Editor

ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ ವಿಜಯ್ ದೇವರಕೊಂಡ – ರಶ್ಮಿಕಾ ಮಂದಣ್ಣ| ಮುಂದಿನ ಜನವರಿಯಲ್ಲಿ ಮದುವೆ

ಸಮಗ್ರ ನ್ಯೂಸ್: ಖ್ಯಾತ ನಟಿ ರಶ್ಮಿಕಾ ಮಂದಣ್ಣ ಮತ್ತು ಖ್ಯಾತ ನಟ ವಿಜಯ್ ದೇವರಕೊಂಡ ಅವರ ಕುರಿತಾಗಿ ಅನೇಕ ತಿಂಗಳಿಂದ ಹರಿದಾಡುತ್ತಿದ್ದ ಗುಸು ಗುಸು ನಿಜವಾಗಿದೆ. ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಶುಕ್ರವಾರ ರಶ್ಮಿಕಾ ಮಂದಣ್ಣ -ವಿಜಯ್ ದೇವರಕೊಂಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 2026ರಲ್ಲಿ, ಮದುವೆ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. 2018ರಲ್ಲಿ ಬಿಡುಗಡೆಯಾಗಿದ್ದ ತೆಲುಗು ಚಿತ್ರ ‘ಗೀತಾ ಗೋವಿಂದಂ’ನಲ್ಲಿ ಅವರು ಒಟ್ಟಿಗೆ ನಟಿಸಿದ್ದರು. ನಂತರ ಅನೇಕ ಚಿತ್ರಗಳಲ್ಲಿ ನಟಿಸಿದ್ದ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದು ಪ್ರೀತಿಯಲ್ಲಿದ್ದಾರೆ […]

ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ ವಿಜಯ್ ದೇವರಕೊಂಡ – ರಶ್ಮಿಕಾ ಮಂದಣ್ಣ| ಮುಂದಿನ ಜನವರಿಯಲ್ಲಿ ಮದುವೆ Read More »

ಇಂದು ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂ ಸವಾರಿ| ಅಭಿಮನ್ಯುವಿನ ಮೇಲೆ ಅಂಬಾರಿಯಲ್ಲಿ ರಾರಾಜಿಸಲಿದ್ದಾಳೆ ನಾಡದೇವಿ ಚಾಮುಂಡಿ

ಸಮಗ್ರ ನ್ಯೂಸ್: ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಅಂತಿಮ ಆಕರ್ಷಣೆಯಾದ ಜಂಬೂಸವಾರಿಯು ವಿಜಯದಶಮಿ ದಿನವಾದ ಅಕ್ಟೋಬರ್ 2ರ ಇಂದು ಭವ್ಯವಾಗಿ ಜರುಗಲಿದೆ. ಹನ್ನೊಂದು ದಿನಗಳ ನಾಡಹಬ್ಬಕ್ಕೆ ಇದರೊಂದಿಗೆ ತೆರೆ ಬೀಳಲಿದೆ. ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗುವ ಮಾರ್ಗವನ್ನು ಅಂದಗೊಳಿಸುವ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಭದ್ರತಾ ಸಿದ್ಧತೆಗಳನ್ನೂ ಪೊಲೀಸ್ ಇಲಾಖೆ ಕಟ್ಟುಕಥೆಯಂತೆ ಕೈಗೊಂಡಿದೆ. ಮಧ್ಯಾಹ್ನ 1.00ರಿಂದ 1.18ರೊಳಗಿನ ಶುಭ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬಳಿಕ, ಸಂಜೆ 4.42ರಿಂದ

ಇಂದು ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂ ಸವಾರಿ| ಅಭಿಮನ್ಯುವಿನ ಮೇಲೆ ಅಂಬಾರಿಯಲ್ಲಿ ರಾರಾಜಿಸಲಿದ್ದಾಳೆ ನಾಡದೇವಿ ಚಾಮುಂಡಿ Read More »

ಮಹಿಳಾ ವಿಶ್ವಕಪ್| ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯ

ಸಮಗ್ರ ನ್ಯೂಸ್: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ಭಾರತ ತಂಡ ಭರ್ಜರಿ ಶುಭಾರಂಭ ಮಾಡಿದೆ. ಮಂಗಳವಾರ ಶ್ರೀಲಂಕಾ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆ 59 ರನ್‌ಗಳಲ್ಲಿ ಜಯಭೇರಿ ಬಾರಿಸಿತು. ಭಾರತದ ಬ್ಯಾಟಿಂಗ್ ವೇಳೆ ಪದೇ ಪದೇ ಮಳೆ ಅಡ್ಡಿಪಡಿಸಿದ್ದರಿಂದ ಪಂದ್ಯವನ್ನು ತಲಾ 47 ಓವರ್‌ಗಳಿಗೆ ಇಳಿಸಲಾಯಿತು. ಆರಂಭಿಕದ ವೈಫಲ್ಯದ ಹೊರತಾಗಿಯೂ ತಂಡ 47 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 269 ರನ್ ಕಲೆಹಾಕಿತು. ಸ್ಮೃತಿ ಮಂಧನಾ(8) ವಿಫಲವಾಗಿದ್ದರಿಂದ ತಂಡ 25 ಓವರ್‌ಗಳಲ್ಲಿ 120

