Editor

ಲಕ್ಷದ ಸನಿಹಕ್ಕೆ ತಲುಪಿದ ಬಂಗಾರದ ದರ|10 ಗ್ರಾಂ‌ಗೆ ರೂ.98000

ಸಮಗ್ರ ನ್ಯೂಸ್: ಚಿನ್ನದ ಬೆಲೆ ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ದೆಹಲಿಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 98,100 ರೂ. ತಲುಪಿದೆ. ಕೇವಲ ಒಂದೇ ದಿನದಲ್ಲಿ, ಬುಧವಾರ 10 ಗ್ರಾಂಗೆ 1,650 ರೂ. ಏರಿಕೆಯಾಗಿದ್ದು, ಮಂಗಳವಾರ ಇದ್ದ 96,450 ರೂ.ನಿಂದ ಈ ಗಮನಾರ್ಹ ಜಿಗಿತ ಕಂಡಿದೆ. ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯೂ ಗಗನಕ್ಕೇರಿದೆ. ಬುಧವಾರ 1 ಕೆಜಿ ಬೆಳ್ಳಿಯ ಬೆಲೆ 99,400 ರೂ. ತಲುಪಿದ್ದು, ಒಂದೇ ದಿನದಲ್ಲಿ 1,900 ರೂ. ಏರಿಕೆ ಕಂಡಿದೆ. ಮಾರುಕಟ್ಟೆ […]

ಲಕ್ಷದ ಸನಿಹಕ್ಕೆ ತಲುಪಿದ ಬಂಗಾರದ ದರ|10 ಗ್ರಾಂ‌ಗೆ ರೂ.98000 Read More »

ಹಿಂದೂ ದೇವಸ್ಥಾನ ಮಂಡಳಿಗಳಲ್ಲಿ ಮುಸ್ಲಿಮರಿಗೆ ಅವಕಾಶ ನೀಡುತ್ತೀರಾ? ವಕ್ಫ್ ತಿದ್ದುಪಡಿ ಕಾಯ್ದೆ ಅರ್ಜಿ ವಿಚಾರಣೆ ವೇಳೆ ಕೇಂದ್ರಕ್ಕೆ ಸುಪ್ರೀಂ ತರಾಟೆ

ಸಮಗ್ರ ನ್ಯೂಸ್: ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಇಂದು ಮಧ್ಯಾಹ್ನ 2 ಗಂಟೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಕೇಂದ್ರ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರ ಸದಸ್ಯರನ್ನು ನೇಮಕ ಮಾಡುವ ಕಾಯ್ದೆಯ ನಿಯಮವನ್ನು ಪ್ರಶ್ನಿಸಿತು. “ಸರಕಾರವೇನಾದರೂ ಹಿಂದೂ ಧಾರ್ಮಿಕ ದತ್ತಿ ಮಂಡಳಿಗಳಲ್ಲಿ ಮುಸ್ಲಿಮರ ನೇಮಕಕ್ಕೆ ಅವಕಾಶ ನೀಡುತ್ತದೆಯೆ?” ಎಂದು ಕೇಂದ್ರ ಸರಕಾರವನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು. ನೂತನ ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿನ ವಿವಿಧ ನಿಯಮಗಳು, ವಿಶೇಷವಾಗಿ ಬಳಕೆದಾರರ ಆಸ್ತಿಯನ್ನು ಬಳಸಿಕೊಳ್ಳುವ ವಕ್ಫ್‌ಗೆ ರೂಪಿಸಲಾಗಿರುವ ನಿಯಮಗಳ

ಹಿಂದೂ ದೇವಸ್ಥಾನ ಮಂಡಳಿಗಳಲ್ಲಿ ಮುಸ್ಲಿಮರಿಗೆ ಅವಕಾಶ ನೀಡುತ್ತೀರಾ? ವಕ್ಫ್ ತಿದ್ದುಪಡಿ ಕಾಯ್ದೆ ಅರ್ಜಿ ವಿಚಾರಣೆ ವೇಳೆ ಕೇಂದ್ರಕ್ಕೆ ಸುಪ್ರೀಂ ತರಾಟೆ Read More »

ಮದುವೆಯ ಬಳಿಕ‌ ಒಪ್ಪಿಗೆಯ ದೈಹಿಕ ಸಂಬಂಧ ಅಪರಾಧವಲ್ಲ| ಕೊಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು

ಸಮಗ್ರ ನ್ಯೂಸ್: ಮದುವೆಯ ನಂತರ ಪರಸ್ಪರ ಒಪ್ಪಿಗೆಯ ದೈಹಿಕ ಸಂಬಂಧವು ಅಪರಾಧವಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಿವಾಹಿತ ದಂಪತಿಗಳ ಪ್ರಕರಣದಲ್ಲಿ ಕಲ್ಕತ್ತಾ ಹೈಕೋರ್ಟ್ ಒಂದು ದೊಡ್ಡ ಹೇಳಿಕೆ ನೀಡಿದೆ. ಮದುವೆಯ ಸುಳ್ಳು ಭರವಸೆ ನೀಡಿ ತನ್ನ ಪ್ರೇಮಿ ತನ್ನ ಜೊತೆ ಸಂಬಂಧ ಹೊಂದಿದ್ದಾನೆ ಎಂದು ಮಹಿಳೆಯೊಬ್ಬಳು ಆರೋಪ ಮಾಡಿದ್ದಾಳೆ. ಇಬ್ಬರೂ ಈಗಾಗಲೇ ವಿವಾಹಿತರಾಗಿದ್ದರು ಮತ್ತು ಎರಡು ವರ್ಷಗಳಿಂದ ಪ್ರೇಮ ಸಂಬಂಧದಲ್ಲಿದ್ದರು. ಮಹಿಳೆಯ ಪತಿಗೆ ಈ ಸಂಬಂಧದ ಬಗ್ಗೆ ತಿಳಿದಾಗ, ಅವನು ಅವಳೊಂದಿಗೆ ವಾಸಿಸಲು

ಮದುವೆಯ ಬಳಿಕ‌ ಒಪ್ಪಿಗೆಯ ದೈಹಿಕ ಸಂಬಂಧ ಅಪರಾಧವಲ್ಲ| ಕೊಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು Read More »

ಪೋಷಕರಿಗೆ ಗುಡ್ ನ್ಯೂಸ್ ನೀಡಿದ ಶಾಲಾ‌ ಶಿಕ್ಷಣ ಇಲಾಖೆ| 1ನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲ

ಸಮಗ್ರ ನ್ಯೂಸ್: ನಿರೀಕ್ಷೆಯಂತೆಯೇ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆ, ಪೋಷಕರಿಗೆ ಗುಡ್‌ ನ್ಯೂಸ್‌ ನೀಡಿದೆ. ಅದರ ಪ್ರಕಾರ 5 ವರ್ಷ 5 ತಿಂಗಳಾಗಿರುವ ಮಕ್ಕಳಿಗೆ ಇನ್ನು 1 ನೇ ತರಗತಿಗೆ ದಾಖಲಾತಿ ಮಾಡಲು ಸಾಧ್ಯವಾಗಲಿದೆ. ಇದಕ್ಕೂ ಮುನ್ನ ರಾಜ್ಯ ಪಠ್ಯಕ್ರಮದಲ್ಲಿ 1ನೇ ತರಗತಿಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು 6 ವರ್ಷ ಆಗಿರಬೇಕಾಗಿರುವುದು ಕಡ್ಡಾಯವಾಗಿತ್ತು. ಸಮಗ್ರ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ನಡೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಅದರೊಂದಿಗೆ ಶಾಲಾ ಮಕ್ಕಳ ವಯೋಮಿತಿ

ಪೋಷಕರಿಗೆ ಗುಡ್ ನ್ಯೂಸ್ ನೀಡಿದ ಶಾಲಾ‌ ಶಿಕ್ಷಣ ಇಲಾಖೆ| 1ನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲ Read More »

ಚೀನಾದ ಆಮದಿಗೆ 245% ತೆರಿಗೆ ನೀತಿಗೆ ಟ್ರಂಪ್ ಸಹಿ

ಸಮಗ್ರ ನ್ಯೂಸ್: ಚೀನಾದಿಂದ ಆಮದಿನ ಮೇಲೆ 245% ನಷ್ಟು ಹೆಚ್ಚಿನ ಸುಂಕವನ್ನು ವಿಧಿಸುವ ಹೊಸ ಕಾರ್ಯನಿರ್ವಾಹಕ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕುವುದರೊಂದಿಗೆ ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧವು ನಾಟಕೀಯ ತಿರುವು ಪಡೆದುಕೊಂಡಿದೆ. ಶ್ವೇತಭವನದ ಪ್ರಕಾರ, ಈ ಹೊಸ ಸುಂಕಗಳ ಪ್ರಾಥಮಿಕ ಗುರಿ ವೈದ್ಯಕೀಯ ಉಪಕರಣಗಳು- ವಿಶೇಷವಾಗಿ ಸಿರಿಂಜ್ಗಳು ಮತ್ತು ಸೂಜಿಗಳು – ಏಕೆಂದರೆ ಯುಎಸ್ ವೈದ್ಯಕೀಯ ಪೂರೈಕೆ ಸರಪಳಿಯ ನಿರ್ಣಾಯಕ ಕ್ಷೇತ್ರಗಳಲ್ಲಿ ಚೀನಾದ ಉತ್ಪಾದನೆಯ ಮೇಲೆ ಅತಿಯಾದ ಅವಲಂಬನೆ ಎಂದು

