ಸಮಗ್ರ ಸಮಾಚಾರ

ಆಗುಂಬೆ ಘಾಟಿಯಲ್ಲಿ ಪ್ರಪಾತಕ್ಕೆ ಉರುಳಿದ ಲಾರಿ: ನಾಲ್ವರು ದುರ್ಮರಣ, ಐವರು ಗಂಭೀರ

ಕಾರ್ಕಳ: ಆಗುಂಬೆ ಘಾಟಿಯಲ್ಲಿ ಭೀಕರ ಅಪಘಾತ ಸಂಭವಿಸಿ 4 ಮಂದಿ ದಾರುಣ ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡ ಘಟನೆ ಅ.29 ರ ಶುಕ್ರವಾರ ನಡೆದಿದೆ. ಮೃತಪಟ್ಟ ನಾಲ್ವರು ಕಾರ್ಕಳದ ಮಿಯ್ಯಾರಿನವರು ಎಂದು ತಿಳಿದುಬಂದಿದೆ. ಘಟನೆಯ ಪರಿಣಾಮ ಐವರು ಗಂಭೀರ ಗಾಯಗೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯ 9 ನೇ ತಿರುವಿನಲ್ಲಿ ಈ ಘಟನೆ ನಡೆದಿದ್ದು, ಚಾಲಕ ನಿಯಂತ್ರಣ ತಪ್ಪಿ ಲಾರಿ ಪ್ರಪಾತಕ್ಕೆ ಬಿದ್ದಿದೆ ಎಂದು ಹೇಳಲಾಗಿದೆ. ಈ ಘಟನೆಯಲ್ಲಿ ನಾಲ್ಕು ಮಂದಿ ಸಾವನಪ್ಪಿದ್ದು, ಐದು […]

ಆಗುಂಬೆ ಘಾಟಿಯಲ್ಲಿ ಪ್ರಪಾತಕ್ಕೆ ಉರುಳಿದ ಲಾರಿ: ನಾಲ್ವರು ದುರ್ಮರಣ, ಐವರು ಗಂಭೀರ Read More »

ಮೈಸೂರು: ವಿಜೃಂಭಣೆಯಿಂದ ನಡೆಯುತ್ತಿರುವ ದಸರಾ ಮಹೋತ್ಸವ, ಇಲ್ಲಿದೆ ಜಂಬೂಸವಾರಿಯ ನೇರಪ್ರಸಾರ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದು ಕೊನೆಯಾಗಲಿದೆ. ಈಗಾಗಲೇ ಪೂಜಾ ಕೈಂಕರ್ಯಗಳು ನೆರವೇರಿದ್ದು, ಈಗಾಗಲೇ ಜಂಬೂ ಸವಾರಿ ಮೆರವಣಿಗೆ ಆರಂಭವಾಗಿದೆ. ಅರಮನೆ ಆವರಣದಲ್ಲಿ ನಡೆಯುವ ಜಂಬೂ ಸವಾರಿಯ ನೇರ ಪ್ರಸಾರ ಇಲ್ಲಿದೆ. ಕೃಪೆ ಡಿಡಿ ಚಂದನ :

ಮೈಸೂರು: ವಿಜೃಂಭಣೆಯಿಂದ ನಡೆಯುತ್ತಿರುವ ದಸರಾ ಮಹೋತ್ಸವ, ಇಲ್ಲಿದೆ ಜಂಬೂಸವಾರಿಯ ನೇರಪ್ರಸಾರ Read More »

