ಸಮಗ್ರ ಸಮಾಚಾರ

ಪುತ್ತೂರು: ಹಿಂದೂ ಕಾರ್ಯಕರ್ತ ಕಾರ್ತಿಕ್ ಮೇರ್ಲ ಕೊಲೆ ಆರೋಪಿಯ ಬರ್ಬರ ಹತ್ಯೆ

ಪುತ್ತೂರು: ಮೂರು ವರ್ಷಗಳ ಹಿಂದೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಪ್ರಮುಖ ಆರೋಪಿ ಆರ್ಯಾಪು ನಿವಾಸಿ ಚರಣ್ ರಾಜ್ ರೈ(28) ನನ್ನು ಪೆರ್ಲಂಪಾಡಿ ಬಳಿ ಶನಿವಾರ ಬರ್ಬರವಾಗಿ ಹತ್ಯೆ ಮಾಡಲಾಗಿದೆ. 2019 ಸೆ.3 ರಂದು ರಾತ್ರಿ ಸಂಪ್ಯದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಬಳಿ ಹಿಂದೂ ಜಾಗರಣ ವೇದಿಕೆಯ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಮೇರ್ಲ (27) ರವರನ್ನು ಪುತ್ತೂರಿನ ಹೊರವಲಯ ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗದಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. […]

ಪುತ್ತೂರು: ಹಿಂದೂ ಕಾರ್ಯಕರ್ತ ಕಾರ್ತಿಕ್ ಮೇರ್ಲ ಕೊಲೆ ಆರೋಪಿಯ ಬರ್ಬರ ಹತ್ಯೆ Read More »

ಹಣದಾಸೆಗೆ ವಜ್ರದ ವ್ಯಾಪಾರಿಯ ಅಪಹರಣ| ಖಳನಟ ನಾರಾಯಣ್ ಸೇರಿದಂತೆ ನಾಲ್ಕು ಮಂದಿ‌ ಅರೆಸ್ಟ್

ಸಮಗ್ರ ನ್ಯೂಸ್: ಹಣಕ್ಕಾಗಿ ವಜ್ರದ ವ್ಯಾಪಾರಿಯನ್ನು ಅಪಹರಿಸಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿ ತಲೆಮರೆಸಿಕೊಂಡಿದ್ದ ಪ್ರಕರಣದಲ್ಲಿ ಕನ್ನಡದ ಖಳನಟ ಸೇರಿ ನಾಲ್ವರನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ. ವೀರಪರಂಪರೆ, ದುಷ್ಟ ಹಾಗೂ‌ ಉಡಾ ಸೇರಿದಂತೆ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಆರೋಪಿ ನಾರಾಯಣ ಹಾಗೂ ಸಹಚರರಾದ ಉಮೇಶ್, ನರ್ತನ್ ಹಾಗೂ ಅಶ್ವತ್ಥ ಎಂಬುವರನ್ನು ಬಂಧಿಸಿ ಜೈಲಿಗಟ್ಟಲಾಗಿದೆ ಎಂದು ಕೇಂದ್ರ ವಿಭಾಗದ ಪ್ರಭಾರ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ. ಕಳೆದ ತಿಂಗಳು 20ರಂದು ನಗರದ ಶಿವಾನಂದ ಸರ್ಕಲ್ ಬಳಿ ವಜ್ರದ ವ್ಯಾಪಾರಿಯನ್ನ

ಹಣದಾಸೆಗೆ ವಜ್ರದ ವ್ಯಾಪಾರಿಯ ಅಪಹರಣ| ಖಳನಟ ನಾರಾಯಣ್ ಸೇರಿದಂತೆ ನಾಲ್ಕು ಮಂದಿ‌ ಅರೆಸ್ಟ್ Read More »

ಕರೆಂಟು ಹೋದ ಟೈಮಲಿ ಇದೆಂಥ ಎಡವಟ್ಟು, ಅವನ ಹುಡುಗಿಗೆ ಇವನು, ಇವನ ಹುಡುಗಿಗೆ ಅವನು ತಾಳಿ ಕಟ್ಟಿದ!, ಅತ್ತೆ ಮನೆಗೆ ಹೋದಾಗ ಘಟನೆ ಬೆಳಕಿಗೆ

