ಸಮಗ್ರ ಸಮಾಚಾರ

ಮಂಗಳೂರು: ಕಾಂತಾರ ಸಿನಿಮಾ ನೋಡಿ ಪ್ರೇರಿತಗೊಂಡ ಯುವತಿ|ಪಂಜುರ್ಲಿಯಂತೆ ವೇಷ ಧರಿಸಿದ ವೀಡಿಯೋ ವೈರಲ್

ಸಮಗ್ರ ನ್ಯೂಸ್: ಕಾಂತಾರ ಸಿನೇಮಾ ನೋಡಿ ಪ್ರೇರಿತಗೊಂಡ ಯುವತಿಯೊಬ್ಬಳು ಚಿತ್ರದಲ್ಲಿರುವಂತೆ ಪಂಜುರ್ಲಿಯಂತೆ ವೇಷ ಧರಿಸಿ ವೀಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಕಾಂತಾರ ಸಿನಿಮಾವನ್ನು ನೋಡಿದ ಈ ಯುವತಿ ​ ಪಂಜುರ್ಲಿಯಂತೆ ವೇಷ ಧರಿಸಿ ಕುಣಿದು ಕುಪ್ಪಳಿಸಿ ರೀಲ್ಸ್​ ಮಾಡಿದ್ದಾಳೆ. ವೃತ್ತಿಯಲ್ಲಿ ಮೇಕಪ್​ ಆರ್ಟಿಸ್ಟ್​ ಆಗಿರುವ ಶ್ವೇತಾ ರೆಡ್ಡಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊ ಹಂಚಿಕೊಂಡ ಬಳಿಕ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿಗೆ […]

ಮಂಗಳೂರು: ಕಾಂತಾರ ಸಿನಿಮಾ ನೋಡಿ ಪ್ರೇರಿತಗೊಂಡ ಯುವತಿ|ಪಂಜುರ್ಲಿಯಂತೆ ವೇಷ ಧರಿಸಿದ ವೀಡಿಯೋ ವೈರಲ್ Read More »

ಮೂಡಿಗೆರೆ: ರಾಕೆಟ್ ಬಿಟ್ಟಎಡವಟ್ಟು ಬೆಂಕಿಗಾಹುತಿಯಾದ ಮನೆ

ಸಮಗ್ರ ನ್ಯೂಸ್: ಪಟಾಕಿಯಿಂದ ಸಿಡಿದ ಕಿಡಿ ತಗುಲಿ ಮನೆಯೊಂದಕ್ಕೆ‌ ಬೆಂಕಿ ಹತ್ತಿಕೊಂಡ ಘಟನೆ ಮೂಡಿಗೆರೆ ಪಟ್ಟಣದ ಛತ್ರ ಮೈದಾನದಲ್ಲಿ ನಡೆದಿದೆ. ರಾತ್ರಿ ಸಮಯದಲ್ಲಿ ಛತ್ರಮೈದಾನದಲ್ಲಿ ಪಟಾಕಿ‌ ಸಿಡಿಸುತ್ತಿದ್ದ ವೇಳೆ ಹಾರಿದ ರಾಕೆಟ್ ವೊಂದು‌ ಮನೆಯೊಂದರ ಮಹಡಿಯಲ್ಲಿ ಒಣ ಹಾಕಿದ್ದ ಬಟ್ಟೆಗೆ ತಗುಲಿದ್ದು ಬಟ್ಟೆಗೆ ಬೆಂಕಿ ಹಿಡಿದುಕೊಂಡು ಆ ಬೆಂಕಿ ಇಡಿ‌ ಮನೆಗೆ ಆವರಿಸಿದೆ. ಕೂಡಲೇ ಸ್ಥಳೀಯರು ಕಾರ್ಯಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ‌. ಮನೆಯಲ್ಲಿ ಆ ಸಮಯದಲ್ಲಿ ಯಾರು ಇಲ್ಲದೆ ‌ಇರುವುದರಿಂದ ಪ್ರಾಣಾಪಾಯ ಆಗುವುದು ತಪ್ಪಿದಂತಾಗಿದೆ.

