ಸಮಗ್ರ ಸಮಾಚಾರ

ಪಾಕ್‌ ನೌಕಾಪಡೆಯಿಂದ ಗುಂಡಿನ ದಾಳಿ, ಭಾರತದ ಮೀನುಗಾರನ ಹತ್ಯೆ

ಗಾಂಧಿನಗರ: ಗುಜರಾತ್‌ನ ಕರಾವಳಿ ಭಾಗದಲ್ಲಿ ಭಾರತದ ಮೀನುಗಾರನನ್ನು ಪಾಕಿಸ್ತಾನ ನೌಕಾಪಡೆ ಗುಂಡಿಟ್ಟು ಹತ್ಯೆ ಮಾಡಿದ ಘಟನೆ ನಡೆದಿದೆ. ಗುಜರಾತ್‌ನ ದ್ವಾರಕಾದಲ್ಲಿ ಓಖಾ ಪಟ್ಟಣದ ಬಳಿ “ಜಲ್‌ಪರಿ” ಎಂಬ ಹೆಸರಿನ ಬೋಟ್‌ನಲ್ಲಿ ಪಾಕಿಸ್ತಾನದ ನೌಕಾಪಡೆಯು ಗುಂಡಿನ ದಾಳಿ ನಡೆಸಿತ್ತು. ಗುಂಡಿನ ದಾಳಿಯಿಂದ ಭಾರತದ ಒಬ್ಬ ಮೀನುಗಾರ ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಪಾಕ್‌ ನೌಕಾಪಡೆಯಿಂದ ಗುಂಡಿನ ದಾಳಿ, ಭಾರತದ ಮೀನುಗಾರನ ಹತ್ಯೆ Read More »

ಉಡುಪಿ : ಜಿಪ್ ಜಾರಿಸಿ ಖಾಸಗಿ ಅಂಗ ತೋರಿಸುತ್ತಿದ್ದ ಕಂಡಕ್ಟರ್‌ನ ಕಾಮದ ಪಿತ್ತ ಇಳಿಸಿದ ನರ್ಸಿಂಗ್ ವಿದ್ಯಾರ್ಥಿನಿಯರು

ಉಡುಪಿ: ಕಾಲೇಜು ವಿಧ್ಯಾರ್ಥಿನಿಯರಿಗೆ ಪ್ರತಿನಿತ್ಯ ಗುಪ್ತಾಂಗ ತೋರಿಸಿ ವಿಕೃತಿ ಮೆರೆಯುತ್ತಿದ್ದ ಖಾಸಗಿ ಬಸ್ ಕಂಡಕ್ಟರ್ ಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ, ಪೊಲೀಸ್ ವಶಕ್ಕೆ ನೀಡಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಹೆಬ್ರಿಯ ಹೆಸರಾಂತ ಖಾಸಗಿ ಬಸ್ ನ‌ ಕಂಡಕ್ಟರ್ ಉಪೇಂದ್ರ ಎಂಬಾತನೇ ಪ್ರಕರಣದ ಆರೋಪಿ. ಈತ ಸಂತೆಕಟ್ಟೆಯ ನರ್ಸಿಂಗ್ ಕಾಲೇಜ್ ಬಳಿ ತನ್ನ ಸ್ಕೂಟಿಯಲ್ಲಿ ಬಂದು ಅಲ್ಲಿನ ವಿದ್ಯಾರ್ಥಿನಿಯರಿಗೆ ಪ್ಯಾಂಟ್ ಜಿಪ್ ಜಾರಿಸಿ ಕಳೆದ ಕೆಲವು ದಿನಗಳಿಂದ ಗುಪ್ತಾಂಗ ತೋರಿಸುತ್ತಿದ್ದ. ಮಾತ್ರವಲ್ಲದೆ ಕೈಸನ್ನೆ, ಕಣ್ಣ್ ಸನ್ನೆ ಮಾಡುತ್ತ

