ಸಮಗ್ರ ಸಮಾಚಾರ

ಪೆಟ್ರೋಲ್ ಬೆನ್ನಲ್ಲೇ ಶತಕ ಬಾರಿಸಿದ ಪಾರ್ಟ್ನರ್ | ದೇಶದಲ್ಲಿ ₹ 100.05 ಕ್ಕೆ ಮಾರಾಟವಾಯಿತು ಡೀಸೆಲ್

ನವದೆಹಲಿ: ದೇಶದಲ್ಲಿ ಇಂಧನ ಬೆಲೆ ದಿನೇದಿನೇ ಹೆಚ್ಚಳವಾಗುತ್ತಿದ್ದು ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದ ಬೆನ್ನಲ್ಲಿ ಇಂದು ಡೀಸೆಲ್ ಬೆಲೆ 100 ರೂ. ಗೆ ಮಾರಾಟವಾಗಿದೆ. ರಾಜಸ್ಥಾನದ ಗಂಗಾನಗರ ಎಂಬಲ್ಲಿ ಇಂದು 100.05 ರೂ. ಗೆ ಮಾರಾಟವಾಗುವ ಮೂಲಕ ಡೀಸೆಲ್ ದೇಶದಲ್ಲಿ ಇದೇ ಮೊದಲ ಬಾರಿಗೆ ಮೂರಂಕಿ ಬೆಲೆಗೆ ಮಾರಾಟವಾದ ದಾಖಲೆ ಬರೆದಿದೆ. ಕರ್ನಾಟಕದಲ್ಲಿ ನೂರು ರೂ. ಆಸುಪಾಸಿನಲ್ಲಿ ಪೆಟ್ರೋಲ್ ಮಾರಾಟವಾಗುತ್ತಿದ್ದು, 95ರ ಆಸುಪಾಸಿನ ದರಕ್ಕೆ ಡೀಸೆಲ್ ಬಿಕರಿಯಾಗುತ್ತಿದೆ. ಪ್ರಸ್ತುತ ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ […]

ಪೆಟ್ರೋಲ್ ಬೆನ್ನಲ್ಲೇ ಶತಕ ಬಾರಿಸಿದ ಪಾರ್ಟ್ನರ್ | ದೇಶದಲ್ಲಿ ₹ 100.05 ಕ್ಕೆ ಮಾರಾಟವಾಯಿತು ಡೀಸೆಲ್ Read More »

ಜಿಲ್ಲೆಯಲ್ಲಿ ಈ ವಾರದ ವೀಕೆಂಡ್ ಕರ್ಫ್ಯೂ ಇಲ್ಲ : ಜಿಲ್ಲಾಧಿಕಾರಿ ಡಾ. ರಾಜೇಂದ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈ ವಾರದ ವಾರಾಂತ್ಯ ಕರ್ಫ್ಯೂ ಇಲ್ಲ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಕೆವಿ ಹೇಳಿದ್ದಾರೆ. ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಹಿಂದೆ ಇದ್ದ ಲಾಕ್ಡೌನ್ ನಿಯಮಗಳನ್ನು ಜೂನ್ 21 ರವರೆಗೆ ಮುಂದುವರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹಿಂದಿನಂತೆಯೇ ವಾರದ ಎಲ್ಲಾ ದಿನ ನಿರ್ಬಂಧಗಳು ಮುಂದುವರೆಯಲಿದೆ. ಪ್ರತ್ಯೇಕವಾಗಿ ಈ ವಾರದ ಶನಿವಾರ ಮತ್ತು ಆದಿತ್ಯವಾರ (ಜೂ. 13 ಮತ್ತು 14) ದಂದು ವಾರಂತ್ಯ

ಜಿಲ್ಲೆಯಲ್ಲಿ ಈ ವಾರದ ವೀಕೆಂಡ್ ಕರ್ಫ್ಯೂ ಇಲ್ಲ : ಜಿಲ್ಲಾಧಿಕಾರಿ ಡಾ. ರಾಜೇಂದ್ರ Read More »

