ಸಮಗ್ರ ಸಮಾಚಾರ

ಜೂ.21ರಿಂದ ಅನ್ ಲಾಕ್ 2.0. ಯಾವುದಕ್ಕೆಲ್ಲ ರಿಲೀಫ್ ಗೊತ್ತಾ?

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಅಬ್ಬರ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 21 ರಿಂದ ಅನ್ ಲಾಕ್ 2.0 ಜಾರಿಗೆ ತಾಂತ್ರಿಕ ಸಲಹಾ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆಜೂನ್ 21 ರಂದು ಕೋವಿಡ್ ಸೆಮಿ ಲಾಕ್ ಡೌನ್ ನಿರ್ಬಂಧಗಳಲ್ಲಿ ಇನ್ನಷ್ಟು ಸಡಿಲಿಕೆ ಮಾಡುವ ಸಾಧ್ಯತೆ ಇದ್ದು, ಇದರ ಸಂಬಂಧ ಶುಕ್ರವಾರ ಅಥವಾ ಶನಿವಾರದ ಹೊತ್ತಿಗೆ ಸರ್ಕಾರದ ತೀರ್ಮಾನ ಹೊರ ಬೀಳುವ ಸಾಧ್ಯತೆ ಇದೆ.ಎರಡನೇ ಹಂತದಲ್ಲಿ ನಿರ್ಬಂಧ ಸಡಿಲಿಕೆ ಮಾಡುವ ಕುರಿತಂತೆ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಕೈಗೊಳ್ಳಲಾಗುವುದು […]

ಜೂ.21ರಿಂದ ಅನ್ ಲಾಕ್ 2.0. ಯಾವುದಕ್ಕೆಲ್ಲ ರಿಲೀಫ್ ಗೊತ್ತಾ? Read More »

ರಾಜ್ಯದಲ್ಲಿ ಮುಂಗಾರು ಬಲುಜೋರು: ಹಲವು ಜಿಲ್ಲೆಗಳಲ್ಲಿ ಅಲರ್ಟ್

ಬೆಂಗಳೂರು: ರಾಜ್ಯದ ಹಲವೆಡೆ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ.ಜೂನ್ 18 ರವರೆಗೆ ರಾಜ್ಯದ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದೆ. ಜೂನ್ 16 ಮತ್ತು 17 ರಂದು ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಹಾಗೂ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಮುಂದುವರೆಸಲಾಗಿದೆ.ಅದೇ ರೀತಿ ಮುಂದಿನ ಎರಡು ದಿನಗಳ ಕಾಲ ವಿಜಯಪುರ, ಯಾದಗಿರಿ, ಬಳ್ಳಾರಿ, ರಾಯಚೂರು,

ರಾಜ್ಯದಲ್ಲಿ ಮುಂಗಾರು ಬಲುಜೋರು: ಹಲವು ಜಿಲ್ಲೆಗಳಲ್ಲಿ ಅಲರ್ಟ್ Read More »

ಪುತ್ತೂರು: ಗಂಟಲಲ್ಲಿ ಆಹಾರ ಸಿಲುಕಿ ವ್ಯಕ್ತಿ ಮೃತ್ಯು

ಪುತ್ತೂರು: ಊಟ ಮಾಡುತ್ತಿದ್ದಾಗ ಗಂಟಲಲ್ಲಿ ಆಹಾರ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬೆಟ್ಟಂಪಾಡಿ ಸಮೀಪದ ನಿಡ್ಪಳ್ಳಿ ಗ್ರಾಮದ ಕ್ಕುಕ್ಕುಪುಣಿ ಎಂಬಲ್ಲಿ ನಡೆದಿದೆ. ಕುಕ್ಕುಪುಣಿ ನಿವಾಸಿ ಕೊರಗಪ್ಪ ನಲಿಕೆ ಎಂಬವರು ನಿನ್ನೆ ಮದ್ಯಾಹ್ನ ಮನೆಯಲ್ಲಿ ಊಟ ಮಾಡುತ್ತಿದ್ದಾಗ ಆಹಾರದ ತುಡೊಂದು ಗಂಟಲಿನಲ್ಲಿ ಸಿಲುಕಿಕೊಂಡಿದೆ. ತಕ್ಷಣ ಮನೆಯವರು ಪ್ರಥಮ ಚಿಕಿತ್ಸೆ ನೀಡಿದರು ಫಲಕಾರಿಯಾಗಲಿಲ್ಲ. ಅವರಿಗೆ ಸ್ವಲ್ಪ ಸಮಯದಲ್ಲೇ ಉಸಿರಾಟದ ಸಮಸ್ಯೆ ಎದುರಾಗಿದೆ. ಬಳಿಕ ಮನೆಯವರು ಮುಡಿಪಿನಡ್ಕದ ಕ್ಲಿನಿಕ್ ಒಂದಕ್ಕೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿದ್ದಾರೆ. ಪುತ್ತೂರು

