ಸಮಗ್ರ ಸಮಾಚಾರ

ಪುತ್ತೂರು: 8ನೇ ತರಗತಿಯ ವಿದ್ಯಾರ್ಥಿನಿ ಮೃತ್ಯು

ಸಮಗ್ರ ನ್ಯೂಸ್: ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಅನಾರೋಗ್ಯದಿಂದಾಗಿ ನಿಧನರಾಗಿರುವ ಘಟನೆ ನ.10ರಂದು ನಡೆದಿದೆ. ಮೃತರನ್ನು ಕೃತಿ ಕೆ.ಎ (13) ಎಂದು ಗುರುತಿಸಲಾಗಿದೆ. ಬನ್ನೂರಿನ ಸೇಡಿಯಾಪು ಕಂಜೂರು ನಿವಾಸಿಗಳಾದ ಆನಂದ ಕುಲಾಲ್‌ ಮತ್ತು ಪದ್ಮಾವತಿ ದಂಪತಿ ಪುತಿ ಕೃತಿ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇನ್ನು ವಿದ್ಯಾರ್ಥಿನಿಯ ಆತ್ಮಕ್ಕೆ ಶಾಂತಿ ಕೋರಿ ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಗೆ ರಜೆ ಕೊಡಲಾಗಿದೆ.

ಪುತ್ತೂರು: 8ನೇ ತರಗತಿಯ ವಿದ್ಯಾರ್ಥಿನಿ ಮೃತ್ಯು Read More »

ಬೆಳಗಾವಿ: ಈಜು ಕಲಿಯಲು ಹೋಗಿ ನೀರಿನಲ್ಲಿ ಮುಳುಗಿ ಬಾಲಕ ಸಾವು

ಸಮಗ್ರ ನ್ಯೂಸ್: ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಾರ್ಥನಹಳ್ಳಿ ಗ್ರಾಮದಲ್ಲಿರುವ ಲಕ್ಷ್ಮಿ ದೇವಾಲಯದ ಹತ್ತಿರ ಬಾವಿಯಲ್ಲಿ ಬಾಳೇಶ ಕಾಂಬಳೆ ಎಂಬ ಬಾಲಕನು ಈಜು ಕಲಿಯಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸ್ಥಳ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ನೀರಿನಲ್ಲಿ ಮುಳುಗಿದ ಬಾಲಕನ ಶವವನ್ನು ಮೇಲೆಕ್ಕೆ ಎತ್ತಲಾಗಿದೆ. ಬಾಲಕನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು. ಅಥಣಿ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಬೆಳಗಾವಿ: ಈಜು ಕಲಿಯಲು ಹೋಗಿ ನೀರಿನಲ್ಲಿ ಮುಳುಗಿ ಬಾಲಕ ಸಾವು Read More »

ಕೊಯಮತ್ತೂರು: ಕಾರು ಸ್ಫೋಟ ಪ್ರಕರಣ|
45 ಸ್ಥಳಗಳಲ್ಲಿ ಎನ್‌ಐಎ ಶೋಧ

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ಚೆನ್ನೈ, ಮಧುರೈ ಸೇರಿದಂತೆ 45 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಎನ್‌ಐಎ ಅಧಿಕಾರಿಗಳು ಕೊಯಮತ್ತೂರಿನಲ್ಲಿ 20, ಚೆನ್ನೈಯಲ್ಲಿ 12ಕ್ಕೂ ಹೆಚ್ಚು ಮತ್ತು ಮುಧುರೈ, ರಾಮನಾಥಪುರಂ ಸೇರಿದಂತೆ ರಾಜ್ಯದ ಹಲವೆಡೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಬಂಧಿಸಿರುವ ಆರು ಆರೋಪಿಗಳಿಗೆ ಸಂಬಂಧಪಟ್ಟ ಸ್ಥಳ ಹಾಗೂ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ನಿಷೇಧಿತ ಸಂಘಟನೆಯ ಸದಸ್ಯರನ್ನು ತನಿಖೆ