ಉಡುಪಿ: ಭೀಕರ ರಸ್ತೆ ಅಪಘಾತ – ಸವಾರ ಸ್ಥಳದಲ್ಲೇ ಸಾವು

ಉಡುಪಿ: ಉಪ್ಪೂರು ಉಡುಪಿ – ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಉಪ್ಪೂರುವಿನಲ್ಲಿ ದ್ವಿಚಕ್ರ ವಾಹನ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಅ. 12ರ ಮಂಗಳವಾರ ನಡೆದಿದೆ. ಮೃತರನ್ನು ಮಂಡ್ಯ ಮೂಲದ ನಾಗರಾಜು (40) ಎಂದು ಗುರುತಿಸಲಾಗಿದೆ. ಇವರು ಚಲಾಯಿಸುತ್ತಿದ್ದ ಸ್ಕೂಟರಿಗೆ ಕಾರು ಹಿಂಬದಿಯಿಂದ ಢಿಕ್ಕಿ ಹೊಡೆದಿದ್ದು ಪರಿಣಾಮ ದ್ವಿಚಕ್ರ ವಾಹನ ಸವಾರ ರಸ್ತೆಗೆ ಉರುಳಿಬಿದ್ದಿದ್ದು, ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ರೈಸ್ ಮಿಲ್ ನಲ್ಲಿ ಕೆಲಸ ಮಾಡುತಿದ್ದ ನಾಗರಾಜು

ಉಡುಪಿ: ಭೀಕರ ರಸ್ತೆ ಅಪಘಾತ – ಸವಾರ ಸ್ಥಳದಲ್ಲೇ ಸಾವು Read More »

ಉಪ್ಪಿನಂಗಡಿ: ಭೀಕರ ರಸ್ತೆ ದುರಂತ| ಸಾರಿಗೆ ಬಸ್‌ ಹರಿದು ತಾಯಿ‌- ಮಗು ಸಾವು|

ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದ ತಾಯಿ ಮಗು ಮೇಲೆ ಕೆಎಸ್ ಆರ್ ಟಿ ಸಿ ಬಸ್ಸು ಹರಿದ ಪರಿಣಾಮ ಅವರಿಬ್ಬರೂ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಶಿರ್ಲಾಲು ನಿವಾಸಿಗಳಾದ ಶಾಹಿದಾ (25), ಮತ್ತು ಅವರ ಪುತ್ರ ಶಾಹೀನ್ (1) ಮೃತಪಟ್ಟವರು. ಬಸ್ಸುಗಳ ನಡುವಿನ ಪೈಪೋಟಿಯೇ ಈ ಘಟನೆಗೆ ಕಾರಣವೆಂದು ಸಾರ್ವಜನಿಕರು ಪ್ರತಿಭಟಿಸಿದ್ದು, ಬಸ್ಸು ನಿಲ್ದಾಣದ ಒಳಗೆ ಯಾವ ಬಸ್ಸುಗಳೂ ಪ್ರವೇಶಿಸದಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು

ಉಪ್ಪಿನಂಗಡಿ: ಭೀಕರ ರಸ್ತೆ ದುರಂತ| ಸಾರಿಗೆ ಬಸ್‌ ಹರಿದು ತಾಯಿ‌- ಮಗು ಸಾವು| Read More »

ಸುಳ್ಯ : ಪಯಸ್ವಿನಿ ನದಿಗೆ “ಮರಳು” ಕಂಟಕ! ಅಧಿಕಾರಿಗಳ ಮೌನಕ್ಕೆ ಸ್ಥಳೀಯರ ಆಕ್ರೋಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಕೃಪೆಯಿಂದ ಯಾವುದೇ ದಾಳಿ ನಡೆಯುತ್ತಿಲ್ಲ. ಒಂದೊಮ್ಮೆ ಕಾಟಾಚಾರಕ್ಕೆ ದಾಳಿ ನಡೆದರೂ ಕೆಲವೇ ದಿನಗಳಲ್ಲಿ ಮತ್ತೆ ಎಂದಿನಂತೆ ದಂಧೆ ಮುಂದುವರಿಯುವುದು ಜನಸಾಮಾನ್ಯರನ್ನು ಹೈರಾಣಾಗಿಸಿದೆ. ಸುಬ್ರಮಣ್ಯ, ಧರ್ಮಸ್ಥಳದ ಬಳಿಕ ಸುಳ್ಯ ತಾಲೂಕಿನ ಅರಂತೋಡು ಬಳಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ದಿನವೊಂದಕ್ಕೆ ನೂರಾರು ಲೋಡ್ ಗಳಷ್ಟು ಮರಳು ಸಾಗಾಟವಾಗುತ್ತಿದೆ.ಸುಳ್ಯ ತಾಲೂಕಿನ ಅರಂತೋಡು ಪೇಟೆ ದಾಟಿ ಮುಂದಕ್ಕೆ ಹೋಗುವಾಗ “ಕಾಮಧೇನು ಹೋಟೆಲ್” ಮುಂಭಾಗದ ರಸ್ತೆಯಲ್ಲಿ

