಗಾ ಪೀಪಲ್ಸ್ ಫ್ರಂಟ್‌ನ ಶಾಸಕರಾದ ಎಲ್‌. ದಿಖೂ ಅವರೂ ರಾಜ್ಯದ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಜೆಪಿಯ ಗೋವಿಂದಾಸ್‌ ಕೋಂಥೌಜಾಮ್ ಹಾಗೂ ಎನ್‌ಪಿಪಿಯ ಲೋಕೆನ್ ಸಿಂಗ್‌ ಅವರೂ ಸಚಿವರಾಗಿ ಪದಗ್ರಹಣಗೊಂಡಿದ್ದಾರೆ.

ಖೇಮ್ ಚಂದ್ ಮಣಿಪುರದ ನೂತನ ಸಿಎಂ Read More »

ಪ್ರತಿಪಕ್ಷದ ಸದಸ್ಯರಿಂದ ಭಾಷಣಕ್ಕೆ ಅಡ್ಡಿ| ಬಿಜೆಪಿ, ಆರ್ ಎಸ್ಎಸ್ ವಿರುದ್ಧ ಶಾಸನ ಶಿವಲಿಂಗೇಗೌಡ ಕಿಡಿ

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭೆಯಲ್ಲಿ ಬುಧವಾರ ಗಂಭೀರ ರಾಜಕೀಯ ಚರ್ಚೆ ತೀವ್ರ ಗದ್ದಲ, ಆರೋಪ-ಪ್ರತ್ಯಾರೋಪ ಹಾಗೂ ಅಸಭ್ಯ ಭಾಷೆಯ ಬಳಕೆಯಿಂದ ಸಂಪೂರ್ಣ ನಿಯಂತ್ರಣ ತಪ್ಪಿದಂತಾಯಿತು. ನೂರು ಪ್ರತಿಶತ ಹಣ ಲೂಟಿ ನಡೆದಿದೆ ಎಂದು ಆರೋಪಿಸಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಅಶೋಕ್ ಆಗ್ರಹಿಸಿದ ಬೆನ್ನಲ್ಲೇ, ಆಡಳಿತ ಪಕ್ಷ ಮತ್ತು ವಿಪಕ್ಷ ಸದಸ್ಯರ ನಡುವೆ ಭಾರೀ ವಾಗ್ವಾದ ನಡೆಯಿತು. “ನೂರಕ್ಕೆ ನೂರರಷ್ಟು ಹಣ ಹೊಡೆದಿರೋದು ಸತ್ಯ. ಆ ಮಂತ್ರಿ ಮೊದಲು ರಾಜೀನಾಮೆ ನೀಡಿ

ಪ್ರತಿಪಕ್ಷದ ಸದಸ್ಯರಿಂದ ಭಾಷಣಕ್ಕೆ ಅಡ್ಡಿ| ಬಿಜೆಪಿ, ಆರ್ ಎಸ್ಎಸ್ ವಿರುದ್ಧ ಶಾಸನ ಶಿವಲಿಂಗೇಗೌಡ ಕಿಡಿ Read More »

ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಅಚ್ಚರಿಯ ಆಯ್ಕೆ| ಬಿಹಾರದ ನಿತಿನ್ ನಬಿನ್ ಗೆ ಮಣೆ ಹಾಕಿದ ಕೇಸರಿ ಪಕ್ಷ

