ಸಮಗ್ರ ಸಮಾಚಾರ

HDFC ಬ್ಯಾಂಕ್ ಮೇಲೆ 10 ಕೋಟಿ ದಂಡ ವಿಧಿಸಿದ ಆರ್‌ಬಿಐ

ನವದೆಹಲಿ: ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್‌ ಆದ ಹೆಚ್ ಡಿ ಎಫ್ ಸಿ  ಸಂಸ್ಥೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) 10 ಕೋಟಿ ರೂ.ಗಳ ದಂಡ ವಿಧಿಸಿದೆ. 1949ರ ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಈ ದಂಡವನ್ನು ವಿಧಿಸಲಾಗಿದೆ. ಬ್ಯಾಂಕಿನ ಥರ್ಡ್‌ ಪಾರ್ಟಿ ನಾನ್‌-ಫಿನಾನ್ಶಿಯಲ್‌ ಉತ್ಪನ್ನಗಳ ಮಾರ್ಕೆಟಿಂಗ್‌ ವಿಭಾಗದಲ್ಲಿ ಕೆಲವಾರು ಲೋಪಗಳಾಗಿರುವ ಬಗ್ಗೆ ದೂರುಗಳು ಬಂದಿದ್ದವು. ಬ್ಯಾಂಕಿನ ಆಟೊಮೊಬೈಲ್‌ ಸಾಲ ನೀಡುವಿಕೆಯಲ್ಲಿ ಕೆಲವಾರು ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಕಾರಣದಿಂದಾಗಿ […]

HDFC ಬ್ಯಾಂಕ್ ಮೇಲೆ 10 ಕೋಟಿ ದಂಡ ವಿಧಿಸಿದ ಆರ್‌ಬಿಐ Read More »

ಮಾಸ್ಕ್ ಧರಿಸದ ತಹಶೀಲ್ದಾರ್ ಗೆ ದಂಡ ವಿಧಿಸಿದ ಪೊಲೀಸರು

ಬೆಳಗಾವಿ  : ಮಾಸ್ಕ್ ಧರಿಸದ ತಹಶೀಲ್ದಾರ್ ಆರ್.ಕೆ. ಕುಲಕರ್ಣಿ ಅವರಿಗೆ ಪೊಲೀಸರು ದಂಡ ವಿಧಿಸಿದ ಘಟನೆ  ಬೆಳಗಾವಿ ಜಿಲ್ಲೆಯ ಲ್ಲಿ  ನಡೆದಿದೆ. ಹಶೀಲ್ದಾರ್ ಆರ್.ಕೆ. ಕುಲಕರ್ಣಿ ಸರಕಾರಿ ವಾಹನದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದರು. ಈ ವೇಳೆ ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿ  ಖಡೇ ಬಜಾರ್ ಪೊಲೀಸರು ತಪಾಸಣೆ ನಡೆಸುತ್ತಿದ್ದು, ತಹಶೀಲ್ದಾರ್ ಮಾಸ್ಕ್ ಧರಿಸದೆ ತೆರಳುತ್ತಿರುವುದನ್ನು ಕಂಡು ವಾಹನ ನಿಲ್ಲಿಸಿ ವಿಚಾರಿಸಿ 250ರೂ. ದಂಡವನ್ನು ವಿಧಿಸಿದ್ದಾರೆ. ಬಳಿಕ ದಂಡವನ್ನು ಪಾವತಿ ಮಾಡಿ ತಹಶೀಲ್ದಾರ್ ತೆರಳಿದ್ದಾರೆ. ಇನ್ನು ಇದೇ ವೇಳೆ ಮಾಸ್ಕ್

ಮಾಸ್ಕ್ ಧರಿಸದ ತಹಶೀಲ್ದಾರ್ ಗೆ ದಂಡ ವಿಧಿಸಿದ ಪೊಲೀಸರು Read More »

ಬೆಂಗಳೂರು ಅತ್ಯಾಚಾರ ಪ್ರಕರಣಕ್ಕೆ ಘಳಿಗೆಗೊಂದು ಟ್ವಿಸ್ಟ್ | ಸಂತ್ರಸ್ತೆಯ ಬಳಿಯಿದ್ದ ನಗದು ದೋಚಿದರೇ ಪೊಲೀಸರು…!?