ಮೂಡಿಗೆರೆ: ರಾಕೆಟ್ ಬಿಟ್ಟಎಡವಟ್ಟು ಬೆಂಕಿಗಾಹುತಿಯಾದ ಮನೆ Read More »

ಮಂಗಳೂರು: ಅತಿಯಾದ ಸಂಶಯ| ಪತ್ನಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿದ ಪತಿ

ಸಮಗ್ರ ನ್ಯೂಸ್: ಪತ್ನಿಯ ಮೇಲೆ ಅತಿಯಾದ ಸಂಶಯದಿಂದ ವ್ಯಕ್ತಿಯೊಬ್ಬ ಪತ್ನಿಯನ್ನ ಕತ್ತು ಹಿಸುಕಿ ಕೊಂದು ನಂತರ ತಾನೂ ತೋಟದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಪಿಲಾರು ಪಂಜಂದಾಯ ದೈವಸ್ಥಾನದ ಬಳಿ ನಡೆದಿದೆ. ಪಿಲಾರು ನಿವಾಸಿಗಳಾದ ಶೋಭಾ ಪೂಜಾರಿ (45) ಕೊಲೆಯಾದ ಮಹಿಳೆ ಮತ್ತು ಅಕೆಯ ಪತಿ ಶಿವಾನಂದ ಪೂಜಾರಿ (55)ಆತ್ಮಹತ್ಯೆ ಮಾಡಿಕೊಂಡವರು. ಬೆಳಗ್ಗೆ ಹತ್ತು ಗಂಟೆ ವೇಳೆಗೆ ಶೋಭಾ ಅವರು ಮನೆ ಹತ್ತಿರದ ಇನ್ನೂರು ಗುತ್ತು ಕುಟುಂಬಸ್ಥರ ಮನೆಯಿಂದ ಗೊಬ್ಬರ

ಮಂಗಳೂರು: ಅತಿಯಾದ ಸಂಶಯ| ಪತ್ನಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿದ ಪತಿ Read More »

ಇಂದಿನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೋಲ್ವೋ ಬಸ್ ಸಂಚಾರ

ಸಮಗ್ರ ನ್ಯೂಸ್: ಮಂಗಳೂರು ನಗರದ ಬಿಜೈ ಸರಕಾರಿ ಬಸ್ ನಿಲ್ದಾಣ ಮತ್ತು ಮಣಿಪಾಲದಿಂದ ಬಜ್ಪೆ ಕೆಂಜಾರಿನಲ್ಲಿರುವ ‘ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ಕ್ಕೆ ಅ.27ರಿಂದ ಸರಕಾರಿ ವೋಲ್ವೊ ಬಸ್ ಸಂಚಾರ ಆರಂಭಗೊಳ್ಳಲಿದೆ ಎಂದು ತಿಳಿದು ಬಂದಿದೆ. ಹಲವು ವರ್ಷಗಳಿಂದಲೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಸರಕಾರಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆಯು ಇತ್ತು. ಅದರಂತೆ ಸಂಚಾರ ಆರಂಭಿಸಿದ್ದರೂ ಕೂಡ ಆದಾಯದ ಕೊರತೆಯ ನೆಪದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಬೇಡಿಕೆ ಮತ್ತಷ್ಟು ತೀವ್ರಗೊಂಡ ಹಿನ್ನಲೆಯಲ್ಲಿ ಸಾರಿಗೆ ಸಚಿವ

ಇಂದಿನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೋಲ್ವೋ ಬಸ್ ಸಂಚಾರ Read More »