ಮಧ್ಯ ಪ್ರದೇಶ: ಮದುವೆ ದಿನ ವಧು ವರರೇ ಅದಲು ಬದಲಾದರೆ ಅವರ ಪರಿಸ್ಥಿತಿ ಹೇಗಿರಬೇಡ ಯೋಚಿಸಿ.ಮಧ್ಯಪ್ರದೇಶದ ಗ್ರಾಮಾಂತರ ಪ್ರದೇಶದಲ್ಲಿ ಹಿಂದೆಂದೂ ಕೇಳಿರದ ಘಟನೆಯೊಂದು ಬೆಳಕಿಗೆ ಬಂದಿದೆ. ಉಜ್ಜಯಿನಿಯ ಗ್ರಾಮವೊಂದರಲ್ಲಿ ವಿಚಿತ್ರ ಘಟನೆ:ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈ ಘಟನೆ ನಡೆದಿದ್ದು, ರಮೇಶ್‌ಲಾಲ್ ಅವರ ಇಬ್ಬರು ಪುತ್ರಿಯರಾದ ನಿಕಿತಾ ಮತ್ತು ಕರಿಷ್ಮಾ ಬೇರೆ ಬೇರೆ ಕುಟುಂಬದ ಯುವಕರಾದ ದಂಗ್ವಾರಾ ಭೋಲಾ ಮತ್ತು ಗಣೇಶ್ ಅವರನ್ನು ವಿವಾಹವಾಗಬೇಕಿತ್ತು. ಸಂಪ್ರದಾಯದ ಪ್ರಕಾರ ವಧುಗಳು ಮುಖವನ್ನು ಮುಸುಕಿನಿಂದ ಮುಚ್ಚಿಕೊಂಡಿದ್ದರಿಂದ ಹಾಗೂ ಮದುವೆಯ ವೇಳೆ ಕರೆಂಟ್ ಕೈ

ಕರೆಂಟು ಹೋದ ಟೈಮಲಿ ಇದೆಂಥ ಎಡವಟ್ಟು, ಅವನ ಹುಡುಗಿಗೆ ಇವನು, ಇವನ ಹುಡುಗಿಗೆ ಅವನು ತಾಳಿ ಕಟ್ಟಿದ!, ಅತ್ತೆ ಮನೆಗೆ ಹೋದಾಗ ಘಟನೆ ಬೆಳಕಿಗೆ Read More »

ವಿವಾದಾತ್ಮಕ ಪೊಸ್ಟ್‌: ಹುಬ್ಬಳ್ಳಿಯಲ್ಲಿ ಗಲಾಟೆ, ಪರಿಸ್ಥಿತಿ ಉದ್ವಿಗ್ನ

ವಾಹನಗಳಿಗೆ ಕಲ್ಲು ತೂರಾಟ ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆಗೆ ರಾತ್ರೋ ರಾತ್ರಿ ಮುತ್ತಿಗೆ ಹುಬ್ಬಳ್ಳಿ: ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್‌ ಹಾಕಿರುವ ವಿಚಾರವಾಗಿ ಹಳೆ ಹುಬ್ಬಳ್ಳಿ ಪ್ರದೇಶದಲ್ಲಿ ಶನಿವಾರ ರಾತ್ರಿ ತೀವ್ರ ಹಿಂಸಾಚಾರ ಸಂಭವಿಸಿದೆ. ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ ಉದ್ರಿಕ್ತರ ಗುಂಪು, ಬಸ್ಸು ಹಾಗೂ ಮತ್ತಿತರ ವಾಹನಗಳಿಗೆ ಕಲ್ಲು ತೂರಾಟ ನಡೆಸಿದೆ. ಘಟನೆಯಲ್ಲಿ ಇನ್‌ಸ್ಪೆಕ್ಟರ್‌ ಸೇರಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ನಗರದಲ್ಲಿ

ವಿವಾದಾತ್ಮಕ ಪೊಸ್ಟ್‌: ಹುಬ್ಬಳ್ಳಿಯಲ್ಲಿ ಗಲಾಟೆ, ಪರಿಸ್ಥಿತಿ ಉದ್ವಿಗ್ನ Read More »

ಸುಳ್ಯ: ಜಾತ್ರೋತ್ಸವದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರ ನಿರಾಕರಣೆ ಬ್ಯಾನರ್