ಯಾವೊಬ್ಬ ವಿದ್ಯಾರ್ಥಿಯೂ ಫೇಲ್ ಆಗಲ್ಲ…! | ಸರಳ ರೀತಿಯಲ್ಲಿ ನಡೆಯಲಿದೆ SSLC ಪರೀಕ್ಷೆ

ಬೆಂಗಳೂರು: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯನ್ನು ರಾಜ್ಯ ಸರ್ಕಾರ ಸರಳವಾಗಿ ನಡೆಸಲು ನಿರ್ಧರಿಸಿದ್ದು, ಎಲ್ಲಾ ವಿದ್ಯಾರ್ಥಿಗಳನ್ನು ತೇರ್ಗಡೆ ಗೊಳಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಅಪ್ಲೋಡ್ ಮಾಡಲು ಎಲ್ಲಾ ಶಾಲೆಯ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಪ್ರಥಮ ಭಾಷೆಗೆ 25 ಅಂಕ ಹಾಗೂ ಉಳಿದಂತೆ 5 ವಿಷಯಗಳಿಗೆ ತಲಾ 20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ ನಡೆಸಲಾಗಿದೆ. ಅದರಲ್ಲಿ ಒಟ್ಟು 125 ಅಂಕಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕವನ್ನು

ಯಾವೊಬ್ಬ ವಿದ್ಯಾರ್ಥಿಯೂ ಫೇಲ್ ಆಗಲ್ಲ…! | ಸರಳ ರೀತಿಯಲ್ಲಿ ನಡೆಯಲಿದೆ SSLC ಪರೀಕ್ಷೆ Read More »

ನಟ ಪರ್ಲ್ ವಿ ಪುರಿ ಬೆಂಬಲಕ್ಕೆ ನಿಂತ ಸಂತ್ರಸ್ಥೆ ತಾಯಿ…! | ಅಪ್ರಾಪ್ತೆಯ ಅತ್ಯಾಚಾರ ಪ್ರಕರಣಕ್ಕೆ ರೋಚಕ ತಿರುವು

ಮುಂಬೈ: ಕಿರುತೆರೆ ನಟ ಪರ್ಲ್ ವಿ ಪುರಿ ಅಪ್ರಾಪ್ತ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದಲ್ಲಿ ಸಂತ್ರಸ್ತೆ ಎನ್ನಲಾದ ಯುವತಿಯ ತಾಯಿಯೇ ನಟ ನಿರಪರಾಧಿ ಎಂದಿದ್ದಾರೆ. ಕಳೆದೊಂದು ವಾರಗಳ ಹಿಂದೆ ಯುವತಿ ಹಾಗೂ ಯುವತಿಯ ತಂದೆ, ಹಿಂದಿ ಕಿರುತೆರೆ ನಟ ಪರ್ಲ್ ವಿ ಪುರಿ ಮೇಲೆ ಅತ್ಯಾಚಾರ ಪ್ರಕರಣ ಧಾಖಲಿಸಿದ್ದರು. ಧಾರಾವಾಹಿ ಒಂದರಲ್ಲಿ ನಟಿಸುವ ಅವಕಾಶ ಕೊಡಿಸುವುದಾಗಿ ಹೇಳಿ, ನಟ ನೊಂದಿಗೆ ಸೇರಿ ಕೆಲವು ಯುವಕರು ಕಾರೊಂದರಲ್ಲಿ ನನ್ನ ಮೇಲೆ

ನಟ ಪರ್ಲ್ ವಿ ಪುರಿ ಬೆಂಬಲಕ್ಕೆ ನಿಂತ ಸಂತ್ರಸ್ಥೆ ತಾಯಿ…! | ಅಪ್ರಾಪ್ತೆಯ ಅತ್ಯಾಚಾರ ಪ್ರಕರಣಕ್ಕೆ ರೋಚಕ ತಿರುವು Read More »

