Editor

ಮಾನವ – ವನ್ಯಜೀವಿ ಸಂಘರ್ಷ ಹತೋಟಿಗೆ ಬರದಿದ್ದಲ್ಲಿ ಸಫಾರಿ ಬಂದ್ – ಸಚಿವ ಖಂಡ್ರೆ

ಸಮಗ್ರ ನ್ಯೂಸ್: ಬಂಡೀಪುರ, ಮೈಸೂರು ಜಿಲ್ಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿದ್ದು, ಇದು ತಹಬಂದಿಗೆ ಬಾರದಿದ್ದರೆ ಸಫಾರಿಯನ್ನು ಸಂಪೂರ್ಣ ಬಂದ್ ಮಾಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ. ಚಾಮರಾಜನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಅರಣ್ಯ, ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ವನ್ಯಜೀವಿ- ಮಾನವ ಸಂಘರ್ಷ ಇರುವ ಸ್ಥಳದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲು ಸಿಬ್ಬಂದಿ ಕೊರತೆ ಎನ್ನುತ್ತೀರಿ. ಹಾಗಾದರೆ ಸಫಾರಿಗೆ ನಿಯೋಜಿಸಿರುವ ಸಿಬ್ಬಂದಿಯನ್ನೇ ಅಲ್ಲಿಗೆ […]

ಮಾನವ – ವನ್ಯಜೀವಿ ಸಂಘರ್ಷ ಹತೋಟಿಗೆ ಬರದಿದ್ದಲ್ಲಿ ಸಫಾರಿ ಬಂದ್ – ಸಚಿವ ಖಂಡ್ರೆ Read More »

ಉತ್ತರ ಅಫ್ಘಾನಿಸ್ತಾನದಲ್ಲಿ ಭೀಕರ ಭೂಕಂಪ| ಹಲವು ಸಾವು ನೋವಿನ ಆತಂಕ

ಸಮಗ್ರ ನ್ಯೂಸ್: ಕಳೆದ ತಡರಾತ್ರಿ ಉತ್ತರ ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ವರದಿ ಮಾಡಿದೆ. ಮಜಾರ್-ಇ-ಶರೀಫ್ ನಗರದ ಬಳಿಯ ಖೋಲ್ಮ್ ಪ್ರದೇಶದಲ್ಲಿ 28 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಮತ್ತು ರಾಜಧಾನಿ ಕಾಬೂಲ್‌ನವರೆಗೆ ಕಂಪನದ ಅನುಭವವಾಗಿದೆ. ಅಂಕಿಅಂಶವನ್ನು ನವೀಕರಿಸುವ ಮೊದಲು ಯುಎಸ್‌ಜಿಎಸ್ ಆರಂಭದಲ್ಲಿ 10 ಕಿಲೋಮೀಟರ್ ಆಳದಲ್ಲಿ ಆಳವನ್ನು ದಾಖಲಿಸಿತ್ತು. ಆಗಸ್ಟ್ 31 ರಂದು ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಪ್ರಬಲ 6.0 ತೀವ್ರತೆಯ ಭೂಕಂಪದಲ್ಲಿ 2,200 ಕ್ಕೂ

ಉತ್ತರ ಅಫ್ಘಾನಿಸ್ತಾನದಲ್ಲಿ ಭೀಕರ ಭೂಕಂಪ| ಹಲವು ಸಾವು ನೋವಿನ ಆತಂಕ Read More »

ಮಹಿಳಾ ವಿಶ್ವಕಪ್ ಕ್ರಿಕೆಟ್| ಚೊಚ್ಚಲ ಪ್ರಶಸ್ತಿ ಗೆದ್ದ ಭಾರತೀಯ ವನಿತೆಯರು

ಸಮಗ್ರ ನ್ಯೂಸ್: 150 ಕೋಟಿ ಭಾರತೀಯರು ಬಹಳ ದಿನಗಳಿಂದ ಕಾಯುತ್ತಿದ್ದುದ್ದನ್ನು ಭಾರತದ ಹೆಣ್ಣುಮಕ್ಕಳು ಮಾಡಿ ತೋರಿಸಿದ್ದಾರೆ. 2025 ರ ಮಹಿಳಾ ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ, ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಎತ್ತಿಹಿಡಿದಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತಾ ಪಡೆ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 288 ರನ್ ಕಲೆಹಾಕಿತು. ಈ ಗುರಿ

