ಸಮಗ್ರ ಸಮಾಚಾರ

ಶಂಕಿತ ಉಗ್ರ ಶಾರೀಕ್ ನ ವಾಟ್ಸಪ್ ಡಿಪಿಯಲ್ಲಿ ಶಿವನ ಫೋಟೋ| ಮೊಬೈಲ್ ತರಬೇತಿ ಕೇಂದ್ರದಿಂದ ‌ಮಾಹಿತಿ

ಸಮಗ್ರ ನ್ಯೂಸ್: ಮಂಗಳೂರು ಆಟೋ ಬಾಂಬ್ ಸ್ಪೋಟ ಪ್ರಕರಣದ ಶಂಕಿತ ಉಗ್ರ ಶಾರಿಕ್ ತನ್ನ ವಾಟ್ಸಪ್ ಡಿಪಿಯಲ್ಲಿ ಈಶ್ವರನ ಫೋಟೋ ಇಟ್ಟುಕೊಂಡಿದ್ದ ಎಂದು ಮೊಬೈಲ್ ತರಬೇತಿ ಕೇಂದ್ರದ ಮಾಲೀಕ ಪ್ರಸಾದ್ ತಿಳಿಸಿದ್ದಾರೆ. ಮೈಸೂರಿನ ಕೆ.ಆರ್. ಮೊಹಲ್ಲಾದಲ್ಲಿ ಮೊಬೈಲ್ ತರಬೇತಿ ಕೇಂದ್ರದಲ್ಲಿ ಮೊಬೈಲ್ ರಿಪೇರಿ ಬಗ್ಗೆ ತರಬೇತಿ ಪಡೆಯಲು ಬಂದಿದ್ದ ಶಾರಿಕ್ ಧಾರವಾಡ ಶೈಲಿ ಕನ್ನಡದಲ್ಲಿ ಮಾತನಾಡುತ್ತಿದ್ದ. ಧಾರವಾಡದ ಪ್ರೇಮ್ ರಾಜ್ ಎಂಬ ಹೆಸರಿನಲ್ಲಿ ದಾಖಲೆ ನೀಡಿ ತರಬೇತಿ ಪಡೆಯುತ್ತಿದ್ದ ಎಂದು ಪ್ರಸಾದ್ ಮಾಹಿತಿ ನೀಡಿದ್ದಾರೆ. ಶಂಕಿತ ಉಗ್ರ […]

ಶಂಕಿತ ಉಗ್ರ ಶಾರೀಕ್ ನ ವಾಟ್ಸಪ್ ಡಿಪಿಯಲ್ಲಿ ಶಿವನ ಫೋಟೋ| ಮೊಬೈಲ್ ತರಬೇತಿ ಕೇಂದ್ರದಿಂದ ‌ಮಾಹಿತಿ Read More »

ಧರ್ಮಸ್ಥಳ: ತಂದೆ‌- ಮಗ ನಿಗೂಢ ಸಾವು

ಸಮಗ್ರ ನ್ಯೂಸ್: ಧರ್ಮಸ್ಥಳ ಸಮೀಪದ ಪುದುವೆಟ್ಟು ಎಂಬಲ್ಲಿ ತಂದೆ-ಮಗ ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಗುರುವ (75 ) ಹಾಗೂ ಪುತ್ರ ಓಡಿ (45) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇವರಿಬ್ಬರ ಮೃತ ದೇಹ ಮಿಯ್ಯಾರು ಸಾಮೆದಕಲಪು ಅಂಚೆ ಕಚೇರಿ ಬಳಿಯ ಇವರ ಮನೆಯ ಅಂಗಳದಲ್ಲಿ ಸಿಕ್ಕಿದೆ ಎಂದು ತಿಳಿದು ಬಂದಿದೆ. ಧರ್ಮಸ್ಥಳ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಧರ್ಮಸ್ಥಳ: ತಂದೆ‌- ಮಗ ನಿಗೂಢ ಸಾವು Read More »