ಕೊರೋನ ಇಳಿಕೆ ಬೆನ್ನಲ್ಲೇ ಏರುತ್ತಿದೆ ಬ್ಲಾಕ್ ಫಂಗಸ್ | ಕಪ್ಪು ಶಿಲೀಂದ್ರ ಸೋಂಕಿಗೆ 2100 ಕ್ಕೂ ಹೆಚ್ಚು ಬಲಿ

ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಗಣನೀಯ ಇಳಿಕೆ ಕಾಣುತ್ತಿರುವ ಬೆನ್ನಲ್ಲೇ ಕಪ್ಪು ಶಿಲೀಂದ್ರ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ದೇಶದಲ್ಲಿ ಇದುವರೆಗೆ 2,100 ಕ್ಕೂ ಅಧಿಕ ಜನ ಬ್ಲಾಕ್ ಫಂಗಸ್ ಗೆ ಬಲಿಯಾಗಿದ್ದಾರೆ. ದೇಶವ್ಯಾಪಿ ಈವರೆಗೆ 31,220 ಕ್ಕೂ ಹೆಚ್ಚು ಪ್ರಕರಣಗಳು ಮತ್ತು 2,110ಕ್ಕೂ ಹೆಚ್ಚು ಸಾವು ಸಂಭವಿಸಿದ ಬಗ್ಗೆ ವರದಿಯಾಗಿದೆ. ಬ್ಲಾಕ್​ ಫಂಗಸ್​ ಸೋಂಕು ಏರಿಕೆಗೆ ಮತ್ತು ಸಾವಿನ ಪ್ರಮಾಣದಲ್ಲಿ ಏರಿಕೆಗೆ ಆಂಫೊಟೆರಿಸಿನ್-ಬಿ ಔಷಧದ ತೀವ್ರ ಕೊರತೆಯೇ ಕಾರಣ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ

ಕೊರೋನ ಇಳಿಕೆ ಬೆನ್ನಲ್ಲೇ ಏರುತ್ತಿದೆ ಬ್ಲಾಕ್ ಫಂಗಸ್ | ಕಪ್ಪು ಶಿಲೀಂದ್ರ ಸೋಂಕಿಗೆ 2100 ಕ್ಕೂ ಹೆಚ್ಚು ಬಲಿ Read More »

ನಿರಂತರ ಹತ್ತು ದಿನ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಯುವತಿ…!

ಒರಿಸ್ಸಾ: ಯುವತಿಯೊಬ್ಬಳನ್ನು ಕತ್ತಲೆ ಕೋಣೆಯೊಂದರಲ್ಲಿ ಕೂಡಿ ಹಾಕಿ 12 ಜನ ಕಾಮುಕರು ಬರೋಬ್ಬರಿ ಹತ್ತು ದಿನ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ರಾಜ್ಯದ ಪುರಿ ಜಿಲ್ಲೆಯಲ್ಲಿ ನಡೆದಿದೆ. ಪುರಿಯ ಕೊನಾರ್ಕ್ ಸೂರ್ಯ ದೇವಾಲಯದ ಸಮೀಪದ ಗ್ರಾಮವೊಂದರಲ್ಲಿ ಘಟನೆ ನಡೆದಿದೆ. ಯುವತಿ ಕೊಲ್ಕತ್ತಾ ಮೂಲದವಳಾಗಿದ್ದು ಕೆಲಸಕ್ಕಾಗಿ ರಾಜ್ಯಕ್ಕೆ ಬಂದಿದ್ದಳು ಎನ್ನಲಾಗಿದೆ. ಈ ಸಮಯದಲ್ಲಿ ಕಾಮುಕರ ಪರಿಚಯವಾಗಿದ್ದು, ಯುವತಿಯನ್ನು ಪುಸಲಾಯಿಸಿ ಕರೆದೊಯ್ದು ಕತ್ತಲೆ ಕೋಣೆಯಲ್ಲಿ ಕೂಡಿಹಾಕಿ ನಿರಂತರ ಹತ್ತು ದಿನ ಅತ್ಯಾಚಾರ ಎಸಗಿದ್ದಾರೆ. ಹತ್ತು ದಿನಗಳಿಂದ ಕಾಮಕರ ವಿಕೃತಿಗೆ ಗುರಿಯಾಗಿದ್ದ

