Editor

Ginco General Contracting LLC ಕಂಪೆನಿಯ ನೇರಸಂದರ್ಶನ

Ginco General Contracting LLC ಕಂಪೆನಿಯು ಉದ್ಯೋಗ ಆಕಾಂಕ್ಷಿಗಳಿಗೆ ನೇರಸಂದರ್ಶನವನ್ನು ಜು.7 ರಂದು ಬೆಂಗಳೂರಿನಲ್ಲಿ ನಡೆಸಲಿದೆ. ಆಸಕ್ತರು ಈ ಸುವರ್ಣಾವಕಾಶವನ್ನು ಪಡೆಯಬಹುದು, 28 ರಿಂದ 40 ವರ್ಷದವರೆಗೆ ಮಾತ್ರ ಅವಕಾಶ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಹೆಚ್ಚಿನ ಮಾಹಿತಿಗಾಗಿ  *📞9591279487* *📞9731799255*

Ginco General Contracting LLC ಕಂಪೆನಿಯ ನೇರಸಂದರ್ಶನ Read More »

ಉಡುಪಿ ಜಿಲ್ಲೆಯ ‌ಉಸ್ತುವಾರಿ ಕಾರ್ಯದರ್ಶಿಯಾಗಿ ರೋಹಿಣಿ ಸಿಂಧೂರಿ

ಸಮಗ್ರ ನ್ಯೂಸ್: ರಾಜ್ಯದ ಅಭಿವೃದ್ಧಿ ಯೋಜನೆಗಳ ಜಾರಿ, ಪರಿಶೀಲನೆ ಮತ್ತು ಅಹವಾಲು ವಿಚಾರಣೆ, ಅನಿರೀಕ್ಷಿತ ತಪಾಸಣೆ ಕುರಿತು ಜಿಲ್ಲಾಮಟ್ಟದಲ್ಲಿ ಪರಿಶೀಲಿಸಿ ಸರಕಾರಕ್ಕೆ ವರದಿ ಸಲ್ಲಿಸಲು ಎಲ್ಲ ಜಿಲ್ಲೆಗಳಿಗೂ ಉಸ್ತುವಾರಿ ಕಾರ್ಯದರ್ಶಿಗಳ ನೇಮಕಾತಿ ಸರಕಾರ ಮಾಡಲಿದೆ. ಅದರಂತೆ ಉಡುಪಿ ಜಿಲ್ಲೆಗೆ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರನ್ನು ನೇಮಿಸಿ ಆದೇಶ ಹೊರಪಡಿಸಿದೆ.ಈ ಹಿಂದೆ ಸತ್ಯವತಿ ಅವರು ಉಸ್ತುವಾರಿ ಕಾರ್ಯದರ್ಶಿಯಾಗಿದ್ದು, ಅವರು ಇತ್ತೀಚೆಗೆ ನಿವೃತ್ತಿ ಹೊಂದಿದ್ದರಿಂದ ಹುದ್ದೆ ತೆರವಾಗಿತ್ತು. ಉಸ್ತುವಾರಿ ಕಾರ್ಯದರ್ಶಿಗಳು ಆಗಿಂದಾಗ್ಗೆ ಜಿಲ್ಲೆಗೆ ಭೇಟಿ ನೀಡಿ ಸಭೆ

ಉಡುಪಿ ಜಿಲ್ಲೆಯ ‌ಉಸ್ತುವಾರಿ ಕಾರ್ಯದರ್ಶಿಯಾಗಿ ರೋಹಿಣಿ ಸಿಂಧೂರಿ Read More »

ಉಗ್ಯೋಗ ಆಕಾಂಕ್ಷಿಗಳಿಗೆ ಶುಭಸುದ್ದಿ

Ginco General Contracting LLC ಕಂಪೆನಿಯ ನೇರಸಂದರ್ಶನ Ginco General Contracting LLC ಕಂಪೆನಿಯು ಉದ್ಯೋಗ ಆಕಾಂಕ್ಷಿಗಳಿಗೆ ನೇರಸಂದರ್ಶನವನ್ನು ಜು.7 ರಂದು ಬೆಂಗಳೂರಿನಲ್ಲಿ ನಡೆಸಲಿದೆ. ಆಸಕ್ತರು ಈ ಸುವರ್ಣಾವಕಾಶವನ್ನು ಪಡೆಯಬಹುದು,20 ರಿಂದ 40 ವರ್ಷದವರೆಗೆ ಮಾತ್ರ ಅವಕಾಶ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಹೆಚ್ಚಿನ ಮಾಹಿತಿಗಾಗಿ  9591279487 9731799255

