ಸಮಗ್ರ ಸಮಾಚಾರ

ಮಂಗಳೂರು: ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ| ಗಾಂಜಾ ದಂಗೆಕೋರರ ಬಂಧನ;132 ಕೆಜಿ ಮಾಲು ವಶ

ಸಮಗ್ರ ನ್ಯೂಸ್: ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕರಾವಳಿಯಲ್ಲಿ ಕಿಕ್ ಏರಿಸುತ್ತಿದ್ದ ಗಾಂಜಾ ದಂಧೆಕೋರರನ್ನು ಬಂಧಿಸಿದ್ದಾರೆ. ಬಂಧಿತರಿಂದ 32 ಲಕ್ಷ ರೂ. ಮೌಲ್ಯದ 132 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. 17 ರಂದು ಮಂಗಳೂರು ನಗರಕ್ಕೆ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಮಹೇಂದ್ರ XUV 500 ಕಾರ್ ನಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಬಂಟ್ವಾಳ ತಾಲೂಕು ನರಿಂಗಾನ ಗ್ರಾಮ ತೌಡುಗೋಳಿ ಕ್ರಾಸ್ ನಿವಾಸಿ ರಮೀಝ್ ರಾಝ್(30), ಕೇರಳದ ಕಾಸರಗೋಡು ಜಿಲ್ಲೆ […]

ಮಂಗಳೂರು: ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ| ಗಾಂಜಾ ದಂಗೆಕೋರರ ಬಂಧನ;132 ಕೆಜಿ ಮಾಲು ವಶ Read More »

ಅರಣ್ಯದೊಳಗೆ ಯುವಜೋಡಿಯ ನಗ್ನ ಶವ ಪತ್ತೆ!!

ಸಮಗ್ರ ನ್ಯೂಸ್: ಅರಣ್ಯದಲ್ಲಿ ನಗ್ನ ಸ್ಥಿತಿಯಲ್ಲಿ ಯುವಕ ಮತ್ತು ಯುವತಿಯ ಮೃತದೇಹ ಪತ್ತೆಯಾದ ಘಟನೆ ರಾಜಸ್ಥಾನದ ಉದಯ್​ಪುರ ಜಿಲ್ಲೆಯಲ್ಲಿ ನಡೆದಿದೆ. ಯುವಕನ ಗುಪ್ತಾಂಗವನ್ನೂ ಕತ್ತರಿಸಿದ ಸ್ಥಿತಿಯಲ್ಲಿ ವಶ ಪತ್ತೆಯಾಗಿದ್ದು, ಈ ಜೋಡಿಯನ್ನು ಕೊಲೆ ಮಾಡಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಇಲ್ಲಿನ ಗೋಗುಂಡಾ ಪೊಲೀಸ್ ಠಾಣೆ ವ್ಯಾಪ್ತಿಯ ಉಬೇಶ್ವರ್​ಜಿ ಕಾಡಿನಲ್ಲಿ ಶುಕ್ರವಾರ ಯುವಕ ಮತ್ತು ಯುವತಿ ಶವಗಳು ಪತ್ತೆಯಾಗಿವೆ. ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಸ್ಥಳೀಯ ಪೊಲೀಸರು ಮತ್ತು ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ

ಅರಣ್ಯದೊಳಗೆ ಯುವಜೋಡಿಯ ನಗ್ನ ಶವ ಪತ್ತೆ!! Read More »

ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳು

ಸಮಗ್ರ ನ್ಯೂಸ್: ಬೆಂಗಳೂರಿನ ಮಾರತ್ತಹಳ್ಳಿಯ ಕಾಲೇಜೊಂದರಲ್ಲಿ ಯುವಕ-ಯುವತಿಯರು ಪಾಕಿಸ್ತಾನ್​ ಜಿಂದಾಬಾದ್​ ಎಂದು ಘೋಷಣೆ ಕೂಗಿದ್ದಾರೆ! ಮಾರತ್ತಹಳ್ಳಿ ನಗರದ ಠಾಣಾ ವ್ಯಾಪ್ತಿಯಲ್ಲಿ ಬರುವ ನ್ಯೂ ಹಾರಿಜನ್ ಕಾಲೇಜಿನಲ್ಲಿ ಈ ಹುಚ್ಚಾಟ ನಡೆದಿದೆ. ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಪಾಕಿಸ್ತಾನ್ ಜಿಂದಬಾದ್ ಎಂದು ಯುವಕ-ಯುವತಿಯರು ಕೂಗಾಡಿದ್ದಾರೆ. ಘಟನೆಯ ಬಗ್ಗೆ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದ್ಯ ವಿಡಿಯೋದಲ್ಲಿರುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘೋಷಣೆ ಕೂಗಿರುವ ಇಬ್ಬರನ್ನೂ ಮಾರತ್ತಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಕಾಲೇಜಿನಲ್ಲಿ ಕಲ್ಚರಲ್ ಕಾರ್ಯಕ್ರಮ

ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳು Read More »

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌ ಸಂತೋಷ್ ಗೆ ಬಂಧನ ಭೀತಿ| ವಿಚಾರಣೆಗೆ ಹಾಜರಾದರಷ್ಟೇ ಬಚಾವ್

ಸಮಗ್ರ ನ್ಯೂಸ್: ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌) ಶಾಸಕರನ್ನು ಬಿಜೆಪಿಗೆ ಸೆಳೆಯಲು ಹಣದ ಆಮಿಷ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಬಿ.ಎಲ್. ಸಂತೋಷ್ ಅವರಿಗೆ ನವೆಂಬರ್ 21 ರಂದು ಹಾಜರಾಗುವಂತೆ ಸಮನ್ಸ್ ನೀಡಿದ್ದು, ವಿಫಲವಾದರೆ ಅವರನ್ನು ಬಂಧಿಸಲಾಗುವುದು. ತೆಲಂಗಾಣ ಹೈಕೋರ್ಟ್ ಮಂಗಳವಾರ ಶಾಸಕರ ಖರೀದಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ಬಿಜೆಪಿಯ ಮನವಿಯನ್ನು ತಿರಸ್ಕರಿಸಿದ ನಂತರ ಮತ್ತು ಪ್ರಕರಣದ ತನಿಖೆಯನ್ನು ಎಸ್‌ಐಟಿ ಸ್ವತಂತ್ರವಾಗಿ ಕೈಗೊಂಡ ನಂತರ ಈ ಬೆಳವಣಿಗೆ ನಡೆದಿದೆ. ಪ್ರಕರಣದ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌ ಸಂತೋಷ್ ಗೆ ಬಂಧನ ಭೀತಿ| ವಿಚಾರಣೆಗೆ ಹಾಜರಾದರಷ್ಟೇ ಬಚಾವ್ Read More »

69 ಸಹಕಾರ ಸಪ್ತಾಹದಲ್ಲಿ‌ ಉಡುಪಿ‌ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೊಕ್| ಸಚಿವ ಎಸ್.ಅಂಗಾರರಿಗೆ ಆಮಂತ್ರಣವೇ ಇಲ್ಲ…!

ಸಮಗ್ರ ನ್ಯೂಸ್: 69ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ಬಂದರು, ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರನ್ನು ಕೈ ಬಿಟ್ಟಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಮಂಗಳೂರಿನ ಕರಾವಳಿ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಈ ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಸೇರಿದಂತೆ ಹಲವು ಪ್ರಮುಖ ಗಣ್ಯರು ಭಾಗವಹಿಸಿದ್ದರು. ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ನವೋದಯ ಚಾರಿಟೇಬಲ್ ಟ್ರಸ್ಟ್ ಹಾಗೂ ಸಹಕಾರ ಇಲಾಖೆ

69 ಸಹಕಾರ ಸಪ್ತಾಹದಲ್ಲಿ‌ ಉಡುಪಿ‌ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೊಕ್| ಸಚಿವ ಎಸ್.ಅಂಗಾರರಿಗೆ ಆಮಂತ್ರಣವೇ ಇಲ್ಲ…! Read More »

ನನ್ ಮಗ ಕಾರು,‌ಬೈಕ್ ರೈಡ್ ಮಾಡ್ತಾನೆ ಅಂತ ಜಂಬ ಪಡ್ತೀರಾ? ಅಪ್ರಾಪ್ತನಿಗೆ ಕಾರು ಚಲಾಯಿಸಲು ಕೊಟ್ಟು ಏನಾಗಿದೆ ಗೊತ್ತಾ?

