ಸಮಗ್ರ ಸಮಾಚಾರ

ಈ ವಾರ ನಿಮ್ಮ ಭವಿಷ್ಯ

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1) ಮುಂದಿನ ಬದುಕಿನ ಬಗ್ಗೆ ಸ್ವಲ್ಪ ಚಿಂತೆ ಮಾಡುವಿರಿ. ಸರಿಯಾದ ನಿರ್ಣಯದಿಂದ ಮುಂದಿನ ಬದುಕಿಗೊಂದು ದಾರಿ ಕಂಡುಕೊಳ್ಳುವಿರಿ. ಕಾರ್ಯಕ್ಷೇತ್ರದಲ್ಲಿ ಸ್ನೇಹಿತರಿಂದ ಮತ್ತು ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ದೊರೆತು ನೆಮ್ಮದಿ ಕಾಣುವಿರಿ. ಹಿರಿಯರಿಂದ ಬಂದ ಸಲಹೆಗಳನ್ನು ನಿರಾಕರಿಸಬೇಡಿ. ದಿಢೀರ್‌ ಶ್ರೀಮಂತರಾಗಲು ಹೋಗಿ ಅಪಕೀರ್ತಿ ಸಂಭವಿಸಬಹುದು. ಪ್ರೀತಿಪಾತ್ರರು ನಿಮ್ಮ ನಿರ್ಧಾರದ ವಿರುದ್ಧ ತಗಾದೆ ತೆಗೆಯಬಹುದು. ಬುದ್ಧಿಮತ್ತೆಯಿಂದ ಕಾರ್ಯತಂತ್ರಗಳನ್ನು ರೂಪಿಸಿದಲ್ಲಿ ಕೆಲಸಗಳಲ್ಲಿ ಯಶಸ್ಸನ್ನು ಕಾಣಬಹುದು. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಮನೆಯಲ್ಲಿ ಇದ್ದಂತಹ […]

ಈ ವಾರ ನಿಮ್ಮ ಭವಿಷ್ಯ Read More »

ಜೂ.7ರ ನಂತರ ರಾಜ್ಯದಲ್ಲಿ ಲಾಕ್ ಡೌನ್ ಕಂಟಿನ್ಯೂ. ಸಿಎಂ ಹೇಳಿದ್ದೇನು?

ಬೆಂಗಳೂರು : ಜೂನ್ 7 ರ ನಂತರ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಸುವ ಕುರಿತಂತೆ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ಜನರು ಸಹಕರಿಸಿದರೆ ಲಾಕ್‌ಡೌನ್ ಮುಂದುವರಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ತಿಳಿಸಿರುವ ಅವರು ಗೃಹ ಕಚೇರಿ ಕೃಷ್ಣದಲ್ಲಿ ಐದು ಜಿಲ್ಲೆಗಳ ಜನಪ್ರತಿನಿಗಳ ಜೊತೆ ಸಭೆ ನಡೆಸಿ ಬಳಿಕ ಮಾತನಾಡಿದರು. ಲಾಕ್​ಡೌನ್ ಜೂನ್ 7ರವರೆಗೂ ಮುಂದುವರೆಯಲಿದ್ದು, ಅಲ್ಲಿಯವರೆಗೂ ಇರುತ್ತದೆ. ಅಲ್ಲಿವರೆಗೂ ಬಿಗಿಯಾದ ಕ್ರಮ ಮುಂದುವರೆಯಲಿದೆ. ಕೊರೊನಾ ಕಡಿಮೆ ಆದರೆ ಲಾಕ್​ಡೌನ್ ಮುಂದುವರಿಸುವುದಿಲ್ಲ. ಜನ ಸಹಕರಿಸಿದರೆ ಲಾಕ್​ಡೌನ್ ಮುಂದುವರೆಸುವ ಪ್ರಶ್ನೆಯೇ

ಜೂ.7ರ ನಂತರ ರಾಜ್ಯದಲ್ಲಿ ಲಾಕ್ ಡೌನ್ ಕಂಟಿನ್ಯೂ. ಸಿಎಂ ಹೇಳಿದ್ದೇನು? Read More »

ಅಗೆದಷ್ಟು ಆಳ ಬೆಂಗಳೂರು ಗ್ಯಾಂಗ್ ರೇಪ್ ಪ್ರಕರಣ | ಸಂತ್ರಸ್ತೆ ಭಾರತದಲ್ಲಿ ಅಂತರ್ರಾಜ್ಯ ವೇಶ್ಯಾವಾಟಿಕೆ ಕಿಂಗ್ ಪಿನ್…!? | ಬಾಂಗ್ಲಾ ಪ್ರಜೆಗಳಿಗೆ ಬೆಂಗ್ಳೂರಲ್ಲಿ ಆಧಾರ್….?

