ಸಮಗ್ರ ಸಮಾಚಾರ

ತೆಲುಗು ನಟ ಮಹೇಶ್ ಬಾಬುಗೆ ಮಾತೃ‌ವಿಯೋಗ

ಸಮಗ್ರ ನ್ಯೂಸ್: ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಇಂದಿರಾ ದೇವಿ ಕಳೆದ ಕೆಲವು ವಾರಗಳಿಂದ ಅಸ್ವಸ್ಥರಾಗಿದ್ದು, ಹೈದರಾಬಾದ್‌ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಅವರು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕೃಷ್ಣ ಹಾಗೂ ಇಂದಿರಾದೇವಿಗೆ ರಮೇಶ್ ಬಾಬು ಮತ್ತು ಮಹೇಶ್ ಬಾಬು ಇಬ್ಬರು ಗಂಡು ಮಕ್ಕಳು ಹಾಗೂ ಪದ್ಮಾವತಿ, ಮಂಜುಳಾ ಮತ್ತು ಪ್ರಿಯದರ್ಶಿನಿ ಮೂವರು ಹೆಣ್ಮಕ್ಕಳು ಇದ್ದಾರೆ. ಕೆಲ ತಿಂಗಳ ಹಿಂದೆ ರಮೇಶ್ […]

ತೆಲುಗು ನಟ ಮಹೇಶ್ ಬಾಬುಗೆ ಮಾತೃ‌ವಿಯೋಗ Read More »

ಮತ್ತೊಂದು ಸ್ನಾನದ ವಿಡಿಯೋ ಲೀಕ್| ಚಂಡೀಗಢ ಮಾದರಿಯಲ್ಲೇ ನಡೆಯಿತು ಈ ಯುವತಿ ಮಾಡಿದ ವಿಕೃತ ಕೃತ್ಯ!!

ಸಮಗ್ರ ನ್ಯೂಸ್: ಹಾಸ್ಟೆಲ್ ನಲ್ಲಿನ ಸಹಪಾಠಿಗಳ ಖಾಸಗಿ ವಿಡಿಯೋವನ್ನು ತನ್ನ ಗೆಳೆಯನಿಗೆ ಕಳುಹಿಸಿದ್ದ ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ ಪ್ರಕರಣ ಮಾಸುವ ಮುನ್ನವೇ ತಮಿಳುನಾಡಿನ ಮಧುರೈನಲ್ಲಿ ಇದೇ ರೀತಿಯ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ವೈದ್ಯನೊಬ್ಬನ ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮಧುರೈನ ಪಿಜಿಯಲ್ಲಿ ವಾಸವಿದ್ದು, ಇದೇ ಪಿಜಿಯಲ್ಲಿದ್ದ ಇತರ ಮಹಿಳೆಯರ ಸ್ನಾನ ಮಾಡುವ, ಬಟ್ಟೆ ಬದಲಿಸುವ ವಿಡಿಯೋವನ್ನು ರಹಸ್ಯವಾಗಿ ಚಿತ್ರೀಕರಿಸಿ ಅದನ್ನು ತನ್ನ ಪ್ರಿಯಕರನಾಗಿದ್ದ ವೈದ್ಯನಿಗೆ ಕಳುಹಿಸಿ ಕೊಟ್ಟಿರುವುದು ಬೆಳಕಿಗೆ ಬಂದಿದೆ. ರಾಮನಾಥಪುರಂನ ವೈದ್ಯ ಆಶಿಕ್

ಮತ್ತೊಂದು ಸ್ನಾನದ ವಿಡಿಯೋ ಲೀಕ್| ಚಂಡೀಗಢ ಮಾದರಿಯಲ್ಲೇ ನಡೆಯಿತು ಈ ಯುವತಿ ಮಾಡಿದ ವಿಕೃತ ಕೃತ್ಯ!! Read More »

ಪ್ರತಿಭಟನೆ ಹೆಸರಲ್ಲಿ ಮೈಸೂರು ದಸರಾ ಮೇಲೂ ಕೆಂಗಣ್ಣು ಬೀರಿತ್ತಾ ಪಿಎಫ್ಐ? ತನಿಖೆಯಲ್ಲಿ ಸಿಕ್ಕಿದ ಮಾಹಿತಿಯೇನು?

