ಸಮಗ್ರ ಸಮಾಚಾರ

ಬೆಂಗಳೂರು ವಿಷಯದಲ್ಲಿ ನನಗೆ ಭಯ ಎದುರಾಗಿದೆ ಎಂದ ಸುಧಾಕರ್ | ತುರಾತುರಿಯಲ್ಲಿ ಸಿಲಿಕಾನ್ ಸಿಟಿ ಅನ್ಲಾಕ್ ಅಗತ್ಯವಿತ್ತೆ…?

ಬೆಂಗಳೂರು: ಅನ್ಲಾಕ್ ಆಯಿತೆಂದು ಸ್ವಲ್ಪ ಯಾಮಾರಿದರೂ ಅಪಾಯ ಖಚಿತ. ಬೆಂಗಳೂರಿನ ಪರಿಸ್ಥಿತಿ ಕಂಡರೆ ನನಗೂ ಭಯವಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. ಕಳೆದ ಒಂದುವರೆ ತಿಂಗಳ ಹಿಂದೆ ಕರುನಾಡಿಗೆ ಹಾಕಿದ್ದ ಬೀಗ ತೆರೆಯಲಾಗಿದೆ. ನಿನ್ನೆ ಸಿಎಂ ಯಡಿಯೂರಪ್ಪ 11 ಜಿಲ್ಲೆಗಳನ್ನು ಹೊರತುಪಡಿಸಿ, ಈ ತಿಂಗಳ 21ರಿಂದ ರಾಜ್ಯವನ್ನು ಅನ್ಲಾಕ್ ಗೊಳಿಸುವ ನಿರ್ಧಾರ ಕೈಗೊಂಡಿದ್ದರು. ಕೋವಿಡ್ ನಿಯಂತ್ರಣಕ್ಕೆ ಬಾರದ 11 ಜಿಲ್ಲೆಗಳಲ್ಲಿ ಮುಂದಿನಂತೆ ನಿರ್ಬಂಧ ಮುಂದುವರಿಸಲು ಆದೇಶಿಸಲಾಗಿತ್ತು. ಆದರೆ ಬೆಂಗಳೂರು ನಗರವನ್ನು ಅನ್ಲಾಕ್ ಮಾಡಿರುವುದು ಆಶ್ಚರ್ಯ […]

ಬೆಂಗಳೂರು ವಿಷಯದಲ್ಲಿ ನನಗೆ ಭಯ ಎದುರಾಗಿದೆ ಎಂದ ಸುಧಾಕರ್ | ತುರಾತುರಿಯಲ್ಲಿ ಸಿಲಿಕಾನ್ ಸಿಟಿ ಅನ್ಲಾಕ್ ಅಗತ್ಯವಿತ್ತೆ…? Read More »

ಮಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ 38 ಲಂಕಾ ಪ್ರಜೆಗಳ ಬಂಧನ

ಮಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ 38 ಶ್ರೀಲಂಕಾ ದೇಶದ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ಲಾಡ್ಜ್ ಗಳಲ್ಲಿ ಮತ್ತು ನಗರದ ಕೆಲವು ಮನೆಗಳಲ್ಲಿ ಅವರು ವಾಸಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತ ಲಂಕಾ ಪ್ರಜೆಗಳು ಕಳೆದ ಮಾರ್ಚ್ ತಿಂಗಳಿನಲ್ಲಿ ತಮಿಳುನಾಡಿನ ತೂತುಕುಡಿಗೆ ಆಗಮಿಸಿದ್ದರು. ಅಲ್ಲಿಂದ ಉದ್ಯೋಗಕ್ಕಾಗಿ ಕೆನಡಾಗೆ ಹೋಗುವವರಿದ್ದರು. ತಮಿಳುನಾಡಿನಲ್ಲಿ ಲಂಕನ್ನರಿಗೆ ಕೆನಡಾದಲ್ಲಿ ಕೆಲಸ ಕೊಡಿಸುವ ಏಜೆಂಟ್ ಳಿದ್ದರು. ಆ ಸಮಯದಲ್ಲಿ ತಮಿಳುನಾಡಿನಲ್ಲಿ ಚುನಾವಣೆ ಇದ್ದುದರಿಂದ ಅವರಿಗೆ ಕೆನಡಾಗೆ

ಮಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ 38 ಲಂಕಾ ಪ್ರಜೆಗಳ ಬಂಧನ Read More »

