ಸಮಗ್ರ ಸಮಾಚಾರ

ಹಸಿರು ಬಾವುಟ ಕಿತ್ತು ಕೇಸರಿ ದ್ವಜ ಹಾರಿಸಿದ ಪ್ರಕರಣ| ನಾಲ್ವರ ಮೇಲೆ FIR ದಾಖಲು

ಸಮಗ್ರ ನ್ಯೂಸ್: ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ವೇಳೆ ಗಂಜಾಂನಲ್ಲಿ ಹಸಿರು ಬಾವುಟ ಕಿತ್ತು ಹಾಕಿ ಕೇಸರಿ ಬಾವುಟ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಂಗಪಟ್ಟಣ ಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣ ಪೊಲೀಸ್ ಠಾಣೆಗೆ ಸುಮಾರು 40ಕ್ಕೂ ಹೆಚ್ಚು ಮುಸ್ಲಿಂ ಜನರು ಭೇಟಿ ನೀಡಿ ಶಾಂತಿಯುತ ಯಾತ್ರೆ ವೇಳೆ ಕೆಲವರು ನಡೆಸಿದ ಕೋಮು ಪ್ರಚೋದನೆ ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸಿದರು. ಗಂಜಾಂನ ಪೇಟೆ ಬೀದಿಯ ನಿವಾಸಿ ಸೈಯದ್ ರೆಹಮನ್ ಎಂಬುವರ ಮನೆ ಮೇಲೆ ಹಲವು ವರ್ಷಗಳಿಂದ ಅಳವಡಿಸಿದ್ದ […]

ಹಸಿರು ಬಾವುಟ ಕಿತ್ತು ಕೇಸರಿ ದ್ವಜ ಹಾರಿಸಿದ ಪ್ರಕರಣ| ನಾಲ್ವರ ಮೇಲೆ FIR ದಾಖಲು Read More »

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಟ್ರ್ಯಾಕ್ಟರ್ ಪಲ್ಟಿ| ಓರ್ವ ಸಾವು, ಮತ್ತೋರ್ವ ಗಂಭೀರ

ಸಮಗ್ರ ನ್ಯೂಸ್: ಚಾರ್ಮಾಡಿ ಘಾಟಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾರ್ಮಿಕರ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೋರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿವೆ. ಚಾರ್ಮಾಡಿ ಘಾಟಿಯಲ್ಲಿ ನಡೆಯುತ್ತಿರುವ ಕಾಮಗಾರಿಗೆ ಟ್ರ್ಯಾಕ್ಟರ್ ನಲ್ಲಿ ನೀರು ತುಂಬಿಸಿ ಹೋಗುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಟರ್ ಟ್ಯಾಂಕರ್ ಪಲ್ಟಿಯಾಗಿ ಅದರಲ್ಲಿದ್ದ ಜಾರ್ಖಂಡ್ ಮೂಲದ ಕಾರ್ಮಿಕ ದಿಬೋ ಶಂಕರ್ ನಾಯಕ್ (22)ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಕಾರ್ಮಿಕನಿಗೆ ಗಂಬೀರ ಗಾಯಗೊಂಡಿದ್ದು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಣಕಲ್ ಪೊಲೀಸರು ಬೇಟಿ ನೀಡಿ ಪರಿಶೀಲಿಸಿದ್ದಾರೆ.

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಟ್ರ್ಯಾಕ್ಟರ್ ಪಲ್ಟಿ| ಓರ್ವ ಸಾವು, ಮತ್ತೋರ್ವ ಗಂಭೀರ Read More »

ಉಗ್ರ ಶಾರೀಖ್‌ ಕೆಲದಿನದ ಹಿಂದೆ ಮಹಿಳೆಯರ ಜೊತೆ ಮಡಿಕೇರಿಯ ಹೋಮ್‌ ಸ್ಟೇಯಲ್ಲಿ….!!