ಕೊಯಮತ್ತೂರು: ಕಾರು ಸ್ಫೋಟ ಪ್ರಕರಣ|
45 ಸ್ಥಳಗಳಲ್ಲಿ ಎನ್‌ಐಎ ಶೋಧ
Read More »

ಹುಣಸೂರು: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಸಮಗ್ರ ನ್ಯೂಸ್: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕೀರಂಗೂರು ಗ್ರಾಮದಲ್ಲಿ ನಡೆದಿದೆ. ಕೆ ಬಿ ರಾಮು(38) ಮೃತ ರೈತ, ಇವರು ವ್ಯವಸಾಯಕ್ಕೆ ಕೈ ಸಾಲ ಹಾಗೂ ತನ್ನ ಹೆಂಡತಿಯ ಹೆಸರಿನಲ್ಲಿ ಸ್ವ ಸಹಾಯ ಸಂಘಗಳಲ್ಲಿ ಸಾಲ ಪಡೆದಿದ್ದರು. ಅದನ್ನು ತೀರಿಸಲಾಗದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಈ ಪ್ರಕರಣ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಹುಣಸೂರು: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ Read More »

ಮಂಗಳೂರಲ್ಲಿ ನೈತಿಕ ಪೊಲೀಸ್ ಗಿರಿ! ಶಾಲಾ ವಿದ್ಯಾರ್ಥಿಗೆ ಥಳಿಸಿದ ಬುರ್ಖಾಧಾರಿ ಮಹಿಳೆ ಮತ್ತು ಯುವಕ!!

ಸಮಗ್ರ ನ್ಯೂಸ್: ಅಪ್ರಾಪ್ತ ಶಾಲಾ ಬಾಲಕನ ಮೇಲೆ ಬಸ್ ನಿಲ್ದಾಣದಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಬುರ್ಖಾಧಾರಿ ಮಹಿಳೆ ಹಾಗೂ ಯುವಕನೋರ್ವ ಮನಬಂದಂತೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದು ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ಮಾಡುತ್ತಿರುವುದೇಕೆ ಎನ್ನುವುದು ಬಯಲಾಗಿಲ್ಲ. ಪೊಲೀಸ್ ಇಲಾಖೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸದಿದ್ದಲ್ಲಿ ನೈತಿಕ ಪೊಲೀಸ್ ಗಿರಿ ನಿಯಂತ್ರಿಸುವುದು ಕಷ್ಟ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಂಗಳೂರು

ಮಂಗಳೂರಲ್ಲಿ ನೈತಿಕ ಪೊಲೀಸ್ ಗಿರಿ! ಶಾಲಾ ವಿದ್ಯಾರ್ಥಿಗೆ ಥಳಿಸಿದ ಬುರ್ಖಾಧಾರಿ ಮಹಿಳೆ ಮತ್ತು ಯುವಕ!! Read More »

ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ| ವಿವಿಧ ಕಾರ್ಯಕ್ರಮಗಳ ಅನಾವರಣ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಅಲ್ಲದೇ ಕೆಂಪೇಗೌಡ ವಿಮಾನ ನಿಲ್ದಾಣದ ಬಳಿಯಲ್ಲಿನ ಕೆಂಪೇಗೌಡ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಕರ್ನಾಟಕದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 11ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಪ್ರಧಾನಿ ಮೋದಿಯವರ ಭೇಟಿಯ ಸಂಪೂರ್ಣ ಕಾರ್ಯಕ್ರಮಗಳ ಪಟ್ಟಿ ಕೂಡ ಸಿದ್ಧಗೊಂಡಿದೆ. ನವೆಂಬರ್ 11ರಂದು ಬೆಳಿಗ್ಗೆ 10

ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ| ವಿವಿಧ ಕಾರ್ಯಕ್ರಮಗಳ ಅನಾವರಣ Read More »