ಸಮಗ್ರ ನ್ಯೂಸ್: ಪ್ರತಿಭಟನೆ ಹೆಸರಿನಲ್ಲಿ ಮೈಸೂರು ದಸರಾ ಸೇರಿದಂತೆ ಇತರ ಕಾರ್ಯಕ್ರಮಗಳ ಮೇಲೆ ದಾಳಿ ಮಾಡಲು ಪಿಎಫ್‌ಐ ಸಂಚು ಮಾಡಿತ್ತು. ಆದರೆ ಕರ್ನಾಟಕ ಪೊಲೀಸರ ಕಾರ್ಯಾಚರಣೆಯಿಂದ ಈ ಎಲ್ಲಾ ದಾಳಿ ಹಾಗೂ ಹಿಂಸಾತ್ಮಕ ಪ್ರತಿಭಟನೆ ತಡೆಯುವಲ್ಲಿ ಕರ್ನಾಟ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಕೇರಳ ಪೊಲೀಸರು ಈ ವಿಚಾರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಕೇರಳದಲ್ಲಿ ಪಿಎಫ್‌ಐ ಪ್ರತಿಭಟನೆಗೆ ಭಾರಿ ನಷ್ಟ ಸಂಭವಿಸಿಸಿದೆ. ಕರ್ನಾಟಕದ 20 ಜಿಲ್ಲೆಗಳಲ್ಲಿ ಪಿಎಪ್‌ಐ, ಎಸ್‌ಡಿಪಿಐ ಸೇರಿದಂತೆ ಸಹೋದರ ಸಂಘಟನೆಗಳ ನಾಯಕರ ಮೇಲೆ ಇಂದು ರಾಜ್ಯ ಪೊಲೀಸರು

ಪ್ರತಿಭಟನೆ ಹೆಸರಲ್ಲಿ ಮೈಸೂರು ದಸರಾ ಮೇಲೂ ಕೆಂಗಣ್ಣು ಬೀರಿತ್ತಾ ಪಿಎಫ್ಐ? ತನಿಖೆಯಲ್ಲಿ ಸಿಕ್ಕಿದ ಮಾಹಿತಿಯೇನು? Read More »

ಮಂಗಳೂರು: ವಿವಾದಿತ ಮಳಲಿ ಮಸೀದಿ ತೀರ್ಪು ಅ.17ರವರೆಗೆ ಕಾಯ್ದಿರಿಸಿದ ಕೋರ್ಟ್

ಸಮಗ್ರ ನ್ಯೂಸ್: ಮಂಗಳೂರು ನಗರದ ಹೊರವಲಯದ ಗಂಜಿಮಠ ಬಳಿಯ ಮಳಲಿ ಮಸೀದಿ ವಿವಾದ ಹಿನ್ನೆಲೆ ಸ್ಥಳದಲ್ಲಿ ಸರ್ವೇ ಮಾಡಿಸುವಂತೆ ಕೋರಿ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ 3ನೇ ಹೆಚ್ಚುವರಿ ಸಿವಿಲ್ ಕೋರ್ಟ್, ಆದೇಶವನ್ನು ಕಾಯ್ದಿರಿಸಿದೆ. ಅಲ್ಲದೆ ಅ.17ರಂದು ಆದೇಶ ಹೊರಡಿಸುವುದಾಗಿ ಸ್ಪಷ್ಟಪಡಿಸಿದೆ. ಏಪ್ರಿಲ್ 21ರಂದು ನಗರದ ಹೊರವಲಯದ ಮಳಲಿಯಲ್ಲಿರುವ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿಯನ್ನು ನವೀಕರಣ ಹಿನ್ನೆಲೆಯಲ್ಲಿ ಕೆಡವಿ ಹಾಕಲಾಗಿತ್ತು. ನವೀಕರಣಕ್ಕೆ ಮುಂದಾದಾಗ ಹಿಂದೂ ದೇಗುಲ ಹೋಲುವ ಆಕೃತಿಯ ವಾಸ್ತುಶಿಲ್ಪದ ಕಟ್ಟಡ ಪತ್ತೆಯಾಗಿತ್ತು.‌

ಮಂಗಳೂರು: ವಿವಾದಿತ ಮಳಲಿ ಮಸೀದಿ ತೀರ್ಪು ಅ.17ರವರೆಗೆ ಕಾಯ್ದಿರಿಸಿದ ಕೋರ್ಟ್ Read More »

ಇಂದು ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಸಂಸ್ಕಾರ| ಟೋಕಿಯೋ ತಲುಪಿದ ಮೋದಿ

ಸಮಗ್ರ ನ್ಯೂಸ್: ಜುಲೈ 8 ರಂದು ನಾರಾ ನಗರದಲ್ಲಿ ಪ್ರಚಾರ ಭಾಷಣದ ವೇಳೆ ಗುಂಡಿನ ದಾಳಿಗೆ ಒಳಗಾಗಿ ಸಾವನ್ನಪ್ಪಿದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತಿಮ ಸಂಸ್ಕಾರ ಇಂದು ನಡೆಯಲಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಟೋಕಿಯೊ ತಲುಪಿದ್ದಾರೆ. ಓಸಾಕಾದ ಪೂರ್ವದಲ್ಲಿರುವ ನಾರಾದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 11:30 ಕ್ಕೆ ಅಬೆ ಅವರು ಚುನಾವಣಾ ಪ್ರಚಾರ ಭಾಷಣ ಮಾಡುವಾಗ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಅಂದು ಸಂಜೆ ಸಂಜೆ 5:03

ಇಂದು ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಸಂಸ್ಕಾರ| ಟೋಕಿಯೋ ತಲುಪಿದ ಮೋದಿ Read More »

ಬೆಳಗಾವಿ: ತಡರಾತ್ರಿ ಬಾಲಕನಿಗೆ ಚಾಕು ಇರಿತ| ಸ್ಥಳದಲ್ಲಿ ಬಿಗುವಿನ ವಾತಾವರಣ!