ಬೆಂಗಳೂರು: ರಾಮಮೂರ್ತಿ ನಗರ ಸಾಮೂಹಿಕ ಅತ್ಯಾಚಾರ ಎಸಗಿ ವಿಡಿಯೋ ವೈರಲ್ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದ ಆರೋಪಿಗಳ ಬಳಿ ಆಧಾರ ಕಾರ್ಡ್ ಪತ್ತೆಯಾಗಿದೆ. ಆದರೆ ಈ ಬಾಂಗ್ಲಾ ಪ್ರಜೆಗಳಿಗೆ ಆಧಾರ ಕಾರ್ಡ್ ಸಿಕ್ಕಿದ್ದು ಹೇಗೆ..? ಎಂಬುದನ್ನು ಬೆಂಗಳೂರು ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅದರ ಬೆನ್ನು ಬಿದ್ದಿದ್ದಾರೆ. ಅಕ್ರಮವಾಗಿ ಆಧಾರ ಕಾರ್ಡ್ ಮಾಡಿಕೊಟ್ಟವರಿಗಾಗಿ ವಿಶೇಷ ತಂಡ ರಚಿಸಿ ಶೋಧ ಆರಂಭಿಸಿದ್ದಾರೆ. ಇದರ ಹಿಂದೆ ವ್ಯವಸ್ಥಿತ ಅಕ್ರಮ ಜಾಲ ಕೆಲಸ ಮಾಡಿದ್ದರ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಅಕ್ರಮವಾಗಿ ಬಾಂಗ್ಲಾದಿಂದ

ಅಗೆದಷ್ಟು ಆಳ ಬೆಂಗಳೂರು ಗ್ಯಾಂಗ್ ರೇಪ್ ಪ್ರಕರಣ | ಸಂತ್ರಸ್ತೆ ಭಾರತದಲ್ಲಿ ಅಂತರ್ರಾಜ್ಯ ವೇಶ್ಯಾವಾಟಿಕೆ ಕಿಂಗ್ ಪಿನ್…!? | ಬಾಂಗ್ಲಾ ಪ್ರಜೆಗಳಿಗೆ ಬೆಂಗ್ಳೂರಲ್ಲಿ ಆಧಾರ್….? Read More »

ತವರು ಜಿಲ್ಲೆಗೆ ತೆಲಂಗಾಣ ಎನ್ಕೌಂಟರ್ ಖ್ಯಾತಿಯ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ ನೆರವು

ಗದಗ: ತನ್ನ ತವರು ಜಿಲ್ಲೆ ಗದಗಕ್ಕೆ ತೆಲಂಗಾಣದಲ್ಲಿ ಪಶು ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ ಆರೋಪಿಗಳನ್ನು ಎನ್‌ಕೌಂಟರ್‌ ಮಾಡುವ ಮೂಲಕ ದೇಶದ ಗಮನ ಸೆಳೆದಿದ್ದ ಕರ್ನಾಟಕ ಮೂಲದ ಹಿರಿಯ ಐಪಿಎಸ್‌ ಅಧಿಕಾರಿ ವಿಶ್ವನಾಥ ಸಜ್ಜನರ ಅವರು ನೆರವು ನೀಡಿದ್ದಾರೆ. ಕೋವಿಡ್‌ ಸಂಕಷ್ಟದ ಸಮಯದಲ್ಲಿ ಗದಗ ಜಿಲ್ಲೆಗೆ ಸುಮಾರು 40 ಲಕ್ಷ ರೂ ಮೌಲ್ಯದ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸುವ ಮೂಲಕ ಸಹಾಯಹಸ್ತ ಚಾಚಿದ್ದಾರೆ. ಅವರು 22 ಆಕ್ಸಿಜನ್‌ ಕಾನ್ಸಂಟ್ರೇಟರ್‌, 84 ಆಕ್ಸಿಜನ್‌ ಸಿಲಿಂಡರ್‌, 2000 ಕೋವಿಡ್‌