ಸುಳ್ಯ: ಹೆರಿಗೆಯಾದ 12ನೇ ದಿನಕ್ಕೆ ಬಾಣಂತಿ ಮೃತ್ಯು

ಸಮಗ್ರ ನ್ಯೂಸ್: ಹೆರಿಗೆಯಾದ 12ನೇ ದಿನಕ್ಕೆ ಬಾಣಂತಿಯೊಬ್ಬರು ಸಾವನ್ನಪ್ಪಿದ ಘಟನೆ ಸುಳ್ಯ ಸಮೀಪ ನಡೆದಿದೆ. ಸುಳ್ಯ ತಾಲೂಕು ಜಟ್ಟಿಪಳ್ಳದ ನಿವಾಸಿ ಲೀಲಾ ಎಂಬವರ ಪುತ್ರಿ ಗೀತಾ (30) ಸಾವನ್ನಪ್ಪಿದ ಬಾಣಂತಿ ಮಹಿಳೆ. ಇವರನ್ನು ಚೊಕ್ಕಾಡಿಯ ಜಗದೀಶ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಒಂದು ಗಂಡು ಮಗುವಿದ್ದು, ಎರಡನೇ ಮಗುವಿನ ಹೆರಿಗೆಗಾಗಿ ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 12 ದಿನಗಳ ಹಿಂದೆ ಅವರು ಹೆಣ್ಣು ಮಗುವಿಗೆ ನೀಡಿದ್ದರು. ಬಳಿಕ ಅವರು ಮಗು ಸಮೇತ ತಾಯಿ ಮನೆಗೆ ಬಂದಿದ್ದರು.

ಸುಳ್ಯ: ಹೆರಿಗೆಯಾದ 12ನೇ ದಿನಕ್ಕೆ ಬಾಣಂತಿ ಮೃತ್ಯು Read More »

ಲಘು ವಿಮಾನ ಪತನ; 8 ಮಂದಿ ಸಾವು

ಸಮಗ್ರ ನ್ಯೂಸ್: ಲಘು ವಿಮಾನವೊಂದು ವಸತಿ ಪ್ರದೇಶದಲ್ಲಿ ಪತನಗೊಂಡು ಎಂಟು ಮಂದಿ ಮೃತಪಟ್ಟ ಘಟನೆ ಕೊಲಂಬಿಯಾದಲ್ಲಿ ನಡೆದಿದೆ. ಇಲ್ಲಿನ ಮೆಡೆಲಿನ್​​ನ ಒಲಯಾ ಹೆರೆರಾ ವಿಮಾನ ನಿಲ್ದಾಣದಿಂದ ಟೇಕ್​ಆಫ್​ ಆಗಿದ್ದ ಈ ವಿಮಾನದಲ್ಲಿ ಇಬ್ಬರು ಪೈಲೆಟ್​ಗಳು ಮತ್ತು ಆರು ಮಂದಿ ಪ್ರಯಾಣಿಕರು ಇದ್ದರು. ಏರ್​ಪೋರ್ಟ್​ನಿಂದ ಹೊರಟ ಕೆಲವೇ ಹೊತ್ತಲ್ಲಿ, ಸಮೀಪದ ವಸತಿ ಪ್ರದೇಶದಲ್ಲಿದ್ದ ಮನೆಯೊಂದಕ್ಕೆ ಡಿಕ್ಕಿ ಹೊಡೆದು ಪತನಗೊಂಡಿದೆ. ಆ ಮನೆಯ ಕೊನೇ ಫ್ಲೋರ್​ ಧ್ವಂಸಗೊಂಡಿದೆ. ಅದೃಷ್ಟಕ್ಕೆ ಮನೆಯಲ್ಲಿ ಇದ್ದವರಿಗಾಗಲೀ, ಪತನಗೊಂಡ ಸ್ಥಳದಲ್ಲಿ ಇದ್ದ ಇನ್ನಿತರರಿಗಾಗಲೀ ಯಾವುದೇ ತೊಂದರೆಯಾಗಿಲ್ಲ