ಚೀನಾದ ಆಮದಿಗೆ 245% ತೆರಿಗೆ ನೀತಿಗೆ ಟ್ರಂಪ್ ಸಹಿ Read More »

ಮತ್ತೆ ಅರೆಸ್ಟ್ ಆದ ರಜತ್ ಕಿಶನ್| ಇತ್ತ ವಿನಯ್ ಗೌಡಗೂ ಸಂಕಷ್ಟ

ಸಮಗ್ರ ನ್ಯೂಸ್: ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲಿಗೆ ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ನನ್ನು ಪೊಲೀಸರು ಮತ್ತೆ ಬಂಧಿಸಿರುವ ಬೆನ್ನಲ್ಲೇ ವಿನಯ್ ಗೌಡಗೂ ಸಂಕಷ್ಟ ಎದುರಾಗಿದೆ. ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣದಲ್ಲಿ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರೂ ವಿನಯ್ ಗೌಡ ಕೂಡ ಕೋರ್ಟ್ ಗೆ ಹಾಜರಾಗದೇ ಗೈರಾಗಿದ್ದಾರೆ. ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಸೇರಿದ್ದ ವಿನಯ್ ಗೌಡ ಹಾಗೂ ರಜತ್ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ಜಾಮೀನು

ಮತ್ತೆ ಅರೆಸ್ಟ್ ಆದ ರಜತ್ ಕಿಶನ್| ಇತ್ತ ವಿನಯ್ ಗೌಡಗೂ ಸಂಕಷ್ಟ Read More »

ಮೇ.1ರಿಂದ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆ ಜಾರಿಗೆ| ಇನ್ಮುಂದೆ ಟೋಲ್ ಪ್ಲಾಜಾಗಳಲ್ಲಿ ಕಾಯುವ ಅವಶ್ಯಕತೆ ಇಲ್ಲ!

ಸಮಗ್ರ ನ್ಯೂಸ್: ವಾಹನ ಸವಾರರಿಗೆ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಹೆದ್ದಾರಿಗಳಲ್ಲಿ ವಾಹನಗಳನ್ನು ನಿಲ್ಲಿಸದೆ ಟೋಲ್ ಸಂಗ್ರಹಿಸುವ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಮೇ 1ರಿಂದ ಜಾರಿಗೆ ತರಲಾಗುತ್ತಿದೆ ಎಂದು ತಿಳಿದುಬಂದಿದೆ. ಅಂದರೆ, ಟೋಲ್ ಪ್ಲಾಜಾಗಳಲ್ಲಿ ವಾಹನ ಚಾಲಕರು ತಮ್ಮ ವಾಹನವನ್ನು ನಿಲ್ಲಿಸದೆ, ಸುಮ್ಮನೆ ಪ್ಲಾಜಾ ಮೂಲಕ ಸಾಗಿದರೂ ಸಾಕು, ವಾಹನ ಚಾಲಕರ ಖಾತೆಯಿಂದ ಹಣ ಕಡಿತವಾಗುತ್ತದೆ. ಹೊಸ ಟೋಲ್ ನೀತಿಯ ಜಾರಿಯಿಂದಾಗಿ ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರಿಗೆ ವಾಹನ ನಿಲ್ಲಿಸುವ ಅವಶ್ಯಕತೆ

ಮೇ.1ರಿಂದ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆ ಜಾರಿಗೆ| ಇನ್ಮುಂದೆ ಟೋಲ್ ಪ್ಲಾಜಾಗಳಲ್ಲಿ ಕಾಯುವ ಅವಶ್ಯಕತೆ ಇಲ್ಲ! Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ನಾಲ್ವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ NIA