ಉಗ್ಯೋಗ ಆಕಾಂಕ್ಷಿಗಳಿಗೆ ಶುಭಸುದ್ದಿ Read More »

ಪ್ರತೀ ಭಾರತೀಯನ ಮೇಲಿದೆ 4.80 ಲಕ್ಷ ಸಾಲದ ಹೊರೆ – RBI

ಸಮಗ್ರ ನ್ಯೂಸ್: ಎರಡು ವರ್ಷಗಳ ಹಿಂದೆ ಪ್ರತಿಯೊಬ್ಬ ಭಾರತೀಯನ ಮೇಲಿದ್ದ 3.9 ಲಕ್ಷ ರೂಪಾಯಿನಷ್ಟು ಸಾಲವಿತ್ತು. ಈ ಸಾಲ ಇದೀಗ ಈ ವರ್ಷದ ಮಾರ್ಚ್ ವೇಳೆಗೆ ಶೇ. 23ರಷ್ಟು ಹೆಚ್ಚಾಗಿದ್ದು, 4.8 ಲಕ್ಷ ರೂ ತಲುಪಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಬಿಡುಗಡೆಗೊಳಿಸಿದ ವಿತ್ತೀಯ ಸ್ಥಿರತೆ ವರದಿ ತಿಳಿಸಿದೆ. ಇನ್ನು ಈ ವರದಿ ಪ್ರಕಾರ ಎರಡು ವರ್ಷಗಳಲ್ಲಿ ಪ್ರತಿ ಭಾರತೀಯನ ಮೇಲಿದ್ದ ಸಾಲದ ಹೊರೆ 90,000 ರೂ ಹೆಚ್ಚಾಗಿದ್ದು, ಹೋಮ್‌ ಲೋನ್‌, ಪರ್ಸನಲ್‌ ಲೋನ್‌, ಕ್ರೆಡಿಟ್‌

ಪ್ರತೀ ಭಾರತೀಯನ ಮೇಲಿದೆ 4.80 ಲಕ್ಷ ಸಾಲದ ಹೊರೆ – RBI Read More »

ಉಡುಪಿ ಮೂಲಕ ಹತ್ತು ದೇಶಗಳಿಗೆ ಡ್ರಗ್ಸ್ ಸರಬರಾಜು| ಬೃಹತ್ ಜಾಲ ಪತ್ತೆ ಮಾಡಿದ ಮಾದಕ ವಸ್ತು ನಿಗ್ರಹ ದಳ

ಸಮಗ್ರ ನ್ಯೂಸ್: ಉಡುಪಿ ಸೇರಿದಂತೆ ದೇಶದ ಹಲವು ನಗರಗಳ ಮೂಲಕ 10 ಕ್ಕೂ ಹೆಚ್ಚು ದೇಶಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಬೃಹತ್ ಮಾದಕ ವಸ್ತು ಜಾಲವನ್ನು ಮಾದಕ ವಸ್ತು ನಿಗ್ರಹ ದಳ ಬಯಲಿಗೆಳೆದಿದೆ. ಈ ಸಂಬಂಧ 10 ಮಂದಿಯನ್ನು ಬಂಧಿಸಿದ್ದು, ಬೃಹತ್ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಉಡುಪಿಯಲ್ಲೇ ಆರೋಪಿಗಳು ಕಾಲ್ ಸೆಂಟರ್ ಸ್ಥಾಪಿಸಿ ಡ್ರಗ್ಸ್ ವ್ಯವಹಾರ ನಡೆಸುತ್ತಿತ್ತು ಎನ್ನಲಾಗಿದೆ. ಉಡುಪಿ ಸೇರಿ ದೇಶದ 4 ಊರುಗಳ ಮೂಲಕ ಈ ಕಾರ್ಯಾಚರಣೆ ನಡೆಯುತ್ತಿತ್ತು. ದೆಹಲಿ, ಜೈಪುರ, ಉಡುಪಿ, ರೂರ್ಕಿಯಲ್ಲಿ

ಉಡುಪಿ ಮೂಲಕ ಹತ್ತು ದೇಶಗಳಿಗೆ ಡ್ರಗ್ಸ್ ಸರಬರಾಜು| ಬೃಹತ್ ಜಾಲ ಪತ್ತೆ ಮಾಡಿದ ಮಾದಕ ವಸ್ತು ನಿಗ್ರಹ ದಳ Read More »

