ಸಮಗ್ರ ಸಮಾಚಾರ

ಕುಂದಾಪುರ: ವಿದ್ಯುತ್ ತಂತಿ ತಗುಲಿ ನಾಲ್ಕು ಹಸುಗಳು ಮೃತ್ಯು

ಮೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ಕುಂದಾಪುರ: ಗದ್ದೆಯಲ್ಲಿ ಮೇಯುತ್ತಿದ್ದ ನಾಲ್ಕು ಹಸುಗಳು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಘಟನೆ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹರ್ಕೂರಿನಲ್ಲಿ ನಡೆದಿದೆ. ಪಶು ವೈದ್ಯಾಧಿಕಾರಿಗಳು ಹಾಗೂ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ತಂತಿಗಳು ತೀರಾ ಹಳೆಯದಾಗಿದ್ದು, ಇದರಿಂದ ಹಸುಗಳು ಸಾವನ್ನಪ್ಪಿರಬಹುದು ಎಂದು ಗ್ರಾಮಸ್ಥರು ಮೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಂದಾಪುರ: ವಿದ್ಯುತ್ ತಂತಿ ತಗುಲಿ ನಾಲ್ಕು ಹಸುಗಳು ಮೃತ್ಯು Read More »

ಹೆಲ್ಮೆಟ್‌ನಲ್ಲಿ ಕ್ಯಾಮರಾ ಹಾಕಿ ಓಡಾಡಿದರೆ ಪರವಾನಗಿ ರದ್ದು| ದ್ವಿಚಕ್ರ ವಾಹನ ಸವಾರರೆ ಎಚ್ಚರ!

ಸಮಗ್ರ ನ್ಯೂಸ್: ಹೆಲ್ಮೆಟ್‌ನಲ್ಲಿ ಅಳವಡಿಸಿ ದ್ವಿಚಕ್ರವಾಹನ ಸವಾರಿ ಮಾಡುವುದು ಸಾಮಾನ್ಯವಾಗಿದೆ. ಆದರೆ ಕೇರಳದ ಸಾರಿಗೆ ಇಲಾಖೆ ಹೆಲ್ಮೆಟ್‌ನಲ್ಲಿ ಕ್ಯಾಮರಾ ಅಳವಡಿಸಿ ಸಂಚರಿಸುವ ದ್ವಿಚಕ್ರವಾಹನ ಸವಾರರಿಗೆ ಖಡಕ್ ಎಚ್ಚರಿಕೆ ನೀಡಿದೆ. ಇನ್ನು ಮುಂದೆ ಹೆಲ್ಮೆಟ್‌ನಲ್ಲಿ ಕ್ಯಾಮರಾ ಕಂಡುಬಂದರೆ 1000 ರೂಪಾಯಿ ದಂಡ, ಮೊದಲ ಎಚ್ಚರಿಕೆ ನೀಡಿ ಬಳಿಕವೂ ಮರುಕಳಿಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಂಚಾರ ಆಯುಕ್ತರು ಹೇಳಿದ್ದಾರೆ. ಇದಲ್ಲದೆ ಎಚ್ಚರಿಕೆಯ ಹೊರತಾಗಿಯೂ ಅಕ್ರಮ ಮುಂದುವರಿದರೆ ಮೂರು ತಿಂಗಳವರೆಗೆ ಪರವಾನಗಿ ರದ್ದುಪಡಿಸಲು ಆಯುಕ್ತರು ಆದೇಶ ನೀಡಿದ್ದಾರೆ. ಹೆಲ್ಮೆಟ್‌ಗೆ ಕ್ಯಾಮೆರಾ

ಹೆಲ್ಮೆಟ್‌ನಲ್ಲಿ ಕ್ಯಾಮರಾ ಹಾಕಿ ಓಡಾಡಿದರೆ ಪರವಾನಗಿ ರದ್ದು| ದ್ವಿಚಕ್ರ ವಾಹನ ಸವಾರರೆ ಎಚ್ಚರ! Read More »

