ಸಮಗ್ರ ಸಮಾಚಾರ

ಜೂ.15ಕ್ಕೆ ಬರಲಿದೆ ಇಪ್ಕೋ ನ್ಯಾನೋ ಯೂರಿಯಾ: ಡಿ.ವಿ

ನವದೆಹಲಿ(ಮೇ 30): ಸಹಕಾರಿ ವಲಯದ ರಸಗೊಬ್ಬರ ಕಂಪನಿ ಇಫ್ಕೋ ಅಭಿವೃದ್ಧಿಸಿರುವ ನ್ಯಾನೋ-ಯೂರಿಯಾ ರಸಗೊಬ್ಬರವು ಕೃಷಿಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಉಂಟುಮಾಡಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.ನ್ಯಾನೋ-ಯುರಿಯಾ ಉಪಯೋಗದ ಬಗ್ಗೆ ಇಫ್ಕೋ ಸಂಸ್ಥೆಯವರು ಶನಿವಾರ ಏರ್ಪಡಿಸಿದ್ದ ವೆಬ್ಬಿನಾರ್ ಚರ್ಚೆಯನ್ನು ಉದ್ಘಾಟಿಸಿ ಮಾತನಾಡಿದ ಸದಾನಂದ ಗೌಡ, ಅವರು ಇದು ಪರಿಸರ ಸ್ನೇಹಿಯಾಗಿದ್ದು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು. ನ್ಯಾನೋ ರಸಗೊಬ್ಬರದಿಂದ ಸಾಗುವಳಿ ವೆಚ್ಚದಲ್ಲಿ ಸುಮಾರು 15 ಪ್ರತಿಶತ ಕಡಿಮೆಯಾಗಲಿದೆ. ಇನ್ನು ಇಳುವರಿಯಲ್ಲಿ 15ರಿಂದ […]

ಜೂ.15ಕ್ಕೆ ಬರಲಿದೆ ಇಪ್ಕೋ ನ್ಯಾನೋ ಯೂರಿಯಾ: ಡಿ.ವಿ Read More »

‘ತಂಬಾಕಿಗೆ ಹೇಳಬೇಕು ನೀನಿನ್ನು ಸಾಕು’ ತಂಬಾಕಿನ ವಿಷಪಾನದಿಂದ ಮುಕ್ತರಾಗೋಣ

ಮೇ 31 ವಿಶ್ವ ತಂಬಾಕು ರಹಿತ ದಿನ. ‘ಜೀವನ ಜಯಿಸಲು ತಂಬಾಕು ತ್ಯಜಿಸಿ’ (quit tobacco to be a winner) ಈ ಬಾರಿಯ ಘೋಷವಾಕ್ಯ. ಹಿಂದೆಂದಿಗಿಂತಲೂ ಈ ಬಾರಿಯ ಘೋಷವಾಕ್ಯ ಹೆಚ್ಚು ಅರ್ಥಪೂರ್ಣವಾಗಿದೆ. ಇಂದಿನ ಕೋವಿಡ್‌ ಸನ್ನಿವೇಶದಲ್ಲಿ ಧೂಮಪಾನ ಮತ್ತು ತಂಬಾಕು ಸೇವನೆಯಿಂದ ಮುಕ್ತಿ ಪಡೆಯುವುದು ಬಹಳ ಅಗತ್ಯ ಮತ್ತು ಅನಿವಾರ್ಯ ಕ್ರಮವಾಗಿದೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಅಷ್ಟೆ ಅಲ್ಲ, ಧೂಮಪಾನ ಮತ್ತು ತಂಬಾಕು ಸೇವನೆಯನ್ನು ತ್ಯಜಿಸಲು ನೂರಾರು ಕಾರಣ, ಅಂತಹ ಹಲವು ಕಾರಣಗಳನ್ನು

‘ತಂಬಾಕಿಗೆ ಹೇಳಬೇಕು ನೀನಿನ್ನು ಸಾಕು’ ತಂಬಾಕಿನ ವಿಷಪಾನದಿಂದ ಮುಕ್ತರಾಗೋಣ Read More »

ವಿರುಷ್ಕಾ ಅಭಿಮಾನಿಗಳಿಗೆ ವಮಿಕಾಳ ಮುದ್ದು ಮುಖ ತೋರಿಸೋದ್ಯಾವಾಗ…?

