ಸಮಗ್ರ ಸಮಾಚಾರ

ಚುನಾವಣೆ ಹಿನ್ನಲೆ|ಮೈಸೂರಿನ ರೌಡಿ ಶೀಟರ್ ಗಳಿಗೆ ಡ್ರಿಲ್

ಸಮಗ್ರ ನ್ಯೂಸ್: ಚುನಾವಣೆ ಹಿನ್ನಲೆ ಮೈಸೂರು ಖಾಕಿ ಪಡೆ ಅಲರ್ಟ್ ಆಗುತ್ತಿದ್ದು, ಸಮಾಜಘಾತುಕ ಶಕ್ತಿಗಳನ್ನ ಸೆದೆಬಡಿಯಲು ಮುಂದಾಗಿದೆ. ಶಾಂತಿ ಕದಡುವ ಯತ್ನ ನಡೆಸುವವರಿಗೆ ಎಚ್ಚರಿಕೆ ನೀಡಿದ್ದಾರೆ. ಬೆಳ್ಳಂಬೆಳಗ್ಗೆ ಮೈಸೂರಿನ ರೌಡಿ ಶೀಟರ್ ಗಳಿಗೆ ಡ್ರಿಲ್ ಮಾಡಿಸಿದ್ದು ಸುಮಾರು 50 ಕ್ಕೂ ಹೆಚ್ಚು ರೌಡಿ ಶೀಟರ್ ಗಳನ್ನ ಹೆಬ್ಬಾಳ್ ಪೊಲೀಸ್ ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ. ಚುನಾವಣೆ ಸಮಯದಲ್ಲಿ ಅಹಿತಕರ ಘಟನೆಗೆ ಆಸ್ಪದ ನೀಡಿದ್ರೆ ಹುಷಾರ್ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇದೇ ವೇಳೆ ನಗರದ ವಿವಿದ ಪೊಲೀಸ್ […]

ಚುನಾವಣೆ ಹಿನ್ನಲೆ|ಮೈಸೂರಿನ ರೌಡಿ ಶೀಟರ್ ಗಳಿಗೆ ಡ್ರಿಲ್ Read More »

ಬೆಳ್ತಂಗಡಿ: ಜ್ವರದಿಂದ ಬಳಲಿ ಯುವತಿ ಸಾವು

ಸಮಗ್ರ ನ್ಯೂಸ್: ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಯುವತಿಯೋರ್ವಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ವರದಿಯಾಗಿದೆ. ಮೃತ ಯುವತಿಯನ್ನು ತಾಲೂಕಿನ ತೆಂಕಕಾರಂದೂರು ಗ್ರಾಮದ ಸಿಂಗ ಎಂಬವರ ಪುತ್ರಿ ಪವಿತ್ರ(22) ಎಂದು ಗುರುತಿಸಲಾಗಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಪವಿತ್ರಾಳನ್ನು ಗುರುವಾಯನಕೆರೆ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು ಎಂದು ತಿಳಿದುಬಂದಿದೆ

ಬೆಳ್ತಂಗಡಿ: ಜ್ವರದಿಂದ ಬಳಲಿ ಯುವತಿ ಸಾವು Read More »

ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಿಸಿ ರಾಜ್ಯ ಸರ್ಕಾರದಿಂದ ಆದೇಶ

ಸಮಗ್ರ ನ್ಯೂಸ್: ಪೋಸ್ಕೋ ಕೇಸ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಮುರುಘಾ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಜೈಲು ಪಾಲು ಆಗಿದ್ದಾರೆ. ಈ ಹಿನ್ನಲೆಯಲ್ಲಿ ಮುರುಘಾ ಮಠದ ಆಡಳಿತಾಧಿಕಾರಿಯನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿಎಸ್ ವಸ್ತ್ರದ್ ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ಕಂದಾಯ ಇಲಾಖೆ ಸರ್ಕಾರದ ಉಪ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಚಿತ್ರದುರ್ಗ ಶ್ರೀ ಜಗದ್ಗುರು ಮುರುಘಾರಾಜೇಂದ್ರ ಬೃಹಲ್ಮಠದ ಪೀಠಾಧಿಪತಿ ಹಾಗೂ ಎಸ್ ಜೆ ಎಂ ವಿದ್ಯಾಪೀಠದ ಅಧ್ಯಕ್ಷರು ಆಗಿರುವ ಶ್ರೀ ಶಿವಮೂರ್ತಿ ಮುರುಘಾ

ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಿಸಿ ರಾಜ್ಯ ಸರ್ಕಾರದಿಂದ ಆದೇಶ Read More »

ಲಾಡ್ಜ್ ನಲ್ಲಿ ಪತ್ತೆಯಾಯ್ತು ವ್ಯಕ್ತಿಯ ನಗ್ನ ಮೃತದೇಹ|

ಸಮಗ್ರ ನ್ಯೂಸ್: ಮಂಗಳೂರು ನಗರದ ಲಾಡ್ಜ್‌ ಒಂದರಲ್ಲಿ ವ್ಯಕ್ತಿಯ ನಗ್ನಶವ ಪತ್ತೆಯಾಗಿದೆ. ಆತ ನಗ್ನನಾಗಿರುವ ಸ್ಥಿತಿಯಲ್ಲಿ ಸಾವನ್ನಪ್ಪಿದ್ದು ಹೇಗೆ? ಆತನ ಸಾವಿಗೆ ಮುನ್ನ ಆ ಲಾಡ್ಜ್‌ ಕೋಣೆಗೆ ಬಂದು ಹೋದ ಮಹಿಳೆ ಯಾರು ಎನ್ನುವ ವಿಚಾರದಲ್ಲಿ ಈಗ ತನಿಖೆ ಸಾಗಿದೆ. ಜತೆಗೆ ಕೋಣೆಯಲ್ಲಿ ಸಿಕ್ಕಿದ ಮಾತ್ರೆಯೇ ಮುಳುವಾಯಿತೇ ಎನ್ನುವ ಚರ್ಚೆಯೂ ಇದೆ. ಮಂಗಳೂರಿನ ಪಂಪ್ ವೆಲ್ ಬಳಿಯ ಪದ್ಮಶ್ರೀ ಲಾಡ್ಜ್‌ನಲ್ಲಿ ಈ ಶವ ಪತ್ತೆಯಾಗಿದೆ. ಇದು ಕಾಸರಗೋಡಿನ ಉಪ್ಪಳ ನಿವಾಸಿ ಅಬ್ದುಲ್ ಕರೀಮ್ ಎಂಬವರ ಶವ ಎಂದು

ಲಾಡ್ಜ್ ನಲ್ಲಿ ಪತ್ತೆಯಾಯ್ತು ವ್ಯಕ್ತಿಯ ನಗ್ನ ಮೃತದೇಹ| Read More »

ಸಾರ್ವಜನಿಕ ಸ್ಥಳಗಳನ್ನು ಯಾರು ರಕ್ಷಿಸುತ್ತಾರೆ? ‘ಕಾಂತಾರ’ ಪ್ರಭಾವದಿಂದ ಬರೆದ‌ ಉತ್ತರಕ್ಕೆ ಟೀಚರ್ಸ್ ಫುಲ್ ಶಾಕ್

ಸಮಗ್ರ ನ್ಯೂಸ್: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಎಷ್ಟರ ಮಟ್ಟಿಗೆ ಮೋಡಿ ಮಾಡಿದೆ ಎನ್ನುವುದಕ್ಕೆ ಈ ವಿದ್ಯಾರ್ಥಿ ಬರೆದ ಉತ್ತರ ನೋಡಿದರೆ ಗೊತ್ತಾಗುತ್ತದೆ. ಕಾಂತಾರ ಸಿನಿಮಾ ಬಳಿಕ ದೈವ, ಗುಳಿಗ, ಪಂಜುರ್ಲಿ, ಭೂತಾರಾಧನೆ ಮೇಲಿನ ಜನರ ನಂಬಿಕೆ, ಭಕ್ತಿ ಮತ್ತಷ್ಟು ಜಾಸ್ತಿ ಆಗಿದೆ. ತನ್ನ ಊರು ಬಿಟ್ಟು ದೂರದ ಊರುಗಳಲ್ಲಿ ವಾಸಿಸುತ್ತಿರುವವರು ಸಹ ಹುಟ್ಟೂರಿಗೆ ಬಂದು ದೈವಾರಾಧನೆ, ಭೂತ, ಕೋಲದಲ್ಲಿ ಭಾಗಿಯಾಗುತ್ತಿದ್ದಾರೆ. ಕಾಂತಾರ ಸಿನಿಮಾ ಮಕ್ಕಳಿಂದ ದೊಡ್ಡವರ ವರೆಗೂ ಪ್ರಭಾವ ಬೀರಿದ ಸಿನಿಮಾವಾಗಿದೆ. ಅಭಿಮಾನಿಗಳ