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ದಾಖಲಾದ ನಿರ್ಭಯ ಮಾದರಿ ಅತ್ಯಾಚಾರ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ಇದೀಗ ಘಳಿಗೆಗೊಂದು ತಿರುವು ಪಡೆದುಕೊಳ್ಳುತ್ತಿದೆ. ಸಂತ್ರಸ್ತೆ ಮತ್ತು ಆರೋಪಿಗಳು ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದರು ಎಂಬ ಸುದ್ದಿ ಬಯಲಾದ ಬೆನ್ನಲ್ಲೇ ಇದೀಗ ಸಂತ್ರಸ್ತೆ ಬಳಿಯಿಂದ ಪೊಲೀಸರು ನಗದು ದೋಚಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಬೆಂಗಳೂರಿನಲ್ಲಿ ತಮ್ಮ ಕೈಸೇರಿದ್ದ, ಬಾಂಗ್ಲಾ ಮೂಲದ ಆರು ಜನ ಯುವಕರು, ಇಬ್ಬರು ಯುವತಿಯರೊಂದಿಗೆ ಸೇರಿ, ಒಳ ದ್ವೇಷದಿಂದ ತಮ್ಮ ಸ್ನೇಹಿತೆಯನ್ನೇ ಅತ್ಯಾಚಾರ ಮಾಡಿ ಆಕೆಯ ಗುಪ್ತಾಂಗಕ್ಕೆ ಮಧ್ಯದ ಬಾಟಲಿ

ಬೆಂಗಳೂರು ಅತ್ಯಾಚಾರ ಪ್ರಕರಣಕ್ಕೆ ಘಳಿಗೆಗೊಂದು ಟ್ವಿಸ್ಟ್ | ಸಂತ್ರಸ್ತೆಯ ಬಳಿಯಿದ್ದ ನಗದು ದೋಚಿದರೇ ಪೊಲೀಸರು…!? Read More »

ಗಂಡನ ಮೊಬೈಲ್​ ಚೆಕ್​ ಮಾಡುವ ಮಹಿಳೆಯರೇ ಎಚ್ಚರ..! | ಪತಿಯ ಮೊಬೈಲ್ ನೋಡಿದ ಪತ್ನಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್ !

ದುಬೈ: ಹೆಚ್ಚಿನ ಮಹಿಳೆಯರಿಗೆ ತಮ್ಮ ಪತಿಯ ಮೊಬೈಲನ್ನು ಚೆಕ್ಕಿಂಗ್ ಮಾಡುವ ಅಭ್ಯಾಸ ಇರುತ್ತದೆ.  ಅಂತಹವರಿಗೆ ಈ ವರದಿ ಎಚ್ಚರಿಕೆ ಘಂಟೆಯಾದಂತಿದೆ. ಹೌದು, ಇಲ್ಲೊಬ್ಬ ಮಹಿಳೆ ಗಂಡನ ವಿರುದ್ಧವೇ ಗೂಢಚರ್ಯೆ ಮಾಡುತ್ತಾ ಆತನ ಮೊಬೈಲ್​ ಅನ್ನು ಕದ್ದು-ಮುಚ್ಚಿ ನೋಡಿ ಅದರಲ್ಲಿದ್ದ ಖಾಸಗಿ ವಿಚಾರಗಳನ್ನ ಬಹಿರಂಗ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಈ ಘಟನೆ ದುಬೈನ ರಾಸ್​ ಅಲ್​ ಖೈಮಾದಲ್ಲಿ ನಡೆದಿದ್ದು, ಗಂಡನ ಮೊಬೈಲ್​ ಚೆಕ್​ ಮಾಡಿ ಆತನ ಪ್ರೈವಸಿಗೆ ಧಕ್ಕೆ ತಂದ ಪತ್ನಿಗೆ ಅಲ್ಲಿನ ಸಿವಿಲ್​ ಕೋರ್ಟ್​ 5,400

