ಸಮಗ್ರ ಸಮಾಚಾರ

‘ಎಸ್.‌ಅಂಗಾರ ನೀವು ಯಾವಾಗ ಸರಿ ಆಗ್ತೀರಾ?’ | ವಿಷಾದದಿಂದ ಸಚಿವರ ಕಾಲೆಳೆದ ಆರ್ ಎಸ್.ಎಸ್ ಪ್ರಚಾರಕ

ಸಮಗ್ರ ನ್ಯೂಸ್: ಹೌದು, ಇಂತಹ ಒಂದು ಕಮೆಂಟ್ ಸಚಿವ ಅಂಗಾರರ ಪೇಸ್ ಬುಕ್ ಪೇಜ್ ನಲ್ಲಿ ಬಿದ್ದಿದ್ದು, ಆರ್.ಎಸ್.ಎಸ್ ನ ಪ್ರಚಾರಕರೋರ್ವರು ಸಚಿವರನ್ನು ಭರ್ಜರಿಯಾಗಿ‌ ಕಾಲೆಳೆದಿದ್ದಾರೆ. ವಿಷಾದದಿಂದಲೇ ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಆರ್‌ಎಸ್‌ಎಸ್‌ ಪ್ರಚಾರಕರೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಕರೊಬ್ಬರು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡಿರುವುದು ಈಗ ಚರ್ಚೆಯ ವಿಷಯವಾಗಿದೆ. ಭಾರತ ಸರ್ಕಾರದ ಭೂವಿಜ್ಞಾನ ಮಂತ್ರಾಲಯ ಹಾಗೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ […]

‘ಎಸ್.‌ಅಂಗಾರ ನೀವು ಯಾವಾಗ ಸರಿ ಆಗ್ತೀರಾ?’ | ವಿಷಾದದಿಂದ ಸಚಿವರ ಕಾಲೆಳೆದ ಆರ್ ಎಸ್.ಎಸ್ ಪ್ರಚಾರಕ Read More »

ಕೆಎಸ್​ಎಪಿಎಸ್​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಡಿಗ್ರಿ ಆಗಿದ್ರೆ ಅರ್ಜಿ ಸಲ್ಲಿಸಿ

ಸಮಗ್ರ‌ ನ್ಯೂಸ್: ಕರ್ನಾಟಕ ರಾಜ್ಯ ಏಡ್ಸ್​ ಪ್ರಿವೆನ್ಷನ್​ ಸೊಸೈಟಿಯಿಂದ ಕ್ಲಸ್ಟರ್​ ಪ್ರೋಗ್ರಾಂ ಮ್ಯಾನೇಜರ್​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 11 ಹುದ್ದೆಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 14, 2022. ಈ 11 ಹುದ್ದೆಗಳಲ್ಲಿ ಮೂರು ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಸಲಾಗುವುದು.

ಕೆಎಸ್​ಎಪಿಎಸ್​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಡಿಗ್ರಿ ಆಗಿದ್ರೆ ಅರ್ಜಿ ಸಲ್ಲಿಸಿ Read More »

