Editor

ಅತ್ತೆ ಮೇಲೆ ಕುದಿಯುವ ಎಣ್ಣೆ ಎರಚಿದ ಪಾಪಿ ಸೊಸೆ!. ಕಾರಣ ಕೇಳಿದ್ರೆ ಶಾಕ್ ಆಗ್ತೀರಾ.

ವಿಜಯವಾಡ: ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ಅತ್ತೆ-ಸೊಸೆ ಜಗಳ ವಿಕೋಪಕ್ಕೆ ತಿರುಗಿದ್ದು, ಕುದಿಯುವ ಎಣ್ಣೆಯನ್ನು ಅತ್ತೆಯ ಮೇಲೆ ಸೊಸೆ ಎರಚಿರುವ ಘಟನೆ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಅತ್ತೆಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಸರ್ಕಾರದಿಂದ ಬಂದ ಹಣದ ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿದೆ. ಜಗನ್​​ ಚೆಯುತಾ ಯೋಜನೆಯಡಿ ಹಣ ಬಂದಿತ್ತು. ಹಣ ಹಂಚಿಕೆ ವಿಚಾರದಲ್ಲಿ ಅತ್ತೆ-ಸೊಸೆ ಮಧ್ಯೆ ವಾಗ್ವಾನ ನಡೆದಿದೆ. ಅತ್ತೆಯ ಮಾತುಗಳಿಂದ ಕುಪಿತಗೊಂಡ ಸೊಸೆ ಈ ಕೃತ್ಯವೆಸಗಿದ್ದಾಳೆ. ಗುಡಿವಾಡದ ನಿವಾಸಿಗಳಾದ ಅತ್ತೆ ಲಕ್ಷ್ಮಿ(55) ಹಾಗೂ […]

ಅತ್ತೆ ಮೇಲೆ ಕುದಿಯುವ ಎಣ್ಣೆ ಎರಚಿದ ಪಾಪಿ ಸೊಸೆ!. ಕಾರಣ ಕೇಳಿದ್ರೆ ಶಾಕ್ ಆಗ್ತೀರಾ. Read More »

ಯೂತ್ ಕಾಂಗ್ರೇಸ್ ನಲ್ಲಿ ನೆಲೆ‌ ಸಿಗದ ನಲಪಾಡ್, ರಕ್ಷಾ ರಾಮಯ್ಯಗೆ ಶ್ರೀರಕ್ಷೆ

ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬದಲಾವಣೆ ವಿವಾದಕ್ಕೆ ಕೊನೆಗೂ ಕಾಂಗ್ರೆಸ್ ತೆರೆ ಎಳೆದಿದ್ದು, ಅಧಿಕಾರ ಹಸ್ತಾಂತರ ಎಂಬುದು ಸುಳ್ಳು ಸುದ್ದಿ. ಅಂತಹ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಅವರನ್ನು ಕೆಳಗಿಳಿಸಿ ಮೊಹಮ್ಮದ್ ನಲಪಾಡ್ ಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ಅಲ್ಲದೇ ಡಿಸೆಂಬರ್ ಅಂತ್ಯದವರೆಗೆ ರಕ್ಷಾ ರಾಮಯ್ಯ ಅಧಿಕಾರದಲ್ಲಿರಲು ಗಡುವು ನೀಡಲಾಗಿದೆ ಎಂಬ ಮಾತು ಕೇಳಿ ಬಂದಿತ್ತು. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಬಣ

ಯೂತ್ ಕಾಂಗ್ರೇಸ್ ನಲ್ಲಿ ನೆಲೆ‌ ಸಿಗದ ನಲಪಾಡ್, ರಕ್ಷಾ ರಾಮಯ್ಯಗೆ ಶ್ರೀರಕ್ಷೆ Read More »

ಬೆಳ್ತಂಗಡಿಯಲ್ಲೊಂದು ‘ಲವ್, ಸೆಕ್ಸ್, ಆ್ಯಂಡ್ ದೋಖಾ’, ಆರೋಪಿ ಪೊಲೀಸ್ ಅತಿಥಿ.