ಸಮಗ್ರ ನ್ಯೂಸ್: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಮಂಗಳವಾರ ಮತ್ತೆ ನಾಲ್ವರ ವಿರುದ್ಧ ಚಾರ್ಜ್ ಸಲ್ಲಿಸಿದೆ. ಅವರಲ್ಲಿ ಮೂವರು ತಲೆಮರೆಸಿಕೊಂಡಿದ್ದಾರೆ. ಎನ್‌ಐಎ ತನ್ನ ಎರಡನೇ ಪೂರಕ ಚಾರ್ಜ್‌ಶೀಟ್‌ನಲ್ಲಿ ಅಬ್ದುಲ್ ನಾಸಿರ್, ನೌಶಾದ್, ಅಬ್ದುಲ್ ರಹಮಾನ್ ಮತ್ತು ಅತೀಕ್ ಅಹ್ಮದ್ ವಿರುದ್ಧ ಆರೋಪ ಹೊರಿಸಿದೆ. ಇದರೊಂದಿಗೆ, ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲಾದ ಒಟ್ಟು ಆರೋಪಿಗಳ ಸಂಖ್ಯೆ 27ಕ್ಕೆ ಏರಿದ್ದು, ಇದರಲ್ಲಿ ಆರು ಮಂದಿ ತಲೆಮರೆಸಿಕೊಂಡಿದ್ದಾರೆ. ಆರೋಪಪಟ್ಟಿ ಸಲ್ಲಿಸಲಾದ ನಾಲ್ವರಲ್ಲಿ ಮೂವರು

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ನಾಲ್ವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ NIA Read More »

ಹಸೆಮಣೆ ಏರಲು ಸಜ್ಜಾದ ‘ಸೀತಾರಾಮ’ ಖ್ಯಾತಿಯ ನಟಿ ವೈಷ್ಣವಿ ಗೌಡ

ಸಮಗ್ರ ನ್ಯೂಸ್: ಅಗ್ನಿ ಸಾಕ್ಷಿ ಹಾಗೂ ಸೀತಾರಾಮ ಧಾರಾವಾಹಿ ನಟಿ ವೈಷ್ಣವಿ ಗೌಡ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವೈಷ್ಣವಿ ಗೌಡ ಅವರು ಅಕಾಯ್‌ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು. ವೈಷ್ಣವಿ ಗೌಡ ಮತ್ತು ಅಕಾಯ್‌ ನಿಶ್ಚಿತಾರ್ಥದ ಹಲವಾರು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಅಕಾಯ್‌ ಅವರು ಬೇರೆ ರಾಜ್ಯದವರು ಎನ್ನಲಾಗಿದೆ. ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಕಾಯ್‌ ಅವರಿಂದಲೇ ವೈಷ್ಣವಿ ಈ ಬಾರಿ ಬೆಂಗಳೂರಿನಲ್ಲಿ ನಡೆದಿದ್ದ ಏರ್‌ಶೋ ವೀಕ್ಷಣೆ ಮಾಡಿದ್ದರು. ಇದನ್ನೇ ಅವರು ಪರೋಕ್ಷವಾಗಿ ಸೋಶಿಯಲ್‌ ಮೀಡಿಯಾದಲ್ಲಿ

ಹಸೆಮಣೆ ಏರಲು ಸಜ್ಜಾದ ‘ಸೀತಾರಾಮ’ ಖ್ಯಾತಿಯ ನಟಿ ವೈಷ್ಣವಿ ಗೌಡ Read More »

ರಾಜ್ಯದಲ್ಲಿ ಇಂದಿನಿಂದ ‌ಸಿಇಟಿ ಪರೀಕ್ಷೆ| ಪರೀಕ್ಷಾ ಕೇಂದ್ರ ಸುತ್ತಲೂ ನಿಷೇದಾಜ್ಞೆ

ಸಮಗ್ರ ನ್ಯೂಸ್: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಪದವಿ ಕೋರ್ಸ್‍ಗಳ ಪ್ರವೇಶಕ್ಕೆ ನಡೆಸುವ 2025ನೆ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯು(ಸಿಇಟಿ) ಎ.15, ಎ.16 ಮತ್ತು ಎ.17 ರಂದು ರಾಜ್ಯದ 775 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷೆಗೆ 3.31 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ನಾಳೆ(ಎ.15) ಕನ್ನಡ ಭಾಷಾ ಪರೀಕ್ಷೆಯು ಬೆಂಗಳೂರು, ಮಂಗಳೂರು, ವಿಜಯಪುರ ಮತ್ತು ಬೆಳಗಾವಿ ನಗರಗಳ ಒಟ್ಟು ಐದು ಕೇಂದ್ರಗಳಲ್ಲಿ ನಡೆಯಲಿದೆ. ಎ.16ರಂದು ಭೌತ ವಿಜ್ಞಾನ

ರಾಜ್ಯದಲ್ಲಿ ಇಂದಿನಿಂದ ‌ಸಿಇಟಿ ಪರೀಕ್ಷೆ| ಪರೀಕ್ಷಾ ಕೇಂದ್ರ ಸುತ್ತಲೂ ನಿಷೇದಾಜ್ಞೆ Read More »