ತವರು ಜಿಲ್ಲೆಗೆ ತೆಲಂಗಾಣ ಎನ್ಕೌಂಟರ್ ಖ್ಯಾತಿಯ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ ನೆರವು Read More »

ನಾನೇ ಈ ರೀತಿ ಪರದಾಡಬೇಕಾದ್ರೆ ಜನಸಾಮಾನ್ಯರ ಕಥೆಯೇನು…?: ಸಿದ್ದರಾಮಯ್ಯ

ಬೆಂಗಳೂರು: ಕೊರೊನಾ ಸೋಂಕಿಗೆ ಲಸಿಕೆ ನೀಡಲು ಸರಕಾರ ಖಾಸಗಿಯವರಿಗೆ ಅವಕಾಶ ನೀಡಿದೆ. ಆದರೆ ಇದನ್ನೇ ಬಂಡವಾಳವಾಗಿ ಬಳಸಿಕೊಂಡಿರುವ ಖಾಸಗಿ ಆಸ್ಪತ್ರೆಗಳು ಜನರಿಂದ ಹಣ ಲೂಟಿ ಹೊಡೆಯುತ್ತಿವೆ. ಒಂದೊಂದು ಆಸ್ಪತ್ರೆಯಲ್ಲೂ ಲಸಿಕೆಗೆ ಒಂದೊಂದು ದರವಿದೆ ಎಂದು ಆರೋಪಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಲಸಿಕೆಗಳಿಗೆ ಏಕರೂಪದ ದರ ನಿಗದಿ ಮಾಡಲೇಬೇಕು ಎಂದು ಆಗ್ರಹಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಮಾತನಾಡಿದ ಸಿದ್ದರಾಮಯ್ಯ, “ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಒಂದೊಂದು ರೀತಿ ದರವಿದೆ. ೯೦೦ರೂ ಇಂದ ೧೨೫೦ರೂವರೆಗೆ ದರ ನಿಗದಿ

ನಾನೇ ಈ ರೀತಿ ಪರದಾಡಬೇಕಾದ್ರೆ ಜನಸಾಮಾನ್ಯರ ಕಥೆಯೇನು…?: ಸಿದ್ದರಾಮಯ್ಯ Read More »

ಕಾಪು: ಟಿಪ್ಪರ್ ಢಿಕ್ಕಿ ರಿಕ್ಷಾ ಚಾಲಕ ಮೃತ್ಯು

ಕಾಪು: ಆಟೋಗೆ ಟಿಪ್ಪರ್ ಢಿಕ್ಕಿಯಾಗಿ ಆಟೋ ಚಾಲಕ ಮೃತಪಟ್ಟ ಘಟನೆ ಇಂದು ಇಲ್ಲಿನ ಶಿರ್ವ ರಸ್ತೆಯ ಮಲ್ಲಾರು ಗ್ರಾಮದ ಸ್ವಾಗತನಗರ ಬಳಿ ನಡೆದಿದೆ.ಉಡುಪಿಯ ಮಧ್ವನಗರ ಕೊಡುವೂರು ನಿವಾಸಿ ಶಾವೂರು (೪೦) ಮೃತಪಟ್ಟವರು. ಇವರು ಶಾವೂರು ಫಕೀರಣ ಕಟ್ಟೆಗೆ ಆಗಮಿಸಿ ತಮ್ಮ ಆಟೋರಿಕ್ಷಾದಲ್ಲಿ ಹಿಂತಿರುಗುತ್ತಿದ್ದ ವೇಳೆ ಟಿಪ್ಪರ್ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು: ಟಿಪ್ಪರ್ ಢಿಕ್ಕಿ ರಿಕ್ಷಾ ಚಾಲಕ ಮೃತ್ಯು Read More »