ಲಘು ವಿಮಾನ ಪತನ; 8 ಮಂದಿ ಸಾವು Read More »

ಮಂಗಳೂರು:ರಸ್ತೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆ|ಬದಲಿ ರಸ್ತೆ ವ್ಯವಸ್ಥೆ

ಸಮಗ್ರ ನ್ಯೂಸ್: ಮಂಗಳೂರು ತಾಲೂಕಿನ ಮಂಗಳೂರು-ಅತ್ರಾಡಿ ರಾಜ್ಯ ಹೆದ್ದಾರಿ ಸಂಖ್ಯೆ 67ರ 16.20 ಕಿ.ಮೀ. ನಿಂದ 19 ಕಿ.ಮೀ. ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ ಆದೇಶ ಹಾಗೂ ಸಾರ್ವಜನಿಕರ ಓಡಾಟಕ್ಕೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಿ ಅಪರ ದಂಡಾಧಿಕಾರಿಗಳೂ ಆಗಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. ಬದಲಿ ರಸ್ತೆ ವ್ಯವಸ್ಥೆ: ಕಟೀಲು ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಬಜಪೆ

ಮಂಗಳೂರು:ರಸ್ತೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆ|ಬದಲಿ ರಸ್ತೆ ವ್ಯವಸ್ಥೆ Read More »

ಕಡಬ: ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ಮಹಿಳೆ ಸಾವು

ಸಮಗ್ರ ನ್ಯೂಸ್: ಚಲಿಸುತ್ತಿದ್ದ ಬಸ್ಸಿನಿಂದ ಮಹಿಳೆಯೊಬ್ಬರು ಹೊರಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕೇಪು ಲಕ್ಷ್ಮಿ ಜನಾರ್ಧನ ದೇವಸ್ಥಾನದ ಬಳಿ ಈ ದುರ್ಘಟನೆ ನಡೆದಿದೆ. ಬೆಂಗಳೂರಿನ ದಾಸರಹಳ್ಳಿಯ ನಾಗರತ್ಮಮ್ಮ( 58) ಮೃತಪಟ್ಟವರು. ಇವರು ಬೆಂಗಳೂರಿನಿಂದ ತಮ್ಮ ಕುಟುಂಬಸ್ಥರೊಂದಿಗೆ ಬೆಂಗಳೂರಿನಿಂದ ರೈಲು ಮೂಲಕ ಬಂದು ನೆಟ್ಟಣ ನಲ್ಲಿ ಬಂದಿಳಿದಿದ್ದರು. ಅಲ್ಲಿಂದ ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ಧರ್ಮಸ್ಥಳಕ್ಕೆ ತೆರಳಲು ಬಸ್ ಏರಿ ಬಸ್ ಮುಂಭಾಗ ಕುಳಿತ್ತಿದ್ದ ಮಹಿಳೆಯು ಕೇಪು ದೇವಸ್ಥಾನದ ಬಳಿ

ಕಡಬ: ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ಮಹಿಳೆ ಸಾವು Read More »

ಮೂಡಬಿದ್ರೆ, ಉತ್ತರ ಎರಡೂ ಕ್ಷೇತ್ರದತ್ತ “ಪ್ರತಿಭಾ” ಕಣ್ಣು!