ಗಂಡನ ಮೊಬೈಲ್​ ಚೆಕ್​ ಮಾಡುವ ಮಹಿಳೆಯರೇ ಎಚ್ಚರ..! | ಪತಿಯ ಮೊಬೈಲ್ ನೋಡಿದ ಪತ್ನಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್ ! Read More »

ನಂದಿನಿ ಹಾಲು ಮಾರಾಟದಲ್ಲಿ ಇಳಿಕೆ ಹಿನ್ನಲೆ-ವಾರದಲ್ಲಿ ಎರಡು ದಿನ ಖರೀದಿ ಸ್ಥಗಿತ ಸಾಧ್ಯತೆ

ಬೆಂಗಳೂರು: ಲಾಕ್ ಡೌನ್ ಇರುವ ಪರಿಣಾಮ ನಂದಿನಿ ಹಾಲು ಮಾರಾಟ ಗಣನೀಯ ಕುಸಿತ ಕಂಡ ಹಿನ್ನಲೆಯಲ್ಲಿ, ಹಾಲು ಖರೀದಿ ಕಡಿಮೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಭಾರೀ ಪ್ರಮಾಣದಲ್ಲಿ ಹಾಲು ಉಳಿಯುತ್ತಿರುವ ಕಾರಣ ವಾರಕ್ಕೆ ಎರಡು ದಿನ ಹಾಲು ಖರೀದಿ ನಿಲ್ಲಿಸಲು ಕೆಎಂಎಫ್ ಚಿಂತನೆ ನಡೆಸಿದೆ. ಮೇ ಆರಂಭದಲ್ಲಿ ಪ್ರತಿದಿನ ಸುಮಾರು 70 ಲಕ್ಷ ಲೀಟರ್ ಹಾಲು ಬರುತ್ತಿತ್ತು. ಈ ವಾರ 88 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಖಾಸಗಿಯವರು ಹಾಲು ಖರೀದಿ ಕಡಿಮೆ ಮಾಡಿರುವುದರಿಂದ ಮತ್ತು ಜಾನುವಾರುಗಳಿಗೆ

ನಂದಿನಿ ಹಾಲು ಮಾರಾಟದಲ್ಲಿ ಇಳಿಕೆ ಹಿನ್ನಲೆ-ವಾರದಲ್ಲಿ ಎರಡು ದಿನ ಖರೀದಿ ಸ್ಥಗಿತ ಸಾಧ್ಯತೆ Read More »

ಮಂಗಳೂರು: ಅಕ್ರಮ ಚಿನ್ನ ಸಾಗಾಟ ಪತ್ತೆ

ಮಂಗಳೂರು : ವಿದೇಶದಿಂದ ಅಕ್ರಮವಾಗಿ ತರಲಾಗುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ ಅಧಿಕಾರಿಗಳು ವಶ ಪಡಿಸಿಕೊಂಡಿರುವ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಭಟ್ಕಳ ಮೂಲದ ಆರೋಪಿ ಸಿದ್ದಿಕ್ ಮಿಕ್ಡಾಮ್ ಹುಸೇನ್(27) ಬಂಧಿತ ಆರೋಪಿ. ಆತ ಏರ್ ಇಂಡಿಯಾ ಫ್ಲೈಟ್ ಐಎಕ್ಸ್ 384 ಮೂಲಕ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ವೇಳೆ ಕಸ್ಟಮ್ಸ್ ಪೊಲೀಸರು ಚಿನ್ನವನ್ನು ವಶಕ್ಕೆ ಪಡೆದು ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸುಮಾರು 13 ಲಕ್ಷ ರೂ.ಬೆಲೆ ಬಾಳುವ 262 ಗ್ರಾಂ