ಉಡುಪಿ : ಜಿಪ್ ಜಾರಿಸಿ ಖಾಸಗಿ ಅಂಗ ತೋರಿಸುತ್ತಿದ್ದ ಕಂಡಕ್ಟರ್‌ನ ಕಾಮದ ಪಿತ್ತ ಇಳಿಸಿದ ನರ್ಸಿಂಗ್ ವಿದ್ಯಾರ್ಥಿನಿಯರು Read More »

ಉಳ್ಳಾಲ: ಹಿಟ್ & ರನ್ ಗೆ ಕೂಲಿ ಕಾರ್ಮಿಕ ಬಲಿ

ಉಳ್ಳಾಲ: ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾ.ಹೆ.66 ರ ಬೀರಿ ಎಂಬಲ್ಲಿ ನಡೆದಿದೆ. ಧಾರವಾಡ ಮೂಲದ ವಲಸೆ ಕಾರ್ಮಿಕ ಆನಂದ್ ಅಲಿಯಾಸ್ ಸಾಗರ್(28)ಸಾವನಪ್ಪಿದ ಯುವಕ. ಈತ ಸಂಕೋಳಿಗೆಯ ಎ.ಕೆ ಟ್ರೇಡರ್ಸ್ ಎಂಬ ಸಿಮೆಂಟ್ ಅಂಗಡಿಯಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದರು. ಅವರು ಶನಿವಾರ ರಾತ್ರಿ ಸ್ನೇಹಿತನ ಜೊತೆ ಬೀರಿಯ ಹೆದ್ದಾರಿ ಬದಿಯಲ್ಲಿರುವ ಠಿಕ್ಕ ಪಾಯಿಂಟ್ ಎಂಬ ರೆಸ್ಟೋರಂಟಿಗೆ ತೆರಳಿದ್ದರು. ಅಲ್ಲಿ ಠಿಕ್ಕ ಸವಿದು ಹಿಂತಿರುಗುತ್ತಿದ್ದ ವೇಳೆ ಅಪರಿಚಿತ

ಉಳ್ಳಾಲ: ಹಿಟ್ & ರನ್ ಗೆ ಕೂಲಿ ಕಾರ್ಮಿಕ ಬಲಿ Read More »

ಬೆಳ್ತಂಗಡಿ: ಇಳಂತಿಲದಲ್ಲಿ ಐದು ಗ್ರೆನೇಡ್ ಪತ್ತೆ! ಪೊಲೀಸರಿಂದ ಚುರುಕುಗೊಂಡ ತನಿಖೆ|

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದಲ್ಲಿ ಐದು ಗ್ರೆನೇಡ್ ಪತ್ತೆಯಾಗಿದ್ದು, ನಿವೃತ್ತ ಸೈನಿಕರೊಬ್ಬರು ಇದನ್ನು ಪೊಲೀಸರ ಗಮನಕ್ಕೆ ತಂದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಳಂತಿಲ ಗ್ರಾಮದ ನಿವಾಸಿ ಜಯಕುಮಾರ್ ನಿವೃತ್ತ ಯೋಧರಾಗಿದ್ದು ಶನಿವಾರ ಸಂಜೆ 6 ಗಂಟೆ ವೇಳೆಗೆ ಉಪ್ಪಿನಂಗಡಿಯಿಂದ ತನ್ನ ಮನೆಗೆ ನಡೆದುಕೊಂಡು ತೆರಳುತ್ತಿದ್ದಾಗ ಗುಡ್ಡದ ಇಳಿಜಾರಿನಲ್ಲಿ ಗ್ರೆನೇಡ್ ಮಾದರಿಯ ಸ್ಫೋಟಕ ವಸ್ತು ಕಂಡು ಬಂದಿದೆ. ಅದರಲ್ಲಿ ಹಳದಿ ಬಣ್ಣದ ಪ್ಲಾಸ್ಟಿಕ್ ಕವರಿನಲ್ಲಿ ಒಂದು ಗ್ರೆನೇಡ್ ಇದ್ದು ಇತರ ನಾಲ್ಕು ಗ್ರೆನೇಡ್ ಗಳು ಸ್ಥಳದಲ್ಲೆ ಬಿದ್ದಿತ್ತು.