ಜಿಮ್ ಗಳಲ್ಲಿ ಪ್ರೋಟಿನ್ ಪೌಡರ್ ಮಾರಟ ಮಾಡುವವರ ವಿರುದ್ಧ ಕಠಿಣ ಕ್ರಮ

ಬೆಂಗಳೂರು : ರಾಜ್ಯದ ಕೆಲ ಜಿಮ್ ಗಳಲ್ಲಿ ಪ್ರೋಟೀನ್ ಪೌಡರ್ ಮಾರಾಟ ಮಾಡಲಾಗುತ್ತಿದ್ದು, ಪ್ರೋಟೀನ್ ಪೌಡರ್ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದ ಹಲವು ಜಿಮ್​ನಲ್ಲಿ ಬಳಸುವ ಪ್ರೋಟೀನ್​ ಪೌಡರ್ ಬ್ಯಾನ್‌ ಮಾಡುವಂತೆ ಸದನದಲ್ಲಿ ಒತ್ತಾಯ ಮಾಡಲಾಗಿದೆ. ಈ ಬಗ್ಗೆ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್​ ರೆಡ್ಡಿ ಜಿಮ್​ಗಳಲ್ಲಿ ಬಳಕೆ ಮಾಡುವ ಪ್ರೋಟೀನ್ ಪೌಡರ್‌ಗಳ ಬಗ್ಗೆ ಸದನದ ಗಮನ ಸೆಳೆದರು. ಇದೇ ವೇಳೆ ಪ್ರೋಟೀನ್ ಪೌಡರ್ ಮಾರಾಟದ ಬಗ್ಗೆ ಸಮಗ್ರ ತನಿಖೆ

ಜಿಮ್ ಗಳಲ್ಲಿ ಪ್ರೋಟಿನ್ ಪೌಡರ್ ಮಾರಟ ಮಾಡುವವರ ವಿರುದ್ಧ ಕಠಿಣ ಕ್ರಮ Read More »

ವಿಜಯಪುರ: ಅಕ್ರಮವಾಗಿ ಶಿಕ್ಷಕರ ನೇಮಕ ವಿಚಾರ| ಬಂಧಿತರ ಸಂಖ್ಯೆ ಮೂರಕ್ಕೇರಿಕೆ

ಸಮಗ್ರ ನ್ಯೂಸ್: ಅಕ್ರಮವಾಗಿ ಶಿಕ್ಷಕರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ರಮ ನೇಮಕಾತಿಯಲ್ಲೂ ವಿಜಯಪುರ ಜಿಲ್ಲೆಗೂ ನಂಟು ಹೊಂದಿದ್ದು,ಅಕ್ರಮವಾಗಿ ನೇಮಕಾತಿಯಾಗಿರೋ ಮತ್ತೋರ್ವ ಶಿಕ್ಷಕನ ಬಂಧನವಾಗಿದೆ. ಬಂಧಿತರ ಸಂಖ್ಯೆ ಇದೀಗ ಮೂರಕ್ಕೇರಿದೆ. ವಿಜಯಪುರ ಜಿಲ್ಲಾ ಮೂಲದ ಅಶೋಕ ಚವ್ಹಾಣ್ ಬಂಧಿತ ಮತ್ತೋರ್ವ ಶಿಕ್ಷಕರಾಗಿದ್ದಾರೆ. ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಭೈರವಾಡಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಅಶೋಕ ಚವ್ಹಾಣ್ ಇವರ ವಿರುದ್ಧ ಸೂಕ್ತ ಮಾಹಿತಿ ಕಲೆ ಹಾಕಿ ಅಕ್ರಮ ನೇಮಕಾತಿ ಹೊಂದಿದ್ದನ್ನು ಖಚಿತಪಡಿಸಿಕೊಂಡಿರೋ ಸಿಓಡಿ ಅಧಿಕಾರಿಗಳು ಇದೀಗ

ವಿಜಯಪುರ: ಅಕ್ರಮವಾಗಿ ಶಿಕ್ಷಕರ ನೇಮಕ ವಿಚಾರ| ಬಂಧಿತರ ಸಂಖ್ಯೆ ಮೂರಕ್ಕೇರಿಕೆ Read More »