ಬಂಟ್ವಾಳ: ಉದ್ಯೋಗ ಸಂದರ್ಶನಕ್ಕೆಂದು ತೆರಳಿದ ಯುವತಿ ನಾಪತ್ತೆ

ಸಮಗ್ರ ನ್ಯೂಸ್: ಉದ್ಯೋಗ ಸಂದರ್ಶನಕ್ಕೆಂದು ತೆರಳಿದ ಯುವತಿಯೋರ್ವಳು ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ ಇಡಿದು ಗ್ರಾಮದ ಕಂಬಳಬೆಟ್ಟು ಎಂಬಲ್ಲಿ ನಡೆದಿದೆ. ಕಂಬಳಬೆಟ್ಟು ನಿವಾಸಿ ದಿವಂಗತ ಆನಂದ ಅವರ ಪುತ್ರಿ ಸುಶ್ಮಿತಾ (21) ನಾಪತ್ತೆಯಾದ ಯುವತಿ. ನ. 8 ಮಂಗಳವಾರ ಬೆಳಿಗ್ಗೆ ಮನೆಯಿಂದ ಹೋದವಳು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ. ಕೆಲಸಕ್ಕೆ ಇಂಟರ್‌ವ್ಯೂ ಲೆಟರ್ ಬಂದಿದ್ದು, ಹಾಗಾಗಿ ನಾನು ಹೋಗಿ ಬರುತ್ತೇನೆ ಎಂದು ಮನೆಯವರಲ್ಲಿ ಹೇಳಿ ತೆರಳಿದ್ದು, ನಂತರ ಮನೆಗೆ ಮರಳಿ ಬಾರದೇ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಆಕೆಯ ಹೆತ್ತವರು

ಬಂಟ್ವಾಳ: ಉದ್ಯೋಗ ಸಂದರ್ಶನಕ್ಕೆಂದು ತೆರಳಿದ ಯುವತಿ ನಾಪತ್ತೆ Read More »

ಸುಳ್ಯ: ಸೇತುವೆ, ರಸ್ತೆ ಸಂಪರ್ಕ ಸರಿ ಮಾಡುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಸಿಎಂ ಗೆ ಮನವಿ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಸೇತುವೆ ಹಾಗೂ ರಸ್ತೆ ಸಂಪರ್ಕ ಸರಿ ಮಾಡುವಂತೆ ಮುಖ್ಯಮಂತ್ರಿಯವರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ನೀಡಲಾಯಿತು. ಉಬರಡ್ಕದ ಅಮೈ ಪಾಲಡ್ಕ ಎಂಬಲ್ಲಿ ಹೊಸ ಸೇತುವೆ, ಯಾವಟೆ ಕಟ್ಟಕೋಡಿ ಅಚ್ಚು ಪಲ್ಲ ಸಂಪರ್ಕ ರಸ್ತೆಗೆ ಕಾಂಕ್ರೀಟಿಕರಣ, ಮಂಜಿಕಾನ ಬದನೆಕಜೆ ಸಂಪರ್ಕ ರಸ್ತೆಗೆ ಕಾಂಕ್ರೀಟಿಕರಣ ಮತ್ತು ಅದೇ ರಸ್ತೆಯಲ್ಲಿ ನದಿಗೆ ಸೇತುವೆ, ಇವೆಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಇರುವಂತಹ ಜಾಗ ಆದ ಕಾರಣ ಆದಷ್ಟು ಬೇಗ ಸೇತುವೆ ಮತ್ತು ಕಾಂಕ್ರೀಟಿಕರಣ

ಸುಳ್ಯ: ಸೇತುವೆ, ರಸ್ತೆ ಸಂಪರ್ಕ ಸರಿ ಮಾಡುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಸಿಎಂ ಗೆ ಮನವಿ Read More »