ಮಂಗಳೂರು: ಹೊಂಡ ತಪ್ಪಿಸಲು ಹೋಗಿ ಡಿವೈಡರ್‌‌ಗೆ ಸ್ಕೂಟರ್ ಢಿಕ್ಕಿ-ಯುವಕ ಸಾವು

ಮಂಗಳೂರು: ರಸ್ತೆಯ ಗುಂಡಿ ತಪ್ಪಿಸಲು ಹೋಗಿ ಡಿವೈಡರ್‌‌ಗೆ ಸ್ಕೂಟರ್ ಢಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ನಡೆದಿದೆ. ಕೊಂಚಾಡಿ ನಿವಾಸಿ ಆತೀಶ್ (20) ಮೃತಪಟ್ಟವರು. ಆತೀಶ್ ನಂತೂರು ಜಂಕ್ಷನ್ ಕಡೆಯಿಂದ ಬಿಕರ್ನಕಟ್ಟೆ ಕೈಕಂಬ ಕಡೆಗೆ ಹಾದು ಹೋಗಿರುವ ರಸ್ತೆಯಲ್ಲಿ ಸಂಜೆ 6.45ರ ಸುಮಾರಿಗೆ ಸಂಚರಿಸುತ್ತಿದ್ದರು. ಮಳೆ ಜೋರಾಗಿ ಸುರಿಯುತ್ತಿದ್ದುದರಿಂದ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್‌ಗಿಂತ ಮೊದಲು ಡಿವೈಡರ್‍ ಪಕ್ಕದಲ್ಲಿದ್ದ ಹೊಂಡವನ್ನು ಅವರು ಗಮನಿಸಲಿಲ್ಲ. ಹೊಂಡದ ಸನಿಹಕ್ಕೆ ಬರುವಾಗ ಹೊಂಡ

ಮಂಗಳೂರು: ಹೊಂಡ ತಪ್ಪಿಸಲು ಹೋಗಿ ಡಿವೈಡರ್‌‌ಗೆ ಸ್ಕೂಟರ್ ಢಿಕ್ಕಿ-ಯುವಕ ಸಾವು Read More »

ಸ್ವಂತ ಸೂರಿನ ನಿರೀಕ್ಷೆಯಲ್ಲೆ ಕೊನೆಯುಸಿರೆಳೆದ ನೆರೆ ಸಂತ್ರಸ್ತ

ಕೊಟ್ಟಿಗೆಹಾರ: 2019ರ ಮಹಾಮಳೆಗೆ ಮನೆ ಜಮೀನು ಕಳೆದುಕೊಂಡ ನೆರೆ ಸಂತ್ರಸ್ತರೊಬ್ಬರು ಸ್ವಂತ ಸೂರಿನ ನಿರೀಕ್ಷೆಯಲ್ಲೆ ಇಂದು ಕೊನೆಯುಸಿರೆಳಿದ್ದಾರೆ. ಜಾವಳಿ ಗ್ರಾ.ಪಂ ವ್ಯಾಪ್ತಿಯ ಮಲೆಮನೆಯ ನೆರೆ ಸಂತ್ರಸ್ತ ನಾರಾಯಣಗೌಡ (೬೫) ೨೦೧೯ ರಲ್ಲಿ ಸುರಿದ ಮಹಾಮಳೆಯಿಂದಾಗಿ ಮನೆ ಹಾಗೂ ಜಮೀನನ್ನು ಕಳೆದುಕೊಂಡಿದ್ದರು. ಮನೆಯೊಂದಿಗೆ ಮನೆಯಲ್ಲಿದ್ದ ವಸ್ತುಗಳು, ಚಿನ್ನಾಭರಣಗಳು, ದಾಖಲೆ ಪತ್ರಗಳು ಎಲ್ಲವನ್ನು ಕಳೆದುಕೊಂಡು ಅಕ್ಷರಶಃ ಬರಿಗೈನಲ್ಲಿ ಬೀದಿಗೆ ಬಿದ್ದಿದ್ದರು.ಮೂಡಿಗೆರೆಯಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬದೂಂದಿಗೆ ವಾಸವಿದ್ದ ನಾರಾಯಣ ಗೌಡ ಅವರು ಸರ್ಕಾರ ಮನೆ ಕಟ್ಟಲು ಪರ್ಯಾಯ ಜಾಗ ಹಾಗೂ ಪರ್ಯಾಯ

ಸ್ವಂತ ಸೂರಿನ ನಿರೀಕ್ಷೆಯಲ್ಲೆ ಕೊನೆಯುಸಿರೆಳೆದ ನೆರೆ ಸಂತ್ರಸ್ತ Read More »