ಸಮಗ್ರ ನ್ಯೂಸ್: ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಅವರು ಮಂಗಳೂರು ಉತ್ತರ ಮತ್ತು ಮೂಲ್ಕಿ ಮೂಡಬಿದ್ರೆ ಎರಡೂ ಕ್ಷೇತ್ರಗಳಲ್ಲಿ ಟಿಕೆಟ್ ಗಾಗಿ ಹೈಕಮಾಂಡ್ ಗೆ ಅರ್ಜಿ ಸಲ್ಲಿಸಿದ್ದಾರೆ. ಮಂಗಳೂರು ಉತ್ತರದಲ್ಲಿ ಟಿಕೆಟ್ ಗಾಗಿ ಲಾಬಿ ಜೋರಾಗಿ ನಡೆಯುತ್ತಿದ್ದು ಮಾಜಿ ಶಾಸಕ ಮೊಯಿದೀನ್ ಬಾವಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಟಿಕೆಟ್ ಆಕಾಂಕ್ಷಿಗಳಾಗಿ ಮುಂಚೂಣಿಯಲ್ಲಿದ್ದಾರೆ. ಇವರಲ್ಲದೆ ಮಮತಾ ಗಟ್ಟಿ, ಮಾಜಿ ಮೇಯರ್ ಗಳಾದ ಶಶಿಧರ್ ಹೆಗ್ಡೆ, ಕವಿತಾ ಸನಿಲ್, ಲುಕ್ಮಾನ್ ಬಂಟ್ವಾಳ, ಪುರುಷೋತ್ತಮ ಚಿತ್ರಾಪುರ ಹಾಗೂ ಇತರರು

ಮೂಡಬಿದ್ರೆ, ಉತ್ತರ ಎರಡೂ ಕ್ಷೇತ್ರದತ್ತ “ಪ್ರತಿಭಾ” ಕಣ್ಣು! Read More »

“ಪುದುಚೇರಿಯಲ್ಲಿ ಉಗ್ರ ಚಟುವಟಿಕೆಗೆ ಕಡಿವಾಣ, ಪ್ರವಾಸಿಗರ ಸುರಕ್ಷತೆಗೆ ಆದ್ಯತೆ”
-ಪುದುಚೇರಿ ಗೃಹಸಚಿವ ಎ. ನಮಸ್ಸಿವಾಯಂ

ಸುರತ್ಕಲ್: “ಪುದುಚೇರಿ ಸರಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ವಿದೇಶಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಉಗ್ರ ಚಟುವಟಿಕೆಗೆ ಮೇಲೆ ಹದ್ದಿನ ಕಣ್ಣಿರಿಸಲಾಗಿದ್ದು ಸುರಕ್ಷತಾ ಕ್ರಮಕ್ಕೆ ಒತ್ತು ,ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ” ಎಂದು ಪುದುಚೇರಿ ಗೃಹಸಚಿವ ಎ. ನಮಸ್ಸಿವಾಯಂ ಅವರು ಹೇಳಿದರು. ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಶ್ರೀ ಕಟೀಲೇಶ್ವರಿ ಕಲ್ಲಿದ್ದಲು ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದ ಅವರು ಕಲ್ಲಿದ್ದಲು ಉದ್ಯಮದ ಕುರಿತು ಮಾಹಿತಿ ಪಡೆದುಕೊಂಡರು.ಪುದುಚೇರಿ ಸಣ್ಣ ರಾಜ್ಯವಾಗಿದ್ದು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿದೆ. ಕರ್ನಾಟಕದ ಯುವ

“ಪುದುಚೇರಿಯಲ್ಲಿ ಉಗ್ರ ಚಟುವಟಿಕೆಗೆ ಕಡಿವಾಣ, ಪ್ರವಾಸಿಗರ ಸುರಕ್ಷತೆಗೆ ಆದ್ಯತೆ”
-ಪುದುಚೇರಿ ಗೃಹಸಚಿವ ಎ. ನಮಸ್ಸಿವಾಯಂ
Read More »

ರಾಜ್ ಕುಂದ್ರಾ ಬ್ಲೂಪಿಲಂ ಮಾಡ್ತಿದ್ದದ್ದು ನಿಜ| ಆರೋಪ ಪಟ್ಟಿ ಸಲ್ಲಿಸಿದ ಮುಂಬೈ ಪೊಲೀಸರು| ಬ್ಲೂಪಿಲಂ ನಟಿಮಣಿಯರು ಯಾರ್ ಗೊತ್ತಾ?