ಬೆಳ್ತಂಗಡಿ: ‘ನಾನು ನಿನ್ನ ಮದುವೆಯಾಗೋ ಹುಡುಗ, ಯಾವತ್ತಿದ್ರೂ ನಾನು ನಿನ್ನವನೇ’ ಅಂತ ರಂಗುರಂಗಿನ ಮಾತುಗಳಿಂದ ದಂಗುಬಡಿಸಿ, ಯುವತಿಯೋರ್ವಳನ್ನು ಗರ್ಭವತಿಯನ್ನಾಗಿಸಿ ಕೈಕೊಟ್ಟ ಘಟನೆ ಇಲ್ಲಿನ ಕಡಿರುದ್ಯಾವರದಿಂದ ವರದಿಯಾಗಿದೆ.ಯುವಕನ‌ ಮಾತಿನಿಂದ ಮರುಳಾದ ಯುವತಿ ಸದ್ಯ ಏಳು ತಿಂಗಳ ಗರ್ಭಿಣಿ. ಮದುವೆಯ ನೆಪವೊಡ್ಡಿ ಸರಸವಾಡಿದ ಯುವಕ ಇದೀಗ ಕೈಕೊಟ್ಟಿದ್ದು, ಹತಾಶೆಗೊಂಡ ಆಕೆ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು, ಆಕೆಯ ದೂರಿನ ಮೇರೆಗೆ ಲಾಯಿಲದ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಯುವತಿಯ ಇಚ್ಛೆಗೆ ವಿರುದ್ದವಾಗಿ ಲೈಂಗಿಕ ಸಂಪರ್ಕ ಮಾಡಿರುವುದಾಗಿಯೂ ದೂರಲ್ಲಿ ದಾಖಲಿಸಿದ್ದು,

ಬೆಳ್ತಂಗಡಿಯಲ್ಲೊಂದು ‘ಲವ್, ಸೆಕ್ಸ್, ಆ್ಯಂಡ್ ದೋಖಾ’, ಆರೋಪಿ ಪೊಲೀಸ್ ಅತಿಥಿ. Read More »

ದೇರಳಕಟ್ಟೆಯಲ್ಲಿ ಗಾಂಜಾ ಘಾಟು | ಕೋಟಿಗಟ್ಟಲೆ ಮೌಲ್ಯದ ಮರಿಜುವನ ಸಹಿತ ಯುವಕ-ಯುವತಿ ಪೊಲೀಸ್ ವಶ | ಬಂಧಿತ ಆರೋಪಿಗಳೆಲ್ಲರು ವೈದ್ಯರು

ಮಂಗಳೂರು: ನಗರ ಹೊರವಲಯದ ದೇರಳಕಟ್ಟೆಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಕೋಟ್ಯಾಂತರ ರೂ. ಮೌಲ್ಯದ ಗಾಂಜಾ ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ತಮಿಳುನಾಡು ಮೂಲದ ವೈದ್ಯ ವಿದ್ಯಾರ್ಥಿನಿ ವಿನು ರಶ್ಮಿ (27) ಮತ್ತು ಕಾಸರಗೋಡು ಮೂಲದ ಅಜ್ಮಲ್ (24) ಎಂದು ಗುರುತಿಸಲಾಗಿದೆ. ವಿನು ರಶ್ಮಿ ಸುರತ್ಕಲ್ ನಲ್ಲಿ ವಾಸ್ತವ್ಯ ಹೂಡಿದ್ದು ನಗರದ ಕಾಲೇಜೊಂದರಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾಳೆ. ವ್ಯಾಸಂಗದ ಜೊತೆ ಈಕೆ ಕಾಸರಗೋಡಿನಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದು ಅಲ್ಲಿ ಪರಿಚಿತನಾದ ವೈದ್ಯ ಡಾ.

ದೇರಳಕಟ್ಟೆಯಲ್ಲಿ ಗಾಂಜಾ ಘಾಟು | ಕೋಟಿಗಟ್ಟಲೆ ಮೌಲ್ಯದ ಮರಿಜುವನ ಸಹಿತ ಯುವಕ-ಯುವತಿ ಪೊಲೀಸ್ ವಶ | ಬಂಧಿತ ಆರೋಪಿಗಳೆಲ್ಲರು ವೈದ್ಯರು Read More »

ನೀವು ಜಿಬಿ ವಾಟ್ಸಪ್ ಬಳಸುತ್ತಿದ್ದೀರಾ? | ಇದು ನಿಮ್ಮ ಅಗತ್ಯ ಮಾಹಿತಿಯನ್ನು ಕದಿಯಬಹುದು ಎಚ್ಚರಿಕೆ