ಸಮಗ್ರ ನ್ಯೂಸ್: ನಿಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ಕೊಡುವ ಮೊದಲು ಅಂತಹ ಪಾಲಕರು ಈ ಸ್ಟೋರಿ ಓದ್ಲೇಬೇಕು. ಮಕ್ಕಳು ಕಾರು, ಬೈಕ್ ಓಡಿಸ್ತಾರೆ ಅಂತ ಅವರಿಗೆ ಗಾಡಿ ಕೊಡುವ ಮುನ್ನ ಈ ವಿಷಯ ಸರಿಯಾಗಿ‌ ತಿಳ್ಕೊಳ್ಳಿ. ತಮ್ಮ ಅಪ್ರಾಪ್ತ ‌ಪುತ್ರನಿಗೆ ವಾಹನ ಚಲಾಯಿಸಲು ನೀಡಿದ ತಪ್ಪಿಗೆ ವಾಹನ ಮಾಲಿಕನಿಗೆ ನ್ಯಾಯಾಲಯ ಬರೊಬ್ಬರಿ 20 ಸಾವಿರ ದಂಡ ವಿಧಿಸಿದ ಘಟನೆ ಕಡಬ ತಾಲ್ಲೂಕಿನಲ್ಲಿ ನಡೆದಿದೆ. ಕೊಯಿಲ ಗ್ರಾಮದ ಕೆ.ಸಿ.ಫಾರ್ಮ್ ನಿವಾಸಿ ಅಬ್ದುಲ್ ರಹಿಮಾನ್ ಎಂಬವರು ದಂಡ ಪಾವತಿಸಿದ

ನನ್ ಮಗ ಕಾರು,‌ಬೈಕ್ ರೈಡ್ ಮಾಡ್ತಾನೆ ಅಂತ ಜಂಬ ಪಡ್ತೀರಾ? ಅಪ್ರಾಪ್ತನಿಗೆ ಕಾರು ಚಲಾಯಿಸಲು ಕೊಟ್ಟು ಏನಾಗಿದೆ ಗೊತ್ತಾ? Read More »

ಮಂಗಳೂರು: ನೇಣಿಗೆ ಕೊರಳೊಡ್ಡಿದ ಭಾಗವತ ಕೀರ್ತನ್ ವಗೆನಾಡು| ಕಾರಣ ಇಷ್ಟೇ…

ಸಮಗ್ರ ನ್ಯೂಸ್: ಯಕ್ಷಗಾನ ಭಾಗವತರೊಬ್ಬರು ನೇಣಿಗೆ ಕೊರಳೊಡ್ಡಿ ದುರಂತ ಅಂತ್ಯ ಕಂಡ ಘಟನೆ ನಡೆದಿದೆ. ಕೀರ್ತನ್ ಶೆಟ್ಟಿ ವಗೆನಾಡು ಆತ್ಮಹತ್ಯೆಗೆ ಶರಣಾದ ದುರ್ದೈವಿ‌. ಇವರು ಇಂದು(ನ.18) ಮುಡಿಪು ಸಮೀಪ ಮೂಳೂರು ಬಳಿ ಬಾಡಿಗೆ ಮನೆಯಲ್ಲಿ ಅತ್ಮಹತ್ಯೆಗೆ ಶರಣಾಗಿದ್ದಾರೆ. ಕೀರ್ತನ್ ಅವರು ಈ ಹಿಂದೆ ಬಪ್ಪನಾಡು ಹಾಗೂ ಇತರ ಇತರ ಮೇಳಗಳಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಕೊರೊನ ಸಂಧರ್ಭ ಮತ್ತು ನಂತರ ಚಿಕ್ಕಮೇಳದಲ್ಲಿ ಭಾಗವತಿಕೆ ಮಾಡುತ್ತಿದ್ದರು. ದಂಪತಿ‌ ಕಲಹ ಹಾಗೂ ಕುಡಿತದ ಚಟ ಆತ್ಮಹತ್ಯೆಗೆ ಕಾರಣ ಎಂದು ಮೇಲ್ನೋಟಕ್ಕೆ