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಬಾಂಬ್‌ ಬ್ಲಾಸ್ಟ್‌ ಮಾಡುವುದಕ್ಕೂ ಮೊದಲ ಉಗ್ರ ಶಾರೀಖ್‌, ಇಬ್ಬರು ಮಹಿಳೆಯರ ಜೊತೆ ಆತ ಮಡಿಕೇರಿ ಜಿಲ್ಲೆ ಹೋಮ್‌ ಸ್ಟೇ ಒಂದಕ್ಕೆ ಬಂದಿದ್ದ ಎಂದು ತನಿಖೆ ವೇಳೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಶಾರೀಖ್‌ ಹಾಗೂ ಆತನ ಸಹಚರರು ಕೊಡಗು ಜಿಲ್ಲೆಗೂ ಭೇಟಿ ನೀಡಿದ್ದರಾ ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಹಾಗೂ ಮಂಗಳೂರು ಪೊಲೀಸರು ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಬಳಿಯ ನೆಮ್ಮಲೆ ಗ್ರಾಮದ ಓಟೆಕಾಡ್ ಹೋಂಸ್ಟೇಯಲ್ಲಿ

ಉಗ್ರ ಶಾರೀಖ್‌ ಕೆಲದಿನದ ಹಿಂದೆ ಮಹಿಳೆಯರ ಜೊತೆ ಮಡಿಕೇರಿಯ ಹೋಮ್‌ ಸ್ಟೇಯಲ್ಲಿ….!! Read More »

ವಿಟ್ಲ: ಮರಾಟಿ ಯುವವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ|
ಅಧ್ಯಕ್ಷರಾಗಿ ಉಮೇಶ್ ಅನ್ನಮೂಲೆ|ಕಾರ್ಯದರ್ಶಿಯಾಗಿ ಹರ್ಷಿತ್ ಗಾಳಿಹಿತ್ಲು

ಸಮಗ್ರ ನ್ಯೂಸ್: ವಿಟ್ಲ ಇಲ್ಲಿನ ಮರಾಟಿ ಯುವವೇದಿಕೆ ರಿ. ವಿಟ್ಲ ಇದರ ನೂತನ ಪದಾಧಿಕಾರಿಗಳ ಆಯ್ಕೆ ಡಿ.4 ರಂದು ನಡೆಯಿತು. ಅಧ್ಯಕ್ಷರಾಗಿ ಉಮೇಶ್ ಅನ್ನಮೂಲೆ, ಉಪಾಧ್ಯಕ್ಷರಾಗಿ ದಿನೇಶ್ ಗೋಳ್ತಮಜಲು, ಕಾರ್ಯದರ್ಶಿಯಾಗಿ ಹರ್ಷಿತ್ ಗಾಳಿಹಿತ್ಲು, ಜೊತೆ ಕಾರ್ಯದರ್ಶಿಯಾಗಿ ಚಿತ್ರಾಕ್ಷ ನೆಕ್ಕರೆಕಾಡು, ಕ್ರೀಡಾ ಕಾರ್ಯದರ್ಶಿಯಾಗಿ ರಾಮಚಂದ್ರ ನೆಕ್ಕರೆಕಾಡು, ಕ್ರೀಡಾ ಜೊತೆ ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ, ಸಿ ಎಚ್ ಸಾಮಾಜಿಕ ಜಾಲತಾಣದ ನಿರ್ವಹಕರಾಗಿ ವಿವೇಕ್ ಅನ್ನಮೂಲೆ, ಗೌರವಾಧ್ಯಕ್ಷರಾಗಿ ರವಿ ಕಲ್ಲಜರಿ ರವರು ಆಯ್ಕೆಯಾಗಿದ್ದಾರೆ.

ವಿಟ್ಲ: ಮರಾಟಿ ಯುವವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ|
ಅಧ್ಯಕ್ಷರಾಗಿ ಉಮೇಶ್ ಅನ್ನಮೂಲೆ|ಕಾರ್ಯದರ್ಶಿಯಾಗಿ ಹರ್ಷಿತ್ ಗಾಳಿಹಿತ್ಲು
Read More »