ಬೆಳ್ತಂಗಡಿ: ಇಳಂತಿಲದಲ್ಲಿ ಐದು ಗ್ರೆನೇಡ್ ಪತ್ತೆ! ಪೊಲೀಸರಿಂದ ಚುರುಕುಗೊಂಡ ತನಿಖೆ| Read More »

ಆಗುಂಬೆ ಘಾಟಿಯಲ್ಲಿ ಪ್ರಪಾತಕ್ಕೆ ಉರುಳಿದ ಲಾರಿ: ನಾಲ್ವರು ದುರ್ಮರಣ, ಐವರು ಗಂಭೀರ

ಕಾರ್ಕಳ: ಆಗುಂಬೆ ಘಾಟಿಯಲ್ಲಿ ಭೀಕರ ಅಪಘಾತ ಸಂಭವಿಸಿ 4 ಮಂದಿ ದಾರುಣ ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡ ಘಟನೆ ಅ.29 ರ ಶುಕ್ರವಾರ ನಡೆದಿದೆ. ಮೃತಪಟ್ಟ ನಾಲ್ವರು ಕಾರ್ಕಳದ ಮಿಯ್ಯಾರಿನವರು ಎಂದು ತಿಳಿದುಬಂದಿದೆ. ಘಟನೆಯ ಪರಿಣಾಮ ಐವರು ಗಂಭೀರ ಗಾಯಗೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯ 9 ನೇ ತಿರುವಿನಲ್ಲಿ ಈ ಘಟನೆ ನಡೆದಿದ್ದು, ಚಾಲಕ ನಿಯಂತ್ರಣ ತಪ್ಪಿ ಲಾರಿ ಪ್ರಪಾತಕ್ಕೆ ಬಿದ್ದಿದೆ ಎಂದು ಹೇಳಲಾಗಿದೆ. ಈ ಘಟನೆಯಲ್ಲಿ ನಾಲ್ಕು ಮಂದಿ ಸಾವನಪ್ಪಿದ್ದು, ಐದು

ಆಗುಂಬೆ ಘಾಟಿಯಲ್ಲಿ ಪ್ರಪಾತಕ್ಕೆ ಉರುಳಿದ ಲಾರಿ: ನಾಲ್ವರು ದುರ್ಮರಣ, ಐವರು ಗಂಭೀರ Read More »

ಮೈಸೂರು: ವಿಜೃಂಭಣೆಯಿಂದ ನಡೆಯುತ್ತಿರುವ ದಸರಾ ಮಹೋತ್ಸವ, ಇಲ್ಲಿದೆ ಜಂಬೂಸವಾರಿಯ ನೇರಪ್ರಸಾರ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದು ಕೊನೆಯಾಗಲಿದೆ. ಈಗಾಗಲೇ ಪೂಜಾ ಕೈಂಕರ್ಯಗಳು ನೆರವೇರಿದ್ದು, ಈಗಾಗಲೇ ಜಂಬೂ ಸವಾರಿ ಮೆರವಣಿಗೆ ಆರಂಭವಾಗಿದೆ. ಅರಮನೆ ಆವರಣದಲ್ಲಿ ನಡೆಯುವ ಜಂಬೂ ಸವಾರಿಯ ನೇರ ಪ್ರಸಾರ ಇಲ್ಲಿದೆ. ಕೃಪೆ ಡಿಡಿ ಚಂದನ :

ಮೈಸೂರು: ವಿಜೃಂಭಣೆಯಿಂದ ನಡೆಯುತ್ತಿರುವ ದಸರಾ ಮಹೋತ್ಸವ, ಇಲ್ಲಿದೆ ಜಂಬೂಸವಾರಿಯ ನೇರಪ್ರಸಾರ Read More »