ಮಂಗಳೂರು: ನೇಣಿಗೆ ಕೊರಳೊಡ್ಡಿದ ಭಾಗವತ ಕೀರ್ತನ್ ವಗೆನಾಡು| ಕಾರಣ ಇಷ್ಟೇ… Read More »

ನ. 20ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ನಿರ್ಬಂಧ

ಸಮಗ್ರ ನ್ಯೂಸ್: ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಚಂಪಾಷಷ್ಟಿ ಮಹೋತ್ಸವ ಪೂರ್ವ ಕಾರ್ಯಕ್ರಮಗಳು ನ.20ರಿಂದ ಆರಂಭಗೊಳ್ಳಲಿದ್ದು, ದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ. 20ರಂದು ಬೆಳಗ್ಗೆಯಿಂದ ಮಧ್ಯಾಹ್ನ 2 ಘಂಟೆಗಳ ಕಾಲ ದರ್ಶನಕ್ಕೆ ನಿರ್ಬಂಧಿಸಲಾಗಿದೆ. ಚಂಪಾಷಷ್ಥಿ ವಾರ್ಷಿಕ ಮೂಲಮೃತ್ತಿಕೆಯ ಪ್ರಸಾದ ತೆಗೆಯುವ ಆಚರಣೆಯ ಕಾರಣದಿಂದ ದರ್ಶನಕ್ಕೆ ನಿರ್ಬಂಧ ಮಾಡಲಾಗಿದೆ. ಕಳೆದೆರಡು ವರ್ಷಗಳಿಂದ ಕರೋನಾ ಹಿನ್ನೆಲೆಯಿಂದ ಎಡೆಸ್ನಾನ ಸೇವೆಗೆ ನಿರ್ಬಂಧಿಸಲಾಗಿತ್ತು. ಈ ವರ್ಷ ಎಡೆಸ್ನಾನ ಸೇವೆಗೆ ಆವಕಾಶ ನೀಡಲಾಗಿದೆ.

ನ. 20ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ನಿರ್ಬಂಧ Read More »

ಜೀನ್ಸ್‌ ಆರ್ಡರ್‌ ಮಾಡಿದ ಮಹಿಳೆಗೆ ಬ್ಯಾಗ್‌ ತುಂಬಾ ಈರುಳ್ಳಿ|“ಉಚಿತ ಈರುಳ್ಳಿ? ಈ ಆರ್ಥಿಕತೆಯಲ್ಲಿ? ವ್ಹಾವ್‌-ಕಾಮೆಂಟ್‌