ಸಮಗ್ರ ನ್ಯೂಸ್: ಅಚ್ಚರಿಯ ಆಯ್ಕೆಗೆ ಹೆಸರಾಗಿರುವ ಬಿಜೆಪಿ ಈ ಬಾರಿಯೂ ತನ್ನ ರಾಷ್ಟ್ರೀಯ ಅಧ್ಯಕ್ಷರ ಪಟ್ಟಕ್ಕೆ ಯಾರೂ ನಿರೀಕ್ಷಿಸದ ಬಿಹಾರದ ಯುವ ನಾಯಕ ನಿತಿನ್ ನಬೀನ್‌ ಅವರನ್ನು ಆಯ್ಕೆ ಮಾಡಿದೆ. ಈ ಮೂಲಕ ಸಂಘಟನಾ ಚತುರ, ಸಮೂಹ ನಾಯಕನಿಗೆ ಪಕ್ಷದ ಚುಕ್ಕಾಣಿ ನೀಡಿದೆ. ಹಾಗೆಂದು ನಿತಿನ್‌ಗೆ ಇದು ಏಕಾಏಕಿ ಒಲಿದು ಬಂದ ಅದೃಷ್ಟವಲ್ಲ. ನಿತಿನ್‌ರ ರಾಜಕೀಯ ಪ್ರಯಾಣ ಶುರುವಾಗುವುದು ಸರಿಯಾಗಿ 20 ವರ್ಷಗಳ ಹಿಂದೆ. ವಿದ್ಯಾರ್ಥಿಯಾಗಿದ್ದಾಗ ಎಬಿವಿಪಿ ಮೂಲಕ ಬಿಜೆಪಿ ಸಂಪರ್ಕಕ್ಕೆ ಬಂದ ನಿತಿನ್‌, 2000ದಲ್ಲಿ ರಾಜಕೀಯಕ್ಕೆ

ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಅಚ್ಚರಿಯ ಆಯ್ಕೆ| ಬಿಹಾರದ ನಿತಿನ್ ನಬಿನ್ ಗೆ ಮಣೆ ಹಾಕಿದ ಕೇಸರಿ ಪಕ್ಷ Read More »

ಗೃಹಲಕ್ಷ್ಮಿ‌ಹಣ ಲೆಕ್ಕದಲ್ಲಿ ಎಡವಿದ ಸಚಿವೆ| ಆರ್ಥಿಕ ಇಲಾಖೆಯನ್ನು ಹೊಣೆ ಮಾಡಿದ ಡಿಸಿಎಂ

ಸಮಗ್ರ ನ್ಯೂಸ್: ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಗೃಹಲಕ್ಷ್ಮಿ ಯೋಜನೆಯ ಅನುದಾನದ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಜಟಾಪಟಿ ನಡೆದಿದೆ. ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ವಿಷಾದ ವ್ಯಕ್ತಪಡಿಸಿದ ಪ್ರಸಂಗ ನಡೆದರೆ, ಮತ್ತೊಂದೆಡೆ ಸಚಿವೆ ಬೆನ್ನಿಗೆ ನಿಂತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಣಕಾಸು ಇಲಾಖೆಯನ್ನೇ ದೂರುವ ಮೂಲಕ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಅವರ ಖಾತೆಯತ್ತ ಬೊಟ್ಟು ಮಾಡಿದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಗೃಹಲಕ್ಷ್ಮಿ ಯೋಜನೆಗೆ

ಗೃಹಲಕ್ಷ್ಮಿ‌ಹಣ ಲೆಕ್ಕದಲ್ಲಿ ಎಡವಿದ ಸಚಿವೆ| ಆರ್ಥಿಕ ಇಲಾಖೆಯನ್ನು ಹೊಣೆ ಮಾಡಿದ ಡಿಸಿಎಂ Read More »

ಇಂದಿನಿಂದ ರಾಜ್ಯ ವಿಧಾನಮಂಡಲ ಚಳಿಗಾಲದ ಅಧಿವೇಶನ| ವಿಪಕ್ಷಗಳ ಎದುರಿಸಲು ಸರ್ಕಾರ ಸಜ್ಜು| ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿದೆ ಬಿಸಿಬಿಸಿ ಚರ್ಚೆ