ವಿಟ್ಲ: ಪೆಟ್ರೋಲ್ ಸುರಿದು ಯುವಕನ ಕೊಲೆ|ಪೋಲೀಸರ ವಿಚಾರಣೆಯರಲ್ಲಿ ನಿಜಾಂಶ ಬಯಲು

ಸಮಗ್ರ ನ್ಯೂಸ್: ಪೆಟ್ರೋಲ್ ಸುರಿದು ಯುವಕನನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿದ್ದ ವ್ಯಕ್ತಿಯೋರ್ವನನ್ನು ವಿಟ್ಲ ಪೋಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ನಿಜಾಂಶ ಬಯಲಾಗಿದೆ. ಬಂಧಿತ ಆರೋಪಿಯನ್ನು ಬೋಳಂತೂರು ನಿವಾಸಿ ಅದ್ದು ಯಾನೆ ಅದ್ರಾಮ ಎನ್ನಲಾಗಿದೆ. ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಅದ್ರಾಮ, ಸಮಾದ್ ಎಂಬಾತನನ್ನು ಪೆಟ್ರೋಲ್ ಹಚ್ಚಿ ಕೊಲೆ ಮಾಡಿದ್ದ. ಏನಿದು ಪ್ರಕರಣ..!ಆದಿತ್ಯವಾರ ರಾತ್ರಿ ಯುವಕನೋರ್ವನನ್ನು ಕಿಡ್ನಾಪ್ ಮಾಡಿ ಬಳಿಕ ಕೊಲೆ ಮಾಡಲಾಗಿದೆ ಎಂಬ ಸುದ್ದಿ ಸೋಮವಾರ ಬೆಳಿಗ್ಗೆಯಿಂದ ಹರಡಿತ್ತು. ಇದು ವದಂತಿಯೋ ಅಥವಾ ಸತ್ಯ ವಿಚಾರವೋ ಎಂದು

ವಿಟ್ಲ: ಪೆಟ್ರೋಲ್ ಸುರಿದು ಯುವಕನ ಕೊಲೆ|ಪೋಲೀಸರ ವಿಚಾರಣೆಯರಲ್ಲಿ ನಿಜಾಂಶ ಬಯಲು Read More »

ಕರಾವಳಿಯ ಮೂರು ಜಿಲ್ಲೆಗಳಿಗೆ ಕುಚಲಕ್ಕಿ ವಿತರಣೆ ಆರಂಭ| ಜನಸಂಕಲ್ಪ ಸಭೆಯಲ್ಲಿ ಸಿಎಂ ಘೋಷಣೆ

ಸಮಗ್ರ ನ್ಯೂಸ್: ಬಹುನಿರೀಕ್ಷಿತ ಉಡುಪಿ ಮಂಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಪಡಿತರ ಮೂಲಕ ಕುಚಲಕ್ಕಿ ವಿತರಣೆ ಕಾರ್ಯಕ್ರಮವನ್ನು ಆರಂಭಿಸುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಕಾಪುವಿನಲ್ಲಿ ಜನ ಸಂಕಲ್ಪ ಸಭೆಯಲ್ಲಿ ಘೋಷಿಸಿದ್ದಾರೆ. ಈಗ ನೀಡುತ್ತಿರುವ ಪಡಿತರ ಅಕ್ಕಿ ಸಾರ್ವಜನಿಕರಿಗೆ ಉಪಯೋಗಕ್ಕೆ ಬರುತ್ತಿಲ್ಲವೆಂಬ ಹಿನ್ನೆಲೆಯಲ್ಲಿ ಪಡಿತರ ವ್ಯವಸ್ಥೆಗೆ ಕುಚಲಕ್ಕಿ ನೀಡುವ ವ್ಯವಸ್ಥೆ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿಗಳು ಹೇಳುತ್ತಲೇ ವೇದಿಕೆಯಲ್ಲಿ ಎದ್ದು ನಿಂತು ಮುಖ್ಯಮಂತ್ರಿಗಳಿಗೆ ಕೈಮುಗಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಿದರು.

ಕರಾವಳಿಯ ಮೂರು ಜಿಲ್ಲೆಗಳಿಗೆ ಕುಚಲಕ್ಕಿ ವಿತರಣೆ ಆರಂಭ| ಜನಸಂಕಲ್ಪ ಸಭೆಯಲ್ಲಿ ಸಿಎಂ ಘೋಷಣೆ Read More »