ಸಮಗ್ರ ನ್ಯೂಸ್: ನಗರದ ಕ್ಯಾಂಪ್ ಪ್ರದೇಶದಲ್ಲಿ ಅಪರಿಚಿತ ದುಷ್ಕರ್ಮಿಗಳು ಬಾಲಕನಿಗೆ ಚಾಕುವಿನಿಂದ ಇರಿದು ಪರಾರಿ ಆಗಿರುವ ಘಟನೆ ನಡೆದಿದೆ. ನಗರದ ಕ್ಯಾಂಪ್ ಪ್ರದೇಶದ ನಿವಾಸಿ ಫರಾನ್ ಧಾರವಾಡಕರ್(15) ಬೆನ್ನಿಗೆ ಚೂರಿ ಇರಿದು‌ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ತಕ್ಷಣ ಫರಾನ್ ನನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ‌ನೀಡಲಾಗುತ್ತಿದೆ. ವಿಷಯ ತಿಳಿದ ಕೂಡಲೇ ಬಿಮ್ಸ್ ಆವರಣದಲ್ಲಿ ಜಮಾವಣೆಗೊಳ್ಳುತ್ತಿರುವ ಜನರನ್ನು ಎಪಿಎಂಸಿ ಪೊಲೀಸರು ಚದುರಿಸುತ್ತಿದರು. ಲಾಠಿ ಹಿಡಿದು ಕುಟುಂಬಸ್ಥರು ಹಾಗೂ ಸಂಬಂಧಿಕರನ್ನ ಹೊರಗೆ ಕಳುಹಿಸಿದರು.ಸ್ಥಳದಲ್ಲಿ ಬಿಗುವಿಣ ವಾತಾವರಣ ನಿರ್ಮಾಣಗೊಂಡಿದ್ದು, ಸ್ಥಳಕ್ಕೆ

ಬೆಳಗಾವಿ: ತಡರಾತ್ರಿ ಬಾಲಕನಿಗೆ ಚಾಕು ಇರಿತ| ಸ್ಥಳದಲ್ಲಿ ಬಿಗುವಿನ ವಾತಾವರಣ! Read More »

ಕಂದಕಕ್ಕೆ ಉರುಳಿದ ಟೆಂಪೋ ಟ್ರಾವೆಲರ್
7 ಮಂದಿ ದುರ್ಮರಣ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾನುವಾರ ರಾತ್ರಿ ಟೂರಿಸ್ಟ್ ಟೆಂಪೋ ಟ್ರಾವೆಲರ್ ಕಂದಕಕ್ಕೆ ಬಿದ್ದು, 7 ಮಂದಿ ಸಾವನ್ನಪ್ಪಿದ್ದು ಹಾಗೂ 10 ಜನರು ಗಾಯಗೊಂಡ ಘಟನೆ ಸಂಭವಿಸಿದೆ. ಘಟನೆ ಹಿಮಾಚಲ ಪ್ರದೇಶದ ಕುಲುವಿನ ಜಲೋಡಿ ಪಾಸ್ ಬಳಿ ನಡೆದಿದೆ. ವಾಹನದಲ್ಲಿ 17 ಜನರು ಪ್ರಯಾಣಿಸುತ್ತಿದ್ದು, ರಾತ್ರಿ 8:30ರ ಸುಮಾರಿಗೆ ದುರ್ಘಟನೆ ನಡೆದಿದೆ. ಘಟನೆಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಮಧ್ಯರಾತ್ರಿ ಸುಮಾರು 1:37ರ ಹೊತ್ತಿಗೆ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ವರದಿಗಳ ಪ್ರಕಾರ ಟೂರಿಸ್ಟ್ ವಾಹನದಲ್ಲಿದ್ದವರು ವಾರಣಾಸಿಯ

ಕಂದಕಕ್ಕೆ ಉರುಳಿದ ಟೆಂಪೋ ಟ್ರಾವೆಲರ್
7 ಮಂದಿ ದುರ್ಮರಣ
Read More »