ತಂತ್ರಜ್ಞಾನ ನ್ಯೂಸ್ : ವಾಟ್ಸಾಪ್ ಎಂಬುದು ಜನಸಾಮಾನ್ಯರ ಅತಿ ಅವಶ್ಯಕ ಅಪ್ಲಿಕೇಷನ್ ಆಗಿದೆ. ಸ್ಮಾರ್ಟ್​ಫೋನ್ ಬಳಕೆ ಮಾಡುವ ಪ್ರತಿಯೊಬ್ಬನು ವಾಟ್ಸಪ್ ನ್ನು ಬಳಕೆ ಮಾಡುತ್ತಾನೆ. ಡಿಜಿಟಲ್, ತಂತ್ರಜ್ಞಾನ ಯುಗದ ಅವಿಭಾಜ್ಯ ಅಂಗದಂತೆ ವಾಟ್ಸಾಪ್ ಕಾಣುತ್ತದೆ. ವಾಟ್ಸಾಪ್​ನ ಸಮಾನ ವರ್ಷನ್​ಗಳು ಕೂಡ ಬಿಡುಗಡೆಯಾಗುತ್ತಿರುತ್ತದೆ. ಅದರಲ್ಲಿ ಸದ್ಯ ಸುದ್ದಿಯಲ್ಲಿ ಇರುವುದು ಜಿಬಿ ವಾಟ್ಸಾಪ್ (GB WhatsApp). ಹಲವರು ಇದನ್ನು ವಾಟ್ಸಾಪ್​ನ ಹೊಸ ಅಪ್​ಡೇಟ್ ಎಂದುಕೊಂಡಿದ್ದಾರೆ. ಆದರೆ, ನಿಜವಾಗೂ ಇದು ವಾಟ್ಸಾಪ್​ನ ಅಪ್ಡೇಟ್ ಅಲ್ಲ. ಬದಲಾಗಿ ಸಂಪೂರ್ಣ ಬೇರೆಯದೇ ಅಪ್ಲಿಕೇಷನ್. ಇದನ್ನು

ನೀವು ಜಿಬಿ ವಾಟ್ಸಪ್ ಬಳಸುತ್ತಿದ್ದೀರಾ? | ಇದು ನಿಮ್ಮ ಅಗತ್ಯ ಮಾಹಿತಿಯನ್ನು ಕದಿಯಬಹುದು ಎಚ್ಚರಿಕೆ Read More »

ರಾತ್ರೋರಾತ್ರಿ ಕಣಚೂರು ಆಸ್ಪತ್ರೆ ಬಸ್ಸಿನಲ್ಲಿ ಮಹಿಳೆಯರ ಸಾಗಣೆ | ಬೆಚ್ಚಿಬಿದ್ದ ಮಂಗಳೂರಿನ ನಾಗರಿಕರು

ಮಂಗಳೂರು: ಮೂಡಬಿದಿರೆಯ ಕಾರ್ನಾಡು ಗ್ರಾಮದಿಂದ ಬರೋಬ್ಬರಿ 85 ಮಹಿಳೆಯರನ್ನು ಮಂಗಳೂರು ಹೊರವಲಯದ ನಾಟೆಕಲ್ ಖಾಸಗಿ ಆಸ್ಪತ್ರೆ ಬಸ್ಸಿನಲ್ಲಿ ಕರೆದೊಯ್ದ ಘಟನೆ ನಡೆದಿದೆ. ಈ ಬಗ್ಗೆ ಸ್ಥಳೀಯರು ಬಸ್ ಚಾಲಕ ಮತ್ತು ಜೊತೆಗಿದ್ದ ಆಸ್ಪತ್ರೆ ಮ್ಯಾನೇಜರ್ ನನ್ನು ತಡೆದು ವಿಚಾರಿಸಿದಾಗ ಆರೋಗ್ಯ ತಪಾಸಣೆ ನಡೆಸಲು ಮತ್ತು ವ್ಯಾಕ್ಸಿನೇಷನ್ ನೀಡಲು ಕರೆದೊಯ್ಯುತ್ತಿರುವುದಾಗಿ ಹೇಳಿದ್ದಾನೆ. ಸ್ಥಳೀಯರು ಯಾವ ಕಾರಣಕ್ಕಾಗಿ ತಡರಾತ್ರಿ ವ್ಯಾಕ್ಸಿನೇಷನ್ ನೀಡುತ್ತೀರಿ ಎಂದು ವಿಚಾರಿಸಿದಾಗ ಆತ ತಬ್ಬಿಬ್ಬಾಗಿದ್ದಾನೆ. ಈ ವೇಳೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಪೊಲೀಸರು ದೇರಳಕಟ್ಟೆ ಕಣಚೂರು ಆಸ್ಪತ್ರೆ