ಉಡುಪಿ: ಭೀಕರ ರಸ್ತೆ ಅಪಘಾತ – ಸವಾರ ಸ್ಥಳದಲ್ಲೇ ಸಾವು

ಉಡುಪಿ: ಉಪ್ಪೂರು ಉಡುಪಿ – ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಉಪ್ಪೂರುವಿನಲ್ಲಿ ದ್ವಿಚಕ್ರ ವಾಹನ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಅ. 12ರ ಮಂಗಳವಾರ ನಡೆದಿದೆ. ಮೃತರನ್ನು ಮಂಡ್ಯ ಮೂಲದ ನಾಗರಾಜು (40) ಎಂದು ಗುರುತಿಸಲಾಗಿದೆ. ಇವರು ಚಲಾಯಿಸುತ್ತಿದ್ದ ಸ್ಕೂಟರಿಗೆ ಕಾರು ಹಿಂಬದಿಯಿಂದ ಢಿಕ್ಕಿ ಹೊಡೆದಿದ್ದು ಪರಿಣಾಮ ದ್ವಿಚಕ್ರ ವಾಹನ ಸವಾರ ರಸ್ತೆಗೆ ಉರುಳಿಬಿದ್ದಿದ್ದು, ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ರೈಸ್ ಮಿಲ್ ನಲ್ಲಿ ಕೆಲಸ ಮಾಡುತಿದ್ದ ನಾಗರಾಜು

ಉಡುಪಿ: ಭೀಕರ ರಸ್ತೆ ಅಪಘಾತ – ಸವಾರ ಸ್ಥಳದಲ್ಲೇ ಸಾವು Read More »

ಉಪ್ಪಿನಂಗಡಿ: ಭೀಕರ ರಸ್ತೆ ದುರಂತ| ಸಾರಿಗೆ ಬಸ್‌ ಹರಿದು ತಾಯಿ‌- ಮಗು ಸಾವು|

ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದ ತಾಯಿ ಮಗು ಮೇಲೆ ಕೆಎಸ್ ಆರ್ ಟಿ ಸಿ ಬಸ್ಸು ಹರಿದ ಪರಿಣಾಮ ಅವರಿಬ್ಬರೂ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಶಿರ್ಲಾಲು ನಿವಾಸಿಗಳಾದ ಶಾಹಿದಾ (25), ಮತ್ತು ಅವರ ಪುತ್ರ ಶಾಹೀನ್ (1) ಮೃತಪಟ್ಟವರು. ಬಸ್ಸುಗಳ ನಡುವಿನ ಪೈಪೋಟಿಯೇ ಈ ಘಟನೆಗೆ ಕಾರಣವೆಂದು ಸಾರ್ವಜನಿಕರು ಪ್ರತಿಭಟಿಸಿದ್ದು, ಬಸ್ಸು ನಿಲ್ದಾಣದ ಒಳಗೆ ಯಾವ ಬಸ್ಸುಗಳೂ ಪ್ರವೇಶಿಸದಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು

ಉಪ್ಪಿನಂಗಡಿ: ಭೀಕರ ರಸ್ತೆ ದುರಂತ| ಸಾರಿಗೆ ಬಸ್‌ ಹರಿದು ತಾಯಿ‌- ಮಗು ಸಾವು| Read More »