ಕೊರೋನಾದಿಂದ ಅನಾಥರಾದ ಮಕ್ಕಳಿಗಾಗಿ “ಬಾಲಸೇವಾ ಯೋಜನೆ” ಜಾರಿ: ಬಿಎಸ್ ವೈ

ಬೆಂಗಳೂರು: ಕೊರೊನಾಗೆ ತುತ್ತಾಗಿ ಮೃತ್ತಪಟ್ಟವರ ಮಕ್ಕಳಿಗೆ ಬಾಲ ಸೇವಾ ಯೋಜನೆಯಡಿ ಮಾಸಿಕ 3,500 ರೂ. ಹಾಗು ಹಲವು ಸೌಲಭ್ಯಗಳನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ತಂದೆ-ತಾಯಿ ಕಳೆದುಕೊಂಡು ತಬ್ಬಲಿಯಾದ ಮಕ್ಕಳ ಕಲ್ಯಾಣಕ್ಕಾಗಿ ಈ ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಮಕ್ಕಳ ಪಾಲನೆ, ಪೋಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಯೋಜನೆಯ ಪ್ರಕಾರ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಿಂಗಳಿಗೆ 3500 ರೂ. ಸಹಾಯಧನ ನೀಡಲಾಗುವುದುಪೋಷಕರಿಲ್ಲದ ಮಕ್ಕಳಿಗೆ ನೋಂದಾಯಿತ ಪಾಲನ ಸಮಿತಿಯಲ್ಲಿ

ಕೊರೋನಾದಿಂದ ಅನಾಥರಾದ ಮಕ್ಕಳಿಗಾಗಿ “ಬಾಲಸೇವಾ ಯೋಜನೆ” ಜಾರಿ: ಬಿಎಸ್ ವೈ Read More »

ಆಕೆಯ ಸಹವಾಸವೇ ಆತನಿಗೆ ಮುಳುವಾಯ್ತು: ಪಾಶವಾದ ಪರಸ್ತ್ರೀ ಪ್ರೇಮ!

ಮುಂಬೈ: ಕೆಲವೊಮ್ಮೆ ನಮ್ಮ ಆಸೆಗಳೇ ನಮಗೆ ತಿರುಗುಬಾಣವಾಗುತ್ತವೆ ಎನ್ನುವುದಕ್ಕೆ ಈ ಸ್ಟೋರಿ ಬೆಸ್ಟ್ ಎಕ್ಸಾಂಪಲ್. ಇಲ್ಲೊಬ್ಬನ ಅಕ್ರಮ ಸಂಬಂಧವೇ ಆತನ ಸಾವಿಗೆ ಕಾರಣವಾದ ಘಟನೆ ನಡೆದಿದೆ. ಪ್ರೇಮಪಾಶಕ್ಕೆ ತಾನೇ ಬಲಿಯಾದ ಘಟನೆ ನಡೆದಿರುವುದು ಇಲ್ಲಿನ ಖುಮ್ ಗಾಂವ್ ಎಂಬಲ್ಲಿ. ಮಹಾರಾಷ್ಟ್ರದ ಖಮ್‌ಗಾಂವ್ ತಾಲೂಕಿನ ಪಹುರ್ಜಿರಾ ನಿವಾಸಿ ಪ್ರಭುದಾಸ್ ಬೋಲೆಗೆ ಮದುವೆಯಾಗಿತ್ತು. ಆದರೆ ಹೆಂಡತಿಯೊಂದಿಗಿನ ಸಂಬಂಧ ಸಾಕಾಗದ ಆತ ವಿಧವೆ ಶಿಕ್ಷಕರಿಯೊಬ್ಬರ ಅಕ್ರಮ ಸಂಬಂಧದ ಬಲೆಗೆ ಬಿದ್ದಿದ್ದಾನೆ. ಮೊದ ಮೊದಲು ಸ್ನೇಹದ ರೂಪದಲ್ಲಿ ಆರಂಭವಾದ ಅವರ ಸಂಬಂಧ ಕೊನೆಗೆ

ಆಕೆಯ ಸಹವಾಸವೇ ಆತನಿಗೆ ಮುಳುವಾಯ್ತು: ಪಾಶವಾದ ಪರಸ್ತ್ರೀ ಪ್ರೇಮ! Read More »