ಸಮಗ್ರ ನ್ಯೂಸ್: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬ್ಲೂ ಫಿಲಂ ಚಿತ್ರೀಕರಣ ಮಾಡುತ್ತಿದ್ದು ನಿಜ ಎಂದು ಮುಂಬೈ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ನಟಿಯರಾದ ಪೂನಂ ಪಾಂಡೆ ಮತ್ತು ಶೆರ್ಲಿನ್ ಚೋಪ್ರಾ ಈ ಅಶ್ಲೀಲ ವಿಡಿಯೋಗಳಲ್ಲಿ ನಟಿಸಿದ್ದಾರೆ ಎಂದು ಹೇಳಲಾಗಿದೆ. ರಾಜ್ ಕುಂದ್ರಾ ಒಟಿಟಿಗಾಗಿ ಹೋಟೆಲ್ ಗಳಲ್ಲಿ ಬ್ಲೂ ಫಿಲಂ ತೆಗೆಯುತ್ತಿದ್ದರು. ಅವರೊಂದಿಗೆ ಶೆರ್ಲಿನ್ ಚೋಪ್ರಾ ಮತ್ತು ಪೂನಂ ಪಾಂಡೆ ಭಾಗಿಯಾಗಿದ್ದರು ಎಂದು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಿತ್ರ ನಿರ್ಮಾಪಕ ಮೀತಾ

ರಾಜ್ ಕುಂದ್ರಾ ಬ್ಲೂಪಿಲಂ ಮಾಡ್ತಿದ್ದದ್ದು ನಿಜ| ಆರೋಪ ಪಟ್ಟಿ ಸಲ್ಲಿಸಿದ ಮುಂಬೈ ಪೊಲೀಸರು| ಬ್ಲೂಪಿಲಂ ನಟಿಮಣಿಯರು ಯಾರ್ ಗೊತ್ತಾ? Read More »

ಇಂಡೋನೇಷ್ಯಾದಲ್ಲಿ ಪ್ರಬಲ‌ ಭೂಕಂಪ| 44 ಜನ ಸಾವು, 300ಕ್ಕೂ ಹೆಚ್ಚು ಮಂದಿ ಗಂಭೀರ

ಸಮಗ್ರ ನ್ಯೂಸ್: ಇಂಡೋನೇಷ್ಯಾದ ಪಶ್ಚಿಮ ಜಾವಾ ದ್ವೀಪದಲ್ಲಿ ಭಾರೀ ಭೂಕಂಪ ಸಂಭವಿಸಿದೆ. ಇಲ್ಲಿನ ಸಾಸಿಯಾಜೂರ್ ಪ್ರದೇಶದಲ್ಲಿ 49 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ್ದು, ಈ ಭೂಕಂಪದಲ್ಲಿ ಕನಿಷ್ಠ 44 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 300 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಹಲವು ಆಸ್ತಿಪಾಸ್ತಿ‌ ನಷ್ಟ ಉಂಟಾಗಿರುವ ಸಾಧ್ಯತೆ‌ ಇದ್ದು ಗಾಯಾಳುಗಳನ್ನ ಆಸ್ಪತ್ರೆಗೆ ಸ್ಥಳಾಂತರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 6.9 ರಿಂದ 5.6 ರ ನಡುವೆ ಇತ್ತು. ಭೂಕಂಪದಿಂದಾಗಿ ಸಾವಿರಾರು ಮನೆಗಳು

ಇಂಡೋನೇಷ್ಯಾದಲ್ಲಿ ಪ್ರಬಲ‌ ಭೂಕಂಪ| 44 ಜನ ಸಾವು, 300ಕ್ಕೂ ಹೆಚ್ಚು ಮಂದಿ ಗಂಭೀರ Read More »