ಸುಳ್ಯ : ಪಯಸ್ವಿನಿ ನದಿಗೆ “ಮರಳು” ಕಂಟಕ! ಅಧಿಕಾರಿಗಳ ಮೌನಕ್ಕೆ ಸ್ಥಳೀಯರ ಆಕ್ರೋಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಕೃಪೆಯಿಂದ ಯಾವುದೇ ದಾಳಿ ನಡೆಯುತ್ತಿಲ್ಲ. ಒಂದೊಮ್ಮೆ ಕಾಟಾಚಾರಕ್ಕೆ ದಾಳಿ ನಡೆದರೂ ಕೆಲವೇ ದಿನಗಳಲ್ಲಿ ಮತ್ತೆ ಎಂದಿನಂತೆ ದಂಧೆ ಮುಂದುವರಿಯುವುದು ಜನಸಾಮಾನ್ಯರನ್ನು ಹೈರಾಣಾಗಿಸಿದೆ. ಸುಬ್ರಮಣ್ಯ, ಧರ್ಮಸ್ಥಳದ ಬಳಿಕ ಸುಳ್ಯ ತಾಲೂಕಿನ ಅರಂತೋಡು ಬಳಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ದಿನವೊಂದಕ್ಕೆ ನೂರಾರು ಲೋಡ್ ಗಳಷ್ಟು ಮರಳು ಸಾಗಾಟವಾಗುತ್ತಿದೆ.ಸುಳ್ಯ ತಾಲೂಕಿನ ಅರಂತೋಡು ಪೇಟೆ ದಾಟಿ ಮುಂದಕ್ಕೆ ಹೋಗುವಾಗ “ಕಾಮಧೇನು ಹೋಟೆಲ್” ಮುಂಭಾಗದ ರಸ್ತೆಯಲ್ಲಿ

ಸುಳ್ಯ : ಪಯಸ್ವಿನಿ ನದಿಗೆ “ಮರಳು” ಕಂಟಕ! ಅಧಿಕಾರಿಗಳ ಮೌನಕ್ಕೆ ಸ್ಥಳೀಯರ ಆಕ್ರೋಶ Read More »

ಮನೆಯ ಕೊಟ್ಟಿಗೆಯಲ್ಲಿ ದಾಸ್ತಾನಿರಿಸಿದ್ದ ರಕ್ತ ಚಂದನ ವಶ| ಆರೋಪಿಗಳ ಬಂಧನ

ಸುಳ್ಯ: ಪಂಜ ವಲಯ ಅರಣ್ಯ ಇಲಾಖೆ ಮತ್ತು ಪೊಲೀಸ್ ಅರಣ್ಯ ಸಂಚಾರಿ ದಳ ಘಟಕ ಚಿಕ್ಕಮಗಳೂರು ಇವರ ಜಂಟಿ ಕಾರ್ಯಾಚರಣೆಯಲ್ಲಿ ಬಾಳಿಲದ ಮನೆಯೊಂದರ ಕೊಟ್ಟಿಗೆಯಲ್ಲಿ ರಕ್ತಚಂದನ ಸೆ.22 ರಂದು ಪತ್ತೆಯಾಗಿದೆ. ಪೊಲೀಸ್ ಅರಣ್ಯ ಸಂಚಾರಿ ದಳ ಘಟಕಕ್ಕೆ ದೊರೆತ ಮಾಹಿತಿ ಮೇರೆಗೆ ಸೆ.22 ರಂದು ಮುಂಜಾನೆ ಬಾಳಿಲದ ಅಬ್ದುಲ್ ಎಂಬವರ ಮನೆಗೆ ಜಂಟಿ ಇಲಾಖೆಗಳ ಅಧಿಕಾರಿಗಳು ದಾಳಿ ನಡೆಸಿದಾಗ ಮನೆಯ ಕೊಟ್ಟಿಗೆಯಲ್ಲಿ 40 ತುಂಡು 260 ಕೆ.ಜಿ.ರಕ್ತ ಚಂದನ ಪತ್ತೆಯಾಗಿದ್ದು ಇಲಾಖೆಯವರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ

ಮನೆಯ ಕೊಟ್ಟಿಗೆಯಲ್ಲಿ ದಾಸ್ತಾನಿರಿಸಿದ್ದ ರಕ್ತ ಚಂದನ ವಶ| ಆರೋಪಿಗಳ ಬಂಧನ Read More »