ದ.ಕ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನಲೆ| ಇಂದು ಸುಳ್ಯ, ಕಡಬ ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಎರಡು ತಾಲೂಕುಗಳ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಇಂದು(ಜು. ೩) ರಜೆ ಘೋಷಣೆ ಮಾಡಲಾಗಿದೆ. ಸುಳ್ಯ ಹಾಗೂ ಕಡಬ ತಾಲೂಕುಗಳಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜು.3ರ ಬುಧವಾರ ರಜೆ ಘೋಷಿಸಲಾಗಿದೆ.ಉಭಯ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಹಾಗೂ ಪ್ರೌಢಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳು, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಆಯಾ ತಾಲೂಕಿನ ತಹಶೀಲ್ದಾರರು ಆದೇಶಿಸಿದ್ದಾರೆ.ನೀರು ಇರುವ ತಗ್ಗು ಪ್ರದೇಶ

ದ.ಕ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನಲೆ| ಇಂದು ಸುಳ್ಯ, ಕಡಬ ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Read More »

ರಾಜ್ಯದಲ್ಲಿ ಒಂದೇ ದಿನ 6 ಮಂದಿ ಹೃದಯಾಘಾತಕ್ಕೆ ಬಲಿ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಹೃದಯಾಘಾತಕ್ಕೆ ಮಂಗಳವಾರ(ಜು.1) ಮತ್ತೆ ಆರು ಜನ ಬಲಿಯಾಗಿದ್ದಾರೆ. ಈ ಪೈಕಿ ಹಾಸನ ಜಿಲ್ಲೆಯಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಹೊಳೆನರಸೀಪುರದ ಸಂಜಯ್, ಹಾಸನ ತಾಲೂಕು ಕೊಮ್ಮೇನಹಳ್ಳಿ ಹರ್ಷಿತಾ ಹಾಗೂ ಬೇಲೂರು ತಾಲೂಕಿನ ರವಿಕುಮಾರ್ ಮೃತರು. ಶಿವಮೊಗ್ಗ ಹೊರವಲಯದಲ್ಲಿ ಶ್ರೀನಿಧಿ ಎಂಬ ವಿದ್ಯಾರ್ಥಿ, ಚಿಕ್ಕಮಗಳೂರು ಹಾಗೂ ತುಮಕೂರಿನಲ್ಲಿ ಇಬ್ಬರು ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯ ಸೋಮನಹಳ್ಳಿಯ ಸಂಜಯ್ (25) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಿನ್ನೆ ಸಂಜೆ ಎದೆನೋವು ಎಂದು ಆಸ್ಪತ್ರೆಗೆ ಹೋಗಿದ್ದರು.ಸೋಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ

ರಾಜ್ಯದಲ್ಲಿ ಒಂದೇ ದಿನ 6 ಮಂದಿ ಹೃದಯಾಘಾತಕ್ಕೆ ಬಲಿ Read More »

ಹಾಸನ: ಹೃದಯಾಘಾತ ಪ್ರಕರಣ ಕುರಿತು ವರದಿ ಸಲ್ಲಿಸಲು ಸೂಚನೆ – ದಿನೇಶ್ ಗುಂಡೂರಾವ್

ಸಮಗ್ರ ನ್ಯೂಸ್: ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಸಂಬಂಧಿಸಿದ ಅನೇಕ ಪ್ರಕರಣಗಳು ಈಚೆಗೆ ವರದಿಯಾಗಿವೆ. ಆ ಜಿಲ್ಲೆಯಲ್ಲೇ ಏಕೆ ಅಷ್ಟೊಂದು ಹೃದಯಾಘಾತಗಳು ಸಂಭವಿಸುತ್ತಿವೆ ಎಂಬ ಬಗ್ಗೆ ಪರಿಶೀಲನೆ ಮಾಡಿ ವರದಿ ನೀಡಲು ಅಧಿಕಾರಿಗಳಿಗೆ ಆದೇಶಿಸಿದ್ದೇನೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ವರದಿ ಸಲ್ಲಿಕೆಯಾದ ಬಳಿಕ ಇದರ ಹಿಂದಿನ ಸತ್ಯಾಸತ್ಯತೆ ಗೊತ್ತಾಗಲಿದೆ. ಈಗಿನ ಜೀವನ ಶೈಲಿ, ಆಹಾರ ಪದ್ದತಿ, ಮೊಬೈಲ್ ಅತಿ ಬಳಕೆ ಮತ್ತು