ಬಿಕ್ಷಾಟನೆ ನಿರ್ಮೂಲನೆಯ ಜನಜಾಗೃತಿ ವಾಹನಕ್ಕೆ ಅಪರ ಜಿಲ್ಲಾಧಿಕಾರಿಯಿಂದ ಹಸಿರು ನಿಶಾನೆ

ಸಮಗ್ರ ನ್ಯೂಸ್: ಬಿಕ್ಷಾಟನೆ ನಿರ್ಮೂಲನೆಯ ಜನಜಾಗೃತಿ ವಾಹನಕ್ಕೆ ಅಪರ ಜಿಲ್ಲಾಧಿಕಾರಿಗಳಾದ ರಮೇಶ ಕಳಸದ ಅವರು ಸೆ. 20ರಂದು, ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಹಸಿರು ನಿಶಾನೆ ತೋರಿದರು. ಈ ವೇಳೆ ಮಾತನಾಡಿದ ಅವರು, ಕರ್ನಾಟಕ ಬಿಕ್ಷಾಟನೆ ನಿಷೇಧ ಅಧಿನಿಯಮ 1975ರ ಸೆಕ್ಷನ್ 3ರನ್ವಯ ಭೀಕ್ಷೆ ಬೇಡುವುದನ್ನು ನಿಷೇಧಿಸಲಾಗಿದೆ. ಭಿಕ್ಷೆ ಬೇಡುವುದು ಮತ್ತು ನೀಡುವುದು ಅಪರಾಧವಾಗಿದೆ. ಈ ಬಗ್ಗೆ ಸಾರ್ವಜನಿಕರು ಅರಿಯಬೇಕು ಎಂದು ತಿಳಿಸಿದರು. ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರಾಮನಗೌಡ ಕನ್ನೊಳ್ಳಿ ಅವರು ಮಾತನಾಡಿ,

ಬಿಕ್ಷಾಟನೆ ನಿರ್ಮೂಲನೆಯ ಜನಜಾಗೃತಿ ವಾಹನಕ್ಕೆ ಅಪರ ಜಿಲ್ಲಾಧಿಕಾರಿಯಿಂದ ಹಸಿರು ನಿಶಾನೆ Read More »

ಸುಳ್ಯ: 7 ದಶಕಗಳಿಂದ ದುರಸ್ಥಿಯಾಗದೆ ಉಳಿದ ಶೇಣಿ- ಹೊಸಮಜಲು ರಸ್ತೆ| ಪ್ರಚಾರಕ್ಕಷ್ಟೆ ಜನಪ್ರತಿನಿಧಿಗಳು, ರಸ್ತೆ ಅಭಿವೃದ್ಧಿ ಮಾಡೋರು ಯಾರು?

ಸಮಗ್ರ ನ್ಯೂಸ್: ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳೇ ಕಳೆದರೂ ಗ್ರಾಮೀಣ ಭಾರತ ಇಂದಿಗೂ ಅದೇ ಪರಿಸ್ಥಿತಿಯಲ್ಲಿದೆ ಎಂಬುದು ಅಉಳ್ಯ ತಾಲೂಕಿನಲ್ಲಿ ಮತ್ತೆ‌ಮತ್ತೆ ಸಾಬೀತಾಗುತ್ತಿದೆ. ಇದಕ್ಕೆ ಮತ್ತೊಂದು ಜ್ವಲಂತ ಉದಾಹರಣೆ ದ.ಕ ಜಿಲ್ಲೆಯ‌ ಸುಳ್ಯ ತಾಲೂಕಿನ ಅಮರ ಪಡ್ನೂರು‌ ಗ್ರಾಮದ ಶೇಣಿ-ಹೊಸಮಜಲು ರಸ್ತೆ. ಈ‌ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಜನರು ನಡೆದುಕೊಂಡು ಹೋಗುವುದಕ್ಕೆ ಕಷ್ಟ ಪಡುವಂತಾಗಿದೆ. ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ವ್ಯಾಪ್ತಿಯ ರಸ್ತೆ ಇದಾಗಿದ್ದು ಸತತ ಹತ್ತು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದೆ. ಸಂಪೂರ್ಣ ಕೆಸರುಮಯವಾಗಿರುವ ಈ ರಸ್ತೆ