ರಾತ್ರೋರಾತ್ರಿ ಕಣಚೂರು ಆಸ್ಪತ್ರೆ ಬಸ್ಸಿನಲ್ಲಿ ಮಹಿಳೆಯರ ಸಾಗಣೆ | ಬೆಚ್ಚಿಬಿದ್ದ ಮಂಗಳೂರಿನ ನಾಗರಿಕರು Read More »

ಲಾಕ್ ಡೌನ್ ನಿಂದ‌ ಕೆಲಸ ಕಳ್ಕೊಂಡ ಪತಿ‌ ಮಾಡಿದ ಕಾರ್ಯಕ್ಕೆ ಡೈವೋರ್ಸ್ ಕೇಳಿದ ಪತ್ನಿ! | ಅಷ್ಟಕ್ಕೂ ಆತ ಮಾಡಿದ್ದೇನು?

ಬೆಂಗಳೂರು: ಬೆಂಗಳೂರು ಮೂಲದ 24 ವರ್ಷದ ಮಹಿಳೆಯೊಬ್ಬಳು ತನ್ನ ಪತಿ ಎರಡು ವರ್ಷಗಳ ಕಾಲ ಲೈಂಗಿಕ ಕಾರ್ಯಕರ್ತನಾಗಿ ಕೆಲಸ ಮಾಡುವುದು ತಿಳಿದ ಬಳಿಕ ಈಗ ಡೈವೋರ್ಸ್‌ಗೆ ಅರ್ಜಿ ಸಲ್ಲಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಿಪಿಓ ಉದ್ಯೋಗಿಯಾಗಿದ್ದ ಈ ವ್ಯಕ್ತಿ ಲಾಕ್‌ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡು ಲೈಂಗಿಕ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈ ನಡುವೆ ತನ್ನ ಗಂಡನ ಕೆಲಸದ ಬಗ್ಗೆ ಅನುಮಾನಗೊಂಡ ಆತ ಪತ್ನಿ, ತನ್ನ ತಮ್ಮ ಸಹಾಯದಿಂದ ಆತನ ಲ್ಯಾಪ್‌ಟಾಪ್‌ ಅನ್ನು ನೋಡಿದ ವೇಳೆಯಲ್ಲಿ ಆತ

ಲಾಕ್ ಡೌನ್ ನಿಂದ‌ ಕೆಲಸ ಕಳ್ಕೊಂಡ ಪತಿ‌ ಮಾಡಿದ ಕಾರ್ಯಕ್ಕೆ ಡೈವೋರ್ಸ್ ಕೇಳಿದ ಪತ್ನಿ! | ಅಷ್ಟಕ್ಕೂ ಆತ ಮಾಡಿದ್ದೇನು? Read More »

ಏಕದಿನ ಸರಣಿ: ಇಂಗ್ಲೆಂಡ್ ಅಬ್ಬರಕ್ಕೆ ಶ್ರೀಲಂಕಾ‌ ತತ್ತರ

ಟಿ20 ಸರಣಿಯ ನಂತರ ಏಕದಿನ ಸರಣಿಯಲ್ಲಿಯೂ ಇಂಗ್ಲೆಂಡ್ ಶ್ರೀಲಂಕಾ ವಿರುದ್ಧ ಅಬ್ಬರಿಸಿದೆ. ಮಂಗಳವಾರ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಶ್ರೀಲಂಕಾ ತಂಡದ ವಿರುದ್ಧ ಐದು ವಿಕೆಟ್‌ಗಳ ಅಂತರದ ಜಯವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ನಾಯಕ ಕುಸಾಲ್ ಪೆರೆರ ಹಾಗೂ ಹಸರಂಗ ಅವರ ಅದ್ಭುತ 99 ರನ್‌ಗಳ ಅದ್ಭುತ ಜೊತೆಯಾಟದ ಹೊರತಾಗಿಯೂ ಶ್ರೀಲಂಕಾ ದೊಡ್ಡ ಮೊತ್ತವನ್ನು ಗಳಿಸಲು ವಿಫಲವಾಗಿತ್ತು. ಶ್ರೀಲಂಕಾ ಪರವಾಗಿ ಈ ಇಬ್ಬರು ಆಟಗಾರರನ್ನು ಹೊರತುಪಡಿಸಿದರೆ ಯಾವ ಆಟಗಾರನಿಂದಲೂ ಉತ್ತಮ ರನ್‌ ಕೊಡುಗೆ ದೊರೆಯಲೇ ಇಲ್ಲ.