ಸುರತ್ಕಲ್: ಫಾಝಿಲ್ ಹತ್ಯೆ ಆರೋಪಿಗಳು ಅರೆಸ್ಟ್

ಸಮಗ್ರ ನ್ಯೂಸ್: ಸುರತ್ಕಲ್ ನಲ್ಲಿ ಫಾಝಿಲ್ ನನ್ನು ಹತ್ಯೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ. ನಿನ್ನೆ ತಡರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಫಾಸಿಲ್ ಕೊಲೆ ಆರೋಪಿಗಳನ್ನು ಬಂಧಿಸಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎನ್ನಲಾಗಿದೆ. ಕಾರ್ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಪೊಲೀಸರು ಮಹತ್ವದ ಮಾಹಿತಿ ಕಲೆಹಾಕಿದ್ದರು, ವಿವಿಧ ತಂಡಗಳಲ್ಲಿ ಮಂಗಳೂರು, ಬೆಂಗಳೂರು ಮೊದಲಾದ ಕಡೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ನಿನ್ನೆ ರಾತ್ರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಬೆಳ್ಳಾರೆಯಲ್ಲಿ ಬಿಜೆಪಿ

ಸುರತ್ಕಲ್: ಫಾಝಿಲ್ ಹತ್ಯೆ ಆರೋಪಿಗಳು ಅರೆಸ್ಟ್ Read More »

ಪ್ರವೀಣ್ ಹತ್ಯೆಗೆ ವೇಣುಗೋಪಾಲ ದೇರಪ್ಪಜ್ಜನಮನೆ ಖಂಡನೆ

ಸುಳ್ಯ : ಬಿಜೆಪಿ ಮುಂದಾಳು ಪ್ರವೀಣ್ ನೆಟ್ಟಾರು ಹತ್ಯೆಯನ್ನು ಕ್ರೀಡಾ ಮತ್ತು ಕಲಾಪೋಷಕರಾದ ವೇಣುಗೋಪಾಲ ದೇರಪ್ಪಜ್ಜನಮನೆ ಖಂಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಪ್ರವೀಣ್ ಹಂತಕರನ್ನು ಕೂಡಲೇ ಬಂಧಿಸಿ ನಡುರಸ್ತೆಯಲ್ಲೇ ಎನ್ ಕೌಂಟರ್ ಮಾಡಬೇಕು, ಅದಾಗಲೇ ‌ಮೃತನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರವೀಣ್ ಹತ್ಯೆಗೆ ವೇಣುಗೋಪಾಲ ದೇರಪ್ಪಜ್ಜನಮನೆ ಖಂಡನೆ Read More »

ಪುತ್ತೂರು: ಮರದ ಕೊಂಬೆ ಕಡಿಯುವ ವೇಳೆ ಶಾಕ್| ಪವರ ಮ್ಯಾನ್ ದುರ್ಮರಣ

ಸಮಗ್ರ ನ್ಯೂಸ್: ಮರದ ಗೆಲ್ಲು ಕಡಿಯುವ ವೇಳೆ ವಿದ್ಯುತ್ ಶಾಕ್ ಹೊಡೆದು ಮೆಸ್ಕಾಂ ಪವರ್‌ಮ್ಯಾನ್ ಮೃತಪಟ್ಟ ದಾರುಣ ಘಟನೆ ಪುತ್ತೂರಿನ ಕುಂಬ್ರ ಸಮೀಪದ ಪರ್ಪುಂಜದಲ್ಲಿ ಇಂದು(ಜು.12) ಮಧ್ಯಾಹ್ನ ನಡೆದಿದೆ. ಮೆಸ್ಕಾಂ ಕುಂಬ್ರ ಶಾಖೆಯ ಪವರ್‌ಮ್ಯಾನ್ ಬಸವರಾಜ್ (26ವ) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇವರು ಕೆಲ ವರ್ಷಗಳಿಂದ ಪುತ್ತೂರು ಮೆಸ್ಕಾಂ ಕುಂಬ್ರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಪುತ್ತೂರು: ಮರದ ಕೊಂಬೆ ಕಡಿಯುವ ವೇಳೆ ಶಾಕ್| ಪವರ ಮ್ಯಾನ್ ದುರ್ಮರಣ Read More »

ಸುಳ್ಯ: ವಿಪಕ್ಷ ನಾಯಕರ ನಡೆಗೆ ನ.ಪಂ‌ ಅಧ್ಯಕ್ಷರ ಆಕ್ರೋಶ| ವೆಂಕಪ್ಪ ಗೌಡರದ್ದು ಹಂದಿ ರೀತಿಯ ಮನಸ್ಥಿತಿ ಎಂದ ವಿನಯ ಕಂದಡ್ಕ|
‘ಇವರಿಂದಲೇ ಕಾಂಗ್ರೆಸ್ ಮುಕ್ತವಾಗುತ್ತದೆ’ ಎಂದು ಕುಟುಕಿದ ಅಧ್ಯಕ್ಷರು