ನವದೆಹಲಿ: ಲಾಕ್ ಡೌನ್ ನಲ್ಲಿ ತಮ್ಮ ಮುದ್ದು ಮಗಳ ಜೊತೆ ಎಂಜಾಯ್ ಮಾಡುತ್ತಿರುವ ವಿರುಷ್ಕಾ ದಂಪತಿಗೆ ಅಭಿಮಾನಿಯೊಬ್ಬರು ಪ್ರಶ್ನೆಯೊಂದನ್ನು ಕೇಳಿದ್ದಾರೆ. ನಿಮ್ಮ ಮಗುವಿನ ಮುದ್ದು ಮುಖವನ್ನು ನಮಗೆಂದು ತೋರಿಸುತ್ತೀರಿ ಎಂದು ಕೇಳಿದ ಅಭಿಮಾನಿಗಳಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮುದ್ದಾದ ಉತ್ತರವೊಂದವೊಂದನ್ನು ನೀಡಿದ್ದಾರೆ. ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ತಾರೆ ಅನುಷ್ಕಾ ಶರ್ಮ ಅವರ ಅಸಂಖ್ಯಾತ ಅಭಿಮಾನಿಗಳಿಗೆ, ಮೂರು ತಿಂಗಳ ಹಿಂದೆ ಜನಿಸಿದ ಅವರ ಮುದ್ದಾದ ಮಗಳು ಈಗ ಹೇಗಿದ್ದಾಳೆ ಅನ್ನೋ ಕುತೂಹಲ ಇದೆ. ಲಾಕ್ಡೌನ್

ವಿರುಷ್ಕಾ ಅಭಿಮಾನಿಗಳಿಗೆ ವಮಿಕಾಳ ಮುದ್ದು ಮುಖ ತೋರಿಸೋದ್ಯಾವಾಗ…? Read More »

ಕೋವಿಡ್ ರೂಲ್ಸ್ ಗಿಂತ ಮೋದಿ ಸರ್ಕಾರದ ಏಳನೇ ವರ್ಷಚಾರಣೆಯೇ ಮೇಲಾಯ್ತು ಈ ಸಂಸದರಿಗೆ…! | ತಮ್ಮದೇ ರೂಲ್ಸ್ ಬ್ರೇಕ್ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷರು

ಮಂಗಳೂರು: ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರಗಳು, ಸ್ಥಳೀಯ ಆಡಳಿತಗಳು ಅಗತ್ಯ ಸಭೆ ನಡೆಸಲು ಅಗತ್ಯ ಸಚಿವರುಗಳು ಮತ್ತು ಅಧಿಕಾರಿಗಳನ್ನು ಸೇರಿಸಿಕೊಳ್ಳುವುದು ಹೇಗೆ ಎಂದು ಚಿಂತೆ ಮಾಡುತ್ತಿದ್ದರೆ ಇಲ್ಲೊಬ್ಬ ಸಂಸದರು ತಮ್ಮ ಪಕ್ಷದ ಕಾರ್ಯಕ್ರಮಕ್ಕೆ ತಮ್ಮದೇ ಸರ್ಕಾರದ ನಿಯಮ ಮೀರಿ ಜನ ಸೇರಿಸಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಸಮಾರಂಭ ನಡೆಸಿರುವ ಘಟನೆ ನಡೆದಿದೆ. ಹೇಳಿ ಕೇಳಿ ಇವ್ರು ಬಿಜೆಪಿ ರಾಜ್ಯಾಧ್ಯಕ್ಷರು, ಜೊತೆಗೆ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್. ಇವ್ರು ಮಂಗಳೂರಿನ ಸರಕಾರಿ ಶಾಲೆಯೊಂದರಲ್ಲಿ