ಸುಳ್ಯ: 7 ದಶಕಗಳಿಂದ ದುರಸ್ಥಿಯಾಗದೆ ಉಳಿದ ಶೇಣಿ- ಹೊಸಮಜಲು ರಸ್ತೆ| ಪ್ರಚಾರಕ್ಕಷ್ಟೆ ಜನಪ್ರತಿನಿಧಿಗಳು, ರಸ್ತೆ ಅಭಿವೃದ್ಧಿ ಮಾಡೋರು ಯಾರು? Read More »

ವಿಜಯಪುರ ಜಿಲ್ಲೆಯಲ್ಲಿ ಸೆ.26 ರಂದು 26ರಂದು ಮಿನಿ ಉದ್ಯೋಗ ಮೇಳ

ಸಮಗ್ರ ನ್ಯೂಸ್: ವಿಜಯಪುರ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ಸೆಪ್ಟೆಂಬರ್ 26ರಂದು ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಬೆಳಿಗ್ಗೆ 10 ರಿಂದ ಸಂಜೆ 4ಗಂಟೆಗಳವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವಿಜಯಪುರದಲ್ಲಿ, ವಿವಿಧ ಖಾಸಗಿ ಕ್ಷೇತ್ರಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುವುದು. ಈ ಮೇಳದಲ್ಲಿ ಎಸ್. ಎಸ್.ಎಲ್.ಸಿ., ಪಿ.ಯು.ಸಿ,ಐ.ಟಿ.ಐ, ಪದವಿ ಪಾಸ್ ಆದಂತಹ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಈ ಕಚೇರಿಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08352-250383 : 9945000793

ವಿಜಯಪುರ ಜಿಲ್ಲೆಯಲ್ಲಿ ಸೆ.26 ರಂದು 26ರಂದು ಮಿನಿ ಉದ್ಯೋಗ ಮೇಳ Read More »

ಸುಳ್ಯ: ಸರ್ಕಾರಿ ಜಾಗ ಅತಿಕ್ರಮಣಕ್ಕೆ ಯತ್ನ..! ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ|

ಸಮಗ್ರ ನ್ಯೂಸ್: ಸರಕಾರಿ ಜಾಗವನ್ನು ಅತಿಕ್ರಮಣಕ್ಕೆ ಯತ್ನಿಸಿದ್ದು, ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವ ಘಟನೆ ಸುಳ್ಯ ನಗರದ ಜಯನಗರ ಎಂಬಲ್ಲಿ ನಡೆದಿದೆ. ಜಯನಗರದ ಸರಕಾರಿ ಶಾಲೆಯ ಸಮೀಪ ಗೋಪಾಲ್ ನಾಯಕ್ ಎಂಬವರಿಗೆ ವಾಸಿಸಲು ಮನೆ ಮತ್ತು ಖಾಲಿ ಜಾಗವಿದ್ದರೂ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಲು ಸೆ.16 ರಂದು ಜೆ.ಸಿ.ಬಿ ತರಿಸಿ ಕೆಲಸ ಪ್ರಾರಂಭಿಸಿದ್ದರು. ಈ ವೇಳೆ ಸ್ಥಳೀಯರಾದ ಹಸೈನಾರ್ ಜಯನಗರ ಎಂಬವರು ಇದನ್ನು ತಡೆ ಹಿಡಿದು, ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು,

ಸುಳ್ಯ: ಸರ್ಕಾರಿ ಜಾಗ ಅತಿಕ್ರಮಣಕ್ಕೆ ಯತ್ನ..! ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ| Read More »