ಏಕದಿನ ಸರಣಿ: ಇಂಗ್ಲೆಂಡ್ ಅಬ್ಬರಕ್ಕೆ ಶ್ರೀಲಂಕಾ‌ ತತ್ತರ Read More »

‘ಒಂದು‌ ರಾಷ್ಟ್ರ, ಒಂದು ಪಡಿತರ’ ಯೋಜನೆ ಜಾರಿಗೆ ಗಡುವು ನೀಡಿದ ಸು.ಕೋ

ನವದೆಹಲಿ: ಮುಂದಿನ ಜುಲೈ 31 ರೊಳಗೆ ‘ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್’ಯೋಜನೆಯನ್ನು ಜಾರಿಗೆ ತರುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಗಡುವು ನೀಡಿದೆ. ಸಾಂಕ್ರಾಮಿಕ ರೋಗ ಮುಂದುವರಿಯುವವರೆಗೆ ಪಡಿತರವನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದ್ದು, ಇದರ ಜೊತೆಗೆ ವಲಸೆ ಕಾರ್ಮಿಕರನ್ನು ನೋಂದಾಯಿಸಲು ಪೋರ್ಟಲ್ ಸ್ಥಾಪಿಸುವಂತೆಯೂ ಕೇಂದ್ರಕ್ಕೆ ಸೂಚನೆ ಕೊಟ್ಟಿದೆ. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ವಿಭಾಗೀಯ ಪೀಠ ಕೋವಿಡ್-19 ರಿಂದ ಬಾಧಿತರಾದ ವಲಸೆ ಕಾರ್ಮಿಕರ

‘ಒಂದು‌ ರಾಷ್ಟ್ರ, ಒಂದು ಪಡಿತರ’ ಯೋಜನೆ ಜಾರಿಗೆ ಗಡುವು ನೀಡಿದ ಸು.ಕೋ Read More »

ಅಂಗಳದಲ್ಲಿ ಊಟ ಮಾಡುತ್ತಿದ್ದ ಮಗುವಿನ ತಲೆಗೆ ತೆಂಗಿನಕಾಯಿ ಬಿದ್ದು ಮೃತ್ಯು

ಹಾವೇರಿ. ಅಂಗಳದಲ್ಲಿ ಊಟ ಮಾಡುತ್ತಿದ್ದ 11 ತಿಂಗಳ ಮಗುವಿನ ತಲೆ ಮೇಲೆ ತೆಂಗಿನ ಕಾಯಿ ಬಿದ್ದು ಮಗು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಜ್ಯದ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಅಂಗಳದಲ್ಲಿ ಆಟವಾಡುತ್ತಿದ್ದಾಗ ತಲೆಯ ಮೇಲೆ ಬಿದ್ದ ಪರಿಣಾಮ 11 ತಿಂಗಳ ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಿರೆಕೇರೂರು ತಾಲೂಕಿನ ಹಂಸಭಾವಿಯಲ್ಲಿ ನಡೆದಿದೆ. ಹಂಸಭಾವಿಯ ಮಲ್ಲಿಕಾರ್ಜುನ ಮತ್ತು ಮಾಲಾ ದಂಪತಿಗಳ ಮಗು ಮೃತಪಟ್ಟ ಮಗುವಾಗಿದ್ದು, ಮನೆಯ ಎದುರು ಮಗುವನ್ನು ಆಟವಾಡಿಸುತ್ತಾ ಊಟ ಮಾಡಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು

ಅಂಗಳದಲ್ಲಿ ಊಟ ಮಾಡುತ್ತಿದ್ದ ಮಗುವಿನ ತಲೆಗೆ ತೆಂಗಿನಕಾಯಿ ಬಿದ್ದು ಮೃತ್ಯು Read More »