ನ್ಯೂಯಾರ್ಕ್: ಆನ್‌ಲೈನ್‌ನಲ್ಲಿ ಸೆಕೆಂಡ್‌ ಹ್ಯಾಂಡ್‌ ಜೀನ್ಸ್‌ ಆರ್ಡರ್‌ ಮಾಡಿದ ಮಹಿಳೆಗೆ ಬ್ಯಾಗ್‌ ತುಂಬಾ ಈರುಳ್ಳಿ ಬಂದಿದೆ. ಇದನ್ನು ನೋಡಿ ಮಹಿಳೆ ಶಾಕ್‌ ಆಗಿದ್ದಾರೆ. ಬ್ರಿಟಿಷ್ ಸೆಕೆಂಡ್ ಹ್ಯಾಂಡ್ ಫ್ಯಾಶನ್ ಸೈಟ್ ಡೆಪಾಪ್‌ನಲ್ಲಿ ಮಹಿಳೆ ಜೀನ್ಸ್ ಅನ್ನು ಆರ್ಡರ್ ಮಾಡಿದ್ದಾರೆ. ಆದರೆ ಅವರಿಗೆ ಬ್ಯಾಗ್‌ ತುಂಬಾ ಈರುಳ್ಳಿ ಪಾರ್ಸೆಲ್‌ ಬಂದಿದೆ. ಇದನ್ನು ಕಂಡು ಅಚ್ಚರಿಗೊಂಡ ಮಹಿಳೆ, ಮಾರಾಟಗಾರರನ್ನು ಸಂಪರ್ಕಿಸಿ ಪ್ರಶ್ನಿಸಿದ್ದಾರೆ. ಅವರು ಕೂಡ ಗೊಂದಲಕಾರಿ ಉತ್ತರವನ್ನು ನೀಡಿದ್ದಾರೆ. ಈರುಳ್ಳಿ ಹೇಗೆ ಬಂತು ಎಂಬುದು ನಮಗೂ ಗೊತ್ತಿಲ್ಲ ಎಂದು ಮಹಿಳೆಗೆ

ಜೀನ್ಸ್‌ ಆರ್ಡರ್‌ ಮಾಡಿದ ಮಹಿಳೆಗೆ ಬ್ಯಾಗ್‌ ತುಂಬಾ ಈರುಳ್ಳಿ|“ಉಚಿತ ಈರುಳ್ಳಿ? ಈ ಆರ್ಥಿಕತೆಯಲ್ಲಿ? ವ್ಹಾವ್‌-ಕಾಮೆಂಟ್‌ Read More »

“ಸುಂಕ ವಸೂಲಿ ನಿಲ್ಲುವ ತನಕ ನಿರಂತರ ಹೋರಾಟ” -ರಮಾನಾಥ್ ರೈ|ಸುರತ್ಕಲ್ ಟೋಲ್ ವಿರೋಧಿಸಿ ಕಾಲ್ನಡಿಗೆ ಜಾಥಾ

ಸಮಗ್ರ ನ್ಯೂಸ್: ಸುರತ್ಕಲ್ ಟೋಲ್ ಗೇಟ್ ವಿರೋಧಿಸಿ ಹೋರಾಟ ಸಮಿತಿ ಕಳೆದ 22 ದಿನಗಳಿಂದ ನಡೆಸುತ್ತಿರುವ ಧರಣಿ ಪ್ರತಿಭಟನೆ ಬೆಂಬಲಿಸಿ ಸಮಾನ ಮನಸ್ಕ ಸಂಘಟನೆಗಳು ಶುಕ್ರವಾರ ಸಂಜೆ ತಡಂಬೈಲ್ ಜಂಕ್ಷನ್ ನಿಂದ ಧರಣಿ ಸ್ಥಳಕ್ಕೆ ಕಾಲ್ನಡಿಗೆ ಜಾಥಾ ನಡೆಸಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತಾಡಿದ ಮಾಜಿ ಸಚಿವ ರಮಾನಾಥ್ ರೈ ಅವರು, “ಸುರತ್ಕಲ್ ಟೋಲ್ ಹೋರಾಟ ನಿರಂತರವಾಗಿ 22 ದಿನಗಳಿಂದ ನಡೆಯುತ್ತಿದ್ದು ಜನರಿಂದ ಸುಂಕ ವಸೂಲಿ ಮಾಡುವುದು ಸಂಪೂರ್ಣ ನಿಲ್ಲುವ ತನಕ ಅಹೋರಾತ್ರಿ ಧರಣಿ ಮುಂದುವರಿಯುತ್ತದೆ. ಜಿಲ್ಲೆಯ ಗ್ರಾಮೀಣ

“ಸುಂಕ ವಸೂಲಿ ನಿಲ್ಲುವ ತನಕ ನಿರಂತರ ಹೋರಾಟ” -ರಮಾನಾಥ್ ರೈ|ಸುರತ್ಕಲ್ ಟೋಲ್ ವಿರೋಧಿಸಿ ಕಾಲ್ನಡಿಗೆ ಜಾಥಾ Read More »