80ರ ಒಂಟಿ ವೃದ್ಧೆ ಮೇಲೆ 30ರ ಯುವಕನಿಂದ ಅತ್ಯಾಚಾರ

ಸಮಗ್ರ ನ್ಯೂಸ್: ಎಂಬತ್ತು ವರ್ಷದ ಒಂಟಿ ವೃದ್ಧೆ ಮೇಲೆ 30 ವರ್ಷದ ಕಾಮುಕನೊಬ್ಬ ಅತ್ಯಾಚಾರ ಎಸಗಿ ಪರಾರಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬೀರಗೊಂಡನಹಳ್ಳಿಯಲ್ಲಿ ನಡೆದಿದೆ. ಗಂಡನನ್ನು ಕಳೆದುಕೊಂಡಿದ್ದ ವೃದ್ಧೆ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಳು. ಆಕೆಯ ಮೇಲೆ ಎಸ್‌.ರವಿ ಎಂಬಾತ ಅತ್ಯಾಚಾರ ಎಸಗಿದ್ದು, ಸದ್ಯ ಆತ ತಲೆಮರೆಸಿಕೊಂಡಿದ್ದಾನೆ. ಶನಿವಾರ ಬೆಳಗ್ಗೆ ಒಂಟಿಯಾಗಿದ್ದ ವೃದ್ಧೆಯ ಮನೆಗೆ ನುಗ್ಗಿದ ಆರೋಪಿ ಎಸ್‌.ರವಿ, ವೃದ್ಧೆಯನ್ನು ಅಡುಗೆ ಕೋಣೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬೇಡ ಎಂದು ಎಷ್ಟೇ ಕೂಗಿಕೊಂಡರೂ ಆತ ಬಿಡಲಿಲ್ಲ

80ರ ಒಂಟಿ ವೃದ್ಧೆ ಮೇಲೆ 30ರ ಯುವಕನಿಂದ ಅತ್ಯಾಚಾರ Read More »

ದಕ್ಷಿಣ ಕನ್ನಡ ಸೇರಿ ರಾಜ್ಯದ 10 ಜಿಲ್ಲೆಗಳಲ್ಲಿ
ಮೆದುಳು ಜ್ವರಕ್ಕೆ ಲಸಿಕೆ ಅಭಿಯಾನ

ಸಮಗ್ರ ನ್ಯೂಸ್ : ಜೆಇ ಮೆದುಳು ಜ್ವರ ನಿಯಂತ್ರಣಕ್ಕಾಗಿ ಇಂದಿನಿಂದ ರಾಜ್ಯದ 10 ಜಿಲ್ಲೆಗಳಲ್ಲಿ ವಿಶೇಷ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆ 1-15 ವರ್ಷದ ಅಂದಾಜು 48 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ. ಜೆಇ ಲಸಿಕಾ ಅಭಿಯಾನ ಕುರಿತುಮಾಹಿತಿ ನೀಡಿದ ಅವರು, ‘ಜೆಇ ಮೆದುಳು ಜ್ವರ ಫ್ಲೇವಿ ವೈರಸ್‌ನಿಂದ ಬರುತ್ತದೆ. ಮಕ್ಕಳಲ್ಲಿ ನರ ದೌರ್ಬಲ್ಯ, ಬುದ್ಧಿಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವಿಕಲತೆ ಉಂಟುಮಾಡುವ ಸಾಧ್ಯತೆಗಳಿವೆ.

ದಕ್ಷಿಣ ಕನ್ನಡ ಸೇರಿ ರಾಜ್ಯದ 10 ಜಿಲ್ಲೆಗಳಲ್ಲಿ
ಮೆದುಳು ಜ್ವರಕ್ಕೆ ಲಸಿಕೆ ಅಭಿಯಾನ
Read More »