ಸಮಗ್ರ ನ್ಯೂಸ್: ಹಿಜಾಬ್ ವಿವಾದದ ಬಳಿಕ ರಾಜ್ಯಾದ್ಯಂತ ಮುಸ್ಲಿಂ ವ್ಯಾಪಾರಸ್ಥರು ಹೈಕೋರ್ಟ್ ತೀರ್ಪಿನ ವಿರುದ್ಧ ಬಂದ್ ಮಾಡಿರುವ ಹಿನ್ನಲೆಯಲ್ಲಿ ಇದೀಗ ಬಹುತೇಕ ಜಾತ್ರೋತ್ಸವ ಸಂತೆ ಮಾರುಕಟ್ಟೆಯಲ್ಲಿ ಮುಸಲ್ಮಾನರಿಗೆ ವ್ಯಾಪಾರ ನಿರ್ಬಂಧಿಸಲಾಗುತ್ತಿದೆ. ಇದೀಗ ಈ ವ್ಯಾಪಾರ ನಿಷೇಧ ಸುಳ್ಯಕ್ಕೂ ಕಾಲಿರಿಸಿದ್ದು, ಇಲ್ಲಿನ ಜಯನಗರದ ಜಾತ್ರೋತ್ಸವದಲ್ಲಿ ಮುಸ್ಲಿಂಮರಿಗೆ ವ್ಯಾಪಾರ ನಿಷೇಧಿಸಿರುವ ಕುರಿತಾದ ಬ್ಯಾನರ್ ಅಳವಡಿಸಲಾಗಿದೆ. ಜಯನಗರದ ಆದಿಮೊಗೇರ್ಕಳ ಕೊರಗಜ್ಜನ ಸನ್ನಿಧಾನದಲ್ಲಿ ನಡೆಯುವ ಜಾತ್ರೋತ್ಸವದಲ್ಲಿ ಅನ್ಯಧರ್ಮೀಯರು ವ್ಯಾಪಾರ ನಡೆಸಬಾರದು ಎಂಬ ಬ್ಯಾನರ್ ಅಳವಡಿಸಲಾಗಿದೆ.

ಸುಳ್ಯ: ಜಾತ್ರೋತ್ಸವದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರ ನಿರಾಕರಣೆ ಬ್ಯಾನರ್ Read More »

ಬೆಳ್ತಂಗಡಿ: ತಂದೆಯ ಕೊಲೆ ಪ್ರಕರಣ – ಪುತ್ರನ ಕೃತ್ಯ ಸಾಬೀತು

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ 2021ರಲ್ಲಿ ತಂದೆಯನ್ನು ಹತ್ಯೆ ಮಾಡಿದ ಪ್ರಕರಣದ ವಿಚಾರಣೆ ಮಂಗಳೂರಿನ 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದಿದ್ದು, ಪುತ್ರನ ಮೇಲಿನ ಆರೋಪ ಸಾಬೀತಾಗಿದೆ. 2021ರ ಜ. 18ರಂದು ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ನಡು ಮುಡ್ಯೊಟ್ಟು ನಿವಾಸಿ ಶ್ರೀಧರ ಪೂಜಾರಿ (56) ಅವರನ್ನು ಪುತ್ರ ಹರೀಶ್‌ ಪೂಜಾರಿ (28) ಕೊಲೆ ಮಾಡಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿವರ : ಆರೋಪಿ ಹರೀಶ್‌ ಪೂಜಾರಿ ಅನ್ಯ ಜಾತಿಯ ಹುಡುಗಿಯನ್ನು

ಬೆಳ್ತಂಗಡಿ: ತಂದೆಯ ಕೊಲೆ ಪ್ರಕರಣ – ಪುತ್ರನ ಕೃತ್ಯ ಸಾಬೀತು Read More »

ಮಂಗಳೂರು: ಪೊಲೀಸ್ ಸಿಬ್ಬಂದಿಗೆ ಚೂರಿ ಇರಿತ| ಆರೋಪಿ ಪರಾರಿ

ಸಮಗ್ರ ನ್ಯೂಸ್: ಪೊಲೀಸ್ ಸಿಬ್ಬಂದಿ ಮೇಲೆ ಚೂರಿ ಇರಿದಿರುವ ಘಟನೆ ಮಂಗಳೂರು ನಗರದ ಸೆಂಟ್ರಲ್ ಮಾರ್ಕೆಟ್ ಬಳಿ ಸೋಮವಾರ ನಡೆದಿದೆ. ಕಾಸರಗೋಡು ಮೂಲದ ವ್ಯಕ್ತಿಯೊಬ್ಬ ಬಂದರ್ ಠಾಣೆಯ ಪೊಲೀಸ್ ಸಿಬ್ಬಂದಿ ವಿನೋದ್‌ ಎಂಬವರಿಗೆ ಚೂರಿ ಇರಿದಿದ್ದಾನೆ. ದುಬಾರಿ ಬೆಲೆಯ ವಾಚ್ ಮಾರಾಟಕ್ಕಾಗಿ ಕಾಸರಗೋಡು ಮೂಲದ ವ್ಯಕ್ತಿ ಬಂದಿದ್ದು, ಆತನ ಮೇಲೆ ಅನುಮಾನಗೊಂಡ ಅಂಗಡಿಯ ಮಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಬಂದರ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ವ್ಯಕ್ತಿ ಚೂರಿ ಇರಿದಿದ್ದು,