ಸಮಗ್ರ‌ ನ್ಯೂಸ್: ರಾಜ್ಯದ ನಾಯಕತ್ವ ಬದಲಾವಣೆ ತಿಕ್ಕಾಟದ ಮಧ್ಯ ಒಗ್ಗಟ್ಟಿನ ಮಂತ್ರ ಜಪಿಸಿರುವ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ವಿಪಕ್ಷಗಳ ಟೀಕೆಗಳಿಗೆ, ಪ್ರಶ್ನೆಗಳು ಮತ್ತು ಆರೋಪಗಳಿಗೆ ತಕ್ಕ ಉತ್ತರ ಕೊಡಲು ಸಜ್ಜಾಗಿದ್ದಾರೆ. ಬೆಂಬಲ ಬೆಲೆ, ರೈತರು ಬೆಳೆದ ಕಬ್ಬು, ಮಕ್ಕೆಜೋಳ ಇತರ ಬೆಳೆಗೆ ಸೂಕ್ತ ಬೆಲೆ, ನೆರೆ-ಪ್ರವಾಹ ಪರಿಹಾರ, ಸರ್ಕಾರ ನೇಮಕಾತಿ, ಪೊಲೀಸ್ ವೈಫಲ್ಯ, ನೀರಾವರಿ ವಿಷಯಗಳು ಸೇರಿದಂತೆ ಉತ್ತರ ಕರ್ನಾಟಕದ ಹತ್ತು ಹಲವು ಸಮಸ್ಯೆಗಳು, ಬೇಡಿಕೆಗಳ ಪ್ರಸ್ತಾಪಿಸಿ ಸರ್ಕಾರದ ಮೇಲೆ ಮುಗಿ ಬೀಳಲು ವಿಪಕ್ಷಗಳು ಅಣಿಯಾಗಿವೆ.

ಇಂದಿನಿಂದ ರಾಜ್ಯ ವಿಧಾನಮಂಡಲ ಚಳಿಗಾಲದ ಅಧಿವೇಶನ| ವಿಪಕ್ಷಗಳ ಎದುರಿಸಲು ಸರ್ಕಾರ ಸಜ್ಜು| ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿದೆ ಬಿಸಿಬಿಸಿ ಚರ್ಚೆ Read More »

ಜನರ ಸಮಸ್ಯೆಗಳನ್ನು ಕೇಳುವುದು ನಾಟಕವಲ್ಲ, ಚರ್ಚೆಯಿಂದ ಓಡಿ ಹೋಗುವುದೇ ಮಹಾ ನಾಟಕ: ಪ್ರಧಾನಿ ಮೋದಿಗೆ ಪ್ರಿಯಾಂಕಾ ಗಾಂಧಿ ಖಡಕ್ ತಿರುಗೇಟು

ಸಮಗ್ರ ನ್ಯೂಸ್: ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭಕ್ಕೂ ಮುನ್ನವೇ ಆಡಳಿತ ಮತ್ತು ವಿಪಕ್ಷಗಳ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿದೆ. ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ವರ್ತನೆಯನ್ನು ನಾಟಕ ಎಂದು ಬಣ್ಣಿಸಿದ್ದಕ್ಕೆ ಕಾಂಗ್ರೆಸ್ ನಾಯಕಿ ಹಾಗೂ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸಂಸತ್ತಿನಲ್ಲಿ ಜನರ ಜ್ವಲಂತ ಸಮಸ್ಯೆಗಳನ್ನು ಎತ್ತಿ ತೋರಿಸುವುದು ನಾಟಕವಲ್ಲ, ಆದರೆ ಆ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ನೀಡದೆ ಪಲಾಯನ ಮಾಡುವುದೇ ನಿಜವಾದ ನಾಟಕ ಎಂದು ಪ್ರಧಾನಿ

ಜನರ ಸಮಸ್ಯೆಗಳನ್ನು ಕೇಳುವುದು ನಾಟಕವಲ್ಲ, ಚರ್ಚೆಯಿಂದ ಓಡಿ ಹೋಗುವುದೇ ಮಹಾ ನಾಟಕ: ಪ್ರಧಾನಿ ಮೋದಿಗೆ ಪ್ರಿಯಾಂಕಾ ಗಾಂಧಿ ಖಡಕ್ ತಿರುಗೇಟು Read More »