ಮಂಗಳೂರು: ಅಕ್ರಮ ಚಿನ್ನ ಸಾಗಾಟ ಪತ್ತೆ Read More »

ಮಂಗಳೂರು: ಭೀಕರ ರಸ್ತೆ ಅಪಘಾತ – ಇಬ್ಬರು ಮೃತ್ಯು, ಓರ್ವ ಗಂಭೀರ

ಮಂಗಳೂರು: ಇಂದು ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 75ರ ಅಡ್ಯಾರ್ ಎಂಬಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಮೃತಪಟ್ಟವರನ್ನು ಪುದು ಗ್ರಾಮದ ಅಮೆಮಾರ್ ನಿವಾಸಿ ದಾವೂದ್(22) ಹಾಗೂ ಕುಂಜತ್ಕಲ ನಿವಾಸಿ ಉನೈಸ್(27) ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಫರಂಗಿಪೇಟೆ ಕಡೆಗೆ ಬರುತ್ತಿದ್ದ ಓಮ್ನಿ ಕಾರು ಚಾಲಕನ ನಿಯಂತ್ರಣ ತಪ್ಪಿ ಅಡ್ಯಾರ್ ಮಾಂಡೋವಿ ಕಾರು ಶೋ ರೂಂ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್ ಲಾರಿಗೆ ಢಿಕ್ಕಿ ಹೊಡದಿದ್ದು, ಅಪಘಾತದ ತೀವ್ರತೆಗೆ ಓಮ್ನಿ ಸಂಫೂರ್ಣ

ಮಂಗಳೂರು: ಭೀಕರ ರಸ್ತೆ ಅಪಘಾತ – ಇಬ್ಬರು ಮೃತ್ಯು, ಓರ್ವ ಗಂಭೀರ Read More »

ಭಾರತರತ್ನ ಸಿಎನ್ಆರ್ ರಾವ್ ಗೆ ಪ್ರತಿಷ್ಟಿತ ಇಎನ್ಐ ಪುರಸ್ಕಾರ

ಬೆಂಗಳೂರು: ಭಾರತ ರತ್ನ ಪುರಸ್ಕೃತ ವಿಜ್ಞಾನಿ  ಸಿ.ಎನ್.ಆರ್ ರಾವ್ ಪ್ರತಿಷ್ಠಿತ ಅಂತಾರಾಷ್ಟ್ರೀಯ ಇಎನ್ ಐ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಇಂಧನ ಸಂಗ್ರಹಣೆಯ ಸಂಶೋಧನೆಗಾಗಿ ಈ ಪ್ರಶಸ್ತಿ ಸಂದಿದೆ  ಎಂದು ಕೇಂದ್ರ  ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. ಶಕ್ತಿ ಸಂಶೋಧನೆಯಲ್ಲಿ ನೊಬೆಲ್ ಪ್ರಶಸ್ತಿ ಎಂದು ಗುರುತಿಸಲಾಗಿರುವಇದನ್ನು ಎನರ್ಜಿ ಫ್ರಾಂಟಿಯರ್ ಪ್ರಶಸ್ತಿ ಎಂದು ಕರೆಯಲಾಗುತ್ತದೆ. ರೋಮ್ ನಲ್ಲಿ ಮುಂಬರುವ ಅಕ್ಟೋಬರ್ 14 ರಂದು ನಡೆಯಲಿರುವ ಸಮಾರಂಭದಲ್ಲಿ ಅಧಿಕೃತವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು

ಭಾರತರತ್ನ ಸಿಎನ್ಆರ್ ರಾವ್ ಗೆ ಪ್ರತಿಷ್ಟಿತ ಇಎನ್ಐ ಪುರಸ್ಕಾರ Read More »