ಮಹಿಳಾ ವಿಶ್ವಕಪ್| ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯ Read More »

ಏಳೇ ದಿನದಲ್ಲಿ ಸಮೀಕ್ಷೆ ಮುಗಿಸಿದ ಟೀಚರ್| ಜಿಲ್ಲಾಧಿಕಾರಿಯಿಂದ ಪ್ರಶಂಸೆ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆ. 22ರಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಮಗೆ ವಹಿಸಿದ ಮನೆಗಳನ್ನು ಕೇವಲ 7 ದಿನದಲ್ಲಿ ಚನ್ನಪಟ್ಟಣ ತಾಲ್ಲೂಕಿನ ಅಂಬಾಡಹಳ್ಳಿಯು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ (ಯುಜಿಎಚ್‌ಪಿಎಸ್) ಸಹ ಶಿಕ್ಷಕಿ ಶಾಂತಮ್ಮ ಪೂರ್ಣಗೊಳಿಸಿದ್ದಾರೆ. ಶಿಕ್ಷಕಿಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು, ಶಾಂತಮ್ಮ ಅವರನ್ನು ಸೋಮವಾರ ತಮ್ಮ ಕಚೇರಿಗೆ ಕರೆದು ವೈಯಕ್ತಿಕವಾಗಿ ₹1,001 ನಗದು ಬಹುಮಾನ ಹಾಗೂ

ಏಳೇ ದಿನದಲ್ಲಿ ಸಮೀಕ್ಷೆ ಮುಗಿಸಿದ ಟೀಚರ್| ಜಿಲ್ಲಾಧಿಕಾರಿಯಿಂದ ಪ್ರಶಂಸೆ Read More »

ದಕ್ಷಿಣ ಕನ್ನಡ : ನವರಾತ್ರಿ ಮೆರವಣಿಗೆ ದಿನಗಳಂದು ಮದ್ಯದಂಗಡಿ ಬಂದ್ ಗೆ ಆದೇಶ

ಸಮಗ್ರ ನ್ಯೂಸ್: ದ.ಕ ಜಿಲ್ಲಾದ್ಯಂತ ನವರಾತ್ರಿ ಹಬ್ಬವನ್ನು ಆಚರಿಸಲಿದ್ದು, ಈ ಹಬ್ಬದ ಸಮಯದಲ್ಲಿ ಜಿಲ್ಲೆಯಲ್ಲಿ ಶಾರದಾ ಮೂರ್ತಿಯ ವಿಗ್ರಹಗಳನ್ನು ತಯಾರಿಸಿದ ಸ್ಥಳಗಳಿಂದ ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪನೆ ಮಾಡಿ ಭಜನೆ, ಆರ್ಕೆಸ್ಟ್ರಾ, ವಾದ್ಯಗೋಷ್ಟಿ, ಧಾರ್ಮಿಕ ಮತ್ತು ಸಾಂಸ್ಕಂತಿಕ ಕಾರ್ಯಕ್ರಮಗಳು ನಡೆಯಲಿದೆ. ನಂತರ ನಿಗದಿತ ದಿನದಂದು ಶಾರದಾ ಮೂರ್ತಿಯ ವಿಸರ್ಜನಾ ಮೆರವಣಿಗೆಯು ಪ್ರತಿಷ್ಠಾಪನಾ ಸ್ಥಳದಿಂದ ಭವ್ಯ ಮೆರವಣಿಗೆಯಲ್ಲಿ ಟ್ಯಾಬ್ಲೋ, ಚೆಂಡೆ, ಮುಂತಾದ ಸ್ತಬ್ಧ ಚಿತ್ರಗಳೊಂದಿಗೆ ಸಾಗಿ ನಂತರ ಬಾವಿ, ಕೆರೆ, ನದಿಗಳಲ್ಲಿ ವಿಸರ್ಜನೆ ನಡೆಸಲಿರುತ್ತಾರೆ ಹಾಗೂ ಕಾರ್ಯಕ್ರಮದಲ್ಲಿ ಸಾವಿರಾರು