ಸುಳ್ಯ : ಪಯಸ್ವಿನಿ ನದಿಗೆ “ಮರಳು” ಕಂಟಕ! ಅಧಿಕಾರಿಗಳ ಮೌನಕ್ಕೆ ಸ್ಥಳೀಯರ ಆಕ್ರೋಶ Read More »

ಮನೆಯ ಕೊಟ್ಟಿಗೆಯಲ್ಲಿ ದಾಸ್ತಾನಿರಿಸಿದ್ದ ರಕ್ತ ಚಂದನ ವಶ| ಆರೋಪಿಗಳ ಬಂಧನ

ಸುಳ್ಯ: ಪಂಜ ವಲಯ ಅರಣ್ಯ ಇಲಾಖೆ ಮತ್ತು ಪೊಲೀಸ್ ಅರಣ್ಯ ಸಂಚಾರಿ ದಳ ಘಟಕ ಚಿಕ್ಕಮಗಳೂರು ಇವರ ಜಂಟಿ ಕಾರ್ಯಾಚರಣೆಯಲ್ಲಿ ಬಾಳಿಲದ ಮನೆಯೊಂದರ ಕೊಟ್ಟಿಗೆಯಲ್ಲಿ ರಕ್ತಚಂದನ ಸೆ.22 ರಂದು ಪತ್ತೆಯಾಗಿದೆ. ಪೊಲೀಸ್ ಅರಣ್ಯ ಸಂಚಾರಿ ದಳ ಘಟಕಕ್ಕೆ ದೊರೆತ ಮಾಹಿತಿ ಮೇರೆಗೆ ಸೆ.22 ರಂದು ಮುಂಜಾನೆ ಬಾಳಿಲದ ಅಬ್ದುಲ್ ಎಂಬವರ ಮನೆಗೆ ಜಂಟಿ ಇಲಾಖೆಗಳ ಅಧಿಕಾರಿಗಳು ದಾಳಿ ನಡೆಸಿದಾಗ ಮನೆಯ ಕೊಟ್ಟಿಗೆಯಲ್ಲಿ 40 ತುಂಡು 260 ಕೆ.ಜಿ.ರಕ್ತ ಚಂದನ ಪತ್ತೆಯಾಗಿದ್ದು ಇಲಾಖೆಯವರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ

ಮನೆಯ ಕೊಟ್ಟಿಗೆಯಲ್ಲಿ ದಾಸ್ತಾನಿರಿಸಿದ್ದ ರಕ್ತ ಚಂದನ ವಶ| ಆರೋಪಿಗಳ ಬಂಧನ Read More »

ಕನ್ನಡಿಗ ನ್ಯಾ.ಅರವಿಂದ್ ಕುಮಾರ್ ಹೆಸರು ಗುಜರಾತ್ ಹೈಕೋರ್ಟ್ ಮು.ನ್ಯಾ. ಸ್ಥಾನಕ್ಕೆ ಶಿಫಾರಸು

ನವದೆಹಲಿ: ಸುಪ್ರೀಂಕೋರ್ಟ್ ಕೊಲಿಜಿಯಂ 8 ಹೈಕೋಟ್‍ಗಳಿಗೆ ಹೊಸ ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕೆ ಹೆಸರುಗಳನ್ನು ಶಿಫಾರಸು ಮಾಲಾಗಿದ್ದು, ಈ ಪಟ್ಟಿಯಲ್ಲಿ ರಾಜ್ಯ ಹೈಕೋಟ್‍ನಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಕನ್ನಡಿಗರಾದ ನ್ಯಾ. ಅರವಿಂದ್ ಕುಮಾರ್ ಹೆಸರು ಕೂಡ ಇದ್ದು ಅವರನ್ನು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ. ಸೆಪ್ಟೆಂಬರ್ 16 ರಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದಲ್ಲಿ ನಡೆದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದೀಗ ಗುಜರಾತ್ ಹೈಕೋರ್ಟ್ ಮುಖ್ಯ ನಾಯಮೂರ್ತಿ ಸ್ಥಾನಕ್ಕೆ