ಸಮಗ್ರ ನ್ಯೂಸ್: ಸ್ಥಳವನ್ನು ಸ್ವಚ್ಛ ಮಾಡಿ ಕೊಟ್ಟಷ್ಟು ಹಂದಿ ಕೊಳಚೆಯಲ್ಲೇ ಹೋಗಿ ಬೀಳುತ್ತದೆ. ವೆಂಕಪ್ಪ ಗೌಡರು ಕೂಡಾ ಇದೇ ರೀತಿ ವರ್ತಿಸುತ್ತಿದ್ದು, ಈ ಮನಸ್ಥಿತಿಯಿಂದ ಹೊರ ಬರಬೇಕು ಎಂದು ಸುಳ್ಯ ನ.ಪಂ ಅಧ್ಯಕ್ಷ ವಿನಯ್ ಕಂದಡ್ಕ ಹೇಳಿದ್ದಾರೆ. ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಪಕ್ಷದಿಂದ ಪ್ರಮುಖ ಯೋಜನೆಗಳೆಲ್ಲಾ ತ್ವರಿತಗತಿಯಿಂದ ನಡೆಯುತ್ತಿದ್ದು ವಿರೋಧ ಪಕ್ಷದವರಿಗೆ ಬೊಬ್ಬೆ ಹೊಡೆಯಲು ಏನೂ ಸಿಗುತ್ತಿಲ್ಲ. ಅದಕ್ಕಾಗಿ ಈ ರೀತಿಯ ಬೇಜವಾಬ್ದಾರಿ ವರ್ತನೆಯನ್ನು ತೋರಿಸುತ್ತಿದ್ದಾರೆ. ಟ್ಯೂಬ್ ಲೈಟ್ ಒಡೆದು ನಮ್ಮ ಮಹಿಳಾ ಸದಸ್ಯರಿಗೆ

ಸುಳ್ಯ: ವಿಪಕ್ಷ ನಾಯಕರ ನಡೆಗೆ ನ.ಪಂ‌ ಅಧ್ಯಕ್ಷರ ಆಕ್ರೋಶ| ವೆಂಕಪ್ಪ ಗೌಡರದ್ದು ಹಂದಿ ರೀತಿಯ ಮನಸ್ಥಿತಿ ಎಂದ ವಿನಯ ಕಂದಡ್ಕ|
‘ಇವರಿಂದಲೇ ಕಾಂಗ್ರೆಸ್ ಮುಕ್ತವಾಗುತ್ತದೆ’ ಎಂದು ಕುಟುಕಿದ ಅಧ್ಯಕ್ಷರು
Read More »

ದ.ಕ., ಉಡುಪಿಯಲ್ಲಿ ಜು.9 ರವರೆಗೆ ರೆಡ್ ಅಲರ್ಟ್

ಮಂಗಳೂರು: ಕರಾವಳಿ ಭಾಗದಲ್ಲಿ ಮಳೆಯಬ್ಬರ ಮುಂದುವರಿದಿದ್ದು ಜು.7 ರಿಂದ ಜು.9 ರವರೆಗೆ ರೆಡ್ ಅಲರ್ಟ್ ಘೋಷಿಸಿದೆ. ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಭಾರಿ ಮಳೆ ಮುಂದುವರಿಯಲಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಮೂರು ಜಿಲ್ಲೆಯಲ್ಲಿ 204 ಮಿ.ಮೀ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಜು.10ಮತ್ತು11 ರಂದು ಅರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಂಗಳೂರಿನಿಂದ ಕಾರವಾರ ಸಮುದ್ರದವರೆಗೆ

ದ.ಕ., ಉಡುಪಿಯಲ್ಲಿ ಜು.9 ರವರೆಗೆ ರೆಡ್ ಅಲರ್ಟ್ Read More »

ದ.ಕ. ಜಿಲ್ಲೆಯಲ್ಲಿ ಜು. 6ರಂದು ಶಾಲೆ, ಕಾಲೇಜುಗಳಿಗೆ ರಜೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದ್ದು ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬುಧವಾರವೂ (ಜುಲೈ6 )ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ನಿರಂತರ ಮಳೆಯಿಂದ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ ಎಲ್ಲಾ ಅಂಗನವಾಡಿ ಕೇಂದ್ರಗಳು, ಶಾಲೆಗಳು, ಪಿಯು ಮತ್ತು ಪದವಿ ಕಾಲೇಜುಗಳಿಗೆ ಬುಧವಾರವೂ ರಜೆ ಘೋಷಿಸಲು ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಜು. 6ರಂದು ಶಾಲೆ, ಕಾಲೇಜುಗಳಿಗೆ ರಜೆ Read More »