ಪುತ್ತೂರು: ಗಂಟಲಲ್ಲಿ ಆಹಾರ ಸಿಲುಕಿ ವ್ಯಕ್ತಿ ಮೃತ್ಯು Read More »

ಮೈಸೂರಲ್ಲೊಬ್ಬ ಉಕ್ಕಿನ ಮನುಷ್ಯ, ಮಗನ ಶವವನ್ನು ಮನೆಯಲ್ಲೇ ಬಿಟ್ಟು ಕರ್ತವ್ಯದ ಕರೆಗೆ ಓಗೊಟ್ಟ ಅಂಬ್ಯುಲೆನ್ಸ್ ಡ್ರೈವರ್…!

ಮೈಸೂರು: ಮನೆಯಲ್ಲಿ ಮಗ ಮೃತಪಟ್ಟಿದ್ದರೂ ಆತನ ಶವವನ್ನು ಮನೆಯಲ್ಲಿಯೇ ಬಿಟ್ಟು ಆಂಬ್ಯುಲೆನ್ಸ್‌ ಚಾಲಕ ಒಬ್ಬರು ಕರ್ತವ್ಯ ಕರೆಗೆ ಓಗೊಟ್ಟು ಹೋದ ಘಟನೆ ಮೈಸೂರಿನಲ್ಲಿ ನಡೆದಿದೆ. ಸಹಾಯವಾಣಿ ಕೇಂದ್ರದ ಅಂಬ್ಯುಲೆನ್ಸ್‌ ಡ್ರೈವರ್‌ ಆಗಿರುವ ಮುಬಾರಕ್ ಅವರಿಗೆ ಎಲ್ಲೆಡೆಯಿಂದ ಜನರು ಕೊಂಡಾಡುತ್ತಿದ್ದಾರೆ. ಮೈಮೇಲೆ ಬಿಸಿನೀರು ಬಿದ್ದ ಕಾರಣ ಇವರ ಮಗುವು ಮೃತಪಟ್ಟಿತ್ತು. ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ಮಗುವಿನ ಸಾವಿನಿಂದ ಕಂಗೆಟ್ಟು ಹೋಗಿದ್ದ ನಡುವೆಯೇ ಸಹಾಯವಾಣಿಯಿಂದ ರೋಗಿಯೊಬ್ಬರಿಗೆ ಆಸ್ಪತ್ರೆಗೆ ಸಾಗಿಸುವಂತೆ ಕರೆ ಬಂದಿದೆ. ಮೈಸೂರಿನ ಸಿಗ್ಮಾ ಆಸ್ಪತ್ರೆಯಿಂದ ಚಾಮರಾಜನಗರಕ್ಕೆ

ಮೈಸೂರಲ್ಲೊಬ್ಬ ಉಕ್ಕಿನ ಮನುಷ್ಯ, ಮಗನ ಶವವನ್ನು ಮನೆಯಲ್ಲೇ ಬಿಟ್ಟು ಕರ್ತವ್ಯದ ಕರೆಗೆ ಓಗೊಟ್ಟ ಅಂಬ್ಯುಲೆನ್ಸ್ ಡ್ರೈವರ್…! Read More »

ಜೂ. 16ರಿಂದ ತಾಜ್ ಮಹಲ್ ಭೇಟಿಗೆ ಪ್ರವಾಸಿಗರಿಗೆ ಅವಕಾಶ | ಆನ್‌ಲೈನ್ ಟಿಕೆಟ್ ಬುಕಿಂಗ್‌ಗೆ ಅವಕಾಶ