ಮಹಿಳಾ ವಿಶ್ವಕಪ್ ಕ್ರಿಕೆಟ್| ಚೊಚ್ಚಲ ಪ್ರಶಸ್ತಿ ಗೆದ್ದ ಭಾರತೀಯ ವನಿತೆಯರು Read More »

ಪುತ್ತೂರು: ಅಟೋ – ಕಾರು ನಡುವೆ ಭೀಕರ ಅಪಘಾತ| ಬಾಲಕಿ ದುರಂತ ಸಾವು

ಸಮಗ್ರ ನ್ಯೂಸ್: ಆಟೋ ರಿಕ್ಷಾ ಮತ್ತು ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬಾಲಕಿ ಸಾವನಪ್ಪಿದ ಘಟನೆ ಶನಿವಾರ ಸಂಜೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಒಳಮೊಗ್ರು ಗ್ರಾಮದ ಪರ್ಪುಂಜ ಕೊಯ್ಲತ್ತಡ್ಕ ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ಐವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಮೃತರನ್ನು ರಿಕ್ಷಾ ಚಾಲಕ ಹನೀಫ್ ಎಂಬವರ ಮಗಳು ಶಜ್ವಾ ಫಾತಿಮಾ (6) ಎಂದು ತಿಳಿದು ಬಂದಿದೆ. ಇಲ್ಲಿನ ಅಬ್ರೋಡ್ ಹಾಲ್ ಬಳಿಯಲ್ಲಿನ ರಸ್ತೆಯಲ್ಲಿ ಘಟನೆ ನಡೆದಿದ್ದು, ಪುತ್ತೂರು ನಗರದಿಂದ ತಿಂಗಲಾಡಿ ಕಡೆಗೆ ತೆರಳುತ್ತಿದ್ದ ರಿಕ್ಷಾ

ಪುತ್ತೂರು: ಅಟೋ – ಕಾರು ನಡುವೆ ಭೀಕರ ಅಪಘಾತ| ಬಾಲಕಿ ದುರಂತ ಸಾವು Read More »

ಆಂಧ್ರಪ್ರದೇಶದಲ್ಲಿ ಭೀಕರ ಕಾಲ್ತುಳಿತ| 10 ಮಂದಿ ಬಲಿ; ಹಲವರಿಗೆ ಗಾಯ

ಸಮಗ್ರ ನ್ಯೂಸ್: ಆಂಧ್ರಪ್ರದೇಶದಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದ್ದು, ಶ್ರೀಕಾಕುಳಂನಲ್ಲಿರುವ ಕಾಶಿಬುಗ್ಗ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿ 10 ಮಂದಿ ಸಾವನ್ನಪ್ಪಿದ್ದಾರೆ. ಭಕ್ತರ ದಟ್ಟಣೆಯಿಂದಾಗಿ ಜನದಟ್ಟಣೆ ಹೆಚ್ಚಾಗಿದ್ದರಿಂದ ಹಠಾತ್ ಕಾಲ್ತುಳಿತ ಉಂಟಾಯಿತು. ಗಾಯಾಳುಗಳನ್ನು ತಕ್ಷಣ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು. ಪೊಲೀಸರು ಸ್ಥಳಕ್ಕೆ ಧಾವಿಸಿದರು. ರಾಜ್ಯ ಕೃಷಿ ಸಚಿವ ಕೆ. ಅಚ್ಚನ್ನಾಯ್ಡು ಅಪಘಾತದ ಸ್ಥಳಕ್ಕೆ ತಕ್ಷಣ ಧಾವಿಸಿದರು. ಘಟನೆಯ ಬಗ್ಗೆ ವಿವರಗಳನ್ನು ಸಂಗ್ರಹಿಸಲು ಅವರು ದೇವಾಲಯದ ಅಧಿಕಾರಿಗಳೊಂದಿಗೆ ಮಾತನಾಡಿದರು. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ

ಆಂಧ್ರಪ್ರದೇಶದಲ್ಲಿ ಭೀಕರ ಕಾಲ್ತುಳಿತ| 10 ಮಂದಿ ಬಲಿ; ಹಲವರಿಗೆ ಗಾಯ Read More »

ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ| 68 ಸಾಧಕರು, 26 ಸಂಘಸಂಸ್ಥೆಗಳಿಗೆ ಪ್ರಶಸ್ತಿ ಘೋಷಣೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ದ.ಕ.ಜಿಲ್ಲಾಡಳಿತ ಶುಕ್ರವಾರ ಘೋಷಿಸಿದೆ. ವಿವಿಧ ಕ್ಷೇತ್ರದ 68 ಸಾಧಕರು ಮತ್ತು 26 ಸಂಘ-ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಾಧಕರು: ಅಶೋಕ್ ಪೂವಯ್ಯ, ರಜನಿ ದಾಮೋದರ ಶೆಟ್ಟಿ, ವಿಜಯ ಸುವರ್ಣ, ಮುಹಮ್ಮದಲಿ ಉಚ್ಚಿಲ್, ಹಾಜಿ ಬಿ.ಎಚ್. ಖಾದರ್, ಪ್ರವೀಣ್ ಶೆಟ್ಟಿ ಪಿಲಾರ್, ಧರ್ಮಭಗಿನಿ ಲೂಸಿಯಾನ ಪಿಂಟೋ, ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ, ಅನಿಲ್ ದಾಸ್, ಗಂಗಾಧರ ಎಸ್.ಪೂಜಾರಿ, ಮುಹಮ್ಮದ್ ಮುಕ್ಕಚೇರಿ, ಗಣೇಶ್ ಎಸ್., ಮೋಹನ ರೈ, ಸುದರ್ಶನ್ ಪಡಿಯಾರ್, ಬಿ.

ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ| 68 ಸಾಧಕರು, 26 ಸಂಘಸಂಸ್ಥೆಗಳಿಗೆ ಪ್ರಶಸ್ತಿ ಘೋಷಣೆ Read More »

ಧರ್ಮಸ್ಥಳ ಪ್ರಕರಣ| ಎಸ್ಐಟಿ ತನಿಖೆ ತಾತ್ಕಾಲಿಕ ಸ್ಥಗಿತ

ಸಮಗ್ರ ನ್ಯೂಸ್: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ಕುರಿತು ನಡೆಸುತ್ತಿದ್ದ ತನಿಖೆಯನ್ನು ಎಸ್‌ಐಟಿ ಸ್ಥಗಿತಗೊಳಿಸಿದೆ. ಹೈಕೋ‌ರ್ಟ್‌ ಮಧ್ಯಂತರ ತಡೆ ನೀಡಿರುವ ಕಾರಣ ನಿಲ್ಲಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ‘ನಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಮತ್ತು ಸಂಬಂಧಿಸಿದ ವಿಚಾರಣೆಯನ್ನು ಸಮಾಪ್ತಿಗೊಳಿಸಲು ಆದೇಶಿಸಬೇಕು’ ಎಂದು ಗಿರೀಶ ಮಟ್ಟೆಣ್ಣವರ, ಮಹೇಶ್‌ ಶೆಟ್ಟಿ ತಿಮರೋಡಿ, ಜಯಂತ್‌ ಟಿ. ಮತ್ತು ವಿಠ್ಠಲ ಗೌಡ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ‘ಕೋರ್ಟ್‌ ಆದೇಶವು ತನಿಖೆಗೆ ಹಿನ್ನಡೆಯಾಗುವುದಿಲ್ಲ. ಇದು ತಾತ್ಕಾಲಿಕ ವಿರಾಮವಾಗಿದೆ. ಎಸ್‌ಐಟಿ ಕೋರ್ಟ್‌

ಧರ್ಮಸ್ಥಳ ಪ್ರಕರಣ| ಎಸ್ಐಟಿ ತನಿಖೆ ತಾತ್ಕಾಲಿಕ ಸ್ಥಗಿತ Read More »