ರಾಜ್ಯ ಹ್ಯಾಂಡ್‌ಬಾಲ್ ತಂಡಕ್ಕೆ ನವೀನ್ ಈಜೇರಿ ಆಯ್ಕೆ

ಸಮಗ್ರ ನ್ಯೂಸ್: ವಿಜಯಪುರ ಜಿಲ್ಲೆ ತಾಳಿಕೋಟೆಯ ಕ್ರೀಡಾಪಟು ನವೀನಕುಮಾರ ಸಂಗಪ್ಪ ಈಜೇರಿ ಕರ್ನಾಟಕ ರಾಜ್ಯ ಹ್ಯಾಂಡ್‌ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈಚೆಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಉತ್ತಮ ಆಟ ಪ್ರದರ್ಶನ ನೀಡುವ ಮೂಲಕ ಹ್ಯಾಂಡ್‌ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಉತ್ತರಪ್ರದೇಶದ ಲಕ್ಕೋದ ಕೆ.ಡಿ.ಸಿಂಗ್ ಸ್ಟೇಡಿಯಂನಲ್ಲಿ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ರಾಜ್ಯ ಹ್ಯಾಂಡ್‌ಬಾಲ್ ತಂಡಕ್ಕೆ ನವೀನ್ ಈಜೇರಿ ಆಯ್ಕೆ Read More »

ಪ್ಲಾಸ್ಟಿಕ್‌ ಮುಕ್ತ ದಸರಾ ಆಚರಣೆಗೆ ಮುಂದಾದ ರಾಜವಂಶಸ್ಥರು

ಸಮಗ್ರ ನ್ಯೂಸ್: ಈ ವರ್ಷ ಪ್ಲಾಸ್ಟಿಕ್ ಮುಕ್ತ ಮೈಸೂರು ದಸರಾ ಆಚರಣೆಗಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮುಂದಾಗಿದ್ದಾರೆ. ಜಿಎಸ್‌ಎಸ್ ಯೋಗಸಂಸ್ಥೆಯು ಅಭಿಯಾನ ಆಯೋಜಿಸಿದ್ದು, ದಸರಾ ಕಾರ್ಯಕ್ರಮ ಹಾಗೂ ಪ್ರವಾಸಿ ತಾಣದಲ್ಲಿ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಲು ಯತ್ನಿಸುತ್ತಿದೆ. ಅಭಿಯಾನಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಜೊತೆಯಾಗಿದ್ದು, ವಿಡಿಯೋ ಸಂದೇಶದ ಮೂಲಕ ಪ್ಲಾಸ್ಟಿಕ್ ಬಳಸದಂತೆ ಮನವಿ ಮಾಡಿದ್ದಾರೆ.

ಪ್ಲಾಸ್ಟಿಕ್‌ ಮುಕ್ತ ದಸರಾ ಆಚರಣೆಗೆ ಮುಂದಾದ ರಾಜವಂಶಸ್ಥರು Read More »

ನಾಡಹಬ್ಬ ದಸರಾ ಪ್ರಯುಕ್ತ | ಊಟಿ ಸೇರಿದಂತೆ ವಿವಿಧ ಕಡೆ ಸಾರಿಗೆ ಸಂಸ್ಥೆಯಿಂದ ವಿಶೇಷ ಪ್ಯಾಕೇಜ್‌

ಸಮಗ್ರ ನ್ಯೂಸ್: ನಾಡಹಬ್ಬ ದಸರಾ ಪ್ರಯುಕ್ತ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಮೈಸೂರಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಒಂದು ದಿನದ ವಿಶೇಷ ಪ್ಯಾಕೇಜ್ ವ್ಯವಸ್ಥೆ ಕಲ್ಪಿಸಿದೆ. ಗಿರಿದರ್ಶಿನಿ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟ ಸುತ್ತಾಡಲು ಅವಕಾಶವಿದ್ದು, ವಯಸ್ಕರಿಗೆ ₹ 400, ಮಕ್ಕಳಿಗೆ 250 ರೂ ದರ ನಿಗದಿಪಡಿಸಿದೆ. ಜಲದರ್ಶಿನಿ: ಗೋಲ್ಡನ್ ಟೆಂಪಲ್ (ಬೈಲಕುಪ್ಪೆ), ದುಬಾರೆ ಅರಣ್ಯ ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ ಮತ್ತು ಕೆ.ಆರ್.ಎಸ್. ( ವಯಸ್ಕರಿಗೆ 450ರೂ ,

ನಾಡಹಬ್ಬ ದಸರಾ ಪ್ರಯುಕ್ತ | ಊಟಿ ಸೇರಿದಂತೆ ವಿವಿಧ ಕಡೆ ಸಾರಿಗೆ ಸಂಸ್ಥೆಯಿಂದ ವಿಶೇಷ ಪ್ಯಾಕೇಜ್‌ Read More »