ಸೊಂಕಿತರಿಗೆ ಲಸಿಕೆಯ ಅಗತ್ಯವಿಲ್ಲ | ಅವೈಜ್ಞಾನಿಕ ಲಸಿಕೀಕರಣ ಹೊಸ ರೂಪಾಂತರಿ ತಳಿ ಸೃಷ್ಟಿಗೆ ದಾರಿ: ಕೇಂದ್ರಕ್ಕೆ ತಜ್ಞರ ಎಚ್ಚರಿಕೆ

ದೆಹಲಿ: ಸರಿಯಾದ ಯೋಜನೆಯಿಲ್ಲದ ಲಸಿಕೀಕರಣ ಹೊಸ ರೂಪಾಂತರಿ ತಳಿ ಸೃಷ್ಟಿಗೆ ಕಾರಣವಗಬಹುದು ಎಂದು ತಜ್ಞರು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದೆ. ಹಾಗು ಕೋವಿಡ್ ಸೊಂಕಿಗೊಳಗಾದವರಿಗೆ ಲಸಿಕೆ ಹಾಕುವ ಅಗತ್ಯವಿಲ್ಲ ಎಂದು ಸಲಹೆ ನೀಡಿದೆ. ಸರಿಯಾದ ವೈಜ್ಞಾನಿಕ ರೀತಿ ಅನುಸರಿಸದೆ, ವಿವೇಚನಾ ರಹಿತವಾಗಿ ಮತ್ತು ಅಪೂರ್ಣವಾದ ಸಾಮೂಹಿಕ ಲಸಿಕೀಕರಣವು ರೂಪಾಂತರ ತಳಿಗಳ ಸೃಷ್ಟಿಗೆ ಪ್ರಚೋದನೆ ನೀಡುತ್ತದೆ ಎಂದು ತಜ್ಞ ವೈದ್ಯರ ಸಮಿತಿ ಪ್ರಧಾನಿಗೆ ಸಲ್ಲಿಸಿದ ವರದಿಯಲ್ಲಿ ಸ್ಪಷ್ಟಪಡಿಸಿದೆ. ಏಮ್ಸ್‌ನ ವೈದ್ಯರು, ಕೋವಿಡ್-19 ರಾಷ್ಟ್ರೀಯ ಕಾರ್ಯಪಡೆಯ ಸದಸ್ಯರು, ಸಾರ್ವಜನಿಕ ಆರೋಗ್ಯ

ಸೊಂಕಿತರಿಗೆ ಲಸಿಕೆಯ ಅಗತ್ಯವಿಲ್ಲ | ಅವೈಜ್ಞಾನಿಕ ಲಸಿಕೀಕರಣ ಹೊಸ ರೂಪಾಂತರಿ ತಳಿ ಸೃಷ್ಟಿಗೆ ದಾರಿ: ಕೇಂದ್ರಕ್ಕೆ ತಜ್ಞರ ಎಚ್ಚರಿಕೆ Read More »

ದ ಕ: ಕಪ್ಪು ಶಿಲೀಂದ್ರ ಕ್ಕೆ ಮತ್ತೆರಡು ಬಲಿ

ಮಂಗಳೂರು: ಮಾರಕ ಕಪ್ಪು ಶಿಲೀಂದ್ರ ಸೊಂಕಿಗೆ ಜಿಲ್ಲೆಯಲ್ಲಿ ಮತ್ತೆರಡು ಸಾವು ಸಂಭವಿಸಿದ್ದು ಮೂರು ಹೊಸ ಪ್ರಕರಣಗಳು ವರದಿಯಾಗಿದೆ. ಮೃತಪಟ್ಟವರು ಮತ್ತು ಹೊಸದಾಗಿ ಸೋಂಕಿಗೊಳಗಾದ ವರು ಎಲ್ಲರೂ ಹೊರಜಿಲ್ಲೆಯವರಗಿದ್ದಾರೆ. ಪತ್ತೆಯಾದ ಮೂರು ಹೊಸ ಪ್ರಕರಣಗಳು ಉತ್ತರ ಕನ್ನಡ, ಚಿಕ್ಕಮಗಳೂರು, ಹಾವೇರಿ ಜಿಲ್ಲೆಗೆ ಸಂಬಂಧಿಸಿದ್ದಾಗಿವೆ. ಎಲ್ಲರನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಇನ್ನು ಈ ಹಿಂದೆ ಸೊಂಕಿಗೊಳಗಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ನಿನ್ನೆ ಮೃತಪಟ್ಟಿದ್ದಾರೆ. ಅವರಲ್ಲಿ ಒಬ್ಬರು ಚಿಕ್ಕಮಗಳೂರು ಮತ್ತು ಇನ್ನೊಬ್ಬರು ಉತ್ತರ ಕನ್ನಡ ಜಿಲ್ಲೆಗೆ ಸೇರಿದವರಾಗಿದ್ದಾರೆ.