ದಕ್ಷಿಣ ಕನ್ನಡ : ನವರಾತ್ರಿ ಮೆರವಣಿಗೆ ದಿನಗಳಂದು ಮದ್ಯದಂಗಡಿ ಬಂದ್ ಗೆ ಆದೇಶ Read More »

ಖ್ಯಾತ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಇನ್ನಿಲ್ಲ

ಸಮಗ್ರ ನ್ಯೂಸ್: ಕನ್ನಡ ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆಯ ಲೋಕದಲ್ಲಿ ವಿಶಿಷ್ಟ ಹೆಸರು ಪಡೆದ ಕಲಾವಿದ ಯಶವಂತ ಸರದೇಶಪಾಂಡೆ ಇನ್ನು ನೆನಪು ಮಾತ್ರ. ಹಾಸ್ಯನಟ, ನಿರ್ದೇಶಕ, ನಾಟಕಕಾರ, ರಚನೆಕಾರ, ಸಂಭಾಷಣಾಕಾರರಾಗಿ ತಮ್ಮ ಕಲೆಯ ಮೂಲಕ ಲಕ್ಷಾಂತರ ಜನರ ಮನ ಗೆದ್ದಿದ್ದ ಯಶವಂತ ಸರದೇಶಪಾಂಡೆ ಅಲ್ಪಕಾಲದ ಅನಾರೋಗ್ಯದಿಂದ ಅಗಲಿದ್ದಾರೆ. ಇವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ಇವರ ಪತ್ನಿ ಮಾಲತಿ ಕೂಡ ಖ್ಯಾತ ಕಿರುತೆರೆ ನಟಿಯಾಗಿದ್ದಾರೆ. ಕನ್ನಡದ ರಿಯಾಲಿಟಿ ಶೋ ಜೋಡಿ ನಂ.1ನಲ್ಲಿ ಭಾಗವಹಿಸಿದ್ದರು. ಪತ್ನಿ ನಟಿ ಮಾಲತಿ,

ಖ್ಯಾತ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಇನ್ನಿಲ್ಲ Read More »

ಬಿಗ್ ಬಾಸ್ 12 ಸೀಸನ್ ಗೆ ಕೌಂಟ್ ಡೌನ್ ಶುರು| ಇವರೇ ಆ ಸ್ಪರ್ಧಿಗಳು ನೋಡಿ…

ಸಮಗ್ರ ನ್ಯೂಸ್: ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ 11 ಸೀಸನ್‌ಗಳ ಯಶಸ್ಸಿನ ಬಳಿಕ ಇದೀಗ ಸೀಸನ್ 12ಕ್ಕಾಗಿ ಸಜ್ಜಾಗಿದೆ. ಪ್ರತಿ ಸೀಸನ್‌ಗೂ ಹೊಸ ಮುಖಗಳು, ಹೊಸ ಡ್ರಾಮಾ ಮತ್ತು ಸಸ್ಪೆನ್ಸ್‌ಗಳೊಂದಿಗೆ ಬರುವ ಬಿಗ್ ಬಾಸ್ ಈ ಬಾರಿ ಯಾವ ಹೊಸ ತಿರುವು ತರಲಿದೆ ಎಂಬುದನ್ನು ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಪ್ರತಿ ವರ್ಷ ಶೋ ಶುರುವಾಗುವುದಕ್ಕೂ ಮುಂಚೆ ಯಾರು ಮನೆಯೊಳಗೆ ಪ್ರವೇಶಿಸುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ತೀವ್ರವಾಗಿರುತ್ತದೆ ಎಂದರೇ ಅತಿಶಯೋಕ್ತಿಯಲ್ಲ. ಈ ಬಾರಿಯೂ ಸಹ ಅದೇ ರೀತಿ

ಬಿಗ್ ಬಾಸ್ 12 ಸೀಸನ್ ಗೆ ಕೌಂಟ್ ಡೌನ್ ಶುರು| ಇವರೇ ಆ ಸ್ಪರ್ಧಿಗಳು ನೋಡಿ… Read More »

ಯಾವ ತಪ್ಪು ಮಾಡದ ನನ್ನ ಮೇಲೆ ಯಾಕಿಷ್ಟು ಕೋಪ? – ವೀರೇಂದ್ರ ಹೆಗ್ಗಡೆ

ಸಮಗ್ರ ನ್ಯೂಸ್: ‘ಯಾವ ತಪ್ಪು ಮಾಡದೆ, ಯಾರನ್ನೂ ನೋಯಿಸದೆ ಕರ್ತವ್ಯ ನಿಭಾಯಿಸುತ್ತ ಬಂದಿದ್ದೇನೆ. ನನ್ನ ಮೇಲೆ ಕೆಲವರು ಏಕೆ ದ್ವೇಷ ಕಾರುತ್ತಿದ್ದಾರೆ? ಏಕೆ ನಿಷ್ಠುರವಾಗಿ ವರ್ತಿಸುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ’ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಧರ್ಮಸ್ಥಳ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಧರ್ಮಸ್ಥಳದಲ್ಲಿ ಊರ ಜನರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಶ್ರೀ ಮಂಜುನಾಥಸ್ವಾಮಿ ಸನ್ನಿಧಿ ಹಾಗೂ ಅಣ್ಣಪ್ಪಸ್ವಾಮಿ ಬೆಟ್ಟದ ಎದುರು ಶುಕ್ರವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ

ಯಾವ ತಪ್ಪು ಮಾಡದ ನನ್ನ ಮೇಲೆ ಯಾಕಿಷ್ಟು ಕೋಪ? – ವೀರೇಂದ್ರ ಹೆಗ್ಗಡೆ Read More »

ಏಷ್ಯಾಕಪ್ ಕ್ರಿಕೆಟ್| ಸೂಪರ್ ಓವರ್ ನಲ್ಲಿ ಲಂಕಾ ಗೆದ್ದ ಭಾರತ

ಸಮಗ್ರ ನ್ಯೂಸ್: ಅರ್ಷದೀಪ್‌ ಸಿಂಗ್‌ ಬುದ್ದಿವಂತಿಕೆಯ ಬೌಲಿಂಗ್‌ ನೆರವಿನಿಂದ ಭಾರತ ತಂಡ, ಸೂಪರ್‌ ಓವರ್‌ನಲ್ಲಿ ಶ್ರೀಲಂಕಾ ಎದುರು ರೋಚಕ ಗೆಲುವು ಪಡೆಯಿತು. ಆ ಮೂಲಕ ಏಷ್ಯಾ ಕಪ್‌ ಟೂರ್ನಿಯಲ್ಲಿ ಸತತ ಆರು ಪಂದ್ಯಗಳನ್ನು ಗೆದ್ದಿರುವ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಟೀಮ್‌ ಇಂಡಿಯಾ, ಭಾನುವಾರ ಪಾಕಿಸ್ತಾನ ವಿರುದ್ಧದ ಫೈನಲ್‌ ಪಂದ್ಯಕ್ಕೆ ತನ್ನ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಇದಕ್ಕೂ ಮುನ್ನ ಭಾರತ ನೀಡಿದ್ದ 203 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡ, ಪತುಮ್ ನಿಸಾಂಕ ಭರ್ಜರಿ ಶತಕದ ಬಲದಿಂದ ಗೆಲುವಿನ ಸನಿಹ

ಏಷ್ಯಾಕಪ್ ಕ್ರಿಕೆಟ್| ಸೂಪರ್ ಓವರ್ ನಲ್ಲಿ ಲಂಕಾ ಗೆದ್ದ ಭಾರತ Read More »

ಪಂಚಭೂತಗಳಲ್ಲಿ ಲೀನರಾದ ಎಸ್.ಎಲ್ ಬೈರಪ್ಪ| ಸರಸ್ವತಿ ಪುತ್ರ ಇನ್ನು ನೆನಪು ಮಾತ್ರ

ಸಮಗ್ರ ನ್ಯೂಸ್: ಪದ್ಮಶ್ರೀ, ಪದ್ಮವಿಭೂಷಣ ಪುರಸ್ಕೃತ ಕನ್ನಡದ ಖ್ಯಾತ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರು, ಇಂದು ಪಂಚಭೂತಗಳಲ್ಲಿ ಲೀನವಾದರು. ಮೈಸೂರು ಬೆಟ್ಟದ ತಪ್ಪಲಿನಲ್ಲಿರುವ ಚಿರಶಾಂತಿಧಾಮದಲ್ಲಿ ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿತು. ಇಬ್ಬರು ಪುತ್ರರಾದ ರವಿ ಶಂಕರ್ ಹಾಗು ಉದಯ್ ಶಂಕರ್ ಅಂತಿಮ ವಿಧಿ ವಿಧಾನದ ಬಳಿಕ ಅಂತ್ಯಕ್ರಿಯೆ ನೆರವೇರಿಸಿದರು. ಪುತ್ರಿ ಸಹನಾ ವಿಜಯಕುಮಾರ್, ಸಚಿವರಾದ ಡಾ.ಎಚ್ ಸಿ ಮಹದೇವಪ್ಪ. ವೆಂಕಟೇಶ್. ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು

ಪಂಚಭೂತಗಳಲ್ಲಿ ಲೀನರಾದ ಎಸ್.ಎಲ್ ಬೈರಪ್ಪ| ಸರಸ್ವತಿ ಪುತ್ರ ಇನ್ನು ನೆನಪು ಮಾತ್ರ Read More »