ಬಿಸಿಸಿಐ ನಿಂದ ಸಮಾನ ವೇತನ| ಪುರುಷ, ಮಹಿಳಾ ಕ್ರಿಕೆಟರ್ ಗಳಿಗೆ ಏಕರೂಪ ವೇತನ ಘೋಷಣೆ

ಸಮಗ್ರ ನ್ಯೂಸ್: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನವನ್ನು ಘೋಷಿಸಿದ್ದಾರೆ. ವೇತನ ತಾರತಮ್ಯವನ್ನು ಎದುರಿಸಲು BCCI ಯ ಮೊದಲ ಹೆಜ್ಜೆಯನ್ನು ಘೋಷಿಸಲು ನನಗೆ ಸಂತೋಷವಾಗಿದೆ. ನಾವು ನಮ್ಮ ಒಪ್ಪಂದದ ಮಹಿಳಾ ಕ್ರಿಕೆಟಿಗರಿಗೆ ವೇತನ ಇಕ್ವಿಟಿ ನೀತಿಯನ್ನು ಜಾರಿಗೆ ತರುತ್ತಿದ್ದೇವೆ. ನಾವು ಕ್ರಿಕೆಟ್‌ನಲ್ಲಿ ಲಿಂಗ ಸಮಾನತೆಯ ಹೊಸ ಯುಗಕ್ಕೆ ಸಾಗುತ್ತಿರುವಾಗ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯ ಶುಲ್ಕ ಒಂದೇ ಆಗಿರುತ್ತದೆ. ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ.

ಬಿಸಿಸಿಐ ನಿಂದ ಸಮಾನ ವೇತನ| ಪುರುಷ, ಮಹಿಳಾ ಕ್ರಿಕೆಟರ್ ಗಳಿಗೆ ಏಕರೂಪ ವೇತನ ಘೋಷಣೆ Read More »

ಫ್ಯಾನ್‍ಗೆ ನೇಣು ಹಾಕಿಕೊಳ್ಳುತ್ತಿದ್ದ ಪತ್ನಿಯ ವೀಡಿಯೋ ಮಾಡಿಕೊಂಡ ಪತಿ..!!!
ಮುಂದೇನಾಯಿತು?

ಲಕ್ನೋ: ಮಹಿಳೆಯೊಬ್ಬಳು ಸೀಲಿಂಗ್ ಫ್ಯಾನ್‍ಗೆ ನೇಣು ಹಾಕಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ನೋಡಿದ ಪತಿ ಆಕೆಯನ್ನು ಉಳಿಸುವ ಬದಲು ಅದನ್ನು ವೀಡಿಯೋ ಮಾಡಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಗುಲ್ಮೊಹರ್ ನಗರದಲ್ಲಿ ಈ ಘಟನೆ ನಡೆದಿದೆ. ಶೋಭಿತಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಹಾಗೂ ಸಂಜೀವ್ ಗುಪ್ತಾ ವೀಡಿಯೋ ಮಾಡಿದ ಆಕೆ ಪತಿ. ಶೋಭೀತಾ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ ಆಕೆಯನ್ನು ಉಳಿಸುವ ಯಾವುದೇ ಪ್ರಯತ್ನವನ್ನು ಮಾಡಿರಲಿಲ್ಲ. ಬದಲಿಗೆ ವೀಡಿಯೋ ಮಾಡುತ್ತಾ ನಿಂತಿದ್ದ. ಈ ವೇಳೆ ಶೋಭಿತಾ ತನ್ನ ಮೊದಲ ಪ್ರಯತ್ನದಲ್ಲಿ ವಿಫಲಳಾದರೂ

ಫ್ಯಾನ್‍ಗೆ ನೇಣು ಹಾಕಿಕೊಳ್ಳುತ್ತಿದ್ದ ಪತ್ನಿಯ ವೀಡಿಯೋ ಮಾಡಿಕೊಂಡ ಪತಿ..!!!
ಮುಂದೇನಾಯಿತು?
Read More »

ಪುತ್ತೂರು: ನಡುರಸ್ತೆಯಲ್ಲಿ ರಿಕ್ಷಾ ನಿಲ್ಲಿಸಿ ಮದ್ಯಪಾನ ಮಾಡಿ ನಿದ್ರಿಸಿದ ಚಾಲಕ.!