ದ ಕ: ಕಪ್ಪು ಶಿಲೀಂದ್ರ ಕ್ಕೆ ಮತ್ತೆರಡು ಬಲಿ Read More »

ಸೋಮವಾರ ವಿಶ್ವಸಂಸ್ಥೆ ವೇದಿಕೆಯಲ್ಲಿ ಮೋದಿ ಭಾಷಣ

ವಿಶ್ವಸಂಸ್ಥೆ: ಜೂನ್ 14 ರಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಮಾವೇಶವೊಂದರಲ್ಲಿ ಭಾಷಣ ಮಾಡಲಿದ್ದಾರೆ. ವರ್ಚುವಲ್ ವೇದಿಕೆ ಮೂಲಕ ಮುಂದಿನ ಸೋಮವಾರ ವಿಶ್ವಸಂಸ್ಥೆ ಆಯೋಜಿಸಿರುವ ಉನ್ನತ ಮಟ್ಟದ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಛೇರಿ ಮೂಲಗಳು ತಿಳಿಸಿವೆ. ವಿಶ್ವಸಂಸ್ಥೆಯ 75ನೇ ಸಾಮಾನ್ಯಸಭೆಯ ಅಧ್ಯಕ್ಷರಾದ ವೋಲ್ಕನ್‌ ಬೊಜ್ಕಿರ್ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮಣ್ಣಿನ ಗುಣಮಟ್ಟ ನಾಶ, ಮರುಭೂಮೀಕರಣ ಹಾಗೂ ಬರ ಪರಿಸ್ಥಿತಿ ಕುರಿತು ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ. ಅದಲ್ಲದೆ ಪ್ರಧಾನಿ ಮೋದಿ

ಸೋಮವಾರ ವಿಶ್ವಸಂಸ್ಥೆ ವೇದಿಕೆಯಲ್ಲಿ ಮೋದಿ ಭಾಷಣ Read More »

ಬಿಎಸ್ ವೈ ಸಿಎಂ ಆದಾಗಲೆಲ್ಲ ರಾಜ್ಯಕ್ಕೆ ಸಂಕಷ್ಟ ಕಾಡುತ್ತಿದೆ: ಬಿಜೆಪಿ ಶಾಸಕ

ಚಿತ್ರದುರ್ಗ: ಸಿಎಂ ಬಿ ಎಸ್ ಯಡಿಯೂರಪ್ಪ ರಾಜ್ಯದ ಚುಕ್ಕಾಣಿ ಹಿಡಿದಾಗಲೆಲ್ಲ ರಾಜ್ಯಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂದು ಹೊಸದುರ್ಗ ಬಿಜೆಪಿ ಶಾಸಕ ಅಭಿಪ್ರಾಯ ಪಟ್ಟಿದ್ದಾರೆ. ಯಡಿಯೂರಪ್ಪ ಅತ್ಯುತ್ತಮ ನಾಯಕ, ಶ್ರಮಿಕ ರಾಜಕಾರಣಿ. ಅವರಿಗೆ ಯಾವ ದುರದೃಷ್ಟ, ಗ್ರಹಚಾರ ಇದೆಯೋ ನಮಗೆ ತಿಳಿಯದು. ಅವರು ರಾಜ್ಯದ ಮುಖ್ಯಮಂತ್ರಿ ಯಾದಾಗಲೆಲ್ಲ ರಾಜ್ಯದಲ್ಲಿ ಸಂಕಷ್ಟ ಎದುರಾಗುತ್ತದೆ. ಎಂದು ಶಾಸಕ ಗೂಳಿಹಟ್ಟಿ ಶೇಖರ್‌ ಬೇಸರ ವ್ಯಕ್ತಪಡಿಸಿದರು. ಹೊಸದುರ್ಗ ನಗರದ ಕಡು ಬಡವರಿಗೆ ಉಚಿತವಾಗಿ 6,500 ಆಹಾರ ಕಿಟ್ ವಿತರಿಸಿದ ಬಳಿಕ ಈ ಬಗ್ಗೆ