ಕನ್ನಡಿಗ ನ್ಯಾ.ಅರವಿಂದ್ ಕುಮಾರ್ ಹೆಸರು ಗುಜರಾತ್ ಹೈಕೋರ್ಟ್ ಮು.ನ್ಯಾ. ಸ್ಥಾನಕ್ಕೆ ಶಿಫಾರಸು Read More »

ರಾಜ್ಯದಲ್ಲಿ ವಿಚಿತ್ರ ಜ್ವರ ಪತ್ತೆ| 170ಕ್ಕೂ ಅಧಿಕ ಮಕ್ಕಳು ಆಸ್ಪತ್ರೆಗೆ ದಾಖಲು|

ದಾವಣಗೆರೆ : ರಾಜ್ಯದಲ್ಲಿ ಮಕ್ಕಳಿಗೆ ವಿಚಿತ್ರ ರೀತಿಯ ಜ್ವರ ಕಂಡುಬಂದಿದ್ದು, ನೂರಾರು ಮಕ್ಕಳನ್ನು ಬಾಧಿಸುತ್ತಿದ್ದು, 171 ಮಕ್ಕಳು ಆಸ್ಪತ್ರೆಗೆ ದಾಖಲಾಗುವಂತಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಹೀಗೆ ಹೊಸ ಮಾದರಿಯ ಜ್ವರ ಕಾಣಿಸಿಕೊಂಡಿದ್ದು, ಇಲ್ಲಿ ಹೊಸ ಥರದ ಡೆಂಘೆ ಜ್ವರ ಕಂಡುಬಂದಿದೆ. 171 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾವಣಗೆರೆ ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗ, ಬಾಪೂಜಿ ಆಸ್ಪತ್ರೆ ಹಾಗೂ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಒಟ್ಟು 171 ಮಕ್ಕಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇವರಲ್ಲಿ 45 ಮಕ್ಕಳು ಶಂಕಿತ ಡೆಂಘೆ ಜ್ವರದಿಂದ ಬಳಲುತ್ತಿದ್ದಾರೆ. ಎಲ್ಲರಿಗೂ

ರಾಜ್ಯದಲ್ಲಿ ವಿಚಿತ್ರ ಜ್ವರ ಪತ್ತೆ| 170ಕ್ಕೂ ಅಧಿಕ ಮಕ್ಕಳು ಆಸ್ಪತ್ರೆಗೆ ದಾಖಲು| Read More »

ಸುಳ್ಯ : ಶಾಲಾ ವಿದ್ಯಾರ್ಥಿಗಳನ್ನು ತಾಲಿಬಾನಿಗಳೆಂದು ನಿಂದಿಸಿದ ಎಸ್‌ಡಿ‌ಎಂಸಿ‌ ಅಧ್ಯಕ್ಷ ; ಕೇಸು ದಾಖಲು, ಪೋಷಕರಲ್ಲಿ ಭುಗಿಲೆದ್ದ ಆಕ್ರೋಶ

ಸುಳ್ಯ: ಇಲ್ಲಿನ ಕೋಲ್ಚಾರ್ ಶಾಲಾ ಮೈದಾನದಲ್ಲಿ ಆಟವಾಡುತ್ತಿರುವ ವಿದ್ಯಾರ್ಥಿಗಳನ್ನು ತಾಲಿಬಾನಿಗಳು ಎಂದು ಹೇಳಿದ ಎಸ್ ಡಿಎಂಸಿ ಅಧ್ಯಕ್ಷರ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾದ ಘಟನೆ ನಡೆದಿದೆ. ಎಸ್ ಡಿಎಂಸಿ ಅಧ್ಯಕ್ಷರನ್ನು ಸುದರ್ಶನ ಪಾತಿಕಲ್ಲು ಎಂದು ಗುರುತಿಸಲಾಗಿದೆ. ಸುದರ್ಶನ್ ಶಾಲೆಗೆ ಬಂದ ವೇಳೆ ಮೈದಾನದಲ್ಲಿ ಆಟವಾಡುತಿದ್ದ ವಿದ್ಯಾರ್ಥಿಗಳಲ್ಲಿ ಒಂದು ಸಮುದಾಯದ ಮಕ್ಕಳನ್ನು ಟಾರ್ಗೆಟ್ ಮಾಡಿ ತಾಲಿಬಾನಿಗಳು ಇಲ್ಲಿ ಆಟ ಆಡುವುದು ಯಾಕೆ ಎಂದು ಏರುಧ್ವನಿಯಲ್ಲಿ ಹೇಳಿದ್ದಾರೆ. ಅದಲ್ಲದೆ ಆಟ ಆಡಲು ಬಿಡದೆ ನಿಂದಿಸಿ ಬೆದರಿಸಿರುವ ಘಟನೆ

