ಕಡಬ: ನದಿಯಲ್ಲಿ ಮುಳುಗಿ ಯುವಕ ಸಾವು
ಸಮಗ್ರ ನ್ಯೂಸ್: ಕಡಬ ತಾಲ್ಲೂಕಿನ ಇಚ್ಲಂಪಾಡಿ ಗ್ರಾಮದ ಗುಂಡ್ಯಹೊಳೆ ಸೇತುವೆ ಬಳಿ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಇಚ್ಲಂಪಾಡಿ ಗ್ರಾಮದ ಕೆಡೆಂಬೇಲು ನಿವಾಸಿ ಜಯಾನಂದ ಶೆಟ್ಟಿ ಅವರ ಪುತ್ರ ಚೇತನ್ ಶೆಟ್ಟಿ (21) ಮೃತಪಟ್ಟವರು. ಚೇತನ್ ಮಂಗಳೂರಿನಲ್ಲಿ ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದು, ಈ ದಿನ ರಜೆಯ ನಿಮಿತ್ತ ಮನೆಯಲ್ಲೇ ಇದ್ದರು. ಬೆಳಿಗ್ಗೆ ಕ್ರಿಕೆಟ್ ಆಡಲು ಹೊರಟ ಚೇತನ್ ಶೆಟ್ಟಿ, ಮಧ್ಯಾಹ್ನದ ವೇಳೆಗೆ ಸ್ನೇಹಿತರ ಜೊತೆ ಇಚ್ಲಂಪಾಡಿ ಸೇತುವೆ ಬಳಿ ಇರುವ ನೂಜಿಬಾಳ್ತಿಲ […]
ಕಡಬ: ನದಿಯಲ್ಲಿ ಮುಳುಗಿ ಯುವಕ ಸಾವು Read More »