ನವದೆಹಲಿ: ದೇಶದಲ್ಲಿ ಕೋವಿಡ್ ಎರಡನೇ ಅಲೆಯ ಪರಿಣಾಮ ಕಳೆದ ಎರಡು ತಿಂಗಳಿಂದ ಮುಚ್ಚಲ್ಪಟ್ಟಿದ್ದು, ಕೇಂದ್ರ ಸರ್ಕಾರದ ರಕ್ಷಣೆಗೊಳಪಟ್ಟಿರುವ ಸ್ಮಾರಕಗಳಾದ ತಾಜ್ ಮಹಲ್ ಸೇರಿದಂತೆ ಇನ್ನತರ ಪ್ರಸಿದ್ಧ ಸ್ಥಳಗಳನ್ನು ಜೂನ್ 16 ರಿಂದ ಪ್ರವಾಸಿಗರ ಭೇಟಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಎಎಸ್ ಐ(ಭಾರತೀಯ ಪುರಾತತ್ವ ಸಮೀಕ್ಷಾ) ತಿಳಿಸಿದೆ. ಸ್ಮಾರಕಕ್ಕೆ ಭೇಟಿ ನೀಡುವ ಪ್ರವಾಸಿಗರು ಪ್ರವೇಶ ಟಿಕೆಟ್ ಅನ್ನು ಆನ್‌ಲೈನ್ ನಲ್ಲಿ ಕಾಯ್ದಿರಿಸಬಹುದಾಗಿದೆ. ಆದರೆ ಯಾವುದೇ ಆಫ್ ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆ ಇಲ್ಲ ಎಂದು ಎಎಸ್‌ಐ ವಿವರಿಸಿದೆ. ಪ್ರಸ್ತುತ

ಜೂ. 16ರಿಂದ ತಾಜ್ ಮಹಲ್ ಭೇಟಿಗೆ ಪ್ರವಾಸಿಗರಿಗೆ ಅವಕಾಶ | ಆನ್‌ಲೈನ್ ಟಿಕೆಟ್ ಬುಕಿಂಗ್‌ಗೆ ಅವಕಾಶ Read More »

ಕನ್ನಡ ಸಿನಿಮಾ ನಿರ್ಮಾಪಕನ ಹತ್ಯೆಗೆ ಸ್ಕೆಚ್ ಪ್ರಕರಣ: ರೌಡಿ ಶೀಟರ್ ಬಂಧನ

ಬೆಂಗಳೂರು : ಕನ್ನಡ ಚಿತ್ರರಂಗದ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ಹತ್ಯೆಗೆ ಸ್ಕೇಚ್ ಹಾಕಿದ್ದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿಯನ್ನು ರಾಜೀವ್ ಅಲಿಯಾಸ್ ಕರಿಯ ರಾಜೇಶ್‌ಎಂದು ಗುರುತಿಸಲಾಗಿದೆ. ಈತ ಬಾಂಬೆ ರವಿ ತಂಡಕ್ಕೆ ಸೇರಿದವನಾಗಿದ್ದ ಈತ ನೇಪಾಳದಲ್ಲಿ ತಲೆ ಮರೆಸಿಕೊಂಡಿದ್ದ. ಆದರೆ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕಳೆದ ವರ್ಷ ಉಮಾಪತಿ ಶ್ರೀನಿವಾಸ್ ಗೌಡ ಮತ್ತು ಅವರ ಸಹೋದರ ದೀಪಕ್ ಅವರ ಹತ್ಯೆಗೆ ಸಂಚುರೂಪಿಸಲಾಗಿತ್ತು. ಅಲ್ಲದೆ, ಕೊಲೆ ಬೆದರಿಕೆ ಹಾಕಿದ್ದರು. ವ್ಯವಸ್ಥಿತವಾಗಿ ಸಂಚು

ಕನ್ನಡ ಸಿನಿಮಾ ನಿರ್ಮಾಪಕನ ಹತ್ಯೆಗೆ ಸ್ಕೆಚ್ ಪ್ರಕರಣ: ರೌಡಿ ಶೀಟರ್ ಬಂಧನ Read More »