ಬೆಂಗಳೂರು ಮೂಲದ ಯುವಕನ ಶವ ತೊಕ್ಕೊಟ್ಟು ಬಳಿ ಬಾವಿಯಲ್ಲಿ ಪತ್ತೆ

ಸಮಗ್ರ ನ್ಯೂಸ್: ಬೆಂಗಳೂರು ಮೂಲದ ಯುವಕನ ಮೃತದೇಹ ತೊಕ್ಕೊಟ್ಟು ಸಮೀಪದ ಬಾವಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿ ಸದ್ಯ ಬೆಂಗಳೂರಿನಲ್ಲಿ ವಾಸವಾಗಿರುವ ಮಹಂತೇಶ್ ಎ.ಎಸ್ (36) ಮೃತ ಯುವಕ. ನವೆಂಬರ್ 30ರಂದು ಬೆಂಗಳೂರಿನಿಂದ ತೊಕ್ಕೊಟ್ಟಿಗೆ ಬಂದಿದ್ದ ಮಹಾಂತೇಶ್ ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ಖಾಸಗಿ ಲಾಡ್ಜ್‌ನಲ್ಲಿ ತಂಗಿದ್ದರು. ರಾತ್ರಿ ಲಾಡ್ಜ್ ನಿಂದ ತೆರಳಿದವರು ವಾಪಸ್ಸಾಗಿರಲಿಲ್ಲ. ಡಿಸೆಂಬರ್ 1 ರಂದು ಸಂಜೆ ಲಾಡ್ಜ್ ರೂಮಿನ ಅವಧಿ ಮುಗಿದ ಹಿನ್ನೆಲೆ ರೂಮ್ ಬಾಯ್ ರೂಮಿಗೆ

ಬೆಂಗಳೂರು ಮೂಲದ ಯುವಕನ ಶವ ತೊಕ್ಕೊಟ್ಟು ಬಳಿ ಬಾವಿಯಲ್ಲಿ ಪತ್ತೆ Read More »

ಇಂತಹ ಹಾಡುಗಳನ್ನು ಪ್ರಸಾರ ಮಾಡಿದರೆ ಶಿಸ್ತು ಕ್ರಮ| ಖಾಸಗಿ ಎಫ್ಎಂ ಗಳಿಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ

ಸಮಗ್ರ ನ್ಯೂಸ್: ಮದ್ಯಪಾನ , ಡ್ರಗ್ಸ್, ಶಸ್ತ್ರಾಸ್ತ್ರಗಳು ಮತ್ತು “ದರೋಡೆಕೋರ ಅಥವಾ ಗನ್ ಸಂಸ್ಕೃತಿ”ಯನ್ನು ವೈಭವೀಕರಿಸುವ ಹಾಡುಗಳನ್ನು ಹಾಕದಂತೆ ಖಾಸಗಿ ಎಫ್‌ಎಂ ಚಾನೆಲ್‌ಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಇಲ್ಲದಿದ್ದರೆ ಖಾಸಗಿ ಎಫ್‌ಎಂ ಚಾನೆಲ್‌ಗಳಿಗೆ ಅನುಮತಿಗಳನ್ನು ಸಸ್ಪೆಂಡ್‌ ಮಾಡುವುದು ಮುಂತಾದ ಶಿಸ್ತು ಕ್ರಮದ ಎಚ್ಚರಿಕೆಯನ್ನೂ ನೀಡಿದೆ. ಕೆಲವು ಎಫ್‌ಎಂ ರೇಡಿಯೊ ಚಾನೆಲ್‌ಗಳು ಮದ್ಯ, drugs ಶಸ್ತ್ರಾಸ್ತ್ರಗಳು, ದರೋಡೆಕೋರರು ಮತ್ತು ಗನ್ ಸಂಸ್ಕೃತಿಯನ್ನ ವೈಭವೀಕರಿಸುವ ಹಾಡುಗಳನ್ನ ಪ್ರಸಾರ ಮಾಡುವುದನ್ನ ಸಚಿವಾಲಯ ಗಮನಿಸಿದ್ದು ಎಚ್ಚರಿಕೆ ನೀಡಿದೆ. ಸಲಹೆಯನ್ನು ಉಲ್ಲಂಘಿಸುವವರ ವಿರುದ್ಧ

ಇಂತಹ ಹಾಡುಗಳನ್ನು ಪ್ರಸಾರ ಮಾಡಿದರೆ ಶಿಸ್ತು ಕ್ರಮ| ಖಾಸಗಿ ಎಫ್ಎಂ ಗಳಿಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ Read More »

ಮೆಟ್ಟಿಲಿಂದ ಜಾರಿ ಬಿದ್ದು ಮಲವಿಸರ್ಜನೆ ಮಾಡಿಕೊಂಡ ರಷ್ಯಾ ಅಧ್ಯಕ್ಷ ಪುತಿನ್!!