ದೇವಸ್ಥಾನದಲ್ಲಿ ನಡೆಯಿತು ‘ಪ್ಯಾಷನ್ ಶೋ’| ಭಜರಂಗದಳದಿಂದ ದೂರು ದಾಖಲು

ಸಮಗ್ರ ನ್ಯೂಸ್: ದೇವಸ್ಥಾನದಲ್ಲಿ ‘ಫ್ಯಾಷನ್ ಶೋ’ ಆಯೋಜಿಸಿದ್ದನ್ನು ಭಜರಂಗ ದಳದ ಕಾರ್ಯಕರ್ತರು ಆಕ್ಷೇಪಿಸಿರುವ ಘಟನೆ ಛತ್ತೀಸ್ ಗಢ ರಾಜ್ಯದ ರಾಯ್ಪುರದ ಬಾಲಾಜಿ ದೇವಸ್ಥಾನದಲ್ಲಿ ‌ನಡೆದಿದೆ. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ತಂದ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಭಜರಂಗ ದಳ ಹೇಳಿದೆ. ಟೆಲಿಬಂಡಾ ಪೊಲೀಸ್ ಠಾಣೆ ವ್ಯಾಪ್ತಿಯ ಸಾಲಸರ್ ದೇವಸ್ಥಾನದಲ್ಲಿ ಭಾನುವಾರ ಎಫ್‌ಡಿಸಿಎ ಹೆಸರಿನ ಕಂಪನಿಯು ‘ಫ್ಯಾಷನ್ ಶೋ’ ಆಯೋಜಿಸಿದೆ. ಆರಿಫ್ ಮತ್ತು ಮನೀಶ್ ಸೋನಿ ಎಂಬುವವರೇ ಈ ‘ಫ್ಯಾಶನ್ ಶೋ’ದ ಆಯೋಜಕರು ಎಂದು ವರದಿಯಾಗಿದೆ. ಧಾರ್ಮಿಕ

ದೇವಸ್ಥಾನದಲ್ಲಿ ನಡೆಯಿತು ‘ಪ್ಯಾಷನ್ ಶೋ’| ಭಜರಂಗದಳದಿಂದ ದೂರು ದಾಖಲು Read More »

ಬೆಳಗಾವಿ: ರಸ್ತೆ ಸುರಕ್ಷತಾ ತಡೆಗೋಡೆಯ ನಿರ್ಮಿಸಲು ಸಮೀಕ್ಷೆ ನಡೆಸಿದ ಅಧಿಕಾರಿಗಳು

ಸಮಗ್ರ ನ್ಯೂಸ್: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರಖುರ್ದ ಪಟ್ಟಣ ಹಾಗೂ ಉಗಾರ ಬುದ್ರುಕ ಗ್ರಾಮದ ಮಾರ್ಗದ ರಸ್ತೆಯ ಬಗ್ಗೆ ‘ಸಮಗ್ರ ಸಮಾಚಾರ’ ಅಧಿಕಾರಿಗಳು ನಿರ್ಲಕ್ಷ್ಯಕ್ಕೆ ನೆಲಕ್ಕೆ ಉರುಳಿದ ಗೂಡ್ಸ್ ವಾಹನ ಎಂಬ ಶೀರ್ಷಿಕೆಯ‌ಡಿಯಲ್ಲಿ ವರದಿ ಬಿತ್ತರಿಸಿತ್ತು. ವರದಿ ಬಿತ್ತರವಾಗುತ್ತಿದಂತೆ ರಸ್ತೆ ತಡೆಗೋಡೆಯ ನಿರ್ಮಾಣಕ್ಕೆ ಅಧಿಕಾರಿಗಳು ಸಮೀಕ್ಷೆ ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ರಸ್ತೆಗೆ ಸುರಕ್ಷತಾ ತಡೆಗೋಡೆಯನ್ನು ನಿರ್ಮಾಣ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಸಮಗ್ರ ಸಮಾಚಾರ ವರದಿಗೆ ಸಾರ್ವಜನಿಕರು ಮೆಚ್ಚುಗೆಯನ್ನು ‌ವ್ಯಕ್ತಪಡಿಸಿದ್ದಾರೆ.

ಬೆಳಗಾವಿ: ರಸ್ತೆ ಸುರಕ್ಷತಾ ತಡೆಗೋಡೆಯ ನಿರ್ಮಿಸಲು ಸಮೀಕ್ಷೆ ನಡೆಸಿದ ಅಧಿಕಾರಿಗಳು Read More »