ದ.ಕ: ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಹಿಂದಿರುಗಿಸಲು ಜೂ. 30 ಕಡೇ ದಿನ |ತಪ್ಪಿದಲ್ಲಿ ಕಠಿಣ ಕ್ರಮ: ಡಿ.ಸಿ

ಮಂಗಳೂರು: ಸಾರ್ವಜನಿಕ ವಿತರಣಾ ಪದ್ಧತಿಯಡಿ ಅಂತ್ಯೋದಯ(ಎಎವೈ) ಅನ್ನ ಮತ್ತು ಆದ್ಯತಾ(ಬಿಪಿಎಲ್) ಪಡಿತರ ಚೀಟಿಗಳನ್ನು ಹೊಂದಿರುವ ಅನರ್ಹ ಕುಟುಂಬಗಳು ಪಡಿತರ ಚೀಟಿಗಳನ್ನು ದಂಡ ರಹಿತವಾಗಿ ಜೂ. 30ರೊಳಗೆ ಹಿಂದುರಿಗಿಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ. ಸರಕಾರ ನಿಗದಿಪಡಿಸಿರುವ ಮಾನದಂಡಗಳಿಗೆ ವಿರುದ್ಧವಾಗಿ ಅಂತ್ಯೋದಯ(ಎಎವೈ) ಮತ್ತು ಆದ್ಯತಾ(ಬಿಪಿಎಲ್) ಪಡಿತರ ಚೀಟಿಗಳನ್ನು ಪಡೆದುಕೊಂಡವರು ಆಯಾ ತಾಲೂಕಿನ ತಹಶೀಲ್ದಾರರು/ ಸಹಾಯಕ ನಿರ್ದೇಶಕರು ಇವರಿಗೆ ಪಡಿತರ ಚೀಟಿಗಳನ್ನು ಹಿಂದಿರುಗಿಸಬೇಕು. ಅನರ್ಹರು ಹೊಂದಿರುವ ಎಎವೈ ಮತ್ತು ಬಿಪಿಎಲ್ ಪಡಿತರ ಚೀಟಿಗಳನ್ನು ಸ್ವಯಂ ಪ್ರೇರಿತರಾಗಿ ಇಲಾಖೆಗೆ ಹಿಂದಿರುಗಿಸಬೇಕು. ಅಂತಹವರ ವಿರುದ್ಧ ಯಾವುದೇ

ದ.ಕ: ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಹಿಂದಿರುಗಿಸಲು ಜೂ. 30 ಕಡೇ ದಿನ |ತಪ್ಪಿದಲ್ಲಿ ಕಠಿಣ ಕ್ರಮ: ಡಿ.ಸಿ Read More »

ಕೊರೊನಾ ಪ್ರಕರಣಗಳಲ್ಲಿ ಭಾರೀ ಇಳಿಕೆ | ಇಲ್ಲಿದೆ ಇಂದಿನ ವರದಿಗಳು

ಬೆಂಗಳೂರು: ರಾಜ್ಯದಲ್ಲಿಂದು ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಇಂದು 5,೦41 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದದು, 115 ಜನ ಸಾವನ್ನಪ್ಪಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿಯೂ ಕೊರೊನಾ ರೌದ್ರ ಆರ್ಭಟ ತಗ್ಗಿದ್ದು, ಎರಡು ತಿಂಗಳ ಬಳಿಕ ಸಾವಿರಕ್ಕೂ ಕಡಿಮೆ ಪ್ರಕರಣಗಳು ದಾಖಲಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 1,32,600 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು 14,785 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸದ್ಯ 1,92,282 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ರಾಜ್ಯದಲ್ಲಿ 27,77,010 ಕೊರೊನಾ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ

ಕೊರೊನಾ ಪ್ರಕರಣಗಳಲ್ಲಿ ಭಾರೀ ಇಳಿಕೆ | ಇಲ್ಲಿದೆ ಇಂದಿನ ವರದಿಗಳು Read More »

ಕಟ್ಟಡದಲ್ಲಿ ಬೆಂಕಿ : ಮಕ್ಕಳನ್ನು ರಕ್ಷಿಸಲು ಹರ ಸಾಹಸ ಪಡುತ್ತಿರುವ ಮೂವರು ವ್ಯಕ್ತಿಗಳು | ಇಲ್ಲಿದೆ ವೀಡಿಯೋ