ಹಾಸನ: ಹೃದಯಾಘಾತ ಪ್ರಕರಣ ಕುರಿತು ವರದಿ ಸಲ್ಲಿಸಲು ಸೂಚನೆ – ದಿನೇಶ್ ಗುಂಡೂರಾವ್ Read More »

ಕಾಶ್ಮೀರದಲ್ಲಿ ಹೊಸ ರಾಜಕೀಯ ಮೈತ್ರಿ

ಸಮಗ್ರ ನ್ಯೂಸ್: ಕಾಶ್ಮೀರದಲ್ಲಿ ಮೂರು ಪ್ರಾದೇಶಿಕ ರಾಜಕೀಯ ಪಕ್ಷಗಳು ‘ಪೀಪಲ್ಸ್ ಅಲೈಯನ್ಸ್ ಫಾರ್ ಚೇಂಜ್’ ಎಂಬ ಹೊಸ ರಾಜಕೀಯ ಮೈತ್ರಿಕೂಟವನ್ನು ರಚಿಸಿದೆ. ಈ ಮೈತ್ರಿಕೂಟದಲ್ಲಿ ಶಾಸಕ ಸಜ್ಜದ್ ಗನಿ ಲೋನ್ ನೇತೃತ್ವದ ಪೀಪಲ್ಸ್ ಕಾನ್ಸರೆನ್ಸ್, ಮಾಜಿ ಶಾಸಕ ಹಕೀಮ್ ಮೊಹಮ್ಮದ್ ಯಾಸಿನ್ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್(ಪಿಡಿಎಫ್) ಮತ್ತು ಈಗ ನಿಷೇಧಿತ ಜಮಾತ್-ಇ-ಇಸ್ಲಾಮಿಯ ಮಾಜಿ ಸದಸ್ಯರನ್ನು ಒಳಗೊಂಡ ಹೊಸದಾಗಿ ರಚಿಸಲಾದ ರಾಜಕೀಯ ಪಕ್ಷ ಜಸ್ಟೀಸ್ & ಡೆವಲಪ್‌ಮೆಂಟ್ ಫ್ರಂಟ್‌(ಜೆಡಿಎಫ್) ಸೇರಿವೆ. ಶ್ರೀನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಫ್‌ ಅಧ್ಯಕ್ಷ ಶಮೀಮ್

ಕಾಶ್ಮೀರದಲ್ಲಿ ಹೊಸ ರಾಜಕೀಯ ಮೈತ್ರಿ Read More »

ಚಿಕ್ಕಮಗಳೂರು : ಎತ್ತಿನಭುಜ ಚಾರಣಕ್ಕೆ ಪ್ರವಾಸಿಗರಿಗೆ ಬ್ರೇಕ್

ಸಮಗ್ರ ನ್ಯೂಸ್: ನಿರಂತರ ಮಳೆ, ಭಾರೀ ಮಂಜು ಕವಿಯುತ್ತಿರೋ ಕಾರಣದಿಂದ ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಎತ್ತಿನಭುಜ ಪ್ರವಾಸಿ ತಾಣಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಲಾಗಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ಅರಣ್ಯ ಇಲಾಖೆಯು ಈ ನಿರ್ಧಾರ ಕೈಗೊಳ್ಳಲಾಗಿದೆ, ಪ್ರವಾಸಿಗರು 7 ಕಿ.ಮೀ. ಚಾರಣ ಹೋಗಿ ಎತ್ತಿನಭುಜದ ಸೌಂದರ್ಯ ಸವಿಯುತ್ತಿದ್ದರು. ಆದರೆ ಕಾಡುಪ್ರಾಣಿಗಳ ಕಾಟ, ಭಾರೀ ಮಳೆ , ಜಾರುವ ಪ್ರದೇಶದವಾದ್ದರಿಂದ ಚಾರಣ ಮಾಡುವ ವೇಳೆ ಅನಾಹುತವಾದ್ರೆ ರಕ್ಷಣೆ ಮಾಡೋದು ಭಾರೀ ಕಷ್ಟಸಾಧ್ಯ ಎಂದು ಅರಣ್ಯ ಇಲಾಖೆ ತಿಳಿಸಿದೆ. 1-07-2025 ರಿಂದ 31-07-2025

ಚಿಕ್ಕಮಗಳೂರು : ಎತ್ತಿನಭುಜ ಚಾರಣಕ್ಕೆ ಪ್ರವಾಸಿಗರಿಗೆ ಬ್ರೇಕ್ Read More »