ಕೋವಿಡ್ ರೂಲ್ಸ್ ಗಿಂತ ಮೋದಿ ಸರ್ಕಾರದ ಏಳನೇ ವರ್ಷಚಾರಣೆಯೇ ಮೇಲಾಯ್ತು ಈ ಸಂಸದರಿಗೆ…! | ತಮ್ಮದೇ ರೂಲ್ಸ್ ಬ್ರೇಕ್ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷರು Read More »

ಯಡಿಯೂರಪ್ಪನವರು ಪಕ್ಷಾಂತರ ಮಾಡಿ ಮುಖ್ಯಮಂತ್ರಿಯಾಗಿಲ್ಲ| ಸಿದ್ದರಾಮಯ್ಯಗೆ ನಳಿನ್ ತಿರುಗೇಟು

ಮಂಗಳೂರು: ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಬಳಿಕ ಸಮರ್ಥ ನಾಯಕನಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ, “ಯಡಿಯೂರಪ್ಪ ಸರ್ವ ಸಮ್ಮತಿಯ ನಾಯಕ, ಪಕ್ಷಾಂತರ ಮಾಡಿ ಮುಖ್ಯಮಂತ್ರಿಯಾಗಿಲ್ಲ” ಎಂದು ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರು ಮುಂದೆ ಎಲ್ಲಿದ್ರು…?, ಯಾರು ಅವರ ಗುರು ಆಗಿದ್ರು….?, ಕಾಂಗ್ರೆಸ್ ಗೆ ಬೈದು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡು ಮುಖ್ಯಮಂತ್ರಿ ಆಗಿದ್ದನ್ನು ಜಗತ್ತು ನೋಡಿದೆ. ಬಿಜೆಪಿಯಲ್ಲಲ್ಲ ಕಾಂಗ್ರೆಸ್ ನಲ್ಲಿ ನಿಜವಾಗಿ ನಾಯಕತ್ವದ ಕೊರತೆ ಇದೆ. ಅವತ್ತು ಸಮ್ಮಿಶ್ರ

ಯಡಿಯೂರಪ್ಪನವರು ಪಕ್ಷಾಂತರ ಮಾಡಿ ಮುಖ್ಯಮಂತ್ರಿಯಾಗಿಲ್ಲ| ಸಿದ್ದರಾಮಯ್ಯಗೆ ನಳಿನ್ ತಿರುಗೇಟು Read More »

ಹುಂಡಿಯಲ್ಲಿ ಕೂಡಿಟ್ಟ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ ಬಾಲಕ

ಬೆಂಗಳೂರು : ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರೋ ಹಿನ್ನೆಲೆಯಲ್ಲಿ ಕೋವಿಡ್ ಪರಿಹಾರ ನಿಧಿಗೆ ಹಲವರು ಸಹಾಯ ಹಸ್ತ ಚಾಚುತ್ತಿದ್ದಾರೆ. ಈ ನಡುವೆ ಪುಟ್ಟ ಬಾಲಕನೊರ್ವ ತಾನು ಹುಂಡಿಯಲ್ಲಿ ಕೂಡಿಟ್ಟ ಹಣವನ್ನು ಸಿಎಂ ಕೋವಿಡ್ ಪರಿಹಾರ ನಿಧಿಗೆ ನೀಡಿದ್ದಾನೆ.ಬೆಂಗಳೂರಿನ ಅಭಿನಂದನ್ ಹಾಗೂ ಸ್ವಪ್ನರವರ ಸುಪುತ್ರ ಮಾಯಾಂಕ್ ಜೈನ್ (೧೨) ನೆರವು ನೀಡಿದ ಬಾಲಕ. ಈತ ವರ್ಷಗಳಿಂದ ಹುಂಡಿಯಲ್ಲಿ ೪,೧೯೦ ರೂ. ಹಣವನ್ನು ಕೂಡಿಟ್ಟಿದ್ದ. ಶನಿವಾರ ಬೆಂಗಳೂರು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ಗೆ ಉಳಿತಾಯ ಮಾಡಿದ ಹಣವನ್ನು ಹಸ್ತಾಂತರಿಸಿದ್ದಾನೆ. ಕೊರೊನಾದಿಂದಾದ ಸಾವು-ನೋವುಗಳನ್ನು ಮನಗಂಡು