ಒಂದು ಲೀಟರ್ ಹಾಲಿಗೆ 40ml ಹಾಲು ಫ್ರೀ: ದ.ಕ ಹಾಲು ಒಕ್ಕೂಟ

ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಯ ಹಾಲು ಗ್ರಾಹಕರಿಗೆ ದ.ಕ. ಹಾಲು ಒಕ್ಕೂಟ ಸಿಹಿ ಸುದ್ದಿ ನೀಡಿದ್ದು, ನಂದಿನಿ ಪ್ಯಾಕೆಟ್ ಜೊತೆ ಹೆಚ್ಚುವರಿ ಹಾಲು ನೀಡಲು ನಿರ್ಧರಿಸಿದೆ. ಕೋವಿಡ್‌ ಸಂಕಷ್ಟದ ನಡುವೆಯೂ ಹೈನುಗಾರರಿಗೆ ನೆರವಾಗಲು, ಮತ್ತು ಅಧಿಕ ಶೇಕರಣೆ ತಗ್ಗಿಸಲು ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟ ನಿರ್ಧರಿಸಿದ್ದು, ಜೂನ್‌ 1ರಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಾಲು ಖರೀದಿಸುವವರಿಗೆ ಲೀಟರ್‌ಗೆ ಹೆಚ್ಚುವರಿ ಹಾಲನ್ನು ಕೊಡುಗೆಯಾಗಿ ನೀಡಲಿದೆ. ಅರ್ಧ ಲೀಟರ್‌ ಹಾಲಿಗೆ 20 ಎಂ.ಎಲ್‌. 1

ಒಂದು ಲೀಟರ್ ಹಾಲಿಗೆ 40ml ಹಾಲು ಫ್ರೀ: ದ.ಕ ಹಾಲು ಒಕ್ಕೂಟ Read More »

ಕೋವಿಡ್ ರೋಗಿಗಳಲ್ಲಿ ಅಲ್ಲ ಸೋಂಕಿತರಿಗೆ ನೀಡಿದ ಚಪಾತಿಯಲ್ಲಿ ವೈಟ್ ಫಂಗಸ್…..!

ಬೆಂಗಳೂರು: ಈವರೆಗೆ ಕೊರೋನಾ ಸೋಂಕಿತರಲ್ಲಿ ಪತ್ತೆಯಾಗಿದ್ದ ವೈಟ್ ಫಂಗಸ್ ಇಂದು ಕೋವಿಡ್​ ಕೇರ್​ ಸೆಂಟರ್​ನ ಚಪಾತಿಯಲ್ಲಿಯೇ ಕಾಣಿಸಿಕೊಂಡಿದೆ. ಈ ಫಂಗಸ್ ನೋಡಿ ಕ್ವಾರಂಟೈನ್ ನಲ್ಲಿದ್ದವರು ಶಾಕ್ ಆಗಿದ್ದಾರೆ. ಹೌದು ಈಗಾಗಲೇ ಕೊರೋನಾ ರೋಗಿಗಳನ್ನು ಹಿಂಡಿ ಹಿಪ್ಪೆ ಮಾಡಿರುವ ಫಂಗಸ್​ ನಿನ್ನೆ ರಾತ್ರಿ ಕೋರಮಂಗಲದ ಕೋವಿಡ್ ಕೇರ್ ಸೆಂಟರ್ ನಲ್ಲಿದ್ದ ಸೋಂಕಿತರಿಗೆ ನೀಡಲಾದ ಚಪಾತಿಯಲ್ಲಿ ಕಂಡುಬಂದಿದೆ. ಇದು ಕೋವಿಡ್ ನಿಗ್ರಹ ವಿಚಾರದಲ್ಲಿ ಬಿಬಿಎಂಪಿ ಬೇಜವಾಬ್ದಾರಿತನವನ್ನು ಮತ್ತೆ ಎತ್ತಿ ತೋರಿಸಿದೆ. ಈ ಘಟನೆ, ಇಂತಹ ಊಟವನ್ನು ಸೇವಿಸ ಬೇಕಾ ಅಥವಾ

ಕೋವಿಡ್ ರೋಗಿಗಳಲ್ಲಿ ಅಲ್ಲ ಸೋಂಕಿತರಿಗೆ ನೀಡಿದ ಚಪಾತಿಯಲ್ಲಿ ವೈಟ್ ಫಂಗಸ್…..! Read More »