ಸಾರ್ವಜನಿಕ ಸ್ಥಳಗಳನ್ನು ಯಾರು ರಕ್ಷಿಸುತ್ತಾರೆ? ‘ಕಾಂತಾರ’ ಪ್ರಭಾವದಿಂದ ಬರೆದ‌ ಉತ್ತರಕ್ಕೆ ಟೀಚರ್ಸ್ ಫುಲ್ ಶಾಕ್ Read More »

ನಟ ದುನಿಯಾ ವಿಜಯ್ ಹಲ್ಲೆ ಪ್ರಕರಣಕ್ಕೆ ಮತ್ತೆ ಮರುಜೀವ

ಸಮಗ್ರ ನ್ಯೂಸ್: ದುನಿಯಾ ವಿಜಯ್ ಹಾಗೂ ಪಾನಿಪುರಿ ಕಿಟ್ಟಿ ನಡುವಿನ ಕಿತ್ತಾಟ ಕೇಸ್ ಮರುಜೀವ ಪಡೆದುಕೊಂಡಿದೆ. ಹೈಕೋರ್ಟ್ ಸೂಚನೆ ಮೇರೆಗೆ ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಹೈಗ್ರೌಂಡ್ಸ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. ನಟನನ್ನು ಬೆದರಿಸಿ ಕಾರಿಗೆ ಹಾನಿ ಮಾಡಿದ್ದಕ್ಕಾಗಿ ಜಿಮ್ ಟ್ರೈನರ್ ಸೇರಿದಂತೆ ಇಬ್ಬರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸೆಪ್ಟೆಂಬರ್ 23, 2018 ರಂದು ವಿಜಯ್ ಮತ್ತು ಅವರ ಮಗ ಸಾಮ್ರಾಟ್ ಡಾ ಬಿಆರ್ ಅಂಬೇಡ್ಕರ್ ಭವನಕ್ಕೆ ಹೋಗಿದ್ದರು, ಅಲ್ಲಿ ಬಾಡಿ

ನಟ ದುನಿಯಾ ವಿಜಯ್ ಹಲ್ಲೆ ಪ್ರಕರಣಕ್ಕೆ ಮತ್ತೆ ಮರುಜೀವ Read More »

Breaking: ರಾಜ್ಯದಲ್ಲಿ 5 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ| ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

ಸಮಗ್ರ ನ್ಯೂಸ್: ಮಕ್ಕಳ ಕಲಿಕಾ ಕೊರತೆ ನೀಗಿಸಲು ರಾಜ್ಯದ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯದ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಲು ರಾಜ್ಯದ ಎಲ್ಲಾ ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಪರಿಶೀಲನೆಗಾಗಿ ಪಬ್ಲಿಕ್ ಪರೀಕ್ಷೆಯ ಮಾದರಿಯಲ್ಲೇ ಪರೀಕ್ಷೆ

Breaking: ರಾಜ್ಯದಲ್ಲಿ 5 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ| ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ Read More »