ಸಮಗ್ರ ನ್ಯೂಸ್: ಪುತ್ತೂರು-ದರ್ಬೆ ರಸ್ತೆಯ ಕಲ್ಲಾರೆ ಎಂಬಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ ವಾಹನವನ್ನು ನಡುರಸ್ತೆಯಲ್ಲಿ ನಿಲ್ಲಿಸಿ ಮದ್ಯಪಾನ ಮಾಡಿ ಮಲಗಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಕಲ್ಲಾರೆ ಧನ್ವಂತ್ರಿ ಆಸ್ಪತ್ರೆ ಎದುರು ಆಟೋ ಚಾಲಕ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕುಡಿದು ಮಲಗಿದ್ದನ್ನು ಗಮನಿಸಿದ ಸಾರ್ವಜನಿಕರು ಪುತ್ತೂರು ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿ ಅಪಾಯ ತಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದಾಗ ಆಟೋ ಚಾಲಕ ಪಾನಮತ್ತನಾಗಿದ್ದ. ಸಂಚಾರ ಪೊಲೀಸರು ಆಟೊ

ಪುತ್ತೂರು: ನಡುರಸ್ತೆಯಲ್ಲಿ ರಿಕ್ಷಾ ನಿಲ್ಲಿಸಿ ಮದ್ಯಪಾನ ಮಾಡಿ ನಿದ್ರಿಸಿದ ಚಾಲಕ.! Read More »

ಬ್ಯಾಂಕಾಕ್‍ನಿಂದ ಚೆನ್ನೈಗೆ ಬ್ಯಾಗ್‍ನಲ್ಲಿ ಮುಂಗುಸಿ ಸಾಗಾಟ|ಪ್ರಯಾಣಿಕ ಅರೆಸ್ಟ್

ಚೆನ್ನೈ: ಚೆಕ್ ಇನ್ ಬ್ಯಾಗೇಜ್‍ನಲ್ಲಿ ಬ್ಯಾಂಕಾಕ್‍ನಿಂದ ಅಕ್ರಮವಾಗಿ ಸಾಗಿಸಲಾಗಿದ್ದ 5 ವಿದೇಶಿ ಪ್ರಾಣಿಗಳನ್ನು ಚೆನ್ನೈನ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹಲವಾರು ಮುಂಗುಸಿ ಹಾಗೂ ಕ್ಯೂಕಸ್ ಅನ್ನು ಚೀಲದಲ್ಲಿ ಮರೆ ಮಾಡಲಾಗಿತ್ತು. ಈ ಎಲ್ಲಾ ಪ್ರಾಣಿಗಳು ಬ್ಯಾಂಕಾಕ್‍ನಿಂದ ಬಂದ ಪ್ರಯಾಣಿಕನ ಬ್ಯಾಗ್‍ನಲ್ಲಿತ್ತು. ಅದನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡು ಥೈಲ್ಯಾಂಡ್‍ಗೆ ಕಳುಹಿಸಿದ್ದಾರೆ. ಮುಂಗುಸಿ ಅಂಗೋಲಾ, ಉತ್ತರ ನಮೀಬಿಯಾ, ದಕ್ಷಿಣ ಆಫ್ರಿಕಾದ ಕ್ವಾಝುಲು-ನಟಾಲ್, ಜಾಂಬಿಯಾ ಮತ್ತು ಪೂರ್ವ ಆಫ್ರಿಕಾಕ್ಕೆ ಸ್ಥಳೀಯವಾಗಿರುವ ಮುಂಗುಸಿ

ಬ್ಯಾಂಕಾಕ್‍ನಿಂದ ಚೆನ್ನೈಗೆ ಬ್ಯಾಗ್‍ನಲ್ಲಿ ಮುಂಗುಸಿ ಸಾಗಾಟ|ಪ್ರಯಾಣಿಕ ಅರೆಸ್ಟ್ Read More »