ಸುಳ್ಯ: ಪಿಡಿಓ ಕಂಡು ಪರಾರಿಯಾದ ಆಟಗಾರರು | ಬ್ಯಾಟ್ ಬಾಲ್ ವಶ

ಸುಳ್ಯ: ಲಾಕ್ ಡೌನ್ ನಿಯಮ ಉಲ್ಲಂಘಿಸಿ ಮೈದಾನದಲ್ಲಿ, ಕ್ರಿಕೆಟ್ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪಿಡಿಒ ದಾಳಿ ನಡೆಸಿದ್ದು, ಇದನ್ನರಿತ ಯುವಕರು ಸ್ಥಳದಿಂದ ಕಾಲ್ಕಿತ ಘಟನೆ ವರದಿಯಾಗಿದೆ. ಜಿಲ್ಲೆಯಲ್ಲಿ ಕ್ರಿಕೆಟ್, ವಾಲಿಬಾಲ್ ಆಡುತ್ತಿರುವ ಬಗ್ಗೆ ಇತ್ತೀಚೆಗೆ ಸಾಕಷ್ಟು ದೂರುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಠಾಣೆಗಳ ಸಿಬ್ಬಂದಿಗಳು ನಿಗಾ ವಹಿಸುವಂತೆ ಸೂಚಿಸಲಾಗಿತ್ತು.ಈ ನಡುವೆ ಇದ್ಯವುದಕ್ಕೂ ಕ್ಯಾರೇ ಅನ್ನದೇ ನಿಯಮ ಉಲ್ಲಂಘಿಸಿ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯುವಕರು, ಬಾಲಕರು ಗುಂಪು ಸೇರಿ ಭರ್ಜರಿಯಾಗಿ ಕ್ರಿಕೆಟ್

ಸುಳ್ಯ: ಪಿಡಿಓ ಕಂಡು ಪರಾರಿಯಾದ ಆಟಗಾರರು | ಬ್ಯಾಟ್ ಬಾಲ್ ವಶ Read More »

ಕೊರೋನಾ ತಡೆಯಲು ಹಾವು ತಿಂದ ಭೂಪ ಪರಿಸರ ಪ್ರೇಮಿಗಳ ಆಕ್ರೋಶದ ಬೆನ್ನಲ್ಲೇ ಖಾಕಿ ಬಲೆಗೆ

ಚೆನ್ನೈ: ಕೊರೊನಾ ಸೋಂಕು ತಗಲಬಹುದು ಎಂದು ಸರಕಾರ ಹೋರಾಡುತ್ತಿರುವ ಬೆನ್ನಲ್ಲಿ ಹಲವು ಮಂದಿ ತಮ್ಮ ತಮ್ಮದೇ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಇದರ ನಡುವೆ ಹೊಸ ಹೊಸ ಅನ್ವೇಷಣೆಗಳು ಸಹ ನಡೆಯುತ್ತಿವೆ. ಇದೇ ಉದ್ದೇಶದಿಂದ ಹಾವೊಂದನ್ನು ತಿಂದ ತಮಿಳುನಾಡಿನ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ತಿರುನೆಲ್ವೇಲಿ ಜಿಲ್ಲೆಯ ಪೆರುಮಲ್ಪತ್ತಿ ಗ್ರಾಮದ ವಡಿವೇಲ್ ಎಂಬಾತನೇ ಹಾವು ತಿಂದ ಭೂಪ. ತಾನು ಹಾವು ತಿನ್ನುವುದನ್ನು ವಿಡಿಯೋ ಮಾಡಿಸಿರುವ ಈತ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪರಿಸರ

ಕೊರೋನಾ ತಡೆಯಲು ಹಾವು ತಿಂದ ಭೂಪ ಪರಿಸರ ಪ್ರೇಮಿಗಳ ಆಕ್ರೋಶದ ಬೆನ್ನಲ್ಲೇ ಖಾಕಿ ಬಲೆಗೆ Read More »