ಬಿಎಸ್ ವೈ ಸಿಎಂ ಆದಾಗಲೆಲ್ಲ ರಾಜ್ಯಕ್ಕೆ ಸಂಕಷ್ಟ ಕಾಡುತ್ತಿದೆ: ಬಿಜೆಪಿ ಶಾಸಕ Read More »

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಪರೀಕ್ಷೆಗೆ ನಿರ್ಧಾರ

ಬೆಂಗಳೂರು : ರಾಜ್ಯ ಸರ್ಕಾರವು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಂಬಂಧ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಪರೀಕ್ಷೆ ನಡಸಲು ಮುಂದಾಗಿದೆ. ಈ ವರ್ಷ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದಿಲ್ಲ ಎಂದು ಘೋಷಿಸಿದ್ದ ರಾಜ್ಯ ಸರ್ಕಾರ ಇದೀಗ ಪ್ರಮೋಟ್ ಗಾಗಿ ಆನ್ ಲೈನ್ ನಲ್ಲಿ ಪರೀಕ್ಷೆ ನಡೆಸಲು ಮುಂದಾಗಿರುವುದು ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ಎದುರಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಥಮ ಪಿಯುಸಿಗೆ ಎರಡು ಮಾದರಿಯ ಪ್ರಶ್ನೆ ಪತ್ರಿಕೆ

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಪರೀಕ್ಷೆಗೆ ನಿರ್ಧಾರ Read More »

ಮನೆಯಿಂದ ಕೇವಲ 100 ಮೀ. ದೂರದಲ್ಲಿದ್ದಳು ಅಂದು ನಾಪತ್ತೆಯಾಗಿದ್ದ ಯುವತಿ | ಪ್ರೇಯಸಿಯ ಹತ್ತು ವರ್ಷಗಳಿಂದ ತನ್ನ ಮನೆಯಲ್ಲಿಯೇ ಕೂಡಿಹಾಕಿದ್ದನು ಭಗ್ನಪ್ರೇಮಿ

ಕೇರಳ: ಹತ್ತು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮನೆಮಗಳು ಅಂದಿನಿಂದಲೂ ಇಂದಿನವರೆಗೆ ಮನೆಯ ಬಳಿಯೇ ಯಾರಿಗೂ ತೋಚದೆ ಇದ್ದಳೆಂದರೆ ಹೇಗಾಗಬೇಡ ಹೇಳಿ. ಇಂತಹದೊಂದು ಅಚ್ಚರಿಯ ಘಟನೆ ಪಕ್ಕದ ಕೇರಳ ರಾಜ್ಯದಲ್ಲಿ ನಡೆದಿದ್ದು ಎಲ್ಲರನ್ನು ನಿಬ್ಬೆರಾಗಗುವಂತೆ ಮಾಡಿದೆ. ಪಾಲಕ್ಕಾಡ್ ಜಿಲ್ಲೆಯ ಅರಿಯೂರ್ ಬಳಿಯ ಕರೈಕ್ಕಟ್ಟುಪರಂಬು ಎಂಬ ಪುಟ್ಟ ಗ್ರಾಮದಲ್ಲಿ ಯುವಕನೋರ್ವ ಕುಟುಂಬಸ್ಥರು, ನೆರೆಹೊರೆಯವರಿಗೆ ಒಂದು ಸಣ್ಣ ಸುಳಿವೂ ಸಿಗದಂತೆ ಬರೋಬ್ಬರಿ 10 ವರ್ಷಗಳ ಕಾಲ ತನ್ನ ಪ್ರೇಯಸಿಯನ್ನು ಮನೆಯಲ್ಲೇ ಕೂಡಿಹಾಕಿಕೊಂಡಿದ್ದ. ಈ ಗ್ರಾಮದಲ್ಲಿ ಮನೆಗಳ ಸಂಖ್ಯೆ ಬಹಳ ಕಡಿಮೆ ಇರುವುದರಿಂದ

ಮನೆಯಿಂದ ಕೇವಲ 100 ಮೀ. ದೂರದಲ್ಲಿದ್ದಳು ಅಂದು ನಾಪತ್ತೆಯಾಗಿದ್ದ ಯುವತಿ | ಪ್ರೇಯಸಿಯ ಹತ್ತು ವರ್ಷಗಳಿಂದ ತನ್ನ ಮನೆಯಲ್ಲಿಯೇ ಕೂಡಿಹಾಕಿದ್ದನು ಭಗ್ನಪ್ರೇಮಿ Read More »