ಮಂಗಳೂರು: ವ್ಯಕ್ತಿಯೊರ್ವನಿಗೆ ನೋಟಿನ ಬ್ಯಾಗ್‌ ಸಿಕ್ಕಿದ ಪ್ರಕರಣ| ವಾರಸುದಾರ ಠಾಣೆಗೆ ಹಾಜರು

ಸಮಗ್ರ ನ್ಯೂಸ್: ಪಂಪ್‌ವೆಲ್‌ನಲ್ಲಿ ವ್ಯಕ್ತಿಯೊರ್ವನಿಗೆ ನೋಟಿನ ಬ್ಯಾಗ್‌ ದೊರೆತಿದ್ದು, ಸುದ್ದಿ ವೈರಲ್ ಅಗುತ್ತಿದ್ದಂತೆ ಭಾರೀ ಸಂಚಲನ ಕೂಡ ಮೂಡಿತ್ತು. ಇದೀಗ ಪತ್ತೆಯಾಗಿದ್ದ ನೋಟುಗಳ ವಾರಸುದಾರ ಎನ್ನಲಾದ ವ್ಯಕ್ತಿಯೋರ್ವರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ ಎಂದು ವರದಿಯಾಗಿದೆ. ಠಾಣೆಗೆ ಹಾಜರಾದ ವ್ಯಕ್ತಿ ತಾನು ಅಡಿಕೆ ವ್ಯಾಪಾರಿಯಾಗಿದ್ದು ಹಣ ತೆಗೆದುಕೊಂಡು ಹೋಗುವಾಗ ಬಿದ್ದಿದೆ. ಅದರಲ್ಲಿ ಒಟ್ಟು 10 ಲ.ರೂ ಇತ್ತು ಎಂಬುದಾಗಿ ಆ ವ್ಯಕ್ತಿ ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ದೃಢಪಡಿಸಿ ಇತ್ಯರ್ಥ ಮಾಡಿಕೊಳ್ಳುವಂತೆ ಪೊಲೀಸರು

ಮಂಗಳೂರು: ವ್ಯಕ್ತಿಯೊರ್ವನಿಗೆ ನೋಟಿನ ಬ್ಯಾಗ್‌ ಸಿಕ್ಕಿದ ಪ್ರಕರಣ| ವಾರಸುದಾರ ಠಾಣೆಗೆ ಹಾಜರು Read More »

13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ| ಗರ್ಭಿಣಿ ಆದ ನಂತರ ಬೆಳಕಿಗೆ

ಸಮಗ್ರ ನ್ಯೂಸ್: ಬಾಲಕಿಯೊಬ್ಬಳ ಮೇಲೆ ಮೂವರು ಯುವಕರು ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ. ಸಕಲೇಶಪುರ ತಾಲೂಕಿನ ಗ್ರಾಮವೊಂದರಲ್ಲಿ 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂವರು ಕಾಮುಕರು ಸೇರಿ ಈ ಪುಟ್ಟ ಬಾಲಕಿಯನ್ನು ಪುಸಲಾಯಿಸಿ ಈ ಕೃತ್ಯ ಎಸಗಿದ್ದಾರೆ. ಅದೇ ಗ್ರಾಮದ ಸ್ವಾಗತ್, ಸುದರ್ಶನ್, ಪಾಪಣ್ಣ ಅವರೇ ಈ ಕೃತ್ಯ ಎಸಗಿದ ಪಾಪಿಗಳು‌ ಎಂದು ತಿಳಿದುಬಂದಿದೆ. ಕೆಲವು ತಿಂಗಳ ಹಿಂದೆ ಈ ಪೈಶಾಚಿಕ

13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ| ಗರ್ಭಿಣಿ ಆದ ನಂತರ ಬೆಳಕಿಗೆ Read More »

ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ನಿಶ್ಚಿತ – ಜಾಕೆ ಮಾಧವ ಗೌಡ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಪಂಚ ರತ್ನ ರಥ ಯಾತ್ರೆಯ ಪೂರ್ವ ತಯಾರಿ ಯಾಗಿ ಮಂಗಳೂರು ದಕ್ಷಿಣ ವಿದಾನ ಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ಪ್ರಚಾರ ಚಾಲನೆಯನ್ನು ಕದ್ರಿ ಮಂಜುನಾಥ ಸ್ವಾಮಿಯ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಅಧ್ಯಕ್ಷ ಅಧ್ಯಕ್ಷರಾದ ಜಾಕೆ ಮಾದವ ಗೌಡರು ಚಾಲನೆ ನೀಡಿದರು. ರಾಜ್ಯದಲ್ಲಿ 2023 ರ ಚುನಾವಣೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ನಿಶ್ಚಿತ. ಅವರ ಜಲಧಾರೆ ಹಾಗೂ ಪಂಚ ರತ್ನ ಯೋಜನೆ ಈ ರಾಜ್ಯದ ನವನಿರ್ಮಾಣದ ಕಲ್ಪನೆ. ರಾಜ್ಯದ ಮೂಲೆ ಮೂಲೆಗಳಿಂದ ಸಂಪೂರ್ಣ ಬೆಂಬಲ ದೊರಕುತ್ತಿದು

ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ನಿಶ್ಚಿತ – ಜಾಕೆ ಮಾಧವ ಗೌಡ Read More »