ಸುಳ್ಯ : ಶಾಲಾ ವಿದ್ಯಾರ್ಥಿಗಳನ್ನು ತಾಲಿಬಾನಿಗಳೆಂದು ನಿಂದಿಸಿದ ಎಸ್‌ಡಿ‌ಎಂಸಿ‌ ಅಧ್ಯಕ್ಷ ; ಕೇಸು ದಾಖಲು, ಪೋಷಕರಲ್ಲಿ ಭುಗಿಲೆದ್ದ ಆಕ್ರೋಶ Read More »

ಸುಳ್ಯ: ಪಂಚಾಯತ್ ಸದಸ್ಯೆ ‌ಹೊಳೆಗೆ ತಳ್ಳಿದ ವ್ಯಕ್ತಿ- ಇಬ್ಬರೂ ‌ನಾಪತ್ತೆ, ಅನೈತಿಕ ಸಂಬಂಧ ಶಂಕೆ?

ಸುಳ್ಯ: ಮಡಿಕೇರಿ ತಾಲೂಕು ಚೆಂಬು‌ ಗ್ರಾ.ಪಂ ಸದಸ್ಯೆಯೋರ್ವರನ್ನು ನೆರೆಮನೆಯಾತ ಹೊಳೆಗೆ ತಳ್ಳಿದ್ದು, ಬಳಿಕ ಇಬ್ಬರೂ ‌ನಾಪತ್ತೆಯಾದ ಘಟನೆ ಬುಧವಾರ ಸಂಜೆ ನಡೆದಿದೆ. ಚೆಂಬು‌ ಗ್ರಾ.ಪಂ ಸದಸ್ಯೆ ಕಮಲ ದಬ್ಬಡ್ಕ ಎಂಬವರು ಕಾರ್ಯಕ್ರಮವೊಂದಕ್ಕೆ ತೆರಳಿ ಮನೆಗೆ ಮರಳುವ ವೇಳೆ ದಾರಿ ಮದ್ಯೆ ಎದುರಾದ ‌ಮುತ್ತು‌ ಎಂಬಾತ‌ ಅವರನ್ನು ಸೇತುವೆಯಿಂದ ಹೊಳೆಗೆ ತಳ್ಳಿರುವುದಾಗಿ ಹೇಳಲಾಗಿದೆ. ಘಟನೆ ಬಳಿಕ ಕಮಲ ಅವರ ಸುಳಿವೂ ಸಿಗದೇ ಇತ್ತ ಮುತ್ತು ಕೂಡಾ ಕಾಣೆಯಾಗಿರುವುದಾಗಿ‌ ತಿಳಿದುಬಂದಿದೆ. ಕಮಲ ಮತ್ತು‌ ಮುತ್ತು‌ ಇಬ್ಬರಿಗೂ ಅನೈತಿಕ ಸಂಬಂಧ ‌ಇರುವುದಾಗಿ

ಸುಳ್ಯ: ಪಂಚಾಯತ್ ಸದಸ್ಯೆ ‌ಹೊಳೆಗೆ ತಳ್ಳಿದ ವ್ಯಕ್ತಿ- ಇಬ್ಬರೂ ‌ನಾಪತ್ತೆ, ಅನೈತಿಕ ಸಂಬಂಧ ಶಂಕೆ? Read More »