ಹುಂಡಿಯಲ್ಲಿ ಕೂಡಿಟ್ಟ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ ಬಾಲಕ Read More »

ಸುಳ್ಯ: ಹೊಟ್ಟೆ ನೋವೆಂದ ಕಳ್ಳತನದ ಆರೋಪಿ-ಸ್ಕ್ಯಾನಿಂಗ್‌ನಲ್ಲಿ ಚಿನ್ನದ ಗುಟ್ಟು ರಟ್ಟು

ಸುಳ್ಯ: ಹಲವು ಜ್ಯುವೆಲ್ಲರಿ ಅಂಗಡಿಯಿಂದ ಇತ್ತಿಚೆಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂದಿಸಿದ್ದರು. ಅದರಲ್ಲಿ ಓರ್ವ ಕಳ್ಳನಿಗೆ ಆರೋಗ್ಯ ಸಮಸ್ಯೆ ಉಂಟಾಗಿ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನ್ ಮಾಡಿದಾಗ ಆತನ ಕರುಳಿನಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ. ತಂಗಚ್ಚನ್ ಮತ್ತು ಶಿಬು ಕಳ್ಳತನದ ಆರೋಪಿಗಳು. ಆರೋಪಿ ತಂಗಚ್ಚನ್ ಅನ್ನು ಶನಿವಾರ ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಇನ್ನೊಬ್ಬ ಆರೋಪಿ ಶಿಬು ಎಂಬಾತನ ಮೆಡಿಕಲ್ ಟೆಸ್ಟ್ ಮಾಡಿಸಲು ಬಾಕಿ ಇದ್ದುದರಿಂದ ಭಾನುವಾರ ಕೋರ್ಟ್ ಗೆ ಹಾಜರುಪಡಿಸಲು ನಿರ್ಧರಿಸಲಾಗಿತ್ತು. ಆರೋಪಿ ಶಿಬುಗೆ ಶನಿವಾರ

ಸುಳ್ಯ: ಹೊಟ್ಟೆ ನೋವೆಂದ ಕಳ್ಳತನದ ಆರೋಪಿ-ಸ್ಕ್ಯಾನಿಂಗ್‌ನಲ್ಲಿ ಚಿನ್ನದ ಗುಟ್ಟು ರಟ್ಟು Read More »