ನಿರಂತರ ಹತ್ತು ದಿನ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಯುವತಿ…! Read More »

ಪರಿಶಿಷ್ಟರ ಕಲ್ಯಾಣಕ್ಕೆ 26 ಸಾವಿರ ಕೋಟಿ ಅನುದಾನ: ಸಚಿವ ಶ್ರೀರಾಮುಲು

ಬೆಂಗಳೂರು: ರಾಜ್ಯದ ಪರಿಶಿಷ್ಟರ ಕಲ್ಯಾಣಕ್ಕಾಗಿ 26,005 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ಅನುಮೋದನೆ ಬಾಕಿ ಇದೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ. ವಿಕಾಸಸೌಧದಲ್ಲಿ ಎರಡು ದಿನಗಳ ಕಾಲ ನಡೆದ ವರ್ಚುವಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಕಲ್ಯಾಣಕ್ಕಾಗಿ ಪ್ರಸಕ್ತ 2021-22ನೇ ಸಾಲಿನಲ್ಲಿ ಎಸ್‌ಸಿಎಸ್‌ಟಿ ಮತ್ತು ಟಿಎಸ್‌ಪಿ ಯೋಜನೆಯಡಿ 26,005 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ರಾಜ್ಯ

ಪರಿಶಿಷ್ಟರ ಕಲ್ಯಾಣಕ್ಕೆ 26 ಸಾವಿರ ಕೋಟಿ ಅನುದಾನ: ಸಚಿವ ಶ್ರೀರಾಮುಲು Read More »

ಪೂರ್ಣಾಹುತಿಯಾದ ಭಾಸ್ಕರ ಶೆಟ್ಟಿ ಕೊಲೆ‌ ಪ್ರಕರಣ | ಬಹುಕೋಟಿ ಆಸ್ತಿಯ ವಾರಸ್ದಾರ ಯಾರು…?

ಉಡುಪಿ: 2016ರ ಬಹುಕೋಟಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಅಂತಿಮ ತೀರ್ಪು ಕಳೆದವಾರ ಹೊರಬಂದಿತ್ತು. ಉಡುಪಿಯ ಜಿಲ್ಲಾ ನ್ಯಾಯಾಲಯ ಪತ್ನಿ ಪುತ್ರ ಹಾಗೂ ಓರ್ವ ಜ್ಯೋತಿಷಿಗೆ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿತ್ತು. ಇನ್ನು ಭಾಸ್ಕರ ಶೆಟ್ಟಿ ತನ್ನ ಬಹುಕೋಟಿ ಆಸ್ತಿಗೆ ಬರೆದಿದ್ದ ವೀಲುನಾಮೆ ಬಹಿರಂಗಗೊಂಡಿದೆ. ಇನ್ನು, ತನ್ನ ಪತ್ನಿ ಒಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು ಅವನು ನನ್ನ ಆಸ್ತಿಯನ್ನು ಲಪಟಾಯಿಸುವ ಉದ್ದೇಶದಿಂದ ತನ್ನ ಪುತ್ರ ಹಾಗೂ ಪತ್ನಿಯ ಸ್ನೇಹ ಬೆಳೆಸಿ, ನನ್ನನ್ನು ಮುಗಿಸಲು ಯೋಜನೆ

ಪೂರ್ಣಾಹುತಿಯಾದ ಭಾಸ್ಕರ ಶೆಟ್ಟಿ ಕೊಲೆ‌ ಪ್ರಕರಣ | ಬಹುಕೋಟಿ ಆಸ್ತಿಯ ವಾರಸ್ದಾರ ಯಾರು…? Read More »