ಮಂಗಳೂರು: ಪೊಲೀಸ್ ಸಿಬ್ಬಂದಿಗೆ ಚೂರಿ ಇರಿತ| ಆರೋಪಿ ಪರಾರಿ Read More »

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಬರ್ಬರ ಹತ್ಯೆ

ಶಿವಮೊಗ್ಗ : ಅನ್ಯಕೋಮಿನ ಗುಂಪೊಂದು ಯುವಕನೋರ್ವನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಶಿವಮೊಗ್ಗ ನಗರದ ಸೀಗೆಹಟ್ಟಿಯಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು ಬಜರಂಗದಳದ ಕಾರ್ಯಕರ್ತ ಹರ್ಷ ಎಂದು ಗುರುತಿಸಲಾಗಿದೆ. ಹರ್ಷ ಕ್ಯಾಂಟೀನ್ ಬಳಿ ಟೀ ಕುಡಿಯುತ್ತಾ ನಿಂತಿದ್ದ ವೇಳೆ ಕಾರಿನಲ್ಲಿ ಬಂದ ಯುವಕರ ಗುಂಪು ಏಕಾಏಕಿ ಹರ್ಷನ ಮೇಲೆ ದಾಳಿ ನಡೆಸಿದೆ. ನಂತರ ದಾಳಿ ನಡೆಸಿದ ತಂಡ ಸ್ಥಳದಿಂದ ಪರಾರಿಯಾಗಿದೆ. ಈ ವೇಳೆ ಹರ್ಷ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ನಂತರ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಬರ್ಬರ ಹತ್ಯೆ Read More »

ಸುಳ್ಯದ ಕಾಲೇಜೊಂದರಲ್ಲಿ ಹಿಜಾಬ್ ಸಂಘರ್ಷ

ಸುಳ್ಯ: ರಾಜ್ಯಾದ್ಯಂತ ವಿವಾದಕ್ಕೆ ಕಾರಣವಾದ ಹಿಜಾಬ್ ವಿವಾದ ಸುಳ್ಯಕ್ಕೂ ಕಾಲಿಟ್ಟಿದ್ದು, ನೆಹರೂ ಮೆಮೊರಿಯಲ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕೆಲವರು ಹಿಜಾಬ್ ಧರಿಸಿ ಬಂದ ಘಟನೆ ಇಂದು ವರದಿಯಾಗಿದೆ. ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಪ್ರವೇಶ ನಿರಾಕರಿಸಿದ ಹಿನ್ನೆಲೆ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಒಂದುಗೂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಬಂದೋಬಸ್ತ್ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸುಳ್ಯದ ಕಾಲೇಜೊಂದರಲ್ಲಿ ಹಿಜಾಬ್ ಸಂಘರ್ಷ Read More »

ಸುಳ್ಯ : ರಬ್ಬರ್ ಸಾಗಾಟದ ಲಾರಿ ಪಲ್ಟಿ

ಸುಳ್ಯ : ತಾಲೂಕಿನ ಬೆಳ್ಳಾರೆ ಸಮೀಪದ ಪಂಜಿಗಾರು ಎಂಬಲ್ಲಿ ಲಾರಿ ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ನಡೆದಿದೆ. ಬೆಳ್ಳಾರೆಯಿಂದ ಪಂಜ ಕಡೆ ರಬ್ಬರ್ ಲೋಡ್ ಮಾಡಿಕೊಂಡು ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಲಾರಿ ಎಂಬಲ್ಲಿ ಪಲ್ಟಿಯಾಗಿದೆ.ಪಲ್ಟಿಯಾದ ರಭಸಕ್ಕೆ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಲಾರಿಯಲ್ಲಿದ್ದ ರಬ್ಬರ್ ಶೀಟ್ ಗಳು ಎಲ್ಲಾ ಕಡೆ ಚದುರಿ ಹೋಗಿದೆ. ಚಾಲಕ ಗಂಭೀರ ಗಾಯಗೊಂಡಿದ್ದು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ಳಾರೆ ಠಾಣಾ ಎಸ್.ಐ ಆಂಜನೇಯ ರೆಡ್ಡಿ ಹಾಗೂ

ಸುಳ್ಯ : ರಬ್ಬರ್ ಸಾಗಾಟದ ಲಾರಿ ಪಲ್ಟಿ Read More »