ಬೆಳ್ತಂಗಡಿ:ವಿದ್ಯುತ್ ಶಾಕ್ ಗೆ ತಾಯಿ ಮಗು ಬಲಿ

ಬೆಳ್ತಂಗಡಿ: ಪಂಪ್ ಸ್ವಿಚ್ ಆನ್ ಮಾಡಲು ತೆರಳಿದ ತಾಯಿ-ಮಗು ಇಬ್ಬರು ವಿದ್ಯುತ್ ಶಾಕ್ ಗೆ ಒಳಗಾಗಿ ಮೃತಪಟ್ಟ ಘಟನೆ ಇಂದು ತಾಲೂಕಿನ ಪಟ್ರಮೆ ಯಿಂದ ವರದಿಯಾಗಿದೆ. ಪಟ್ರಮೆ ಗ್ರಾಮದ ಕೋಡಂದೂರು ನಿವಾಸಿ ಹರೀಶ್ ಗೌಡ ಎಂಬವರ ಪತ್ನಿ 30 ವರ್ಷದ ಗೀತಾ ಮತ್ತು 4.5 ವರ್ಷದ ಮಗು ಭವಿಷ್ ಮೃತಪಟ್ಟ ದುರ್ದೈವಿಗಳು. ತಾಯಿ ಗೀತಾ ಮಗುವನ್ನು ಎತ್ತಿಕೊಂಡು, ಹೊಸದಾಗಿ ಕರಿಸಿ ಖರೀದಿಸಿದ ಜಾಗದಲ್ಲಿ ಬೋರ್ವೆಲ್ ಗೆ ಅಳವಡಿಸಿದ ಪಂಪ್ ಸ್ವಿಚ್ ಆನ್ ಮಾಡುವಾಗ ದುರ್ಘಟನೆ ಸಂಭವಿಸಿದೆ.

ಬೆಳ್ತಂಗಡಿ:ವಿದ್ಯುತ್ ಶಾಕ್ ಗೆ ತಾಯಿ ಮಗು ಬಲಿ Read More »

ವಾಹನ ಮಾಲಕರಿಗೆ ಗುಡ್ ನ್ಯೂಸ್ |ಈ ತಿಂಗಳ ತೆರಿಗೆ ಕಟ್ಟಬೇಕಾಗಿಲ್ಲ

ಬೆಂಗಳೂರು : ಲಾಕ್​ಡೌನ್​ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಇರುವುದರಿಂದ ಈ ತಿಂಗಳ ವಾಹನ ತೆರಿಗೆ ಕಟ್ಟಬೇಕಾಗಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ರಾಜ್ಯದಲ್ಲಿ ನೋಂದಾಯಿತವಾಗಿರುವ ಎಲ್ಲಾ ಪ್ರಯಾಣಿಕ ವಾಹನಗಳಿಗೆ ಅನ್ವಯವಾಗುವಂತೆ 2021ರ ಮೇ ತಿಂಗಳ ಅವಧಿಗೆ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲು ಕರ್ನಾಟಕ ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯದಾದ್ಯಂತ ವಾಹನ ಸಂಚಾರಕ್ಕೆ ನಿಷೇಧವನ್ನು ಹೇರಲಾಗಿದ್ದು ತುರ್ತು ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಜೊತೆಗೆ ಜನರು ಸಂಪಾದನೆ ಇಲ್ಲದೆ ಮನೆಯಲ್ಲೇ ಕೂರುವಂತಾಗಿದೆ ಇದನ್ನು ಗಮನದಲ್ಲಿಟ್ಟು

ವಾಹನ ಮಾಲಕರಿಗೆ ಗುಡ್ ನ್ಯೂಸ್ |ಈ ತಿಂಗಳ ತೆರಿಗೆ ಕಟ್ಟಬೇಕಾಗಿಲ್ಲ Read More »

ರಾಜ್ಯಾದ್ಯಂತ ವ್ಯಾಪಕ ಮಳೆ ಮುನ್ಸೂಚನೆ: ಈ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡು ಭಾಗದಲ್ಲಿ ಗುಡುಗು-ಸಿಡಿಲು ಸಹಿತ ಇಂದು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಪೂರ್ವ ಮುಂಗಾರು ಶುರುವಾಗಿದೆ. ನೈಋತ್ಯ ಮುಂಗಾರು ಮಾರುತಗಳು ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಪ್ರವೇಶಿಸಲಿವೆ. ಈ ಕಾರಣದಿಂದ ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಭಾನುವಾರ ಉತ್ತರ ಒಳನಾಡಿನ ಬೆಳಗಾವಿ, ಗದಗ, ಧಾರವಾಡ ಮತ್ತು ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಾರೀ

ರಾಜ್ಯಾದ್ಯಂತ ವ್ಯಾಪಕ ಮಳೆ ಮುನ್ಸೂಚನೆ: ಈ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ Read More »