ಮಂಗಳೂರು: ವಾಕಿಂಗ್ ವೇಳೆ ಲಾರಿ ಢಿಕ್ಕಿಯಾಗಿ ವ್ಯಕ್ತಿ ಸಾವು

ಸಮಗ್ರ ನ್ಯೂಸ್: ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ , ಮುಂಜಾನೆ ಲಾರಿಯೊಂದು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ. ಅ.೨೬ ರ ಮುಂಜಾನೆ ಅಶೋಕನಗರದ ನಿವಾಸಿ ಎನ್ನಲಾದ ಸುಮಾರು 40-45 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ತನ್ನ ಆ್ಯಕ್ಟಿವಾ ದ್ವಿಚಕ್ರ ವಾಹನವನ್ನು ಕೊಟ್ಟಾರ ಚೌಕಿಯಲ್ಲಿ ರಸ್ತೆ ಪಕ್ಕ ನಿಲ್ಲಿಸಿ ವಾಕಿಂಗ್ ನಿರತರಾಗಿದ್ದರು. ಈ ವೇಳೆ ಹರ್ಯಾಣದ ನೋಂದಣಿ ಹೊಂದಿದ ಲಾರಿ ಢಿಕ್ಕಿ ಹೊಡೆಯಿತು ಎಂದು ತಿಳಿದುಬಂದಿದೆ. ಇದರಿಂದ ಪಾದಚಾರಿ ವ್ಯಕ್ತಿಯು ಗಂಭೀರ ಗಾಯಗೊಂಡಿದ್ದು, ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಮಂಗಳೂರು: ವಾಕಿಂಗ್ ವೇಳೆ ಲಾರಿ ಢಿಕ್ಕಿಯಾಗಿ ವ್ಯಕ್ತಿ ಸಾವು Read More »

ಕೇತುಗ್ರಸ್ತ ಸೂರ್ಯಗ್ರಹಣ| ಎಲ್ಲೆಲ್ಲಿ ಹೇಗೆ ಸಂಭವಿಸುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ…

ಸಮಗ್ರ ನ್ಯೂಸ್: ದೀಪಾವಳಿ ಹೊತ್ತಲ್ಲೇ, ಇಂದು (ಅ.25) ಈ ವರ್ಷದ ಕೊನೆಯ ಹಾಗೂ 27 ವರ್ಷಗಳ ಬಳಿಕ ಕೇತುಗ್ರಸ್ತ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಇಪ್ಪತ್ತೇಳು ವರ್ಷಗಳ ಹಿಂದೆ ದೀಪಾವಳಿ ಹಬ್ಬದಂದು ಕೇತುಗ್ರಸ್ತ ಸೂರ್ಯಗ್ರಹಣವು ಸಂಭವಿಸಿತ್ತು. ಇದೀಗ ಮತ್ತೆ ಆ ಸಮಯ ಬಂದಿದ್ದು, ಬಾನಂಗಳದಲ್ಲಿ ಸೂರ್ಯ ಬಳೆ ತೊಟ್ಟಂತೆ ಗೋಚರಿಸಲಿದ್ದಾನೆ. ಸೌರಮಂಡಲದ ವಿಸ್ಮಯಕಾರಿ ಪ್ರಕ್ರಿಯೆ ಕಣ್ತುಂಬಿಕೊಳ್ಳಲು ಜನ ಕಾತುರದಿಂದ ಕಾಯುತ್ತಿದ್ದಾರೆ. ಸೂರ್ಯ ಗ್ರಹಣ ಸಮಯಗ್ರಹಣ ಸ್ಪರ್ಶಕಾಲ – ಮಧ್ಯಾಹ್ನ 2:15ಗ್ರಹಣ ಮಧ್ಯಕಾಲ – ಮಧ್ಯಾಹ್ನ 4:18ಗ್ರಹಣ ಮೋಕ್ಷಕಾಲ –

ಕೇತುಗ್ರಸ್ತ ಸೂರ್ಯಗ್ರಹಣ| ಎಲ್ಲೆಲ್ಲಿ ಹೇಗೆ ಸಂಭವಿಸುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ… Read More »