ಕರಾವಳಿಯಲ್ಲಿ ಅಕ್ರಮವಾಗಿ ನೆಲೆಸಿದ್ದಳು ಪಾಕಿಸ್ತಾನಿ ಮಹಿಳೆ…! | ಪೊಲೀಸರಿಂದ ತನಿಖೆ ಚುರುಕು

ಭಟ್ಕಳ: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನ ಮೂಲದ ಖತೀಜಾ ಮೆಹರಿನ್ ಎಂಬಾಕೆ ಇಲ್ಲಿ ನೆಲೆಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭಟ್ಕಳ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.‌ ಕಳೆದ ಎಂಟು ವರ್ಷಗಳ ಹಿಂದೆ ಈಕೆಯನ್ನು ಸ್ಥಳೀಯ ನಿವಾಸಿ ಜಾವೀದ್ ಮೊಹಿದ್ದೀನ್ ರುಕ್ನುದ್ದೀನ್‌ ಎಂಬಾತ ದುಬೈನಲ್ಲಿ ವಿವಾಹವಾಗಿದ್ದ. ಈಕೆ ಮದುವೆ ನಂತರ 2014ರಲ್ಲಿ ಪ್ರವಾಸಿ ವೀಸಾ ಪಡೆದು 3 ತಿಂಗಳು ಭಾರತಕ್ಕೆ ಬಂದು ವಾಪಸ್ಸಾಗಿದ್ದಳು. ಆ ಬಳಿಕ 2015ರಲ್ಲಿ ಅಕ್ರಮವಾಗಿ ಭಾರತ ಪ್ರವೇಶ

ಕರಾವಳಿಯಲ್ಲಿ ಅಕ್ರಮವಾಗಿ ನೆಲೆಸಿದ್ದಳು ಪಾಕಿಸ್ತಾನಿ ಮಹಿಳೆ…! | ಪೊಲೀಸರಿಂದ ತನಿಖೆ ಚುರುಕು Read More »

ನನ್ನ ವರ್ಗಾವಣೆ ಹಿಂದೆ ಭೂ ಮಾಫಿಯಾ ಕೈಯಾಡಿಸಿದೆ | ದಾಖಲೆ ಬಿಡುಗಡೆ ಮಾಡಿದ ಸಿಂಧೂರಿ

ಬೆಂಗಳೂರು: ಒತ್ತಡಕ್ಕೆ ಮಣಿಯದೆ ಮೈಸೂರಿನಲ್ಲಿ ನಡೆಯುತ್ತಿರುವ ಭೂ ಮಾಫಿಯಾ ನಿಗ್ರಹದ ಬೆನ್ನು ಹತ್ತಿರುವುದೇ ನನ್ನ ವರ್ಗಾವಣೆಗೆ ಕಾರಣ ಎಂದು ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ. ಮೈಸೂರಿಗೆ ಬಂದ ಆರಂಭದಲ್ಲಿ ನಗರದ ಲಿಂಗಾಂಬುದಿ ಕೆರೆಯ ಪ್ರದೇಶದಲ್ಲಿ ನಡೆದ ಭೂ ಮಾಫಿಯಾ ವಿರುದ್ಧ ತನಿಖೆ ಕೈಗೊಂಡಿದ್ದೆ. ಮೈಸೂರಿನ ರಾಜಕಾಲುವೆ ಮೇಲೆ ಸಾರಾ ಮಹೇಶ್ ಮಾಲಕತ್ವದ ಸಾರಾ ಕಲ್ಯಾಣ ಮಂಟಪ ನಿರ್ಮಾಣವಾಗಿದೆ. ಅದರ ಬಗ್ಗೆ ಸ್ಥಳ ಸರ್ವೆ ನಡೆಸಿ, ಭೂ ಹಗರಣದ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದೆ. ಅದರ

ನನ್ನ ವರ್ಗಾವಣೆ ಹಿಂದೆ ಭೂ ಮಾಫಿಯಾ ಕೈಯಾಡಿಸಿದೆ | ದಾಖಲೆ ಬಿಡುಗಡೆ ಮಾಡಿದ ಸಿಂಧೂರಿ Read More »