ಆನ್ಲೈನ್ ನಲ್ಲಿ ಮಗು ಖರೀದಿಸಿದ ದಂಪತಿ | ಸಿಕ್ಕಿಬಿದ್ದಳು 1.5 ಲಕ್ಷಕ್ಕೆ ಡೆಲಿವರಿ ಕೊಟ್ಟ ಮಹಾತಾಯಿ

ಎಚ್.ಡಿ. ಕೋಟೆ: ಅಕ್ರಮವಾಗಿ ತನ್ನ ಕರುಳಕುಡಿಯನ್ನೇ ಹಣದಾಸೆಗೆ ಮಾರಾಟ ಮಾಡಿ ತಾಯಿಯೊಬ್ಬಳು ಪೊಲೀಸರ ಅತಿಥಿಯಾದ ಘಟನೆ ನಡೆದಿದೆ. ಆನ್ಲೈನ್ ಮೂಲಕ ಗಿಡಮೂಲಿಕೆ ತೈಲ, ಕೇಶ ತೈಲ ಇತ್ಯಾದಿ ಮಾರಾಟ ಮಾಡುತ್ತಿದ್ದ ಹಾಸನ ಮೂಲದ ರೋಜಾ ಎಂಬಾಕೆಯೇ ಮಗು ಮಾರಾಟ ಮಾಡಿ ಸಿಕ್ಕಿ ಬಿದ್ದವಳು. ಆಕೆಗೆ ವ್ಯವಹಾರದ ಸಮಯದಲ್ಲಿ ಎಚ್ ಡಿ ಕೋಟೆ ಸಮೀಪದ ಟೈಗರ್‌ಬ್ಲಾಕ್‌ನ ನಿವಾಸಿಗಳಾದ ಅಂಬರೀಶ್‌ ಹಾಗೂ ಮಧುಮಾಲತಿ ದಂಪತಿಯ ಪರಿಚವಾಗಿದೆ. ಆಗಾಗ ರೋಜಾ ಬಳಿ ವ್ಯವಹಾರ ನಡೆಸುತ್ತಿದ್ದ ದಂಪತಿಗೆ 7 ತಿಂಗಳ ಹಿಂದೆ ಆಕೆಗೆ

ಆನ್ಲೈನ್ ನಲ್ಲಿ ಮಗು ಖರೀದಿಸಿದ ದಂಪತಿ | ಸಿಕ್ಕಿಬಿದ್ದಳು 1.5 ಲಕ್ಷಕ್ಕೆ ಡೆಲಿವರಿ ಕೊಟ್ಟ ಮಹಾತಾಯಿ Read More »

ಕನ್ನಡ ಚಿತ್ರರಂಗದ ಹಿರಿಯ ನಟ, ಪತ್ರಕರ್ತ ಸುರೇಶ್ಚಂದ್ರ ಕೊರೋನಾಗೆ ಬಲಿ

ಬೆಂಗಳೂರು: ಸ್ಯಾಂಡಲ್ವುಡ್ ಹಿರಿಯ ನಟ ಸುರೇಶ್ಚಂದ್ರ ಇಂದು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೆಲದಿನಗಳ ಹಿಂದೆ ಇವರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಹಿನ್ನೆಲೆಯಲ್ಲಿ ಅವರನ್ನು ಜಯನಗರದ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐವತ್ತಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಸುರೇಶ್ಚಂದ್ರ ಚೆಲುವಿನ ಚಿತ್ತಾರ ಚಿತ್ರದಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು. ಅವರು 80ರ ದಶಕದಲ್ಲಿ ಸಂಜೆವಾಣಿ ಪತ್ರಿಕೆಯಲ್ಲಿ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದರು.

ಕನ್ನಡ ಚಿತ್ರರಂಗದ ಹಿರಿಯ ನಟ, ಪತ್ರಕರ್ತ ಸುರೇಶ್ಚಂದ್ರ ಕೊರೋನಾಗೆ ಬಲಿ Read More »