ವಿಜಯಪುರ, ಕಲಬುರಗಿಯಲ್ಲಿ ಕಂಪಿಸಿದ ಭೂಮಿ| ಆತಂಕದಲ್ಲಿ ಮನೆಯಿಂದ ಹೊರಬಂದ ಜನತೆ

ಸಮಗ್ರ ನ್ಯೂಸ್: ವಿಜಯಪುರ, ಕಲಬುರಗಿ ಜಿಲ್ಲೆಯಲ್ಲಿ ಒಂದೇ ದಿನ ನಾಲ್ಕು ಬಾರಿ ಭೂಕಂಪನ ಉಂಟಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಈ ಚಿಂಚೋಳಿ ತಾಲೂಕಿನ ಐನಾಪುರ, ಗಡಿನಿಂಗದಹಳ್ಳಿ, ಸೊಂತ, ಪಟವಾದ ಗ್ರಾಮದಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿದೆ. ನಸುಕಿನ ಜಾವ ಭೂಮಿ ಕಂಪಿಸಿದೆ. ಅದೇ ರೀತಿ ವಿಜಯಪುರ ಸುತ್ತಮುತ್ತ ಮತ್ತೆ ಭೂಕಂಪನದ ಅನುಭವವಾಗಿದೆ. ರಾತ್ರಿ 10 ಗಂಟೆ 5 ನಿಮಿಷದ ಸುಮಾರಿಗೆ ಎರಡು ಬಾರಿ ಭೂಮಿ ಕಂಪಿಸಿದೆ. ಎರಡು ತಿಂಗಳಲ್ಲಿ ಬರೋಬ್ಬರಿ 12 ಬಾರಿ ಭೂಮಿ ಕಂಪಿಸಿದೆ.

ವಿಜಯಪುರ, ಕಲಬುರಗಿಯಲ್ಲಿ ಕಂಪಿಸಿದ ಭೂಮಿ| ಆತಂಕದಲ್ಲಿ ಮನೆಯಿಂದ ಹೊರಬಂದ ಜನತೆ Read More »

ಮಂಗಳೂರು: ವಿಹಿಂಪ ಮುಖಂಡ ಶರಣ್ ಪಂಪ್‌ ವೆಲ್ ಬಂಧನ

ಸಮಗ್ರ ನ್ಯೂಸ್: ಆರ್ ಎಸ್ಎಸ್ ಮುಖಂಡರೊಬ್ಬರ ಪ್ರಚೋದರಕಾರಿ ಭಾಷಣದ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕಾರಣ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಶರಣ್ ಪಂಪ್ವೆಲ್ ಅವರ ಜಾಲತಾಣದ ಖಾತೆಯಲ್ಲಿ ಈ ವಿಡಿಯೋ ಹರಿದಾಡಿದ ಹಿನ್ನೆಲೆಯಲ್ಲಿ ಕದ್ರಿ ಠಾಣಾ‌ ಪೊಲೀಸರು ಸುಮೋಟೊ ದಾಖಲಿಸಿಕೊಂಡು ಅವರನ್ನು ಬಂಧಿಸಿದ್ದಾಗಿ ತಿಳಿದುಬಂದಿದೆ. ವಿಡಿಯೊದಲ್ಲೇನಿದೆ?: ಕಳೆದ ಎರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಮಕ್ಕಳು ಹುಟ್ಟಿದರು ಎಂದು ನಾನೊಂದು ಲೆಕ್ಕ ತೆಗಿದಿದ್ದೇನೆ. 45,700

ಮಂಗಳೂರು: ವಿಹಿಂಪ ಮುಖಂಡ ಶರಣ್ ಪಂಪ್‌ ವೆಲ್ ಬಂಧನ Read More »

70 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ| ಇಲ್ಲಿದೆ ಸಂಪೂರ್ಣ ವಿವರ

ಸಮಗ್ರ ನ್ಯೂಸ್: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವಂತ ಗಣ್ಯರಿಗೆ 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ. 70ನೇ ರಾಜ್ಯೋತ್ಸವ ಆಚರಣೆಯ ಅಂಗವಾಗಿ 70 ಮಂದಿಗೆ 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಮೊದಲ‌ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೆ ಒಟ್ಟು 70 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.‌ ಈ ಪೈಕಿ‌ ಕೆಲವರು ಸ್ವಯಂ ಮನವಿ ನೀಡಿದ್ರು, ಅಂತಹವರು ಪ್ರಶಸ್ತಿಗೆ ಅರ್ಹರಿದ್ದ ಕಾರಣ‌ ಪ್ರಶಸ್ತಿಗೆ

70 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ| ಇಲ್ಲಿದೆ ಸಂಪೂರ್ಣ ವಿವರ Read More »