ಸಿಎಂ ಕುರ್ಚಿಕದನಕ್ಕೆ ಬ್ರೇಕ್| ಜಂಟಿ ಸುದ್ದಿಗೋಷ್ಟಿಯಲ್ಲಿ ಭಾಗಿಯಾದ ಸಿದ್ದು, ಡಿಕೆಶಿ

ಸಮಗ್ರ ನ್ಯೂಸ್: ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಇಂದು ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದು, ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಡಿ.ಕೆ.ಶಿವಕುಮಾರ್ ಅವರು ಪೊನ್ನಣ್ಣ ನಾವು ಮೂವರು ಬ್ರೇಕ್ ಫಾಸ್ಟ್ ನಲ್ಲಿ ಭಾಗಿಯಾಗಿದ್ದೇವು. ಅಲ್ಲಿ ಏನೂ ಮಾತನಾಡಿಲ್ಲ. ಬ್ರೇಕ್ ಫಾಸ್ಟ್ ಚೆನ್ನಾಗಿತ್ತು. ಡಿ.ಕೆ.ಶಿವಕುಮಾರ್ ಅವರು ಇಂದು ನಮ್ಮ ಮನೆಗೆ ಬಂದಿದ್ದರು. ಒಟ್ಟಿಗೆ ಬ್ರೇಕ್ ಫಾಸ್ಟ್ ಒಟ್ಟಿಗೆ ಮಾಡಿದ್ದೇವೆ. ಹೈಕಮಾಂಡ್

ಸಿಎಂ ಕುರ್ಚಿಕದನಕ್ಕೆ ಬ್ರೇಕ್| ಜಂಟಿ ಸುದ್ದಿಗೋಷ್ಟಿಯಲ್ಲಿ ಭಾಗಿಯಾದ ಸಿದ್ದು, ಡಿಕೆಶಿ Read More »

ನ.23 ಕ್ಯಾಂಪ್ಕೋ‌ಗೆ ಚುನಾವಣೆ| 6 ಸ್ಥಾನಗಳಿಗೆ ಎಂಟು ಮಂದಿ ಕಣದಲ್ಲಿ

ಸಮಗ್ರ ನ್ಯೂಸ್: ಕೇಂದ್ರ ಅಡಿಕೆ ಮತ್ತು ಕೊಕ್ಕೊ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ನಿಯಮಿತ (ಕ್ಯಾಂಪ್ಕೊ)ದ ಆಡಳಿತ ಮಂಡಳಿಯ ಚುನಾವಣೆ ನ.23ರಂದು ನಡೆಯಲಿದೆ. ಒಟ್ಟು 19 ನಿರ್ದೇಶಕ ಸ್ಥಾನಗಳಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಉಳಿದ ಆರು ಸ್ಥಾನಗಳಿಗೆ ಎಂಟು ಮಂದಿ ಕಣದಲ್ಲಿದ್ದಾರೆ. ಕರ್ನಾಟಕ ಮತ್ತು ಕೇರಳದ ಅಡಿಕೆ ಮತ್ತು ಕೊಕ್ಕೊ ಬೆಳೆಗಾರರ ಸಂಘಟನೆಯಾಗಿರುವ ಕ್ಯಾಂಪ್ಕೊಗೆ 15 ವರ್ಷಗಳ ನಂತರ ಮತ್ತೆ ಚುನಾವಣೆ ನಡೆಯುತ್ತಿದೆ. 2010ರಲ್ಲಿ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ನಂತರದ ಎರಡು ಅವಧಿಗೆ ಎಲ್ಲ

ನ.23 ಕ್ಯಾಂಪ್ಕೋ‌ಗೆ ಚುನಾವಣೆ| 6 ಸ್ಥಾನಗಳಿಗೆ ಎಂಟು ಮಂದಿ ಕಣದಲ್ಲಿ Read More »