ರಷ್ಯಾ: ಬೆಂಕಿ ಹೊತ್ತಿಕೊಂಡಿದ್ದ ಅಪಾರ್ಟ್ವೊಂದರಲ್ಲಿ ಸಿಲುಕಿದ್ದ ಮಕ್ಕಳನ್ನು ರಷ್ಯಾದ ಮೂವರು ವ್ಯಕ್ತಿಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರಕ್ಷಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೊಸ್ಟ್ರೋಮಾದಲ್ಲಿರುವ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಿಲುಕಿಕೊಂಡಿದ್ದ ಮಕ್ಕಳನ್ನು ಕಟ್ಟಡದ ಹೊರಗೆ ಇದ್ದ ಪೈಪ್ ಏರಿ ಮೂವರು ವ್ಯಕ್ತಿಗಳು ರಕ್ಷಿಸಿದ್ದಾರೆ. ಅಲ್ಲದೇ ಈ ಘಟನೆ ಪೋಷಕರು ಮನೆಯಲ್ಲಿ ಇಲ್ಲದ ವೇಳೆ ಸಂಭವಿಸಿದ್ದು, ಬೆಂಕಿ ಹೊತ್ತಿಕೊಂಡಿರುವುದನ್ನು ಕಂಡು ಅಲ್ಲಿನ ಸ್ಥಳೀಯರು ಬಾಗಿಲನ್ನು ಒಡೆದು ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗದೇ ಇದ್ದಾಗ

ಕಟ್ಟಡದಲ್ಲಿ ಬೆಂಕಿ : ಮಕ್ಕಳನ್ನು ರಕ್ಷಿಸಲು ಹರ ಸಾಹಸ ಪಡುತ್ತಿರುವ ಮೂವರು ವ್ಯಕ್ತಿಗಳು | ಇಲ್ಲಿದೆ ವೀಡಿಯೋ Read More »

ತೋಟಕ್ಕೆ ಹೋದ ರೈತನ ಬರ್ಬರ ಕೊಲೆ | ಅಕ್ರಮ ಸಂಬಂಧದ ಶಂಕೆ?

ಚಿಕ್ಕಬಳ್ಳಾಪುರ: ತೋಟಕ್ಕೆ ನೀರು ಹಾಯಿಸಲು ಹೋದ ರೈತನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಜೋಡಿಬಿಸಲಹಳ್ಳಿ ಗ್ರಾಮದಲ್ಲಿ ನಡೆದಿದೆ. ರೈತ ಶ್ರೀನಿವಾಸ್(೬೫) ಕೊಲೆಯಾದವರು. ಇವರು ಗ್ರಾಮದಲ್ಲಿ ಗ್ಯಾಸ್ ಏಜೆನ್ಸಿ ಇಟ್ಟುಕೊಂಡಿದ್ದರು. ಕಳೆದ ರಾತ್ರಿ ತೋಟದಲ್ಲಿ ಬೆಳೆಗೆ ನೀರು ಹಾಯಿಸಲು ಹೋದಾಗ ಯಾರೋ ಕೊಲೆ ಮಾಡಿದ್ದಾರೆ. ಅವರು ದಶಕದ ಹಿಂದೆಯೇ ಪತ್ನಿಯನ್ನು ಕಳೆದುಕೊಂಡಿದ್ದ. ಇದರ ಮಧ್ಯೆ ಹದಿಹರೆಯದ ಮಹಿಳೆಯ ಜೊತೆ ಅಕ್ರಮ ಸಂಬಂಧವೂ ಇತ್ತು ಎಂಬ ಮಾತುಗಳು ಕೇಳಿಬಂದಿವೆ. ಹಣದ ವ್ಯವಹಾರಗಳೂ ಇದ್ದವು, ಆದರೆ ಕೊಲೆ

ತೋಟಕ್ಕೆ ಹೋದ ರೈತನ ಬರ್ಬರ ಕೊಲೆ | ಅಕ್ರಮ ಸಂಬಂಧದ ಶಂಕೆ? Read More »