ಸಮಗ್ರ ನ್ಯೂಸ್: ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಮಾಸ್ಕೋದ ತಮ್ಮ ಅಧಿಕೃತ ನಿವಾಸದಲ್ಲಿ ಮೆಟ್ಟಿಲು ಇಳಿಯುವಾಗ ಜಾರಿ ಬಿದ್ದಿದ್ದಾರೆ. ಇದರ ಪರಿಣಾಮ ಅನಿಯಂತ್ರಿತ ಮಲವಿಸರ್ಜನೆ ಮಾಡಿಕೊಂಡಿದ್ದಾರೆ ಎಂದು ಪುಟಿನ್‌ ಅವರ ಭದ್ರತಾ ತಂಡದ ಹೇಳಿಕೆ ಉಲ್ಲೇಖೀಸಿ ಟೆಲಿಗ್ರಾಂ ಸುದ್ದಿವಾಹಿನಿ ವರದಿ ಮಾಡಿದೆ. “ಇನ್ನೇನು ಐದು ಮೆಟ್ಟಿಲುಗಳು ಇರುವಾಗ ಪುಟಿನ್‌(70) ಜಾರಿ ಬಿದ್ದರು. ಕ್ಯಾನ್ಸರ್‌ನಿಂದಾಗಿ ಹೊಟ್ಟೆ ಮತ್ತು ಕರುಳಿನ ಸಮಸ್ಯೆ ಇರುವುದರಿಂದ ಅವರು ಬಿದ್ದ ತಕ್ಷಣ ಅನಿಯಂತ್ರಿತ ಮಲವಿಸರ್ಜನೆ ಆಗಿದೆ,’ ಎಂದು ವರದಿಗಳು ತಿಳಿಸಿವೆ. ‘ರಕ್ತ ಕ್ಯಾನ್ಸರ್‌

ಮೆಟ್ಟಿಲಿಂದ ಜಾರಿ ಬಿದ್ದು ಮಲವಿಸರ್ಜನೆ ಮಾಡಿಕೊಂಡ ರಷ್ಯಾ ಅಧ್ಯಕ್ಷ ಪುತಿನ್!! Read More »

ಸುಬ್ರಹ್ಮಣ್ಯ: ಯುವಕನಲ್ಲಿ ಹಣಕ್ಕೆ ಪೀಡಿಸಿದ ಪೊಲೀಸ್ ವಿರುದ್ಧ ದೂರು

ಸಮಗ್ರ ನ್ಯೂಸ್ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಷಷ್ಠಿಯಂದು ವ್ಯಾಪಾರ ಮಾಡುತ್ತಿದ್ದ ಯುವಕನಲ್ಲಿ ಹಣಕ್ಕೆ ಪೀಡಿಸಿದ್ದಲ್ಲದೆ ಪೊಲೀಸ್ ವಸತಿಗೃಹಕ್ಕೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದಾರೆಂಬ ಆರೋಪದಲ್ಲಿ ಸುಬ್ರಹ್ಮಣ್ಯ ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದೆ. ಕಡಬ ತಾಲೂಕಿನ ಕುಟ್ರಾಪಾಡಿ ಗ್ರಾಮದ ಭೀಮಗುಂಡಿ ಶಶಿಕಿರಣ್‌ (19) ಅವರು ಸುಬ್ರಹ್ಮಣ್ಯ ಠಾಣೆಯ ಪೊಲೀಸ್‌ ಸಿಬ್ಬಂದಿ ಭೀಮಣ್ಣ ಗೌಡ ವಿರುದ್ದ ದೂರು ನೀಡಿದ್ದಾರೆ. ಪಂಚಮಿ ದಿನವಾದ ನವೆಂಬರ್‍ 28ರಂದು ವ್ಯಾಪಾರ ನಡೆಸುತ್ತಿದ್ದಾಗ ರಾತ್ರಿ 11.30ರ ವೇಳೆಗೆ ಸ್ಟಾಲ್‌ಗೆ ಬಂದ ಭೀಮಣ್ಣ ಗೌಡ

ಸುಬ್ರಹ್ಮಣ್ಯ: ಯುವಕನಲ್ಲಿ ಹಣಕ್ಕೆ ಪೀಡಿಸಿದ ಪೊಲೀಸ್ ವಿರುದ್ಧ ದೂರು Read More »